ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ 269ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ದಿನಾಂಕ 30.04.2024 ರಂದು ವಿಶ್ವ ಹೋಮಿಯೋಪಥಿ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಹುಲ್ ಪಿ. BHMS, (IAAS), Senior Deputy Accountant General, CAG of India,ಗೌರವಾನ್ವಿತ ಅತಿಥಿಗಳಾಗಿ, 1999ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿ, ಕೇರಳ ಸರಕಾರ, ಹೋಮಿಯೋಪಥಿ ವಿಭಾಗದ ವೈದ್ಯಕೀಯ ಅಧಿಕಾರಿ ಡಾ. ಜೆರಾಲ್ಡ್ ಜಯಕುಮಾರ್, ಎಮ್. ಡಿ. (ಹೋಮಿಯೋಪಥಿ) ಉಪಸ್ತಿತರಿದ್ದರು. ಫಾದರ್ ಮುಲ್ಲರ್ ಸೇವಾಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಂಪ್ರದಾಯದಂತೆ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರ್ ಫಾದರ್ ಅಗಸ್ಟಸ್ ಮುಲ್ಲರ್ರವರ ಪ್ರತಿಮೆಗೆ ಮತ್ತು ಡಾ. ರಾಹುಲ್ ಪಿ. ಯವರು ಡಾ. ಸಾಮ್ಯುವೆಲ್ ಹಾನ್ನಿಮನ್ನರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ಸಭೆಯನ್ನು ಸ್ವಾಗತಿಸಿ, ಮುಖ್ಯ ಅತಿಥಿ ಮತ್ತು ಗೌರವ ಅತಿಥಿಯರನ್ನು ಪರಿಚಯಿಸಿದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರತಿಷ್ಟಿತ ‘ಡಾ| ಬಾತ್ರಾರವರು ಪ್ರಾಯೋಜಿಸಿದ ಬಾತ್ರಾ ವಿದ್ಯಾರ್ಥಿವೇತನ’ ಪ್ರಶಸ್ತಿಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕುಮಾರಿ ಅನಘಾ ಕೆ.ಜಿ. ಗೆ Gold Scholarship, ಕುಮಾರಿ ಏಂಜಲಿನ್ ಜಾಯ್ಗೆ Silver Scholarship ಮತ್ತು ಕುಮಾರಿ ಪರ್ಲಿನ್ ಟೆಲ್ಲಿಸ್ಗೆ Bronze Scholarship ನೀಡಲಾಯಿತು.
ವಿಶ್ವ ಹೋಮಿಯೋಪಥಿ ದಿನಾಚರಣೆ 2024ರ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿ ಡಾ. ಜೆರಾಲ್ಡ್ ಜಯಕುಮಾರ್ರವರು ಡಾ. ಬಿನುರಾಜ್ ಟಿ.ಕೆ ಯವರ ಜೊತೆಗೂಡಿ ಹೊರತಂದ ‘ಹೋಮಿಯೋ ಎವಿಡೆನ್ಸ್ ಡಾಟ್ಕಾಮ್ ಎಂಬ ‘ಡಿಜಿಟಲ್ ಡಾಟಾಬೇಸ್’ ವೆಬ್ಸೈಟ್ ಫಾದರ್ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಯಾದ ವಂದನೀಯ ರೋಶನ್ ಕ್ರಾಸ್ತಾರವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿಗಳಾದ ವಂದನೀಯ ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜರವರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ಸೆಬಾಸ್ಟಿಯನ್ ಪಿ.