HOLY ROSARY CHURCH, KUNDAPUR – 450 th JUBILEE SOUVENIR 2021

Woman and Girl Child Day celebrated at Our Lady of Assumption Church, Hiriyur

Chitradurga, Hiriyur, September 10, 2023: Diocese of Shimoga dedicated 2023 year as “Woman and Girl Child year”. Diocese has organised various programmes in this regard. Bishop Francis Serrao SJ, Bishop of Diocese of Shimoga had asked all the Parishes to celebrate this day on September 10th. Our Lady of Assumption Church, Hiriyur, Chitradurga District celebrated “Woman and Girl Child year” meaningfully on September 10th.

Parish Priest Fr Franklin D’Souza celebrated Holy Eucharist at 8am. He preached a homily on “Woman and Girl Child”. He narrated the role of a woman biblically. He spoke about, some of the courageous women from the Bible. How they inspired others through their courageous faith. He also spoke on today’s condition of Girl child and women. He said woman is known for Prayer, love, courage, service and sacrifice. He gave the example of Mother Mary. He invited faithful to respect and honour them in our day today lives. Then he prayed a special prayer for the faithful. 

After the Holy Eucharist at 10am programme was organised at Church Hall. Parish Priest Fr Franklin D’Souza was the president of the program and  Sr. Metty Mathew & Sr. Elsamma, superiors of both the convents were the guests. Mrs. Madala Maria, President of Women Association and her team was in the Dais.

Programme began with Prayer Song by “Parish Women Association”, led by Mrs.Smitha, Mrs. Savita, Mrs. Leena and Mrs. Sheeba.

Then there was lighting of the Lamp by the guests, through which programme was officially inaugurated. Fr Franklin D’Souza led a prayer of blessing. Then a short prayer service was held by the women. 

Mrs. Stella  Olivera officially welcomed the President, guests and the audience. Mrs. Leena Suresh gave the inaugural Speech. 

At 10:30am Breakfast was served for all.

After the breakfast at 11am programme continued with prayer dance and then the 

President and guests honoured the women of 70 and above age with shawl and a gift.

Mrs. Angela Mary and Mrs. Patricia spoke in behalf of the elders. Sr. Metty Matthew incharge of Parish Women Association gave a meaningful message for the women and girls.

Women Association President Mrs. Madala Maria spoke from heart, since she is also a ward counselor, she told when we face society courageously we can achieve anything in life. 

Then followed the cultural programmes and games for the women and girls. After which Fr Franklin D’Souza distributed the prizes and spoke on the day’s program. He said that today is a joyous day for our parish from kids to elderly all came together first time to celebrate “Woman and Girl Child day”. He spoke on the importance of the woman and Girl Child as they are gift from God. He said that with prayer and faith we need to face the situation and should never ever give up in life.

Mrs. Monica thanked the dignitaries, gathering and all those who contributed for the success of the 

Mrs. Smitha and Ms. Anusha was the Emcees. Total number of Women and girls attended were 150.

Lunch was served for everyone. 

Women Office Bearers 2023 are; 

President: Madala Maria

Vice President: Monica

Secretary: Christy Joanita (Sheeba)

Joint Secretary: Leena

Treasurer: Smitha

Liturgy: Manjula Joseph 

Animator: Sr. Metty Mathew 

Director: Fr Franklin D’Souza

Committee for the Woman and Girl Child year members are;

1. Madala Maria 

2. Sheeba

3. Monica

4. Leena

5. Stella Mary

6. Madhura

7. Meghana

8. Savita

9. Smitha

10. Margaret Sheela

11. Manjula Joseph 

Animator: Sr. Metty Mathew 

Director: Fr Franklin D’Souza

ರೈತರು ಕಣ್ಣೀರು ಹಾಕಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಾವು ಉದ್ದಾರ ಆಗಲ್ಲ;ಸಂಸದ ಮುನಿಸ್ವಾಮಿ

