HOLY ROSARY CHURCH, KUNDAPUR – 450 th JUBILEE SOUVENIR 2021

ಹೋಲಿ ರೋಜರಿ ಆಂಗ್ಲ ಮಾ. ಶಾಲೆಯಲ್ಲಿ ಕುಂದಾಪುರ ವ. ಮಟ್ಟದ ಪ್ರಾರ್ಥಮಿಕ, ಪ್ರೌಢಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಟ

ಕುಂದಾಪುರ, ಜು. 22: ಕುಂದಾಪುರ ವಲಯ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕುಂದಾಪುರ ಮತ್ತು ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21.07.22 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ  ಸಹಾಯಕ ಧರ್ಮ ಗುರುಗುರು ವಂ| ಅಶ್ವಿನ್ ಆರಾನ್ಹಾ ವಿದ್ಯಾರ್ಥಿಗಳಿಗಳಿಗೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ಸದಸ್ಯರಾಗಿರುವ ಶ್ರೀಯುತ ಪ್ರಭಾಕರ್ ಅವರು ಪ್ರಸ್ತಾವಿಕ ನುಡಿಯನ್ನು ಆಡಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾಗಿರುವ ಶ್ರೀ ದತ್ತಾತ್ರೇಯ ನಾಯಕ್  ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಕೋತ್ವಾಲ್ ಕುಂದಾಪುರ ಇವರು ತಮ್ಮ ಕ್ರೀಡಾ ಸಾಧನೆಯ ಬಗ್ಗೆ ತಿಳಿಸಿ ವಿದ್ಯಾರ್ಥಿಗಳ ಮುಂದಿಟ್ಟರು. ಇವರಿಗೆ ಶಾಲೆಯ ಪರವಾಚಿ ಸನ್ಮಾನಿಸಲಾಯಿತು.

    ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿರುವ ಶಂಕರ್ ಶೆಟ್ಟಿ ,ಕುಂದಾಪುರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಾಗೂ ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯರು ಉಪಸ್ಥಿತರಿದ್ದರು.

   ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ತೆರೇಜ್ ಶಾಂತಿ ಅತಿಥಿಗಳನ್ನು ಸ್ವಾಗತಿಸಿದರು ದೈಹಿಕ ಶಿಕ್ಷಕ ರತ್ನಾಕರ ನಿರೂಪಿಸಿದರು. ಸಹ ಶಿಕ್ಷಕ ಪ್ರಶಾಂತ್ ರೆಬೆರೋ ಧನ್ಯವಾದ ಸಮರ್ಪಿಸಿದರು

ಸ್ಪರ್ಧೆಯ ವಿಜೇತರುಗಳ ವಿವರ

14 ವರ್ಷದ ಬಾಲಕರ ವಿಭಾಗದಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ,  ಹೆಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು

14 ವರ್ಷದ ಬಾಲಕಿಯರ ವಿಭಾಗದಲ್ಲಿ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ದ್ವಿತೀಯ ಸ್ಥಾನ ಪಡೆಯಿತು.

17 ವರ್ಷದ ಬಾಲಕಿಯರ ವಿಭಾಗದಲ್ಲಿ ವಿ.ಕೆ.ಆರ್ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಪಡೆಯಿತು.

17 ವರ್ಷದ ಬಾಲಕರ ವಿಭಾಗದಲ್ಲಿ ವಿ.ಕೆ.ಆರ್ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ,  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಪಡೆಯಿತು.

ಸಂತ ಮೇರಿ ಮಹಾವಿದ್ಯಾಲಯದಲ್ಲಿ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ


ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್‍ಸಿಸಿ, ಎನ್‍ಎಸ್‍ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಬೂಸ್ಟರ್ ಡೋಸು ಲಸಿಕಾ ಅಭಿಯಾನವನ್ನು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ, ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಜುಲೈ 22 ರಂದು ಆಯೋಜಿಸಲಾಯಿತು.

ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗೆ ಬೂಸ್ಟರ್ ಡೋಸ್ ಕೋವಿಡ್ -19 ಲಸಿಕಾಕರಣ ನಡೆಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ 18 ವರ್ಷಕ್ಕಿಂತ ಮೇಲ್ಪಟ್ಟ ಎರಡು ಡೋಸ್ ಪಡೆದ ಅರ್ಹ ಫಲಾನುಭವಿಗಳಿಗೆ ಲಸಿಕೆಗಳ ಲಭ್ಯತೆಗೆ ಅನುಸಾರವಾಗಿ ಕಾಲೇಜು ಆವರಣದಲ್ಲಿಯೇ ಲಸಿಕಾಕರಣ ಅಭಿಯಾನ ಆಯೋಜಿಸಲಾಯಿತು, ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಿಕೊಂಡು ಲಸಿಕೆ ವಿತರಿಸಲಾಗುತ್ತಿದೆ ಎಂದು ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಸುಬ್ರಮಣ್ಯ ರವರು ಜಿಲ್ಲಾಡಳಿತದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಕಾಲೇಜುಗಳ ಮೂಲಕ ಲಸಿಕೆ ನೀಡಲಾಗುತ್ತಿದೆ,ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂಬ ಮಾಹಿತಿಯನ್ನು ನೀಡಿದರು.     

ಈ ಕಾರ್ಯಕ್ರಮದಲ್ಲಿ ಬೋಧಕ,ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.
ಈ ಅಭಿಯಾನಕ್ಕೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಶಶಿ , ಆಶಾ ಕಾರ್ಯಕರ್ತರಾದ ಸವಿತಾ,ರೆಹೆಮತ್‍ವರು ಸಹಕಾರವನ್ನು ನೀಡಿದರು
.

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಮಿಥಿಲೇಶ್ ಮತ್ತು ಸಲ್ಮಾನ್  ಇವರ IPS ಅಧಿಕಾರಿಯಾಗುವ ಆಸೆ ಈಡೇರಿಕೆ!!

ಬೆಂಗಳೂರು:ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಕೊನೆಯ ಆಸೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಡೇರಿಸಿದ್ದಾರೆ.


ಬೆಂಗಳೂರಿನ ಮಿಥಿಲೇಶ್ ಮತ್ತು ಕೇರಳದ ಮೊಹಮದ್ ಸಲ್ಮಾನ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ ಬಾಲಕರು ಇವರು ಜೀವನದಲ್ಲಿ IPS ಅಧಿಕಾರಿಯಾಗುವ ಕನಸು ಕಂಡಿದ್ದರು. ಈ ಇಬ್ಬರು ಬಾಲಕರು ಈ ಆಸೆಯನ್ನು ಮೇಕ್ ಎ ವಿಶ್ ಇಂಡಿಯಾ ಎಂಬ ಎನ್ ಜಿ ಒ ಕಾರ್ಯಕರ್ತರ ಬಳಿ ತಮ್ಮ ಆಸೆ ಹೇಳಿಕೊಂಡಿದ್ದರು.


ಅದರಂತೆ ಎನ್ ಜಿ ಒ, ಸಂಸ್ಥೆ, ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿದರು. ಇದರಂತೆ ಸಲ್ಮಾನ್ ಮಿಥಿಲೇಶ್ ಮತ್ತು ಸಲ್ಮಾನ್ ಅವರಿಗೆ ಪೊಲೀಸ್ ಯುನಿಫಾರ್ಮ್ ಹಾಕಿಸಿ ಒಂದು ದಿನ‌ ಐಪಿಎಸ್ ಖುರ್ಚಿಯಲ್ಲಿ ಕುಳ್ಳಿರಿಸಿ ಪೊಲೀಸರ ಕಾರ್ಯವ್ಯಾಪ್ತಿಯನ್ನು ವಿವರಿಸಿ ಅವರ ಆಸೆಯನ್ನು ಈಡೇರಿಸಲಾಯಿತು.

