HOLY ROSARY CHURCH, KUNDAPUR – 450 th JUBILEE SOUVENIR 2021

Silver Jubilee Celebrations at Congregational level in Bethany Convent, Bendur, Mangalore

I will give thanks to the Lord with my whole heart (Ps 111:1).

The hearts of our sixteen Silver Jubilarians from around the globe reverberate with gratitude on their Quadra-centennial journey of religious life for the unique call given to them to voyage through the consecrated life by the boat called “the Sisters of the Little Flower of Bethany”.

The preparation for this great day began with a months’ renewal programme at Bethany Convent, Mangalore and Prabodhana, Mysore. 

The Silver Jubilee celebration of Religious Profession was held on the 8 May 2023 at Bethany Convent, Bendur, Mangalore. The Eucharistic celebration was officiated by Most Rev Dr Aloysius Paul D Souza Bishop Emeritus, Diocese of Mangalore and concelebrated by many priests from the families of our Jubilarians. 

Bishop Emeritus in his homily enumerated the fidelity of God towards the Jubilarians and their response through their selfless services and staunch commitment to God. 

After the Eucharistic celebration, a felicitation programme was organised in honour of the Jubilarians. The entry of Jubilarians along with the dignitaries was solemnized with dance and seven symbols of welcome. Sr Mariette, the General Councillor and the Coordinator for Silver Jubilee Programme accorded welcome to the gathering. 

The Citation of each sister was read out which gave an overall details about the Jubilarians to the gathering. An enthralling greeting song was sung by the Sisters of the Bethany Mother House as the Jubilarians carved the jubilee cake.

Rev Sr Rose Celine, the Superior General congratulated each Sister with much affection and appreciation. She brought home the message that our call to religious life is precious and therefore one needs to cling on to God who has called us to this way of life. 

The Jubilarians proposed the vote of thanks Sr Rose Celine, the Superior General and all her team members for the opportunity provided to renew themselves to deepen their spiritual journey and for all the arrangement made to make their day a wonderful one. Special gratitude was expressed to Sr Mariette, the programme coordinator for meticulously planning and executing the entire Silver jubilee renewal and felicitation programme. The programme was anchored by Sr Eulalia BS and Sr Sheetal BS.

Sr Mary Theresa belonging to the congregation of the Franciscan Servants of Mary (FSM)

Expired :Sr Mary Theresa (90) Nazareth convent, Balmatta.Funeral service is on Thursday (11.5.23) at 10.30 am in our Lady of miracles church milagres Mangalore.May  the Gracious Lord reward her with eternal peace for her commitment to him and the People of God. Parish Priest , Milagres, Mangalore.

She has served as a kindergarten teacher at Nazareth Kindergarten and St Joseph’s kindergarten Karwar. Superior of Nazareth convent Balmatta, St Joseph’s convent Karwar, St Paul’s convent Vittla and Assisi Nivas Nainadu.

ಎಂಐಟಿಕೆ ಸ್ಕಿಲ್-ಎ-ಥೈನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ವಿದ್ಯಾರ್ಥಿಗಳ ತಂಡವು ಯು ಐ ಪಾಥ್ ರವರು ನಡೆಸಿದ ಸ್ಕಿಲ್-ಎ-ಥೋನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ಆರನೇಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯು ‘ರೊಬೋಟಿಕ್ ಯಾಂತ್ರೀಕರಣ ಪ್ರಕ್ರೀಯೆ ಪೌರv’À್ವದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳನ್ನು ಗುರುತಿಸುವ ಗುರಿಹೊಂದಿದೆ. ಎಂಐಟಿ ಕುಂದಾಪುರ ತಂಡ 200 ಬಾಟ್‍ಗಳನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಜಯಗಳಿಸಿದೆ. ಸ್ಕಿಲ್-ಎ-ಥಾನ್ 2022 ಸ್ಪರ್ಧೆಯು ನಾಗರಿಕ ಡೆವೆಲಪರ್‍ರನ್ನು ಸೃಷ್ಟಿಸಿ, ಡಿಜಿಟಲ್ ಸಹಾಯಕರಾಗಿ ಸಾಮಾನ್ಯ ರೋಬೋಟಗಳ ಸಾಮಥ್ರ್ಯವನ್ನು ತಿಳಿಯುವುದಾಗಿದೆ. ಮೊದಲನೇ ಹಾಗೂ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ಹಾಗೂ ಉಪಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜರವರು ಐ ಸಿ ಟಿ ಅಕಾಡೆಮಿಯ ಶ್ರೀ ವಿಘ್ನೇಶ ಶೆಟ್ಟಿಯವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಅದ್ಯಾಪಕರಾದ ಪ್ರೊ. ಅಮೃತಮಾಲಾ, ಪ್ರೊ. ಅಕ್ಷತಾ, ಪ್ರೊ. ಮನೋಜ್ ಕುಮಾರ್ ಮತ್ತು ಎರಡನೇ ವರ್ಷದ ಎಐ ಆಂಡ್ ಎಂಎಲ್ ವಿಭಾಗದ ವಿದ್ಯಾರ್ಥಿಗಳಾದ ಸಿ ಬಿ ಸಭಾಸ್ಟಿನ್ ಮತ್ತು ಮೇಘನಾ ಈ ಸ್ಪರ್ಧೆಗೆ ಸಹಕರಿಸಿದ್ದರು.

ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆ :ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಘಟಕದಿಂದ ವಿವಿಧೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೆಡ್ ಕ್ರಾಸ್ ದಿನಾಚರಣೆಯ ಒಂದನೇ ಕಾರ್ಯಕ್ರಮ

ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಎದುರು ಆಯೋಜಿಸಲಾಯಿತು. ಸರ್ಜನ್ ಆಸ್ಪತ್ರೆಯ MD ಡಾ. ವಿಶ್ವೇಶ್ವರಯ್ಯ ಇದನ್ನು ಉದ್ಗಾಟಿಸಿ ಶುಭ ಹಾರಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. 104 ಮಂದಿ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು. ಕಾರ್ಯಕ್ರಮ ದಲ್ಲಿ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಎ. ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಎನ್ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಎರಡನೇ ಕಾರ್ಯಕ್ರಮ

ಹಟ್ಟಿಯಂಗಡಿಯ ನಮ್ಮ ಭೂಮಿಗೆ ಉಚಿತ ಸೆನಿಟರಿ ಪೇಡ್, ನೋವಿನ ಸ್ಪ್ರೆ ಮತ್ತು ಕ್ರೀಮ್, ಬೇಂಡೇಜ್, ಓಕ್ಸಿ ಮೀಟರ್ ಇತ್ಯಾದಿ ಸುಮಾರು ಹದಿನೈದು ಸಾವಿರ ರೂಪಾಯಿ ಬೆಲೆಯ ವಸ್ತುಗಳ ಸರಬರಾಜು ಮಾಡಲಾಯಿತು. ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ:- ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ

ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

‘ಮತದಾನ ನಮ್ಮ ಹಕ್ಕು’ಜನಜಾಗೃತಿಯಗಾಗಿ ಮರಳು ಶಿಲ್ಪಾಕೃತಿ

ಮೇ 10 ರಂದು ನಡೆಯುವರಾಜ್ಯ ವಿಧಾನ ಸಭಾಕ್ಷೇತ್ರದಚುನಾವಣೆಯ ಅಂಗವಾಗಿ ಸದೃಢರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ: ಸದೃಢರಾಜ್ಯಕ್ಕಾಗಿ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆಜನಜಾಗೃತಿಯನ್ನು ಮೂಡಿಸಿದ ಮರಳು ಶಿಲ್ಪ.