ಶ್ರೀನಿವಾಸಪುರ 1 : ರೈತರು ಕಣ್ಣೀರು ಹಾಕಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಾವು ಉದ್ದಾರ ಆಗಲ್ಲ. ರೈತ ಚಟುವಟಿಕೆಗಳನ್ನು ಮಾಡುತ್ತಿರುವ ಇವರಿಗೆ ಸಾಗುವಳಿ ಕೊಟ್ಟಿರುವವರು ಯಾರು ? ಆರ್‌ಟಿಸಿ ಮಾಡಿಕೊಟ್ಟಿರುವವರು ಯಾರು ? 70 , 80 ವರ್ಷಗಳ ಹಿಂದೆ ಎಸಿ, ತಹಶೀಲ್ದಾರ್ , ಆರ್‌ಐಗಳು , ಕಾರ್ಯದರ್ಶಿಗಳು ನೀಡಿರುವುದು ಅವರು ಕೊಡದೆ ಇದ್ದರೆ ಅವರು ಏಕೆ ರೈತ ಚಟುವಟಿಕೆಗಳು ಮಾಡಲು ಸಾಧ್ಯ ಎಂದು ಸಂಸದ ಮುನಿಸ್ವಾಮಿ ಪ್ರಶ್ನಿಸಿದರು.
ತಾಲೂಕಿನ ಪಾಳ್ಯ ಗ್ರಾಮದ ರೈತ ಜಮೀನುಗಳಿಗೆ ಶನಿವಾರ ದಿಡೀರ್ ಬೇಟಿ ನೀಡಿ ಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಗೆ ಬೇಟಿ ನೀಡಿ ರೈತರಿಗೆ ಸಾಂತ್ವಾನ ಹೇಳಿ, ದೂರವಾಣಿ ಮೂಲಕ ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಬಡವರ ಜಮೀನು ಹೇಗೆ ವಶಪಡಿಸಿಕೊಂಡಿರಿ ಎಂದು ಪ್ರಶ್ನಿಸುತ್ತಾ ಮಾತನಾಡಿದರು.
ಎಂಎಲ್‌ಎ, ಎಂಪಿ ಅಧಿಕಾರ ಶಾಶ್ವತ ಅಲ್ಲ. ರೈತರು ಉಳಿದರೇ ದೇಶ ಉಳಿಯುವುದು ನಾವು ಉಳಿಯಲು ಸಾಧ್ಯ. ರೈತರು ನಮ್ಮ ಅನ್ನದಾತರು. ರೈತರ ಆದಾಯ ದ್ವಿಗಣ ಆಗಬೇಕು ಎಂದು ಕೇಂದ್ರ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
. ಅರಣ್ಯ ಇಲಾಖೆಯು ರಾತ್ರೋರಾತ್ರಿ ಬಂದು ಪಾಳ್ಯ ಬಳಿ ರೈತರ ಮೇಲೆ ದೌರ್ಜನ್ಯ ವೆಸಗುತ್ತಿದೆ. ಜೆಸಿಬಿ ವಾಹನಕ್ಕೆ ಅಡ್ಡಬಂದ ರೈತರು ಹಾಗು ರೈತರ ಮಹಿಳೆಯರ ಮೇಲೆ ಜೆಸಿಬಿ ಹತ್ತಿಸುತ್ತೇನೆ ಎಂದು ಬೆದರಸಿ ಫಸಲುನ್ನು ನಾಶಮಾಡುತ್ತಿದ್ದಾರೆ.
ಸರ್ಕಾರವು ಜನರಿಗೆ ಗ್ಯಾರಂಟಿಗಳಲ್ಲಿ 2000 ಕೊಟ್ಟು ಈತರದ ಅನ್ಯಾಯ ಮಾಡುವುದು ಸರಿಯೇ, ಅಲ್ಲಿಯೇ ಇದ್ದ ಮಹಿಳೆಯರು ನಮಗೆ ಸರ್ಕಾರ ನೀಡುವಂತಹ ಗ್ಯಾರಂಟಿಗಳು ಯಾವುದು ಬೇಡ. ನಮ್ಮ ಜಮೀನು ನಮಗೆ ಕೊಡಲಿ ಸಾಕು ಎಂದು ಮಹಿಳೆಯರು ಹೇಳಿದರು.
ಕೋಲಾರ ಜಿಲ್ಲೆಯ ಕಂದಾಯ ಸಚಿವರಾದ ಕೃಷ್ಣಬೈರೇಗೌಡರೇ ರೈತರ ಗೋಳು ನಿಮಗೆ ಕೇಳಿಸುತ್ತಿಲ್ಲವೇ, ನಿಮ್ಮ ತಂದೆಯು ಒಬ್ಬ ರೈತನ ಮಗನೇ, ಕಿವಿ ಕೇಳಿಸುತ್ತಿಲ್ಲವೆ ರೈತರ ಗೋಳು ಕೇಳಿಸುತ್ತಿಲ್ಲವೆ . ಬನ್ನಿ ಇಲ್ಲಿನ ಸಮಸ್ಯೆಯನ್ನು ನೋಡಿ, ಇಲ್ಲಿ ಒಬ್ಬ ಶಾಸಕ ಸೋತಿರಬಹುದು, ಇನ್ನೊಬ್ಬರು ಗೆದ್ದಿರಬಹುದು ಯಾಕೆ ದ್ವೇಷದ ರಾಜಕರಣ ಮಾಡುವುದು ಬೇಡ. ರೈತರ ಬಲಿಕೊಡುತ್ತಿದ್ದು, ಸಚಿವರು ಇಲ್ಲಿ ಬಂದು ರೈತರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ರೈತರ ಪರವಾಗಿ ರೈತರಿಗೆ ಏನು ಅನ್ಯಾಯವಾಗುತ್ತಿದೆ ಅದನ್ನ ತಡೆಯಲು ನಾವೆಲ್ಲರೂ ಸೇರಿ ಪಕ್ಷಾತೀತವಾಗಿ ರೈತರ ಪರವಾಗಿ ಕೆಲಸ ಮಾಡಬೇಕು. ಸರ್ಕಾರವು ಮಧ್ಯೆ ಪ್ರವೇಶಿಸಿ , ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮುಖಂಡರಾದ ರೋಣೂರು ಚಂದ್ರಶೇಖರ್, ಹೆಬ್ಬಟ್ಟ ಆನಂದ್, ಪಾಳ್ಯ ಗೋಪಾಲರೆಡ್ಡಿ ಹಾಗು ರೈತರು ಇದ್ದರು.
ಬಾಕ್ಸ್ಗೆ : ಕಳೆದ 20 ದಿನಗಳಿಂದಲೂ ಅರಣ್ಯ ಇಲಾಖೆ ಅರಣ್ಯ ಪ್ರದೇಶವನ್ನು ಸುಮಾರು 560 ಎಕರೆ ಒತ್ತುವರಿ ಮಾಡಿಕೊಂಡ ರೈತರ ಜಮೀನನ್ನು ತೆರವು ಮಾಡಲಾಗಿತ್ತು. ಇನ್ನೂ 2500 ಎಕರೆ ಭೂಮಿಯನ್ನು ಪ್ರಭಾವಿ ರೈತರು ಒತ್ತುವರಿ ಮಾಡಿಕೊಂಡಿದ್ದು, ಹಂತ ಹಂತವಾಗಿ ತೆರವು ಮಾಡಲು ಅರಣ್ಯ ಅಧಿಕಾರಿಗಳ ಚಿಂತನೆ.

