HOLY ROSARY CHURCH, KUNDAPUR – 450 th JUBILEE SOUVENIR 2021

St. Joseph’s Indian Primary School Annual day: Spheres of Life with “NAVARASA”/ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೈಮರಿ ಸ್ಕೂಲ್ ವಾರ್ಷಿಕೋತ್ಸವ “ಜೀವನದ ಸುತ್ತ ನವರಸಗಳು”


Banglooru: St. Joseph’s Indian Primary School celebrated annual day on 12 January, 2023, at the school ground. “Spheres of Life with NAVARASA,’ was the theme of the annual day celebration.Mr. N.A. Haris, MLA of Shanthinagar Constituency was the chief guest of the programme. Mr. R. Sampath Kumar, CEO- Pool Masters and Waterscapes Pvt.Ltd. and proud alumnus of St. Joseph’s Indian Institutions, was the guest of honour. Fr. Joseph D’Souza SJ, the Rector of St. Joseph’s Indian Institutions presided over the programme.
The programme began with a prayer dance, which highlighted the unity among all the religions. The chief guest along with other dignitaries lit the lamp. The chief guest and the guest of honour were felicitated for their service towards the humankind.
The chief guest, Mr. N.A. Haris, in his address appreciated the services of Jesuit fathers and the sisters in the field of education. He appreciated the teachers for their sacrifice in shaping the minds of the students. He also spoke of the importance of education in independent India. He said, “India is not really free, until every Indian is educated and our education should make us good human beings, where humanity prevails over all the other divisions.”
The achievers of the academic year were rewarded. It was followed by the annual report by the headmistress. Ms. Mary Usha, the staff co-ordinator proposed the vote of thanks. This was followed by a mind-blowing performances by the little children. The performances were confluence of the nine rasas likeShringara (love), Hasya (laughter), Karuna(sorrow), Raudra (anger), Veera (heroism), Bhayanaka (fear), Bibhatsa (disgust), Adbutha (wonder), Shantha (peace). There were different forms of dances and dramas, which showcased the diverse talents of our students. The programme ended with a grand finale, where the students and staff of the entire school performed on the stage. All the people who attended that annual day enjoyed it. In fact, this was a memorable day.

ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೈಮರಿ ಸ್ಕೂಲ್ ವಾರ್ಷಿಕೋತ್ಸವ “ನವರಸದೊಂದಿಗೆ ಜೀವನದ ಕ್ಷಣಗಳು”

