

ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ಪ್ರತಿಷ್ಠಿತ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಅರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್ಟಾಕ್) ಸಂಘಟಿಸಿದ 2024-25 ಸಾಲಿನ ಪ್ರತಿಷ್ಠಿತ ಅತ್ಯುತ್ತಮ ಹೆರಿಟೇಜ್ ಕ್ಲಬ್ ಪ್ರಶಸ್ತಿಯಲ್ಲಿ ಮೂರನೇ ಸ್ಥಾನ ಗಳಿಸಿ ಹೆಮ್ಮೆಯ ಸಾಧನೆಗೈದಿದೆ. ಇಂಟಾಕ್, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ- ಬೆಳೆಸಲು ಉತ್ತೇಜಿಸುತ್ತದೆ .ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಮೂರು ಸಲ ಈ ಪ್ರಶಸ್ತಿಯನ್ನು ಗಳಿಸಿದೆ. ಕಲಾ ಶಿಕ್ಷಕರಾದ ಶ್ರೀ ಜೀವನ್ ಸಾಲಿಯಾನ್ ಹಾಗೂ ಶಿಕ್ಷಕಿಯರಾದ ಶ್ರೀಮತಿ ನೇಹಾ ಸಾಂಗ್ವಿ ಮತ್ತು ಸಂಧ್ಯಾ ಮನೋಜ್ ಅವರ ಉಸ್ತುವಾರಿಯಲ್ಲಿ ಕ್ಲಬ್ ಈ ಅಭೂತಪೂರ್ವ ಸಾಧನೆಗೈದಿದೆ. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ’ ಅಲ್ಮೇಡ ಎಸ್.ಜೆ. ಈ ಸಾಧನೆಗೆ ಕಾರಣಕರ್ತರಾದ ಶಿಕ್ಷಕರು ಹಾಗು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
St Aloysius Gonzaga School bags Third Place in INTACH’s Best Heritage Club Awards 2024–2025

Mangluru; St Aloysius Gonzaga School has proudly secured the Third Position in the prestigious Best Heritage Club Awards 2024–2025, organized by INTACH (Indian National Trust for Art and Cultural Heritage). This recognition is part of INTACH’s Heritage Education Programme, which encourages students to actively engage in preserving and promoting India’s rich cultural legacy. This is the 3rd time the school has won this award. Mr Jeevan Salian, Art Teacher along with teachers Ms Neha Sanghvi and Ms Sandhya Manoj were the in-charge teachers of the club.