ನನ್ನಜ್ಜ ಕಣ್ಣಪ್ಪ ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ – ಶ್ಯಾಮಲಾ ಮಾಧವ

This image has an empty alt attribute; its file name is 0000-Main-STANY-3.jpg

“ನಾವೆಲ್ಲರೂ ಕಾನಾಟಿ ( ದಪ್ಪ ಕನ್ನಡಕ ಧರಿಸುವ) ಅರ್ಥಾತ್ ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪರ‍್ವದಲ್ಲಿ ಮದ್ರಾಸ್‌ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗಣಿತ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಪ್ರಥಮ ಬಾರಿ ರ‍್ಯಾಂಕ್ ತಂದುಕೊಟ್ಟ ಲೂವಿಸ್ ಕಣ್ಣಪ್ಪನವರು – ನನ್ನಣ್ಣನಿಗೆ ಗಣಿತ ಮತ್ತು ನನಗೆ ಇಂಗ್ಲಿಶ್ ಸಾಹಿತ್ಯ ಕಲಿಸಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಅವರಿಲ್ಲಿ ಅಪಾರ ಪಾಂಡಿತ್ಯವಿತ್ತು.” ಎಂದು ಮುಂಬಯಿಯ ಖ್ಯಾತ ಕನ್ನಡ ಲೇಖಕಿ ಶ್ರೀಮತಿ ಶ್ಯಾಮಲಾ ಮಾಧವ ಅಭಿಪ್ರಾಯಪಟ್ಟರು.

