HOLY ROSARY CHURCH, KUNDAPUR – 450 th JUBILEE SOUVENIR 2021

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ವಿಶ್ವ ಹಿರಿಯ ನಾಗರಿಕರ ಮತ್ತು ಪೋಷಕರ ದಿನಾಚರಣೆ

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಿಶ್ವ ಹಿರಿಯ ನಾಗರಿಕರ ಮತ್ತು ಪೋಷಕರ ದಿನಾಚರಣೆಯನ್ನು ಉಡುಪಿಯ ಧರ್ಮಗುರು ವಂದನೀಯ ಜೋಕಿಮ್ ಡಿ’ಸೋಜಾ ರವರ ನೇತ್ರತ್ವದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಅನಿತಾ ನಜ್ರೆತ್, ಮೇಬಲ್ ನಜ್ರೆತ್, ರಾಬರ್ಟ್ ರೆಬೆಲ್ಲೋ  ಉಪಸ್ಥಿತರಿದ್ದರು

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಅರ್ಥಪೂರ್ಣವಾದ ಆಟಿಡೊಂಜಿ ದಿನ ಕಾರ್ಯಕ್ರಮ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆದಿತ್ಯವಾರ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ನಂದಳಿಕೆ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಬರೆಪ್ಪಾಡಿ ರಾಮಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ಸಮಾಜಮುಖಿ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲತೆಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಶಿಸ್ತು, ಸದಸ್ಯರ ಬಗ್ಗಟ್ಟು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವ ಶೈಲಿಯಲ್ಲೇ ಗಮನಿಸಬಹುದೆಂದರು.

 ಶಶಿ ಕಿಚನ್ ಯೂಟ್ಯೂಬರ್ ಶಿರ್ವ ಶಶಿಕಲಾ ಕುಲಾಲ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಟಿ ತಿಂಗಳ ವೈಶಿಷ್ಟತೆ, ಈಗಿನ ಫಾಸ್ಟ್‍ಫುಡ್ ಹಾಗೂ ಮೊಬೈಲ್ ಯುಗದ ಈ ಕಾಲದ ಕುರಿತು ತಿಳಿಸಿದರು. ವೇದಿಕೆಯಲ್ಲಿ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಘುವೀರ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್ ಮೊದಲಾದವರಿದ್ದರು.

 ಅಬ್ಬನಡ್ಕ ಶ್ರೀ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಪ್ರಾರ್ಥನೆಗೈದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವರದಿ ವಾಚಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕರಾದ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಅವರು ವಂದಿಸಿದರು. ಪಾಡ್ದನ : ಕಾರ್ಯಕ್ರಮದಲ್ಲಿ ಲೀಲಾ ಜತೊಟ್ಟು, ಅಮಣಿ ಆಚಾರ್ಯ, ಸಂಜೀವಿ ಆಚಾರ್ಯ ಅವರು ತುಳು ಪಾಡ್ದನ ಹಾಡಿದರು. ತುಳು ಗಾದೆಗಳು: ಸಂಘದ ಬಾಲ ಪ್ರತಿಭೆ ನಿಯಾ ಶೆಟ್ಟಿ ಸುಮಾರು 50ಕ್ಕೂ ಅಧಿಕ ತುಳು ಗಾದೆಗಳನ್ನು ಹೇಳಿದರು.

ವಿಶಿಷ್ಟ ಶೈಲಿಯಲ್ಲಿ ವೇದಿಕೆ ಅಲಂಕಾರ:

ವೇದಿಕೆಯಲ್ಲಿ ತೆಂಗಿನಗರಿಯಲ್ಲಿ ಕಟ್ಟಿದ ಸೌತೆಕಾಯಿ, ಹಳೆಯ ಕಾಲದ ಗ್ಯಾಸ್ ಲೈಟ್, ಚೆನ್ನೆಮಣೆ, ಸೇರು-ಪಾವು, ಸಾಂಬಾರ ಮರಯಿ, ಮರದ ಮಣೆಗಳು, ಹಳೆಯ ಕಾಲದ ನಾಣ್ಯಗಳೊಂದಿಗೆ ವರ್ಣರಂಜಿತವಾದ ವೇದಿಕೆಯನ್ನು ಸಂಘದ ಸದಸ್ಯ ಬೋಳ ಕೀರ್ತನ್ ಪೂಜಾರಿ ಅವರು ರಚಿಸಿದ್ದರು. ಸಾಂಸ್ಕøತಿಕ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮ, ಮನೋರಂಜನಾ ಆಟೋಟ ಸ್ಪರ್ಧೆಗಳು ಜರಗಿದವು. ಸಾಂಸ್ಕøತಿಕ ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸದಸ್ಯೆ ಆರತಿ ಕುಮಾರಿ ನಿರೂಪಿಸಿದರು.

