

ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ, ಚರ್ಚಿನ ಪರಿಸರ ಆಯೋಗದ ಸಹಯೋಗದೊಂದಿಗೆ ” ವನಮಹೋತ್ಸವ ಕಾರ್ಯಕ್ರಮ” ದಿನಾಂಕ 06/07/2025 ರಂದು ಭಾನುವಾರ ಗಂಗೊಳ್ಳಿಯಲ್ಲಿ ಜರುಗಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು , ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಜಂಬುನೇರಳೆ ಹಾಗೂ ಮಾವಿನ ಹಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ” ಕಥೊಲಿಕ್ ಸಭೆಯವರು ಕಳೆದ ಹಲವಾರು ವರುಷಗಳಿಂದ ಪರಿಸರದ ರಕ್ಷಣೆಯ ಕಾಳಜಿಯೊಂದಿಗೆ ನಡೆಸುವ ಈ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯವಾಗಿರುವಂತಹುದು . ನಮಗೆ ಶುದ್ಧವಾದ ಗಾಳಿ ನೀಡುವ TREE ( Take responsibility to protect Earth & environment) ಎನ್ನುವ ಪದದಲ್ಲೆ ನಮ್ಮ ಜವಾಬ್ದಾರಿ ಅಡಗಿದೆ” ಎಂದು ಉದ್ಘಾಟನ ಸಂದೇಶ ನೀಡಿದರು.
ತದನಂತರ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್ ಮೈದಾನದಲ್ಲಿ 20 ಚೆರ್ರಿ ಹಣ್ಣಿನ ಗಿಡಗಳನ್ನು ಹಾಗೂ ಸಮುದ್ರ ತೀರದಲ್ಲಿ 50 ಗಾಳಿಗಿಡಗಳನ್ನು ಕಾರ್ಯಕ್ರಮದ ಅಂಗವಾಗಿ ನೆಡಲಾಯಿತು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀ ಗುರುರಾಜ್ ಹಾಗೂ ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷರಾದ ಶ್ರೀ ಮೈಕಲ್ ಪಿಂಟೊ ಗಿಡಗಳ ಪೂರೈಕೆಯಲ್ಲಿ ಸಹಕರಿಸಿದರೆ ಎಲ್ರಾಯ್ ಕಿರನ್ ಕ್ರಾಸ್ಟೊ, ರೋಶನ್ ಲೋಬೊ, ಆಲ್ವಿನ್ ಒಲಿವೇರಾ, ಫೆಲಿಕ್ಸ್ ಫೆರ್ನಾಂಡಿಸ್ ಹಾಗೂ ವಿಲ್ಸನ್ ಡಿಸೋಜ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಥೊಲಿಕ್ ಸಭೆ ಹಾಗೂ ಪರಿಸರ ಆಯೋಗದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಬಾಜಿಲ್ ಪಾಯಸ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ವಿಲ್ಸನ್ ಡಾಯಸ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಆಯೋಗದ ಸಂಚಾಲಕರಾದ ಶಲಿರಾ ರೆಬೆರೊ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಕಾರ್ಯದರ್ಶಿ ಸೈಮನ್ ಡಿಸೋಜ, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ ಹಾಗೂ ಆಯೋಗಗಳ ಸಂಯೋಜಕರಾದ ರೆನಿಟಾ ಬಾರ್ನೆಸ್ ಉಪಸ್ಥಿತರಿದ್ದರು.