ಶ್ರೀಮತಿ ಶ್ಯಾಮಲಾ ಮಾಧವ – ಸಾಹಿತ್ಯ ಅಕಾಡೆಮಿ, ನವದೆಹಲಿ ಇವರು ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶನಿವಾರ, ಸಪ್ಟೆಂಬರ್ 2 ರಂದು ಹಮ್ಮಿಕೊಂಡ ‘ಥ್ರೂ ಮೈ ವಿಂಡೋ’ ಕರ‍್ಯಕ್ರಮ ಸರಣಿಯಲ್ಲಿ ಕೊಂಕಣಿಯ ಪ್ರಪ್ರಥಮ ಪತ್ರಿಕೆ ದರ‍್ವೆಂ ಸ್ಥಾಪಕ – ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು – ಬರೆಹದ ಕುರಿತು ವಿಶೇಷ ಉಪನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Bishop Francis Serrao SJ released Rev. Fr Nelson Dsouza’s liturgical musical audio in Kannada at Minor Basilica Harihara,

Davanagere, Harihara, September 8, 2023: The audio launch of much-awaited liturgical hymns ‘Swarga Sveekrutha Maatheya Balipuje’ (Mass in honour of our Lady of Assumption) was held at Minor Basilica of our Lady of Health in the Diocese of Shimoga on Friday, September 8th. 

Most. Rev  Dr Francis Serrao Sj, Bishop of Diocese of Shimoga released the Liturgical Hymns. Rev. Fr George K. A, Rector of Minor Basilica, Rev. Fr Franklin D’Souza, Parish Priest of Hiriyur,  Rev. Fr Pius D’Souza, Diocesan Youth Director and Fr Venil Dsilva,  Mission Director of Harappanahalli, were present for the program. 

Bishop Francis Serrao SJ had given the imprimatur. Launching the audio, Bishop Francis Serrao SJ expressed the importance of mass and how singing can play an important role in liturgy. 

The tune of the whole mass set including the penitential rite, Gloria, Sanctus, profession of faith and lamb of God was composed by Rev. Fr Nelson Dsouza for liturgical use. Harmony and music was done by renowned musician Mr. Cajetan Dias. Shilpa Cutinha, Joshal D’Souza, Hayden Sequeira and Stephen Cutinha rendered their voice in the liturgical hymns. Mixing and mastering was done by Johnson Durai.

Rev. Fr Alphonse Nelson D’Souza is a Priest of the Diocese of Shimoga was Ordained on 27th April 2016. He hails from St. Thomas Church, Davanagere . He completed his B.A in Western Music at Sandesha, Mangalore. He obtained his Masters in Philosophy and Theology at St. Joseph’s Inter-Diocesan Seminary at Jeppu,  Mangalore. 

At present he serves as Assistant Parish Priest of Our Lady of Assumption Church Hiriyur, Chitradurga District and as Head Master of Assumption English High School at Hiriyur. Since music is gift from God, he spends time in composing simple tunes for Liturgical Hymns. So that everyone can make use of them. 

ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್  ಸೊಸೈಟಿಯ 32 ನೇ ವಾರ್ಷಿಕ ಸಾಮಾನ್ಯ ಸಭೆ- ಶೇ. 22% ಡಿವಿಡೆಂಡ್ ಘೋಷಣೆ

ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್  ಸೊಸೈಟಿಯ 32 ನೇ ವಾರ್ಷಿಕ ಸಾಮಾನ್ಯ ಸಭೆಯು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ  ಭಾನುವಾರ (ಸೆ.10 ರಂದು) ನಡೆಯಿತು. ಸೊಸೈಟಿಯ ಅಧ್ಯಕ್ಷ   ಜಾನ್ಸನ್ ಡಿ’  ಅಲ್ಮೇಡಾ  ಅಧ್ಯಕ್ಷತೆ ವಹಿಸಿ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು.

