

ಕುಂದಾಪುರ, ಜೂ.4;ತಲ್ಲೂರು ಸಂತಪ್ರಾನ್ಸಿಸ್ ಆಸ್ಟಿಸಿ ಚರ್ಚಿನಲ್ಲಿ ಸ್ತ್ರೀ ಯೋಗದ ಸಹಯೋಗದಲ್ಲಿ ತಾಯಂದಿರ. ದಿನವನ್ನು ಜೂ. 01 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.ಅಂದು ಬೆಳಗಿನ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮ ಪ್ರಾಂತ್ಯದ ನೂತನ ಕುಲಪತಿಗಳಾದ ಅತೀ ವಂದನೀಯ ಫಾ.ಸ್ಟೀವನ್ ಡಿಸೋಜಾರವರು ಪ್ರಧಾನ ಗುರುಗಳಾಗಿ ಆಗಮಿಸಿ, ನೆರವೇರಿಸಿದರು.
ನಂತರ ತಲ್ಲೂರು ಚರ್ಚಿಗೆ ಸಂಬಂಧ ಪಟ್ಟ ದೇವಲಕುಂದದ ಛಾಪೆಲ್ ನಲ್ಲಿ ತಾಯಂದಿರಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ, ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿಗಳಾದ ಅತೀ ವಂದನೀಯ ಫಾ, ಸ್ಟೀವನ್
ಸೋಜಾ ಹಾಜರಿದ್ದು, ಪವಿತ್ರ ಸಭೆಯಲ್ಲಿ ಮಹಿಳೆಯರ ಪಾತ್ರದ ಮಹತ್ವದ ಬಗ್ಗೆ ತಿಳಿಸಿದರು. ಉಡುಪಿ ಧರ್ಮ ಪ್ರಾಂತ್ಯದ ಸಂಪದ ಸಂಸ್ಥೆಯ ಸಂಯೊಜಕರಾದ ಶ್ರೀ ಸ್ಟ್ಯಾನ್ಲಿ ಫರ್ನಾಂಡಿಸ್ ಹಾಜರಿದ್ದು, ಮಹಿಳೆಯರು ಸ್ವ ಸಹಾಯ. ಸಂಘದಲ್ಲಿ ಇನ್ನಷ್ಟು ಮಹಿಳೆಯರನ್ನು ಹಾಗೂ ಹದಿನೆಂಟು ವರ್ಷ ತುಂಬಿದ ಯುವತಿಯರನ್ನು ಸೇರಿಸಿಕೊಂಡು ಸಂಘವನ್ನು ಬಲ ಪಡಿಸಬೇಕೆಂದು. ತಿಳಿಸಿದರು.
ಕುಂದಾಪುರ ವಲಯ ಸ್ತ್ರೀ ಆಯೋಗದ ಮಾಜಿ ಅಧ್ಯಕ್ಷ ಶ್ರೀಮತಿ ಪ್ರೀತಿ ಫರ್ನಾಂಡಿಸ್ ಮಾತನಾಡಿ ತಲ್ಲೂರು ಆರಾಧ್ಯ ಮಹಾ ಸಂಘದ ಕಾರ್ಯ ವೈಖರಿಯನ್ನು ಪ್ರಶಂಶಿದರು.
ತಾಯಂದಿರು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ತದನಂತರ 2024-25 ಸಾಲಿನ ಮಹಾ. ಸಂಘದ ಪದಾಧಿಕಾರಿಗಳು ತಮ್ಮಹುದ್ದೆಯನ್ನು ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ತಲ್ಲೂರು ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಮಾತನಾಡಿ, ಇದೇ ಮೊದಲ. ಬಾರಿಗೆ ಆರಾಧ್ಯ ಮಹಾ ಸಂಘವು ತನ್ನ ಅಸ್ತಿತ್ವವನ್ನು ತೋರ್ಪಡಿಸಿದೆ. ಇದು ನನಗೆ ಸಂತೋಷದ ವಿಚಾರ. ಇನ್ನು, ಮುಂದೆಯೂ ಸಂಘವು ಅಗತ್ಯವುಳ್ಳವರಿಗೆ, ಕಷ್ಟದಲ್ಲಿ ಇರುವ ಸಹೋದರಿಯರಿಗೆ ಸಹಾಯ ಹಸ್ತ ನೀಡುವ ಮನೋಭಾವ. ಹೊಂದಿ, ಸ್ಪಂದಿಸಬೇಕು, ವಿವಿಧ ಚಟುವಟಿಕೆಗಳ ಮೂಲಕ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಳಪಡಿಸಬೇಕೆಂದು. ತಿಳಿಸಿದರು. ಈ ಸಂದರ್ಭದಲ್ಲಿ ಅವರು ಹಾಜರಿದ್ದ ಎಲ್ಲಾ ತಾಯಂದಿರಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು ಹಾಗೂ ಗರ್ಭಿಣಿಯೊಬ್ಬರನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, 20 ಆಯೋಗಗಳ ಸಂಚಾಲಕರು. ಹಾಗೂ ಧರ್ಮಭಗೀನಿಯರು ಹಾಜರಿದ್ದರು. ವಿವಿಧ ಸಂಘಗಳ ಸದಸ್ಯರು ತಾವೇ ತಯಾರಿಸಿದ ತಿನಿಸುಗಳನ್ನು ಮಾರಾಟಕ್ಕೆ ಇಟ್ಟಿದ್ದರು.
ಮಹಾಸಂಘದ ಮಾಜಿ ಅಧ್ಯಕ್ಷೆ, ಶ್ರೀಮತಿ ಶಾಂತಿ ಮೆಂಡೋನ್ಟ ಅತಿಥಿಗಳನ್ನು ಸ್ವಾಗತಿಸಿದರು. ಪ್ರಸ್ತುತ ಅಧ್ಯಕ್ಷ ಶ್ರೀಮತಿ. ವಿಲ್ಮಾ ಅಂದ್ರಾದೆ ಧನ್ಯವಾದ ಸಮರ್ಪಿಸಿದರು. ಸ್ರ್ತೀ ಸಂಘದ ಸದಸ್ಯೆ ಕು. ಕ್ಯಾರೋಲ್ ಗೊನ್ಸಾಲ್ಟಿಸ್ ವಿವಿಧ ಮನೋರಂಜನ ಆಟಗಳನ್ನು ಆಡಿಸಿದರು. ರೇಶ್ಮಾ ಮೆಂಡೊನ್ಸಾ ನಿರೂಪಿಸಿದರು. ಒಟ್ಟು 120 ತಾಯಂದಿರು ಕಾರ್ಯಕ್ರಮದಲ್ಲಿ ಭಾಗಿಯಾದರು, ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.








































































