HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ

 

 

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ

ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಶ್ಟ ಮರಣದ ರೀತಿಯನ್ನು ನೆಡಸಲಾಯಿತು.
ಇದನ್ನು ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊರವರ ಮುಂದಾಳತ್ವದಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಇವರ ಸಹಯೋಗದಲ್ಲಿ ನೆಡೆಯಿತು.

ಶುಭ ಶುಕ್ರವಾದರ ಪ್ರಾರ್ಥನ ವಿಧಿಯ ಮುಖ್ಯ ಅತಿಥಿಗಳಾಗಿ ಯಾಜಕರ ಎಪಿಸ್ಕೊಪಲ್ ವಿಕಾರ್, ಜೆಪ್ಪು ಸೆಮಿನರಿಯ ಪ್ರಾಧ್ಯಪಕ ಜೋನ್ ಪಿಯುಸ್ ಡಿಸೋಜಾ ಒಸಿಡಿ ಅವರು ‘ಯೇಸು ತನ್ನ ಶಿಲುಭೆ ಮರಣ ಹೊಂದುವ ಮೊದಲು ಗೆತ್ಸಮನಿ ತೋಟದಲ್ಲಿ ದೇವರಲ್ಲಿ ಪ್ರಾಥಿಸಿದಾಗ, ತಾನು ಮುಂದೆ ಅನುಭವಿಸುವ ಹಿಂಸೆಯನ್ನು ತಿಳಿದು ಯೇಸು ರಕ್ತದ ಬೆವರುತ್ತಾನೆ. ನಂತರ ಆತನು ಯುಹುದಿಗಳ ಧಾರ್ಮಿಕ ಮುಖಂಡರಾದ ಅನ್ನಾಸ್ ಮತ್ತು ಕಾಯ್ಪಾಸ್ ಅವರ ಅನ್ಯಾಯದ ತನಿಕೆಗೆ ಒಳ ಪಡುತ್ತಾನೆ, ನಂತರ ರೋಮ್ ಪ್ರತಿನಿಧಿ ಪಿಲಾತನ ತನಿಕೆಗೆ ಒಳಪಡುತ್ತಾನೆ, ಪಿಲಾತನಿಗೆ ಯೇಸುವಿನಲ್ಲಿ ಎನೊಂದು ತಪ್ಪು ಕಾಣದೇಯು, ಯಹೂದಿಗಳಿಗೆ ಹೆದರಿ ಯೇಸುವನ್ನು ಯೆಹೂದಿಗಳ ಸಂಪ್ರಾದಾಯದಂತೆ ಶಿಲುಭೆಗೇರಿಸಿ ಸಾಯಿಸುವ ಶಿಕ್ಷೆಯನ್ನು ನೀಡಲು ಅನುಮತಿ ನೀಡುತ್ತಾನೆ. ಯೇಸುವಿಗೆ ಇಂತಹ ಶಿಕ್ಷೆ ಯಾಕಾಯಿತೆಂದರೆ ಅಡಾಮ್ ದೇವರು ಸ್ರಷ್ಟಿಸಿದ ಮೊದಲ ಮನು ಅವನು ತನ್ನ ಪತ್ನಿಯೊಂದಿಗೆ ಸೇರಿ ದೇವರಿಗೆ ಅವೀಧೆಯನಾಗಿ ನೆಡೆದು ದೇವರ ಶಾಪಕ್ಕೆ ಗುರಿಯಾಗಿ ವೈಕುಂಟದ ಭಾಗ್ಯವನ್ನು ಕಳೆದುಕೊಂಡ, ಅದಕ್ಕಾಗಿ ಅಡಾಮ್ ಮತ್ತು ಇಡೀ ಮನಕುಲ ಪಾಪಕ್ಕೆ ಸಿಲುಕುತ್ತದೆ. ಈ ಪಾಪದ ನಿವಾರಣೆಗಾಗಿ ಪಶ್ಚಾತಾಪ ಪಟ್ಟು ಮಾನವ ಪರಿವರ್ತನೆಗೊಳ್ಳಲು ದೇವರು ಸ್ವತ ಪ್ರಥ್ವಿಗೆ ಸ್ವತ ತನ್ನ ಪುತ್ರ ಯೇಸುವನ್ನು ಕಳುಹಿಸುತ್ತಾನೆ, ದೇವರ ಯೋಜನೆಯಂತೆ ಯೇಸು ದೇವರ ಸಾಮ್ರಾಜ್ಯದ ಭೋದನೆ ಮಾಡಿ, ಪಾಪಿಗಳ ಶಿಕ್ಷೆಗೆ ಗುರಿಯಾಗಿ ಯೇಸು ತನ್ನ ರಕ್ತವನ್ನು ಹರಿಸಿ, ಶಿಲುಭೆಯಲ್ಲಿ ಪ್ರಾಣ ತೆತ್ತು ಮನುಕುಲವನ್ನು ಪಾಪದಿಂದ ವೀಮೊಚನೆ ಮಾಡುವ ದೇವರ ಯೋಜನೆ ಪೂರ್ತಿಗೊಳಿಸುತ್ತಾನೆ, ಹೀಗೆ ಮೊದಲ ಪುರುಷ ಅಡಾಮ್ಗೆ ಅಂತ್ಯಕ್ರಿಯೆ ನೆಡದ ಗೊಲ್ಗೊಥಾ ಸ್ಥಳದಲ್ಲಿ ಶಿಲುಭೆಯಲ್ಲಿ ಪ್ರಾಣ ನೀಡುತ್ತಾನೆ. ಹೀಗೆ ಅಡಾಮ್ ಆರಂಭ ಮಾಡಿದ ಪಾಪದ ಪಯಣ, ಯೇಸು ಕ್ರಿಸ್ತನ ಶಿಲುಭೆಯ ಪಯಣ ಗೊಲ್ಗೊಥಾದಲ್ಲಿ ಆಂತ್ಯಗೊಂಡು ಮನುಕುಲವನ್ನು ಪಾಪದಿಂದ ವಿಮುಕ್ತಿ ಹೊಂದಲು ದಾರಿಯಾಗುತ್ತದೆ’ ಎಂದು ಅವರು ಸಂದೇಶ ನೀಡಿದರು.

ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್‍ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.
ಮೂರನೇ ಭಾಗದಲ್ಲಿ ಶಿಲುಭೆಯಲ್ಲಿ ಯೇಸುವಿನ ಮರಣದ ವಿಧಿಯನ್ನು ನೆಡಸಿ ಶಿಲುಭೆಗೆ ಮುತ್ತು ನೀಡಿ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಯೇಸುವಿನ ಕಶ್ಟ ಮರಣದ ಶುಭ ಶುಕ್ರವಾರದ ಈ ಧಾರ್ಮಿಕ ವಿಧಿಯಲ್ಲಿ ಹಲವಾರು ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.

 

 

ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ಯುವಜಣಾ ಥಾವ್ನ್ ನಿಮಾಣ್ಯಾ ಸುಕ್ರಾರಾ ಖುರ್ಸಾ ವಾಟ್

ವರದಿ:ಡಯಾನ ಡಿಸೋಜಾ

ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ಯುವಜಣಾ ಥಾವ್ನ್ ನಿಮಾಣ್ಯಾ ಸುಕ್ರಾರಾ ಖುರ್ಸಾ ವಾಟ್

ಬ್ರಹ್ಮಾವರ್, ಎ.20:ಬ್ರಹ್ಮಾವರ್  ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಸುಕ್ರಾರಾ ದಿಸಾ ಸಕಾಳಿ ಜೆಜುಚ್ಯಾ ಕಷ್ಶಾ ಮರ್ಣಾಚಿ ಖುರ್ಸಾ ವಾಟ್ ಇಗರ್ಜೆಚ್ಯಾ ಮೈದಾನಾರ್ ಚಲ್ಲಿ. ಹಿ ಖುರ್ಸಾ ವಾಟ್ ಯುವ ಜಣಾಚ್ಯಾ ವರ್ಷಾ ಯುವಜಣಾನಿಂ ಚಲವ್ನ್ ವೆಲಿ. ಫಿರ್ಗಜೆಚೊ ವಿಗಾರ್ ಮಾ|ಬಾ|ವಿಕ್ಟರ್ ಸಲ್ಡಾನ್ಹಾ ಆನಿ ಸಹಾಯಕ್ ವಿಗಾರ್ ಮಾ|ಬಾ| ರೋಶನ್ ಹಾಣಿ ಹ್ಯಾ ಖುರ್ಸಾ ವಾಟೆಂತ್ ಭಾಗ್ ಘೆತ್ಲೊ.

ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಬ್ರೆಸ್ತಾರ್ ಭಕ್ತಿಪಣಿ ಆಚರ್ಸಿಲೊ

Photos: Daina dsouza

 ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಬ್ರೆಸ್ತಾರ್ ಭಕ್ತಿಪಣಿ ಆಚರ್ಸಿಲೊ


 ಬ್ರಹ್ಮಾವರ್, ಎ.19: ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಬ್ರೆಸ್ತಾರ್ ಭಕ್ತಿಪಣಿ ಆಚರ್ಸಿಲೊ. ಹ್ಯಾ ಪವಿತ್ರ್ ದಿಸಾ, ತೀನ್ ಭಾಗಾನಿಂ ದೆವಾಸ್ಪಣ್ ಚಲ್ಲೆಂ. ಪಯ್ಲ್ಯಾ ಭಾಗಾಂತ್ ದೆವಾಚೆ ಉತರ್ ಜೆಜುಚೆ ಕಷ್ಟ್ ಮರಣ್ ದೆವಾಚೆ ಉತ್ರಾಂ ದ್ವಾರಿಂ ಚಲ್ಲೆಂ. ದುಸ್ರ್ಯಾ ಭಾಗಾಂತ್ ಜೆಜುನ್ ಆಪ್ಲ್ಯಾ ಶಿಷಾಂಚೆಂ ಪಾಂಯ್ ಧುಂವ್ನ್ ದಿಲ್ಯಾ ದೇಖಿನ್ ಫಿರ್ಗಜ್ ಯಾಜಕ್ ಮಾ|ಬಾ| ವಿಕ್ಟರ್ ಸಲ್ಡಾನ್ಹಾನ್ ಯಾಜಕಾನ್ ವಿಂಚಲೆಲ್ಯಾ ಫಿರ್ಗಜ್ ಗಾರಾಂಚೆ ಪಾಂಯ್ ಧುಲೆಂ. ಹ್ಯಾಚ್ ದಿಸಾ ಯಾಜಕಾಂಚೊ ಸಂಸ್ಕಾರ್ ಘಡ್ಲೊ ದೀಸ್ ಜಾಲ್ಯಾನ್ ಸಂಭ್ರಮಿಕ್ ಪವಿತ್ರ್ ಬಲಿದಾನ್ ಆದ್ಲೊ ವಿಗಾರ್ ಮಾ|ಬಾ|  ಪೀಟರ್ ಮೆಂಡೊನ್ಸಾನ್ ಭೆಟಂವ್ನ್ ಸಂದೇಶ್ ದಿಲೊ. ಸಹಾಯಕ್ ವಿಗಾರ್ ಮಾ|ಬಾ| ರೋಶನಾನ್ ಸಹಭೆಟವ್ಣಿ ಕೆಲಿ. ಉಪ್ರಾಂತ್ ಸಾಂಕ್ರಾಮೆಂತ್ ವಿಶೇವಾಚ್ಯಾ ಜಾಗ್ಯಾರ್ ಧವರ್ನ್ ಆರಾಧನ್ ಕೆಲೆಂ.