ಅಳತೆ:- 4.5 ಅಡಿ ಎತ್ತರ ಮತ್ತು 6 ಅಡಿ ಅಗಲ

ಕಲಾವಿದರು:-
‘ಸ್ಯಾಂಡ್‍ಥೀಂ’ ಉಡುಪಿ ತಂಡದಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ

ಸ್ಥಳ:- ಮಲ್ಪೆಕಡಲ ತೀರ, ‘ಸ್ಯಾಂಡ್‍ಥೀಂ’ ಉಡುಪಿ:   9611495199

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಸತತ 6 ವರ್ಷಗಳಿಂದ 100% ಫಲಿತಾಂಶ

617 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ಕಲ್ಯಾಣ್ ಬಸವರಾಜ ಲಗಳೂರು

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ ಸತತ 6 ವರ್ಷಗಳಿಂದ 100% ಫಲಿತಾಂಶ
ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 6ನೇ ವರ್ಷವೂ ಕೂಡ 100% ಫಲಿತಾಂಶ ದಾಖಲಿಸಿದ್ದು 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ್ ಬಸವರಾಜ ಲಗಳೂರು 617 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಫಾತಿಮಾತುಲ್ ಹನ್ನತ್ 599 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ, ಚಿನ್ಮಯ ಎಸ್ ಪೈ 595 ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರದಾನ ಧರ್ಮ ಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿಸೋಜ ಎ ಸಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳು

ಫಾ|ಸ್ಟ್ಯಾನಿ ತಾವ್ರೊ ಇವರ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮ್ರೋತ್ಸವದ ಸಂಭ್ರಮ – ಜನರ ಪ್ರೀತಿಯ ಮಹಾಪೂರ


