HOLY ROSARY CHURCH, KUNDAPUR – 450 th JUBILEE SOUVENIR 2021

ವಿದ್ಯೆಯು ಕದಿಯಲಾಗದ ಸಂಪತ್ತು ಮಕ್ಕಳಿಗೆ ಆಸ್ತಿ ಅಂತಸ್ತು ಮಾಡುವುದರ ಬದಲು ವಿದ್ಯೆ ಎಂಬ ಸಂಪತ್ತನ್ನು ಮಾಡಿಕೊಡಿ : ಇಒ ಎಸ್.ಆನಂದ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ವಿದ್ಯೆಯು ಕದಿಯಲಾಗದ ಸಂಪತ್ತು , ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಅಂತಸ್ತು ಮಾಡುವುದರ ಬದಲು ವಿದ್ಯೆ ಎಂಬ ಸಂಪತ್ತನ್ನು ಮಾಡಿಕೊಡಿ ಎಂದು ಇಒ ಎಸ್.ಆನಂದ್ ಕರೆ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಶನಿವಾರ ಸ್ನೇಹ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯೆಯಂಬದನ್ನು ಸಹೋದರರೊಂದಿಗೆ ಆಗಲಿ, ಕಳ್ಳರಿಂದಾಗಲಿ, ರಾಜನಿಂದಗಾಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ವಿದ್ಯೆ ಎಂಬುದು ಗುಪ್ತವಾದ ಸಂಪತ್ತು. ವಿದ್ಯೆಯನ್ನು ಓದಿದಷ್ಟು (ಬಗಿದಷ್ಟು) ಜ್ಞಾನವು ಲಭಿಸುತ್ತದೆ ಎಂದರು.
ಮಾನವ ಕುಲವು ಜನನ, ಜೀವನ, ಮರಣದೊಂದಿಗೆ ಕಾಲಕಳೆಯಬೇಕಾಗಿದೆ. ಜನನವು ಆಕಸ್ಮಿಕ , ಬದುಕು ಅನಿವಾರ್ಯ, ಮರಣ ನಿಶ್ವಿತ ಎಂಬಂತೆ ಕಾಲಕಳೆಯಬೇಕು. ಇವುಗಳ ಮಧ್ಯೆ ಹುಟ್ಟು ಸಾವಿನ ನಡುವೆ ಏನಾದರೂ ಸಾಧನೆ ಮಾಡಬೇಕೆಂಬ ಛಲ, ಧ್ಯೇಯದೊಂದಿಗೆ ಬದುಕು ಸಾಗಿಸಬೇಕು.
ಶಾಸಕರ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲೆಗಳಿಗೆ ಶೌಚಾಗೃಹ, ಕಾಪೌಂಡ್, ಕಟ್ಟಡ ದುರಸ್ತಿ ಕಾರ್ಯ, ಕುಡಿಯುವ ನೀರು ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ . ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಯು ನಿಮ್ಮ ಗುರಿಯ ಅಡಿಪಾಯ . ಗುರು ಹಿರಿಯರ ಮಾಗದರ್ಶನದೊಂದಿಗೆ ನಿಮ್ಮ ಗುರಿಯನ್ನು ಸಾಧಿಸಿ ಎಂದು ಅಭಿನಂದಿಸಿದರು. ಈ ಭಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ತಾಲೂಕು ಪ್ರಥಮ ಸ್ಥಾನವನ್ನು ಪಡೆದಿರುವುದು ಸ್ವಾಗತರ್ಹ , ಮುಂದಿನ ದಿನಗಳಲ್ಲಿ ತಾಲೂಕು ರಾಜ್ಯಕ್ಕೆ ಪ್ರಥಮಸ್ಥಾನಕ್ಕಾಗಿ ಪ್ರಯತ್ನಿಸಣೋ ಎಂದು ಆಶಯ ವ್ಯಕ್ತಪಡಿಸಿದರು.
ಬಿಇಒ ಉಮದೇವಿ ಮಾತನಾಡಿ ಅಕ್ಷರ ಕಲಿಸಿದ ಗುರುಗಳಿಗೆ ಗೌರವವನ್ನು ಸೂಚಿಸಬೇಕು. ಎಷ್ಟೇ ವಿದ್ಯಾವಂತರಾಗಿ ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ವಿದ್ಯೆಯೊಂದಿಗೆ ವಿನಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ನಿರೀಕ್ಷಕ ಜಿ.ಎಸ್.ನಾರಾಯಣಸ್ವಾಮಿ ಮಾತನಾಡಿ ಈ ದೇಶಕ್ಕೆ ಮುಂದಿನ ಆಸ್ತಿ ಇಂದಿನ ಮಕ್ಕಳು. ವಿದ್ಯಾವಂತ ಮಕ್ಕಳಿಗೆ ಸಂಘ, ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಒಳ್ಳೇಯ ವಿದ್ಯಾವಂತರಾಗುತ್ತಾರೆ. ಒಳ್ಳೇಯ ವಿದ್ಯಾವಂತರೇ ದೇಶಕ್ಕೆ ಆಸ್ತಿ ಎಂದರು.
ಸ್ನೇಹ ಸಂಗಮ ಟ್ರಸ್ಟ್‍ನ ಅಧ್ಯಕ್ಷೆ ನಾಗವೇಣಿರೆಡ್ಡಿ ಮಾತನಾಡಿದರು. ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ , ಸ್ನೇಹ ಸಂಗಮ ಟ್ರಸ್ಟ್‍ನ ಕಾರ್ಯದರ್ಶಿ ಸಿ.ಮಂಜುನಾಥ್, ಖಾಜಾಂಚಿ ಕೆವಿಸಿ ರೆಡ್ಡಿ, ಸದಸ್ಯರಾದ ಕೆ.ಸಿ.ವೆಂಕಟರೆಡ್ಡಿ, ವಿಶ್ವನಾಥ್, ಸುಬ್ಬಾರೆಡ್ಡಿ, ಪ್ರಕಾಶ್, ಲಕ್ಷ್ಮೀನಾರಾಯಣ, ವರಲಕ್ಷ್ಮಿ ಹಾಗೂ ವಿದ್ಯಾಥಿಗಳ ಪೋಷಕರು ಇದ್ದರು.

ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಹಲವು ಶಾಲೆಗಳಿಗೆ ಮಾಸ್ಕ್ ವಿತರಣೆ

JANANUDI.COM NETWORK

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕವು ಕುಂದಾಪುರ ನಗರ ಪ್ರದೇಶದ ಹಲವು ಶಾಲೆಗಳಿಗೆ ಮಾಸ್ಕ್ ವಿತರಿಸುವ ಕಾರ್ಯಕ್ರಮ ಕೈಗೊಂಡರು. ಈ ಕಾರ್ಯಕ್ರಮ ದಲ್ಲಿ ಸಭಾಪತಿ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ ಮತ್ತು ಡಾ. ಸೋನಿ ಉಪಸ್ಥಿತರಿದ್ದರು.
HMM ಎಚ್ ಎಮ್ ಎಮ್ / ವಿ ಕೆ ಆರ್ ಸ್ಕೂಲ್ ಗಳಿಗೆ 1950 ಮಾಸ್ಕ್. ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆ 450. ಸೈಂಟ್ ಮೇರಿ ಕನ್ನಡ ಮಾದ್ಯಮ ಶಾಲೆಗೆ 400.ಸೈಂಟ್ ಮೇರಿ PU ಕಾಲೇಜಿಗೆ 200. ಸೈಂಟ್ ಜೋಸೆಫ್ ಪ್ರೌಢ ಮತ್ತು ಪ್ರಾರ್ಥಮಿಕ ಶಾಲೆಗೆ 310. ವೆಂಕಟರಮಣ ಶಾಲೆಗೆ 1200 ಮಾಸ್ಕಗಳನ್ನು ವಿತರಿಸಲಾಯಿತು.

ಶಿರ್ವಾ ಜ್ಯುವೆಲ್ಲರಿ ಶಾಪ್‌ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಬೆಲೆಬಾಳುವ ನಕ್ಲೆಸ್ ಎಗರಿಸಿದ ಖದೀಮರು

JANANUDI.COM NETWORK

ಚಿತ್ರ ಸಾಂದರ್ಭಿಕ

ಶಿರ್ವ: ಶಿರ್ವದಲ್ಲಿ ಜ್ಯುವೆಲ್ಲರಿ ಶಾಪ್‌ ಒಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿರುವ ಅಪರಿಚಿತರಿಬ್ಬರು ಲಕ್ಷಾಂತರ ರೂ. ಮೌಲ್ಯದ ನೆಕ್ಸೆಸ್‌ ನೊಂದಿಗೆ. ಪರಾರಿಯಾಗಿರುವ ಘಟನೆ ನಡೆದಿದೆ. ಕುತ್ಯಾರುವಿನ ಕೆ.ವಿವೇಕಾನಂದ ಆಚಾರ್ಯ ಅವರ ಶಿರ್ಪ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್‌ ನಲ್ಲಿ ಜೂ.6ರಂದು ಈ ಘಟನೆ ನಡೆದಿದ್ದು, ಜೂನ್ ೯ ರಂದು ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಲಪರಿಚಿತರಿಬ್ಬರು ಚಿನ್ನ ಖರೀಸಿಸುವ ನೆಪದಲ್ಲಿ ನೆಕ್ಸೆಸ್‌ ಅನ್ನು ಎಗರಿಸಿದ್ದು ದಾಖಲಾಗಿದೆ. ಖದೀಮರು ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ಖದೀಮರು 28.799 ಗ್ರಾಂ ತೂಕದ 1,49,000 ರೂ. ಮೌಲ್ಯದ ನೆಕ್ಸೆ
ಸ್‌ ಅನ್ನು ಎಗರಿಸಿದ್ದಾರೆ.

ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇನೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರಿಗೆ ನನ್ನನ್ನು ಕೇಳಲು ಯಾವ ಹಕ್ಕಿದೆ : ಶಾಸಕ ಕೆ.ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜೆಡಿಎಸ್‍ನಿಂದ ನನ್ನನ್ನು 7 ತಿಂಗಳ ಹಿಂದೆಯೇ ಉಚ್ಛಾಟನೆ ಮಾಡಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹೀಗಿರುವಾಗ ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇನೆ, ನಾನು ಯಾರಿಗೆ ಮತ ಹಾಕಿದರೆ ಅವರಿಗೇನು? ನನ್ನನ್ನು ಕೇಳಲು ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರಿಗೆ ಯಾವ ಹಕ್ಕಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಪ್ರಶ್ನಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ನಾನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಅದು ನನ್ನಿಷ್ಟ. ನನ್ನನ್ನು ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಉಚ್ಛಾಟನೆ ಮಾಡಿದ್ದೀವಿ ಎಂದು ಹೇಳುತ್ತಿದ್ದಾರೆಯೇ ಹೊರತು ನನಗೆ ಆ ಪತ್ರ ಈವರೆಗೂ ಸಿಕ್ಕಿಲ್ಲ. ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಇಟ್ಟುಕೊಂಡು ಪೂಜೆ ಮಾಡಲಿ. ಅದರ ಅವಶ್ಯಕತೆಯೂ ನನಗಿಲ್ಲ. ಇದನ್ನೆಲ್ಲ ಅರಿಯದೆ ನನ್ನ ಮನೆಯ ಬಳಿ ಬಂದು ಜೆಡಿಎಸ್‍ನವರು ಪ್ರತಿಭಟನೆ ಮಾಡಿರುವುದರಲ್ಲಿ ಅರ್ಥವೇ ಇಲ್ಲ. ಆದರೂ ಅವರಿಗೆ ಒಳ್ಳೆಯದು ಆಗಲಿ ಎಂದು ತಿರುಗೇಟು ನೀಡಿದರು.
ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಕೋಲಾರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಗತಿ ಇರಲಿಲ್ಲ. ಆ ಕಾರಣಕ್ಕಾಗಿ ನನಗೆ ಬಿ ಫಾರಂ ಕೊಟ್ಟಿದ್ದಾರೆಯೇ ಹೊರತು ಬೇರೇನೂ ಅಲ್ಲ. ನಾನು ಸತತ 4 ಬಾರಿ ಶಾಸಕನಾಗಿದ್ದವನು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವನಾಗಿದ್ದವನು ಎಂದರು.
ನಾನು ಸಚಿವನಾಗಿದ್ದ ಸಮಯದಲ್ಲಿ ಆಗ ಇನ್ನೂ ಎಚ್.ಡಿ.ಕುಮಾರಸ್ವಾಮಿ ಶಾಸಕರೂ ಆಗಿರಲಿಲ್ಲ. ಹೀಗಿರುವಾಗ ನನ್ನ ಸೀನಿಯಾರಿಟಿಯನ್ನೂ ನೋಡದೇ ಜೆಡಿಎಸ್ ಪಕ್ಷದಲ್ಲಿ ಸಚಿವ ಸ್ಥಾನಮಾನ ನೀಡಲು ನಿರ್ಲಕ್ಷ್ಯ ತೋರಿದರು. ನಮ್ಮ ಕೋಲಾರ ಭಾಗದವರು ಮತ್ತು ಸಂಬಂಧಿಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ನಡತೆಗಳು ನ್ಯಾಯಯುತವಾಗಿ ಇರದೆ ಡಿಕ್ಟೇಟರ್ ರೀತಿ ಇದ್ದವು ಎಂದು ಅಸಮಧಾನ ವ್ಯಕ್ತಪಡಿಸಿದರು.
ಇಂಚರ ಗೋವಿಂದರಾಜು ಎಂಎಲ್ಸಿ ಆಗುವುದಕ್ಕಾಗಿ ಪ್ರತಿಯೊಬ್ಬ ಶಾಸಕರಿಗೂ ತಲಾ 50 ಲಕ್ಷರೂಗಳನ್ನು ನೀಡಿದ್ದಾರೆ. ನನಗೂ ಕೊಡುವುದಕ್ಕೆ ಬಂದಿದ್ದರು, ನಾನು ನಿರಾಕರಿಸಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು.
ಶಿರಸಿಯಲ್ಲಿ ಕೆಎಸ್‍ಆರ್‍ಟಿಸಿ ನೌಕರನಾಗಿದ್ದ ಇಂದಿನ ಎಂಎಲ್‍ಸಿ ಇಂಚರ ಗೋವಿಂದರಾಜುರನ್ನು ಟೀಕ್ ಮತಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅವರ ಅಣ್ಣ ಬಲರಾಮಣ್ಣ ಒತ್ತಾಯದ ಮೇರೆಗೆ ಕೋಲಾರದ ಕಡೆಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದೆ. ಎಲ್ಲವನ್ನು ಮರೆತು ಈಗ ನನ್ನನ್ನು ನೀಚ ಅದು ಇದು ಎಂದು ಮಾತನಾಡುತ್ತಾರೆ ಎಂದರೆ ನಾನೇನು ಹೇಳಲಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಈ ಎಲ್ಲ ವಿಚಾರಗಳಿಂದಾಗಿಯೇ ನಾನು ಜೆಡಿಎಸ್ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಲು ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‍ಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ವಿಚಾರವಾದಿಗಳು, ಬುದ್ಧಿಜೀವಿಗಳು ಆಗಿರುವ ರಮೇಶ್‍ಕುಮಾರ್ ಅವರೊಂದಿಗೆ ಸದ್ಯ ನಾನು ಗುರುತಿಸಿಕೊಂಡಿದ್ದೇನೆ. ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿ ಬಿಡಲಿ, ನಾನು ಮೂಲ ಕಾಂಗ್ರೆಸ್ಸಿಗ. ಪಕ್ಷದಲ್ಲೇ ಇರುತ್ತೇನೆ ಎಂದ ಅವರು, ನನ್ನ ಪುತ್ರ ಹೋಳೂರು ಜಿಪಂ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಎಲ್ಲ ಸಿದ್ಧತೆ ನಡೆಸಿರುವುದಾಗಿಯೂ ತಿಳಿಸಿದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಗ ಇದ್ದ ಮಹಾನುಭಾವನ (ಕೆ.ಎಚ್.ಮುನಿಯಪ್ಪ) ಕೈವಾಡದಿಂದಾಗಿ ನನಗೆ ಕಾಂಗ್ರೆಸ್‍ನಲ್ಲಿ ಅವಕಾಶ ಸಿಗಲಿಲ್ಲ. ಕೊನೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆತನೇ ಸೋತನು. ಈಗ ಬುದ್ಧಿ ಬಂದಿದೆ, ಸಿಕ್ಕಿದ ವೇಳೆ ಗೌರವದಿಂದ ಮಾತನಾಡಿಸುತ್ತಿದ್ದಾನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಶ್ರೀನಿವಾಸಗೌಡರ ಬೆಂಬಲಿಗರಾದ ಕೆ.ವಿ.ದಯಾನಂದ್, ಕೆಂಬೋಡಿ ನಾರಾಯಣಗೌಡ, ಅನ್ವರ್ ಪಾಷ ಮತ್ತಿತರರಿದ್ದರು.

