HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತ ಸೇವಾದಳದಿಂದ ರಾಷ್ಟ್ರಧ್ವಜ ಮಾಹಿತಿ “ರಾಷ್ಟ್ರಧ್ವಜ ಮಾಹಿತಿ ಪಠ್ಯವಾಗಲಿ” – ಸದಾನಂದ

ಕೋಲಾರ:- ಭಾರತ ರಾಷ್ಟ್ರಧ್ವಜ ಸಂಹಿತಿ ವಿಚಾರಗಳು ಪಠ್ಯಪುಸ್ತಕದ ವಿಚಾರವಾಗಿ ಮಕ್ಕಳನ್ನು ತಲುಪಬೇಕಾಗಿದೆಯೆಂದು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಎ.ಸದಾನಂದ ಹೇಳಿದರು.
ತಾಲೂಕಿನ ನಡುಪಳ್ಳಿ ಜ್ಞಾನಬೋಧ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರಧ್ವಜ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ವಿವಾದಾತ್ಮಕ ವಿಚಾರಗಳನ್ನು ಪಠ್ಯವಸ್ತುವಾಗಿಸುತ್ತಿರುವ ಬೆಳವಣಿಗೆ ನಡುವೆ ದೇಶದ ಪ್ರತಿ ಪ್ರಜೆಗೂ ಅಗತ್ಯವಿರುವ ರಾಷ್ಟ್ರಧ್ವಜ ಸಂಹಿತೆ ವಿಷಯಗಳು ಪಠ್ಯಗಳಾದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮೇಲೆ ಅಭಿಮಾನ ಪ್ರೀತಿ ಹೆಚ್ಚುವಂತಾಗುತ್ತದೆ, ರಾಷ್ಟ್ರಧ್ವಜಕ್ಕೆ ಅನಗತ್ಯ ಅಪಮಾನವಾಗುವುದು ನಿಲ್ಲುತ್ತದೆಯೆಂದರು.
ಭಾರತ ಸೇವಾದಳವು ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜ ಮಾಹಿತಿ ಶಿಬಿರಗಳ ಸರಣಿ ಅರಂಭಿಸಿರುವುದು ಸ್ವಾಗತಾರ್ಹ, ಈ ಶಿಬಿರ ಪ್ರತಿ ಶಾಲೆಯಲ್ಲಿಯೂ ನಡೆಯುವಂತಾದರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆಯೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ರಾಷ್ಟ್ರಧ್ವಜ ಸಂಹಿತೆ ಕುರಿತು ಮಾಹಿತಿ ನೀಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಸಂದೇಶ ಉತ್ತಮವಾದರೂ, ಆಗಸ್ಟ್ 15 ರ ನಂತರ ತ್ರಿವರ್ಣಧ್ವಜಗಳು ಕಸವಾಗುವುದಂತೆ ಎಚ್ಚರವಹಿಸಿ ಧ್ವಜ ಸಂಹಿತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಭಾರತಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಭಾರತ ಸೇವಾದಳ ಕಾರ್ಯಕ್ರಮದ ಪ್ರಮುಖ ಭಾಗವಾಗಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನಗಳ ಕುರಿತಂತೆ ಮಾಹಿತಿ ಶಿಬಿರಗಳನ್ನು ಸಾರ್ವಜನಿಕರಿಗೆ ಹೆಚ್ಚು ತಲುಪುವಂತೆ ಮಾಡಲಾಗುತ್ತಿದೆಯೆಂದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ರಾಷ್ಟ್ರಧ್ವಜ ಆರೋಹಣ, ಅವರೋಹಣ ಮತ್ತು ಸಂರಕ್ಷಣಾ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ರಾಘವೇಂದ್ರ, ಶಿಕ್ಷಕ ವರ್ಗದವರು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜ ಸಂಹಿತೆ ಮಾಹಿತಿ ಪಡೆದುಕೊಂಡರು.

`ಕೋಲಾರ ಅಂದು-ಇಂದು-ಮುಂದು’ ಕಾರ್ಯಕ್ರಮದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಸನ್ಮಾನ

ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾಜಿ ಯೋಧ ಜಗನ್, ರೈತ ಮುಖಂಡರಾದ ರಾಧಾಕೃಷ್ಣ, ನೆನುಮನಹಳ್ಳಿ ಚಂದ್ರಶೇಖರ್, ಕಾರ್ಮಿಕಮುಖಂಡ ಯಲ್ಲಪ್ಪ, ಮಹಿಳಾ ಮುಖಂಡರಾದ ಅಂಧ್ರಹಳ್ಳಿ ಶಾಂತಮ್ಮ, ಮಂಜುಳಾ ಭೀಮರಾವ್, ಸ್ವಾತಂತ್ರ್ಯ ಹೋರಾಟಗಾರ ಮುನಿಸ್ವಾಮಿ ಅವರ ಪತ್ನಿ ಗೌರಮ್ಮ, ಪೌರ ಕಾರ್ಮಿಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಜಾತಿ,ಹಣ,ಅಧಿಕಾರ ಮುಖ್ಯವಾಗಿ ನೈತಿಕತೆ ಕುಸಿದಿದೆ-ಜಸ್ಟೀಸ್ ಕುಮಾರ್ ವಿಷಾದ, ಅಧಿಕಾರದ ಗುಲಾಮರಾಗದೇ ಮಾನವೀಯ ಸೇವೆಗೆ ಮುಂದಾಗಿ-ಯುವಕರಿಗೆ ಕರೆ

