HOLY ROSARY CHURCH, KUNDAPUR – 450 th JUBILEE SOUVENIR 2021

ಸಂತೆಕಟ್ಟೆ: ಮೌಂಟ್ ರೋಸರಿ ಚರ್ಚಿನಲ್ಲಿ ವಿವಿಧ ಸಂಘಟನೇಗಳ ಸಹಯೋಗದಿಂದ ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ/Santhekatte: Free bone density testing camp in collaboration with various organizations at Mount Rosary Church

ಕಲ್ಯಾಣಪುರ, 11: ಮೌಂಟ್ ರೋಸರಿ ಚರ್ಚಿನ ಕ್ಯಾಥೋಲಿಕ್ ಸಭಾ, ಧರ್ಮ ಕೇಂದ್ರದ ಆರೋಗ್ಯ ಆಯೋಗ, ‘ಸ್ತ್ರೀ ಸಂಘಟನೆ’ ಮತ್ತು ‘ಲಯನ್ಸ್ ಕ್ಲಬ್ ಕಲ್ಯಾಣಪುರ – ಸ್ವರ್ಣ’ ಇವುಗಳ ಸಹಯೋಗದೊಂದಿಗೆ ಕಲ್ಯಾಣಪುರದ ಸುತ್ತಮುತ್ತಲಿನ ಜನರಿಗೆ ಎರಡು ದಿನಗಳ (10ನೇ ಮತ್ತು 11ನೇ ಆಗಸ್ಟ್, 2023) ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಯಿತು.

     ಧರ್ಮಗುರುಗಳಾದ ವಂ|ರೋಕ್ ಡಿಸೋಜ ಅವರು ವಿವಿಧ ಸಂಘಟಕರ ಪ್ರತಿನಿಧಿಗಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ “ಇಂತಹ ನಿಯಮಿತ ಪರೀಕ್ಷೆಗಳ ಅಗತ್ಯವನ್ನು ಒತ್ತಿಹೇಳುತ್ತಾ, ತಜ್ಞ ವೈದ್ಯಕೀಯ ತಂಡಕ್ಕೆ ಚರ್ಚಿನ ವಿವಿಧ ಸಂಘಟನೆಗಳಿಗೆ ಮತ್ತು ಲಯನ್ಸ್ ಕ್ಲಬ್, ಕಲ್ಯಾಣಪುರ – ಸ್ವರ್ಣ ಇವರ ಸಾಮಾಜಿಕ ಕಾಳಜಿಗಾಗಿ ವಿಶೇಷವಾಗಿ ಆರೋಗ್ಯ ರಕ್ಷಣೆಗಾಗಿ ಮಾಡುವ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಶಿಬಿರವು ಇನ್ನೂ ಒಂದು ದಿನ ಅಂದರೆ ನಾಳೆ ಮುಂದುವರಿಯುವುದರಿಂದ ನೆರೆಹೊರೆಯವರಿಗೆ ಈ ವಿಚಾರವನ್ನು ಬಾಯಿಗೆಯಿಂದ ಬಾಯಿಗೆ ಪ್ರಚಾರ ಮಾಡಬೇಕೆಂದು ಕಾರ್ಯಕ್ರಮಕ್ಕೆ ಭಾಗವಹಿಸಿದವರಿಗೆ ಅವರು ತಿಳಿಸಿದರು.

    ಕ್ಯಾಥೋಲಿಕ್ ಸಬಾ ಮೌಂಟ್ ರೋಸರಿ ಚರ್ಚಿನ ಅಧ್ಯಕ್ಶೆಯಾದ ಶ್ರೀಮತಿ ರೋಸಿ ಕ್ವಾಡ್ರಸ್ ಪ್ರಸ್ತಾವಿಕ ಮಾತುಗಳನ್ನಾದಿ ಸ್ವಾಗತಿಸಿದರು.

