

ಕೋಟೇಶ್ವರ , ಮಾ,9; ಕೋಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ಮಾ. 8 ರಂದು-ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಮಹಿಳೆಯರ ಮುಂದಾಳತ್ವದಲ್ಲಿ, ಚರ್ಚಿನ ಧರ್ಮಗುರು ವಂ।ಪ್ರವೀಣ್ ಪಿಂಟೊ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಬಳಿಕ ವೇದಿಕೆಯಲ್ಲಿದ್ದ ಅತಿಥಿಗಳು ಗೀಡಕ್ಕೆ ನೀರು ಎರೆಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಾಂತಿ ಪಿರೇರಾ, ಮಹಿಳೆಯ ಸಬಲೀಕರಣದ ಮಾಹಿತಿ ನೀಡಿ, ಮಹಿಳೆಯರು ಬಲಿಷ್ಟರಾಗಿ, ಸಮಾಜವನ್ನು ಬಲಿಷ್ಟವನ್ನಾಗಿ ಮಾಡಬೇಕು’ ಎಂದು ತಿಳಿಸಿದರು. ಚರ್ಚಿನ ಉಪಾಧ್ಯಕ್ಷರು ಸಂದೇಶ ನೀಡಿದರು. ಸಮಾಜದಲ್ಲಿ ಸೇವೆ ನೀಡಿದ ಐದು ಜನ ಮಹಿಳೆಯರನ್ನು ಶಾಲು, ಫಲ, ಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮಹಿಳಾ ಸಂಘಟನೇಯ ಅಧ್ಯಕ್ಷೆ, ಕಾರ್ಯದರ್ಶಿ, ಭಾವನ ಒಕ್ಕೂಟದ ಖಂಜಾಚಿ, ಚರ್ಚಿನ ಉಪಾಧ್ಯಕ್ಷ, ಕಾರ್ಯದರ್ಶಿ, 20 ಆಯೋಗಗಳ ಸಂಯೋಜಕಿ, ಸಂತ ಅಂತೋನಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಅವಿತಾ ಮೊಂತೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಪ್ರಸ್ತೂತ ಪಡಿಸಲಾಯಿತು. ಕಿರು ಆಟ, ಮನೋರಂಜನೆ ಮಹಿಳೆಯರಿಂದ ನಡೆಯಿತು. ವಿಜೇತರಿಗೆ ವಂ।ಪ್ರವೀಣ್ ಪಿಂಟೊ ಬಹುಮಾನಗಳನ್ನು ವಿತರಿಸಿದರು. ಕು. ಮೊನಿಕಾ ಡಿಮೆಲ್ಲೊ ಆಟಗಳನ್ನು ನಡೆಸಿಕೊಟ್ಟರು,ಕಾರ್ಯಕ್ರಮವನ್ನು ಡಯಾನಾ ಸೆರಾವೊ ನಿರೂಪಿಸಿದರು. ಪ್ರಮೀಳಾ ಮಸ್ಕರೇನ್ಹಾಸ್ ಸ್ವಾಗತಿಸಿದರು. ಅಸ್ತುಂಮ್ತಾ ಸಾಲಿನ್ಸ್ ಧನ್ಯವಾದ ಅರ್ಪಿಸಿದರು. ಭೋಜನದ ಜೊತೆ ಕಾರ್ಯಕ್ರಮ ಮುಗಿಸಲಾಯಿತು.