ಎ. ರವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಡಾ. ರಾಹುಲ್ ಪಿ. ಯವರು ಸಭೆಯನ್ನುದ್ದೇಶಿಸಿ ತಮ್ಮ ಬಿ.ಎಚ್.ಎಂ.ಎಸ್ ಪದವಿ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಕಷ್ಟ ಪಡದೆ ಜೀವನದಲ್ಲಿ ಯಶಸ್ವಿಯಾಗಿ ಬದುಕುವುದು ಸಾಧ್ಯವಿಲ್ಲ, ಯಶಸ್ವಿ ಜೀವನದತ್ತ ಸಾಗಲು ಬದಲಾವಣೆಗೆ ಯಾವಾಗಲೂ ಸಿದ್ಧರಾಗುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
ವಿಶ್ವ ಹೋಮಿಯೋಪಥಿ ದಿನದ ಆಚರಣೆಯ ಸಂದರ್ಭದಲ್ಲಿ ಆಡಳಿತಾಧಿಕಾರಿ, ರೆ. ಫಾ. ರೋಶನ್ ಕ್ರಾಸ್ತಾರವರು ಸಭೆಯನ್ನು ಅಭಿನಂದಿಸಿ ವೃತ್ತಿಪರ ಮತ್ತು ವೈಯಕ್ತಿಕ ಭವಿಷ್ಯದ ಬಗ್ಗೆ ಪ್ರತಿಯೊಬ್ಬರ ಜೀವನದಲ್ಲಿ ಬದ್ಧತೆಯು ಅಗತ್ಯವೆಂದು ಹೇಳಿದರು. ಹೋಮಿಯೋಪಥಿಯ ಭವಿಷ್ಯವು ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಅವಲಂಭಿಸಿದೆ, ಇದಕ್ಕೋಸ್ಕರ ಹೋಮಿಯೋಪಥಿಯ ದಿಗ್ಗಜರಿಂದ ಸ್ಪೂರ್ತಿ ಪಡೆದು ತಮ್ಮ ಪರಿಧಿಯನ್ನು ವಿಸ್ತರಿಸುವಂತೆ ವಿದ್ಯಾಥಿಗಳನ್ನು ಹುರಿದುಂಬಿಸಿದರು.
ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳನ್ನು ನಿರ್ದೇಶಕರು ಸ್ಮರಣಿಕೆ ನೀಡಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿಗೆ ನೀಡಿದ ಅನುಕರಣೀಯ ಕೊಡುಗೆಗಾಗಿ ರೆಪರ್ಟರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಖಾಲ್ ಪಿ. ರವರನ್ನು ನಿರ್ದೇಶಕರು ಮತ್ತು ವೇದಿಕೆಯಲ್ಲಿನ ಗಣ್ಯರು ಸನ್ಮಾನಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳ ಮತ್ತು ಗೌರವಾನ್ವಿತ ಅತಿಥಿಗಳ ಮಾದರಿಯನ್ನು ತೆಗೆದುಕೊಂಡು ಅವಕಾಶಗಳ ಮೇಲೆ ನಿಗಾ ಇಡುವಂತೆ ಪ್ರೇರೇಪಿಸಿ, ಭವಿಷ್ಯದಲ್ಲಿ ಹೋಮಿಯೋಪಥಿಯ ಅಭಿವೃದ್ಧಿಗಾಗಿ ಶುಭ ಹಾರೈಸಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ| ಸೆಬಾಸ್ಟಿಯನ್ ಪಿ. ಎ. ವಂದನಾರ್ಪಣೆಗೈದರು.
ಡಾ. ಕೃಷ್ಣಾ ಹಾಗೂ ಡಾ. ಅಮೋಘಾ ಡಿ. ಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಗೌರವ ಅತಿಥಿಗಳಾದ ಡಾ. ಜೆರಾಲ್ಡ್ ಜಯಕುಮಾರ್ರವರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಫಾದರ್ ಮುಲ್ಲರ್ಸ್ನಲ್ಲಿ ತಮ್ಮ ಶಿಕ್ಷಣದ ನಂತರ ಪ್ರಾರಂಭವಾದ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು.