ಕೋಲಾರ:- ಸಮಾಜದ ಎಲ್ಲಾ ರಂಗಗಳಲ್ಲೂ ಹಣ,ಜಾತಿ,ಅಧಿಕಾರ ಮುಖ್ಯವಾಗಿ ನೈತಿಕತೆ ಕುಸಿದಿದೆ,ಯುವಕರು ಅಧಿಕಾರದ ಗುಲಾಮರಾಗಿ ಮಾನವೀಯತೆಯನ್ನು ತುಳಿಯುವ ಮನಸ್ಥಿತಿಯಿಂದ ಹೊರ ಬಂದು ಜನ್ಮ ನೀಡಿದ ಈ ಭೂಮಿಗೆ ಸೇವೆ ಮಾಡುವ ಆಲೋಚನೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಕರೆ ನೀಡಿದರು.
ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ ಕೋಲಾರ ಅಂದು-ಇಂದು-ಮುಂದು' ವಿಶಿಷ್ಟ ಕಾರ್ಯಕ್ರಮದಲ್ಲಿ ನ್ಯಾಯಾಂಗದ ಮಹತ್ವದ ಕುರಿತು ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು. ಯೋಗ್ಯರಿಗೆ ಮತ ನೀಡಿ, ಮತದಾನದ ಹಕ್ಕು ಚಲಾಯಿಸುವ ಸಂಕಲ್ಪ ಮಾಡಿ,ಇದೇ ಪ್ರಜಾಪ್ರಭುತ್ವದ ಸದೃಢತೆಗೆ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟು, ಭಾರತದ ನಾಗರೀಕತೆ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಹಣಕ್ಕಾಗಿ ಮಾಧ್ಯಮ ವಿಷಯ ಸೃಷ್ಟಿಸುತ್ತಿದೆ ನ್ಯಾಯಾಂಗ ನೀಡಿರುವ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಧ್ಯಮ ಇಂದು ಜನರಿಗೆ ವಿಷಯ ತಿಳಿಸುವ ಬದಲಿಗೆ ವಿಷಯವನ್ನು ಸೃಷ್ಟಿಸುತ್ತಿದೆ, ಇಂದು ಹಣಕ್ಕಾಗಿ ಕೆಲಸ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವದ ಏಳಿಕೆಗೆ ಮಾರಕವಾಗಿದೆ ಎಂದು ವಿಷಾದಿಸಿದರು. ಮಾಧ್ಯಮ ಅತಿ ಹೆಚ್ಚು ಶಕ್ತಿಶಾಲಿ ಜನರನ್ನು ಸುಲಭವಾಗಿ ತಲುಪುತ್ತದೆ ಎಂದ ಅವರು, ಸಂವಿಧಾನದ ಆಧಾರಸ್ಥಂಭಗಳಲ್ಲಿ ಪತ್ರಿಕಾರಂಗ ಇರಲಿಲ್ಲ ಆದರೆ ಮಾಧ್ಯಮದ ಮಹತ್ವ ಅರಿತು ನ್ಯಾಯಾಂಗ ಆ ಅವಕಾಶವನ್ನು ನೀಡಿದೆ ಆದರೆ ಇಂದು ದಾರಿ ಬದಲಾಗಿದೆ ಎಂದರು. ಕಾರ್ಯಾಂಗ ಮತ್ತು ಶಾಸಕಾಂಘ ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಅದನ್ನು ನ್ಯಾಯಾಂಗ ಗಮನಿಸುತ್ತಿರಬೇಕು, ಮೂಲಭೂತ ಹಕ್ಕಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದ ಅವರು ನ್ಯಾಯಾಂಗವೂ ಲಕ್ಷ್ಮಣರೇಖೆ ಮೀರುತ್ತಿದೆ ಎಂಬ ಆರೋಪವಿದೆ ಎಂದ ಅವರು ಜನರಿಂದಲೇ ನ್ಯಾಯಾಂಗಕ್ಕೆ ಶಕ್ತಿ ಬಂದಿದೆ ಎಂದರು. ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಶ್ರೀನಿವಾಸಾಚಾರ್ಚುನಾವಣಾ ಆಯೋಗ ಮತ್ತು ಸುಧಾರಣೆಗಳು’ ಕುರಿತು ವಿಷಯ ಮಂಡಿಸಿ, ಇಂದು ಮೌಲ್ಯ ಕಳೆದುಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಅಂಗಗಳ ಬಗ್ಗೆ ಬೀದಿಯಲ್ಲಿ ಮಾತನಾಡುವ ಪರಿಸ್ಥಿತಿ ತಂದಿದ್ದೇವೆ ಎಂದು ವಿಷಾದಿಸಿದರು.
ಆರೋಗ್ಯಕರ ಪ್ರಜಾಪ್ರಭುತ್ವವಾಗಲು ಚುನಾವಣೆಯಲ್ಲಿ ಹಣ,ಜಾತಿ,ಧರ್ಮ ಮುಖ್ಯವಾಗಬಾರದು, ರಾಜಕೀಯ ಪಕ್ಷಗಳು ಅಭ್ಯರ್ಥಿ ಕಣಕ್ಕಿಳಿಸುವಾಗ ಪರಿಶೀಲಿಸಬೇಕು, ಹಣ,ಆಮಿಷಗಳಿಲ್ಲದ ಮತದಾನದ ಹಕ್ಕು ಚಲಾವಣೆಯಾಗಬೇಕು ಎಂದರು.

