HOLY ROSARY CHURCH, KUNDAPUR – 450 th JUBILEE SOUVENIR 2021

ಪ್ಯಾಲೆಸ್ತೀನಿನ ಭಾರತದ ರಾಯಭಾರಿ ಮುಕುಲ್ ಆರ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ

JANANUDI.COM NETWORK

ಪ್ಯಾಲೆಸ್ತೀನ್‌ನ ರಮಲ್ಲಾದಲ್ಲಿರುವ ಭಾರತದ ರಾಯಭಾರಿ ಮುಕುಲ್ ಆರ್ಯ ಅವರು ತಮ್ಮ ಕಚೇರಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಸುದ್ದಿಯನ್ನು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮುಕುಲ್ ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ

“ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಶ್ರೀ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರೊಬ್ಬ ಪ್ರತಿಭಾವಂತ ಅಧಿಕಾರಿಯಾಗಿದ್ದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ನಿಧನದ ನೋವು ಮರೆಸುವ ಶಕ್ತಿಯನ್ನ ದೇವರು ಕರುಣಿಸಲಿ ಟ್ವೀಟ್ ಮಾಡಿದ್ದಾರೆ.

ಭಾ.ಜನೌಷಧಿ ಕೇಂದ್ರ, ಕಸ್ತೂರ್ಬಾ ಆಸ್ಪತ್ರೆ ಸಹಯೋಗದೊಂದಿಗೆ ಕುಂದಾಪುರ ರೆಡ್ ಕ್ರಾಸ್ ಉಚಿತ ಆರೋಗ್ಯ ತಪಾಸಣಾ ಶಿಬಿರ

JANANUDI.COM NETWORK

ಕುಂದಾಪುರ, ಮಾ.6: ಭಾರತೀಯ ಜನೌಷಧಿ ಕೇಂದ್ರ, ಕಸ್ತೂರ್ಬಾ ಆಸ್ಪತ್ರೆ ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿತು. ಇದರ ಉದ್ಘಾಟನೆಯನ್ನು ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್ ಮಾಡಿದರು.
ಈ ಶಿಬಿರದಲ್ಲಿ ಎಲುಬು ಮತ್ತು ಕೀಲು ರೋಗ ತಜ್ಞರು, ಹೃದ್ರೋಗ ತಜ್ಞರು, ಹಿರಿಯ ವೈದಕೀಯ ತಜ್ಞರು, ಹಿರಿಯ ಪ್ರಸೂತಿ ಹಾಗೂ ಸ್ತೀರೋಗ ತಜ್ಜರು, ಚರ್ಮರೋಗ ತಜ್ಞರು ಮಧುಮೇಹ ತಜ್ಞರು, ಭಾಗವಹಿಸಿದ್ದು, ರಕ್ತದೊತ್ತಡ ಹಾಗೂ ಇ.ಸಿ.ಜಿ. ಪರೀಕ್ಷೆ ಕೂಡ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ನಿತೀಶ್ ಪ್ರಭು ಕೆಎಂಸಿ ಮಣಿಪಾಲ, ಕುಂದಾಪುರ ರೆಡ್ ಕ್ರಾಸ್ ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ಸದಸ್ಯರಾರ ಗಣೇಶ್ ಆಚಾರ್ಯ, ಎ.ಎಂ.ಶೆಟ್ಟಿ, ಸೀತಾರಾಮ ನಕತ್ತಾಯ, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಉಪಸ್ಥಿತರಿದ್ದರು. ಡಾ. ಸೋನಿ ಡಿ ಕೋಸ್ಟಾ ನಿರೂಪಿಸಿ ವಂದಿಸಿದರು.

