HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ ನಿಧನ

ವರದಿ : ಮಝರ್, ಕುಂದಾಪುರ


ಸ್ಥಳೀಯ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ (53) ಅವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 14 ರ ಸೋಮವಾರ ನಿಧನರಾದರು.
ಪ್ರಮುಖ ಬಸ್ ಏಜೆಂಟರಾಗಿ ಗುರುತಿಸಲ್ಪಟ್ಟಿದ್ದ ಇವರು ಬಿಜೆಪಿ ಪಕ್ಷದ ಧುರೀಣರಾಗಿದ್ದಲ್ಲದೇ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತತು ಪತ್ನಿ, ಎರಡು ಹೆಣ್ಣುಮಕ್ಕಳ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ರೈತರು ಸರ್ಕಾರ ಹಾಗೂ ಕೋಚಿಮುಲ್ ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ:ಕೆ.ಆರ್.ರಮೇಶ್ ಕುಮಾರ್

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರು ಸರ್ಕಾರ ಹಾಗೂ ಕೋಚಿಮುಲ್ ನೀಡುವ ಸೌ¯ಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು. ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಬೆಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಕೋಚಿಮುಲ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಹಾಲಿನ ಕ್ಯಾನು ವಿತರಣೆ, ಕರುಗಳ ಪ್ರದರ್ಶನ ಹಾಗೂ ಹಸಿರು ಮೇವು ಕ್ಷೇತ್ರೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ದಿನವೊಂದಕ್ಕೆ ೫೦ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದರಿಗೆ ತಿಂಗಳಿಗೆ ರೂ.೪.೮೦ ಕೋಟಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೃಷಿಕ ಕುಟುಂಬಗಳ ಆರ್ಥಿಕಾಭಿವೃದ್ಧಿಯಲ್ಲಿ ಹಾಲು ಮುಖ್ಯ ಪಾತ್ರವಹಿಸಿದೆ. ಹಸಿರು ಹುಲ್ಲಿನ ಸಮಸ್ಯೆ ನಿವಾರಣೆಗೆ ತಾಲ್ಲೂಕಿನ ಕಾಡುಗಳಲ್ಲಿ ಕ್ಷೀರೋತ್ಪಾದಕರು ಹುಲ್ಲು ಬೆಳೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಶಿಬಿರ ಕಚೇರಿ ವ್ಯವಸ್ಥಾಪಕ ಆರ್.ಜಿ.ನರಸಿಂಹಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ನಿರ್ದೇಶಕ ಎಸ್.ಜಿ.ಜಗದೀಶ್ ಎನ್.ಜಿ.ಬೇಟಪ್ಪ, ಎಸ್.ವಿ.ಸುಧಾಕರ್, ಮುನಿವೆಂಕಟಪ್ಪ, ಅಯ್ಯಪ್ಪ, ಕೆ.ಕೆ.ಮಂಜು, ಶ್ರೀನಿವಶಗೌಡ ಜಿ.ಎಂ.ಶ್ರೀರಾಮರೆಡ್ಡಿ, ಹರೀಶ್ ನಾರಾಯಣಸ್ವಾಮಿ ಇದ್ದರು.

