

ಪಡುಕೋಣೆ :- ದಿನಾಂಕ 26/11/2026 ರಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸ಼ಂಘದ ಸಭೆಯನ್ನು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಸಭೆಯಲ್ಲಿ ಹಿಂದಿನ ಸಭೆಯ ವರದಿಯನ್ನು ಮಂಡಿಸಿ ಸಭೆಯಲ್ಲಿ ನಡೆದ ವಿಷಯಗಳ ಪುನರ್ ವಿಶ್ಲೇಷಣೆ ನಡೆಸಿದರು. ಹಾಗೂ ಆಕಸ್ಮಿಕವಾಗಿ ದೖವಾಧೀನರಾದ ಸಂಘದ ಸದಸ್ಯರಾದ ಪೆಟ್ರಿಕ್ ವಾಸ್ ಅವರ ಆತ್ಮಕ್ಕೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷರಾದ ಡೊಲ್ಫಿ ಡಿ’ಸಿಲ್ವರವರು ಕೆಲವು ಸಾಮೂಹಿಕ ಪ್ರಶ್ನೆಗಳನ್ನು ಕೇಳಿ ಕ್ವಿಜ್ ನ್ನು ನಡೆಸಿದರು. ಕ್ವಿಜ್ ನಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನವನ್ನು ನೀಡಲಾಯಿತು.
ಅನಂತರ ಜುಲೈ ತಿಂಗಳಿಂದ ನವೆಂಬರ್ ತಿಂಗಳವರೆಗೆ ಜನಿಸಿದ ಸಂಘದ ಸದಸ್ಯರಿಗೆ ಧರ್ಮ ಗುರುಗಳಾದ ವಂ। ಫಾದರ್ ಫ್ರಾನ್ಸಿಸ್ ಕರ್ನೆಲಿಯೊರವರು ಅವರು ಹುಟ್ಟಿದ ದಿನಾಂಕ ಮತ್ತು ತಿಂಗಳನ್ನು ನೆನಪಿಸಿ ಪುಷ್ಪಾವನ್ನು ನೀಡಿ ಗೌರವಿಸಿದರು. ಹಾಗೆಯೇ ’75’ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾದ 12 ಮಂದಿಗೆ ಶಾಲೂ ಹೊದಿಸಿ ಪುಷ್ಪಗುಚ್ಛವನ್ನು ನೀಡಿ ಸನ್ಮಾನಿಸಿ ಶುಭಾಶಯ ಗೀತೆಯನ್ನು ಹಾಡಲಾಯಿತು. ಸಭೆಯಲ್ಲಿ 56 ಮಂದಿ ಸದಸ್ಯರು ಹಾಜರಿದ್ದರು. ಸಿಸ್ಟರ್ ಪಾವನಾ ಹಿಂದಿನ ಸಭೆಯ ವರದಿಯನ್ನು, ಕ್ರಿಸ್ತಿನ್ ವಾಸ್ ರವರು ಜುಲೈ ನಿಂದ ನವೆಂಬರ್ ತಿಂಗಳವರೆಗೆ ಜನಿಸಿದ ಸಂಘದ ಸದಸ್ಯರ ಹೆಸರುಗಳನ್ನೂ ಅಲೆಕ್ಸ್ ಎಂಟನಿ ಡಿ’ಸೋಜರವರು 75 ವರ್ಷ ಮೇಲ್ಪಟ್ಟರವರ ಹೆಸರುಗಳನ್ನು ಮಂಡಿಸಿದರು. ಪ್ರಸ್ತುತ ಮುಂದಿನ ವರ್ಷಕ್ಕೆ ಸಭೆಗೆ ಹಿರಿಯ ಸದಸ್ಯರಾದ ಸ್ಟೇನಿ ಲುವಿಸ್ ರವರಿಗೆ ಸಂಘದ ಅಧ್ಯಕ್ಷರಾಗಿ ನೇಮಿಸಿದರು.ಸಂಘದ ಅಧ್ಯಕ್ಷರಾದ ಡೊಲ್ಫಿ ಡಿ’ಸಿಲ್ವರವರು ಸ್ವಾಗತ, ಟ್ರಿಜಾ ಸಿಕ್ವೇರಾ ಧನ್ಯವಾದ, ಸಂಘದ ಕಾರ್ಯದರ್ಶಿ ಡೇರಿ ರೆಬೆಲ್ಲೊ ಕಾರ್ಯಕ್ರಮ ನಿರ್ವಾಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಲಘ ಉಪಹಾರದ ಪ್ರಾಯೋಜಕರಾದ ವಿಲ್ಫ್ರೆಡ್ ವಾಸ್, ಸನ್ಮಾನಾದ ಶಾಲುಗಳ ಪ್ರಾಯೋಜಕರಾಗಿ ಐರಿನ್ ಲುವಿಸ್ ರವರು ಸಹಕರಿಸಿದರು. ಧರ್ಮಗುರುಗಳಾ ಪ್ರಾರ್ಥನೆಯೊಂದಿಗೆ ಸಭೆ ಮುಕ್ತಾಯವಾಯಿತು.






















