ಕೋಲಾರದ ಹಳೆ ಬಸ್ ನಿಲ್ದಾಣದ ಸಮೀಪ ಸಂಕ್ರಾಂತಿ ಸಡಗರಕ್ಕಾಗಿ ಇತರೆ ರಾಜ್ಯ,ಜಿಲ್ಲೆಗಳಿಂದ ಕಬ್ಬು ಬಂದಿದ್ದು, ಜನತೆ ಖರೀದಿಯಲ್ಲಿ ಮಗ್ನರಾಗಿದ್ದಾರೆ.
ಕೋಲಾರ:- ತಮಿಳುನಾಡು,ಆಂಧ್ರ ಗಡಿಯಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮ ಅಲ್ಲಿನ ಸಂಪ್ರದಾಯವೂ ಸ್ವಲ್ಪಮಟ್ಟಿಗೆ ಮಿಳಿತವಾಗಿದ್ದು ಹಬ್ಬಕ್ಕೆ ಅತಿ ಮುಖ್ಯವಾದ ಗೆಣಸು,ಶೇಂಗಾ,ಎಳ್ಳು,ಬೆಲ್ಲ ಕಬ್ಬಿನ ಬೆಲೆ ಗಗನಮುಖಿಯಾಗಿದ್ದರೂ ಖರೀದಿ ಮಾತ್ರ ಜೋರಾಗಿ ನಡೆದಿದ್ದು, ಗೋವುಗಳನ್ನು ಅಲಂಕರಿಸಿ ಪೂಜಿಸಲು ಗೋಪಾಲಕರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ನಗರದ ಬಸ್ನಿಲ್ದಾಣದ ಸಮೀಪ, ರಂಗಮಂದಿರದ ಮುಂಭಾಗ, ತರಕಾರಿ ಮಾರುಕಟ್ಟೆ ಬಳಿ, ಟೇಕಲ್ರಸ್ತೆಯಲ್ಲಿ ರಸ್ತೆ ಬದಿ ತಮಿಳುನಾಡು ಮತ್ತಿತರ ರಾಜ್ಯಗಳ ಕಬ್ಬು ರಾಶಿರಾಶಿಯಾಗಿ ತಂದು ಹಾಕಿದ್ದು, ಮಾರಾಟದ ಭರಾಟೆ ಜೋರಾಗಿಯೇ ನಡೆದಿದೆ.
ಕಬ್ಬು ಹಿಂದೆಂದಿಗಿಂತಲೂ ಹೆಚ್ಚಿನ ಬೆಲೇ ಏರಿಕೆಯಾಗಿದ್ದು, ಒಂದು ಜಳ್ಳೆ 100ರೂಗೆ ಮಾರಾಟವಾಗುತ್ತಿದೆ, ಜತೆಗೆ ಸಾಮಾನ್ಯವಾಗಿ 100ರೂಗೆ ಕೆಜಿ ಸಿಗುತ್ತಿದ್ದ ಶೇಂಗಾ ಬೆಲೆ ಕೆಜಿಗೆ 200 ರೂ, ಗೆಣಸು ಕೆಜಿ 100 ರೂಗೆ ಬೆಲೆ ಏರಿಸಿಕೊಂಡಿದ್ದರೂ ಪ್ರತಿವರ್ಷದಂತೆ ಈ ಬಾರಿಯೂ ವಹಿವಾಟು ಮಾಮೂಲಿಯಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ, ಹೂ, ಹಣ್ಣು, ಶೇಂಗಾ ಸೇರಿದಂತೆ ಹಬ್ಬದ ಸಾಮಾನುಗಳ ಖರೀದಿ ಬರದಿಂದ ನಡೆದಿದೆ, ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ ಈ ಬಾರಿ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.
ಎಳ್ಳು ಬೆಲ್ಲ, ಕಳ್ಳೆಪಪ್ಪು, ಕಳ್ಳೆಬೀಜದ ಬೆಲೆಯೂ ಗಗನದತ್ತ ದಾಪುಗಾಲು ಹಾಕಿದೆ, ಪ್ರತಿ ಕೆಜಿ ಎಳ್ಳು 320 ರೂ, ಶೇಂಗಾ ಬೀಜಕ್ಕೆ 160 ರೂ, ಕಳ್ಳೆಪಪ್ಪಿಗೆ 120 ರೂ, ಬೆಲ್ಲ 50 ರಿಂದ 60 ರೂಗೆ ತನ್ನ ಬೆಲೆ ಏರಿಸಿಕೊಂಡು ಬೀಗುತ್ತಿದ್ದರೂ, ಹಬ್ಬಕ್ಕಾಗಿ ಈ ವಸ್ತುಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಗ್ರಾಹಕನದ್ದಾಗಿದೆ.
ಕೆಲವು ಅಂಗಡಿಗಳವರು ಗ್ರಾಹಕರಿಗೆ ಸುಲಭವಾಗಲು ಎಳ್ಳುಬೆಲ್ಲ ಮಿಶ್ರಣವನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದು, ಪ್ರತಿ ಕೆಜಿ ಎಳ್ಳುಬೆಲ್ಲ 250 ರೂಗೆ ಮಾರಾಟವಾಗುತ್ತಿದೆ, ಕೆಲವು ಕಡೆಗಳಲ್ಲಿ ಹೊಟ್ಟು ತೆಗೆದು ಸಿದ್ದಪಡಿಸಿದ ಕಳ್ಳೇಬೇಜ, ಕೊಬ್ಬರಿ ಚುರುಗಳು, ಕಳ್ಳೆಪಪ್ಪು, ಬೆಲ್ಲದ ಚೂರುಗಳನ್ನು ಪ್ರತ್ಯೇಕವಾಗಿ ಕವರ್ ಮಾಡಿ ಮಾರಾಟ ಮಾಡಲಾಗುತ್ತಿದೆ.