ಸೇಂಟ್ ಜೋಸೆಫ್ ಭಾರತೀಯ ಪ್ರಾಥಮಿಕ ಶಾಲೆಯು 12 ಜನವರಿ 2023 ರಂದು ಶಾಲಾ ಮೈದಾನದಲ್ಲಿ ವಾರ್ಷಿಕ ದಿನವನ್ನು ಆಚರಿಸಿತು. “ನವರಸದೊಂದಿಗೆ ಜೀವನದ ಗೋಳಗಳು” ವಾರ್ಷಿಕ ದಿನಾಚರಣೆಯ ವಿಷಯವಾಗಿತ್ತು. ಶ್ರೀ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹರೀಸ್ ಆಗಮಿಸಿದ್ದರು. ಶ್ರೀ ಆರ್. ಸಂಪತ್ ಕುಮಾರ್, ಸಿಇಒ- ಪೂಲ್ ಮಾಸ್ಟರ್ಸ್ ಮತ್ತು ವಾಟರ್‌ಸ್ಕೇಪ್ಸ್ ಪ್ರೈ.ಲಿ. ಮತ್ತು ಸೇಂಟ್ ಜೋಸೆಫ್ ಭಾರತೀಯ ಸಂಸ್ಥೆಗಳ ಹೆಮ್ಮೆಯ ಹಳೆಯ ವಿದ್ಯಾರ್ಥಿ, ಗೌರವ ಅತಿಥಿಯಾಗಿದ್ದರು. ಫಾ. ಸೈಂಟ್ ಜೋಸೆಫ್ ಭಾರತೀಯ ಸಂಸ್ಥೆಗಳ ರೆಕ್ಟರ್ ಜೋಸೆಫ್ ಡಿಸೋಜ ಎಸ್.ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವು ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭವಾಯಿತು, ಇದು ಎಲ್ಲಾ ಧರ್ಮಗಳ ನಡುವಿನ ಏಕತೆಯನ್ನು ಎತ್ತಿ ತೋರಿಸುತ್ತದೆ. ಮುಖ್ಯ ಅತಿಥಿಗಳು ಹಾಗೂ ಇತರ ಗಣ್ಯರು ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳನ್ನು ಮಾನವಕುಲದ ಸೇವೆಗಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾದ ಶ್ರೀ ಎನ್.ಎ.ಹರೀಸ್ ಅವರು ತಮ್ಮ ಭಾಷಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜೆಸ್ಯೂಟ್ ಪಿತಾಮಹರು ಮತ್ತು ಸಹೋದರಿಯರ ಸೇವೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವಲ್ಲಿ ಶಿಕ್ಷಕರ ತ್ಯಾಗವನ್ನು ಶ್ಲಾಘಿಸಿದರು. ಸ್ವತಂತ್ರ ಭಾರತದಲ್ಲಿ ಶಿಕ್ಷಣದ ಮಹತ್ವದ ಬಗ್ಗೆಯೂ ಮಾತನಾಡಿದರು. ಅವರು ಹೇಳಿದರು, “ಪ್ರತಿಯೊಬ್ಬ ಭಾರತೀಯನು ಶಿಕ್ಷಣ ಪಡೆಯುವವರೆಗೆ ಮತ್ತು ನಮ್ಮ ಶಿಕ್ಷಣವು ನಮ್ಮನ್ನು ಉತ್ತಮ ಮನುಷ್ಯರನ್ನಾಗಿ ಮಾಡುವವರೆಗೆ ಭಾರತವು ನಿಜವಾಗಿಯೂ ಸ್ವತಂತ್ರವಾಗಿಲ್ಲ, ಅಲ್ಲಿ ಎಲ್ಲಾ ವಿಭಾಗಗಳಿಗಿಂತ ಮಾನವೀಯತೆ ಮೇಲುಗೈ ಸಾಧಿಸುತ್ತದೆ.”
ಶೈಕ್ಷಣಿಕ ವರ್ಷದ ಸಾಧಕರನ್ನು ಪುರಸ್ಕರಿಸಲಾಯಿತು. ಅದರ ನಂತರ ಮುಖ್ಯೋಪಾಧ್ಯಾಯರಿಂದ ವಾರ್ಷಿಕ ವರದಿ ನಡೆಯಿತು. ಸಿಬ್ಬಂದಿ ಸಮನ್ವಯಾಧಿಕಾರಿ ಮೇರಿ ಉಷಾ ವಂದಿಸಿದರು. ನಂತರ ಪುಟಾಣಿ ಮಕ್ಕಳಿಂದ ಮನಮುಟ್ಟುವ ಕಾರ್ಯಕ್ರಮಗಳು ಜರುಗಿದವು. ಶೃಂಗಾರ (ಪ್ರೀತಿ), ಹಾಸ್ಯ (ನಗು), ಕರುಣ (ದುಃಖ), ರೌದ್ರ (ಕೋಪ), ವೀರ (ಶೌರ್ಯ), ಭಯನಕ (ಭಯ), ಬಿಭತ್ಸ (ಅಸಹ್ಯ), ಅದ್ಬುತ (ಅದ್ಭುತ), ಶಾಂತ (ಇಂತಹ ಒಂಬತ್ತು ರಸಗಳ ಸಂಗಮವಾಗಿತ್ತು. ಶಾಂತಿ). ವಿವಿಧ ರೀತಿಯ ನೃತ್ಯಗಳು ಮತ್ತು ನಾಟಕಗಳು ನಮ್ಮ ವಿದ್ಯಾರ್ಥಿಗಳ ವೈವಿಧ್ಯಮಯ ಪ್ರತಿಭೆಯನ್ನು ಪ್ರದರ್ಶಿಸಿದವು. ಇಡೀ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ ಅದ್ಧೂರಿ ಮುಕ್ತಾಯದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಆ ವಾರ್ಷಿಕ ದಿನವನ್ನು ಹಾಜರಿದ್ದ ಎಲ್ಲಾ ಜನರು ಆನಂದಿಸಿದರು. ವಾಸ್ತವವಾಗಿ, ಇದು ಸ್ಮರಣೀಯ ದಿನವಾಗಿತ್ತು.