ಎನ್ ಜಿಒ ಮತ್ತು ಬೆಂಗಳೂರು ಪೊಲೀಸರ ಈ ಕ್ರಮಕ್ಕೆ ಭಾರೀ‌ ಮೆಚ್ಚುಗೆ ವ್ಯಕ್ತವಾಗಿದೆ.

ನಿರೀಕ್ಷೆಯಂತೆ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆ

ನವದೆಹಲಿ:  ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಆಯ್ಕೆಯಾಗಿದ್ದು ಮೂರು ಸುತ್ತಿನ ಮತ ಎಣಿಕೆಯ ನಂತರ ದ್ರೌಪದಿ ಮೂರನೇ ಎರಡರಷ್ಟು ಸ್ಪಷ್ಟ ಬಹುಮತದೊಂದಿಗೆ ಗೆದ್ದರು.ಇವರು ಬುಡಕಟ್ಟು ಸಮುದಾಯದಿಂದ  ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿರುವ ಹೆಗ್ಗಳಿಕೆ ಇವರದು.  ದ್ರೌಪದಿ ಮುರ್ಮು ಮತಗಳ ಲೆಕ್ಕದಲ್ಲಿ ಸಂಪೂರ್ಣ ಬಹುಮತವನ್ನು ದಾಟಿದರು.

ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮುರ್ಮು ಇವರ ಮತ ಮೌಲ್ಯ 5,77,777 ಆಗಿತ್ತು. ವಿರೋಧ ಪಕ್ಷದಲ್ಲಿದ್ದ 17 ಸಂಸದರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು.  ದ್ರೌಪದಿ ಮುರ್ಮು ಅವರ ಚುನಾವಣಾ ಗೆಲುವಿಗೆ ಯಶವಂತ್ ಸಿನ್ಹಾ ಅಭಿನಂದನೆ ಸಲ್ಲಿಸಿದ್ದಾರೆ.

ಮೊದಲ ಸುತ್ತಿನ ಎಣಿಕೆಯ ನಂತರ, ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರ ಮತಗಳನ್ನು ಎಣಿಸಿದಾಗ, 748 ಮತಗಳಲ್ಲಿ 540 ಮತಗಳನ್ನು ಮುರ್ಮು ಮುನ್ನಡೆ ಸಾಧಿಸಿದ್ದರು.

ಎರಡನೇ ಸುತ್ತಿನಲ್ಲಿ ಮುರ್ಮು ಅವರು 1,05,299 ಮತ ಎಣಿಕೆಯೊಂದಿಗೆ 10 ರಾಜ್ಯಗಳ ಒಟ್ಟು 1138 ಶಾಸಕರ ಪೈಕಿ 809 ಶಾಸಕರ ಮತಗಳನ್ನು ಪಡೆದರೆ, ಸಿನ್ಹಾ 44,276 ಮತ ಮೌಲ್ಯದೊಂದಿಗೆ 329 ಶಾಸಕರ ಮತಗಳನ್ನು ಮಾತ್ರ ಪಡೆದರು.

ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಒಟ್ಟು 5,23,600 ಮತಗಳನ್ನು ಪಡೆದಿದ್ದಾರೆ. ಮೊದಲ ಸುತ್ತಿನ ಎಣಿಕೆಯ ನಂತರ ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು 208 ಸಂಸದರ ಮತಗಳನ್ನು ಪಡೆದಿದ್ದು, ಅವರ ಒಟ್ಟು ಮತಗಳ ಮೌಲ್ಯ 1,45,600. ಶೇಕಡಾ 72.9 ಸಂಸದರ ಮತ ಮುರ್ಮು ಅವರ ಪರ ಬಿದ್ದರೆ, ಶೇಕಡಾ 27.81 ರಷ್ಟು ಮತವನ್ನು ಮಾತ್ರ ಸಿನ್ಹಾ ಪಡೆದುಕೊಂಡಿದ್ದಾರೆ ಸೋಮವಾರ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಹೆಚ್ಚಿನ ಮತಗಳಿಂದ ಆಯ್ಕೆ:ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಶ್ರೀನಿವಾಸಪುರ: ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಹೆಚ್ಚಿನ ಮತಗಳಿಂದ ಚುನಾಯಿತರಾಗಿರುವುದನ್ನು ಸ್ವಾಗತಿಸಿ ಗುರುವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಂ.ಲಕ್ಷ್ಮಣಗೌಡ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ದೇಶದ ರಾಷ್ಟ್ರತಿ ಸ್ಥಾನಕ್ಕೆ ಏರಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇದು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ ಎಂದು ಹೇಳಿದರು.
ದೇಶದ ಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು ಅವರು ಪ್ರಜಾಪ್ರಭುತ್ವದ ಘನತೆ ಗೌರವವನ್ನು ಹೆಚ್ಚಿಸಲಿದ್ದಾರೆ. ಅವರ ಗೆಲುವನ್ನು ಸಂತೋಷದಿಂದ ಸ್ವಾಗತಿಸಿ, ಅಭಿನಂದಿಸುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ-ಆಂಧ್ರಪ್ರದೇಶದ ಗಡಿ ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ, ರಾಷ್ಟ್ರತಿಯಾಗಿ ದ್ರೌಪದಿ ಮುರ್ಮು ಅವರ ಆಯ್ಕೆ ಸ್ವಾಗತಿಸಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ಮೆರವಣಿಗೆ ನಡೆಸಿ, ನಿವಾಸಿಗಳಿಗೆ ಟೀ ಹಂಚಿದರು.
ಮುಖಂಡರಾದ ವೆಂಕಟೇಗೌಡ, ರಾಮಾಂಜಿ, ರೆಡ್ಡಪ್ಪ, ರಮೇಶ್, ಷಫಿವುಲ್ಲಾ, ಕೊಟ್ರಗುಳಿ ನಾರಾಯಣಸ್ವಾಮಿ, ರಾಜು, ಸಉರೇಶ್ ಕುಮಾರ್, ಜಯಣ್ಣ, ನಾಗಭೂಷಣ, ವಿ.ನಿಶಾಂತ್ ರೆಡ್ಡಿ ಮತ್ತಿತರರು ಇದ್ದರು.

ಬ್ರೋಕರ್ ಗಳಿದ್ದಾರೆ ಉಷಾರ್ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಮಾಡುಸುವುದಾಗಿ ಮೋಸ ಮಾಡುತ್ತಾರೆ : ಕೆ.ಆರ್. ರಮೇಶ್ ಕುಮಾರ್

