ಶ್ರೀನಿವಾಸಪುರ : ಸ್ವತಂತ್ರ ಪೂರ್ವದಲ್ಲಿ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಅಧಿಕಾರಾವಧಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಸೈನ್ಯದ ಸೇನಾಧಿಪತಿಯಾಗಿ, ನಿಷ್ಠ ಬಂಟನಾಗಿ ಇದ್ದನು, ರಾಣಿ ಚೆನ್ನಮ್ಮನನ್ನು ಬ್ರಿಟಿಷರು ಸೆರೆ ಹಿಡಿದಾಗ, ಕಿತ್ತೂರು ಸಂಸ್ಥಾನದ ಸೈನ್ಯದ ಚುಕ್ಕಾಣಿ ಹಿಡಿದು ಸೈನ್ಯ ಮುನ್ನಡೆಸಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದನು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕ ಅಧ್ಯಕ್ಷರಾದ ಎಂ. ರಾಮಚಂದ್ರಪ್ಪ ತಿಳಿಸಿದರು.
ಪಟ್ಟಣ ಹೊರವಲಯದ ಕನಕ ಭವನದಲ್ಲಿ ಭಾನುವಾರ ಶ್ರೀನಿವಾಸಪುರ ತಾಲೂಕು ಘಟಕದಿಂದ ಸಂಗೊಳ್ಳಿ ರಾಯಣ್ಣ 194ನೇ ಸಂಗೊಳ್ಳಿ ರಾಯಣ್ಣ ರವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳಿಗೆ ವೈದ್ಯಾಧಿಕಾರಿಗಳಾದ ಡಾಕ್ಟರ್ ಉಮಾಶಂಕರ್ ನೇತೃತ್ವದಲ್ಲಿ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಣೆ ಮಾಡಲಾಯಿತು
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀಯುತ ವೇಮಣ್ಣ, ಕನಕ ನೌಕರರ ಸಂಘದ ತಾಲೂಕ ಅಧ್ಯಕ್ಷ ಮೂರ್ತಿ.ಎಂ, ಕಾರ್ಯದರ್ಶಿಗಳಾದ ಮುನಿರತ್ನಯ್ಯ, ಎ.ಆರ್.ವೆಂಕಟರಮಣ. ಗೌರವಾಧ್ಯಕ್ಷ ನಾರಾಯಣಸ್ವಾಮಿ,ಗೌರವಸಲಹೆಗಾರ-ಭಾಗ್ಯಲಕ್ಷ್ಮಮ್ಮ.ಕೆ,ಕಾರ್ಯಧ್ಯಕ್ಷ ಆಂಜನೇಯಗೌಡ,ಉಪಾಧ್ಯಕ್ಷ-ಪ್ರಕಾಶ್, ಮಹಿಳಾ ಘಟಕದ ಉಪಾಧ್ಯಕ್ಷೆ ರಾಧಾಮಣಿ
ಸಂಘಟನಾಕಾರ್ಯದರ್ಶಿಮಂಜುಳ, ಕ್ರೀಡಾ ಕಾರ್ಯದರ್ಶಿ ಉಜಿನಪ್ಪ
ಕಾನೂನು ಸಲಹೆಗಾರರಾದ- ಶಿವಣ್ಣ, ಶ್ರೀನಿವಾಸ್, ಶ್ರೀನಿವಾಸ್ ಮೂರ್ತಿ, ಸ್ಟುಡಿಯೋ ರಮೇಶ್, ಕನಕ ಭವನದ ನಿರ್ವಾಹಕರಾದ ರಾಮಣ್ಣ, ಸಿಆರ್ಪಿ ಚನ್ನಪ್ಪ. ಜಿ .ಎನ್, ಪತ್ರಕರ್ತ ಚೌಡಪ್ಪ, ಹಾಜರಿದ್ದರು.