

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಕೇಡೆಟಗಳಿಂದ ಗೌರವ ಸ್ವೀಕರಿಸಿ “ಜಾತಿ ಮತ ಬೇಧ ಮರೆತು, ಒಬ್ಬರನೊಬ್ಬರು ಅರಿತು ಬಾಳಿದರೆ, ಅದುವೇ ನೀಜ ಸ್ವಾತಂತ್ರ್ಯ, ನಮ್ಮ ಹಿರಿಯರು ತ್ಯಾಗ ಬಲಿದಾನದಿಂದ ನಮ್ಮಗೆ ಸಿಕ್ಕಿದೆ, ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿದರೆ, ಸ್ವಾತಂತ್ರ್ಯ ಬೆಲೆ ಬರುತ್ತದೆ’ ಎಂದು ಸಂದೇಶ ನೀಡಿ, ಸ್ವಾತಂತ್ರದ ಶುಭಾಷಯಗಳನ್ನು ಸಲ್ಲಿಸಿದರು.
ಚರ್ಚಿನ ಗಾಯನ ಮಂಡಳಿ ದೇಶ ಭಕ್ತಿ ಗೀತೆಗಳನ್ನು ಹಾಡಿತು. ಘಟಕದ ಅಧ್ಯಕ್ಷೆ ಆಶಾ ಕರ್ವಾಲ್ಲೊ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಸಂತ ಜೋಸೆಪ್ ಕಾನ್ವೆಂಟಿನ ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ವಾಲ್ಟರ್ ದಿಸೋಜಾ, ಕಾರ್ಯದರ್ಶಿ ಡೊಮಿನಿಕ್ ಬ್ರಗಾಂಜಾ, ಸರ್ವ ಆಯೋಗಗಳ ಸಂಯೋಜಕಿ ಶೋಭ ವಾಜ್ ಕಾರ್ಯದರ್ಶಿ ಶಾಂತಿ ರಾಣಿ ಬರೆಟ್ಟೊ, ಕುಂದಾಪುರ ವಲಯದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾದ ಪದಾಧಿಕಾರಿಗಳು, ಜೋನ್ ಮಾಸ್ಟರ್ ಉಪಸ್ಥಿತರಿದ್ದರು. ಜೂಲಿಯೆಟ್ ಪಾಯ್ಸ್, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.