ಶ್ರೀನಿವಾಸಪುರ :ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಐ ಎನ್ ಟಿ ಯು ಸಿ ಸಂಯೋಜಿತ ಶ್ರೀನಿವಾಸಪುರ ತಾಲ್ಲೂಕು ಸಮಿತಿ ವತಿಯಿಂದ ರಾಯಲ್ಪಾಡು ಹೋಬಳಿ ಸಮಾವೇಶದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಕೆ.ಆರ್.ರಮೇಶ್ ಕುಮಾರ್ ರವರು ಕಾರ್ಮಿಕರ ಗುರುತಿನ ಚೀಟಿ ನೀಡುವುದರ ಮೂಲಕ ಉದ್ಘಾಟಿಸಿದರು.
ಶಾಸಕ ಕೆ.ಆರ್ ರಮೇಶ್ ಕುಮಾರ್ ಮಾತನಾಡಿ ನೆಹರು ರವರು ಪ್ರಧಾನ ಮಂತ್ರಿಯಾಗಿದಾಗ ಮಹಾವೀರ ತ್ಯಾಗಿ ಎಂಬುವರು ಆಗ ಕಾರ್ಮಿಕ ಸಚಿವರಾಗಿದ್ದಗಿನಿಂದ ಕಾರ್ಮಿಕ ಇಲಾಖೆ ಕೆಲಸ ಮಾಡಿಕೊಂಡು ಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆ ರವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದರು. ಮಕ್ಕಳು ಓದುವುದಕ್ಕೆ, ಆಸ್ಪತ್ರೆಗೆ ಪ್ರತಿಯೊಂದಕ್ಕೂ ಇದರಲ್ಲಿ ಹಣ ಇದೆ. ಆ ಹಣವನ್ನು ಕಾರ್ಮಿಕರಿಗೆ ಸೇರಿಸುವವರು ಬೇಕು ಪಾಪ ಯಲ್ಲಪ್ಪ ಈ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಅವರನ್ನು ಅಭಿನಂದಿಸುತ್ತೇನೆ ಬ್ರೋಕರ್ ಗಳು ಬರುತ್ತಾರೆ ಉಷಾರಾಗಿರಿ 2 ಸಾವಿರ 3 ಸಾವಿರ ಕೇಳುತ್ತಾರೆ ಅವರ ಮಾತನ್ನು ಕೇಳಬೇಡಿ. ಬರೀ 300 ರೂ ಮಾತ್ರ ಅಷ್ಟೇ ಕೊಟ್ಟು ಸದಸ್ಯತ್ವವನ್ನು ಪಡೆದುಕೊಳ್ಳಿ. ನೀವು ಈ ಕಾರ್ಯಕ್ರಮದಿಂದ ಹೋದಾಗ ನಮ್ಮವರು ಇನ್ನೂ ಯಾರು ಕಾರ್ಮಿಕರ ಕಾರ್ಡು ಮಾಡಿಕೊಳ್ಳದೇ ಇರುತ್ತಾರೋ ಅಂಥವರಿಗೆ ತಿಳಿಸಿ. ಬೆವರು ಸುರಿಸಿ ಕೆಲಸ ಮಾಡುವರೆಲ್ಲ ಕಾರ್ಮಿಕರೆ ಎಂದು ತಿಳಿ ಹೇಳಿದರು.

ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಯಲ್ಲಪ್ಪ ಮಾತನಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ .ನಮ್ಮ ಸಂಘದಲ್ಲಿ ಯಾವುದೇ ಜಾತಿ ಭೇದವಿಲ್ಲ ನಮ್ಮಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ನೀಡಲಾಗುವುದು.
ಮಕ್ಕಳ ವಿದ್ಯಾಭ್ಯಾಸಕ್ಕೆ ಚಿಕ್ಕ ವಯಸ್ಸಿನಿಂದ ಹಿಡಿದು ಐಎಎಸ್ ಐಪಿಎಸ್ ಮಾಡುವತನಕ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನಸಹಾಯವನ್ನು ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಇಲಾಖೆ ಮಂಡಳಿ ವತಿಯಿಂದ ನೀಡಲಾಗುತ್ತದೆ. ಅಪಘಾತಗಳು ನಡೆದ ಸಮಯದಲ್ಲಿ ಮಕ್ಕಳಿಗೆ ಜನ್ಮ ನೀಡುವಂತಹ ಸಮಯದಲ್ಲಿಯೂ ಹಣವನ್ನು ನೀಡಲಾಗುತ್ತದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಹಾಗೂ ಗ್ರಾಮದಲ್ಲಿನ ಕಾರ್ಮಿಕರಿಗೆ ತಿಳಿಸಿ ಮಂಡಳಿಯಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಲ್ ಅಶೋಕ್, ಸಂಜಯ್ ರೆಡ್ಡಿ, .ಕೆ.ಕೆ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಗೌರವಾಧ್ಯಕ್ಷ ಕ್ರಿಷ್ಣಪ್ಪ, ಖಜಾಂಜಿ ವೆಂಕಟರಾಮರೆಡ್ಡಿ, ನೇರ್ನಹಳ್ಳಿ ಸರಿತಮ್ಮ, ಹೋಗಳಗೆರೆ ನಾಗರಾಜ್, ಗಾಂಡ್ಲಹಳ್ಳಿ ನಾರಾಯಣಸ್ವಾಮಿ, ಗುರುಮೂರ್ತಿ ಹಾಗೂ ಉಪಸ್ಥಿತರಿದ್ದರು.

