

ಕುಂದಾಪುರ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವುವ ಕಾರ್ಯ ನಡೆಸಬೇಕು. ಆಗ ವಿದ್ಯಾರ್ಥಿಗಳು ಮನೆಯಲ್ಲಿ ತಮ್ಮ ಪೋಷಕರಿಗೆ ಚುನಾವಣೆಯ ಅರಿವು ಮೂಡಿಸಿ ಕಡ್ಡಾಯ ಮತದಾನ ನಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಚೆಲ್ಲೆಮಕ್ಕಿ ಹೇಳಿದರು.
ಅವರು ಶನಿವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಗುಣ ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶ. ವಿದ್ಯಾರ್ಥಿಗಳು ಒಳ್ಳೆಯ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಾಗ ಮುಂದೆ ಸಮಾಜದಲ್ಲಿ ಗುರುತಿಸಿಕೊಳ್ಳತ್ತಾನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು, ಕುಂದಾಪುರ ವಲಯದ ಧರ್ಮಗುರುಗಳಾದ ಅತೀ ವಂ.ಫಾ.ಫೌಲ್ ರೇಗೋ ವಹಿಸಿದ್ದರು. ಶಾಲಾ ಸರಕಾರದ ರಾಜ್ಯಪಾಲೆ, ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಪ್ರತಿಜ್ಞಾವಿಧಿ ಬೇಧಿಸಿದರು.ಶಾಲಾ ಸಂಸತ್ತು ಸಭಾಪತಿ ಕು.ವೀಣಾ ಎಸ್ ಸಚಿವರ ಕರ್ತವ್ಯ, ಕಾರ್ಯದರ್ಶಿ ಸೌಮ್ಯ ನೂತನ ಸಚಿವರ ಪಟ್ಟಿ ವಾಚಿಸಿದರು. ಶಾಲಾ ಸರಕಾರದ ಉಪ ಮುಖ್ಯಮಂತ್ರಿ ಚರಣ ಸ್ವಾಗತಿಸಿದರು. ಮುಖ್ಯಮಂತ್ರಿ ದೃಶ್ಯ ಶಾಲಾ ಸರಕಾರದ ಕಾರ್ಯಕ್ರಮದ ಕುರಿತು ಮಾತನಾಡಿದರು.ವಿರೋಧ ಪಕ್ಷದ ನಾಯಕಿ ಸಾನ್ವಿ ವಂದಿಸಿದರು.ಶಾಲಾ ಸರಕಾರದ ಮಾರ್ಗದರ್ಶಿ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.