ಕ್ರೀಡೆಯಿಂದ ಮಾನಸಿಕ , ದೈಹಿಕ ಸದೃಢತೆ – ಗುಂಜೂರು ಆರ್ . ಶ್ರೀನಿವಾಸರೆಡ್ಡಿ

JANANUDI.COM NETWORK

ಶ್ರೀನಿವಾಸಪುರ : ಯುವ ಪೀಳಿಗೆ ಕ್ರೀಡೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಅವಕಾಶದ ಜೊತೆಗೆ ದೈಹಿಕವಾಗಿ , ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಸಮಾಜ ಸೇವಕ ಗುಂಜೂರು ಆರ್ . ಶ್ರೀನಿವಾಸರೆಡ್ಡಿ ತಿಳಿಸಿದರು .
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮುದುವಾಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ‘ ಮುದುವಾಡಿ – ಹೊಸಹಳ್ಳಿ ಪ್ರೀಮಿಯರ್ ಲೀಗ್ ‘ ಕ್ರಿಕೆಟ್ ಪಂದ್ಯಾವಳಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕ್ರೀಡೆಗಳು ಯುವಕರಲ್ಲಿ ಆತ್ಮವಿಶ್ವಾಸ , ಉಲ್ಲಾಸ ಹೆಚ್ಚಿಸುತ್ತವೆ , ಸೋಲುಗೆಲುವು ಸಹಜ , ಕ್ರೀಡಾಪಟುಗಳು ತಮಗೆ ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಪ್ರತಿಭೆ ಹೊರಹಾಕಬೇಕು . ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕರಾಗಿ ಸಧೃಡರಾಗಬೇಕು .
ಕ್ರೀಡೆಗಳು ಮನುಷ್ಯನ ಮಾನಸಿಕ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸ್ಥಿರವಾಗಿರಿಸುತ್ತದೆ . ಅಲ್ಲದೇ ದಿನಪೂರ್ತಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ . ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿರುತ್ತದೆ . ಕ್ರೀಡೆಯು ಸಹ ಒಂದು ಕಲೆಯಂತೆಯೇ ಕಾಣಬಹುದು . ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಯಲ್ಲಿ ಜ್ಞಾನ ವಿಕಸನವು ಆಗುತ್ತದೆ .
ಭಾರತದಲ್ಲಿ ಕ್ರೀಡೆಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಹೆಚ್ಚು ಗೌರವವಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕ್ರೀಡೆಗೆ ಹೆಚ್ಚು ಪ್ರಾಶಸ್ತ್ರವಿದ್ದು , ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು . ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಹಾಗೂ ಬೌದ್ಧಿಕ ಮಟ್ಟ ವೃದ್ಧಿ ಆಗುತ್ತದೆ . ಹೀಗಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು .
ಯುವ ಜನತೆ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಬೇಕು . ಮುಖ್ಯವಾಗಿ ದುಶ್ಚಟಗಳಿಗೆ ಸಾಕಷ್ಟು ದೂರವಿರಬೇಕು . ಅಂದಾಗಲೇ ಗಟ್ಟಿಯಾಗಿ ಇರಲು ಸಾಧ್ಯ ಗ್ರಾಮೀಣ ಪ್ರದೇಶಗಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ . ದೇಶಿಯ ಕ್ರೀಡೆಗಳು ಉಳಿಸಿ ಬೆಳೆಸಿ , ಮುನ್ನಡೆಸಿಕೊಂಡು ಹೋಗಬೇಕು .
ಇಂದಿನ ಯುವ ಪೀಳಿಗೆ ಮೊಬೈಲ್ , ಕಂಪ್ಯೂಟರ್‌ಗಳಂತಹ ಗೇಮ್‌ಗಳಿಗೆ ಮಾರು ಹೋಗದೆ ಗ್ರಾಮೀಣ ಪ್ರದೇಶಗಳಲ್ಲಿ ಪರಂಪರೆಯಾಗಿ ಬಂದಿರುವ ನಾನಾ ಬಗೆಯ ಕ್ರೀಡೆಗಳನ್ನು ಆಯೋಜಿಸಬೇಕು . ಇಂತಹ ಕ್ರೀಡೆಗಳನ್ನು ಮುಂದುವರೆಸಿಕೊಂಡು ಹೋಗಬೇಕು.
ಈ ಹಿಂದೆ ಹಳ್ಳಿಗಳಲ್ಲಿ ಗ್ರಾಮೀಣ ಕೀಡೆಗಳನ್ನು ಆಯೋಜಿಸಲಾಗುತ್ತಿತ್ತು . ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಒತ್ತಡದಿಂದ ಜೀವನ ನಡೆಸುತ್ತಿರುವ ಪರಿಣಾಮ ಕ್ರೀಡೆಗಳನ್ನು ಮರೆಯುತ್ತಿದ್ದಾರೆ . ನಮ್ಮ ದೇಸಿ ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಗತ್ಯವಿದೆ . ಅಂದಾಗಲೇ ಇದು ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ . ಇದನ್ನು ಅರ್ಥ ಮಾಡಿಕೊಳ್ಳ ಬೇಕಿದೆ . ದೇಶಿಯ ಆಟಗಳು ಅವಸಾನದ ಅಂಚಿನಲ್ಲಿವೆ .
ಈ ಭಾಗದ ಮುಖಂಡರು ಮನರಂಜನೆ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ . ಉದಾಹರಣೆಗೆ ದೇಶೀಯ ಆಟಗಳಿಂದ ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರವಿಡಲು ಸಹಕಾರಿಯಾಗುತ್ತದೆ
ಪೋಷಕರು ತಮ್ಮ ಮಕ್ಕಳಿಗೆ ದೇಶಿಯ ಆಟಗಳ ಬಗ್ಗೆ ಆಗಾಗ ತಿಳಿಸಿಕೊಡುವ ಕೆಲಸ ಮಾಡುವಂತೆ ಆಗಬೇಕು . ದೇಶೀಯ ಅನೇಕ ಗ್ರಾಮೀಣ ಆಟಗಳ ಹೆಸರುಗಳನ್ನು ಮರೆಯುತ್ತಿದ್ದೇವೆ . ಮೊದಲೆಲ್ಲ ದೇಶಿಯ ಆಟಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದರು .
ಈ ಸಂದರ್ಭದಲ್ಲಿ ಗುಂಜೂರು ಆರ್ . ಶ್ರೀನಿವಾಸರೆಡ್ಡಿ ಬಣದ ಮುಖಂಡರು , ಕ್ರೀಡಾಪಡುಗಳು , ಮುದುವಾಡಿ – ಹೊಸಹಳ್ಳಿ ಗ್ರಾಮಸ್ಥರು ಹಾಜರಿದ್ದರು
.