ಕುಂದಾಪುರ, ಮೇ.8: 452 ವರ್ಷ ಪುರಾತನವಾದ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಅವರ ಈ ವರ್ಷ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವ ಕೆಲವೇ ತಿಂಗಳ ಅಂತರದಲ್ಲಿ ಬಂದಿರುವುದು, ಬಹು ಅಪರೂಪವಾಗಿದ್ದರಿಂದ ಮೇ 10 ರಂದು ಅವರಿಗೆ (ಯಾಜಕೀ ದೀಕ್ಷೆ ಪಡೆದ ದಿನ, ಅಗಸ್ಟ್ 20 ಜನ್ಮದಿನ) ವಾಗಿದ್ದು, ರೋಜರಿ ಮಾತಾ ಭಕ್ತರು ಈ ಸಂಭ್ರವನ್ನು ಒಟ್ಟಾಗಿ ಆಚರಿಸುವ ನಿರ್ಣಯವನ್ನು ಮಾಡಿ ಮೇ 7 ಭಾನುವಾರದಂದು ಸಡಗರ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಈ ಸಂಭ್ರವನ್ನು ಫಾ|ಸ್ಟ್ಯಾನಿ ಅವರು ಸುಮಾರು 70 ಧರ್ಮಗುರುಗಳ ಜೊತೆ ದಿವ್ಯ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಆಚರಿಸಿದರು.
ಉಡುಪಿ ಶೋಕಮಾತ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಚಾಲ್ರ್ಸ್ ಮಿನೆಜೆಸ್ ದೇವರ ವಾಕ್ಯವನ್ನು ಮುರಿದು “ಯಜಕನನ್ನು ದೇವರು ಜನರ ಮಧ್ಯದಿಂದ ಆರಿಸಿಕೊಳ್ಳುತಾನೆ, ಆರಿಸುವುದು ಆ ದೇವರು, ಅದೊಂದು ದೇವರ ಕ್ರಪೆ. ಹೀಗೆ ಆರಿಸಲ್ಪಟ್ಟ ಯಾಜಕನು, ಜನರಿಗೆ ಮುಕ್ತಿ ನೀಡಲು ಆಧಾರವಾಗಿರುತ್ತಾನೆ. ನಮಗೆ ಪ್ರಾರ್ಥನೆ, ಪೂಜೆ ಪಾಠ, ಜನರ ನಿವೇದನೆ ದೇವರಲ್ಲಿ ತಲುಪಿಸುವ ಹೋಣೆ ಅವರದಾಗುತ್ತೆ, ಜನರು ಮತ್ತು ದೇವರ ನಡುವೆ ಅವನ ಸೇತುವೆಯಾಗುತ್ತಾನೆ. ಇಂತಹ ಸೇವೆಯನ್ನು ಫಾ|ಸ್ಟ್ಯಾನಿ ತಾವ್ರೊ, 50 ವರ್ಷಗಳಿಂದ ನಿರಂತರ ಮಾಡಿಕೊಂಡು ಬಂದಿದ್ದಾರೆ. ಹೀಗೆ ಅವರು ಸಮರ್ಪಿತ ಯಾಜಕಿ ಜೀವನವನ್ನು ನಡೆಸಿದ್ದಾರೆ. ಯಾಜಕ ಅಂದರೆ ಯೇಸುಕ್ರಿಸ್ತರ ಪ್ರತಿನಿಧಿ ಅವರ ತತ್ವದಂತೆ ಜೀವಿಸಿ, ಯಾಜಕತನದ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವದ ಸಂಭ್ರಮ ಆಚರಿಸುತ್ತಿರುವ ಅವರಿಗೆ ಮುಂದಿನ ದಿನಗಳಲ್ಲಿ ದೇವರ ವಿಶೇಷ ಆಶಿರ್ವಾದಗಳು ಮತ್ತು ದೇವರು ಆಯುರಾರೋಗ್ಯ, ಸಂತ್ರಪ್ತಿ ಸಮಾಧನ ನೀಡಲಿ ಎಂದು” ಅವರು ಸಂದೇಶದಲ್ಲಿ ತಿಳಿಸಿದರು.
ಮಂಗಳೂರು ಮತ್ತು ಉಡುಪಿ ಆವತ್ತು ಅವಿಭಾಜ್ಯ ಧರ್ಮಪ್ರಾಂತ್ಯದ ಬಿಷಪರಾಗಿದ್ದ, ಈಗ ನಿವ್ರತರಾಗಿರುವರುವ ಅ|ವಂ| ಅಲೋಶಿಯಸ್ ಪಾವ್ಲ್ ಡಿಸೋಜಾ, ದಿವ್ಯ ಬಲಿ ಪೂಜೆಯಲ್ಲಿ ಭಾಗಿಯಾಗಿ, “ಸುಮಾರು 40 ವರ್ಷ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಅಮೋಘ ಸೇವೆ ನೀಡಿದ ಕೀರ್ತಿ ಫಾ|ಸ್ಟ್ಯಾನಿಯವರಿಗೆ ಸಲ್ಲುತ್ತದೆ, ವಿವಿಧ ಇಗರ್ಜಿಗಳಲ್ಲಿ ಧರ್ಮಗುರುಗಳಾಗಿ, ಕಂಕನಾಡಿ ಆಸ್ಪತ್ರೆಯ ನಿರ್ದೇಶಕರಾಗಿ, ಹೋಮಿಯೊಪತಿ ಮೆಡಿಕಲ್ ಕಾಲೇಜಿನ ಅಧಿಕಾರಿಯಾಗಿ ಸೇವೆ ನೀಡಿದಲ್ಲದೆ, ವೀಶೆಷ ಮಕ್ಕಳ ಶಾಲೆ ತೆರೆದು ಸಮಾಜಕ್ಕೆ ಉತ್ತಮ ಸೇವೆ ನೀಡಿದ್ದಾರೆ” ಎಂದು ಅವರು ಫಾ|ಸ್ಟ್ಯಾನಿ ಬಗ್ಗೆ ತಿಳಿಸಿದರು.
ನಂತ ನಡೆದ ಅಭಿನಂದನ ಸಮಾರಂಭದಲ್ಲಿ ಈ ಸಂಭ್ರಮದ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಸ್ವಾಗತದ ಮಾತುಗಳನ್ನಾಡಿದರು. ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಹೂ ಗುಚ್ಚಗಳನ್ನು ನೀಡಿ ಗೌರವಿಸಿದರು.
ನಂತರ ಫಾ|ಸ್ಟ್ಯಾನಿ ತಾವ್ರೊ ಇವರ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವದ ಕೇಕ್‍ನ್ನು ಕತ್ತರಿಸಿ ಅಭಿನಂದನಾ ಸಂಭ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಹಿಂದೆ ಕುಂದಾಪುರ ಸಂತ ಜೋಸೆಫ್ ಚರ್ಚಿನ ಮುಖ್ಯಸ್ಥೆಯಾಗಿ ಸೇವೆ ನೀಡಿದ್ದ ಧರ್ಮಭಗಿನಿಯ ದೀಕ್ಷೆ ಪಡೆದು 40 ವರ್ಷದ ಸಂಭ್ರವನ್ನು ಇತ್ತೀಚೆಗೆ ಆಚರ್ಸಿಕೊಂಡ ಫಾ|ಸ್ಟ್ಯಾನಿ ತಾವ್ರೊ ಅವರ ಸಹೋದರಿ ಸಿಸ್ಟರ್ ವಾಯ್ಲೆಟ್ ಅವರು ತಮ್ಮ ಸಹೋದರನ ಕುರಿತು ಮಾತನಾಡಿದರು. ಫಾ|ಸ್ಟ್ಯಾನಿ ತಾವ್ರೊ ಅವರು ಈ ಹಿಂದೆ ಪ್ರಧಾನ ಧರ್ಮಗುರುಗಳಾಗಿ ಸೇವೆ ನೀಡಿದ ಮಣಿಪಾಲದ ಚರ್ಚಿನ ಅಂದಿನ ಉಪಾಧ್ಯಕ್ಷ ಎಲನ್ ಪಿರೇರಾ, ಕಿನ್ನಿಗೊಳ್ಳಿ ಚರ್ಚಿನ ಅಂದಿನ ಉಪಾಧ್ಯಕ್ಷೆ ಜೆಸಿಂತಾ ಮಥಾಯಸ್, ಶಿರ್ವಾ ಚರ್ಚಿನ ಅಂದಿನ ಉಪಾಧ್ಯಕ್ಷರಾದ ವಿಲ್ಸನ್ ಡಿಸೋಜಾ, ಫಾ|ಸ್ಟ್ಯಾನಿ ತಾವ್ರೊರವರ ಸಾಧನೆ ಬಗ್ಗೆ ಮಾತನಾಡಿದರು. ಫಾ|ಸ್ಟ್ಯಾನಿ ತಾವ್ರೊ ದೀಕ್ಷೆ ಪಡೆದ ಸಮಯದಲ್ಲಿ ದೀಕ್ಷೆ ಪಡೆದ ಕೋಟ ಚರ್ಚಿನ ಧರ್ಮಗುರುಗಳಾದ ವಂ|ಆಲ್ಫೊನ್ಸ್ ಡಿಲೀಮಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಫಾ|ಸ್ಟ್ಯಾನಿ ತಾವ್ರೊ ಇವರಿಗೆ ಸಮರ್ಪಣೆ ಮಾಡಲು, ಬರ್ನಾಡ್ ಡಿಕೋಸ್ತಾ ಇವರ ಸಂಪಾದಕತ್ವದಲ್ಲಿ ಸಿದ್ದವಾದ ಕುಂದಾಪುರ ಚರ್ಚಿನ “ರೊಜಾರಿಯುಮ್” ಪತ್ರಿಕೆಯನ್ನು ಬಿಷಪ್ ಜೆರಾಲ್ಡ್ ಲೋಬೊ ಬಿಡುಗಡೆಗೊಳಿಸಿ ಫಾ|ಸ್ಟ್ಯಾನಿ ತಾವ್ರೊ ಅವರಿಗೆ ಸಮರ್ಪಿಸಿದರು.
ನಂತರ ಸಮಾರಂಭದ ಮುಖ್ಯಪ್ರಾಯರಾದ ಫಾ|ಸ್ಟ್ಯಾನಿ ತಾವ್ರೊ ಅವರನ್ನು ಚರ್ಚ್ ಪರವಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಮ್‍ನಿಂದ ಪೋಪ್ ಸ್ವಾಮಿಗಳು ಕಳುಹಿಸಿದ್ದ ಸಂದೇಶ ಪತ್ರವನ್ನು ಫಾ|ಅಶ್ವಿನ್ ಆರಾನ್ನಾ ವಾಚಿಸಿ ಪ್ರಧಾನಿಸಿದರು. ಇದರ ವ್ಯವಸ್ಥೆಯನ್ನು ಫಾ|ಮನೋಜ್ ಬ್ರಗಾಂಜಾ ಮಾಡಿದ್ದರು.
ಸನ್ಮಾಕ್ಕೆ ಉತ್ತರವಾಗಿ ಫಾ|ಸ್ಟ್ಯಾನಿ ತಾವ್ರೊ “ನನ್ನ ಈ ಅಪರೂಪದ ಎರಡು ಸಂಭ್ರಮಗಳನ್ನು ಆಚರಿಸುವ ಭಾಗ್ಯ ನನಗೆ ಅನುಗ್ರಹಿಸಿದಕ್ಕೆ ದೇವರಿಗೆ ಕ್ರಜ್ಞತೆಗಳನ್ನು ನೀಡಿತ್ತೇನೆ, ದೇವರು ನನ್ನಲ್ಲಿ ವಿಚಿತ್ರಗಳನ್ನು ಮಾಡಿದ್ದಾರೆ, ನನ್ನ ಯಾಜಕೀ ಜೀವನದ ಪಯಣವನ್ನು ನೆಡಸಲು ಆತ ನನಗೆ, ಸದಾಕಾಲ ನನಗೆ ಆತನ ಕ್ರಪೆಯನ್ನು ಪ್ರಾಪ್ತಿ ಮಾಡಿದ್ದಾನೆ. ನನಗೇನು ಆಶೆಯಿಲ್ಲ, ಆದರೆ ನನಗೆ ಬೇಕಾದಂತಹ, ಎಲ್ಲಾ ಆಶೋತ್ತರಗಳನ್ನು ಜನರ ಮೂಲಕ ಇಡೇರಿಸಿದ್ದಾನೆ, ನನ್ನ ಕುಟುಂಬದವರು ನನ್ನ ಯಾಜಕಿ ಜೀವನದಲ್ಲಿ ಉತ್ತಮ ಸಹಕಾರವನ್ನು ನೀಡಿದ್ದಾರೆ. ಇಂದು ಇಷ್ಟು ದೊಡ್ಡ ಸಂಭ್ರವನ್ನು ಕುಂದಾಪುರದ ಜನತೆ, ಒಂದು ಕುಟುಂಬದಂತೆ ಆಚರಿಸಿದ್ದಿರಿ, ನಿಮೆಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಇದರಿಂದಾಗಿ ನನ್ನ ಮನಸ್ಸು ಆನಂದ ಸಂತೋಷದಿಂದ ಕೂಡಿದೆ. ನಾನು ಯಾಜಕನಾಗಿ ಇಷ್ಟೆಲ್ಲಾ ಸೇವೆ ನೀಡಲು ದೇವರ ದಯೆಯೆ ಕಾರಣವಾಗಿದೆ, ನನಗೆ 50 ವರ್ಷಗಳ ಯಾಕತನದ ಅವಧಿ ಮತ್ತು 75 ವರ್ಷಗಳ ಹುಟ್ಟು ಹಬ್ಬ ಆಚರಿಸಲು ಕರುಣಿಸಿದ ಈ ಅಪರೂಪದ ಅವಕಾಶ ದೇವರು ನೀಡಿದಕ್ಕೆ, ಆತನಿಗೆ ಕ್ರತ್ಞತೆ ಮತ್ತು ಧನ್ಯವಾದಗಳನು ಸಮರ್ಪಿಸುತ್ತೇನೆ” ಎಂದು ತಮ್ಮ ಮನದಾಳದ ಮಾತನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಶಪ್ ಅ|ವ||ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಫಾ|ಸ್ಟ್ಯಾನಿ ತಾವ್ರೊ ಇವರನ್ನು ದೇವರು ಆರಿಸಿ ದೇವರು ಅವರನ್ನು ಅಭಿಷೇಕ ಮಾಡಿದ್ದಾರೆ, ಕಾರಣ ಅವರು ತನ್ನ ಪ್ರಜೆಗಳಿಗೆ ಸೇವೆ ನೀಡಲು. ಯಾಜಕರು ಕ್ರಿಸ್ತನ ಪ್ರೇರಣೆಯಂತೆ ನಡೆಯಬೇಕು, ಯಾಜಕನು ಯೇಸು ಕ್ರಿಸ್ತನ ಸಂಕೇತ, ಯೇಸು ಕ್ರಿಸ್ತನ ಪ್ರಾತಿನಿತ್ಯವನ್ನು ಹೊಂದಿದ ವಿಶೇಷ ವ್ಯಕ್ತಿಯಾಗಿದ್ದಾನೆ. ಫಾ|ಸ್ಟ್ಯಾನಿ ತಾವ್ರೊ ಅವರು ಉಡುಪಿ ಮತ್ತು ಮಂಗಳೂರು ಈ ಎರಡೂ ಧರ್ಮಪ್ರಾಂತ್ಯದದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದವರು, ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ, ಆದರೆ ಅದು ಅವರಾಗಿಯೇ ಮಾಡಿದ್ದಲ್ಲಾ, ದೇವರು ನನ್ನ ಪ್ರಜೆಗಳಿಗೆ ಎನೆಲ್ಲಾ ಬೇಕೊ ಅವಗಳನ್ನು ತನ್ನ ಕ್ರಪೆಯ ಮುಖಾಂತರ ಫಾ|ಸ್ಟ್ಯಾನಿ ತಾವ್ರೊ ಮೂಲಕ ವiಸಿದ್ದಾರೆ’ ಪ್ರತಿಯೊಂದು ಹುಟ್ಟು ಹಬ್ಬ ದೇವರ ವಿಶ್ವಾಸವನ್ನು ಪ್ರಸರಿಸುತ್ತದೆ. ಇವತ್ತು ಫಾ|ಸ್ಟ್ಯಾನಿ ತಾವ್ರೊ ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ, ಈ ಸಂದರ್ಭದಲ್ಲಿ ಅವರಿಗೆ ಶುಭಾಷಯ ಮತ್ತು ಅಭಿನಂದನೆಗಳನ್ನು ಸಲ್ಲಿಸುತೇನೆ” ಎಂದು ಧರ್ಮಪ್ರಾಂತ್ಯದ ಪರವಾಗಿ ಅವರು ಫಾ|ಸ್ಟ್ಯಾನಿ ತಾವ್ರೊರವರನ್ನು ಸನ್ಮಾನಿಸಿದರು.