ರಾಜಕಾರಣಿಗಳು ಸ್ಟೆನೋಗ್ರಾಫರ್‍ಗಳು


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ `ಪತ್ರಿಕಾರಂಗ’ದ ಕುರಿತು ವಿಷಯ ಮಂಡಿಸಿ, ಪತ್ರಿಕಾರಂಗದ ಭೀಷ್ಮ ಡಿವಿಜಿ ಅವರ ತವರೂರಿನಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿ ಎಂದು ತಿಳಿಸಿ, ಇಂದು ಪತ್ರಕರ್ತರು ರಾಜಕಾರಣಿಗಳು, ಅಧಿಕಾರಿಗಳ ಸ್ಟೆನೋಗ್ರಾಫರ್‍ಗಳಂತಾಗಿದ್ದಾರೆ, ಪತ್ರಿಕೋದ್ಯಮದ ಘನತೆ ಉಳಿಸುವ ಜವಾಬ್ದಾರಿ ಪತ್ರಕರ್ತರು ಮತ್ತು ಓದುಗರ ಮೇಲಿದೆ ಎಂದ ಅವರು, ಜನಪರವಾಗಿದ್ದ ಪತ್ರಿಕೋದ್ಯಮ ಇಂದು ಹೊಟ್ಟೆಪಾಡಿನ ಪತ್ರಿಕೋದ್ಯಮವಾಗಿದ್ದು, ಇದು ಬದಲಾಗಬೇಕು ಎಂದರು.
ಕೋಲಾರ ಜಿಲ್ಲೆಯ ಪತ್ರಿಕೋದ್ಯಮ ಜನಪರ,ನೀರಾವರಿ ಹೋರಾಟಗಳಲ್ಲಿಮುಂಚೂಣಿಯಲ್ಲಿದ್ದು, ಡಿವಿಜಿಯವರಿಂದ ಜಿ.ನಾರಾಯಣಸ್ವಾಮಿ, ಕೃಷ್ಣಸ್ವಾಮಿ, ಪ್ರಹ್ಲಾದರಾವ್, ಬಿ.ವಿ.ನರಸಿಂಹಮೂರ್ತಿ ಮತ್ತಿತರರ ನಿಷ್ಕಾಮ ಸೇವೆಗೆ ಸಾಕ್ಷಿಯಾಗಿದೆ, ಆ ಘನತೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಕಾರ್ಯಾಂಗದ ಕುರಿತು ವಿಷಯ ಮಂಡಿಸಿ, ರಸ್ತೆ,ಶಿಕ್ಷಣ,ಕೈಗಾರಿಕೆ,ಕೃಷಿಯಲ್ಲಿ ಸಾಧನೆ ಹೆಮ್ಮೆ ತರುತ್ತದೆ, 75 ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ, ಇತರೆ ರಾಷ್ಟ್ರಗಳ ಅಭಿವೃದ್ದಿಗೆ ಹೋಲಿಸಿದರೆ ನಮ್ಮ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿ, 21 ಮತ್ತು 22ನೇ ಶತಮಾನದ ವೇಗಕ್ಕೆ ಮತ್ತಷ್ಟು ಉತ್ತಮವಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳ ಕುರಿತು ರಾಜ್ಯ ಐಎಫ್‍ಎಸ್ ಅಧಿಕಾರಿ ಆರ್.ಮನೋಜ್ ಆನ್‍ಲೈನ್ ನಲ್ಲಿ ಸಂದೇಶ ನೀಡಿ,ಚುನಾವಣಾ ಆಯೋಗದ ರಚನೆ, ಮತದಾರರ ಜವಾಬ್ದಾರಿ, ರಾಜ್ಯದಲ್ಲಿ ಇರುವ 58179 ಮತಗಟ್ಟೆಗಳು,ದೇಶದಲ್ಲಿ ಈ ಸಂಖ್ಯೆ 10,37848 ಮತಗಟ್ಟೆಗಳು, 95.1 ಕೋಟಿ ಮತದಾರರಿರುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ವಕೀಲ ಅಪ್ಪಾಜಿಗೌಡ, ದಲಿತ ಮುಖಂಡ ವಿಜಯಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜನಸ್ನೇಹಿ ತಂಡದ ಆರ್.ಕಿಶೋರ್‍ಕುಮಾರ್, ಸೀತಿಹೊಸೂರು ಮುರಳಿಗೌಡ, ಬ್ಯಾಂಕ್ ರಾಧಾಕೃಷ್ಣ, ಎಸ್.ಆರ್.ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಅಲ್ತಾಫ್,ಸುನೀಲ್, ಬುಜ್ಜಿ, ಹಾಲು ಮತದ ಗೋವಿಂದರಾಜು, ಜಗನ್ ಮತ್ತಿತರರು ಉಪಸ್ಥಿತರಿದ್ದರು.