 ಸಂಘದ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 4123 ಸದ್ಯಸರಿಂದ 1,00,68,230 ಪಾಲು ಬಂಡವಾಳ ಹಾಗೂ 142 ಕೋಟಿ ರೂ ಠೇವಣಿ ಇದ್ದು 115 ಕೋಟಿ ಹೊರಬಾಕಿ ಸಾಲ ಹೊಂದಿದ್ದು, ರೂಪಾಯಿ 660 ಕೋಟಿ ವ್ಯವಹಾರ 3.53 ಕೋಟಿ ನಿವ್ವಳ ಲಾಭ ಪಡೆದಿದೆ’ ಎಂದರು.

    ಅಧ್ಯಕ್ಶತೆ ವಹಿಸಿದ್ದ ಜಾನ್ಸನ್ ಡಿ’  ಅಲ್ಮೇಡಾ  2023 ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂಪಾಯಿ 148 ಕೋಟಿ ಠೇವಣಿ ಹಾಗೂ ರೂ 119 ಕೋಟಿ ಸಾಲ ಇದೆ. ವರದಿ ಸಾಲಿನಲ್ಲಿ ಸಂಘವು ರೂ 3.53  ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

    ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು ರೂಪಾಯಿ 660 ಕೋಟಿ ವ್ಯವಹಾರ ಮಾಡಿದೆ ಈಗಾಗಲೆ ಸೊಸೈಟಿಗೆ 8 ಶಾಖೆಗಳು ಇದ್ದು, ಇನ್ನೂ ಎರಡು ಶಾಖೆಗಳನ್ನು ಆದಷ್ಟು ಬೇಗನೆ ತೆರೆಯಲಿವೆ ಎಂದು ತಿಳಿಸಿ, ಸೊಸೈಟಿಯು ಕೇವಲ ಹಣದ ವ್ಯವಹಾರ ಮಾಡದೆ, ಸಮಾಜಕ್ಕೆ ಒಳಿತಾಗುವಂತಹ ಯೋಜನೆಗಳನ್ನು ಮಾಡುತ್ತ ಇದ್ದು ಈ ವರ್ಷ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸುತ್ತದೆ, ಮುಂದಿನ ವರ್ಷ ಸಿ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದವರಿಗೆ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದರು. ಸಂಘವು ಈ ವರ್ಷ ದಕ್ಷಿಣ ಕನ್ನಡ ಸಹಾಕಾರಿ ಬ್ಯಾಂಕ್ ಪ್ರಶಸ್ತಿ ಗಳಿಸಿ ಹಿಂದಿನ ನಾಲ್ಕು ವರ್ಷಗಳಲ್ಲಿ ನಿರಂತರ ವಿವಿಧ ರೀತಿಯ ಸಹಾಕಾರಿ ಪ್ರಶಸ್ತಿಗಳ ಗರಿಯನ್ನು ಗಳಿಸಿಕೊಂಡಿದೆ ಎಂದು. ತೀಳಿಸಿದರು.

    ಸಂಘದ ಮುಖ್ಯ ಸಲಹದಾರರಾದ ಅತೀ ವಂದನಿಯ ಸ್ಟ್ಯಾನಿ ತಾವ್ರೋ ರವರು ‘ಈ ಸಂಘ ರೋಜರಿ ಮಾತೆಯ ಆಶಿರ್ವಾದದಲ್ಲಿ ಸ್ಥಾಪನೆಯಾಗಿದ್ದು, ಈ ಸಂಘಕ್ಕೆ ಅವಳ ಆಶಿರ್ವಾದ ಎಂದಿಗೂ ಇರುತ್ತದೆ, ರೋಜರಿ ಸಂಘ ವಿದ್ಯಾರ್ಥಿ ವೇತನ, ಶಿಕ್ಷಣಕ್ಕೆ ಸಾಲ ಕೊಟ್ಟು ಪ್ರೇರೆಪಿಸುತ್ತದೆ ಅಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ನೀಡುತ್ತದೆ, ಮಾತ್ರವಲ್ಲ ವಾಪಾಸು ಬಂದು ತಾಯ್ನಾಡಿನಲ್ಲಿ ಉದ್ಯೋಗ ಮಾಡಲು ಪ್ರರೇಪಿಸುತ್ತದೆ ಎಂದು ಶ್ಲಾಘನೆ ಮಾಡುತ್ತಾ, ಸಂಘ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು.

