

ಕುಂದಾಪುರ,ಜೂ.24 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆಯ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜೂ. 23 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಶಾಲಾ ಜಂಟಿ ಕಾರ್ಯದರ್ಶಿಗಳಾದ ಪೌಲ್ ರೇಗೋರವರು ದೀಪವನ್ನು ಬೆಳಗಿಸಿ “ನಾಯಕ ಅಂದರೆ ದಾರಿ ತಿಳಿದಿರುವವನು ಹಾಗೂ ದಾರಿಯನ್ನು ತೋರಿಸುವವನೆ ನಿಜವಾದ ನಾಯಕ” ಎಂದು ಸಂದೇಶ ನೀಡಿ ಎಲ್ಲಾ ಮಂತ್ರಿಗಳನ್ನು ಹಾಗೂ ಸರ್ವ ಸಂಘಗಳ ಅಧ್ಯಕ್ಷರನ್ನು ಅಭಿನಂದಿಸಿ ತಮ್ಮ ಅಧ್ಯಕ್ಷೀಯ ನುಡಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಜೆಸಿಐ ವಲಯ 15ರ ಅಧ್ಯಕ್ಷರಾಗಿರುವ ಅಭಿಲಾಷ್ರವರು “ನಾಯಕತ್ವವನ್ನು ಅದೊಂದು ಪ್ರಕ್ರಿಯೆ ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೆಯೇ ಶಿಕ್ಷಕರು ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ, ತಿಡಿ ಸರಿಪಡಿಸುವ ಕಾರ್ಯವನ್ನು ಮಾಡುತ್ತಾರೆ ಎನ್ನುತ್ತಾ ವಿದ್ಯಾರ್ಥಿನಾಯಕರು ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು” ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ.ಯವರು ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಭೋಧಿಸಿದರು. ಸಹ ಶಿಕ್ಷಕಿ ಕುಮಾರಿ ಅಂಕಿತಾ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಪರ್ಲ್ ಅಲಿನಾ ಬರೆಟ್ಟೊ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿನಿ ತನಿಷಾ ಕಾರ್ಯುಕ್ರಮವನ್ನು ನಿರೂಪಿಸಿದರು.






