ಕೋಲಾರ ಬಿ.ಎಂ.ಎಸ್ ಶಾಲೆಗೆ ವಿದ್ಯಾರ್ಥಿನಿ ಮಸೀಹ ಅಮೀನ್ ಟಾಪರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಜೂ,10: ನಗರದ ಬಿ.ಎಂ.ಎಸ್ ಶಾಲೆಯ ವಿದ್ಯಾರ್ಥಿನಿ ಮಸೀಹ ಅಮೀನ್ ಪ್ರಸಕ್ತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 614 ಅಂಕ ಗಳಿಸುವ ಮೂಲಕ ಬೆಂಗಳೂರು ಮಾಂಟೆಸ್ಸರಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಾಗ ವಿದ್ಯಾರ್ಥಿನಿ ಮಸೀಹ ಅಮೀನ್ 596 ಅಂಕಗಳಿಸಿದ್ದು, ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 18 ಅಂಕಗಳನ್ನು ಗಳಿಸಿ ಒಟ್ಟರೆಯಾಗಿ 614 ಅಂಕ ಗಳಿಸುವ ಮೂಲಕ ಬೆಂಗಳೂರು ಮಾಂಟೆಸ್ಸರಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದು, ಶಾಲಾ ಆಡಳಿತ ಮಂಡಳಿಯಿಂದ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಎಂಎಸ್ ಶಾಲೆಯ ಆಡಳಿತ ಅಧಿಕಾರಿ ಅ.ಮು.ಲಕ್ಷ್ಮೀನಾರಾಯಣ್, ಶಾಲೆಯ ಮುಖ್ಯಶಿಕ್ಷಕಿ ರತ್ನ ಕುಮಾರಿ, ಶ್ರೀನಿವಾಸ್, ಹಾಗೂ ಪೆÇೀಷಕರು ಉಪಸ್ಥಿತರಿದ್ದರು.

ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಇನ್ವರ್ಟರ್ ಕೊಡುಗೆ-ಪುಸ್ತಕ ವಿತರಣೆ ಕಾರ್ಯಕ್ರಮ

JANANUDI.COM NETWORK

ಕುಂದಾಪುರ,ಜೂ.10: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಶಾಲಾ ಗುಮಾಸ್ತೆಯಾದ ವಿನಯಾ ಡಿಕೋಸ್ತಾರವರು ಕೊಡಮಾಡಿದ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಇನವರ್ಟರನ್ನು (ಜೂ.10) ಪತಿ ಬರ್ನಾಡ್ ಡಿಕೋಸ್ತಾ ಜೊತೆ ಉದ್ಘಾಟಿಸಿ ಶಾಲೆಗೆ ಹಸ್ತಾತಂರಿಸಿದರು. “ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಎಂದಿಗೂ ಕೀಳರಿಮೆ ಮಾಡಿಕೊಳ್ಳಬಾರದು, ಇಲ್ಲಿ ದೊರಕುವ ಜ್ನಾನ ಸಂಪತ್ತಿನಿಂದ ಸಮಾಜದಲ್ಲಿ ಉನ್ನತ  ಸ್ಥಾನ ಮಾನ ಗಳಿಸಿ, ಮುಂದೆ ನೀವು ಇತರರಿಗೆ ದಾನ ಮಾಡುವ ಕ್ಷಮತೆಯನ್ನು ಪಡೆದುಕೊಳ್ಳಬೇಕು. ದಾನವನ್ನು ಸೂಕ್ತ ಸಂದರ್ಭದಲ್ಲಿ, ಸೂಕ್ತವಾದ ಕಾರ್ಯಗಳಿಗೆ, ಶಿಕ್ಷಣಕ್ಕೆ ದಾನ ಮಾಡಲು ಮುಂದಾಗಿರಿ, ಅದರಿಂದ ಹಲವರ ಜೀವನ ಬೆಳಗಲು ಸಾಧ್ಯವಾಗುತ್ತೆ’ ಎಂದು ಪತ್ರಕರ್ತ ಸಾಹಿತಿ ಬರ್ನಾಡ್ ದಿಕೋಸ್ತಾ ತಿಳಿಸಿದರು.

ಪ್ರಸ್ತುತ ಶೈಕ್ಷಣಿಕ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಐವನ್ ಡಿ ಅಲ್ಮೇಡಾ ಇವರು ನೋಟ್ ಪುಸ್ತಕಗಳನ್ನು ಉದಾರ ಕೊಡುಗೆಯಾಗಿ ನೀಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಸ್ಟರ್ ಸಂಗೀತ ಇವರು ಸರಕಾರ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.ಶಾಲೆಗೆ ಉದಾರ ಕೊಡುಗೆ ನೀಡಿದ ಶ್ರೀಮತಿ ವಿನಯ ಡಿಕೋಸ್ಬ ,ಬರ್ನಾಡ್ ಜೆ ಡಿಕೋಸ್ಟಾ ಹಾಗೂ ಐವನ್ ಡಿ ಅಲ್ಮೇಡಾ ಇವರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ಶಾಲೆಗೆ ನೀಡಿದ ಕೊಡುಗೆಯ ಬಗ್ಗೆ ಪ್ರಶಂಸನೀಯ ಮಾತನಾಡಿದರು. ಶಿಕ್ಷಕರಾದ ಸರ್ ಅಶೋಕ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶ್ರೀಲತಾ ಇವರು ವಂದಿಸಿದರು.

ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಕೆ.ಶ್ರೀನಿವಾಸಗೌಡ ಮತದಾನ -ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕುರ್ಕಿ ರಾಜೇಶ್ವರಿ ಆಗ್ರಹ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಜೂ.9: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಶಾಸಕ ಕೆ.ಶ್ರೀನಿವಾಸಗೌಡ ಕ್ಷೇತ್ರದ ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷೆ ಕುರ್ಕಿರಾಜೇಶ್ವರಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿರುದ್ದ ಕೆಲವು ಶಾಸಕರು ಮುನಿಸಿಕೊಂಡಿದ್ದರೂ ಕೂಡ ಅವರು ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿ ತಮ್ಮ ನಿಷ್ಠೆಯನ್ನ ತೋರ್ಪಡಿಸಿದ್ದಾರೆ. ಆದರೆ ಶಾಸಕ ಕೆ.ಶ್ರೀನಿವಾಸಗೌಡರು ಜೆಡಿಎಸ್‍ನಲ್ಲಿ ಶಾಸಕರಾಗಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಕೋಲಾರ ಕ್ಷೇತ್ರದ ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.
2018ರ ಚುನಾವಣೆಯ ಸಂದರ್ಭದಲ್ಲಿ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಇದೇ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಯಾಕೆ ಟಿಕೆಟ್ ಕೊಡಿಸಲಿಲ್ಲ. ಆಗ ಇದೇ ಶ್ರೀನಿವಾಸಗೌಡರು ಇನ್ನೇನು ನನ್ನ ರಾಜಕಾರಣ ಇಲ್ಲಿಗೆ ಅಂತ್ಯವಾಯಿತು ಎಂದು ಕೈ' ಕಟ್ಟಿ ಕುಳಿತಿದ್ದಾಗ ಇವರಿಗೆ ರಾಜಕಾರಣದ ಕೊನೆಯ ದಿನಗಳಲ್ಲಿ ಅವರನ್ನ ಕೈ ಹಿಡಿದಿದ್ದು ಇದೇ ಜೆಡಿಎಸ್ ಪಕ್ಷ ಅನ್ನುವುದನ್ನ ಶಾಸಕರು ಮರೆತು ಹೋಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಆ ದಿನಗಳಲ್ಲಿ ಕೆ.ಶ್ರೀನಿವಾಸಗೌಡರಿಗೆ ಟಿಕೆಟ್ ಕೊಡುವುದು ಬೇಡ. ನಿಮ್ಮಲ್ಲಿಯೇ ಯಾರಾದರೂ ಮುಂದೆ ಬಂದರೆ ಅವರಿಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದರು. ಆವತ್ತಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಬಯಸಿ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದರು. ಅವತ್ತಿನ ಪರಿಸ್ಥಿತಿಯಲ್ಲಿ ಕೆ.ಶ್ರೀನಿವಾಸಗೌಡರು ಹಿರಿಯರು, ಎಲ್ಲೂ ಕೂಡ ಭ್ರಷ್ಠಾಚಾರ ಮಾಡಿಲ್ಲ, ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಹೆಸರನ್ನ ಗಳಿಸಿದ್ದು ಅಲ್ಲದೆ ಸ್ವಚ್ಚ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇಂತಹವರು ರಾಜಕಾರಣದ ಕೊನೆಯ ದಿನಗಳಲ್ಲಿ ನೋವು ಅನುಭವಿಸಬಾರದು ಹಾಗೂ ಜೆಡಿಎಸ್ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲಾ ಮುಖಂಡರು ಒಂದಾಗಿ ಕೆ.ಶ್ರೀನಿವಾಸಗೌಡರಿಗೆ ಟಿಕೆಟ್ ತಂದು ಚುನಾವಣೆಗೆ ಬೇಕಾದ ಖರ್ಚುವೆಚ್ಚಗಳನ್ನ ಭರಿಸಿ ಅವರನ್ನ ಶಾಸಕರನಾಗಿ ಆಯ್ಕೆ ಮಾಡಿ ಅವರಿಗೆ ಶಕ್ತಿ ಕೊಟ್ಟಿದ್ದೆವು. ಇದನ್ನ ಪರಿಗಣಿಸಿ ಶಾಸಕ ಕೆ.ಶ್ರೀನಿವಾಸಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಕ್ಷೇತ್ರದ ಮತದಾರರ ಋಣವನ್ನು ತೀರಿಸಬಹುದಾಗಿತ್ತು. ಅಲ್ಲದೆ ಜೆಡಿಎಸ್ ವರಿಷ್ಠರ ಮನವಿಯನ್ನ ಪರಿಗಣಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮಾತುಗಳನ್ನ ನಂಬಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ ಇಡೀ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಶಾಸಕ ಕೆ.ಶ್ರೀನಿವಾಸಗೌಡರು ರಾಜಕಾರಣದಲ್ಲಿ ನೈತಿಕತೆಯನ್ನ ಉಳಿಸಿಕೊಂಡಿದ್ದರೆ ಈ ಕೂಡಲೇ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿ. ಅದು ಬಿಟ್ಟು ಅಧಿಕಾರಕ್ಕಾಗಿಜೆಡಿಎಸ್ ಶಾಸಕ’ ಸ್ಥಾನವನ್ನು ಬಳಕೆ ಮಾಡಿಕೊಳ್ಳುತ್ತಿರುವ ಅವರ ನಡೆಯನ್ನು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕುರ್ಕಿ ರಾಜೇಶ್ವರಿ ತೀವ್ರವಾಗಿ ಖಂಡಿಸಿದ್ದಾರೆ.