ಮಂಗಳೂರು:ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ಪ್ರಕರಣ, ಅಪಾರ್ಟ್​​ಮೆಂಟ್​ನಲ್ಲಿ  ನಡೆದ ಕ್ರತ್ಯಗಳು – ಪೊಲೀಸ್ ಆಯುಕ್ತರು ಹೇಳಿದ್ದೇನು

ಮಂಗಳೂರು:  ಅಪಾರ್ಟ್​​ಮೆಂಟ್ ಒಂದರಲ್ಲಿ ಪ್ರತಿಷ್ಠಿತ ‌ಕಾಲೇಜಿನ ವಿದ್ಯಾರ್ಥಿಗಳು ರೂಂ ಪಡೆದು ವಿದ್ಯಾರ್ಥಿನಿಗಳೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದ ಅಪಾರ್ಟ್​​ಮೆಂಟ್​ನಲ್ಲಿ ಪ್ರತಿಷ್ಠಿತ ‌ಕಾಲೇಜು ವಿದ್ಯಾರ್ಥಿಗಳು ರೂಂ ಪಡೆದಿದ್ದರು. ಆ ರೂಮ್​ನಲ್ಲಿ ಕೆಲ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ‌ನಡೆದುಕೊಂಡ ಬಗ್ಗೆ ಪರಿಶೀಲಿಸಿ ವಿಡಿಯೋ ಮಾಡಿದ ಹುಡುಗನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ’ ಎಂದಿದ್ದಾರೆ.

    ಉಳಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಯಾರು ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಂಗಳೂರು ‌ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿನಿಯನ್ನ ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆದಿದೆ. ಮಂಗಳೂರು ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್​ಮೆಂಟ್​ನಲ್ಲಿ ಜನವರಿಯಲ್ಲಿಯೇ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಹುಡುಗರು ವಿದ್ಯಾರ್ಥಿನಿಯರನ್ನು ರೂಮ್ ಮಾಡಿ ಕರೆ ತರುತ್ತಿದ್ದರು

ಹುಡುಗರು ಎರಡು ತಿಂಗಳುಗಳ ಕಾಲ ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್​ಮೆಂಟ್​ನ ರೂಮ್ ಮಾಡಿ ನೆಲೆಸಿದ್ದರು. ಈ ವೇಳೆ ಮದ್ಯಪಾನ ಮಾಡುವುದು ಮತ್ತು ಯಾರನ್ನೋ ಕರೆದುಕೊಂಡು ಬರುತ್ತಿರುವುದನ್ನು ತಿಳಿದ ಅಪಾರ್ಟ್​ಮೆಂಟ್ ಮಾಲೀಕರು ಹುಡುಗರನ್ನು ಅಪಾರ್ಟ್​ಮೆಂಟ್​ನಿಂದ ಖಾಲಿ ಮಾಡಿಸಿದ್ದರು” ಎಂದು ಆಯುಕ್ತರು ತೀಳಿಸಿದರು.