ಕುಂದಾಪುರ ರೋಜರಿ ಚರ್ಚ್ ಸ್ತ್ರೀ ಸಂಘಟನೇಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

jANANUDI.COM NETWORK


ಕುಂದಾಪುರ,ಮಾ.13: ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ 13 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಫಾ| ವಿಜಯ್ ಮಾತನಾಡಿ “ಸಮಾಜದಲ್ಲಿ ಮಹಿಳೆ ಅದ್ವೀತಿಯ ಪಾತ್ರವನ್ನು ವಹಿಸಿದ್ದಾಳೆ, ತಾಯಿಯಾಗಿ,ಮನೆಕೆಲಸ,ಉದ್ಯೋಗ,ಹೋರಾಟ, ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆ ತನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಾಳೆ, ಹೇಗೆ ಎಲ್ಲ ರಂಗಗಳಲ್ಲಿ ಮಹಿಳೆಯರು ಮುಂದು’ ಎಂದು ಸಂದೇಶ ನೀಡಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಂಗೀತ “ಮಹಿಳೆಯ ಸಾಂಘೀಕ ಹೋರಾಟದ ಬಗ್ಗೆ, ಮಹಿಳಾ ದಿನಾಚರಣೆಯ ಹೇಗೆ ಆರಂಭವಗುವುದರ ಬಗ್ಗೆ ತಿಳುವಳಿಕೆ ನೀಡಿ, ಮಹಿಳೆ, ಪ್ರಧಾನ ಮಂತ್ರಿ, ರಾಜ್ಯಪಾಲೆ ಮಂತ್ರಿಗಳು, ಪೈಲೆಟ್‍ಗಳು, ಗಗೋಲಯಾನಿಗಳು, ವಿಜ್ನಾನಿಗಳೂ ಕೂಡ ಆಗಿದ್ದಾರೆ ಹೀಗೆ ಮಹಿಳೆ ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ’ ಎಂದು ತಿಳಿಸಿದರು.
ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಚರ್ಚ್ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಶುಭ ಕೋರಿದರು. ನ್ರತ್ಯ ಮತ್ತು ಖ್ಯಾತ ಲೇಖಕ ಬರ್ನಾಡ್ ಡಿಕೋಸ್ತಾ ರಚಿಸಿದ ಕೊವೀಡ್ ಕಾಯಿಲೆ ಸಂಬಂಧ ಬರೆದ ಕಿರು ನಾಟಕವನ್ನು ಚರ್ಚ್ ಸ್ತ್ರೀ ಸಂಘದವರು ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು, ಹಾಗೇ ಸ್ತ್ರೀಯರಿಂದ ನ್ರತ್ಯ ಕಿರು ಪ್ರಹಸನಗಳು ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಸ್ತ್ರೀ ಸಂಘಟನೇಯ ಸಚೀತಕಿ ಭಗಿನಿ ಆಶಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೇಯ ಅಧ್ಯಕ್ಷೆ ವಿನಯಾ ಡಿಕೋಸ್ತಾ ಸ್ವಾಗತಿಸಿದರು, ಶಾಂತಿ ಬಾರೆಟ್ಟೊ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು.

ಕೋವಿಡ್ -ಭಾರತದಲ್ಲಿ ವಾಸ್ತವಕ್ಕಿಂತ ಎಂಟು ಪಟ್ಟು ಜನ ಸಾವು – ವಿಶ್ವಾದ್ಯಂತ 1.82 ಕೋಟಿ ಜನರ ಸಾವು – ಲ್ಯಾನ್ಸೆಟ್ ವರದಿ

ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ -ಶೇಕಡ 22ರಷ್ಟು ಸಾವುಗಳು ಭಾರತದಲ್ಲಿ

ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದ್ದು ಇದು ಗಮನಾರ್ಹ ಆತಂಕದ ವಿಷಯವಾಗಿದೆ.
ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎಂವ ವರದಿ ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖವಾಗಿದ್ದು, ಭಾರತ ದೇಶ ಕೇವಲ ಬಡಾಯಿ ಕೊಚ್ಚಿಕೊಂಡಿತ್ತು ಎಂಬ ವಾಸ್ತವ ಸಂಗತಿ ಲ್ಯಾನ್ಸೆಟ್ ವರದಿ ಬಹಿರಂಗವಾಗಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುವರಿ ಕೋವಿಡ್ ಸಾವು ಸಂಭವಿಸಿದ ಬಗ್ಗೆ ಇದು ಮೊಟ್ಟಮೊದಲ ತಜ್ಞರ ಅಂದಾಜು ಆಗಿದ್ದು, 2021ರ ಡಿಸೆಂಬರ್ ಕೊನೆವರೆಗೆ ವಿಶ್ವಾದ್ಯಂತ 1.82 ಕೋಟಿ ಮಂದಿ ಈ ಸಾಂಕ್ರಾಮಿಕ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಅಧಿಕೃತ ದಾಖಲೆಯಲ್ಲಿ ಬರೆï 59 ಲಕ್ಷ ಮಂದಿ ಇದ್ದು ಅದಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎನ್ನಲಾಗುತ್ತಿದೆ. ಬಿಲ್ ಎಂಡ್ ಮಿಲಿಂದ ಗೇಟ್ಸ್ ಫೌಂಡೇಷನ್ ನೆರವಿನ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಆ ವರದಿಯ ಪ್ರಕಾರ, ಭಾರತದಲ್ಲಿ ವಾಸ್ತವಕ್ಕಿಂತ ಎಂಟು ಪಟ್ಟು ಹೆಚ್ಚಿನ ಮಂದಿ ನಿಧನಯೊಂದಿದ್ದಾರೆ ಎನ್ನಲಾಗುತ್ತಿದೆ. ಅತ್ಯಂತ ಹಳೆಯ ಮೆಡಿಕಲ್ ಜರ್ನಲ್ ಆಗಿರುವ ಲ್ಯಾನ್ಸೆಟ್ ಎಂಬ ವಾರ ಪತ್ರಿಕೆಯ ವರದಿ ಪ್ರಕಾರ, 2020ರ ಜನವರಿ 1ರಿಂದ 2021ರ ಡಿಸೆಂಬರ್ 31ರ ವರೆಗೆ ಅವಧಿಯಲ್ಲಿ 18.2 (1ಕೋಟಿ 80 ಲಕ್ಷಕ್ಕೂ ಹೆಚ್ಚು) ಮಿಲಿಯನ್ ಸಾವುಗಳು ಸಂಭವಿಸಿವೆ. ಇದರಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಆಗಿವೆ ಎಂದು ವಿಶ್ಲೇಷಿಸಲಾಗಿದೆ.