ಮಹಿಳೆಯರು ಸ್ತ್ರೀ ಶಕ್ತಿ , ಸ್ವ ಸಹಾಯ ಸಂಘಗಳ ಮೂಲಕ ಸರಕಾರದ ಸೌಲಭ್ಯಗಳನ್ನು ಸದ್ಭಳಸಿಕೊಂಡು ಅರ್ಥಿಕ ಅಭಿವೃದ್ದಿ ಹೊಂದಬೇಕು :ಕೆ.ಆರ್.ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಸಂ.ಕ.ಸಮಾಚಾರ, ರಾಯಲ್ಪಾಡು 1 : ಮಹಿಳೆಯರು ಸ್ತ್ರೀ ಶಕ್ತಿ , ಸ್ವ ಸಹಾಯ ಸಂಘಗಳ ಮೂಲಕ ಸರಕಾರದ ಸೌಲಭ್ಯಗಳನ್ನು ಸದ್ಭಳಸಿಕೊಂಡು ಅರ್ಥಿಕ ಅಭಿವೃದ್ದಿ ಹೊಂದಬೇಕು ಎಂದು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಲಕ್ಷ್ಮೀಪುರ ಗ್ರಾ.ಪಂ. ಬಳಿ ಡಿಸಿಸಿ ಬ್ಯಾಂಕ್ ವತಿಯಿಂದ 4ಕೋಟಿ 10ಲಕ್ಷ ಸಾಲವನ್ನು 82 ಸ್ತ್ರೀ ಶಕ್ತಿ ಸಂಘಗಳಿಗೆ ಶನಿವಾರ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಬ್ಯಾಂಕ್‍ವತಿಯಿಂದ ಸಾಲವನ್ನು ಪಡೆದ ಹಣದಿಂದ ಕುಟುಂಬವನ್ನು ಅರ್ಥಿಕ ಸಭಲಾಗಲು ಬೇಕಾಗುವ ರೀತಿಯಲ್ಲಿ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಾರಂಭದ ಹಂತದಲ್ಲಿ ಡಿಸಿಸಿ ಬ್ಯಾಂಕ್‍ವತಿಯಿಂದ ಒಂದು ಸಂಘಕ್ಕೆ 3ಲಕ್ಷ ರೂ ಸಾಲವನ್ನು ವಿತರಣೆ ಮಾಡುತ್ತಿದ್ದವು. ಈಗ 5ಲಕ್ಷ ರೂ ಗಳನ್ನು ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಒಂದು ಸಂಘಕ್ಕೆ 10ಲಕ್ಷರೂ ಸಾಲವನ್ನು ನೀಡುವುಕ್ಕೆ ಬೇಕಾದ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿಂದಿನ ಕಾಲದಲ್ಲಿ ಸಾಲವನ್ನು ಪಡೆಯಲು ಸಾಲವನ್ನು ನೀಡುವವರ ಮನೆಯಂಗಳಕ್ಕೆ ಬಳಿ ಅನೇಕ ಬಾರಿ ಓಡಾಡಿದರೂ ಹೆಚ್ಚಿನ ಬಡ್ಡಿಯನ್ನು ನೀಡಿ ಸಾಲವನ್ನು ಪಡೆಯಲು ಸಾಲವನ್ನು ನೀಡುವವರ ಕೈಕಾಲು ಹಿಡಿಯಬೇಕು ಆದರೆ , ಆದರೆ ಈಗ ಡಿಸಿಸಿ ಬ್ಯಾಂಕಿನ ವತಿಯಿಂದ ದೊಡ್ಡದಾದ ಪೆಂಡಾಲ್‍ಹಾಕಿ ಗೌರವದೊಂದಿಗೆ ಕೋಟಿ ಕೋಟಿ ಹಣವನ್ನು ನೀಡುತ್ತಿರುವುದು ಶ್ಲಾಘನೀಯವೆಂದರು.
ಡಿಸಿಸಿ ಬ್ಯಾಂಕ್‍ಗೆ ಒತ್ತಡವನ್ನು ಹಾಕಿ ಇತರೆ ತಾಲೂಕಿಗಿಂತ ಹೆಚ್ಚು ಸಾಲವನ್ನು ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ಸಾಲವನ್ನು ನೀಡುತ್ತಿದ್ದು, ಸಾಲವನ್ನು ಪಡೆದ ಸ್ತ್ರೀ ಶಕ್ತಿ ಸಂಘದ ಸದಸ್ಯರು ಬ್ಯಾಂಕ್ ನಿಗದಿ ಸಮಯದೊಳಗೆ ಮರುಪಾವತಿ ಮಾಡಬೇಕು . ನೀವು ಮರುಪಾವತಿ ಮಾಡುವ ಹಣವನ್ನು ಬೇರೆ ಸಂಘಗಳಿಗೆ ಸಾಲವನ್ನು ನೀಡಲು ಆನುಕೂಲವಾಗುತ್ತದೆ ಆದ್ದರಿಂದ ಸಾಲವನ್ನು ನಿಗಧಿ ಸಮಯದಲ್ಲಿ ಮರುಪಾವತಿ ಮಾಡುವಂತೆ ಮನವಿ ಮಾಡಿದರು.


ಡಿಸಿಸಿ ಬ್ಯಾಂಕ್‍ವತಿಯಿಂದ ಬಡ ಕುಟುಂಬಗಳಿಗೆ ಹಾಗೂ ಬಡ ರೈತಾಪಿ ವರ್ಗಕ್ಕೆ ನೀಡುತ್ತಿರುವುದಕ್ಕೆ ಕೆಲವರಿಗೆ ಬಾಧೆಯಾಗಿದೆ ತೆಲುಗಿನ ನಾನ್ನುಡಿಯಂತೆ ಗುರ್ರಂ ವಚ್ಚಿ ಗುಗ್ಗಿಲ್ಲು ತಿಂಟೆ ಗಾಡಿದಿಕಿ ಕಡುಪು ನಪ್ಪಂಟ್ಟ ಎನ್ನುವಂತೆ ಇದೆ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ,ಕೋಮುಲ್ ಮಾಜಿ ಅಧ್ಯಕ್ಷ ಕೋಮಡಸಂದ್ರ ಶಾವಾರೆಡ್ಡಿ,ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜು, ಲಕ್ಷ್ಮೀಪುರ ವಿಎಸ್‍ಎಸ್ ಅಧ್ಯಕ್ಷ ಕೃಷ್ಣಾರೆಡ್ಡಿ,ಕಾರ್ಯದರ್ಶಿ ಶಂಕರರೆಡ್ಡಿ,ಗ್ರಾ.ಪಂ.ಅಧ್ಯಕ್ಷ ಚಾನ್‍ಬಾಷ, ಮುಖಂಡ ಟಿ.ವಿ.ನಾರಾಯಣಸ್ವಾಮಿ,ಪೇಪರ್ ವೆಂಕಟೇಶ್ ,ಜಾಮೀಲ್‍ಪಾಷ,ಮುನಯ್ಯ ಹಾಗು ಇತರರು ಇದ್ದರು.