     ’ಮೂಳೆ ಸಾಂದ್ರತೆ ಪರೀಕ್ಷೆ ಅಥವಾ DEXA ಸ್ಕ್ಯಾನ್ ಮೂಳೆಯು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿದೆಯೇ ಎಂಬುದನ್ನು ನಿರ್ಧರಿಸುತ್ತದೆ, ಹೆಚ್ಚು ದುರ್ಬಲವಾಗಿರುವ ಮತ್ತು ಮುರಿಯುವ ಸಾಧ್ಯತೆಯಿರುವ ಮೂಳೆಗಳಿಂದ ಗುಣಲಕ್ಷಣಗಳನ್ನು ಹೊಂದಿರುವ ಅಸ್ವಸ್ಥತೆ, ಕ್ಯಾಲ್ಸಿಯಂ ಕೊರತೆ ಇತ್ಯಾದಿ. ಸಾಮಾನ್ಯವಾಗಿ ಬೆನ್ನುಮೂಳೆ, ಸೊಂಟ ಮತ್ತು ಮುಂದೋಳುಗಳು – ಖನಿಜ ಅಂಶವನ್ನು ಆರಂಭದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಟಿ – ಸ್ಕೋರ್ ಮತ್ತು Z ಸ್ಕೋರ್ ಅನ್ನು ಪಡೆಯುತ್ತದೆ. ಎಂದು ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಅಂದ್ರಾದೆ  ಹೇಳಿದರು.  ಕಾರ್ಯಗಾರದಲ್ಲಿ ಮೂಳೆ ತಪಾಸಣೆಯನ್ನು ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಯ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಮತ್ತು ಮಧುಕೇಶ್ವರ್ ನೆಡೆಸಿಕೊಟ್ಟರು.

   ಮಧ್ಯಾಹ್ನ 1.00 ಗಂಟೆಯವರೆಗೆ ಅನೇಕ ಜನರು ಈ ಶಿಬಿರದ ಪ್ರಯೋಜನ ಪಡೆದರು. ಆಸ್ಪತ್ರೆಯಲ್ಲಿ ಹೆಚ್ಚಿನ ರೋಗನಿರ್ಣಯ, ತನಿಖೆ ಮತ್ತು ತಪಾಸಣೆಗಾಗಿ ಔಷಧಿಗಳನ್ನು ಶಿಫಾರಸು ಮಾಡಲಾಯಿತು. ಕಾರ್ಯಕ್ರಮದಲ್ಲಿ  ಪಾಲನ ಮಂಡಳಿ ಉಪಾಧ್ಯಕ್ಷ ಶ್ರೀ ಲೂಕ್ ಡಿಸೋಜಾ, ಆರೋಗ್ಯ ಆಯೋಗದ ಸಂಚಾಲಕ ಶ್ರೀ ಲೂಯಿಸ್ ಡಿಸೋಜಾ, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಲವೀನಾ ಡಿಸೋಜಾ ಮತ್ತು ಇತರರು ಉಪಸ್ಥಿತರಿದ್ದರು.

Santhekatte: Free bone density test camp in collaboration with various organizations at Mount Rosary Church

Kalyanpur, 11: A two-day (10th and 11th August, 2023) free bone density testing camp was organized for people around Kalyanpur in collaboration with Catholic Sabha of Mount Rosary Church, Dharma Kendra Health Commission, ‘Stri Sangathan’ and ‘Lions Club Kalyanpur – Swarna’.
Reverend Vam Rok D’Souja inaugurated the camp by lighting a lamp along with representatives of various organizers and “underscoring the need for such regular check-ups, thanked the expert medical team, various organizations of the church and Lions Club, Kalyanpur – Swarna for their social care especially for health care. He told the participants of the program that as the camp will continue for one more day i.e. tomorrow, they should spread the word of mouth to the neighbors.
Mrs. Rosie Quadras, president of Catholic Sabah Mount Rosary Church welcomed the introductory remarks.
A bone density test or DEXA scan can determine if a bone is suffering from osteoporosis, a disorder characterized by bones that are more fragile and prone to breaking, calcium deficiency, etc. Mineral content is tested initially and a T-score and Z-score are obtained – usually the spine, hips and forearms. said resource person Prakash Andrade. The workshop was organized by Umesh Kadur Math, Sandesh Shetty and Madhukeshwar of ‘Mess Organic Pvt Ltd’.
. Many people took advantage of this camp till 1.00 pm. Medicines were prescribed for further diagnosis, investigation and check-up in the hospital. The program was attended by the Vice President of the Parenting Board, Mr. Luke D’Souza, the Convener of the Health Commission, Mr. Louis D’Souza, the President of the Women’s Organization, Mrs. Lavina D’Souza.