ಬಾಯಲ್ಲಿ ನೀರೂರಿಸಿದ ಆಟಿಡೊಂಜಿ ದಿನದ 28 ಬಗೆ ಬಗೆಯ ಖಾದ್ಯಗಳು:

ಪೆಜಕಾಯಿ ಚಟ್ನಿ, ಕುಕ್ಕುದ ಚಟ್ನಿ, ಕುಕ್ಕುದ ಉಪ್ಪಡ್, ಕುಡುತ ಚಟ್ನಿ, ಪುನರೆ ಪುಳಿತ ಚಟ್ನಿ, ತಿಮರೆ ಚಟ್ನಿ, ನುರ್ಗೆ ತೊಪ್ಪು, ತೊಂಜಕ್ ಬೊಲೆದ ಸುಕ್ಕ, ತೆಕ್ಕರೆ ತಲ್ಲಿ, ಉಪ್ಪಡ್ ಪಚ್ಚಿರ್, ಗೆಂಡದಡ್ಡೆ, ಹಪ್ಪಳ, ಸೆಂಡಿಗೆ, ಖಾರ ಮುಂಚಿ, ಉರ್ಪೆಲ್ ನುಪ್ಪು, ಕುಡುತ ಸಾರ್, ರೊಟ್ಟಿ ಪಾಯಸ, ಅರಿತ ಪಾಯಸ, ಜೀರಿಗೆದ ಕಷಾಯ, ಪೋಡಿ, ಬಚ್ಚಿರೆ ಬಜ್ಜೆಯಿ, ಅಲೆ (ಮಜ್ಜಿಗೆ), ಗುಜ್ಜೆದ ಗಟ್ಟಿ, ಗುಜ್ಜೆದ ಮುಲ್ಕ, ಅರೆಪುದ ಪುಂಡಿ, ಪತ್ರೊಡ್ಡೆ, ಚಿಲ್ಮಿ, ಲಡ್ಡುಗಳನ್ನು ತಯಾರು ಮಾಡಲಾಗಿತು.

ನಿತ್ಯಾದರ್ ವಾಡ್ಯಾಂತ್ ವಾಡ್ಯಾಚೆ ಫೆಸ್ತ್ : ವಿಗಾರಾಕ್ , ಮಲ್ಗಡ್ಯಾಂಕ್, ಗುರ್ಕಾರಾಂಕ್ ಸನ್ಮಾನ್

ಕುಂದಾಪುರ್,ಜು.25: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್  ಜುಲಾಯ್ 24 ವೆರ್ ಸಾಂಜೆರ್  ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ.
    ಹ್ಯಾ ಸಂದರ್ಭಿ ವಾಡ್ಯಾಂತ್ ಮಲ್ಗಡ್ಯಾಂಚೊ ದೀಸ್ ಆಚರಣ್ ಕರ್ನ್ ಭೊ|ಮಾ|ಬಾ ಸ್ಟ್ಯಾನಿ ತಾವ್ರೊ  ಹಾಂಕಾಂ ವಾಡ್ಯಾ ತರ್ಫೆನ್ ಸನ್ಮಾನ್ ಕೆಲೊ, ಸಾಂಗಾತಚ್ ವಾಡ್ಯಾಚ್ಯಾ ಮಲ್ಗಡ್ಯಾಂಕ್, ಆನಿ ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಫಿಲಿಪ್ ಡಯಾಸ್, ಸೆಲೆಸ್ಟಿನ್ ಡಿ ಸೋಜಾ ಆನಿ ಪ್ರಸ್ತುತ ಗುರ್ಕಾರ್ನ್ ಎಲಿಜಬೆತ್ ಡಿಸೋಜ್ ಹಾಂಕಾಂ
 ಸನ್ಮಾನ್ ಕೆಲೊ.

