ಶ್ರೀನಿವಾಸಪುರ : ನೆಲವಂಕಿ ಗ್ರಾಮದ ಸರ್ವೆ ನಂ. 27 ಮತ್ತು 28/2 ರ ಮಧ್ಯೆ ರಾಜಕಾಲುವೆ ಮುಚ್ಚಿ ಒತ್ತುವರಿಯಾಗಿರುವ ಬಗ್ಗೆ ದೂರ ಬಂದಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡುಲು ಬಂದಿದ್ದೇನೆ ಎಂದು ಉಪವಿಭಾಗಧಿಕಾರಿ ಡಾ. ಮೈತ್ರಿ ಸಾರ್ವಜನಿಕರಿಗೆ ಹೇಳಿದರು .
ತಾಲೂಕಿನ ಲಕ್ಷ್ಮೀಪುರ ಕ್ರಾಸ್ನ ವಿವಾದತ್ಮಕ ಜಮೀನಿನ ಸ್ಥಳಕ್ಕೆ ಸೋಮವಾರ ಬೇಟಿ ನೀಡಿ ಮಾತನಾಡಿದರು.
ಲಕ್ಷ್ಮೀಪುರ ಕ್ರಾಸ್ನ ಬಳಿ ನೆಲವಂಕಿ ಗ್ರಾಮದ ಸರ್ವೆ ನಂ 27 ರಲ್ಲಿ ಸರ್ಕಾರಿ ಜಮೀನು ಆಗಿದ್ದು, ಸದರಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದಲೂ ಮಂಗಮ್ಮ ಕುಟುಂಬದ ಸ್ವಾದೀನದಲ್ಲಿದ್ದಾರೆಂದು ಇದೇ (ಸರ್ಕಾರಿ) ಜಮೀನನ್ನು ಮಂಜೂರು ಮಾಡಿಕೊಡಲು ಮಂಗಮ್ಮ ಅರ್ಜಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರ ಪಕ್ಕದ ಸರ್ವೆ ನಂ 28/2 ವೆಂಕಟೇಶಪ್ಪ ಎಂಬುವವರ ಜಮೀನನ್ನು ಕ್ರಯ ಮಾಡಿಕೊಂಡಿದ್ದು, ಎರಡು ಜಮೀನಿನ ಮಧ್ಯೆ ರಾಜುಕಾಲುವೆ ಇದ್ದು , ಆ ರಾಜುಕಾಲುವೆಯನ್ನು ವೆಂಟೇಶಪ್ಪ ಎಂಬುವವರು ಮುಚ್ಚಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನಮ್ಮ ಕಚೇರಿಗೆ (ಮಂಗಮ್ಮ ಕುಟುಂಬದವರು) ದೂರು ನೀಡಿದ್ದು ಇದರ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಲು ಬೇಟಿ ಮಾಡಲಾಗಿದೆ ಎಂದರು.
ಸ್ಥಳ ಪರಿಶೀಲಿಸಿ ಮಾತನಾಡುತ್ತಾ ಜಮೀನಿಗೆ ಸಂಬಂದಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸಿ ನಂತರ ಕ್ರಮಕೈಗೊಳ್ಳಲಾಗುವುದು. ಅದೇ ರೀತಿಯಾಗಿ ಬೆಂಗಳೂರು ಕಡಪ ರಾಜ್ಯ ರಸ್ತೆ ಅಗಲಿಕರಣಕ್ಕೆ ಸಂಬಂದಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ , ಗೌನಿಪಲ್ಲಿ ವೃತ್ತ ಸಿಐ ಶಿವಕುಮಾರ್, ದಲಿತ ಮುಖಂಡರಾದ ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ , ಮುಖಂಡ ಸೀನಪ್ಪ ದೂರುದಾರೆ ಮಂಗಮ್ಮ ಹಾಗು ಗ್ರಾಮಸ್ಥರು , ತಾಲೂಕು ದಲಿತ ಸಂಘಟನೆ ಮುಖಂಡರು ಇದ್ದರು.