ಭಂಡಾರ್ಕಾರ್ಸ್: ರೆಡ್ ಕ್ರಾಸ್ ಕುಂದಾಪುರ,ಕಾಲೇಜಿನ ಯುಥ್ ರೆಡ್ ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಸಂಯುಕ್ತಾಶ್ರಯದಲ್ಲಿ ರಕ್ತ ದಾನ ಶಿಬಿರ

ಕುಂದಾಪುರ: ಜನವರಿ 18ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕ, ಕಾಲೇಜಿನ ಯುಥ್ ರೆಡ್ ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಇವರ ಸಂಯುಕ್ತಾಶ್ರಯದಲ್ಲಿ ರಕ್ತ ದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಂ ಶೆಟ್ಟಿ, ಸದಸ್ಯರಾದ ಡಾ. ಸೋನಿ ಡಿಕೋಸ್ತಾ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಜಿ.ಎಂ.ಗೊಂಡ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಸತ್ಯನಾರಾಯಣ ರೇಂಜರ್ಸ್ ಮತ್ತು ರೋವರ್ಸ್ ಇದರ ರಿತಿನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು.
ಸುಮಾರು 201ಯುನಿಟ್ ರಕ್ತ ಸಂಗ್ರಹಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ರಕ್ತ ನಿಧಿ ಕೇಂದ್ರಕ್ಕೆ ನೀಡಲಾಯಿತು.

ಬೀಜಾಡಿ ಮಿತ್ರ ಸಂಗಮ:ರಜತ ಮಹೋತ್ಸವದ ಆಮಂತ್ರಣ ಬಿಡುಗಡೆ


ಕೋಟ: ಬೀಜಾಡಿ ಗೋಪಾಡಿ ಮಿತ್ರ ಸಂಗಮದ 25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು ಬೆಳಕಿನ ಸಹಯಾನ ಫೆ. 03ರಿಂದ 05 ತನಕ ನಡೆಯಲಿದ್ದು, ಈ ಪ್ರಯುಕ್ತ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸೋಮವಾರ ಜರಗಿತು.
ಹೋಟೆಲ್ ಉದ್ಯಮಿ, ದಾನಿ ರಾಮಚಂದ್ರ ರಾವ್ ಮೂಡುಗೋಪಾಡಿ ಆಮಂತ್ರಣ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜಾನಕಿ ರಾಮಚಂದ್ರ ರಾವ್, ವೀಣಾಅನೂಪ್ ಕುಮಾರ್, ಮಿತ್ರ ಸಂಗಮದ ಉಪಾಧ್ಯಕ್ಷ ನಾಗರಾಜ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೀಜಾಡಿ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಗೋಪಾಡಿ, ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್, ಸಂಚಾಲಕ ಗಿರೀಶ್ ಕೆ.ಎಸ್, ಸಾಗರದ ಗಣೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಎಐಸಿಸಿ ಕಾರ್ಯದರ್ಶಿ ರೋಜಿ ಎಂ. ಜಾನ್ ಮತ್ತು ಕೆಪಿಸಿಸಿ ಕಾರ್ಯಾದ್ಯಕ್ಷ ಶ್ರೀ ಆರ್ . ದ್ರುವ ನಾರಾಯಣರವರು ಶ್ರೀ. ಕೆ. ಪ್ರತಾಪಚಂದ್ರ ಶೆಟ್ಟಿಯವರ ನಿವಾಸಕ್ಕೆ ಬೇಟಿ

ಎಐಸಿಸಿ ಕಾರ್ಯದರ್ಶಿ ಕೇರಳ ಶಾಸಕ ರೋಜಿ ಎಂ. ಜಾನ್ ಮತ್ತು ಕೆಪಿಸಿಸಿ ಕಾರ್ಯಾದ್ಯಕ್ಷ ಶ್ರೀ ಆರ್ . ದ್ರುವ ನಾರಾಯಣರವರು ಶ್ರೀ. ಕೆ. ಪ್ರತಾಪಚಂದ್ರ ಶೆಟ್ಟಿಯವರ ನಿವಾಸಕ್ಕೆ ಬೇಟಿ ನೀಡಿದರು.