   ಜೆಸನ್ ಪಾಯ್ಸ್ ಆನಿ ಫಿಯೋನಾ ಪಾಯ್ಸ್ ಹಾಣಿ ಖೆಳ್ ಪಂದ್ಯಾಟ್ ಚಲವ್ನ್ ವೆಲೆಂ. ಗುರ್ಕಾರ್ನ್ ಎಲಿಜಾಬೆತ್ ಡಿಸೋಜಾನ್ ಸ್ವಾಗತ್ ಮಾಗ್ಲೊ, ಜೂಲಿಯೆಟ್ ಪಾಯ್ಸಾನ್ ಧನ್ಯವಾದ ಪಾಠಯ್ಲೆ. ವಾಡ್ಯಾಚಿ ಪ್ರೇರಕ್ ಡಾ|ಸೋನಿ ಡಿಕೋಸ್ತಾನ್ ಕಾರ್ಯೆ ಚಲವ್ನ್ ವೆಲೆಂ.

St Joseph’s school CBSE organised UJJWALA – BLOOD DONATION DRIVE

‘Bangaluru: Donating blood is an act of humanity’ St Joseph’s School in honour of a yearlong celebration of 500 Years of St Ignatius of Loyola reflecting  the core values, love, service, healing  and integrity organized a blood donation drive, Ujjwala in association with Lions Club and Bajaj Avengers Club on 24th July 2022. The drive was inaugurated by the Rector Rev Fr Joseph D’ Souza SJ and the Principal, Rev Fr Rohan D’ Almedia by handing over a unit of blood to the Lions Blood Bank.

The Rector Rev Fr Joseph D’Souza appreciated the initiative of the blood donation drive as a beautiful thought for others and taking care of our common home our mother earth. The Principal, Rev Fr Rohan D’ Almedia implied to one and all ‘to be men and women for others’ by being a part of the kind gesture.

Following the Jesuit values of being, “Men and women who will live not for themselves but for others our Parents and Volunteers’ came in large numbers to join the effort of saving lives. The drive not only aimed at raising awareness about voluntary blood donations and their role in saving lives and building community solidarity but also in building a  healthy earth as they gave earth balls to all the donors as a token of appreciation to increase green space .

The blood units collected will be preserved in Lions blood bank and dispersed when needed.

The attitude of our donors was favourable in their perception that blood donation would not harm their body.

 The Principal of St. Joseph’s PU College Mr. Vinod Amrithraj felt blessed to be a blessing to others as blood donor and a part of Ujjwala Campaign.

Mr. Sunil Victor appreciated and requested to conduct the blood donation drive every year so as to continue this good work of donating life stream, blood.

Mr. Chandra Bhat, a volunteer feels great to be a blood donor.

Mr. Praveen was glad as a pint of his blood could save three lives and appreciated Fr. Principal for organizing the drive.

ಧ್ವಜ ಸಂಹಿತೆಯಲ್ಲಿ ನೂತನ ಬದಲಾವಣೆ ಈಗ ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಬಹುದು

ನವದೆಹಲಿ: ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ನೂತನ ಬದಲಾವಣೆ ಮಾಡಿದ್ದು, ಅದರ ಅಡಿಯಲ್ಲಿ ಈಗ ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು ಮತ್ತು ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನೂ ಬಳಸಬಹುದಾಗಿದೆ ಎಂದು ತೀಳಿಸಿದೆ.

ಆಗಸ್ಟ್ 13ರಿಂದ 15ರ ವರೆಗೆ ನಡೆಯಲಿರುವ ‘ಹರ್ ಘರ್ ತಿರಂಗ’(ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಸಲುವಾಗಿ,  ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಬದಲಾವಣೆಯಾಗಿರುವ ಧ್ವಜ ಸಂಹಿತೆಯ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ,ಈಗ ಯಂತ್ರದಿಂದ ತಯಾರಿಸಿದ ಧ್ವಜವನ್ನೂ ಹಾರಿಸಬಹುದು, ಹಾಗೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಈಗ ಈ ಕ್ರಮವನ್ನು ಬದಲಿಸಿದ ಕೇಂದ್ರ ಸರಕಾರ ಇನ್ನು ದಿನ 24 ಗಂಟೆಯೂ ಧ್ವಜ ಹಾರಿಸಬಹುದು.