ಕರ್ನಾಟಕ ಪ್ರಾಂತ ರೈತ ಸಂಘದಿಂದ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಪ್ರತಿಭಟಿಸಿ ರಸ್ತೆ ತಡೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಎಂಜಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.
ಕರ್ನಾಟಕ ಪ್ರಾಂತ ರೈತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೋಲಾರ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶುಕ್ರವಾರ ಮಂಡಿಸಲಾಗಿರುವ ಬಜೆಟ್‍ನಲ್ಲಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಜಿಲ್ಲೆಗೆ ಸಂಬಂಧಿಸಿದಂತೆ ಶಾಶ್ವತ ನೀರಾವರಿ ಯೋಜನೆಗೆ ಗಮನ ನೀಡಲಾಗಿಲ್ಲ. ಕೃಷಿಕರ ಹಿತ ಕಾಯಲು ಸಮಗ್ರ ನೀರಾವರಿ ಯೋಜನೆ ಜಾರಿ ಸಾಧ್ಯವಾಗಿಲ್ಲ. ಕೃಷ್ಣಾ ನದಿಯಿಂದ ಸಿಗಬೇಕಾಗಿರುವ 47 ಟಿಎಂಸಿ ನೀರಿನ ಪಾಲನ್ನು ಕೇಳಲಾಗಿತ್ತು. ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಬಜೆಟ್‍ನಲ್ಲಿ ಅದರ ಪ್ರಸ್ತಾಪವೇ ಇಲ್ಲ ಎಂದು ಹೇಳಿದರು.
ಮುಖಂಡರಾದ ಎಸ್.ಎಂ.ನಾಗರಾಜ್, ಆರ್.ವೆಂಕಟೇಶ್, ಜಿ.ಮಂಜುಳ, ಸುಮತಿ, ನರಾಯಣಪ್ಪ, ನಾಗೇಶ್ ಇದ್ದರು.

ಆಲ್ರಿನಾ ಡಿಸೋಜಾ ಮತ್ತು ಆ್ಯನ್ ಕಾರ್ಡೋಜಾ ಜನನುಡಿ ಡಾಟ್ ಕಾಮ್ 21-22 ರ ಮುದ್ದು ಏಸು ಸ್ಫರ್ಧೆಯ ವಿಜೇತರು.

JANANUDI.COM NETWORK


ಕುಂದಾಪುರ,ಮಾ.6: ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಪುಟ್ಟ ಮಕ್ಕಳಿಗೆ ಏರ್ಪಡಿಸಿದ 21 – 22 ನೇ ಸಾಲಿನ ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವು ಆಲ್ರಿನಾ ಡಿಸೋಜಾ, ಪಿಯುಸ್ ನಗರ ಮತ್ತು ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಆ್ಯನ್ ಕಾರ್ಡೋಜಾ, ಮೂಡುಬಿದ್ರೆ ಇವರು ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.


ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಜೇವಿನ್ ಮೆಂಡೊನ್ಸಾ, ಬಸ್ರೂರು, ದ್ವೀತಿಯ ಸ್ಥಾನ ಮತ್ತು ಅಲೈನಾ ಅಬ್ರಿಲ್ಲೆ ಫೆರ್ನಾಂಡಿಸ್ ಕುಂದಾಪುರ ತ್ರತೀಯ ಸ್ಥಾನ ಲಭಿಸಿ ವಿಜೇತರಾಗಿದ್ದಾರೆ.


ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಸಾನೀಯಾ ಡಿಮೆಲ್ಲೊ, ಕುಂದಾಪುರ ದ್ವೀತಿಯ ಸ್ಥಾನ ಮತ್ತು ಮಾಹಿಮಾ ವಿಯಾನ್ನಾ ಬರೆಟ್ಟೊ ತ್ರತೀಯ ಸ್ಥಾನ ಲಭಿಸಿ ವಿಜೇತರಾಗಿದ್ದಾರೆ.


ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕ್ಲೇರ್
ಬರೆಟ್ಟೊ, ಕುಂದಾಪುರ, ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು, ಸಾಮ್ಜುನ್ ಡಿಸಿಲ್ವಾ ಕುಂಟಾಲ್ ಪಾಡಿ, , ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದ್ದಾರೆ, ಹಾಗೇ ಸಿಯಾನ್ ಸೆಬ್ ಡೆಸಾ, ಪೆರಂಪಳ್ಳಿ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.


ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಕಾರೆನ್ ಡಿ’ಲಿಮಾ, ಬಜ್ಪೆ, ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ, ಇಥನ್ ಅಬ್ನೆರ್ ಡಿಸೋಜಾ, ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದ್ದಾರೆ. ಹಾಗೇ ಒಲೀನಾ ರೂತ್, ಸಜೀಪಾ ಮುನ್ನುರ್ ಬಂಟ್ವಾಳ, ಸ್ಕೈಲರ್ ಟಿಯರಾ ಕೊರೆಯಾ ಕುಂದಾಪುರ, ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.