ಕುಂದಾಪುರದ ಶ್ರೇಯಶ್ರೀಗೆ ಸರಸ್ವತಿ ರಾಜ್ಯ ಪ್ರಶಸ್ತಿ ಪುರಸ್ಕಾರ


ಕುಂದಾಪುರ: 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಶ್ರೀ ಇವರಿಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶಣೈ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರು ಅಂಕದಕಟ್ಟೆ ಉದಯ ಮತ್ತು ಉಮಾ ದಂಪತಿಗಳ ಪುತ್ರಿಯಾಗಿದ್ದಾಳೆ

ಕೋಡಿಪಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ರೆಡ್ಡಮ್ಮೆ, ಉಪಾಧ್ಯಕ್ಷರಾಗಿ ಮುನಿಯಮ್ಮ ಅವಿರೋಧವಾಗಿ ಆಯ್ಕೆ

ಶ್ರೀನಿವಾಸಪುರ 3 : ತಾಲೂಕಿನ ರಾಯಲ್ಪಾಡು ಹೋಬಳಿಯ ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮೆ , ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಾಗಿ ಮುನಿಯಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿ ಗ್ರಾಮ ಪಂಚಾಯಿತಿಯು ಪುನಃ 2 ನೇ ಅವಧಿಗೆ ಕಾಂಗ್ರೆಸ್ ಮುಡಿಲು ಸೇರಿದೆ.
ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಒಟ್ಟು 16 ಸದಸ್ಯರಿದ್ದು, 14 ಕಾಂಂಗ್ರೆಸ್ ಬೆಂಬಲಿತ ಸದಸ್ಯರಿದ್ದು, 2 ಜೆಡಿಎಸ್ ಬೆಂಬಲಿತ ಸದಸ್ಯರಿದ್ದು ಗ್ರಾಮಪಂಚಾಯಿತಿ ಕಛೇರಿಯಲ್ಲಿ ಬುಧವಾರ 2ನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮ ಹಾಗೂ ಅದೇ ಪಕ್ಷದ ಶಿಲ್ಪ ರವರು ನಾಮಪತ್ರ ಸಲ್ಲಿಸಿದ್ದರು ಕೊನೆಗಳಿಗೆಯಲ್ಲಿ ಶಿಲ್ಪ ರವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರೆಡ್ಡಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುನಿಯಪ್ಪ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ಮುನಿಯಪ್ಪ ರವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶೇಷವಾಗಿ ಅಧ್ಯಕ್ಷ , ಉಪಾಧ್ಯಕ್ಷ ಹಾಗು ಸದಸ್ಯರೆಲ್ಲರೂ ಸಹ ತಮ್ಮ ನಾಯಕರಾದ ಕೆ.ಆರ್.ರಮೇಶ್‍ಕುಮಾರ್‍ರವರ ಭಾವಚಿತ್ರಕ್ಕೆ ನಮಿಸಿ, ತಮ್ಮ ನಾಯಕನಿಗೆ ಜೈಕಾರಗಳನ್ನು ಕೂಗಿದರು.
ಚುನಾವಣಾ ಅಧಿಕಾರಿ ಎಂ.ಶ್ರೀನಿವಾಸನ್, ಪಿಡಿಒ ಆರ್.ವಿ.ರವಿಕುಮಾರ್, ಮುಖಂಡರಾದ ಕೋಡಿಪಲ್ಲಿ ಸುಬ್ಬಿರೆಡ್ಡಿ, ವಿಶ್ವನಾಥರೆಡ್ಡಿ, ಸಿಬ್ಬಂದಿಗಳಾದ ಈಶ್ವರ್, ಓಬಳೇಶ್ ಇದ್ದರು.

ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇತ್ರಾವತಿ, ಉಪಾಧ್ಯಕ್ಷೆಯಾಗಿ ಸಲ್ಮಾ ಖಾನಂ ಆಯ್ಕೆ

ಶ್ರೀನಿವಾಸಪು: ತಾಲ್ಲೂಕಿನ ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ಹಾಗೂ ಉಪಾಧ್ಯಕ್ಷೆಯಾಗಿ ಸಲ್ಮಾ ಖಾನಂ ಆಯ್ಕೆಯಾಗಿದ್ದಾರೆ.
15 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ನೇತ್ರಾವತಿ 9 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಷ್ಪರ್ಧಿ ಕಾಂಗ್ರೆಸ್ ಬೆಂಬಲಿತ ರೆಡ್ಡಪ್ಪ 6 ಮತ ಪಡೆದಿದ್ದಾರೆ. ಸಲ್ಮಾ ಖಾನಂ 8 ಮತ ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿ ಸ್ಪರ್ಧಿ ಮಮತ 7 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿಯಾಗಿ ಕೃಷ್ಣಪ್ಪ, ಪಿಡಿಒ ಶ್ರೀನಿವಾಸರೆಡ್ಡಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಮುಖಂಡರಾದ ಬಜ್ಜನ್ನ, ಸುಧಾಕರ್, ಶ್ರೀನಿವಾಸರೆಡ್ಡಿ, ಆನಂದ್, ಕೆ.ಬಿ.ರಘುನಾಥರೆಡ್ಡಿ, ಎಂ.ವಿ.ಮಂಜುನಾಥ ಪ್ರಸಾದ್ ಇದ್ದರು.
ಕೋಡಿಪಲ್ಲಿ ಗ್ರಾಪಂ: ತಾಲ್ಲೂಕಿನ ಕೋಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೆಡ್ಡಮ್ಮ ಹಾಗೂ ಉಪಾಧ್ಯಕ್ಷರಾಗಿ ಮುನಿಯಮ್ಮ ಅವಿರೋಧ ಆಯ್ಜೆಯಾಗಿದ್ದಾರೆ.

ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಕೆ.ಪಿ ನಾಗೇಶ್ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಕೆ.ಪಿ ನಾಗೇಶ್ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
16 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಮಮತ ನಾರಾಯಣಸ್ವಾಮಿ 8 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾರತಿ 7 ಮತ ಪಡೆದಿದ್ದಾರೆ. 1 ಮತ ತಿರಸ್ಕರಿಸಲ್ಪಟ್ಟಿದೆ. ಉಪಾಧ್ಯಕ್ಷೆ ಲಕ್ಷ್ಮಿ ಕೆ.ಪಿ.ನಾಗೇಶ್ 10 ಮತ ಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಅಮಡಪ್ಪ 6 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಸಿ.ಮಂಜುನಾಥ್, ಪಿಡಿಒ ಚಿನ್ನಪ್ಪ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಚುನಾವಣೆ ಮುಗಿದ ಬಳಿಕ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಗೆದ್ದ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಮುಖಂಡರೊಂದಿಗೆ ಸಂತೋಷ ಹಂಚಿಕೊಂಡರು. ರಾಮಚಂದ್ರೇಗೌಡ, ಕೆ.ಪಿ.ನಾಗೇಶ್, ಎಂ.ಆರ್.ರಾಜಣ್ಣ, ರಮೇಶ್, ನಾರಾಯಣಸ್ವಾಮಿ ಇದ್ದರು.

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್,ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಗರತ್ನಮ್ಮ ರಾಮ್‍ಮೋಹನ್ ಒಟ್ಟು 23 ಮತಗಳ ಪೈಕಿ 13 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫೌಜಿಯಾ ಖಾನಂ 9 ಮತ ಪಡೆದುಕೊಂಡಿದ್ದಾರೆ. ಜರೀನಾ ತಾಜ್‍ಗೆ ಸೊನ್ನೆ ಮತಗಳು ಬಂದಿವೆ. 1 ಮತ ತಿರಸ್ಕøತಗೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟಲಕ್ಷ್ಮಮ್ಮ ವೆಂಕಟರವಣ 12 ಮತ ಪಡೆದು ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ವೆಂಕಟಲಕ್ಷ್ಮಮ್ಮ ಜಿ.ರಮೇಶ್ 10 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿ ಎನ್.ನಾರಾಯಣಸ್ವಾಮಿ, ಪಿಡಿಒ ಗೌಸ್‍ಸಾಬ್ ಚುನಾಣಾ ಕಾರ್ಯ ನಿರ್ವಹಿಸಿದರು. ಮುಖಂಡರಾದ ಶೇಷಾದ್ರಿ, ಅರುಣ ರವಿಕುಮಾರ್, ಜಿ.ಕೆ.ನಾಗರಾಜ್, ವೆಂಕಟರವಣಪ್ಪ, ಶಂಕರಪ್ಪ, ಶಿವಣ್ಣ, ಜಿ.ಎನ್.ರೆಡ್ಡಪ್ಪ ಇದ್ದರು.