ಸುದರ್ಶನ್ ನೇತೃತ್ವದ ಜನಸ್ನೇಹಿ ತಂಡದಿಂದ `ಕೋಲಾರ ಅಂದು-ಇಂದು-ಮುಂದು’ ಶಾಸಕಾಂಗ,ಕಾರ್ಯಾಂಗದ ಸಾಫಲ್ಯತೆ ಕುರಿತು ಆತ್ಮಾವಲೋಕನ ಅಗತ್ಯ-ನ್ಯಾ.ಗೋಪಾಲಗೌಡ

ಕೋಲಾರ:- ಭಾರತದ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಾಸನ ಮಾಡುವಲ್ಲಿ ಶಾಸಕಾಂಗ, ಅದರ ಅನುಷ್ಠಾನದಲ್ಲಿ ಕಾರ್ಯಾಂಗ ಸಫಲವಾಗಿದೆಯೇ ಎಂಬುದರ ಆತ್ಮಾವಲೋಕನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಭಿಪ್ರಾಯಪಟ್ಟರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಕಾರ್ಯಾಂಗದ ಕಾರ್ಯವೈಖರಿ, ಶಾಸಕಾಂಗದ ಜವಾಬ್ದಾರಿ ನಿರ್ವಹಣೆ, ನ್ಯಾಯಾಂಗದ ಜನಪರ ತೀರ್ಪು, ಜನರ ಸ್ಥಿತಿಗತಿಗಳು ಈ ಎಲ್ಲಾ ವಿಷಯಗಳ ಕುರಿತು ಆತ್ಮಾವಲೋಕನ ಅಗತ್ಯವಿದೆ ಮತ್ತು ಸಂವಿಧಾನ ನೀಡಿರುವ ಹಕ್ಕುಗಳು ಜನರಿಗೆ ತಲುಪಿದೆಯೇ ಎಂಬುದರ ಕುರಿತು ಅವಲೋಕನವೂ ಅಗತ್ಯವಿದೆ ಎಂದರು.

ರಾಜಕಾರಣವು ಮಾನವೀಯ ವಿಜ್ಞಾನ


ರಾಜಕಾರಣ,ರಾಜಕೀಯ ಎಂದರೆ ಪಕ್ಷಗಳಿಗೆ ಸೀಮಿತವಲ್ಲ ಅದು ಮಾನವೀಯ ವಿಜ್ಞಾನ ಎಂದ ಅವರು, ಕಟ್ಟಕಡೆ ವ್ಯಕ್ತಿಯಿಂದ ರಾಷ್ಟ್ರಪತಿವರೆಗೂ ಮೂಲಭೂತ ಹಕ್ಕುಗಳಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕನ್ಯಾಯ, ರಾಜಕೀಯ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ ಎಂಬುದರ ಕುರಿತ ವಿಶ್ಲೇಷಣೆ ಅಗತ್ಯವಿದೆ ಎಂದರು.
1947 ರಲ್ಲಿ 39 ಕೋಟಿಯಿದ್ದ ಜನಸಂಖ್ಯೆ ಇಂದು 135 ಕೋಟಿ ಆಗಿದೆ ಇಂತಹ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಎಲ್ಲರಿಗೂ ಸಿಕ್ಕಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಶಾಲೆ,ದೀಪ,ರಸ್ತೆ, ಶಾಲೆ,ಆಸ್ಪತ್ರೆ ನೀಡಿದ್ದೇವೆ ಎಂದರೂ ಇತ್ತೀಚೆಗೆ ಕೋವಿಡ್‍ನಿಂದಾದ ಸಾವುಗಳಿಗೆ ಯಾರು ಹೊಣೆ ಎಂದ ಅವರು, ಆಡಳಿತ ನಡೆಸುವವರನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಅಭಿವೃದ್ದಿಗಾಗಿ ಶಾಸನಗಳಿವೆ ಆದರೆ ಅನುಷ್ಠಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂದು ವಿಷಾದಿಸಿದರು.
ಪ್ರಮಾಣವಚನ ಸ್ವೀಕರಿಸಿ ಜಾತ್ಯಾತೀತ ತತ್ವಗಳಿಗೆ ವಿರುದ್ದವಾಗಿ ನಡೆದುಕೊಳ್ಳುವವರನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಡಬಾರದು ಎಂದ ಅವರು, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಟಾಟಾ ಕಂಪನಿಗೆ ಸಾವಿರ ಎಕರೆ ಜಮೀನು ನೀಡಿದ ಪ್ರಕರಣವನ್ನು ತಾನೇ ನ್ಯಾಯಮೂರ್ತಿಯಾಗಿದ್ದಾಗ ರದ್ದು ಪಡಿಸಿದ್ದೆ ಎಂದು ಸ್ಮರಿಸಿದರು.