ವಿಡಿಯೋ ಲೀಕ್ ಮಾಡಿದ್ದು  ಒರ್ವ ವಿದ್ಯಾರ್ಥಿ

ವಿಡಿಯೋ ಲೀಕ್ ಬಗ್ಗೆ ಮಾತನಾಡಿ, ವಿದ್ಯಾರ್ಥಿಯೊಬ್ಬ ತನ್ನ ತರಗತಿಯ ವಾಟ್ಸಪ್ ಗ್ರೂಪ್​ಗೆ ನೇರವಾಗ ಹಂಚಿಕೊಂಡು ಇದನ್ನು ಸಂಯೋಜಕ ಪ್ರಾಂಶುಪಾಲರಿಗೆ ಮಾಹಿತಿ ತಿಳಿಸಿದ್ದಾನೆ. ಬಳಿಕ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಕರೆಸಿ ಮಾತನಾಡಿದ್ದು, ಆಂತರಿಕ ಶಿಸ್ತು ಪಾಲನಾ ಸಮಿತಿ ಮೂಲಕ ವಿಚಾರಣೆ ನಡೆಸಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವಿಡಿಯೋ ವೈರಲ್ ಪ್ರಕರಣ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ, ವಿಚಾರಣೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ನಕಲಿ ಖಾತೆ ತೆರೆದು ವಿಡಿಯೋ ಅಪ್​ಲೋಡ್ ಮಾಡಲಾಗಿತ್ತು

ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷಕರನ್ನ ಕರೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದಿಲ್ಲ, ದೌರ್ಜನ್ಯ ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು.

ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ

ಈ ಪ್ರಕರಣದಲ್ಲಿ ‌ಮಂಗಳೂರು ನಗರ ಮತ್ತು ಹೊರಗಿನ ವಿದ್ಯಾರ್ಥಿಗಳು ಇದ್ದಾರೆ. ವಿಡಿಯೋದ ಹೊರತಾಗಿ ಯಾರೆಲ್ಲಾ ಇದ್ದರು ಎಂಬುದರ ಬಗ್ಗೆ ‌ತನಿಖೆ ನಡೆಸಲಾಗುವುದು. ಯಾರಾದರೂ ದೂರು ಕೊಟ್ಟರೆ ಅದನ್ನು ಆಧರಿಸಿ ತನಿಖೆ ನಡೆಸಲಾಗುವುದು ಎನ್ನುತ್ತಾ ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದೆಂದು ತಿಳಿಸಿದರು.

2021 ರ ವರ್ಷದಲ್ಲಿ ನಮ್ಮ ದೇಶದ ಪೌರತ್ವ ತ್ಯಜಿಸಿದ ಸಂಖ್ಯೆ 1.63 ಲಕ್ಷ

ನವದೆಹಲಿ; ಕಳೆದ ಒಂದು ವರ್ಷದ ಅವಧಿಯಲ್ಲಿ ಬರೊಬ್ಬರಿ 1,63,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆಇದು ಸಂಸತ್ತಿಗೆ ಕೇಂದ್ರ ಸರಕಾರ ತಿಳಿಸಿದೆ.

    ಭಾರತೀಯ ಪೌರತ್ವ ತ್ಯಜಿಸಿದವರ ಪೈಕಿ ಅರ್ಧದಷ್ಟು ಮಂದಿ ಅಮೆರಿಕದ ಪ್ರಜೆಗಳಾಗಲು ಇಚ್ಛೆಪಟ್ಟಿದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ, 1,63,370 ಭಾರತೀಯರು ತಮ್ಮ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತ್ಯಜಿಸಿದರು.

    ಗೃಹ ಸಚಿವಾಲಯದ ಮಾಹಿತಿ ಪ್ರಕಾರ 2019 ಮತ್ತು 2020 ರಲ್ಲಿ ಕ್ರಮವಾಗಿ 1,44,017 ಮತ್ತು 85,256 ಆಗಿತ್ತು. ಪ್ರಕಾರ 2016ರಲ್ಲಿ 1,44,942 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದರು.