.
ತೀರ್ಪುಗಾರರಾಗಿ ಧರ್ಮಗುರು ವಂ|ರೋಹನ್ ಡಿಆಲ್ಮೇಡಾ, ಸೈಂಟ್ ಜೋಸೆಫ್ ಇಂಡಿಯನ್ ಸ್ಕೂಲ್,
,ಪ್ರಾಂಶುಪಾಲರು,ಬೆಂಗಳೂರು, ಸಿಸ್ಟರ್ ತೆರೆಜಾ ಶಾಂತಿ, ಮುಖ್ಯೋಪಾಧ್ಯಾಯಿನಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಜೋಸೆಫ್ ಫೆರ್ನಾಂಡಿಸ್, ನಾಟಕ ನಿರ್ದೇಶಕರು, ಬೈಂದೂರು ಇವರು ಸಹಕರಿಸಿದರು.

ಬಹುಮಾನ ವಿತರಣೆಯ ವಿವರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು


ವಿಜೇತ ಮಕ್ಕಳ ವಿವರ ಮತ್ತು ಚಿತ್ರಗಳು ಈ ರೀತಿ ಇವೆ.

ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ
ಪ್ರಥಮ ಸ್ಥಾನ: ಆಲ್ರಿನಾ ಡಿಸೋಜಾ, ಪಿಯುಸ್ ನಗರ
ತಂದೆ/ತಾಯಿ : ಫೆಲಿಕ್ಸ್ / ಜೂಲಿಯಾನ ಡಿಸೋಜಾ
ದ್ವೀತಿಯ ಸ್ಥಾನ: ಜೇವಿನ್ ಮೆಂಡೊನ್ಸಾ, ಬಸ್ರೂರು
ತಂದೆ/ತಾಯಿ : ಅಂತೋನಿ ವಿನ್ಸಟನ್/ ಜೇನ್ ಡಿಸೋಜಾ

ತ್ರತೀಯ ಸ್ಥಾನ: ಅಲೈನಾ ಅಬ್ರಿಲ್ಲೆ ಫೆರ್ನಾಂಡಿಸ್ ಕುಂದಾಪುರ
ತಂದೆ/ತಾಯಿ : ಆವಿನ್ ಫ್ರಾನ್ಸಿಸ್ / ಲೀಮಾ ಫೆರ್ನಾಂಡಿಸ್
ಮೊದಲನೇ ಸಮಾಧಾನಕರ ಸ್ಥಾನ: ಕ್ಲೇರ್ ಬರೆಟ್ಟೊ, ಕುಂದಾಪುರ
ತಂದೆ/ತಾಯಿ : ಆಲ್ವಿನ್/ ಪ್ರಿಯಾಂಕಾ ಬರೆಟ್ಟೊ

ಎರಡನೇ ಸಮಾಧಾನಕರ ಸ್ಥಾನ
ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು
ತಂದೆ/ತಾಯಿ : ಲಾಯ್ಡ್/ಫ್ಲಾವೀಯಾ ಮೊಂತೇರೊ
ಮೂರನೇ ಸಮಾಧಾನಕರ ಸ್ಥಾನ
ಸಾಮ್ಜುನ್ ಡಿಸಿಲ್ವಾ, ಕುಂಟಲ್ಪಾಡಿ ಕಾರ್ಕಳ
ತಂದೆ/ತಾಯಿ ; ಶೈಲೆಶ್ / ಜೊಸ್ಮಿನ್ ಡಿಸಿಲ್ವಾ

ತೀರ್ಪುಗಾರರ ಮೆಚ್ಚುಗೆ ಗಳಿಸಿದವರು

ಸಿಯಾನ್ ಸೆಬ್ ಡೆಸಾ, ಪೆರಂಪಳ್ಳಿ
ತಂದೆ/ತಾಯಿ: ಶಹಾಶಿನ್ ಸಂತೋಷ್ /ಪರ್ಲಿನ್ ಡೆಸಾ

ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗ

ಪ್ರಥಮ ಸ್ಥಾನ: ಆ್ಯನ್ ಕಾರ್ಡೋಜಾ, ಮೂಡುಬಿದ್ರೆ,
ತಂದೆ/ತಾಯಿ : ಅವಿನಾಶ್/ವಿಯೋಲಾ ಕಾರ್ಡೊಜಾ
ದ್ವೀತಿಯ ಸ್ಥಾನ : ಸಾನೀಯಾ ಡಿಮೆಲ್ಲೊ, ಕುಂದಾಪುರ
ತಂದೆ/ತಾಯಿ ; ಅನಿಲ್/ಸೋನಿಯಾ ಡಿಮೆಲ್ಲೊ
ತ್ರತೀಯ ಸ್ಥಾನ : ಮಾಹಿಮಾ ವಿಯಾನ್ನಾ ಬರೆಟ್ಟೊ, ಕುಂದಾಪುರ
ತಂದೆ/ತಾಯಿ : ವಿನ್ಸೆಂಟ್ / ವನೀತಾ ಬರೆಟ್ಟೊ