ಹೋರಾಟ ಜೀವಂತ ಪ್ರಜಾಪ್ರಭುತ್ವಕ್ಕೆ ಅರ್ಥ


ಮಾಜಿ ಸಭಾಪತಿ ಹಾಗೂ ಜನಸ್ನೇಹಿ ತಂಡದ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿರುವ ವಿ.ಆರ್.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೋರಾಟಗಳು ಜೀವಂತವಾಗಿದ್ದರೆ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು.
ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶ ಮಾತ್ರವಲ್ಲ ಕೋಲಾರದ ಅಭಿವೃದ್ದಿಯ ಕುರಿತು ತಿಳಿದುಕೊಳ್ಳುವ ಪುಟ್ಟ ಹೆಜ್ಜೆ ಈ ಕಾರ್ಯಕ್ರಮವಾಗಿದೆ, ಮನಸ್ಸುಗಳ ಪರಿವರ್ತನೆಯ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಸವಿ ಸಮಾನವಾಗಿ ಹಂಚಿಕೆಯಾಗಬೇಕು ಎಂದರು.
ಜನಪರ,ಮಾನವೀಯ ಹಾಗೂ ಪ್ರಪಂಚದ ಅತಿ ಶ್ರೇಷ್ಠ ಸಂವಿಧಾನವಾªಗಿದೆ ಎಂದ ಅವರು, ಸಂವಿಧಾನ ಅರ್ಥ ಮಾಡಿಕೊಳ್ಳಲು ಮೊದಲು ದೇಶವನ್ನು ಅರ್ಥಮಾಡಿಕೊಳ್ಳಬೇಕು, 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಸಂವಿಧಾನಕ್ಕೆ ಪ್ರೇರಣೆಯಾಗಿದೆ, ಶೋಷಿತರ ಧ್ವನಿಯಾಗುವ ರೀತಿ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದರು.
ಕಾಲಕಾಲಕ್ಕೆ ತಕ್ಕಂತೆ ಸಂವಿಧಾನದಡಿ ಅನೇಕ ತಿದ್ದುಪಡಿ, ಕಾಯಿದೆಗಳು ರೂಪಿತವಾಗಿವೆ, ಅದರಲ್ಲಿ ಅಧಿಕಾರ ವಿಕೇಂದ್ರೀಕರಣ ತಿದ್ದುಪಡಿ, 18 ವರ್ಷಕ್ಕೆ ಮತದಾಹದ ಹಕ್ಕು, ಶೋಷಿತರಿಗೆ ನ್ಯಾಯ ಒದಗಿಸುವ ಎಸ್ಸಿಎಸ್ಟಿ ಆಯೋಗ ರಚನೆ,ಶಿಕ್ಷಣ ಹಕ್ಕು ಕಾಯಿದೆ ಮತ್ತಿತರವನ್ನು ಉದಾಹರಿಸಿದರು.
ಶಿಕ್ಷಣಕ್ಕೂ ಕೋಲಾರ ಜಿಲ್ಲೆ ಉತ್ತಮ ಕೊಡುಗೆ ನೀಡಿದೆ, ಕೆಎಎಎಸ್, ಐಎಎಸ್‍ನಲ್ಲಿ ಜಿಲ್ಲೆಯ ಸಾಧಕರಿಗೆ ಕೊರತೆಯಿಲ್ಲ ಎಂದ ಅವರು, ಇತ್ತೀಚೆಗೆ ಎಸ್ಪಿ ದೇವರಾಜ್ ಅವರು ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಸ್ಥಾಪನೆಯ ಪ್ರಯತ್ನ ಮಾಡಿರುವುದು ಶ್ಲಾಘನೀಯ ಎಂದರು.
ಕೆಸಿ ವ್ಯಾಲಿ,ಎತ್ತಿನಹೊಳೆ,ಯರಗೋಳು ಯೋಜನೆಗಳ ಅನುಷ್ಟಾನದ ಜತೆಗೆ ಪರಿಶಿಷ್ಟರು, ಹಿಂದುಳಿದವರ ಸಾಮಾಜಿಕ,ಆರ್ಥಿಕ ಸುಧಾರಣೆಗೆ ಒತ್ತು ಅಗತ್ಯವಿದೆ, ಸಾಮಾಜಿಕ ಕಲ್ಯಾಣ ಯೋಜನೆಗಳು ರಾಜ್ಯದಲ್ಲಿ ಇರುವುದರಿಂದಲೇ ಇಲ್ಲಿ ನಕ್ಸಲ್ ಸಮಸ್ಯೆ ಕಡಿಮೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅನುಪಸ್ಥಿತಿಯಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಯೋಧ ಜಗನ್, ರೈತ ಮುಖಂಡರಾದ ರಾಧಾಕೃಷ್ಣ, ನೆನುಮನಹಳ್ಳಿ ಚಂದ್ರಶೇಖರ್, ಕಾರ್ಮಿಕಮುಖಂಡ ಯಲ್ಲಪ್ಪ, ಮಹಿಳಾ ಮುಖಂಡರಾದ ಅಂಧ್ರಹಳ್ಳಿ ಶಾಂತಮ್ಮ, ಮಂಜುಳಾ ಭೀಮರಾವ್, ಸ್ವಾತಂತ್ರ್ಯ ಹೋರಾಟಗಾರ ಮುನಿಸ್ವಾಮಿ ಅವರ ಪತ್ನಿ ಗೌರಮ್ಮ, ಪೌರ ಕಾರ್ಮಿಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಜನಸ್ನೇಹಿ ತಂಡದ ಜಯರಾಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ಚೇತಾ ಶಬರೀಷ್,ಉಪಾಧ್ಯಕ್ಷ ಬಿ.ಅಸ್ಲಂ ಪಾಷಾ, ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಸುರೇಶ್, ಜನಸ್ನೇಹಿ ತಂಡದ ಆರ್.ಕಿಶೋರ್‍ಕುಮಾರ್,ರಾಧಾಕೃಷ್ಣ, ಅಲ್ತಾಪ್, ನಾರಾಯಣಪ್ಪ, ಮಂಜುನಾಥ್, ಎಸ್.ಆರ್.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದು, ರಾಜ್‍ಕುಮಾರ್,ಮಂಜುಳಾ ಕಾರ್ಯಕ್ರಮ ನಿರೂಪಿಸಿ, ಕಲಾವಿದ ಜನ್ನಘಟ್ಟ ಕೃಷ್ಣಮುರ್ತಿ ಗಾಯನ, ವಂದೇಮಾತರಂ, ನಾಡಗೀತೆ ನಡೆಸಿಕೊಟ್ಟರು.