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ


ಕುಂದಾಪುರ, ಎ.19: ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿ, ಅದಕ್ಕು ಮುನ್ನು ಅವರಿಗೆ ಹೊಡೆದು ಬಡಿದು ಅವರ ಹೆಗಲಿಗೆ ಶಿಲುಭೆ ನೀಡಿ ಶಿಲುಭೆ ಯಾತ್ರೆ ಮಾಡಿಸಿದರು. ಈ ಶಿಲುಭೆ ಯಾತ್ರೆಯನ್ನು ಸ್ಮರಿಸಿ ಬೆಳಿಗ್ಗೆ ಪ್ರಧಾನ ಧರ್ಮಗುರು ಅ|ವ| ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ ಯೇಸುವಿನ ಕಷ್ಟ ಕಾರ್ಪಣ್ಯದ ಶಿಲುಭೆಯ ಯಾತ್ರೆಯನ್ನು ಚರ್ಚಿನ ಮೈದಾನದಲ್ಲಿ ಆಯಾಯ ವಾಳೆಗಳ ಸದಸ್ಯರ ಮತ್ತು ಯುವ ಸಂಘಟನೆಯ ಸದಸ್ಯರಿಂದ ನೆಡಸಲಾಯಿತು, ಈ ಶಿಲುಭೆಯ ಯಾತ್ರೆಯಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವ| ರೋಯ್ ಲೋಬೊ, ಅನೇಕ ಧರ್ಮ ಭಗಿನಿಯರು, ಚರ್ಚ್ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ


ಕುಂದಾಪುರ, ಎ.18: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು.
ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಪೆರಂಪಳ್ಳಿ ಟ್ರಿನಿಟಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್ ಡಿಕೋಸ್ತಾ ‘ಪರಮ ಪ್ರಸಾದ (ಯೇಸು ಕರುಣಿಸಿದ ರೊಟ್ಟಿ) ನಮ್ಮ ಆತ್ಮದ ರಕ್ಷಣೆಗೆ ಮತ್ತು ಪೆÇೀಷಣೆಗೆ ಅಗತ್ಯವಿರುವ ಅತ್ಯಂತ ಪವಿತ್ರವಾದ ಸಂಸ್ಕಾರವಾಗಿದೆ. ಯೇಸು ಸ್ವಾಮಿ ರಚಿಸಿದ ಇನ್ನಿತರ ಸಂಸ್ಕಾರಗಳು ನಮ್ಮ ಶಾರೀರಕ್ಕೆ ಸಂಬಂಧ ಪಟ್ಟವುಗಳಾದರೆ ಪರಮ ಪ್ರಸಾದ ಸಂಸ್ಕಾರವು ನಮ್ಮ ಆತ್ಮದ ರಕ್ಷಣೆಗಾಗಿ ಮಾಡಲ್ಪಟ್ಟದಾಗಿದೆ. ಅದನ್ನು ಯೇಸು ತನ್ನ ಜೀವವನ್ನೆ ಬಲಿದಾನ ನೀಡಲು ಸಿದ್ದನಾಗಿ ಅದಕ್ಕೆ ಅರ್ಥ ಬರುವಂತ್ತೆ, ಕೊನೆಯ ಭೋಜನದ ದಿನ ಯೇಸು ರೊಟ್ಟಿಯನ್ನು ಆಶಿರ್ವದಿಸಿ ಪವಿತ್ರವನ್ನಾಗಿಸಿದರು. ಆಮೇಲೆ ಅದನ್ನು ಮುರಿದು ಹಂಚಿ ಈ ಸಂಸ್ಕಾರವನ್ನು ನಿತ್ಯವೂ ನನ್ನ ನೆನಪಿಗಾಗಿ ಹಾಗೂ ಆತ್ಮದ ರಕ್ಷಣೆಗಾಗಿ ಮಾಡಿರಿ ಎಂದು ಹೇಳಿ ಹಾಗೇ ಪವಿತ್ರ ಶುಕ್ರವಾರದಂದು ತನ್ನ ದೇಹವನ್ನು ದಂಡಿಸಿಕೊಂಡು ಶಿಲುಭೆಗೇರಿ ತನ್ನ ಈ ಬಲಿದಾನಕ್ಕೆ ನೀಜ ಅರ್ಥ ನೀಡಿದರು. ಈ ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಲು ತನ್ನ ಶಿಷ್ಯರಿಗೆ ಧರ್ಮಗುರುವಿನ ದಿಕ್ಷೆಯನ್ನು ನೀಡಿ ಧರ್ಮಗುರುಗಳ ಸಂಸ್ಕಾರವನ್ನು ನೀಡಿದರು’ ಹಾಗೇ ಅವರು ಮುಂದುವರೆಸುತ್ತ ‘ಯಾಜಕರು ದೇವರ ಸ್ಥಾನದಲ್ಲಿದ್ದರು, ಆತ ಮನುಷ್ಯ, ಆದ್ದರಿಂದ ತಮ್ಮ ಧಾರ್ಮಿಕ ಸಂಸ್ಕಾರವನ್ನು ಒಳ್ಳೆಯ ರೀತಿಯಲ್ಲಿ ನೆಡೆದುಕೊಂಡು ಹೋಗಲು ವಿಶ್ವಾಸಿಗಳ ಪ್ರಾರ್ಥನೆ ಅಗತ್ಯವಿದೆ ಹಾಗಾಗಿ ಯಾಜಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿಸಿರಿ’ ಎಂದು ಅವರು ಪ್ರವವಚನ ನೀಡಿದರು.
ಎರಡನೇ ಭಾಗದಲ್ಲಿ ಆರಿಸಲ್ಪಟ್ಟ ವಿಶ್ವಾಸಿಗಳ ಪಾದ ತೊಳೆಯುವ ಧಾರ್ಮಿಕ ವಿಧಿಯನ್ನು ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು ನೆಡೆಸಿಕೊಟ್ಟರು. ಮೂರನೇ ಭಾಗವಾಗಿ ರೊಟ್ಟಿ ಮತ್ತು ದ್ರಾಕ್ಷರಸದೊಂದಿಗೆ ಪರಮ ಪ್ರಸಾದದ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಈ ಮಹಾ ದಿವ್ಯ ಬಲಿ ಪೂಜೆಯ ಧಾರ್ಮಿಕ ವಿಧಿಯಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಗೋವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಂದಾಪುರದವರಾದ ಧರ್ಮಗುರು ವಂ|ರೋಶಾನ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾದರು. ಹೀಗೆ ಮೂರು ಧಾರ್ಮಿಕ ವಿಧಿಗಳು ನೆಡೆದ ಬಳಿಕ ಪರಮ ಪ್ರಸಾದವನ್ನು ವಿಶ್ರಾಂತಿ ಪೀಠಕ್ಕೆ ಕೊಂಡಯ್ದ ಬಳಿಕ ಫಾ|ಅನಿಲ್ ಡಿಕೋಸ್ತಾ ಪರಮ ಪ್ರಸಾದದ ಆರಾಧನೆಯನ್ನು ನೆಡೆಸಿಕೊಟ್ಟರು. ಈ ಧಾರ್ಮಿಕ ವಿಧಿಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.