ಕಾರ್ಯಕ್ರಮ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಅವರನ್ನು ಸನ್ಮಾನಿಸಲಾಯಿತು. ಫಾ|ಸ್ಟ್ಯಾನಿ ತಾವ್ರೊ ಅವರಿಗೆ ಕುಟುಂಬದ ಪರವಾಗಿ, ಸಂಘ ಸಂಸ್ಥೆಗಳ ಪರವಾಗಿ, ಶಿಕ್ಷಣ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು. ಜನತೆಯಿಂದ ಅಭಿನಂದನೆ ಮತ್ತು ಶುಭಾಶಷಯಳ ಮಹಾಪೂರ ಹರಿಯಿತು.
ಫಾ|ಸ್ಟ್ಯಾನಿ ತಾವ್ರೊ
ಅವರ ಜೀವನದ ಹಿಂದಿನ ಮುಖ್ಯಾಂಶಗಳನ್ನು ಪರದೆಯ ಮೂಲಕ ತೋರಿಸಲಾಯಿತು. ಹಾಡುಗಾರ ವಿಲ್ಸನ್ ಒಲಿವೆರಾ ಅವರ ನೇತ್ರತ್ವದಲ್ಲಿ ಶುಭಾಶಯ ಗೀತೆಯನ್ನು ಹಾಡಲಾಯಿತು, ಭಾ.ಕ.ಯುವ ಸಂಚಾಲನೆ ಮತ್ತು ವೈ.ಸಿ.ಎಸ್. ಮಕ್ಕಳಿಂದ ನ್ರತ್ಯಗಳನ್ನು ಪ್ರದರ್ಶಿಸಲಾಯಿತು. ಚರ್ಚ್ ಗಾಯನ ಪಂಗಡ ಅಧ್ಯಕ್ಷೆ ವಿನಯಾ ಡಿಕೋಸ್ತಾ ನೇತ್ರತ್ವದಲ್ಲಿ ದಿವ್ಯ ಬಲಿಪೂಜೆಗೆ ಗೀತೆಗಳನ್ನು ಮತ್ತು ದೇವರಿಗೆ ಕ್ರತ್ಞತೆ ಸಲ್ಲಿಸುವ “ಲಾವ್ದಾತೆ” ಗೀತೆಯನ್ನು ಸುಶ್ರವ್ಯವಾಗಿ ಹಾಡಲಾಯಿತು. ಭೋಜನದ ಮೇಲಿನ ಪ್ರಾರ್ಥನೆಯನ್ನು, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಫಾ|ಸುನೀಲ್ ವೇಗಸ್ ಇವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, 20 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿರಿದ್ದು, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು,, ಎಲ್.ಜೆ.ಫೆರ್ನಾಂಡಿಸ್ ಮತ್ತು ಫೆಲ್ಸಿಯಾನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಭೋಜನದ ಜೊತೆ ಕಾರ್ಯಕ್ರಮವು ಅದ್ದೂರಿಯಿಂದ ಸಮಾಪನಗೊಂಡಿತು.