   ಈ ಬಗ್ಗೆ 2015ರ ವರೆಗಿನ ಅಂಕಿ ಅಂಶ ಮಾತ್ರ ಲಭ್ಯವಿದ್ದು, ಸಂಸದ ಹಾಜಿ ಫಜ್ಲುರ್ ರೆಹಮಾನ್ ಅವರ ಪ್ರಶ್ನೆಗೆ ಉತ್ತರಿಸಿ, ಸಚಿವ ನಿತ್ಯಾನಂದ ರೈ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ಎಂ.ಎಲ್.ಎ. ಯಿಂದ ಅಲ್ಲ! ಎಮ್ಮೆಯಿಂದ ಬಸ್ಸು ತಂಗುದಾಣ ಉದ್ಘಾಟನೆ!!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಗ್ರಾಮದಲ್ಲಿ ನಿರ್ಮಾಣವಾದ ಬಸ್‌ ನಿಲ್ದಾಣವನ್ನು ಗ್ರಾಮಸ್ಥರ ಎಮ್ಮೆ ಮೂಲಕ ಉದ್ಘಾಟಿಸಿದ್ದಾರೆ.

ಶಾಸಕ ಮತ್ತು ಸಂಸದರ ಗಮನ ಸೆಳೆಯಲು ಅಲ್ಲಿಯ ಗ್ರಾಮಸ್ಥರೇ ಸೇರಿಕೊಂಡು ತಾತ್ಕಾಲಿಕ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡಿ. ಎಮ್ಮೆಯಿಂದ ರಿಬ್ಬನ್‌ ಕಟ್‌ ಮಾಡಿಸುವ ಮೂಲಕ ಉದ್ವಾಟನೆ ಮಾಡಿದರು.

ದಶಕದ ಹಿಂದೆಯೇ ಬಾಳೆಹೊಸೂರು ಗ್ರಾಮದ ಬಸ್‌ ನಿಲ್ದಾಣ ಬಿದ್ದು ಹೋಗಿತ್ತು. ಈ ಕುರಿತು ಸ್ಥಳೀಯ ಶಾಸಕ ಸಂಸದರಿಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಸೂಕ್ತ ಭರವಸೆ ಸಿಗದ ಕಾರಣ ಗ್ರಾಮಸ್ಥರೇ ಚಪ್ಪರದ ಬಸ್‌ ನಿಲ್ದಾಣ ಮಾಡಿ, ಎಮ್ಮೆಯಿಂದ ಉದ್ರಾಟನೆಯನ್ನು ಮಾಡಿಸಿ ಸಮಾಜತಾಣದಲ್ಲಿ ಮನೆಮಾತಾಗಿದ್ದಾರೆ..

ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್‌ ನಿಲ್ದಾಣ ನಿರ್ಮಾಣವಾಗಿದ್ದು, 10 ವರ್ಷದ ಹಿಂದೆಯೇ ಅದರ ಛಾವಣಿ ಕುಸಿದು ಬಸ್‌ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು.

ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್‌ ಉದಾಸಿ ಅವರಿಗೆ ಬಸ್‌ ನಿಲ್ದಾಣದ ದುರಸ್ತಿ ಬಗ್ಗೆ ಮನವರಿಕೆ ಮಾಡಲಾಗಿದ್ದು, ಮನವಿಯನ್ನೂ ಕೂಡ ಸಲ್ಲಿಸಲಾಗಿತ್ತು ಎಂದು ರೈತ ಮುಖಂಡ ಲೋಕೇಶ್‌ ಜಾಲವಾಡಗಿ ಅವರು ಹೇಳ್ತಾರೆ. ಈ ಕುರಿತು ಸ್ಪಂದನೆ ಸಿಗದ ಕಾರಣ ವಿಶೇಷ ಪ್ರತಿಭಟನ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಆದರೆ ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಇದರ ಬಿಸಿ ಮುಟ್ಟುವುದೊ ಇಲ್ಲವೊ ಎನ್ನುವುದು ಅನಮಾನ !!