ಬೆಳ್ಮಣ್ಣು : ಉಚಿತ ಮಧುಮೇಹ ತಪಾಸಣಾ ಶಿಬಿರ

ವರದಿ: ವಾಲ್ಟರ್ ಮೊಂತೇರೊ

ಬೆಳ್ಮಣ್ಣು : ಉಚಿತ ಮಧುಮೇಹ ತಪಾಸಣಾ ಶಿಬಿರ


ಬೆಳ್ಮಣ್ಣು ಜೇಸಿಐ, ಯುವ ಜೇಸಿ ವಿಭಾಗ, ಜೇಸಿರೇಟ್ ವಿಭಾಗ ಮತ್ತು ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಉಚಿತ ಮಧುಮೇಹ ತಪಾಸಣಾ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಸ್ಯಾಮ್ವೆಲ್ ಮಧುಮೇಹ ತಪಾಸಣೆ ಮಾಡಿ ಮಾಹಿತಿ ನೀಡಿದರು. ಜೇಸಿ ವಲಯಾಧಿಕಾರಿ ಸುಭಾಸ್ ಕುಮಾರ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಧ್ಯಕ್ಷ ರಾಜೇಶ್ ಕೋಟ್ಯಾನ್, ಬೆಳ್ಮಣ್ಣು ಯುವಜೇಸಿ ವಿಭಾಗದ ಅಧ್ಯಕ್ಷ ದಿಕ್ಷೀತ್ ದೇವಾಡಿಗ, ಜೇಸಿರೇಟ್ ಅಧ್ಯಕ್ಷೆ ಪ್ರತಿಭಾ ರಾವ್, ಯುವಜೇಸಿ ವಿಭಾಗದ ಕಾರ್ಯದರ್ಶಿ ಸಂದೀಪ್ ಕುಮಾರ್ ಹಾಗೂ ಬೆಳ್ಮಣ್ಣು ಜೇಸಿಐನ ಹಾಗೂ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸದಸ್ಯರುಗಳು ಉಪಸ್ಥಿತಿತರಿದ್ದರು.

ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಆರಂಭ – ಕುಂದಾಪುರ ಸೆಕ್ಷನ್ 144 ಜಾರಿ

ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಆರಂಭ – ಕುಂದಾಪುರ ಸೆಕ್ಷನ್ 144 ಜಾರಿ.


ಕುಂದಾಪುರ, ಎ.17:ಈ ಸಾಲಿನ ಲೋಕ ಸಭಾ ಚುನಾವಣೆಯ ಪ್ರಥಮ ಹಂತದ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದ್ದು. ಎಪ್ರಿಲ್ 18 ರಂದು ಮೊದಲ ಹಂತದ ಮತದಾನದ 14 ಲೋಕ ಸಭಾ ಕ್ಷೇತ್ರಗಳಲ್ಲಿ ನೆಡೆಯಲಿರುವುದರಿಂದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರ (ಕುಂದಾಪುರ) ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 8.30 ಕ್ಕೆ ಆರಂಭಗೊಂಡಿತು.
ಮೊದಲ, ದ್ವೀತಿಯ, ತ್ರತೀಯ ಪೆÇೀಲಿಂಗ್ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿ, ತಮ್ಮ ಮತದಾನ ಕೇಂದ್ರಗಳನ್ನು ತಿಳಿದುಕೊಂಡು, ಮತದಾನಕ್ಕೆ ಬೇಕಾದಂತಹ ವಿ.ವಿ ಪ್ಯಾಟ್, ಇಂಕ್ ಇನ್ನಿತರ ಪರಿಕರಗಳನ್ನು ತೆಗೆದುಕೊಂಡು ತಮ್ಮ ತಮ್ಮ ಮತದಾನ ಕೇಂದ್ರಕ್ಕೆ ತೆರಳುವಲ್ಲಿ ಕಾರ್ಯಪ್ರವತ್ತರಾದರು.
ಈ ಬಗ್ಗೆ ಕುಂದಾಪುರದಲ್ಲಿ ಬಿಗಿಯಾದ ಪೆÇಲೀಸ್ ಭಂದ್ ಭಸ್ತ್ ಮಾಡಲಾಗಿದ್ದು, ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಪೆÇಲೀಸರು ಬ್ಯಾರಿಕೇಡಗಳನ್ನು ಹಾಕಿ ಕಾವಲನ್ನು ಕಾಯುತಿದ್ದಾರೆ. ಸಂಭಂದ್ದ ಪಟ್ಟವರಿಗೆ ಮಾತ್ರ ಬಿಡಲಾಗುತಿತ್ತು, ಇತರರಿಗೆ ಪ್ರವೇಶ ಮಾಡಲು ಅನುಮತಿ ನಿರಾಕರಿಸಲಾಗುತ್ತದೆ. ಕುಂದಾಪುರದಲ್ಲಿ ಮತದಾನದ ಪ್ರಕ್ರಿಯೆಗಾಗಿ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನುಸಾರ ಇವತ್ತಿನಿಂದ ನಾಳೆ ತನಕ 48 ಗಂಟೆ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚುನಾವಣೆಯು ಸಾಂಗಾವಾಗಿ ನೆರವೇರಲು ಡಾ|ಎಸ್.ಎಸ್. ಮಧುಕೇಶ್ವರ್ ಈ ಕ್ರಮವವನ್ನು ಕೈಗೊಂಡಿದ್ದಾರೆ