ಗಂಟಾಲ್ಕಟ್ಟೆ : ಯುವಜಣಾಂಕ್ ಕೊಂಕಣಿ ಸಾಹಿತಿಕ್ ಕಾರ್ಯಾಗಾರ್

ಗಂಟಾಲ್ಕಟ್ಟೆ : 6 ಮಾಯ್ 2023: ಆಶಾವಾದಿ ಪ್ರಕಾಶನಾನ್ ಐ.ಸಿ.ವೈ.ಎಮ್ ಆನಿ ವೈ.ಸಿ.ಎಸ್ ಹಾಂಚ್ಯಾ ಸಹಯೋಗಾಖಾಲ್ ಗಂಟಾಲ್ಕಟ್ಟೆಚ್ಯಾ ನಿತ್ಯಾದಾರ್ ಮಾಯೆಚ್ಯಾ ಇಗರ್ಜೆಚ್ಯಾ ಸಭಾಸಾಲಾಂತ್ ಆದೇಸಾಚೆಂ ಸಾಹಿತಿಕ್ ಕಾರ್ಯಾಗಾರ್ ಚಲವ್ನ್ ವ್ಹೆಲೆಂ.
ಫಿರ್ಗಜೆಚೊ ವಿಗಾರ್ ಮಾ|ಬಾ|ರೊನಾಲ್ಡ್ ಡಿಸೋಜಾಚ್ಯಾ ಅಧ್ಯಕ್ಷ್‌ಪಣಾಖಾಲ್, ಮಾಗ್ಣ್ಯಾಂತ್ ಸುರ್ವಾತ್ ಕರುನ್ ಹ್ಯಾ ಕಾರ್ಯಾಗಾರಾಚೆಂ ಉಗ್ತಾವಣ್ ಜಾತಚ್ ಅಪ್ಲ್ಯಾ ಯೆವ್ಕಾರ್ ಉಲವ್ಪಾಂತ್ “ಕೊಂಕಣಿ ಭಾಸೆಚೊ ಮೋಗ್ ಕರ್ಚೊ, ತಿಚೊ ಪೋಸ್ ಕರ್ಚಿ ಜವಾಭ್ದಾರಿ ಆಮಾಂ ಸರ್ವಾಂಚಿ ಜಾಲ್ಲ್ಯಾನ್ ತ್ಯಾ ಇರಾದ್ಯಾನ್ ಆಮ್ಚ್ಯಾ ಸಮಾಜೆಂತ್ ಆಸ್ಚ್ಯಾ ಸಾಹಿತಿಕ್ ತಾಲೆಂತಾಕ್ ವ್ಹಳ್ಕುನ್, ತಾಂಕಾಂ ಮುಕಾರ್ ಯೆಂವ್ಚಿ ವಾಟ್ ರುತಾಂ ಕರ್ಚೆ ದಿಶೆನ್ ಅಸಲಿಂ ಕಾರ್ಯಾಗಾರಾಂ ಮಾಂಡುನ್ ಹಾಡ್ಚಿ ಗರ್ಜ್ ಆಜ್ ಉದೆಲ್ಯಾ” ಮ್ಹಣಾಲೆ.