ಸಂಕ್ರಾಂತಿ ಆಚರಣೆಗೆ ಅಷ್ಟೇನು ಖಾದ್ಯ ಆಹಾರ ತಯಾರಿಸದ ನಾಗರೀಕರು ಪೊಂಗಲ್ ಜತೆಗೆ ಸಂಕ್ರಾಂತಿಯ ಅವರೇ ಹಿತುಕಿದ ಬೇಳೆ ಸಾರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಅವರೆಕಾಯಿಯ ಬೆಲೆಯೂ ಗಗನಮುಖಿಯಾಗಿದ್ದು, ಪ್ರತಿ ಕೆಜಿ ಅವರೆಕಾಯಿ 100 ರೂಗೆ ಮಾರಾಟವಾಗುತ್ತಿದೆ.
ಗೋವುಗಳಿಗೆ ವಿಶೇಷ ಗೋಪಾಲಕರ ಸಂಭ್ರಮ
ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಸಮೀಪ ಸಂಕ್ರಾಂತಿಗಾಗಿ ಶೇಂಗಾ,ಗೆಣಸು ಮಾರಾಟ ಜೋರಾಗಿ ನಡೆದಿದೆ.
ಸಂಕ್ರಾಂತಿ ಗೋವುಗಳ ಹಬ್ಬವೂ ಆಗಿರುವುದರಿಂದ ಗ್ರಾಮೀಣ ಜನತೆ ತಮ್ಮ ಗೋವುಗಳನ್ನು ಸಿಂಗರಿಸಿ, ಪೂಜಿಸಲು ಅಗತ್ಯ ಸಾಮಗ್ರಿಗಳಿಗಾಗಿ ವ್ಯಾಪಾರ ನಡೆಸುತ್ತಿದ್ದಾರೆ.
ನಗರದ ಕಿಲಾರಿಪೇಟೆಯಲ್ಲಿ ಸಂಕ್ರಾಂತಿ ಅಂಗವಾಗಿ ಪ್ರತಿ ವರ್ಷವೂ ಗೋವುಗಳಿಗೆ ಮೇವು ದಾನ ನೀಡುವ ಸಂಪ್ರದಾಯವನ್ನು ಇಲ್ಲಿನ ಯಾದವ ಸಮಾಜದ ಮುಖಂಡರು ಪಾಲಿಸಿಕೊಂಡು ಬಂದಿದ್ದು, ಈ ಬಾರಿಯೂ ಈ ವಿಶಿಷ್ಟತೆ ಮುಂದುವರೆಯಲಿದೆ.
ಹಬ್ಬದ ಪೂಜೆಗೆ ಮಾತ್ರವಲ್ಲದೇ ಗೋವುಗಳ ಅಲಂಕಾರಕ್ಕೂ ಹೂವಿನ ಅಗತ್ಯತೆ ಇರುವುದರಿಂದ ಹೂ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿ ನಡೆದಿದ್ದು, ಜನತೆ ಹೂ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಮಲ್ಲಿಗೆ ಕೆಜಿಗೆ 2ಸಾವಿರ, ಕನಕಾಂಬರ 1200 ರೂ, ರೋಸ್,ಸೇವಂತಿ ಕೆಜಿಗೆ 250 ರೂಗೆ ಮಾರಾಟವಾಗುತ್ತಿದೆ.
ಅಲಂಕಾರಗೊಂಡ ನಗರದ ದೇವಾಲಯಗಳು
ಸಂಕ್ರಾಂತಿ ಜತೆಗೆ ಧನುರ್ಮಾಸದ ಪೂಜೆ, ಮುಂಜಾನೆಯ ಭಜನೆ,ಮೆರವಣಿಗೆಯ ಸಂಪ್ರದಾಯವನ್ನೂ ಇನ್ನೂ ಮುಂದುವರೆಸಿಕೊಂಡು ಹೋಗಿರುವ ನಗರದ ಕಿಲಾರಿಪೇಟೆ, ಗಲ್ಪೇಟೆ ಮತ್ತಿತರ ಬಡಾವಣೆಗಳ ನಾಗರೀಕರು ಸಂಕ್ರಾಂತಿಯಂದು ಚುಮುಚುಮು ಚಳಿಯಲ್ಲಿ ಭಜನೆಗೆ ತಪ್ಪಿಸಿಕೊಳ್ಳದೇ ಬರುವ ಮಕ್ಕಳಿಗೆ ಬಹುಮಾನ ವಿತರಿಸುವ ಕಾರ್ಯವನ್ನೂ ಈ ಬಾರಿ ಸಂಕ್ರಾಂತಿಯಂದು ನಡೆಸಲು ಸಿದ್ದತೆ ನಡೆಸಿದ್ದಾರೆ.
ಚಿತ್ರಶೀರ್ಷಿಕೆ:;ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಸಮೀಪ ಸಂಕ್ರಾಂತಿಗಾಗಿ ಹೂವಿನ ಖರೀದಿ ನಡೆದಿದ್ದು, ಹೂವಿನ ಬೆಲೆಯೂ ಗಗನಮುಖಿಯಾಗಿದ್ದರೂ, ಖರೀದಿ ಮಾತ್ರ