ಗಾಂಜಾ ಗ್ಯಾಂಗನ್ನು ಹಿಡಿಯಲು ಹೋದ ಪೋಲಿಸ್ ವಾಹನ ಭೀಕರ ಅಫಘಾತ ಪಿ.ಎಸ್.ಐ. ಸೇರಿದಂತೆ ಮೂವರ ಸಾವು


ಬೆಂಗಳೂರು: ಬೆಂಗಳೂರಿನ ಶಿವಾಜಿ ನಗರದ ಪೊಲೀಸರು, ಗಾಂಜಾ ಗ್ಯಾಂಗ್‌ ಹಿಡಿಯಲು ಆಂಧ್ರ ಪ್ರದೇಶಕ್ಕೆ ತೆರಳಿದ್ದ ವೇಳೆ ಬೆಂಗಳೂರು ವಾಹನ ಚಿತ್ತೂರಿನ ಬಳಿ ಭೀಕರ ಅಪಘಾತಕ್ಕೀಡಾಗಿದ್ದ ಪರಿಣಾಮ ಮೂವರು ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲೇ ಮೃತದಟ್ಟಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿವೆ.
ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತ ನಡೆದಿದೆ. ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ನಡುವೆ ಈ ಸೇತುವೆ ಬರುತ್ತದೆ. ಪೊಲೀಸ್‌ ಸಿಬ್ಬಂದಿ ಇದ್ದ ಇನ್ನೋವಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಮಾರು 30 ಅಡಿ ದೂರದ ಮತ್ತೊಂದು ರಸ್ತೆಗೆ ಹಾರಿಹೋಗಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವಿಗೀಡಾಗಿಡಾದರು, ಹಾಗೇ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ತೂರು ಜಿಲ್ಲಾ ಮುಖ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೃತರು ಬೆಂಗಳೂರಿನ ಶಿವಾಜಿ ನಗರದ ಪೊಲೀಸರು ಎಂದು ಗುರುತಿಸಲಾಗಿದ್ದು,. ಸಬ್‌ ಇನ್ಸ್‌ಪೆಕ್ಟರ್‌ ಅವಿನಾಶ್‌, ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್‌, ಪೊಲೀಸ್‌ ಕಾನ್ಸ್‌ಟೇಬಲ್‌ ಅನಿಲ್‌ ಸೇರಿ ಆರು ಜನರ ತಂಡವು ಖಾಸಗಿ ಟ್ರಾವಲ್ಸ್‌ ನಿಂದ ಇನ್ನೋವಾವನ್ನುನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್‌ ಹಿಡಿಯಲು ಆಂಧ್ರಕ್ಕೆ ತೆರಳಿದ್ದರು. ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡದಿರುವ ಬಗ್ಗೆ ಮಾಹಿತಿ ಇದೆ.
ಸಬ್‌ ಇನ್ಸ್‌ಪೆಕ್ಟರ್‌ ಅವಿನಾಶ್‌, ಕಾನ್ಸ್‌ಟೇಬಲ್‌ ಅನಿಲ್‌ ಹಾಗೂ ಖಾಸಗಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್‌, ಕಾನ್ಸ್‌ಟೇಬಲ್‌ ಶರಣ ಬಸವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರಿನ ಬಳಿ ಆರೋಪಿಗಳು ಇರುವ ಬಗ್ಗೆ ತಂಡ ಮಾಹಿತಿ ಆಧಾರದಲ್ಲಿ ಅವರನ್ನು ಹಿಡಿಯಲು ಹೋರಟಿದ್ದು, ಆರೋಪಿಗಳು ಚಿತ್ತೂರಿನಲ್ಲಿ ಸಿಗದ ಹಿನ್ನೆಲೆಯಲ್ಲಿ ಹುಡುಕಾಟಕ್ಕಾಗಿ ಇನ್ನೊಂದು ಕಡೆಗೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದಿರುವ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪುಲಿಕೇಶಿನಗರದ ಎಸಿಪಿ ಅಬ್ದುಲ್‌ ಕೂಡ ಘಟನಾ ಸ್ವಳಕ್ಕೆ ತೆರಳಿದ್ದಾರೆ.
ಇತ್ತ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಮೌನ ಮಡುಗಟ್ಟಿದೆ. ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ಆವರಿಸಿದೆ. ಸಹೋದ್ಯೋಗಿಗಳನ್ನು ನೆನೆದು ಪೊಲೀಸ್‌ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ.