ಭಾರತ ಸರ್ಕಾರದ ಮಾಹಿತಿ ಪ್ರಕಾರ, ಶುಕ್ರವಾರ (ಮಾ.11) ಬೆಳಗ್ಗಿನವರೆಗೆ ಕೋವಿಡ್ ನಿಂದ 5,15,714 ಜನರು ಸಾವನ್ನಪ್ಪಿದ್ದಾರೆ. ಆದರೆ, ಲ್ಯಾನ್ಸೆಟ್ ವರದಿ ಅನ್ವಯ 2021ರ ಡಿಸೆಂಬರ್ 31ರೊಳಗೇ 4.1 ಮಿಲಿಯನ್ ಅಂದರೆ 41 ಲಕ್ಷ ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಅರ್ಧದಷ್ಟು ಸಾವುಗಳನ್ನು ಕಂಡ ಏಳು ರಾಷ್ಟ್ರಗಳ ಪೈಕಿ ಭಾರತದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿ ಅಂದಾಜಿಸಿದೆ.


ಭಾರತ ಹೊರತುಪಡಿಸಿದರೆ ಅಮೆರಿಕ (1.1 ಮಿಲಿಯನ್), ರμÁ್ಯ (1.1 ಮಿಲಿಯನ್), ಮೆಕ್ಸಿಕೋ (7,98,000), ಬ್ರೆಜಿಲ್ (7,92,000) ಮತ್ತು ಇಂಡೋನೇμÁ್ಯ (7,36,000) ಮತ್ತು ಪಾಕಿಸ್ತಾನ (6,64,000)ದಲ್ಲಿ ಅಧಿಕ ಸಾವುಗಳು ಆಗಿದೆ.
ರಷ್ಯಾದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 375 ಜನರು ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ ಒಂದು ಲಕ್ಷಕ್ಕೆ 325 ಜನ, ಬ್ರೆಜಿಲ್ನಲ್ಲಿ ಲಕ್ಷಕ್ಕೆ 187 ಜನ ಮತ್ತು ಅಮೆರಿಕದಲ್ಲಿ ಲಕ್ಷಕ್ಕೆ 179 ಮಂದಿ ಸಾವನ್ನಪ್ಪಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಾರಣ ಭಾರತವು ಜಗತ್ತಿನ ಶೇಕಡ 22ರಷ್ಟು ಸಾವುಗಳನ್ನು ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತ, 5.3 ಮಿಲಿಯನ್ ಹೆಚ್ಚುವರಿ ಸಾವುಗಳನ್ನು ಕಂಡಿರುವ ದಕ್ಷಿಣ ಏಷ್ಯಾದಲ್ಲಿ ಕೋವಿಡ್ ನಿಂದ ಅಧಿಕ ಸಾವುಗಳ ಸಂಭವಿಸಿವೆ. ನಂತರ ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ (1.7 ಮಿಲಿಯನ್) ಮತ್ತು ಪೂರ್ವ ಯುರೋಪ್ (1.4 ಮಿಲಿಯನ್) ಹೆಚ್ಚು ಸಾವುಗಳಾಗಿವೆ. ಈ ಅಂಕಿ-ಅಂಶಗಳು ಕೋವಿಡ್ ಸೋಂಕಿನ ಪರಿಣಾಮ ತುಂಬಾ ಅಧಿಕವಾಗಿತ್ತು ಎಂಬುವುದನ್ನು ಸೂಚಿಸುತ್ತವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸ್ವತಂತ್ರ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರವಾದ ಆರೋಗ್ಯ ಛಂದಶ್ಯಾಸ್ತ್ರ (ಮೆಟ್ರಿಕ್ಸ್) ಮತ್ತು ಮೌಲ್ಯಮಾಪನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.
ಅಧಿಕೃತವಾಗಿ ವರದಿಯಾದ ಕೋವಿಡ್ ಸಾವಿನ ಸಂಖ್ಯೆ ಮತ್ತು ಹೆಚ್ಚುವರಿ ಸಾವಿನ ಸಂಖ್ಯೆಯನ್ನು ತಾಳೆ ಮಾಡಿದಾಗ ಕೋವಿಡ್ ಸಾವಿನ ಸಂಖ್ಯೆ ಗೊತ್ತಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಅಧಿಕೃತವಾದ ವರದಿಯಾದ ಸಂಖ್ಯೆಕ್ಕಿಂತ 9.5 ಪಟ್ಟು ಅಧಿಕವಾಗಿ ಪತ್ತೆಯಾಗುತ್ತವೆ. ಅದೇ ರೀತಿ ಪೂರ್ವ ಯುರೋಪ್ನಲ್ಲಿ 14.2 ಪಟ್ಟು ಹೆಚ್ಚು ಸಾವಿನ ಸಂಖ್ಯೆಗಳು ಕಂಡು ಬರುತ್ತವೆ ಎಂದು ವಿವರಿಸಲಾಗಿದೆ.
ಸಾಂಕ್ರಾಮಿಕದಿಂದ ಸಂಭವಿಸಿದ ನಿಜವಾದ ಸಾವಿನ ಸಂಖ್ಯೆ ತಿಳಿದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸ ಬೇಕಾದ ಅನಿವಾರ್ಯತೆ ಉಂಟಾಗಿದೆ. ಸ್ವೀಡನ್ ಮತ್ತು ನೆದಲ್ಯಾರ್ಂಡ್ ಸೇರಿ ಇತರ ರಾಷ್ಟ್ರಗಳಲ್ಲಿ ನಡೆದ ಅಧ್ಯಯನದ ಪ್ರಕಾರ ನೇರವಾಗಿ ಕೋವಿಡ್ ನಿಂದ ಉಂಟಾದ ಸಾವಿನ ಬಗ್ಗೆ ಗೊತ್ತಾಗುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಅಗತ್ಯವಾದ ಪುರಾವೆ ಸಿಗುವುದಿಲ್ಲ. ಮುಂದಿನ ಅಧ್ಯಯನವು ನೇರವಾಗಿ ಕೋವಿಡ್ ನಿಂದ ಸಂಭವಿಸಿದ ಸಾವುಗಳು ಮತ್ತು ಪ್ರತ್ಯಕ್ಷವಾಗಿಯೂ ಎಷ್ಟು ಪರಿಣಾಮ ಬೀರಿದೆ ಎಂಬುವುದು ತಿಳಿಯಲು ಸಾಧ್ಯವಾಗಲಿದೆ ಎಂದು ಮುಖ್ಯಲೇಖಕ ಡಾ.ಹೈಡಾಂಗ್ ವಾಂಗ್ ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಒಂದೇ ದಿನ 81 ಜನರಿಗೆ ಶಿರಚ್ಛೇದನದ ಮೂಲಕ ಮರಣದಂಡನೆ