ಕೋಲಾರ ಡಿಸಿಸಿ ಬ್ಯಾಂಕಿನಿಂದ ಪಕ್ಷಾತೀತ,ಜಾತ್ಯಾತೀತವಾಗಿ ಆರ್ಥಿಕ ನೆರವು-ಆಣೆ,ಪ್ರಮಾಣ ಮಾಡಿಸಿ ಸಾಲ ನೀಡುವ ದುಸ್ಥಿತಿ ಬಂದಿಲ್ಲ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಪ್ರತಿ ಹೆಣ್ಣು ಮಕ್ಕಳಿಗೂ ಬಡ್ಡಿ ರಹಿತ ಸಾಲ ಸೌಲಭ್ಯ ತಲುಪಿಸುವ ಸಂಕಲ್ಪ ಹೊಂದಿರುವ ಡಿಸಿಸಿ ಬ್ಯಾಂಕ್‍ಗೆ ಆಣೆ,ಪ್ರಮಾಣ ಮಾಡಿಸಿಕೊಂಡು ಸಾಲ ನೀಡುವ ದುಸ್ಥಿತಿ ಬಂದಿಲ್ಲ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಕೋಲಾರ ನಗರದ ಹಲವಾರು ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ಸಾಲ ನೀಡುವಾಗ ಜಾತಿ, ಪಕ್ಷ ಯಾವುದು ಎಂದು ಕೇಳಿದ ನಿದರ್ಶನವಿದ್ದರೆ ಗಮನಕ್ಕೆ ತನ್ನಿ ಎಂದು ಮಹಿಳೆಯರಿಗೆ ಮನವಿ ಮಾಡಿದ ಅವರು, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ಅರ್ಹ ಮಹಿಳೆ ಡಿಸಿಸಿ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿ ಸಾಲ ಪಡೆಯಲು ಸಾಧ್ಯವಾಗಿಲ್ಲದಿದ್ದರೆ ತಮ್ಮ ಗಮನಕ್ಕೆ ತನ್ನಿ ಕೂಡಲೇ ಸಾಲ ಒದಗಿಸುವುದಾಗಿ ಘೋಷಿಸಿ, ಬ್ಯಾಂಕಿನಲ್ಲಿ ಲಾಟರಿ ಹಾಕಿ ಸಾಲ ನೀಡುವ ಯಾವುದೇ ಪದ್ದತಿ ಇಲ್ಲ ಎಂದು ಸ್ವಷ್ಟಪಡಿಸಿದರು.
ಅವಿಭಜಿತ ಜಿಲ್ಲೆಯ ತಾಯಂದಿರು ಡಿಸಿಸಿ ಬ್ಯಾಂಕನ್ನು ತಮ್ಮ ತವರು ಮನೆ ಎಂದು ಭಾವಿಸಿದ್ದಾರೆ, ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅವರ ಖಾತೆಗಳಿಗೆ ಸಾಲದ ಹಣ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ, ಸೊಸೈಟಿಗಳಲ್ಲಿ ಭ್ರಷ್ಟಾಚಾರ ಇಣುಕಿ ನೋಡಲು ಅವಕಾಶವಿಲ್ಲದಂತೆ ದೇಶದಲ್ಲೇ ಮೊದಲಬಾರಿಗೆ ಪ್ಯಾಕ್ಸ್‍ಗಳ ಗಣಕೀಕರಣ ಮುಗಿಸಿದ್ದೇವೆ ಎಂದು ತಿಳಿಸಿದರು.
ತಾಯಂದಿರಿರನ್ನು ಎಂದೂ ಬ್ಯಾಂಕ್ ಸಿಬ್ಬಂದಿಯಾಗಲಿ, ಆಡಳಿತ ಮಂಡಳಿಯಾಗಲಿ ನಿಮ್ಮ ಜಾತಿ,ಪಕ್ಷ ಯಾವುದು ಎಂದು ಕೇಳಿರುವ ನಿದರ್ಶನವಿದ್ದರೆ ದಯವಿಟ್ಟು ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ ಅವರು, ಪ್ರತಿ ಕುಟುಂಬಕ್ಕೂ ಸಹಕಾರ ಸಂಘದ ಸದಸ್ಯತ್ವ ನೀಡಿ, ಸ್ವಾವಲಂಬಿ ಬದುಕಿಗೆ ನೆರವಾಗುವ ಗುರಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯದ್ದಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ಬ್ಯಾಂಕ್ ಉಳಿಸುವ ಮಾತನ್ನಾಡಿದ ನಿದರ್ಶವಿಲ್ಲ, ಇದೀಗ 44 ಕೋಟಿಯಿದ್ದ ಠೇವಣಿ 400 ಕೋಟಿ ದಾಟಿದೆ, ಸಾಲ ವಿತರಣೆಯೂ 1300 ಕೋಟಿಗೂ ಹೆಚ್ಚಾಗಿದ್ದು, ನಿಯಮಾನುಸಾರ ಮಹಿಳೆಯರು ಸಂಘ ರಚಿಸಿಕೊಂಡು ಉಳಿತಾಯದ ಹಣ ಇಟ್ಟು, ಸಾಲಕ್ಕೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ,ರಾಜ್ಯ ಸರ್ಕಾರಗಳ ಅಡಿಯಲ್ಲಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದ ಅವರು, ಆದರೆ ಎಂದೂ ಸಹಕಾರ ತತ್ವಗಳಿಗೆ ವಿರುದ್ದವಾಗಿ ನಡೆದುಕೊಂಡಿಲ್ಲ, ಎಲ್ಲಾ,ಜಾತಿ,ಧರ್ಮದವರಿಗೂ ಸಾಲ ಒದಗಿಸಿದ್ದೇವೆ, ಸ್ವಸಹಾಯ ಸಂಘಗಳಲ್ಲಿ ಪಾರದರ್ಶಕತೆ ತರಲು ಇ-ಶಕ್ತಿ ಅನುಷ್ಟಾನವನ್ನು ದೇಶದಲ್ಲೇ ಮೊದಲು ಮಾಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕಿನದ್ದು ಎಂದರು.
ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಬ್ಯಾಂಕಿನ ಎನ್‍ಪಿಎ ಕಡಿಮೆಯಾಗಿದೆ, ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ತಂದು ಸಹಕಾರ ರಂಗವನ್ನು ನಂಬಿದ ಜಿಲ್ಲೆಯ ರೈತರು,ಮಹಿಳೆಯರ ಹಿತ ರಕ್ಷಣೆ ಮಾಡಿದ ಆತ್ಮತೃಪ್ತಿ ತಮಗಿದೆ, ಯಾರೇ ಟೀಕೆ ಮಾಡಿದರೂ ಅದಕ್ಕಿ ಪ್ರತ್ಯುತ್ತರ ನೀಡುವ ಗೋಜಿಗೆ ಹೋಗುವುದಿಲ್ಲ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರು ಸಾಲ ಪಡೆಯುವುದರ ಜತೆಗೆ ನಿಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿಡಿ, ಇದರಿಂದ ಮತ್ತಷ್ಟು ಮಹಿಳೆಯರು,ರೈತರಿಗೆ ಸಾಲ ಸೌಲಭ್ಯ ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.
ಗೋವಿಂದಗೌಡರು ಬ್ಯಾಂಕನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ, ಅವರ ಬೆನ್ನಿಗೆ ಆಡಳಿತ ಮಂಡಳಿ ಇದೆ ಎಂದ ಅವರು, ಇದೀಗ ಬ್ಯಾಂಕಿನ ಅಭಿವೃದ್ದಿಯಿಂದಾಗಿ ಮತ್ತೆ 13 ಹೊಸ ಶಾಖೆಗಳನ್ನು ಸ್ಥಾಪಿಸಲು ಅನುಮತಿ ಪಡೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಷ್, ಅಮೀನಾ ಮತ್ತಿತರರಿದ್ದರು.