ಸ್ವಂತ ಜೋಸೆಫರ ಪ್ರೌಢಶಾಲೆ ಕುಂದಾಪುರ: ವನಮಹೋತ್ಸವ ಆಚರಣೆ

ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಗಿಡವನ್ನು ನೆಡುವ ಮೂಲಕ ವನಮೋತ್ಸವವನ್ನು ಆಚರಿಸಲಾಯಿತು. ಕುಂದಾಪುರ ಪುರಸಭೆಯ ಸದಸ್ಯೆಯಾಗಿರುವ ಶ್ವೇತಾ ಇವರು ಮಾತನಾಡಿ ಗಿಡ ಮರಗಳನ್ನು ಬೆಳೆಸುವುದರಿಂದ ಆರೋಗ್ಯಕರ ವಾತಾವರಣ ಸೃಷ್ಟಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಗಿಡ ಬೆಳೆಸುವ ಉತ್ತಮ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಕಾನ್ವೆಂಟಿನಾ ಸುಪಿರಿಯರ್ ಆಗಿರುವ ಸಿಸ್ಟರ್ ಸಂಗೀತ ಮಾತನಾಡಿ ಗಿಡಗಳನ್ನು ನೆಟ್ಟರೆ ಸಾಲದು ಗಿಡಗಳನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಇವರು ಸ್ವಾಗತಿಸಿದರು. ಶಿಕ್ಷಕಿ ಸೆಲಿನ್ ವಂದಿಸಿದರು. ಶಿಕ್ಷಕಿಯರಾದ ಸರಸ್ವತಿ್ ಮತ್ತು ಸ್ವಾತಿ ಕಾರ್ಯಕ್ರಮಕ್ಕೆ ಸಹಕರಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ


ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಜನವರಿ 13ರಂದು ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆ( ದಿಯಾ ಸಿಸ್ಟಮ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ.
ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ.ಎಸ್),ಎಂಎಸ್ಸಿ, ಎಂಸಿಎ, ಬಿಇ,ಬಿಟೆಕ್ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಆಧಾರ್ ಕಾರ್ಡ್, ಮೂಲ ಅಂಕಪಟ್ಟಿ, ಪದವಿ ಪ್ರಮಾಣ ಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು, 7975230201, 9538156510, 9844813560ಗೆ

ಹಾಗೆ ಕೆಳಗೆ ಕಾಣುವ ಲಿಂಕ್ ಮುಖಾಂತರ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಾಂಶುಪಾಲರು ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಪ್ರಕಟಣೆ ತಿಳಿಸಿರುವರು

https://docs.google.com/forms/d/e/1FAIpQLSd4k21dThApOgqveAqLnnMcP818iqixKplsMxGfmzpy0rRa1g/viewform

ಕೋಲಾರ: ಪಿ ನಂಬರ್, ಕೆರೆ ಒತ್ತುವರಿ ತೆರೆವುಗೊಳಿಸಲು ರಚನೆಯಾದ ವಿಶೇಷ ತಂಡ ನಾಪತ್ತೆ – ಹುಡುಕಿಕೊಡಲು ರೈತ ಸಂಘ ಒತ್ತಾಯ