ಗ್ರಹ ಜ್ಯೋತಿ ಯೋಜನೆಗೆ ಕುಂದಾಪುರದ ಜನಸಾಮಾನ್ಯರಿಂದ ಮೆಚ್ಚುಗೆ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಜು.10:ಗ್ರಹ ಜ್ಯೋತಿ ಯೋಜನೆ ಅಡಿ ಕುಂದಾಪುರ ಮೆಸ್ಕಾಂ ಕಚೇರಿಯ ಉಪ ವಿಭಾಗದಲ್ಲಿ 21,300 ಫಲಾನುಭವಿ ಗ್ರಾಹಕರು ಈಗಾಗಲೇ ನೋಂದಾಯಿತರಾಗಿದ್ದಾರೆ.

ಕುಂದಾಪುರ ಪುರಸಭೆ ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಉಪ ವಿಭಾಗದಲ್ಲಿ ಒಟ್ಟು 31,200 ಬಳಕೆದಾರರಿದ್ದು 25,000 ಗ್ರಾಹಕರು ಮಾಸಿಕ 200 ಯೂನಿಟ್ ಮೀರದವರಿದ್ದಾರೆ ಎಂದು ಈ ಹಿಂದಿನ ಬಳಕೆಯಿಂದ ಅಂದಾಜಿಸಲಾಗಿದೆ.

ಇನ್ನು 3700 ಅರ್ಹ ಗ್ರಾಹಕರು ನೊಂದಣಿಗೆ ಬಾಕಿ ಉಳಿದಿದ್ದು, ನೊಂದಣಿಗೆ ಸಮೀಪದ ಸೇವಾ ಸಿಂಧು ,ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ನೋಂದಾಯಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊಗೆ ತಿಳಿಸಿದರು.

ಕೆಲವೆಡೆ ಒಂದು ಆರ್ ಆರ್ ನಂಬ್ರ ದಲ್ಲಿ ಎರಡು ಆಧಾರ್ ಕಾರ್ಡಿನಿಂದ ಎರಡು ಬಾರಿ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು. ಗ್ರಾಮದಲ್ಲಿ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ಮೀಟರ್ ರೀಡಿಂಗ್ ನಡೆಸುತ್ತಿದ್ದು, ಶೂನ್ಯ ಬಿಲ್ ಗೆ ಕುಂದಾಪುರದ ಮಹಿಳೆಯರಿಂದ ಮತ್ತು ಜನಸಾಮಾನ್ಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಶಿಕ್ಷಕರಿಗೆ ಸೇವಾದಳ ಪುನಶ್ಚೇತನ ಕಾರ್ಯಾಗಾರ ; ರಾಷ್ಟ್ರಧ್ವಜ, ರಾಷ್ಟ್ರಗೀತೆ ಭಾರತದ ಸಾರ್ವಭೌಮತೆಯ ಸಂಕೇತ – ಸಿಎಂಆರ್ ಶ್ರೀನಾಥ್

