ಮಂಗಳೂರು: ಕರ್ನಾಟಕ ಸರಕಾರಧ ವಿಧಾನ ಪರಿಷದ್ ಸದಸ್ಯರಾದ ಶ್ರೀಯುತ ಐವನ್ ಡಿಸೋಜಾರವರ ಮಂಗಳೂರಿನ
ವಾಲೆನ್ಸಿಯಾ ಪ್ರದೇಶದಲ್ಲಿ ವಾಸ್ತವ್ಯದ ಮನೆ ಮೇಲೆ ಕೆಲವು ದುಷ್ಕರ್ಮಿಗಳು ದಿನಾಂಕ 21-08-2024ರ ತಡ ರಾತ್ರಿ ಕಲ್ಲು ಎಸೆದು
ಪರಾರಿಯಾಗಿರುತ್ತಾರೆ.
ಶ್ರೀಯುತ ಐವನ್ ಡಿಸೋಜಾ ರವರು ಕ್ರೈಸ್ತ ಸಮುದಾಯದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕರಾಗಿ
ಗುರುತಿಸಿಕೊಂಡಿರುತ್ತಾರೆ. ಸನ್ಮಾನ್ಯ ಐವನ್ ಡಿಸೋಜಾರವರು ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾತ್ಮಕರಾಗಿ
ಮುಂಚೂಣಿ ನ್ಹಾಯಕರಾಗಿರುತ್ತಾರೆ. ಶ್ರೀಯುತ ಐವನ್ ಡಿಸೋಜಾರವರು ಕೋಮುವಾದಿ ಶಕ್ತಿಗಳನ್ನು ಪ್ರಬಲವಾಗಿ ಎದುರಿಸಿ
ಮತ್ತು ವಿರೋಧಿಸಿ. ಬಂದಿರುತ್ತಾರೆ. ಅವರ ಮನೆ ಮೇಲಿನ ಈ ಘಟನೆಯು ಖಂಡನಾರ್ಹ ಅಪರಾಧವಾಗಿದ್ದು ಇದನ್ನು ನಾವು
ಖಂಡಿಸುತ್ತೇವೆ. ಅಪರಾಧ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನು ಕ್ರಮ
ಕೈಗೊಳ್ಳಬೇಕಾಗಿ “ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಪಾನೀರ್ ಈ ಮೂಲಕ
ಆಗ್ರಹಿಸುತ್ತಾರೆ.