JANANUDI.COM NETWORK

ರಿಯಾದ್: ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗಾಗಿ ಒಂದು ದಿನದಲ್ಲಿ ದಾಖಲೆಯ 81 ಜನರನ್ನು ಶನಿವಾರ ಗಲ್ಲಿಗೇರಿಸಿದೆ ಎಂದು ಸೌದಿ ಅರೇಬಿಯಾ ಹೇಳಿದೆ, ಇದು ಕಳೆದ ವರ್ಷ ಕೊಲ್ಲಲ್ಪಟ್ಟ ಒಟ್ಟು ಸಂಖ್ಯೆಯನ್ನು ಮೀರಿದೆ
ಇವರೆಲ್ಲರೂ “ಬಹು ಘೋರ ಅಪರಾಧಗಳನ್ನು ಮಾಡಿದ ತಪ್ಪಿತಸ್ಥರು” ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಮಾಡಿದೆ, ಅವರು ಇಸ್ಲಾಮಿಕ್ ಸ್ಟೇಟ್ ಗುಂಪು, ಅಲ್-ಖೈದಾ, ಯೆಮೆನ್‌ನ ಹುತಿ ಬಂಡುಕೋರ ಪಡೆಗಳು ಅಥವಾ “ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ” ಸಂಬಂಧ ಹೊಂದಿರುವ ಅಪರಾಧಿಗಳನ್ನು ಒಳಗೊಂಡಿದ್ದಾರೆ ಎಂದು ತಿಳಿಸಿದೆ. .
ಗಲ್ಫ್ ದೇಶಗಳು ವಿಶ್ವದ ಅತ್ಯಧಿಕ ಮರಣದಂಡನೆ ವಿಧಿಸುವಲ್ಲಿ ದಾಖಲೆಯನ್ನು ಹೊಂದಿವೆ.ಈ ಮರಣದಂಡನೆಯನ್ನು ಶಿರಚ್ಛೇದನದ ಮೂಲಕ ನಡೆಸಿದೆ. ಮರಣದಂಡನೆಗೆ ಒಳಗಾದವರಿಗೆ ದೇಶದಲ್ಲಿ ದಾಳಿಗೆ ಸಂಚು ರೂಪಿಸಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಹೆಚ್ಚಿನವರು ನಾಗರಿಕರನ್ನು ಮತ್ತು ಭದ್ರತಾ ಪಡೆಗಳ ಸದಸ್ಯರನ್ನು ಕೊಲ್ಲುವುಡೇ ಇವರ ಗುರಿಯಾಗಿತ್ತು ಎಂದು , SPA ಹೇಳಿಕೆಯನ್ನು ನೀಡಿದೆ.
“ಸರ್ಕಾರಿ ಸಿಬ್ಬಂದಿ ಮತ್ತು ಪ್ರಮುಖ ಆರ್ಥಿಕ ತಾಣಗಳನ್ನು ಗುರಿಯಾಗಿಸುವುದು, ಕಾನೂನು ಜಾರಿ ಅಧಿಕಾರಿಗಳನ್ನು ಕೊಲ್ಲುವುದು ಮತ್ತು ಅವರ ದೇಹಗಳನ್ನು ಅಂಗವಿಕಲಗೊಳಿಸುವುದು ಮತ್ತು ಪೊಲೀಸ್ ವಾಹನಗಳನ್ನು ಗುರಿಯಾಗಿಸಲು ನೆಲ ಬಾಂಬ್ ಗಳನ್ನೂ ಇಡುವುಹಂತಹ ಅಪರಾಧಗಳು ಸೇರಿವೆ” ಎಂದು SPA ಹೇಳಿದೆ. ಅಲ್ಲದೆ “ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ಶಸ್ತ್ರಾಸ್ತ್ರಗಳು ಮತ್ತು ಬಾಂಬ್‌ಗಳನ್ನು ಸಾಮ್ರಾಜ್ಯಕ್ಕೆ ಕಳ್ಳಸಾಗಣೆ ಮಾಡುವ ಅಪರಾಧಗಳು ಅಪರಾಧಗಳನ್ನು ಒಳಗೊಂಡಿವೆ” ಎಂದು ಹೇಳಲಾಗಿದೆ .
ಮರಣದಂಡನೆಗೆ ಒಳಪಟ್ಟವರಲ್ಲಿ 81 ಜನರಲ್ಲಿ 73 ಸೌದಿ ಪ್ರಜೆಗಳು, ಏಳು ಮಂದಿ ಯೆಮೆನ್ ಮತ್ತು ಒಬ್ಬರು ಸಿರಿಯನ್ ಪ್ರಜೆಗಳಾಗಿದ್ದರು
ಮರಣದಂಡನೆಗೆ ಒಳಗಾದವರೆಲ್ಲರನ್ನು ಸೌದಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು, 13 ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪ್ರತಿ ವ್ಯಕ್ತಿಗೆ ಮೂರು ಪ್ರತ್ಯೇಕ ಹಂತಗಳಲ್ಲಿ ವಿಚಾರಣೆ ನಡೆಸಲಾಗಿತ್ತು. “ಆದರೆ ಈ ಮರಣದಂಡನೆಗಳು ಬ್ರಿಟನ್ ಮೂಲದ ಪ್ರಚಾರ ಗುಂಪು ರಿಪ್ರೈವ್ ನಿಂದ ಖಂಡನೆಗೆ ಗುರಿಯಾಗಿದೆ.
2021 ರಲ್ಲಿನ ಒಟ್ಟು ಸೌದಿಯಲ್ಲಿ 69 ಮರಣದಂಡನೆ ವಿಧಿಸಿತ್ತು ಈ ವರ್ಷ ಬೇರೆ ಬೇರೆ ಕಾರಣಗಳಿಗಾಗಿ ಇಲ್ಲಿಯವರೆಗೆ ಒಟ್ಟು ಮರಣದಂಡನೆಗೆ ಒಳಗಾದವರು ಸಂಖ್ಯೆ 92 ತಲುಪಿದೆ. ಪ್ರಪಂಚದಾದ್ಯಂತ ಸುಮಾರು 50 ದೇಶಗಳು ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತವೆ.

