ಶ್ರೀನಿವಾಸಪುರ : ಸಚಿವ ಕೆ.ಎಚ್. ಮುನಿಯಪ್ಪ ರವರನ್ನು ಅಸಭ್ಯ ವರ್ತನೆಯಿಂದ ಅವಾಚ್ಯ ಶಬ್ದಗಳನ್ನು ಮಾತನಾಡಿ ನಮ್ಮ ಸಮುದಾಯವನ್ನು ನಮ್ಮನ್ನು ಕೀಳಮಟ್ಟದಿಂದ ಬೈಯ್ದಿರುವ ಆರೋಪಿಗಳ ಬಗ್ಗೆ ದೂರು ಸಲ್ಲಿಸಿ ಮೂರು ದಿನಗಳು ಆದರೂ ಸಹ ಇದುವರೆಗೂ ಬಂದಿಸಿಲ್ಲ . ಆರೋಪಿಗಳನ್ನು ಅತಿ ಶೀಘ್ರವಾಗಿ ಬಂದಿಸುವಂತೆ ಆದಿಜಾಂಭವ ಸೇವಾ ಸಮಿತಿಯ ಅಧ್ಯಕ್ಷ ಸಿ.ಮುನಿಯಪ್ಪ ಒತ್ತಾಯಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಆದಿಜಾಂಭವ ಸೇವಾ ಸಮಿತಿಯಿಂದ ಮುತ್ತಿಗೆ ಹಾಕಿ ಮಾತನಾಡಿದರು.
ನಾವು ಆರೋಪಿಗಳ ವಿರುದ್ದ ದೂರು ಸಲ್ಲಿಸಿ ಮೂರು ದಿನಗಳು ಕಳೆದರೂ ಸಹ ಇದುವರೆಗೂ ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಕಾರಣ ಅರೋಪಿಗಳನ್ನು ಅತಿ ಶೀಘ್ರವಾಗಿ ಬಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಆದಿಜಾಂಭವ ಸೇವಾ ಸಮಿತಿಯೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಮಾತನಾಡಿ ಆರೋಪಿಗಳನ್ನು ಅತಿ ಶೀಘ್ರವಾಗಿ ಬಂದಿಸಿ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಮಾದಾನಪಡಿಸಿದರು.
ಪ್ರದಾನ ಕಾರ್ಯದರ್ಶಿ ನಾಗದೇನಹಳ್ಳಿ ಎನ್.ವೆಂಕಟರಮಣಪ್ಪ, ಖಜಾಂಚಿ ಗೊರಮಾಕಲಪಲ್ಲಿ ವೆಂಕಟೇಶ್, ಮುಖಂಡರಾದ ಜಿ.ಆರ್.ಶ್ರೀನಿವಾಸ್, ಮರಸನಪಲ್ಲಿ ವೆಂಕಟರಮಣಪ್ಪ, ನಂಬಿಹಳ್ಳಿ ನಾರಾಯಣಸ್ವಾಮಿ, ಸತ್ಯನಾರಾಯಣ , ಕೊಡಿಚೆರುವು ನಾರಾಯಣಸ್ವಾಮಿ , ಚಿಲೇಪಲ್ಲಿ ವೆಂಕಟರಮಣ, ಗೌನಿಪಲ್ಲಿ ರಮೇಶ್ , ಆಲಾಟಂ ಲಕ್ಷ್ಮಣ್ಣ, ಚಲ್ದಿಗಾನಹಳ್ಳಿ ಸೀತಪ್ಪ, ಕಂಬಾಪಲ್ಲಿ ನರಸಿಂಹ ಇತರರು ಇದ್ದರು.