

ಶ್ರೀನಿವಾಸಪುರ : ಶ್ರೀನಿವಾಸಪುರ,ಚಿಂತಾಮಣಿ, ಮುಳಬಾಗಿಲು, ಕೋಲಾರದ ಮಾವು ಬೆಳೆಗಾರರು ಮಾವು ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದು ರೈತರು ಸಂಕಷ್ಟದಲ್ಲಿ ಇದ್ದು ಅವರಿಗೆ ನಾವು ರಕ್ಷಣೆ ಕೊಡುವುದು ನಮ್ಮ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬೇಟಿ ನೀಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಕೃಷಿ ಮಾರುಕಟ್ಟೆಯ ಸಭಾಂಗಣದಲ್ಲಿ ಬುಧವಾರ ಪ್ರತಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲಿ ಬೆಳೆಯುವ ಮಾವು ಶೇಕಡ 60% ರಷ್ಟು ಬೆಳೆಯನ್ನು ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ ಕೆಜಿಗೆ , 40 ರೂ 22 ರೂ ಇದ್ದ ಮಾವಿನ ಬೆಲೆ ಇಂದು ಕೇವಲ 3 ರೂ ಗೆ ಇಳಿದಿರುವುದು. ಈ ಬಾರಿ 25 % ರಷ್ಟು ಫಸಲು ಬಂದಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಇರುವ ಕಾಯಿಗಳಿಗೆ ಅಂಥರಾಕ್ಸ್ ರೋಗ ಇತರೆ ಬ್ಯಾಕ್ಟೀರಿಯಗಳ ರೋಗ ಬಂದಿರುವುದು. 25 % ರಷ್ಟು ಫಸಲು ಬಂದರೂ ಅದರಲ್ಲಿ ಶೇಕಡ 50 % ರಷ್ಟು ರೋಗ ಪೀಡಿತವಾಗಿದೆ. ಫಸಲು ಮರಗಳಿಂದ ಬಿದ್ದು ಹೋಗಿವೆ.
ನಮ್ಮ ರಾಜ್ಯದಲ್ಲಿ ಬಲ್ಪ್ ಫ್ಯಾಕ್ಟರಿಗಳು ಕಡಿಮೆ ಇರುವ ಕಾರಣದಿಂದಾಗಿ ನಮ್ಮ ಮಾವು ಬೆಳೆಗಾರರು ನೆರೆಯ ಆಂದ್ರಕ್ಕೆ ಖಾಸಗಿ ಬಲ್ಪ್ ಫ್ಯಾಕ್ಟರಿಗೆ ಇಲ್ಲಿನ ರೈತರು ಫಸಲು ಫ್ಯಾಕ್ಸರಿಗೆ ಹಾಕುತ್ತಿದ್ದರು. ಈ ಬಾರಿ ಅಲ್ಲಿನ ಸರ್ಕಾರ ನಮ್ಮ ರಾಜ್ಯದಿಂದ ಬರುವ ಫಸಲು ಆಂದ್ರಕ್ಕೆ ಪ್ರವೇಶ ಮಾಡದಂತೆ ತಡೆಹೊಡ್ಡಿದ್ದಾರೆ. ಇಂದು ಆಂದ್ರದಿಂದ ನಮ್ಮ ರಾಜ್ಯಕ್ಕೆ ಮಾವಿನಕಾಯಿಗಳು ಬಲ್ಪ್ ಫ್ಯಾಕ್ಪರಿಗೆ ಬರುತ್ತಿದೆ ಮೊದಲೆನೆಯಾದಾಗಿ ಅದನ್ನ ರಾಜ್ಯ ಸರ್ಕಾರ ತಕ್ಷಣ ತಡೆಯೊಡ್ಡಬೇಕಾಗಿದೆ.
ಸರ್ಕಾರ ತಕ್ಷಣ 1 ಎಕರೆ 15000 ರೂ ಬೆಂಬಲ ಬೆಲೆ ಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿ ವರ್ಷವು ಇಂತಹ ರೈತರಿಗೆ ತೊಂದರೆ ಆಗದಂತೆ ಸರ್ಕಾರಗಳು ಶ್ವಾಶತ ಪರಿಹಾರ ನೀಡಬೇಕು. ಜಿಎಸ್ಟಿ 12% ಇದ್ದು, ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಜಿಎಸ್ಟಿ ರದ್ದು ಮಾಡಲು ಮನವಿ ಮಾಡಬೇಕು ನಾವು ಸಹ ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ರದ್ದು ಮಾಡಿಸಲು ಸಂಬಂದಪಟ್ಟ ಇಲಾಖೆಗೆ ಮನವಿ ಮಾಡಲು ಸಿದ್ದರಿದ್ದೇವೆ ಎಂದರು.
ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ ತಾಲೂಕಿಗೆ ಎತ್ತಿನಹೊಳೆ ನೀರಾದರು ಕೊಡಿ , ಇಲ್ಲವಾದರೆ ಮಾವಿಗೆ ಬೆಂಬಲ ಬೆಲೆಯಾದರೂ ಕೊಡಿ ಎಂದು ಕೇಳಲಿಕ್ಕೆ ಬಂದಿದ್ದೇವೆ. ಯಾವುದೇ ಶಾಶ್ವತ ನೀರಾವರಿ ಇಲ್ಲ. ಇಂದು ಅಂತರ್ಜಲ ಮಟ್ಟವು ಸುಮಾರು 1500 ಕ್ಕೂ ಕುಸಿದಿದೆ. ದಿನೇ ದಿನೇ ಮರಗಳು ಒಣಗುತ್ತಿದೆ. ಈ ಕಷ್ಟ ಕಾಲದಲ್ಲಿ ಕೊಳವೆ ಬಾವಿಯಿಂದ ನೀರು ಹರಿಸಿಕೊಂಡು ಕಾಲ ಕಾಲಕ್ಕೆ ಔಷಧಿ ಸಿಂಡಣೆ ಮಾಡಿಕೊಂಡು ಮರಗಳನ್ನು ಬೆಳೆಸಿ ಫಸಲನ್ನು ತೆಗೆಯಲಾಗುತ್ತಿದೆ. ಮಾವಿನ ಬೆಳೆ ಎರಡು ವರ್ಷಕೊಮ್ಮೆ ಬೆಳೆ ಬರುತ್ತದೆ. ಒಂದು ವರ್ಷ ಬೆಳೆ ಬರಲಿಲ್ಲ ಎಂದರೆ ಮೂರು ವರ್ಷ ಒದ್ದಾಡಬೇಕಾಗುತ್ತದೆ ಎಂದರು.
ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಮಾವು ಮಂಡಲಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ವಾಸುದೇವ್, ಬಂಗಾರುಪೇಟೆ ಮಾಜಿ ಎಂಎಲ್ಎ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ್, ಮುಖಂಡರಾದ ಬಂಗಾರುಪೇಟೆ ಬಿ.ವಿ.ಮಹೇಶ್, ನಾಗಭೂಷಣ್,ಶ್ರೀನಾಥ್ರೆಡ್ಡಿ, ಲಕ್ಷಣಗೌಡ, ನಾರಾಯಣಸ್ವಾಮಿ ಇದ್ದರು.