 

ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶ

ವರದಿ: ಶಬ್ಬೀರ್ ಅಹ್ಮದ್

ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶ


ಶ್ರೀನಿವಾಸಪುರ:ಎ.16: ಕಳೆದ ಫೆಬ್ರವರಿ ಮಾಹೆಯಲ್ಲಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಾಣಿಜ್ಯಪರೀಕ್ಷೆಗಳ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶದೊರೆಯುವುದರೊಂದಿಗೆ 3 ವಿದ್ಯಾರ್ಥಿನಿಯರುಆಂಗ್ಲ ಬೆರಳಚ್ಚು ಜೂನಿಯರ್‍ಗ್ರೇಡ್ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿ (DISTINCTION) ಪಡೆದಿದ್ದಾರೆಎಂದುಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.


ಪಟ್ಟಣದಎಂ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಕಳೆದಫೆಬ್ರವರಿಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಶಾಲೆಗೆ ಶೇ 80ರಷ್ಟು ಫಲಿತಾಂಶದೊರೆತಿದ್ದು,ಆಂಗ್ಲ ಬೆರಳಚ್ಚು ಜೂನಿಯರ್‍ಗ್ರೇಡ್ ಪರೀಕ್ಷೆಯಲ್ಲಿಅನುಷ್ಯಎನ್.ಎಮ್ (177), ಹೇಮಾವತಿ ಸಿ. (181), ನವ್ಯಶ್ರೀ ಎಸ್.ಕೆ. (186)ರಾಜ್ಯ ಮಟ್ಟದಲ್ಲಿಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ.


ತೇರ್ಗಡೆ ಹೊಂದಿದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನುಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರುಅಭಿನಂದಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಪರ ಕುಂದಾಪುರ ಪುರಸಭಾ ವ್ಯಾಪ್ತಿಯ ಜೆಎಲ್‌ಬಿ ವಾರ್ಡ್ ನಲ್ಲಿ ಚುನಾವಣಾ ಪ್ರಚಾರ

ವರದಿ: ಚಂದ್ರಶೇಖರ ಶೆಟ್ಟಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಪರ ಕುಂದಾಪುರ ಪುರಸಭಾ ವ್ಯಾಪ್ತಿಯ ಜೆಎಲ್‌ಬಿ ವಾರ್ಡ್ ನಲ್ಲಿ ಚುನಾವಣಾ ಪ್ರಚಾರ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಪರ ಇಂದು ಕುಂದಾಪುರ ಪುರಸಭಾ ವ್ಯಾಪ್ತಿಯ ಜೆಎಲ್‌ಬಿ ವಾರ್ಡ್ ನಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶಿವಾನಂದ. ಕೆ ಮುಂತಾದವರು ಉಪಸ್ಥಿತರಿದ್ದರು.