ನಾಯಕರು ಈ ಸಂದರ್ಭದಲ್ಲಿ ಪ್ರಜಾಧ್ವನಿ ಸಮಾವೇಶ ಯಶಸ್ವಿ ಕುರಿತು ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರ ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಾನ್ಮ ಕ್ಕಿ ಹರಿಪ್ರಸಾದ ಶೆಟ್ಟಿ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ ಕಿಣಿ ಬೆಳ್ವೆ , ಹಾಲಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅಶೋಕ ಶೆಟ್ಟಿ ಚೋರಾಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಗೆ ಜೀವನವನ್ನು ಬಲಿಕೊಡದೆ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯಿಂದ ದೇಶದ ಘನತೆ ಗೌರವ ಕಾಪಾಡಿ: ಬಿಆರ್‍ಸಿ ಕೆ.ಸಿ. ವಸಂತ

ಶ್ರೀನಿವಾಸಪುರ 3 : ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಬಿಆರ್‍ಸಿ ಕೆ.ಸಿ. ವಸಂತ ಕರೆ ನೀಡಿದರು.
ಪಟ್ಟಣ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ವಿವಿಧ ಕ್ರೀಡೆಗಳ ಆಯ್ಕೆಗಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಅದರ ಸದುಪಯೋಗ ಪಡೆಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದರೆ, ಆರೋಗ್ಯ ವೃದ್ದಿ ಹಾಗೂ ದೈಹಿಕವಾಗಿ ಸಧೃಡವಾಗಬಹುದು. ಕ್ರೀಡೆಯಲ್ಲಿ ಭಾಗವಹಸಿದರೆ ರಾಜ್ಯ, ರಾಷ್ಟಮಟ್ಟದಲ್ಲಿ ಒಳ್ಳೆಯ ಪ್ರದರ್ಶನವನ್ನು ನೀಡಿದರೆ ನಮ್ಮ ಜಿಲ್ಲೆಗೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರು ತಂದಹಾಗೆ ಎಂದರು. ಅಲ್ಲಿ ನೀಡುವ ಪ್ರಶಸ್ತಿ ಪತ್ರ ಪಡೆದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
ಅಥ್ಲೆಟಿಕ್ ಕೋಚ್ ವೆಂಕಟೇಶ್ ಮಾತನಾಡಿ ಸರ್ಕಾರದಿಂದ ಪ್ರತಿ ವರ್ಷ ಕ್ರೀಡಾ ಶಾಲೆಗಳಿಗೆ ಮತ್ತು ವಸತಿ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ರಾಜ್ಯದ 35 ಜಿಲ್ಲೆಗಳಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 4, 5, 7, 8 ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶವಿರುತ್ತದೆ. ಈ ವರ್ಷ ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸುತ್ತಾರೆ. ಇದನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಪ್ರತಿಭೆ ಗುರ್ತಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನುರಿತ ತರಬೇತಿದಾರರಿಂದ ತರಬೇತಿ ನೀಡಲಾಗುವುದು ಹಾಗೂ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ .ಕೋಲಾರ ಸಹಾಯಕ ನಿರ್ದೇಶಕಿ ಜಿ.ಎಂ. ಶಶಿಕಲಾ, ಫುಟ್ಬಲ್ ಕೋಚ್ ನಾಸೀರ್ ಭಾಷ, ಬಿಇಒ ವ್ಯವಸ್ಥಾಪಕ ರಾಜೇಖರ್ ರೆಡ್ಡಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್ .ವೆಂಕಟಸ್ವಾಮಿ, ಮದನ್, ಬಿಆರ್‍ಪಿ ವೆಂಕಟಚಾಲಪತಿ, ಶಿಕ್ಷಕರಾದ ನಾರಾಯಣಸ್ವಾಮಿ, ಶಿವಣ್ಣ ಇದ್ದರು.

ಆದಿಪರಾಶಕ್ತಿ ದರ್ಶನಕ್ಕೆ ತೆರಳುವ ಭಕ್ತರಿಗೆ, ಕುಟ್ಂಬಕ್ಕೆ ಶಾಂತಿ, ಸಂತೋಷ ನೆಮ್ಮದಿ ಓಂ ಶಕ್ತಿ ತಾಯಿ ಶಕ್ತಿ ನೀಡಲಿ : ಜಿ.ಕೆ. ಶ್ರೀರಾಮರೆಡ್ಡಿ