ಮೊದಲನೇ ಸಮಾಧಾನಕರ ಸ್ಥಾನ
ಕಾರೆನ್ ಡಿಲೀಮಾ, ಸುಂಕದಕಟ್ಟೆ, ಬಜ್ಪೆ.
ತಂದೆ/ತಾಯಿ : ನೆಲ್ಸನ್ / ವಿಯೋಲಾ ಡಿಲೀಮಾ

ಎರಡನೇ ಸಮಾಧಾನಕರ ಸ್ಥಾನ
ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ.
ತಂದೆ/ತಾಯಿ : ಸ್ಟ್ಯಾನಿ / ಮರಿಯಾ ಡಿಆಲ್ಮೇಡಾ
ಮೂರನೇ ಸಮಾಧಾನಕರ ಸ್ಥಾನ
ಇಥನ್ ಅಬ್ನೆರ್ ಡಿಸೋಜಾ, ದೇರಲಕಟ್ಟೆ.
ತಂದೆ/ತಾಯಿ : ಸಂತೋಷ್ ಆಂಜೇಲಿನ್ ಸುಪ್ರಿಯಾ ಡಿಸೋಜಾ

ತೀರ್ಪುದಾರರು ಮೆಚ್ಚುಗೆ ಪಡೆದವರು.


ಒಲೀನಾ ರೂತ್, ಸಜೀಪಾ ಮನ್ನೂರ್, ಬಂಟ್ವಾಳ್
ತಂದೆ/ತಾಯಿ : ರೋಶನ್/ ವಿಯಾನ್ ಮೊರಾಸ್

ಸ್ಕೈಲರ್ ಟಿಯರಾ ಕೊರೆಯಾ, ಕುಂದಾಪುರ

SPONSORS OF THE 2021-22 MUDDU YESU CONTEST

ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ದಿನಾಚರಣೆ

JANANUDI.COM NETWORK

ಮೂಡುಬೆಳ್ಳೆ: ವಿದ್ಯಾರ್ಥಿಗಳಲ್ಲಿ ಹಲವಾರು ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಶಾಲೆಯಲ್ಲಿ ಪ್ರತಿಭೆಗಳ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಯಾವ ವಿದ್ಯಾರ್ಥಿಯೂ ಅವಕಾಶಗಳನ್ನು ಬಳಸಿಕೊಳ್ಳುತ್ತಾನೊ ಅವನು ಜಯಶಾಲಿಯಾಗುತ್ತಾನೆ.ಆದ್ದರಿಂದ ಪ್ರತಿಭೆಯ ಜೊತೆಗೆ ಪ್ರಯತ್ನವೂ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ” ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜರವರು ಹೇಳಿದರು .ಅವರು ಕಾಲೇಜಿನಲ್ಲಿ ನಡೆದ 2019 -20 ಮತ್ತು 2020 -21 ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ವಾರಂಟ್ ಅಂಡರ್ ಆಫೀಸರ್ ಶ್ರೀ ನಾಗೇಶ್ ಲಕ್ಷ್ಮಣ್ ವಾಗ್ಳೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಫರ್ನಾಂಡಿಸ್ ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಲಿಯಾಸ್ ಡಿಸೋಜಾ ,ವಿದ್ಯಾರ್ಥಿ ನಾಯಕ ದಿಲೀಪ್ ಕುಮಾರ್ ವೆದಿಕೆಯಲ್ಲಿ ಉಪಸ್ತಿತರಿದ್ದರು.

ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದಾ ಎಡ್ವರ್ಡ್ ಲಾರ್ಸನ್ ಡಿಸೋಜ ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸುನೀತಾ ಕಾಮತ್ ವಂದಿಸಿದರು. ಶ್ರಿ ಜೋನ್ ಕ್ಯಾಸ್ತಲೀನೊ, ಶ್ರಿ ಸ್ಟ್ಯಾನಿ ಮಿನೆಜಸ್, ಶ್ರೀ ವಲೇರಿಯನ್ ಕ್ರಾಸ್ತಾ, ಶ್ರಿಮತಿ ಜೆಸಿಂತಾ ಲೋಬೊ,ಶ್ರಿ ದಿಲೀಪ್ ಕುಮಾರ್, ಮತ್ತು ಶ್ರೀ ಜೋಸೆಪ್ ಡಿಸೋಜ ವಿಜೇತರ ಪಟ್ಟಿಗಳನ್ನು ವಾಚಿಸಿದರು. ಶ್ರೀ ಸುಧೀರ್ ನಾಯಕ್ ರವರು ಸನ್ಮಾನಿತರ ಪರಿಚಯ ಮಾಡಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ರವಿಂದ್ರರವರನ್ನು ಅಭಿನಂದಿಸಲಾಯಿತು. ಉಪನ್ಯಾಸಕಿ ಶೃತಿ ಡಿಸೋಜ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು, ಸಿಬ್ಬಂದಿಗಳು, ದಾನಿಗಳು, ಹೆತ್ತವರು, ಹಳೆ ವಿದ್ಯಾರ್ಥಿಗಳು ಮತ್ತು ಊರಿನ ವಿಧ್ಯಾಭಿಮಾನಿಗಳು ಹಾಜರಿದ್ದರು.

