

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ “ಕಾರ್ಮೆಲ್ ಧ್ಯಾನ ನಿಧಿ” ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಸುಗುಣ ಇವರು ಕಾರ್ಯಕ್ರಮವನ್ನು (08-10-2026) ಉದ್ಘಾಟಿಸಿ, ಪ್ರಾರ್ಥನೆ ಮತ್ತು ಧ್ಯಾನ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು “ದೇವರು ನನಗೆ ಯಾರು?” ವಿಷಯದ ಬಗ್ಗೆ ಪಿ ಪಿ ಟಿ ಯ ಮೂಲಕ ಮಾಹಿತಿ ನೀಡಿದರು. ಶಾಲಾ ಶಿಕ್ಷಕಿ ಶೀಲತಾ ಇವರು “ಗುರಿ ಆಧಾರಿತ ಆಯ್ಕೆಗಳು” ವಿಷಯವಾಗಿ, ಶಾಲಾ ಹಿರಿಯ ಶಿಕ್ಷಕರಾದ ಮೈಕಲ್ ಪುಟಾರ್ಡೊ “ಬದಲಾವಣೆಯ ಕೀಲಿ ಕೈ ನನ್ನ ಕೈಯಲ್ಲಿದೆ” ವಿಷಯವಾಗಿ, ಶಿಕ್ಷಕರಾದ ಅಶೋಕ್ ದೇವಾಡಿಗ ಇವರು “ನನ್ನ ಸಂತೋಷ” ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ನಾಗರತ್ನ ಇವರು ಮೌಲ್ಯಾಧಾರಿತ ರಸಪ್ರಶ್ನೆಗಳ ಸ್ಪರ್ಧೆ ನಡೆಸಿದರು. ಶಿಕ್ಷಕಿ ಸೆಲಿನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಮಾರೋಪದಲ್ಲಿ ದೀಪಗಳನ್ನು ಬೆಳಗಿಸಿ ವಂದನೆಗಳೊಂದಿಗೆ, ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.