 ಬೆನಿಟಾ ಮಿನೇಜಸಾನ್ ಕಾರ್ಯಾಗಾರಾಚೆಂ ಸೂತ್ರ್ ಸಂಚಾಲನ್ ಕೆಲೆಂ, ಐ.ಸಿ.ವೈ.ಎಮ್. ಅಧ್ಯಕ್ಷ್ ನೋಲನ್ ಮಿರಾಂದಾ, ವೈ.ಸಿ.ಎಸ್. ಅಧ್ಯಕ್ಷಿಣ್ ಲಿವ್ಯಾ ಸೆರಾವೊ, ಐ.ಸಿ.ವೈ.ಎಮ್. ಕಾರ್ಯದರ್ಶಿ ಇಯಾನ್ ಸಿಕ್ವೇರಾನ್, ವೈ.ಸಿ.ಎಸ್. ಕಾರ್ಯದರ್ಶಿ ಮೆಲಿಶಾ ಮಿರಾಂದಾ ಹಾಣಿಂ ಹೆಂ ಕಾರ್ಯಾಗಾರ್ ಚಲವ್ಪಿಂಚಿ ಒಳೊಕ್ ಕರುನ್ ದಿಲಿ. ಮಾ|ರೋಯ್ಸನ್ ಫೆರ್ನಾಂಡಿಸ್ (ಸಂಪಾದಕ್ – ಉಜ್ವಾಡ್ ಪಂದ್ರಾಳೆಂ), ಮಾ|ಚೇತನ್ ಲೋಬೊ (ಸಂಪಾದಕ್ – ಸೆವಕ್ ಮಯ್ನ್ಯಾಳೆಂ) ತಶೆಂಚ್ ವಲ್ಲಿ ಕ್ವಾಡ್ರಸ್ (ಸಂಪಾದಕ್ – ಪಯ್ಣಾರಿ) ಹಾಂಕಾಂ ವಿಗಾರಾನ್ ಶೊಲಾಂ ಪಾಂಗ್ರುನ್ ಫುಲಾಂಚೊ ಬುಕ್ಕೊ ತಶೆಂಚ್ ಯಾದಸ್ತಿಕಾ ದಿವುನ್ ಸ್ವಾಗತ್ ಕೆಲೊ. ವೆದಿಚೆರ್ ಫಿರ್ಗಜ್ ವಿಗಾರ್, ಗೊವ್ಳಿಗ್ ಪರಿಶದೆಚಿ ಕಾರ್ಯದರ್ಶಿ ಲಿಡಿಯಾ ಡಿಸೋಜ್,  ಐ.ಸಿ.ವೈ.ಎಮ್ ಅಧ್ಯಕ್ಷ್ ಆನಿ ವೈ.ಸಿ.ಎಸ್.ಅಧ್ಯಕ್ಷ್ ಹಾಜರ್ ಆಸ್ಲಿಂ.

’ಖಬ್ರೊ ಕಶ್ಯೊ ಬರಂವ್ಚ್ಯೊ’ ವಿಶ್ಯಾಚೆರ್ ಮಾ|ರೋಯ್ಸನ್ ಫೆರ್ನಾಂಡಿಸ್ (ಸಂಪಾದಕ್ – ಉಜ್ವಾಡ್ ಪಂದ್ರಾಳೆಂ) ಹಾಣಿಂ ತರ್ಭೆತ್ ದಿಲಿ, ’ಲೇಖನಾಂ ಕಶಿಂ ಬರಂವ್ಚಿಂ’ ವಿಶ್ಯಾಚೆರ್ ತರ್ಭೆತ್‌ದಾರ್ ಮಾ|ಚೇತನ್ ಲೋಬೊ (ಸಂಪಾದಕ್ – ಸೆವಕ್ ಮಯ್ನ್ಯಾಳೆಂ) ಹಾಣಿಂ ತರ್ಭೆತ್ ದಿಲಿ. ’ಮೊಟ್ವ್ಯೊ ಕಾಣಿಯೊ ಕಶ್ಯೊ ಬರಂವ್ಚ್ಯೊ’ ವಿಶ್ಯಾಚೆರ್ ತರ್ಭೆತ್‌ದಾರ್ ವಲ್ಲಿ ಕ್ವಾಡ್ರಸ್ (ಸಂಪಾದಕ್ – ಪಯ್ಣಾರಿ) ಹಾಣಿಂ ತರ್ಭೆತ್ ದಿಲಿ.

ದನ್ಪಾರಾಂ ಜೆವ್ಣಾ ಉಪ್ರಾಂತ್ ಕವಿಗೋಶ್ಟಿಚ್ಯಾ ಅಧ್ಯಕ್ಷ್ ಆಂಡ್ರ್ಯೂ ಡಿ’ಕುನ್ಹಾಕ್ ವಿಗಾರಾನ್ ಶೋಲ್ ಪಾಂಗ್ರುನ್, ಫುಲಾಂಚೊ ಬುಕ್ಕೊ ಆನಿ ಯಾದಸ್ತಿಕಾ ದಿವುನ್ ಸ್ವಾಗತ್ ಕೆಲೊ. ಕವಿಗೋಶ್ಟಿಂತ್ ವಿಗಾರ್ ಮಾ|ರೊನಾಲ್ಡ್ ಡಿಸೋಜ್, ಫೆಲ್ಸಿ ಲೋಬೊ ದೆರೆಬೈಲ್, ಎಡ್ವಿನ್ ಪಿಂಟೊ ಗಂಟಾಲ್ಕಟ್ಟೆ, ಪೆದ್ರು ಪ್ರಭು ತಾಕೊಡೆ, ವಿಲ್ಲಿ ಅಲ್ಲಿಪಾದೆ, ಗ್ಲೇನಿಶ್ ಮಾರ್ಟಿಸ್ ಅಲಂಗಾರ್, ಜೋಯ್ಸ್ ಪಿಂಟೊ ಕಿರೆಂ/ಕಿನ್ನಿಗೊಳಿ, ಸಲೋಮಿ ಮಿಯಾಪದವ್, ವಲ್ಲಿ ಕ್ವಾಡ್ರಸ್ ಹಾಣಿಂ ವಾಂಟೊ ಘೆತ್ಲೊ.