ಆರ್ಥಿಕ ಅಸಮಾನತೆ ಹೋಗಲಾಡಿಸುವ ಸಂಕಲ್ಪ-ರೂಪಕಲಾ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಅರ್ಹ ಬಡವರನ್ನು ಹುಡುಕಿ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಿ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಮೂಲಕ ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೋಗಲಾಡುಸುವ ಸಂಕಲ್ಪ ನನ್ನದಾಗಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಪಾರಂಡಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ಮಹಿಳೆಯರು,ರೈತರಿಗೆ 70 ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಾಲ ಉಳ್ಳವರಿಗೆ ಸಿಕ್ಕರೆ ಪ್ರಯೋಜನವಿಲ್ಲ, ಅರ್ಹ ಬಡ ಫಲಾನುಭವಿಗಳಿಗೆ ಸಾಲ ಸಿಕ್ಕರೆ ಅವರು ಆರ್ಥಿಕವಾಗಿ ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುತ್ತಾರೆ, ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಬಡರೈತರು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವ ಸದುದ್ದೇಶ ಹೊಂದಿದೆ, ಕೆಜಿಎಫ್ ತಾಲ್ಲೂಕಿನ ಎಲ್ಲಾ ಬಡ ಕುಟುಂಬಗಳು ಇದರ ಪ್ರಯೋಜನ ಪಡೆಯಬೇಕು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಮತ್ತಷ್ಟು ಮಂದಿಗೆ ಸಾಲ ಸಿಗುವಂತೆ ಮಾಡಬೇಕು ಎಂದರು.
ಕೆಜಿಎಫ್ ತಾಲ್ಲೂಕು ತಮಿಳುನಾಡು ಗಡಿಗೆ ಹೊಂದಿಕೊಂಡಿದೆ, ಇಲ್ಲಿ ಮೀಟರ್ ಬಡ್ಡಿ ದಂಧೆ ಹಿಂದಿನಿಂದಲೂ ಇತ್ತು, ಇದನ್ನು ಕೊನೆಗಾಣಿಸಿ, ಡಿಸಿಸಿ ಬ್ಯಾಂಕಿನಿಂದ ಬಡ್ಡಿರಹಿತ ಸಾಲ ಒದಗಿಸಿ ತಾಯಂದಿರ ಬದುಕಿಗೆ ದಾರಿ ತೋರುವುದೇ ನನ್ನ ಧ್ಯೇಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು ಮಾತನಾಡಿ, ಕೆಜಿಎಫ್ ತಾಲ್ಲೂಕಿನ ರೂಪಕಲಾ ಅವರು ಶಾಸಕರಾಗಿರುವುದು ಇಲ್ಲಿನ ಜನರ ಅದೃಷ್ಟವಾಗಿದೆ, ಬಡ ಜನತೆಗೆ ಹತ್ತಿರವಾಗಿರುವ ಅವರು, ಜನರ ಜತೆ ಬೆರೆಯುವ ಮೂಲಕ ಅವರಲ್ಲಿ ಒಬ್ಬರಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ಸರಳ ವ್ಯಕ್ತಿತ್ವದಿಂದ ಬಡ ಹೆಣ್ಣು ಮಕ್ಕಳಿಗೆ ಹತ್ತಿರವಾಗಿರುವ ಶಾಸಕರು, ಕಷ್ಟದಲ್ಲಿರುವ ಹೆಣ್ಣುಮಕ್ಕಳನ್ನು ಹುಡುಕಿ ಅರ್ಹರಿಗೆ ಸಾಲ ಒದಗಿಸುತ್ತಿದ್ದಾರೆ, ಇವರ ಈ ಕಾರ್ಯ ಇತರರಿಗೆ ಆದರ್ಶವಾಗಿದೆ, ಡಿಸಿಸಿ ಬ್ಯಾಂಕ್ ಮೂಲಕ ಅವರು ಕೆಜಿಎಫ್ ಕ್ಷೇತ್ರದಲ್ಲಿ ರಾಜಕೀಯವಾಗಿ ಮತ್ತಷ್ಟು ಭದ್ರಗೊಳ್ಳಲಿ ಎಂದು ಆಶಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷತೆ ವಹಿಸಿದ್ದು, ಸೊಸೈಟಿ ದಿವಾಳಿಯಾಗಿ ಸತ್ತುಹೋಗಿತ್ತು, ಆಗ ಅನೇಕ ಬಡವರು,ರೈತರು ಸಾಲ ಸಿಗದೇ ವಂಚಿತರಾದರು. ಹತ್ತು ವರ್ಷಗಳ ಹಿಂದಿನ ಈ ಸತ್ಯವನ್ನು ಸದಾ ಸ್ಮರಿಸಿಕೊಳ್ಳಿ, ಮತ್ತೆ ಸೊಸೈಟಿ ನಷ್ಟಕ್ಕೆ ಹೋಗಲು ಬಿಡದೇ ಬಡವರ ದೇವಾಲಯವಾಗಿ ಮುನ್ನಡೆಸಿ ಎಂದು ಕಿವಿಮಾತು ಹೇಳಿದರು.
ಸೊಸೈಟಿಗಳು ಪಡಿತರ ವಿತರಣೆಗೆ ಸೀಮಿತವಾಗಿತ್ತು, ಈಗ ಕೋಟಿಗಟ್ಟಲೇ ಸಾಲ ವಿತರಿಸುವ ಮೂಲಕ ವರ್ಷವಿಡೀ ರೈತರು,ಮಹಿಳೆಯರು ಸೊಸೈಟಿಗಳತ್ತ ಬರುವಂತಹ ವಾತಾವರಣ ಸೃಷ್ಟಿಯಾಗಿದೆ, ಬಂದವರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಾಲ ನೀಡುವುದು ಮಾತ್ರವಲ್ಲ ಅವರ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಸೊಸೈಟಿಯಲ್ಲಿ ಉಳಿತಾಯ ಮಾಡಲು ನಂಬಿಕೆ ಮೂಡಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ, ವಕೀಲರಾದ ಪದ್ಮನಾಭರೆಡ್ಡಿ, ಎಂ.ಬಿ.ಎ.ಕೃಷ್ಣ, ತೇನ್‍ಮೌಳಿ, ಎನ್‍ಟಿಆರ್, ಸುರೇಂದ್ರಗೌಡ ಮತ್ತಿತರರಿದ್ದರು.

ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷ ಮಾಡಿ ತಿರುಪತಿ ನಾಮ: ರೈತ ಸಂಘದಿಂದ ಮುಖ್ಯ ಮಂತ್ರಿ ಹಾಗೂ ಜನ ಪ್ರತಿನಿಧಿಗಳ ಪ್ರಕೃತಿ ದಹನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮಾ-5, ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷ ಮಾಡಿ ತಿರುಪತಿ ನಾಮ ಹಾಕಿರುವ ಸರ್ಕಾರದ ವಿರುದ್ದ ರೈತ ಸಂಘದಿಂದ ಗಾಂಧಿ ವೃತ್ತದಲ್ಲಿ ಮುಖ್ಯ ಮಂತ್ರಿ ಹಾಗೂ ಜನ ಪ್ರತಿನಿಧಿಗಳ ಪ್ರಕೃತಿ ದಹನ ಮಾಡುವ ಮುಖಾಂತರ ಆಕ್ರೋಷ ವ್ಯಕ್ತಪಡಿಸಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ನೀರಾವರಿ ವಿಷಯ ಆಧಾರಿತ ಕೈಗಾರಿಕೆಗಳ ಮಾವು ಸಂಸ್ಕರಣ ಘಟಕಗಳು ರಸ್ತೆ, ಸರ್ಕಾರಿ ಶಾಲೆ, ಕೆರೆ, ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಾರೆಂಬ ಭರವಸೆ ಹುಸಿಯಾಗಿದೆ. ಒಟ್ಟಾರೆಯಾಗಿ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ಬಜೆಟ್‍ನಂತೆ ಈ ಬಜೆಟ್‍ನಲ್ಲಿ ಸಂಪೂರ್ಣವಾಗಿ ಕರ್ನಾಟಕ ಭೂಪಟದಿಂದ ಕೈಬಿಟ್ಟಿರುವುದಕ್ಕೆ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಬಜೆಟ್ ಪೂರ್ವಭಾವಿ ಸಭೆಗೆ ಮುಂಚಿತವಾಗಿ ಉಸ್ತುವಾರಿ ಸಚಿವರು ಸೇರಿದಂತೆ 6 ಶಾಸಕರು ಸಂಸದರು, ವಿಧಾನ ಪರಿಷತ್ ಸದಸ್ಯರು ಕೋಲಾರ ಜಿಲ್ಲೆಯ ಕುಂದು ಕೊರತೆ ಹಾಗೂ ಅನುದಾನಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ರಾಜಕೀಯ ದ್ವೇಶದಿಂದ ಒಬ್ಬರ ಮೇಲೆ ಮತ್ತೊಬ್ಬರ ಆರೋಪ ಮಾಡಿಕೊಂಡು ಕೋಲಾರ ಜಿಲ್ಲೆಯನ್ನು ಬಜೆಟ್‍ನಲ್ಲಿ ಶೂನ್ಯ ಅನುದಾನ ಮಾಡುವ ಮುಖಾಂತರ ಉತ್ತರ ಕುಮಾರರ ಪೌರುಷ್ಯ ಜನ ಪ್ರತಿನಿಧಿಗಳು ತೋರಿಸುತ್ತಿದ್ದಾರೆ ಎಂದು ಜನ ಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಬಜೆಟ್‍ನಲ್ಲಿ ವಾಪಸ್ ಪಡೆಯುವ ಜೊತೆಗೆ ಮಾರುಕಟ್ಟೆಯ ಜಾಗದ ಸಮಸ್ಯೆ ಗಡಿಭಾಗದ ಕಾಡಾನೆಗಳ ಹಾವಳಿಗೆ ಆನೆ ಕಾರಿಡಾರ್ ವೈದ್ಯಕೀಯ ಕಾಲೇಜು, ಮಹಿಳೆಯರ ಮೇಲೆ ದೌರ್ಜನ್ಯ ತಡೆಗೆ ಕಾನೂನು ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ರಕ್ಷಣೆಗೆ ಸರ್ಕಾರ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮತ್ತು ನಿರೀಕ್ಷೆ ಸಂಪೂರ್ಣವಾಗಿ ನಿರ್ಲಕ್ಷೆ ಹಾಗೂ ನಿರಾಸೆ ಮಾಡಿದ್ದು, ಒಟ್ಟಾರೆಯಾಗಿ ಕೋಲಾರ ಜಿಲ್ಲಾ ರೈತ, ದಲಿತ, ಕೂಲಿಕಾರ್ಮಿಕ, ವಿರೋಧಿ ಬಜೆಟ್ ಮಂಡನೆ ಮಾಡಿರುವುದಕ್ಕೆ ಅಸಮದಾನ ವ್ಯಕ್ತಪಡಿಸಿದರು.
ಪ್ರತಿ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷೆ ಮಾಡುವ ಮೊದಲು ಜಿಲ್ಲೆಯನ್ನು ಆಂಧ್ರ ರಾಜ್ಯಕ್ಕೆ ಸೇರಿಸಿದರೆ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನದರೂ ಪಡೆಯಬಹುದು ಜಿಲ್ಲೆಯ ಜನರ ಪಾಲಿಗೆ ಇದ್ದು, ಇಲ್ಲದಂತಾಗಿದೆ. 6 ಜನ ಶಾಸಕರು, ಸಂಸದರು, ವಿಧಾನಸಭಾ ಸದಸ್ಯರು, ರಾಜಿನಾಮೆ ಕೊಟ್ಟು ಮನೆಗಳಿಗೆ ಹೋಗಲಿ ಎಂದು ಇಲ್ಲವಾದರೆ ಸಾರ್ವಜನಿಕ ಸಮಾರಂಭಗಳಲ್ಲಿ ಕಪ್ಪು ಮಸಿ ಬಳಿಯುವ ಎಚ್ಚರಿಕೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ಗೋವಿಂದಪ್ಪ, ವೆಂಕಟೇಶಪ್ಪ, ಮರಗಲ್ ಮುನಿಯಪ್ಪ, ಮಾಸ್ತಿ ಹರೀಶ್, ಈಕಂಬಳ್ಳಿ ಮಂಜುನಾಥ್, ಚಂದ್ರಪ್ಪ, ಹೆಬ್ಬಣಿ ಆನಂದರೆಡ್ಡಿ, ಸಂದೀಪ್‍ಗೌಡ, ವೆಂಕಟರಾಮೇಗೌಡ, ಕಿರಣ್, ವೇಣುಗೋಪಾಲ್, ಸಂದೀಪ್, ಸುರೇಶ್‍ಬಾಬು, ಯಲ್ಲಪ್ಪ, ಮುದುವಾಡಿ ಚಂದ್ರಪ್ಪ, ರಾದಮ್ಮ, ವೆಂಕಟಮ್ಮ, ಸುಬ್ಬಕ್ಕ ಇನ್ನು ಮುಂತಾದವರು.