ಕೋಲಾರ:- ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಧ್ವಜ ಕುರಿತಂತೆ ಪ್ರತಿ ಮಕ್ಕಳಿಗೂ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ರಾಷ್ಟ್ರಧ್ವಜ ಕುರಿತಂತೆ ಪ್ರತಿಯೊಂದು ಮಾಹಿತಿಯನ್ನು ಹೊಂದುವುದು ಶಿಕ್ಷಕರ ಕರ್ತವ್ಯವಾಗಿದೆ, ಆ ಮಾಹಿತಿಯನ್ನು ಭಾರತ ಸೇವಾದಳವು ನೀಡುತ್ತದೆ ಎಂದು ತಿಳಿಸಿದರು.
ದೇಶದ ಗಣ್ಯ ವ್ಯಕ್ತಿಗಳು ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಇತರರು ಹೊರದೇಶಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ಸೂಚಿಸುತ್ತಾರೆ. ಕ್ರೀಡಾಪಟುಗಳು ಜಯಶಾಲಿಯಾದಾಗ ಭಾರತ ಧ್ವಜದೊಂದಿಗೆ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಾರೆ. ಆ ಘನತೆ ರಾಷ್ಟ್ರದ ಧ್ವಜದಿಂದ ದೊರಕುತ್ತದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ತಪ್ಪದೇ ವಿತರಿಸಲಾಗುವುದು ಎಂದು ನುಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕು. ದಿನನಿತ್ಯ ನಿಮ್ಮ ಕೆಲಸದ ಜಂಜಾಟದಲ್ಲಿ ಮರೆಯುವ ಪಾಠವನ್ನು ಭಾರತ ಸೇವಾದಳದಿಂದ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರಧ್ವಜವೆಂದರೆ ರಾಷ್ಟ್ರಪತಿಗಳಿಗಿಂತಲೂ ದೊಡ್ಡದು ಎಂಬ ಭಾವನೆ ನಮ್ಮೆಲ್ಲರದ್ದು. ರಾಷ್ಟ್ರಕ್ಕೆ ನೀಡುವ ಗೌರವವನ್ನು ಧ್ವಜಕ್ಕೆ ನೀಡಲೇಬೇಕು. ಆದ್ದರಿಂದಲೇ ರಾಷ್ಟ್ರಧ್ವಜ ಸಮಿತಿ ನಿರ್ಮಿಸಿ ನೀತಿ, ನಿಯಮ ಉಲ್ಲಂಘನೆ ಆಗದಂತೆ ಧ್ವಜವನ್ನು ಹಾರಿಸಿ, ಇಳಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಅಮೃತ ಮಹೋತ್ಸವ ಆಚರಣೆ ಸಮಯದಲ್ಲಿ ಮನೆಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿದರು, ಆದರೆ ಕೆಲವು ಕಡೆ ಅಗೌರವ ಘಟನೆಗಳು ಸಹ ನಡೆಯಿತು. ಆ ರೀತಿ ಆಗದಂತೆ ಪ್ರತಿ ಭಾರತೀಯರು ಹೆಚ್ಚಿನ ಘನತೆ ಗೌರವದಿಂದ ಧ್ವಜವನ್ನು ಸಮಯಕ್ಕೆ ಸರಿಯಾಗಿ ಹಾರಿಸಬೇಕು ಮತ್ತು ಇಳಿಸಬೇಕು ಎಂದು ವಿವರಿಸಿದರು.
ಇಡೀ ಭಾರತಕ್ಕೆ ಖಾದಿ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ನೆಯ್ದು ನೀಡುತ್ತಿರುವ ರಾಷ್ಟ್ರಧ್ವಜ ನಿರ್ಮಾಣದ 50 ಸಂಘಟನೆಗಳು ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿಯಲ್ಲಿದೆ. ಅವರಿಗೆ ಜೀವನ ನಡೆಸಲು ಕಷ್ಟವಾಗಿದೆ, ಸರಿಯಾದ ಸಬ್ಸಿಡಿ, ಕಚ್ಚಾ ಸಾಮಗ್ರಿಗಳ ಪೂರೈಕೆ ಇಲ್ಲದೆ. ಇಡೀ ರಾಷ್ಟ್ರಕ್ಕೆ ಧ್ವಜಗಳನ್ನು ಪೂರೈಸಲು ಆಗುತ್ತಿಲ್ಲವೆಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಭಾರತ ಸೇವಾದಳ ಘಟಕಗಳಿದೆ. ಪ್ರತಿ ಶಾಲೆಯಲ್ಲಿ 33 ಜನ ತಂಡ ಮಾಡಿ, ರಾಷ್ಟ್ರ ಹಬ್ಬಗಳನ್ನು ಆಚರಿಸುವ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಗೌರವ ನೀಡುವ ಹಾಗೂ ಬ್ಯಾಂಡ್ ಸೆಟ್ ತರಬೇತಿಯನ್ನು ಸೇವಾದಳ ನೀಡುತ್ತದೆ ಎಂದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಂದಿನ ಪೀಳಿಗೆ ಮಕ್ಕಳಿಗೆ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಹೋರಾಟಗಾರರ, ಬಲಿದಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ರಾಷ್ಟ್ರಕ್ಕೆ ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಮಕ್ಕಳಿಗೆ ತಿಳಿಸಬೇಕು ಆಚರಿಸಲು ಸೂಚಿಸಬೇಕು. ಭಾರತ ಸೇವಾದಳವು ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ಪೂರೈಸಿಕೊಂಡು ಬರುತ್ತಿದೆ ಎಂದರು.
ಭಾರತ ಸೇವಾದಳ ರಾಜ್ಯ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ, ಬಹದ್ದೂರ್ ಸಾಬ್, ಚಾಮುಂಡೇಶ್ವರಿ, ಸರಸ್ವತಮ್ಮ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ದಾನೇಶ್ ನಿರೂಪಿಸಿ, ಶ್ರೀರಾಮ್ ಸ್ವಾಗತಿಸಿ, ಶ್ರೀನಿವಾಸಮೂರ್ತಿ ವಂದಿಸಿದರು.