ವಿಶ್ವ ಹೋಮಿಯೋಪಥಿ ದಿನದ ಜಾಗೃತಿ ಅಂಗವಾಗಿ ಎಪ್ರಿಲ್ 13ರಂದು ಹಂಪನಕಟ್ಟೆಯ ಸಿಟಿ ಸೆಂಟರ್ ಮಾಲ್ನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಫ್ಲ್ಯಾಷ್ಮೊಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘World Homoeopathy Day 2024’ was celebrated at Father muller Homoeopathic Medical College
World Homoeopathy Day 2024 was celebrated on the 30thof April 2024 at Father muller Homoeopathic Medical College commemorating the 269thBirth Anniversary of Dr Christian Friedrich Samuel Hahnemann, the Founder of Homoeopathy.
The inauguration of the program was held at 9.30 a.min the Father Muller Auditorium. Chief Guest for the program was Dr Rahul P, BHMS, (IAAS), Senior Deputy Accountant General, CAG of India. The Guest of Honour is a distinguished alumnus of 1999 UG Batch, Dr Jerald Jeyakumar, MD(Hom), Medical Officer, Department of Homoeopathy, Govt. of Kerala. Rev. Fr Richard Aloysius Coelho, Director, Father Muller Charitable Institutions presided over the program.
As a tradition. Rev. Fr Richard Aloysius Coelho garlanded the bust of Rev. Fr Augustus Muller and Dr Rahul P garlanded the bust of Dr Samuel Hahnemann. The program began with a prayer song and Convener Dr Sebastian P A escorted the Chief Guest, Guest of Honour, President, Administrator Rev. FrRoshanCrasta, Principal Dr E S J PrabhuKiran, Assistant Administrator Rev. FrAshwinCrasta and Vice Principal Dr VilmaMeeraDsouza to the dais.
Dr E S J PrabhuKiran, Principal welcomed the gathering and introduced the Chief Guest and Guest of Honour. The dignitaries on the dais joined together to formally inaugurate the program by lighting the lamp.
Dr MukeshBatra Homoeopathy Scholarship awards were presented to the meritorious students. Gold scholarship presented to MsAnagha K G, Silver scholarship to Ms Angelin Joy and Bronze scholarship toMsPerlinTellis.
The winners of the various competitions held in view of World Homoeopathy Day 2024 were also awarded during the program.
Dr Jerald Jeyakumar, proud Alumni of Father Muller Homoeopathic Medical College along with Dr Binuraj TK has come up with HomeoEvidence.com which aspires to become the largest digital database of Homoeopathic Cures across Globe by various schools of Homoeopathy was launched by Administrator, Rev FrRoshan Crasta on this occasion.
The Chief Guest, Dr Rahul P addressed the gathering about his experiences of BHMS and his graduation life and enlightened the students about the hardships and experiences of student life and reminded that without hardships it is difficult to survive and succeed. Dr Rahul also suggested to look into other career options as well and to be ready for change as nothing can stop you from being successful.
Administrator, Rev. FrRoshan Crasta congratulated the gathering on the occasion of celebration of World Homoeopathy Day and highlighted about commitment in everyone’s lives regarding professional and personal future. The future of Homoeopathy rests on the shoulders of the students and they were asked to take inspiration from the stalwarts and to broaden their horizons.
The Chief Guest and the Guest of Honour were felicitated with a memento by the Director.
Dr Rakhal P, Assistant Professor of Department of Repertory was felicitated by the Director and the dignitaries on the dais for his exemplary contributions to Father Muller Homoeopathic Medical College.
In his Presidential address, Rev Fr Richard Coelho reiterated the fact to the students regarding keeping a watch over the opportunities and take the examples set by the chief guest and guest of honour of the day and wished all the very best for the propagation of Homoeopathy in the future.
The vote of thanks was proposed by the Convener Dr Sebastian P A. The inauguration program ended with the Institution Anthem.
Dr Krishna and Dr Amogha,MD scholars were the MCs for the day.
The Guest of Honour, Dr Jerald Jeyakumar interacted with the students of Father Muller Homoeopathic Medical College sharing his experiences in the journey that began after his education at Father Mullers.
As a part of awareness on World Homoeopathy Day, a flashmob was performed by the students of the College on 13th April 2024 at City Centre Mall, Hampankatta.