ಟಿಕೆಟ್ ಇಲ್ಲದೆ ಪ್ರಯಾಣ, ಅತನಲ್ಲಿ ದಾಖಲೆ ರಹಿತ ಎರಡು ಕೋಟಿ ರೂಪಾಯಿ- ಪೋಲಿಸರ ವಶ

JANANUDI.COM NETWORK

ಕಾರವಾರ-ಮುಂಬೈನಿಂದ ಮಂಗಳೂರಿಗೆ ರೈಲಿನ ಮೂಲಕ ದಾಖಲೆ ಇಲ್ಲದೆ ಸಾಗಿಸುತಿದ್ದ ಎರಡು ಕೋಟಿ ರೂ.ಗಳ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದಾಖಲೆ ಇಲ್ಲದೆ ಈ ಹಣ ಸಾಗಿಸುತ್ತಿರುವುದರಿಂದ ಇದು ಹವಾಲಾ ಹಣ ಇರಬಹುದು ಎಂದುಶಂಕಿಸಲಾಗಿದೆ.
ಆರೋಪಿಯನ್ನು ರಾಜಸ್ಥಾನ ಮೂಲದ ಮನೋಹರ್‌ ಸಿಂಗ್‌ ಅಲಿಯಾಸ್‌ ಚೇನ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಮಂಗಳೂರು ಎಕ್‌ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ಪಡೆಯದೆ ಪ್ರಯಾಣಿಸುತ್ತಿದ್ದ ಮನೋಹರ್‌ ಸಿಂಗ್‌ನನ್ನು ಕಾರವಾರದ ಬಳಿ, ಬಳಿ ಟಿಕೆಟ್ ಇಲ್ಲದಕ್ಕೆ ರೈಲ್ವೆ ಪೊಲೀಸರು ದಂಡ ವಿಧಿಸಿದ್ದರು. ಈ ವೇಳೆ ಅನುಮಾನಗೊಂಡು ವಿಚಾರಣೆ ನಡೆಸಿ, ಆರ್‌ ಪಿ ಎಫ್‌ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಈ ಹಣದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗಿನಲ್ಲಿ ಎರಡು ಸಾವಿರ ರೂ.ಗಳ ಹಣದ ಕಂತೆ ಕಂತೆಗಳು ಇದ್ದವು ಎನ್ನಲಾಗಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಹಣ ವಶಕ್ಕೆ ಪಡೆಯಲಾಗಿದೆ. ರೈಲ್ವೆ ಪೊಲೀಸರು ಆರೋಪಿಯನ್ನು ಕಾರವಾರ ಗ್ರಾಮಾಂತರ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.