     ಸಂಘದ ಸದಸ್ಯರ 10 ನೇ ತರಗತಿ, ಪಿ.ಯು.ಸಿ.ಪದವಿ, ಸ್ನಾಕೋತ್ತರ ಇಂಜಿನಿಯರಿoಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಭೆಯಲ್ಲಿ ನಿರ್ದೇಶಕಿಯರಾದ ಡೈನಾ ಡಿ ಅಲ್ಮೇಡಾ, ಶಾಂತಿ ಆರ್  ಕರ್ವಾಲ್ಲೊ, ಶಾಂತಿ ಡಾಯಾಸ್, ನಿರ್ದೇಶಕರಾದ ಫಿಲಿಪ್ ಡಿಕೋಸ್ಟಾ, ವಿನೋದ್ ಕ್ರಾಸ್ಟೊ,ಬ್ಯಾಪ್ಟಿಸ್ಟ್ ಡಾಯಾಸ್,  ಓಜಲಿನ್  ರೆಬೆಲ್ಲೊ,  ಪ್ರಕಾಶ್ ಲೋಬೋ,  ಸಂತೋಷ್  ಓಝೊವಲ್ಡ್ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್,  ಟೆರೆನ್ಸ್  ಸುವಾರಿಸ್, ಮತ್ತು ಮೈಕಲ್ ಪಿಂಟೊ,  ತಿಯೋದರ ಒಲಿವೇರ  ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ವಿಲ್ಸನ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಡೆರಿಕ್ ಡಿಸೋಜಾ ವಂದಿಸಿದರು.

ಕುಂದಾಪುರ ರೋಜರಿ ಚರ್ಚಿನಲ್ಲಿ ವಾಹನಗಳ ಆಶಿರ್ವಾದಿಕರಣ

ಕುಂದಾಪುರ,ಸೆ.10: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 10 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಅತಿಥಿ ಧರ್ಮಗುರು ವಂ|ಡಾ|ಜೋನ್ ಸಿಕ್ವೇರಾ ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.

ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ದುಖಿ ಸಾಯ್ಬಿಣಿಚಿ ಸಾಲ್ವಿ


ಕುಂದಾಪುರ್, ಸೆ.10: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ದುಖಿ ಸಾಯ್ಬಿಣಿಚಿ ಸಾಲ್ವಿ ಅಯ್ತಾರಾ ಸೆ.೧೦ ವೆರ್ ಆರಂಭ್ ಜಾಲಿ. ಪಯ್ಲಾ÷್ಯ ದಿಸಾಚಿ ಸಾಲ್ವಿ ಕಾರ್ಮೆಲಿ ಯಾಜಕ್ ಮಾ|ಬಾ| ಡಾ. ಜೋನ್ ಸಿಕ್ವೇರಾ ಹಾಣಿ ಚಲವ್ನ್ ವೆಲಿ. ಪಯ್ಲಿ ದೂಖ್ ಸಿಮಾಂವ್ಚೆ ಪ್ರವಾದ್ ಪಣ್, ಏ ದುಖೆಸ್ತಿ ಮಾಯೆ ದುಖಾಚಿ ತಲ್ವಾರ್ ತುಜೊ ಆತ್ಮೊ ಪಾಪ್ಸಿತೆಲಿ , ಹ್ಯಾ ದೂಖೆ ವಿಶ್ಯಾಂತ್ ಬಾಪ್ ಜೋನ್ ಸಿಕ್ವೇರಾ ಹಾಣಿ ಸಂದೇಶ್ ಆಟಯ್ಲೊ. ಸಾಲ್ವೆಚೆ ಮುಖೇಲ್ಪಣ್ ವೆಲಂಕಣಿ ವಾಡ್ಯಾಗರಾನಿ ಘೆಂವ್ನ್ ಬಲಿದಾನಾಚಿ ಲಿತುರ್ಜಿ ತಾಣಿ ಚಲವ್ನ್ ವೆಲಿ. ಫಿರ್ಗಜೆಚೊ ವಿಗಾರ್ ಭೋ|ಮಾ| ಸ್ಟ್ಯಾನಿ ತಾವ್ರೊ ಬಾಪಾನ್ ಧನ್ಯವಾದ್ ಪಾಟವ್ನ್ ಹಿ ಸಾಲ್ವಿ 16 ತಾರೀಖ್ ಮ್ಹಣಾಸರ್ ಆಸೊನ್ ಸಾಲ್ವಿ ಸಾಕಾಳಿ 6.25 ವೊರಾರ್ ತೇರ್ಸಾ ಸವೆಂ ಆರಂಭ ಜಾತೆಲಿ. ಹರ‍್ಯೆಕ್ ಸಾಲ್ವಿ ಸಯ್ರೆ ಯಾಜಕ್ ಚಲವ್ನ್ ವ್ರ‍್ತೆಲೆ ಮ್ಹಣುನ್ ಕಳವ್ನ್ ವ್ಹಡಾ ಸಂಖ್ಯಾನ್ ಫಿರ್ಗಜ್‌ಗಾರಾನಿ ಸಾಲ್ವೆಕ್ ಭಾಗ್ ಘೆಜೆ ಮ್ಹಣುನ್ ಕಳಯ್ಲೆಂ.