ಶ್ರೀನಿವಾಸಪುರ:ಶ್ರದ್ದೆ ಭಕ್ತಿಗಳಿಂದ ಪೂಜೆ ಮಾಡುವ ಮೂಲಕ ಮೇಲ್‍ಮರವತ್ತುರ್ ಅದಿಪರಾಶಕ್ತಿಯನ್ನು ನೋಡಲು ಮತ್ತು ಹರಿಕೆ ತೀರಿಸಲು ಹೋಗುವ ಎಲ್ಲಾ ಭಕ್ತರಿಗೆ ಅವರ ಕುಟುಂಬಗಳಿಗೆ ಸುಖ, ಶಾಂತಿ, ಸಂತೋಷ ನೆಮ್ಮದಿ ಜೊತೆಗೆ ಅರ್ಥಿಕವಾಗಿ ಅಭಿವೃದ್ದಿಯಾಗಲು ಓಂ ಶಕ್ತಿ ತಾಯಿ ಶಕ್ತಿ ನೀಡಲಿ ಎಂದು ಸಮಾಜ ಸೇವಕ ಹಾಗೂ ಕಾಂಗ್ರೇಸ್ ಮುಖಂಡ ಜಿ.ಕೆ. ಶ್ರೀರಾಮರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಓಂ ಶಕ್ತಿ ದೇವರ ದರ್ಶನ ಪಡೆಯಲು ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಶ್ರೀರಾಮರೆಡ್ಡಿ ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಮಗಳಿಂದ ಸಾವಿರಾರು ಜನ ಮೇಲ್ ಮರವತ್ತುರ್ ನಲ್ಲಿ ನೆಲಸಿರುವ ಓಂ ಶಕ್ತಿ ದೇವರ ದರ್ಶನಕ್ಕೆ ಸಾಕಷ್ಟು ಜನರು ಹೋಗುತ್ತಿದ್ದು, ಈ ತಾಯಿ ಅವರ ಕೋರಿಕೆಗಳನ್ನು ಈಡೇರಿಸಿ ಒಳ್ಳೆಯದು ಅಗಿದೆ ಎಂದು ಜನ ನಂಬಿದ್ದಾರೆ. ಇನ್ನಷ್ಟು ನಮ್ಮ ಗ್ರಾಮದ ಜನರಿಗೆ ಹಾಗೂ ಸುತ್ತಮುತ್ತಲಿನ ಜನತೆಗೆ ಒಳ್ಳೆಯ ಆರೋಗ್ಯ ಭಾಗ್ಯ, ಮಳೆ ಬೆಳೆ ಚನ್ನಾಗಿ ಆಗಲಿ ಎಂದ ಇವರು ಪ್ರಯಾಣ ಮಾಡುವಾಗ ಯಾತ್ರಸ್ಥಳಗಳಲ್ಲಿ ಓಡಾಡುವಾಗ ಸಾಕಷ್ಟು ಜಾಗೃತವಹಿಸಿ ಮಕ್ಕಳನ್ನು ಕರೆದ್ಯೊವಾಗ ಅವರ ಬಗ್ಗೆ ಗಮನಹರಿಸಬೇಕು ಯಾತ್ರೆ ಹೋಗುವ ಹಾದಿಯಲ್ಲಿ ಸಿಗುವ ಪ್ರವಾಸ ತಾಣಗಳನ್ನು ವಿಕ್ಷಣೆಮಾಡಿ ನಿಮ್ಮಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ಕೇತಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಗೋಪಾಲರೆಡ್ಡಿ, ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ. ರಾಧಾಕೃಷ್ಣಾರೆಡ್ಡಿ. ಪತ್ರಕರ್ತ ಕೆ.ಎಂ. ಸೋಮಶೇಖರ್, ವಿಶ್ವನಾಥರೆಡ್ಡಿ, ಗುರುಸ್ವಾಮಿ ರಮೇಶ್, ಟೈಲರ್ ಶಂಕರಪ್ಪ, ಮನು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಪ್ರಕರಣ : ನೊಂದ ರೈತರಿಗೆ ಪರಿಹಾರ ನೀಡಬೇಕು ಕೆ.ನಾರಾಯಣಗೌಡ ಒತ್ತಾಯ