ಬೈಂದೂರು – ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಶಿಬಿರ

JANANUDI.COM NETWORK

ಬೈಂದೂರು, ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಶಿಬಿರ ವನ್ನು ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಹಾಗೂ ಇನ್ನೆರವೀಲ್ ಕ್ಲಬ್ ಬೈಂದೂರು ಸಹಾಭಾಗೀತ್ವದಲ್ಲಿ ಸಮುದಾಯ ಅರೋಗ್ಯ ಕೇಂದ್ರ ಬೈಂದೂರುನಲ್ಲಿ ನಡೆಸಲಾಯಿತು.

Dr. ನಂದಿನಿ ಮಕ್ಕಳ ತಜ್ಞೆ ದೀಪ ಬೆಳಗಿಸಿ ಪ್ರಾಸ್ತವಿಕ ಸಂದೇಶ ನೀಡಿದರು. Dr. ರಾಜೇಶ್ ಸೌಕೂರ್. ಸ್ತ್ರೀ ರೋಗ ತಜ್ಞರು. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ ಮಹಿಳೆಯರು ಎಲ್ಲರ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಆದರೆ ತಮ್ಮ ಅರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ ಮೊದಲಿಗೆ ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿ ನಿಭಾಯಿಸಬೇಕು. ಎಂದು ನುಡಿದರು. ಮಣಿಪಾಲ ಆಸ್ಪತ್ರೆಯ ಇನ್ನೊರ್ವ Dr. ಅರುಣ್ ಹಾಜರಾಗಿದ್ದರು. 50ಮಂದಿ ಮಹಿಳೆಯರು ಗರ್ಭಕಂಠ ದ ತಪಾಸಣೆಯ ಉಪಯೋಗ ವನ್ನು ಪಡೆದರು. ಇನ್ನರ್ ವೀಲ್ ಸದಸ್ಯರು ಹಾಗೂ ಕಥೋಲಿಕ್ ಸ್ತ್ರೀ ಸಂಘಟನೆ ಸದಸ್ಯರು ಮತ್ತು ಸಂಪದ ಉಡುಪಿ – ಕುಂದಾಪುರ ವಲಯದ ಮಹಿಳಾ ಸಂಘಟನೆಯ animator ಸಿಂಥಿಯ ರೋಡ್ರಿಗಸ್ ಹಾಜರಿದ್ದರು.