ಉಪ್ರಾಂತ್ ಆಶಾವಾದಿ ಪ್ರಕಾಶನಾಚಿಂ ದೋನ್ ಕೊಂಕಣಿ ಪುಸ್ತಕಾಂಚೆಂ ಮೊಕ್ಳೀಕ್ ಕಾರ್ಯೆಂ ಚಲ್ಲೆಂ. ಆಶಾವಾದಿ ಪ್ರಕಾಶನಾಚೆಂ ಎಕಾವನಾವೆಂ ಪುಸ್ತಕ್ ’ಆಟ್ವೊ ಸುರ್’ ತಶೆಂಚ್ ಕವಯತ್ರಿ ’ಸಲೋಮಿ ಮಿಯಾಪದವ್’ ಚಿ ತಶೆಂಚ್ ತಿಚಿ ಒಳೊಕ್ ಕರುನ್ ಹ್ಯಾ ಪುಸ್ತಕಾಚೆಂ ಮೊಕ್ಳಿಕ್ ಕಾರ್ಯೆಂ ಆಂಡ್ರ್ಯೂ ಎಲ್. ಡಿಕುನ್ಹಾನ್ ಕೆಲೆಂ.  ಆಶಾವಾದಿ ಪ್ರಕಾಶನಾಚೆಂ ಬಾವನಾವೆಂ ಪುಸ್ತಕ್ ’ಪಾನಾಂಚ್ ಫುಲಾಂ ಜಾತಾನಾ’ ತಶೆಂಚ್ ಕವಯತ್ರಿ ’ಮೊನಿಕಾ ಡೆ’ಸಾ ಮಥಾಯಸ್’ ಚಿ ತಶೆಂಚ್ ತಿಚಿ ಒಳೊಕ್ ವಲ್ಲಿ ಕ್ವಾಡ್ರಸಾನ್ ಕರುನ್ ದಿತಚ್ ಮಾ|ರೊನಾಲ್ಡ್ ಡಿಸೋಜಾನ್ ಪುಸ್ತಕಾಚೆಂ ಮೊಕ್ಳಿಕ್ ಕಾರ್ಯೆಂ ಚಲಯ್ತಚ್ ಸಲೋಮಿ ಮಿಯಾಪದವ್ ಹಿಣೆಂ ಅಪ್ಲಿಂ ಭಗ್ಣಾಂ ಉಚಾರುನ್ ಹ್ಯಾ ಪುಸ್ತಕಾಚ್ಯಾ ಪರ್ಗಟ್ಣೆಕ್ ಕಾರಣ್ ಜಾಲ್ಲ್ಯಾಂಕ್ ಧಿನ್ವಾಸ್ ಪಾಟಯ್ಲೆ.

ವಲ್ಲಿ ಕ್ವಾಡ್ರಸಾನ್ ಉಪ್ಕಾರ್ ಆಟವ್ಣೆಚೆಂ ಉಲವ್ಪ್ ಕರುನ್ ಯುವಜಣಾಂಕ್ ಕೊಂಕಣಿ ಸಾಹಿತ್ಯಾಚಿ ಒಳೊಕ್ ಕರುನ್ ದಿಂವ್ಚಿ, ತಶೆಂಚ್ ಸಾಹಿತಿಕ್ ತಾಲೆಂತಾಕ್ ಮುಕಾರ್ ಹಾಡ್ಚೆ ದಿಶೆನ್ ಐ.ಸಿ.ವೈ.ಎಮ್ ತಶೆಂಚ್ ವೈ.ಸಿ.ಎಸ್. ಸಂಘಟನಾನ್ ಏಕ್ ದೇಕ್ ದಿಲ್ಯಾ ಆನಿ ಹೆಂ ಪ್ರೇರಣ್ ಘೆವ್ನ್ ಹೆರ್ ಪ್ರಾಂತ್ಯಾಚ್ಯಾ ಯುವ ಸಂಚಾಲನಾನ್ ಸಯ್ತ್ ಅಸಲಿಂ ಕಾರ್ಯಾಗಾರಾಂ ಮಾಂಡುನ್ ಹಾಡ್ಲಿಂ ತರ್ ಆಮ್ಚ್ಯಾ ಕೊಂಕಣಿ ಭಾಸೆಕ್ ನವ್ಯೊ ಆಂಖ್ರ್ಯೊ ಫುಲ್ತಲ್ಯೊ ತಶೆಂಚ್ ನವಿಂ ಪಾನಾಂ, ಫುಲಾಂ ಫುಲ್ತಲಿಂ ಮ್ಹಳ್ಳೊ ಆಶಾವಾದ್ ಉವಾರ್ಲೊ ತಶೆಂಚ್ ಹ್ಯಾ ಕಾರ್ಯಾಗಾರಾಕ್ ಮಿನತ್ ಕೆಲ್ಲ್ಯಾ ಸಮೇಸ್ತಾಂಚೊ ಉಪ್ಕಾರ್ ಬಾವುಡ್ಲೊ.