ವಿದೇಶಿಯರನ್ನು ಸ್ಥಳಾಂತರ ಮಾಡಲು ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

JANANUDI.COM NETWORK

ಉಕ್ರೇನ್‌ ಮೇಲೆ ದಾಳಿ ಆರಂಭಿಸಿದ 10 ದಿನಗಳ ನಂತರ ಉಕ್ರೇನ್ ನಗರಗಳಾದ ಮರಿಯುಪೋಲ್ ಮತ್ತು ವೊಲ್ನೋವಾಖಾ ಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ಎಂದು ತಿಳಿದು ಬಂದಿದೆ./ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 11.30 ರಿಂದ ರಷ್ಯಾ ದಾಳಿಯನ್ನು ನಿಲ್ಲಿಸಿದೆ. ಆದರೆ ಈ ಕದನ ವಿರಾಮ ಕೆಲ ಗಂಟೆಗಳು ಜಾರಿಯಲ್ಲಿ ಇರುವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ, ಸಂಜೆ ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಉಕ್ರೇನ್‌ನಲ್ಲಿರುವ ವಿದೇಶಿಯರನ್ನು ಸ್ಥಳಾಂತರ ಮಾಡಲು ಅನುಕೂಲವಾಗುವಂತೆ ಈ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾ ಹೇಳಿದೆ./ ಬೆಲರಸ್ ನಲ್ಲಿ ಉಕ್ರೇನ್ ನಿಯೋಗದೊಂದಿಗೆ ರಷ್ಯಾ ನಡೆಸಿದ ಮಾತುಕತೆ ವೇಳೆ ವಿದೇಶಿ ಪ್ರಜೆಗಳು ದೇಶದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ಚರ್ಚೆಯಾಗಿತ್ತು ಎಂದು ರಷ್ಯಾ ಹೇಳಿಕೊಂಡಿದೆ.