ಬಿ ಜೆ ಪಿ ನಂಟಿಗೆ ಇತಿಶ್ರಿ- ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್, ಡಿಸಿಎಂ ಆಗಿ ತೇಜಸ್ವಿ ಯಾದವ್ ಪ್ರಮಾಣ ವಚನ

ನಿತೀಶ್ ಕುಮಾರ್

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಉಪ ಮುಖ್ಯಮಂತ್ರಿಯಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ ಮಾಡಿದರು.

71 ವರ್ಷ ವಯಸ್ಸಿನ ನಿತೀಶ್ ಕುಮಾರ್ ಅವರು 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ರಾಜ್ಯಪಾಲ ಚೌಹಾಣ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಬಿಹಾರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳು, ಜೊತೆಯಾಗುವ ಮೂಲಕ ಹೊಸದೊಂದು ರಾಜಕೀಯ ಅಧ್ಯಾಯ ಆರಂಭವಾಗಿದೆ. ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಎರಡನೇ ಬಾರಿಗೆ ಡಿಸಿಎಂ ಆಗಿದ್ದಾರೆ.

ತೇಜಸ್ವಿ ಯಾದವ್

    ಸಭಾಧ್ಯಕ್ಷರ ಆಯ್ಕೆ ಮತ್ತು ಸಂಪುಟ ವಿಸ್ತರಣೆ ನಂತರ ನಡೆಯಲಿದೆ. ವರದಿಗಳ ಪ್ರಕಾರ, ಮಹಾಮೈತ್ರಿಕೂಟದಲ್ಲಿ ಏಕೈಕ ಅತಿದೊಡ್ಡ ಪಕ್ಷವಾದ ಆರ್ಜೆಡಿಗೆ ಗೃಹ ಮತ್ತು ಸ್ಪೀಕರ್‌ ಸ್ಥಾನಗಳು ಸಿಗುವ ಸಾಧ್ಯತೆಯಿದೆ. ಮಹಾಘಟಬಂಧನ್‌ ನಲ್ಲಿರುವ ಎಲ್ಲಾ ಪಕ್ಷಗಳಿಗೆ ಆದ್ಯತೆ ನೀಡಿ ಸಚಿವ ಸಂಪುಟವನ್ನು ವಿಸ್ತರಿಸುವುದು ಇವರ ಉದ್ದೇಶವಾಗಿದೆ. 14 ಶಾಸಕರನ್ನು ಹೊಂದಿರುವ ಸಿಪಿಐ(ಎಂಎಲ್‌) ಈಗಾಗಲೇ ತಾನು ಸಂಪುಟಕ್ಕೆ ಸೇರುವುದಿಲ್ಲ ಮತ್ತು ಹೊರಗಿನಿಂದ ಸರ್ಕಾರವನ್ನುಬೆಂಬಲಿಸುವುದಾಗಿ ಹೇಳಿದೆ. ತಲಾ ಎರಡು ಪಕ್ಷಗಳನ್ನು ಹೊಂದಿರುವ ಸಿಪಿಎಂ ಮತ್ತು ಸಿಪಿಐನ ವಿಷಯದಲ್ಲೂ ಇದೇ ನಿಲುವಾಗಿದೆ. ವರದಿಗಳ ಪ್ರಕಾರ, ಕಾಂಗ್ರೆಸ್‌ಗೆ. ನಾಲ್ಕು ಸಚಿವ ಸ್ಥಾನಗಳು ಸಿಗುವ ಸಾಧ್ಯತೆಯಿದೆ.