3 ಕೋಟಿ ವೆಚ್ಚದಲ್ಲಿ ಜಿಲ್ಲಾ ನೌಕರರ ಭವನ ನಿರ್ಮಾಣ ಆಗಸ್ಟ್ ಕೊನೆ ವಾರ ಗುದ್ದಲಿ ಪೂಜೆ ನಡೆಸಲು ತೀರ್ಮಾನ-ಸುರೇಶ್‍ಬಾಬು

ಕೋಲಾರ:- ಅಂದಾಜು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೂರು ಮಹಡಿಗಳ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡದ ಗುದ್ದಲಿ ಪೂಜೆ ಆಗಸ್ಟ್ ಕೊನೆ ವಾರ ಹಮ್ಮಿಕೊಂಡಿರುವುದಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿತು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಗೆ ಚಾಲನೆ ನೀಡಿ, ಕಳೆದ ತಿಂಗಳು ನಿವೃತ್ತರಾದ ಗ್ರಾ.ಪಂ ಪಿಡಿಒ ನಾಗರಾಜ್, ಜಿಪಂನ ಚೆನ್ನಪ್ಪ, ತೋಟಗಾರಿಕಾ ಇಲಾಖೆಯ ಕದಿರಪ್ಪ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಸುಂದರ ನೌಕರರ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಜತೆಗೆ ಜಿಲ್ಲೆಯ ಅನೇಕ ನೌಕರರು ಆರ್ಥಿಕ ನೆರವು ಒದಗಿಸಲು ಒಪ್ಪಿದ್ದಾರೆ ಎಂದು ಸಭೆಗೆ ತಿಳಿಸಿದ ಸುರೇಶ್‍ಬಾಬು, ನಿವೃತ್ತ ನೌಕರರೂ ಸಹಾ ಕಟ್ಟಡ ಕಾಮಗಾರಿಗೆ 2 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೆ.3ನೇ ವಾರವೇ ಪ್ರತಿಭಾ ಪುರಸ್ಕಾರ