ಕೋಲಾರ; ಜ.17: ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಮಾಡಿರುವ ಯುನಿಜೆನ್ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ರೈತನ ಪ್ರತಿ ಎಕರೆಗೆ 3 ಲಕ್ಷರೂ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ನೊಂದ ರೈತ ಪರವಾಗಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಕೋಲಾರ ತಾಲೂಕು ಹೋಳೂರು ಹೋಬಳಿ ಕಮ್ಮಸಂದ್ರ ಗ್ರಾಮದ 3 ಎಕರೆ ಜಮೀನಿನಲ್ಲಿ ಬೆಳೆದಿರುವ ಯುನಿಜೆನ್ ಕಂಪನಿಯ ನರ್ಗೀಸ್ ತಳಿಯ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 2 ವರ್ಷ ಕೊರೊನಾ, ಮತ್ತೆರೆಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದರೂ ಛಲ ಬಿಡದ ರೈತ ಕಮ್ಮಸಂದ್ರ ವೆಂಕಟರಾಮೇಗೌಡ 3 ಎಕರೆ ಜಮೀನಿನಲ್ಲಿ 4 ಲಕ್ಷ ಖಾಸಗಿ ಸಾಲ ಮಾಡಿ ಬೆಳೆದಿರುವಂತಹ ಕಲ್ಲಂಗಡಿ ಸಮೃದ್ಧವಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ತನ್ನ ಕಷ್ಟ ತೀರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಕಂಪನಿಯ ಕಳಪೆ ಬಿತ್ತನೆಬೀಜದಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕಂಪನಿಯ ಮೋಸದಾಟಕ್ಕೆ ರೈತನ ಶ್ರಮ ವ್ಯರ್ಥವಾಗಿದೆ ಎಂದು ನಕಲಿ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
40% ಕಮೀಷನ್ ಆರೋಪ ಮಾಡಿದ್ದಕ್ಕೆ ಗುತ್ತಿಗೆದಾರರ ಮೇಲೆ ಮಾನ ನಷ್ಟ ಮೊಕದ್ದಮ್ಮೆ ಕೇಸು ದಾಖಲಿಸುವ ಜಿಲ್ಲಾ ಉಸ್ತುವಾರಿ ಹಾಗೂ ತೋಟಗಾರಿಕೆ ಸಚಿವರೇ ನಕಲಿ ಬಿತ್ತನೆಬೀಜ, ಔಷಧಿಗಳು ಮಾರಾಟ ಮಾಡುವ ಮುಖಾಂತರ ರೈತರ ಮರಣಶಾಸನ ಬರೆಯುತ್ತಿರುವ ಕಂಪನಿಗಳ ವಿರುದ್ಧ ಧ್ವನಿ ಎತ್ತದ ಹಾಗೂ ನೊಂದ ರೈತರ ಪರ ನಿಲ್ಲದ ತಮ್ಮ ವಿರುದ್ಧ ಯಾವ ಕೇಸು ದಾಖಲಿಸಬೇಕೆಂದು ಪ್ರಶ್ನೆ ಮಾಡಿದರು.