ಕೋಲಾರ:ಪತ್ರಿಕಾಗೋಷ್ಟಿಗೆ ಆಹ್ವಾನ

ಕಲಾವಿದರ ಆಶ್ರಯದ ವಿಶ್ವಕಲಾಧಾಮ ವತಿಯಿಂದ ಕೋಲಾರ, ಕೆ.ಜಿ.ಎಫ್. ಬಂಗಾರಪೇಟೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಕಲಾವಿದರಾದ ಮುನಿಕುಮಾರ್ ಅವರು (ಜೂನಿಯರ್ ರಾಜಕುಮಾರ್) ದಿನಾಂಕ: 10-08-2022 ರಂದು ಬುಧವಾರ ಮಧ್ಯಾಹ್ನ 12-00 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ.

ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಸ್ಪೂರ್ತಿ ಮುರಳೀಧರ್ ಗೆ ಪ್ರಥಮ ಸ್ಥಾನ

ಕೋಲಾರ,ಆ,9: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಎಸ್.ಮುರಳೀಧರ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಮತಿ ವಾಣಿಶ್ರೀ ಎಸ್.ಎನ್ ಅವರ ಹಿರಿಯ ಪುತ್ರಿ ಕುಮಾರಿ ಸ್ಪೂರ್ತಿ ಅವರು ಭಾರತೀಯ ಕಂಪೆನಿ ಸಚಿವರ ಸಂಸ್ಥೆ ಆಯೋಜಿಸಿದ್ದ 21ನೇ ಅಖಿಲ ಭಾರತ ಚರ್ಚಾ ಸ್ಪರ್ಧಾ ಕೂಟದಲ್ಲಿ ರಾಜ್ಯಮಟ್ಟ, ದಕ್ಷಿಣ ಭಾರತ ವಿಭಾಗ ಮಟ್ಟದಲ್ಲಿ ವಿಜೇತರಾಗಿ ಜುಲೈ 30ನೇ ತಾರೀಖು ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಭಾರತವನ್ನು ಪ್ರತಿನಿಧಿಸಿ, “ಇಂಡಿಯಾ ಅಟ್ 75- ಹೆಡಿಂಗ್ ಟುವಡ್ರ್ಸ್ USಆ 5 ಟ್ರಿಲಿಯನ್ ಎಕಾನಮಿ” ವಿಷಯದ ಕುರಿತಾಗಿ ತಮ್ಮ ವಾದ ಮಂಡಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

Fourth Day Novena at Stella Maris Church, Kalmady/ಕಲ್ಮಾಡಿ ಚರ್ಚಿನಲ್ಲಿ ನಾಲ್ಕನೆ ದಿನದ ನೊವೆನಾ ಪ್ರಾರ್ಥನೆ

The Forthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 9th, Tuesday. Rev. Fr Anil D’Souza, Parish Priest ofPerampalli Parish, conducted the novena prayers for the intentions of the Sick.

The Parish Priest of Stella Maris Church, Kalmady Rev. Fr Baptist Menezes, Asst Parish Priest Rev. Fr Roy Lobo, con-celebrated the Mass alongwith Rev. Fr Anil D’Souza.

Feast of Our Lady of Vailankanni, proclamation and dedication of Our Lady of Vailanknni as a diocesan Shrine and the Golden Jubilee Celebration of Stella Maris Church, Kalmady will be celebrated on August 15th, 2022.

ಕಲ್ಮಾಡಿ ಚರ್ಚಿನಲ್ಲಿ ನಾಲ್ಕನೆ ದಿನದ ನೊವೆನಾ ಪ್ರಾರ್ಥನೆ

ಕಲ್ಮಾಡಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ನಾಲ್ಕನೆ ದಿನದ ನೊವೆನಾ ಪ್ರಾರ್ಥನೆಯನ್ನು ಪೆರಂಪಲ್ಲಿ ಚರ್ಚಿನ ಧರ್ಮಗುರುಗಳಾದ ವಂ| ಅನಿಲ್‌ ಡಿʼಸೋಜಾ ಅವರು ವ್ಯಾದಿಷ್ಟರಿಗಾಗಿ ನಡೆಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ|ರೋಯ್ ಲೋಬೊ, ಇವರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಆಗೋಸ್ಟ್15 ರಂದು ಘೋಷಿಸಲಾಗುವುದು ಮತ್ತು ಚರ್ಚಿನ ಸುವರ್ಣ ಮಹೋತ್ಸವನ್ನು ಆಯೋಜಿಸಲಾಗಿದೆ.

ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಶೇಟ್ಟಿಹಳ್ಳಿ ಕೆರೆಯ ಕಾಮಗಾರಿ ವೀಕ್ಷಿಸಿದ ಆಯುಕ್ತೆ ಶಿಲ್ಪಾ ನಾಗ್

ಶ್ರೀನಿವಾಸಪುರ: ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೊಳತೂರು ಪಂಚಾಯಿತಿಯ ಶೇಟ್ಟಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯನ್ನು ವೀಕ್ಷಿಸಿದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ನರೇಗಾ ಆಯುಕ್ತಕರಾದ ಶಿಲ್ಪಾ ನಾಗ್.
ಜಿಲ್ಲಾ ಪಂಚಾಯಿತಿ ಸಭೆಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ತಾಲ್ಲೂಕುಗಳ ಬೇಟಿನೀಡಿದ ನಂತರ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ಕೊಳತೂರು ಗ್ರಾಮ ಪಂಚಾಯಿತಿಗೆ ಒಳಪಡುವ ಶಟ್ಟಿಹಳ್ಳಿ ಗ್ರಾಮದ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೆರೆಯ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿ ಗ್ರಾಮಸ್ಥÀ್ತರು ಮತ್ತು ಗ್ರಾಮ ಪಂಚಾಯಿತಿಯ ಅದ್ಯಕ್ಷ ಸದಸ್ಯರೊಂದಿಗೆ ಕೆರೆಯ ಅಗತ್ಯ ಹಿಂದಿನ ಸ್ವರೂಪ ಮುಂದಿನ ಅನುಕೂಲಗಳ ಬಗ್ಗೆ ವಿಶ್ಲೇಶಿಸಿ ಗ್ರಾಮಸ್ತರು ಸಹಕರಿಸಬೇಕು ಈ ಸದಾವಕಾಶ ಬಳಕೆಮಾಡಿಕೊಳ್ಳುವುದರಿಂದ ಸುತ್ತಮುತ್ತಲ ಕೆರೆಗಳಿಗೆ ನೀರು ಹರಿಯುವುದು ಅಂತರ್ಜಲ ವೃದ್ದಿಯಾಗುವುದು ಹಿಂದಿನ ಕಾಲದ ಗತ ವೈಭವ ಕೆರೆಯ ಸೊಬಗು ಪ್ರಕೃತಿ ಪ್ರಾಣಿ ಪಕ್ಷಿಗಳ ಚಿಲಿ-ಪಿಲಿ ಕಾಣುವುದರ ಜೊತೆಗೆ ಈ ಬಾಗದ ರೈತರ ಬದುಕು ಅಸನಾಗುತ್ತದೆ.
ಸರ್ಕಾರ ಇದಕ್ಕಾಗಿಯೇ ಅಮೃತ ಸರೋವರ ನಾಮಕರಣದಲ್ಲಿ ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ನರೇಗಾ ಯೋಜನೆಯಡಿ ಈ ಕಾಮಗಾರಿ ನಡೆಯುತ್ತಿದ್ದು ತಾಲ್ಲೂಕಿನಲ್ಲಿ ಇದೇರೀತಿ 12 ಕೆರೆಗಳು ಹಲವು ಪಂಚಾಯಿತಿಯ ಹಳ್ಳಿಗಳಲ್ಲಿ ನಡೆಯುತ್ತದೆ ಸಾರ್ವಜನಿಕರು ಸಹಕರಿಸಿ ಕೆರೆ, ರಾಜಕಾಲುವೆಗಳು ಸಂರಕ್ಷಿಸಿಕೊಂಡು ಒಂದುಕೆರೆಯಿಂದ ಮತ್ತೊಂದು ಕೆರೆಗೆ ಕೋಡಿ ಹರಿದು ಹೋಗುವ ನೀರನ್ನು ಸÀಂರಕ್ಷಿಸಿಕೊಳ್ಳಲು ಸಾರ್ವಜನಿಕರು ಹೊತ್ತು ನೀಡಬೇಕು ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಕಾಪಾಡುವುದರ ಜೊತೆಗೆ ನಿಗದಿತಕಾಲಾವದಿಯಲ್ಲಿ ಕೆಲಸವನ್ನು ಪೂರ್ಣ ಮಾಡಬೇಕೆಂದು ತಿಳಿಸಿ ಕೆರೆಯ ಬೌತಿಕ ಚಿತ್ರಣವನ್ನು ಕಂಡು ಅಭಿನಂದಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಓ ಉಕೇಶ್ ಕುಮಾರ್, ಯೋಜನಾ ನಿರ್ದೆಶಕಿ ಶೃತಿ, ಸಹಾಯಕ ಯೋಜನಾ ನಿರ್ದೇಶಕ ಕೃಷ್ಣಪ್ಪ, ಇಓ ಆನಂದ್, ನರೇಗಾ ಎ.ಡಿ ರಾಮಪ್ಪ, ಗ್ರಾಮ ಪಂಚಾಯಿತಿ ಅದ್ಯಕ್ಷ ಶ್ರೀನಿವಾಸ್, ಪಿಡಿಓ ಮೆಹರ್ ತಾಜ್, ನರೇಗಾ ಇಂಜನೀಯರ್ ರುದ್ರಪ್ಪ, ತಾಂತ್ರಿಕ ಇಂಜನೀಯರ್ ರಾಜು, ಸ್ಥಳಿಯರು ಹಾಜರಿದ್ದರು.