ಜಿಲ್ಲಾ ನೌಕರರ ಸಂಘದಿಂದ ಸೆಪ್ಟೆಂಬರ್ ಮೂರನೇ ವಾರ ನೌಕರರ ಸಾಧಕ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಂಘದ ವಾರ್ಷಿಕ ಮಹಾಸಭೆ ನಡೆಸಲು ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.
ವಿಧಾನಸಭಾ ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಲು ನಿರ್ಧರಿಸಿದ್ದು, ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು ದಿನಾಂಕ ನಿಗಧಿ ಮಾಡಿದ ಕೂಡಲೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ತಾಲ್ಲೂಕು ಸಂಘಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ದಾಖಲೆ,ವಹಿಗಳನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಹಾಲಿ ಖಜಾಂಚಿ ವಿಜಯ್ ಮತ್ತವರ ತಂಡ ಪಡೆದುಕೊಂಡಿದ್ದು ವಾಪಸ್ಸು ನೀಡಿಲ್ಲ ಎಂದು ಆರೋಪಿಸಿದಾಗ ಅಧ್ಯಕ್ಷರು ಉತ್ತರಿಸಿ ಸಂಘಕ್ಕೆ ವರದಿಯನ್ನೂ ನೀಡಿಲ್ಲ ಮತ್ತು ಕಡತಗಳನ್ನು ಹಿಂತಿರುಗಿಸಿಲ್ಲ ಕೂಡಲೇ ಕಡತ ಹಿಂತಿರುಗಿಸಲು ಸಭೆಯಲ್ಲಿ ಇದ್ದ ಅವರಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್ ಅವರಿಗೆ ಸಂಘದ ಕಡತಗಳೊಂದಿಗೆ ಜವಾಬ್ದಾರಿ ಹಸ್ತಂತರಿಸುವಂತೆ ಚೌಡಪ್ಪ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಸಂಘದ ಕೆಲವು ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಹಾಲಿ ಖಜಾಂಚಿ ವಿಜಯ್ ಅವರು ಸಂಘದ ಕೆಲಸಗಳ ನಿರ್ವಹಣೆಗೆ ಸ್ಪಂದಿಸದಿರುವ ಕುರಿತು ಸಭೆಯ ಗಮನಕ್ಕೆ ತರಲಾಯಿತು.

ಒಗ್ಗಟ್ಟಾಗಿ ಸಾಗಲು ಕೆಎನ್‍ಎಂ ಮನವಿ


ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಾಗಿದೆ, ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕು, ಹಿಂದೆ ಚೌಡಪ್ಪ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯಲ್ಲಿ ಸ್ಪಂದನೆ ನೀಡದ ಕಾರಣವೇ ಅಜಯ್ ನೇಮಕವಾಗಿದೆ ಹಾಗೆಯೇ ಈಗ ಖಜಾಂಚಿ ವಿಜಯ್ ಸಹಾ ಸಹಕಾರ ನೀಡದಿರುವುದು ನಿಜ ಎಂದರು.
ಸಂಘವನ್ನು ಒಟ್ಟಾಗಿ ಮುನ್ನಡೆಸೋಣ ಎಲ್ಲಾ ಸದಸ್ಯರು ಕೈಜೋಡಿಸಿ ಎಂದ ಅವರು, ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ನೌಕರರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್,ಗೌರವಾಧ್ಯಕ್ಷ ರವಿಚಂದ್ರ,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್,ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಉಪಾಧ್ಯಕ್ಷರಾದ ಪುರುಷೋತ್ತಮ್,ನಂದೀಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಕೃಷ್ಣಮೂರ್ತಿ,ಶ್ರೀನಿವಾಸ್, ಬಂಗಾರಪೇಟೆ ಅಧ್ಯಕ್ಷ ಅಪ್ಪೇಗೌಡ, ಜಿಲ್ಲಾ ಪದಾಧಿಕಾರಿಗಳಾದ ಶಿವಕುಮಾರ್, ಖಜಾನೆ ಶಂಕರ್, ವಿಜಯಮ್ಮ, ಪ್ರೇಮ, ಅನಿಲ್, ರವಿ,ಶ್ರೀರಾಮ್, ಚೌಡಪ್ಪ,ರತ್ನಪ್ಪ, ನಾಗಮಣಿ, ಎನ್.ಎಸ್.ಭಾಗ್ಯ,ಕಲಾವತಿ,ಮಂಜುಳಾ, ಯೂನಿಸ್ ಖಾನ್,ಹರ್ಷಿತ್‍ಗಾಂಧಿ, ಶಿಕ್ಷಕ ಬಳಗದ ವೆಂಕಟಾಚಲಪತಿ,ಚಿಕ್ಕಣ್ಣ,ಸದಾಶಿವರೆಡ್ಡಿ,ಮಲ್ಲಿಕಾರ್ಜುನ್, ಸುಬ್ರಮಣಿ,ಕೋರ್ಟ್‍ನ ನಾಗರಾಜ್,ಮುನಿಸ್ವಾಮಿ, ಬಸವೇಗೌಡ,ನಟರಾಜ್ ಮತ್ತಿತರರಿದ್ದರು.