ನೊಂದ ರೈತ ಕಮ್ಮಸಂದ್ರ ವೆಂಕಟರಾಮೇಗೌಡ ಮಾತನಾಡಿ, ಯುನಿಜೆನ್ ಕಂಪನಿಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಉತ್ತಮ ಗುಣಮಟ್ಟದ ನರ್ಗೀಸ್ ತಳಿಯ ಕಲ್ಲಂಗಡಿ ನಾಟಿ ಮಾಡು ಉತ್ತಮ ಇಳುವರಿ ಬರುತ್ತದೆ ಎಂದು 15 ಪಾಕೆಟ್ ಬಿತ್ತನೆ ಬೀಜ ನೀಡಿದ್ದರು. ಆ ನಂತರ ತಿಪ್ಪೆ ಗೊಬ್ಬರ ಸೇರಿದಂತೆ ಭೂಮಿಯಲ್ಲಿ ಫಲವತ್ತತೆ ಮಾಡಿ ಪೇಪರ್ ಅಳವಡಿಸಿ ಸುಮಾರು 4 ಲಕ್ಷರೂ ಖರ್ಚು ಮಾಡಿಬೆಳೆದಿರುವ ಕಲ್ಲಂಗಡಿ ಉತ್ತಮ ಬೆಳೆ ಬಂದಿದೆ.
ಆದರೆ ಪ್ರತಿ ಕೆಜಿಗೆ 10 ರೂಪಾಯಿಯಂತೆ ವ್ಯಾಪಾರಸ್ಥರಿಗೆ ನೀಡಿ ವ್ಯಾಪಾರಸ್ಥರು ಬಂದು ಕಾಯಿಯನ್ನು ಕೊಯ್ದಾಗ ಒಳಗಡೆ ಸಂಪೂರ್ಣವಾಗಿ ಬಿಳಿ ಬಣ್ಣದ ಗೆಣಸು ರೀತಿಯಲ್ಲಿ ಹಣ್ಣಾಗಿರುವುದರಿಂದ ಅದನ್ನು ನೋಡಿದ ವ್ಯಾಪಾರಸ್ಥ ಇದು ಮಾರುಕಟ್ಟೆಯಲ್ಲಿ ಮಾರಾಟವಗುವುದಿಲ್ಲ. ನನಗೆ ಬೇಡ ಎಂದು 3 ಎಕರೆಯ 80 ಟನ್ ಫಸಲನ್ನು ತೋಟದಲ್ಲಿಯೇ ನಿರಾಕಸಿರುವುದರಿಂದ ಇದನ್ನೇ ನಂಬಿ ಖಾಸಗಿ ಸಾಲ ಮಾಡಿ ಹಾಕಿದ ಬಂಡವಾಳ ಕೈಗೆ ಬರದೆ ನಷ್ಟದ ಹಾದಿಗೆ ಕಾರಣವಾಗಿರುವ ನಕಲಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಕಂಪನಿಯವರನ್ನು ಸಂಪರ್ಕ ಮಾಡಿದರೆ ಕಳೆದ ವರ್ಷವೇ ಈ ತಳಿಯನ್ನು ಬ್ಯಾನ್ ಮಾಡಿದ್ದೇವೆ. ನಿಮಗೆ ಮೋಸ ಮಾಡಿ ನೀಡಿದ್ದಾರೆ. ನಿಮ್ಮ ಬಳಿ ದಾಖಲೆಗಳಿದ್ದರೆ ಕಾನೂನು ಸಮರ ಮಾಡಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇನ್ನು ಅಧಿಕಾರಿಗಳನ್ನು ಕೇಳಿದರೆ ತೋಟ ಬಂದು ಪರಿಶೀಲನೆ ಮಾಡಿ, ಧಾರವಾಡದ ವಿಜ್ಞಾನಿಗಳನ್ನು ಕರೆಯಿಸಿ, ಪರಿಶೀಲನೆ ಮಾಡುತ್ತೇವೆಂದು ಪ್ರತಿಬಾರಿ ಜಿಲ್ಲೆಯ ರೈತರು ಕಳಪೆ ಬಿತ್ತನೆ ಬೀಜ, ರಸಗೊಬ್ಬರದಿಂದ ನಷ್ಟವಾದಾಗ ಇದೇ ಉತ್ತರ ನೀಡುವುದರಿಂದ ನಕಲಿ ಕಂಪನಿಗಳಿಗೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಕಳಪೆ ಬಿತ್ತನೆ ಬೀಜ ನೀಡಿರುವ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟ ಪರಿಹಾರ ನೀಡದೇ ಇದ್ದರೆ ಕಳಪೆ ಕಲ್ಲಂಗಡಿ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗುರು, ವೇಣು, ನವೀನ್, ಯಾರಂಘಟ್ಟ ಗಿರೀಶ್, ನೊಂದ ರೈತ ಮಹಿಳೆಯರು ಮುಂತಾದವರಿದ್ದರು.