ವರ್ದಿ: ಇಯಾನ್ ಸಿಕ್ವೇರಾ ಗಂಟಾಲ್ಕಟ್ಟೆ

ಕಡ್ಡಾಯ ಮತದಾನ ಸಂವಾದ : ಉದ್ದೇಶ ಪೂರ್ವಕವಾಗಿ ಮತದಾನ ಮಾಡದಿದ್ದವರ ಮೇಲೆ ಕ್ರಮಕೈಗೊಳ್ಳಬೇಕು

ಚುನಾವಣಾ ಆಯೋಗ ಮತದಾನ ಹೆಚ್ಚಿಸಲು ಬಹಳಷ್ಟು ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಉದ್ದೇಶ ಪೂರ್ವಕವಾಗಿ ಮತದಾನ ಮಾಡದೇ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಅಂತಹ ಮತದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗ ನಿಯಮ ರೂಪಿಸಬೇಕು. ಇದರಿಂದ ಮತದಾನ ಮಾಡದವರಿಂದ ಚುನಾವಣಾ ಫಲಿತಾಂಶದ ಮೇಲೆ ಆಗುವ ಪರಿಣಾಮವೂ ಕಡಿಮೆಯಾಗುತ್ತದೆ. ಅಲ್ಲದೇ ಶೇಕಡಾವಾರು ಮತದಾನದ ಸಂಖ್ಯೆಯೂ ಹೆಚ್ಚುತ್ತದೆ.
ಈ ಅಭಿಪ್ರಾಯ ವ್ಯಕ್ತವಾದುದು ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಕಡ್ಡಾಯ ಮತದಾನ ಸಂವಾದ” ಕಾರ್ಯಕ್ರಮದಲ್ಲಿ.
ಚುನಾವಣಾ ಆಯೋಗ ಚುನಾವಣೆಯನ್ನು ಒಂದು ಯದ್ಧದ ಮಾದರಿಯಲ್ಲಿ ಆಗಲು ಬಿಡದೇ ಸರಳವಾಗಿ, ಕಡಿಮೆ ಖರ್ಚಿನಲ್ಲಿ ಆರೋಗ್ಯಪೂರ್ಣ ಸ್ಪರ್ಧೆಯಲ್ಲಿ ನಡೆಯುವಂತೆ ನಿಯಮ ರೂಪಿಸಬೇಕು. ಪ್ರಜಾಪ್ರಭುತ್ವದ ದುರುಪಯೋಗ ಆಗದಂತೆ ಗಮನ ಹರಿಸಬೇಕು. ಆಮಿಷಕ್ಕೊಳಪಟ್ಟು ಮತದಾರರು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು ಎಂಬ ಅನಿಸಿಕೆಯೂ ವ್ಯಕ್ತವಾಯಿತು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಯು. ಎಸ್. ಶೆಣೈ ಸಂವಾದದಲ್ಲಿ ಪ್ರಾಸ್ತಾವಿಕ ಮಾತನಾಡಿ, “ಕರ್ನಾಟಕ ವಿಧಾನಸಭಾ ಚುನಾವಣೆ ವ್ಯವಸ್ಥಿತವಾಗಿ ನಡೆಯುವಂತೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಅತೀ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಹಲವು ಕ್ರಮ ಕೈಗೊಂಡಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದೆ. ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದೆ. ಆದರೂ ಬಹಳಷ್ಟು ಮಂದಿ ಈ ದಿನ ತಮ್ಮ ಹಕ್ಕು ಚಲಾಯಿಸುವ ಕರ್ತವ್ಯ ಮರೆತು ಪ್ರವಾಸಕ್ಕೆ ಹೋಗುವುದು, ಬೇರೆ ಕಾರ್ಯಕ್ರಮ ಇಟ್ಟುಕೊಳ್ಳುವುದು, ಮನೆಯಲ್ಲೇ ಮನರಂಜನೆ ಪಡೆಯುತ್ತಾ ಚುನಾವಣೆ ತಮಗೆ ಸಂಬಂಧಿಸಿದ್ದಲ್ಲ ಎಂದು ನಿರ್ಲಕ್ಷ ವಹಿಸುತ್ತಾರೆ. ಈ ಬಗ್ಗೆ ಚಿಂತನ ಮಂಥನ ನಡೆಯಬೇಕು. ಚುನಾವಣಾ ಆಯೋಗ ಉದ್ದೇಶ ಪೂರ್ವಕ ಗೈರು ಹಾಜರಾಗುವವರ ಪಟ್ಟಿ ತಯಾರಿಸಿ ಕಾರಣ ಕೇಳುವ ನೋಟಿಸ್ ಕಳುಹಿಸುವ ಬಗ್ಗೆ ಚಿಂತಿಸಬೇಕು” ಎಂದರು.
ಉದ್ಯಮಿ ಕೆ. ಕೆ. ಕಾಂಚನ್ ಮಾತನಾಡಿ, “ಚುನಾವಣೆಯಲ್ಲಿ ಹಣವೇ ಪ್ರದಾನ ಎಂಬ ನಂಬಿಕೆ ಬಂದು ಬಿಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ಅರಿವು ಇರಬೇಕು. ಹಣವಂತ, ಪ್ರಬಲ ಸಮುದಾಯದ ವ್ಯಕ್ತಿ, ಜನಪ್ರಿಯ ಪಕ್ಷದ ಅಭ್ಯರ್ಥಿ ಎನ್ನುವುದಕ್ಕಿಂತ ಅವರು ಶುದ್ಧ ಚಾರಿತ್ರ್ಯದವರೇ, ಸಮಾಜಕ್ಕೆ ಒಳಿತು ಮಾಡ ಬಲ್ಲರೇ, ಎನ್ನುವ ಬಗ್ಗೆ ಚಿಂತಿಸಬೇಕು. ಮತದಾನ ತಪ್ಪಿಸಿಕೊಳ್ಳುವವರ ಬಗ್ಗೆ ಕ್ರಮ ಅತ್ಯಗತ್ಯ” ಎಂದರು.
ನಿವೃತ್ತ ಬ್ಯಾಂಕ್ ಮೆನೇಜರ್ ಕೆ. ಪಾಂಡುರಂಗ ಭಟ್ ಮಾತನಾಡಿ, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿದೆ. ಚುನಾವಣೆಯೂ ಉತ್ಸಾಹದಿಂದಲೇ ನಡೆಯುತ್ತದೆ ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದವರು ಫಲಿತಾಂಶದ ನಂತರ ಬೇಡದ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ, ಟೀಕಿಸುತ್ತಾರೆ. ಅವರಿಗೆ ಚುರುಕು ಮುಟ್ಟಿಸುವುದು ಅಗತ್ಯ” ಎಂದರು.
ತಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ, “ಟಿ. ಎನ್. ಶೇಷನ್ ಅವರಂತಹ ಚುನಾವಣಾಧಿಕಾರಿಗಳು ಚುನಾವಣಾ ವ್ಯವಸ್ಥೆಗೆ ಬಹಳಷ್ಟು ಸುಧಾರಣೆ ತಂದರು. ಆದರೂ ಇಂದಿನ ಚುನಾವಣಾ ವಾತಾವರಣ ಕಂಡಾಗ ಚುನಾವಣಾ ಆಯೋಗ ಇನ್ನಷ್ಟು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದೆನಿಸುತ್ತದೆ” ಎಂದರು.
ಲೇಖಕ ರಮಾನಂದ ಕಾರಂತ ಮಾತನಾಡಿ, “ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿದೆ ಜನರೂ ಜಾಗೃತರಾಗಿದ್ದಾರೆ. ವಿದ್ಯಾವಂತರೂ ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ಇನ್ನಷ್ಟು ಜಾಗೃತರಾಗಬೇಕು” ಎಂದರು.
ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ದೇವರಾಜ್ ಮಾತನಾಡಿ, “ಕೋಟ್ಯಾಂತರ ರೂ. ಚುನಾವಣಾ ವೆಚ್ಚ, ಹತ್ತಾರು ಆಮಿಷಗಳು, ಖಾರವಾದ ಮಾತುಗಳನ್ನು ಹೊರತು ಪಡಿಸಿದ ಸರಳ ಮಾದರಿಯ ಜನ ಮೆಚ್ಚುವ ವಿಧಾನದಲ್ಲಿ ಚುನಾವಣೆ ನಡೆಸುವ ಬಗ್ಗೆ ರಾಷ್ಟ್ರೀಯ ಚಿಂತನ ಆಯೋಗ ಏರ್ಪಡಿಸಬೇಕು” ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸತ್ಯನಾರಾಯಣ ಪುರಾಣಿಕ, “ಸಮಾಜವನ್ನು ಜಾಗೃತಿಗೊಳಿಸುವ ಅಭಿಯಾನದಲ್ಲಿ ನಾವೂ ಪಾಲ್ಗೊಳ್ಳುತ್ತಿದ್ದೇವೆ. ಹಿತಕರ ವಾತಾವರಣದಲ್ಲಿ ಚುನಾವಣೆ ನಡೆಯಬೇಕು. ಎಲ್ಲರೂ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಅಸಡ್ಡೆ, ನಿರ್ಲಕ್ಷತನ, ಗುರುತರ ಅಪರಾಧವೆಂದೇ ಪರಿಗಣಿಸ ಬೇಕಾಗುತ್ತದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕೆಂದು ವಿನಂತಿ ಮಾಡುತ್ತೇವೆ” ಎಂದರು.
ಶ್ರೀನಿವಾಸ ಶೇಟ್ ಸ್ವಾಗತಿಸಿದರು, ಸಚಿನ್ ನಕ್ಕತ್ತಾಯ ಸಂವಾದ ನಿರೂಪಿಸಿದರು.