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆ ಸ್ಥಳಾಂತರ

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆಯನ್ನು ಉರ್ವ ಸ್ಟೋರ್‌ನಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್ನ ನೆಲಮಹಡಿಗೆ ದಿನಾಂಕ ೦೯.೦೯.೨೦೨೩ರಂದು ಸ್ಥಳಾಂತರಿಸಲಾಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಬಿಜೈ ಚರ್ಚ್ನ ಧರ್ಮಗುರುಗಳಾದ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು ಸ್ಥಳಾಂತರಗೊoಡ ಹೊಸ ಶಾಖೆಯನ್ನು ಉದ್ಘಾಟಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊರವರು ಆಡಳಿತ ಮಂಡಳಿಯು ಒಂದು ವರ್ಷದ ಹಿಂದೆ ಗ್ರಾಹಕರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆಯನ್ನು ಅಶೋಕನಗರ ಶಾಖೆಯ ಸ್ಥಳಾಂತರದ ಮೂಲಕ ಈಡೇರಿಸಿದೆ ಎಂದರು. ನಮ್ಮ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಕ್ಕನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅತ್ಯಂತ ಬಲಾಢ್ಯ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಹಾಗೂ ಬ್ಯಾಂಕಿನ ಠೇವಣಿ ಡಿಐಸಿಜಿಸಿ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದರು. ಗ್ರಾಹಕ ಸೇವೆಯೇ ದೇವರ ಸೇವೆ ಎಂಬ ಧ್ಯೇಯದೊಂದಿಗೆ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾ ಬ್ಯಾಂಕಿನ ಬೆಳವಣಿಗೆಗೆ ಕಾರಣೀಭೂತರಾಗಲು ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ನಮ್ಮ ಬ್ಯಾಂಕಿನಲ್ಲಿ ಸಾರ್ವಜನಿಕ ಕ್ಶೇತ್ರದ ಬ್ಯಾಂಕಿನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ದೊರಕುತ್ತವೆ ಎಂದರು. ನಮ್ಮ ಸೇವೆಯಲ್ಲಿ ಏನಾದರೂ ಕುಂದುಕೊರತೆಗಳು ಇದ್ದಲ್ಲಿ, ಗ್ರಾಹಕರು ತಮ್ಮ ಸಲಹೆ ಮತ್ತು ಸೂಚನೆಗಳೊಂದಿಗೆ ಆಡಳಿತ ಮಂಡಳಿಯ ಗಮನಕ್ಕೆ ತರಲು ವಿನಂತಿಸಿದರು. ಹಿಂದಿನAತೆಯೇ ಇನ್ನು ಮುಂದೆಯೂ ನಮ್ಮ ಬ್ಯಾಂಕಿಗೆ ತಮ್ಮ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಗ್ರಾಹಕರಿಗೆ ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು, ಬ್ಯಾಂಕಿನ ಆಡಳಿತ ಮಂಡಳಿಯು ಅಶೋಕನಗರ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ನೆಲಮಹಡಿಗೆ ಸ್ಥಳಾಂತರಿಸುವ ಉತ್ತಮ ಕಾರ್ಯವನ್ನು ಮಾಡಿದೆ; ಹೊಸ ಸ್ಥಳಾಂತರಗೊAಡ ಶಾಖೆಯಲ್ಲಿ ಲಭ್ಯವಿರುವ ಪಾರ್ಕಿಂಗ್ ಸೌಲಭ್ಯ ಮತ್ತು ಗ್ರಾಹಕರಿಗೆ ಸೂಕ್ತ ಹಾಗೂ ಅನುಕೂಲಕರ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕಿನ ಸಿಬ್ಬಂದಿಗಳ ನಗುಮೊಗದ ಗ್ರಾಹಕ ಸೇವೆಯೇ ಬ್ಯಾಂಕಿನ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕೊಂಡಾಡಿದರು.

ವಂದನೀಯ ಜೋಸೆಫ್ ಮಾರ್ಟಿಸ್‌ರವರು ಬ್ಯಾಂಕಿನ ಗ್ರಾಹಕ ಕೇಂದ್ರಿತ ಕಾರ್ಯಗಳಿಗಾಗಿ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಎಂ.ಸಿ.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಸಂತೋಷಕರ ಅನುಭವವಾಗಿದೆ ಎಂದು ಹೇಳಿದರು.

ಅಶೋಕನಗರ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ದಿಲೀಪ್ ವೇಗಸ್ ಇವರು ಸ್ಥಳಾಂತರ ಶಾಖೆಯ ಆಶೀರ್ವಚನ ಕಾರ್ಯ ನಡೆಸಿಕೊಟ್ಟರು. ಉರ್ವ ಚರ್ಚಿನ ಧರ್ಮಗುರುಗಳಾದ ವಂದನೀಯ ಬೆಂಜಮಿನ್ ಪಿಂಟೊರವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ದೇರೆಬೈಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಾರ್ಟಿಸ್‌ರವರು ಹೊಸ ಎಟಿಎಮ್ ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಯಾಗಿದ್ದ ಶ್ರೀ ಫ್ರಾನ್ಸಿಸ್ ಅಲ್ಫೆçಡ್ ಕೊನ್ಸೆಸ್ಸೊ, ಮಾಲಕರು ಕೊನ್ಸೆಸ್ಸೊ ಎಂಟರ್‌ಪ್ರೆöÊಸಸ್ಸ್, ಮಂಗಳೂರು ಇವರು ಇ. ಸ್ಟಾಂಪಿAಗ್ ವ್ಯವಸ್ಥೆಗೆ ಚಾಲನೆ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಜೋನ್ ಮೊಂತೇರೊ, ಡೇವಿಡ್ ಡಿ ಸೋಜ, ರೋಶನ್ ಡಿ.ಸೋಜ, ಡಾ| ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ ಮತ್ತು ಮಹಾಪ್ರಬಂಧಕ ಸುನಿಲ್ ಮಿನೇಜಸ್ ಹಾಜರಿದ್ದರು.

ಕನ್ಸಲ್ಟಿಂಗ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಮತ್ತು ಕಟ್ಟಡದ ಮಾಲಕ ಶ್ರೀ ಕ್ರಷ್ಣ ಕೌಶಲ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಶೋಕನಗರ ಶಾಖೆಯ ನಿರ್ದೇಶಕ ಶ್ರೀ ಸುಶಾಂತ್ ಸಲ್ಡಾನ್ಹಾ ಸ್ವಾಗತಿಸಿ ಪ್ರಬಂಧಕ ಲ್ಯಾನ್ಸಿ ಲೋಬೊರವರು ವಂದಿಸಿದರು. ವಿಯೊಲಾ ಪಿಂಟೊ, ಬಜ್ಪೆ ನಿರೂಪಿಸಿದರು.