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೆ ಮ್ರತ್ಯು

ಬ್ರಹ್ಮಾವರ: ನಿನ್ನೆ ಸಂಜೆ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮ್ರತಪಟ್ಟ ದುರ್ಘಟನೆ  ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ವೊಂದರ ಬಳಿ ನಡೆದಿದೆ.

ಶಿವಮೊಗ್ಗ ನಿವಾಸಿ ಸಮಿತ್ ಕುಮಾರ್(19) ಹಾಗೂ ಸಾಲಿಗ್ರಾಂ ಚಿತ್ರಪಾಡಿ ನಿವಾಸಿ ವಾಗೀಶ್(19) ಮೃತರೆಂದು ಗುರುತು ಹಿಡಿಯಲಾಗಿದೆ..

 ಇವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರು ಕಾಲೇಜು ಮುಗಿಸಿ ರಾತ್ರಿ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಬೈಕ್ ಲಾರಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಮಲ ವಿ ಪೈ ವಿಶ್ವ ಕೊಂಕಣಿ ಪುರಸ್ಕಾರ ಪ್ರಕಟ

ಡಾ| ಜಯಂತಿ ವಲ್ಲಿ ಕ್ವಾಡ್ರಸ್‌ ಮಾಣಿಕ್ ರಾವ್‌ ಗವಣೇಕರ್‌

ಮಂಗಳೂರು: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖೀಲ ಭಾರತ ಮಟ್ಟದ ಕೊಂಕಣಿ ಸಾಹಿತ್ಯ ಪ್ರಶಸ್ತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ-2021, ವಿಮಲಾ ವಿ. ಪೈ ವಿಶ್ವ ಕೊಂಕಣೆ ಕವಿತಾ ಕೃತಿ:
ಪುರಸ್ಕಾರ-2021 ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ-2022ಗಳನ್ನು ಪ್ರಕಟಿಸಲಾಗಿದೆ.

ವರ್ಷದ ಅತ್ಯುತ್ತಮ ಸಾಹಿತ್ಯ ಪುರಸ್ಕಾರ 2022ಕ್ಕೆ ಗೋವಾದ ಡಾ| ಜಯಂತಿ ನಾಯ್ಕ ರಚಿಸಿದ ಕೊಂಕಣಿ ದೀರ್ಥ ಕತೆಗಳ ಸಂಕಲನ ತಿಚಿ ಕಾಣಿ (ಅವಳ ಕತೆ), ವರ್ಷದ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ, ಮುಂಬಯಿಯ ವಲ್ಲಿ ಕ್ವಾಡ್ರಸ್‌ ಅವರ
ಕವಿತಾ ಸಂಕಲನ ಭಿತರಲೊ ಕವಿ (ಆಂತರ್ಯದ ಕವಿ) ಆಯ್ಕೆಯಾಗಿವೆ. ಜೀವನ ಸಿದ್ಧಿ ಸಮ್ಮಾನ 2022ಕ್ಕೆ ಹಿರಿಯ ಕೊಂಕಣಿ ಮುಂದಾಳು ಮಾಣಿಕ್ ರಾವ್‌ ಗವಣೇಕರ್‌ ಅವರನ್ನು ಕೊಂಕಣಿ ಭಾಷೆ, ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಹರಿಗಣಿಸಿ.
ಆಯ್ಕೆ ಮಾಡಲಾಗಿದೆ. 1 ಲಕ್ಷ ರೂ. ಸಮ್ಮಾನ ಧನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುವ ಈ ಪ್ರಶಸ್ತಿಗಳನ್ನು ದಾನಿ ಟಿ.ವಿ. ಮೋಹನದಾಸ ಪೈ ಅವರು ತಾಯಿ ವಿಮಲಾ ವಿ. ಹೈ ಅವರ ಹೆಸರಿನಲ್ಲಿ ಪ್ರಾಯೋಜಿಸಿದ್ದಾರೆ.

ಫೆಬ್ರವರಿ 9ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿಗಳನ್ನು ಎರಡು ಸ್ತರದ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗಿದ್ದು, ಪ್ರಾಥಮಿಕಸ್ತರದ ಆಯ್ಕೆ ಮಂಡಳಿಯ 16 ಸದಸ್ಯರ ನಾಮನಿರ್ದೇಶನದ ಆಧಾರದಲ್ಲಿ 5 ಸದಸ್ಯರ ಪರಿವೀಕ್ಷಕ ಮಂಡಳಿಯು ಅಂತಿಮ ಆಯ್ಕೆ ನಡೆಸುತ್ತದೆ.

2022ನೇ ಸಾಲಿನ ಪರಿವೀಕ್ಷಕ ಮಂಡಳಿಯಲ್ಲಿ ಉದಯ ಭಂಬ್ರೆ, ಡಾ| ಕಿರಣ್‌ ಬುಡುಗಳೆ, ಪಯ್ಯನೂರು ರಮೇಶ ಪೈ, ಮೆಲ್ವಿನ್‌ ರಾಡ್ರಿಗಸ್‌, ಗೋಕುಲದಾಸ ಪ್ರಭು ಸದಸ್ಯರಾಗಿದ್ದಾರೆ. 1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ
ಅವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್‌ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗಗಾಗಿ.
ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.