ಕೋಲಾರ: ಜು.23: ಪಿ ನಂಬರ್, ಕೆರೆ ಒತ್ತುವರಿ ತೆರೆವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಗ್ರಾಮೀಣ ಸೇವೆ ಮಾಡದೆ ನಾಪತ್ತೆಯಾಗಿರುವ ಕಂದಾಯ ಅಧಿಕಾರಿಗಳನ್ನು ಹುಡುಕಿಕೊಡಬೇಕೆಂದು ರೈತ ಸಂಘದಿಂದ ತಹಶೀಲ್ದಾರ್ ನಾಗರಾಜ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರ ಭೂ ರಹಿತ ಬಡವರಿಗೆ ನಮೂನೆ 50,53,57 ರ ಪ್ರಕಾರ ದರಕಾಸ್ತ್ ಕಮಿಟಿ ಮೂಲಕ ನ್ಯಾಯಯುತವಾಗಿ ಮಂಜೂರಾಗಿರುವ ಸಾಗುವಳಿ ಚೀಟಿ ಪಡೆದಿರುವ ರೈತರಿಗೆ ತಲೆನೋವಾಗಿರುವ ಪಿ.ನಂಬರ್ ದುರಸ್ತಿ ಮಾಡಲು ಲಕ್ಷ ಲಕ್ಷ ಲಂಚ ನೀಡಿ ದಲ್ಲಾಳಿಗಳ ಮುಖಾಂತರ ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ನೆರವಾಗಿ ರೈತರು ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ನೂರೊಂದು ನೆಪ ಹೇಳಿ ವರ್ಷಾನುಟ್ಟಲೇ ಇಲಾಖೆಗೆ ಅಲೆದಾಡಿಸುತ್ತಾರೆಂದು ಅವ್ಯವಸ್ಥೆಯ ಬಗ್ಗೆ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ತಹಶೀಲ್ದಾರ್ ರವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಕೆಲಸ ದೇವರ ಕೆಲಸ ತಾಲ್ಲೂಕು ಕಚೇರಿಯಲ್ಲಿ ಕೆಲವು ಕಂದಾಯ ಅಧಿಕಾರಿಗಳ ಕೆಲಸ ರಿಯಲ್ ಎಸ್ಟೇಟ್ ಕೆಲಸವಾಗಿದೆ. ಪ್ರತಿವಾರ ಶಾಸಕರು ರೈತರ ಕುಂದು ಕೊರತೆ ಸಭೆ ಪ್ರಚಾgದ ಸಭೆಯಾಗಿ ಯಾವುದೇ ಸಮಸ್ಯೆ ಬಗೆಹರಿಸದ ಅಧಿಕಾರಿ ವರ್ಗದ ಮೇಲೆ ಕ್ರಮ ಕೈಗೊಳ್ಳದೇ ದಾಖಲೆಗಳಿಗಾಗಿ ಬಡ ರೈತರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುವ ಜೊತೆಗೆ ದಾರಿಗಾಗಿ ಕುಟುಂಬ ಸಮೇತ ಇಲಾಖೆಯ ಮುಂದೆ ಹೋರಾಟ ಮಾಡುವ ಮಟ್ಟಕ್ಕೆ ಹದಗೆಟ್ಟಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರದ ಸಂಬಂಳ ಪಡೆದು ಗ್ರಾಮೀಣ ಸೇವೆ ಮಾಡಬೇಕಾದ ಕಂದಾಯ ಅಧಿಕಾರಿಗಳು ನಗರಕ್ಕೆ ಹೊಂದಿಕೊಂಡು ಜನಸಾಮಾನ್ಯರ ಕೆಲಸಕ್ಕೆ ದಲ್ಲಾಳರನ್ನು ಅವಲಂಭಿಸಬೇಕಾದ ಪರಿಸ್ಥಿತಿ ಇದೆ ಎಂದು ಆರೋಪ ಮಾಡಿದರು.
ಕೆರೆ ರಾಜಕಾಲುವೆ ಒತ್ತುವರಿ ತೆರೆವುಗೊಳಿಸಬೇಕಾದ ಆಯಾ ಹೋಬಳಿಯ ಆರ್.ಐ ವಿ.ಎಗಳೇ ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಠಿ ಮಾಡಿ ಮಾರಾಟ ಮಾಡುವ ದಂದೆಯಲ್ಲಿ ತೊಡಗಿದ್ದಾರೆ. ಒತ್ತುವರಿ ದಾಖಲೆಗಳ ಸಮೇತ ದೂರು ನೀಡಿದರು ಒತ್ತುವರಿ ಆಗಿಲ್ಲ ಎಂದು ವರದಿ ಕೊಡುವ ಅಧಿಕಾರಿಗಳನ್ನು ಮಾನ್ಯ ದಂಡಾಧಿಕಾರಿಗಳು ಅಮಾನತು ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನಾದ್ಯಾಂತ ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ರಾಜಕೀಯ ಒತ್ತಡ ಇರುವ ಒಬ್ಬರಿಗೆ 2-3 ಹೋಬಳಿ ಜವಬ್ದಾರಿ ನೀಡುವುದರಿಂದ ಅಧಿಕಾರಿಗಳ ಮೇಲೆ ಕೆಲಸದ ಒತ್ತಡದ ಜೊತೆಗೆ ಆರೋಗ್ಯ ಹದಗೆಟ್ಟು ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವಂತಾಗುತ್ತದೆ. ಮಾನ್ಯರು ಸರ್ಕಾರಕ್ಕೆ ವರದಿ ನೀಡಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮುಖಾಂತರ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಾಗರಾಜ್ ತಾಲ್ಲೂಕು ಕಚೇರಿಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ, ದಲ್ಲಾಳಿಗಳಿಗೆ ಕಡಿವಾಣ ಹಾಕುವ ಜೊತೆಗೆ ಪಿ ನಂಬರ್ ,ಕೆರೆ ರಾಜಕಾಲುವೆ ಒತ್ತುವರಿ ತೆರೆವುಗೊಳಿಸಲು ಹೆಚ್ಚಿನ ಆಧ್ಯತೆ ನೀಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೋಲಾರ ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲ್ಲೂಕಾದ್ಯಕ್ಷ ಯಲ್ಲಪ್ಪ, ಮರಗಲ್ ಮುನಿಯಪ್ಪ, ಮುದುವಾಡಿ ಚಂದ್ರಪ್ಪ, ನಳಿನಿ.ವಿ, ಮುಂತಾದವರಿದ್ದರು
.