ಸಮುದಾಯ ಅರೋಗ್ಯ ಕೇಂದ್ರದ ಬೈಂದೂರಿನ inspection Inspection ಆಫೀಸರ್ ಸಂತೋಷ ಅವರು ಧನ್ಯವಾದ ನೀಡಿದರು.

ಕೋಲಾರ :ಅಪರ ಜಿಲ್ಲಾಧಿಕಾರಿ ಭೂಪರಿವರ್ತನೆ ಸಂಬಂಧ ಲಂಚ ಸ್ವೀಕರಿ ಸುತ್ತಿದ್ದರೆನ್ನಲಾರೆಂಬ ಕಾರಣಕ್ಕೆ ಎಸಿಬಿ ಅಧಿಕಾರಿಗಳು ದಿಢೀರ್ ಧಾಳಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ :ಅಪರ ಜಿಲ್ಲಾಧಿ ಕಾರಿ ಡಾ.ಸಿ.ವಿ.ಸ್ನೇಹಾ ಭೂಪರಿವರ್ತನೆ ಸಂಬಂಧ ದೂರುದಾರ ರೊಬ್ಬರಿಂದ ತಮ್ಮ ಕಚೇರಿಯಲ್ಲೇ 2.90 ಲಕ್ಷ ರೂ ಲಂಚ ಸ್ವೀಕರಿ ಸುತ್ತಿದ್ದರೆನ್ನಲಾಗಿದ್ದು, ಬೆಂಗಳೂರಿನ ಎಸಿಬಿ ಅಧಿಕಾರಿಗಳು ದಿಢೀರ್ ಧಾಳಿ ನಡೆಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಡಾ.ಸ್ನೇ ಹಾ ಸಿ.ವಿ. ಅವರನ್ನು ಅಪರ ಡಿಸಿ ಕಚೇರಿಯಲ್ಲೇ ಎಸಿಬಿ ಅಧಿಕಾರಿ ಗಳು ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಕಚೇರಿಯ ಶಿರಸ್ತೇದಾರ್ ಪ್ರಭಾಕರ್ ಹಾಗೂ ಇತರ ಸಿಬ್ಬಂ ದಿಯನ್ನು ವಿಚಾರಣೆ ನಡೆಸುತ್ತಿದಾ ್ದರೆನ್ನಲಾಗಿದ್ದು, ಹೆಚ್ಚಿನ ವಿವರಗಳು ತಿಳಿದಿಲ್ಲ.
ದೂರುದಾರರೊಬ್ಬರ ಭೂಪ ರಿವರ್ತನೆ ಕಡತ ವಿಲೇವಾರಿಗೆ ಆತ ಹಲವಾರು ಬಾರಿ ಅಲೆದಾಡಿದ್ದ ರೂ, ಕಡತ ವಿಲೇವಾರಿಯಾಗದೇ ತೊಂದರೆ ಅನುಭವಿಸಿದ್ದಾರೆ, ಈ ಸಂಬಂಧ ನೇರವಾಗಿ ಎಡಿಸಿಯವರನ್ನೇ ಭೇಟಿಯಾಗಿದ್ದು, ಎಡಿಸಿಯ ವರು ಶಾಖಾ ಮುಖ್ಯಸ್ಥರಾದ ಪ್ರಭಾಕರ್ ಅವರ ಬಳಿ ಹೋಗಲು ಸೂಚಿಸಿದ್ದರೆಂದು ದೂರಲಾಗಿದೆ.
ದೂರು ದಾರ ಸೆಕ್ಷನ್ ಹೆಡ್ ಪ್ರಭಾಕರ್ ಅವರ ಬಳಿ ಹೋದಾಗ ಅವರು, ಕಚೇರಿಯ ಇತರೆ ಇಬ್ಬರು ಸಿಬ್ಬಂದಿಗಳಿಗೆ ತಿಳಿಸಿದ್ದೇನೆ ಅಲ್ಲಿ ಹೋಗಿ ಮಾತನಾಡಿ ಎಂದು ಸೂಚನೆ ನೀಡಿದ್ದಾರೆನ್ನಲಾಗಿದ್ದು, ಒಟ್ಟಾರೆ ಭೂಪರಿವರ್ತನೆಗೆ 3 ಲಕ್ಷ ರೂ ನೀಡಲು ಸೂಚಿಸಿದ್ದರೆನ್ನ ಲಾಗಿದೆ.
ಕೋಲಾರ ಹೊರ ವಲಯದ ಟಮಕ ಬಳಿ ಇರುವ ಜಿಲ್ಲಾಡಳಿತ ಭವನದಲ್ಲಿರುವ ಅಪರ ಡಿಸಿ ಕಚೇರಿಗೆ ತಮ್ಮ ಕಡತ ವಿಲೇವಾ ರಿಗಾಗಿ 2.90 ಲಕ್ಷಕ್ಕೆ ವ್ಯವಹಾರ ಕುದುರಿಸಿದ ಸಿಬ್ಬಂದಿ ಧೋರಣೆ ವಿರುದ್ದ ಆಕ್ರೋಶಗೊಂಡ ದೂರು ದಾರ ಎಸಿಬಿ ಅಧಿಕಾರಿಗಳಿಗೆ ದೂ ರು ನೀಡಿದ್ದರ ಹಿನ್ನಲೆಯಲ್ಲಿ ಈ ಧಾಳಿ ನಡೆದಿದೆ ಎನ್ನಲಾಗಿದೆ. ಅಪರ ಡಿಸಿಯವರ ಕಚೇರಿಯ ಒಳಗೇ ಶಿರಸ್ತೆದಾರ್‍ಗಳಾದ ಪ್ರಭಾ ಕರ್ ಹಾಗೂ ನಂಜೇಗೌಡ, ಎಸ್ ಡಿಎ ಮಧು ವಿಚಾರಣೆ ನಡೆಯು ತ್ತಿದ್ದು, ಎಸಿಬಿ ಅಧಿಕಾರಿಗಳು ಧಾಳಿ ಕುರಿತಂತೆ ಹೆಚ್ಚಿನ ವಿವರಗಳನ್ನು ಬಿಟ್ಟುಕೊಡಲಿಲ್ಲ.

ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದ್ದಾರೆ :ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಿ – ರೈತ ಸಂಘ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ, ಮಾ.11, ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಚೆನೈ ಕಾರಿಡಾರ್ ರಸ್ತೆಯ ಅಭಿವೃದ್ದಿಗೆ ಕೆರೆಯ ಸ್ವರೂಪವನ್ನೇ ಹಾಳು ಮಾಡುತ್ತಿರುವ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ದೂಳಿನಿಂದ ರಸ್ತೆಯ ಅಕ್ಕಪಕ್ಕದಲ್ಲಿ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತರು ಕೃಷಿ ಭೂಮಿಗೆ ಹಾಗು ಇಟ್ಟಿಗೆ ಕಾರ್ಖಾನೆಗೆ ಮಣ್ಣು ಬೇಕಾದರೆ ನೂರೊಂದು ಕಾನೂನು ಹೇಳುವ ಗಣಿ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳಿಗೆ ಚೆನೈ ಕಾರಿಡಾರ್ ಗುತ್ತಿಗೆದಾರರ ಕೆರೆ ಹಾಳು ಮಾಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೆಂದು ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡುವ ಜೊತೆಗೆ ರೈತರಿಗೆ ಒಂದು ನ್ಯಾಯ ರಾಜಕೀಯ ಬೆಂಬಲ ಇರುವವರಿಗೆ ಒಂದು ನ್ಯಾಯವೇ ಎಂದು ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ರಸ್ತೆ, ಕೈಗಾರಿಕೆ ಅಭಿವೃದ್ದಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಬಲವಂತದಿಂದ ಕಾನೂನಿನ ಭಯ ಹುಟ್ಟಿಸಿ. ವಶಪಡಿಸಿಕೊಂಡು ಪರಿಹಾರ ನೀಡದೇ ಕಛೇರಿಗೆ ಅಲೆದಾಡಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಜಲ ಮೂಲಗಳ ಜೀವನಾಡಿಯಾದ ಕೆರೆಗಳನ್ನು ಚೆನೈ ಕಾರಿಡಾರ್ ಹೈವೆ ಅಭಿವೃದ್ದಿ ಗುತ್ತಿಗೆದಾರರು ಸಂಪೂರ್ಣವಾಗಿ ತಮಗೆ ಇಷ್ಟಬಂದ ರೀತಿ ಮಣ್ಣು ತೆಗೆಯುವ ಮೂಲಕ ಕೆರೆಗಳನ್ನು ಹಾಳು ಮಾಡುತ್ತಿದ್ದರು ಅದನ್ನು ತಡೆಯಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ರಸ್ತೆ ಅಭಿವೃದ್ದಿ ಮಾಡುತ್ತಿರುವುದಕ್ಕೆ ನಮ್ಮ ಅಭ್ಯಂತರವು ಇಲ್ಲ ಆದರೆ ಮಾನ್ಯ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಣ್ಣ ನೀರಾವರಿ ಇಲಾಖೆ, ಅಧಿಕಾರಿಗಳು ಕೆರೆಯಲ್ಲಿ ಮಣ್ಣು ತೆಗೆಯಲು ಚೆನೈ ಕಾರಿಡಾರ್ ರಸ್ತೆ ಗುತ್ತಿಗೆದಾರರಿಗೆ ನೀಡಿರುವುದು 3 ರಿಂದ 4 ಅಡಿ ಜೊತೆಗೆ ಯಾವುದೇ ರೀತಿಯ ಕೆರೆಗೆ ಹಾನಿಯಾಗದ ಜೊತೆಗೆ ಮಳೆ ನೀರು ಸಂಗ್ರಹವಾದಾಗ ಪ್ರಾಣಿಗಳಿಗೆ ತೊಂದರೆಯಾಗಬೇಕೆಂದು ನಿರ್ಬಂಧನೆಗಳನ್ನು ನೀಡಿ ಆದೇಶ ನೀಡಿದರೆ ಗುತ್ತಿಗೆದಾರರು ಆದೇಶಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ 10 ರಿಂದ 30 ಅಡಿಯ ವರೆಗೂ ಆಳ ಮಾಡುವ ಮೂಲಕ ಕೆರೆಯ ಸ್ವರೂಪಗಳನ್ನು ಹಾಳು ಮಾಡುತ್ತಿದ್ದಾರೆಂದು ಗುತ್ತಿಗೆದಾರರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು
.