ಉಪ್ಪಿನಕುದ್ರು ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದೈವಾಧಿನರಾದರು

ಉಪ್ಪಿನಕುದ್ರು ಕೆಸನಕಳಿ ಕೃಷಿಕ ಮನೆತನದ ದಿ.ದೇವರಾಯ ಶಾನುಭಾಗರ ಧರ್ಮಪತ್ನಿ,ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದಿ.25ರಂದು ನಿಧನರಾದರು.
ಇವರು 5ಗಂಡು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವರದಿ:ಶಬ್ಬೀರ್ ಅಹ್ಮದ್

ವರದಿ:ಶಬ್ಬೀರ್ ಅಹ್ಮದ್
ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ : ಹೋರಾಟಕ್ಕೆ ಸಿದ್ದರಾದ ಅವಧಿ ಮುಗಿದ ಕೋಲಾರ ನಗರಸಭಾ ಸದಸ್ಯರು

ಕೋಲಾರ : ಕೋಲಾರ ನಗರಸಭೆಯ ಸದಸ್ಯರ ಅವಧಿಯು ಮಾರ್ಚ್ 3, 2019ಕ್ಕೆ ಮುಗಿದಿದ್ದು, ಅಂದಿನಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಸಾರ್ವಜನಿಕರ ಕೆಲಸಗಳು ನಗರ ವ್ಯಾಪ್ತಿಯಲ್ಲಿ ಕುಂಟಿತವಾಗಿರುತ್ತದೆ ಎಂದು ಅವಧಿಮುಗಿದಿರುವ ಸದಸ್ಯರುಗಳು ಆರೋಪಿಸಿದ್ದಾರೆ.
ನಗರದೆಲ್ಲೆಡೆ ನೀರಿನ ವ್ಯವಸ್ಥೆ, ಪಂಪು ಮೋಟರ್ ರಿಪೇರಿ, ನಗರಸಭೆಯ ಟ್ಯಾಕರ್ ನೀರಿನ ಹಂಚಿಕೆ, ಚರಂಡಿ ಹಾಗೂ ಒಳಚರಂಡಿ ನೈರ್ಮಲೀಕರಣ, ಸ್ವಚ್ಚತೆ ಹಾಗೂ ಕಸವಿಲೇವಾರಿ, ಬೀದಿದೀಪ ನಿರ್ವಹಣೆ ಸೇರಿದಂತೆ ಇಂತಹ ಕನಿಷ್ಠ ಸೌಲಭ್ಯಗಳು ನಮ್ಮ ಕೋಲಾರ ನಗರದ ಸಾರ್ವಜನಿಕರಿಗೆ ಮರಿಚಿಕೆಯಾಗಿದೆ. 35 ಜನ ನಗರಸಭಾ ಸದಸ್ಯರ ಅವಧಿ ಮುಗಿದರೂ ಸಹ ಆಯಾ ಪ್ರದೇಶದ ಆಯಾ ವಾರ್ಡುಗಳ ಸಾರ್ವಜನಿಕರು ಆ ಭಾಗದ ಅವಧಿ ಮುಗಿದ ಸದಸ್ಯರುಗಳ ಮೇಲೆ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿ ಒತ್ತಡ ಹೇರುತ್ತಿದ್ದು, ಆ ಸಮಸ್ಯೆಗಳ ಬಗ್ಗೆ ನಗರಸಭಾ ಅಧಿಕಾರಿಗಳಾಗಲಿ ಮತ್ತು ನಗರಸಭೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಇಷ್ಟು ದಿನಗಳು ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು ಮಗ್ನರಾಗಿದ್ದು, ಈಗ ಚುನಾವಣೆ ಮುಗಿದಿದ್ದು ಹೀಗಾದರೂ ಮೇಲ್ಕಂಡ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ 3 ದಿನಗಳÀ ನಂತರ ಸಾರ್ವಜನಿಕರ ಹಿತ ಕಾಪಾಡಲು ಹೋರಾಟ ಮಾಡಬೇಕಗುತ್ತದೆ ಎಂದು ಅವಧಿ ಮುಗಿದಿರುವ ಸದಸ್ಯರುಗಳಾದ ಸಲ್ಲಾವುದ್ದೀನ್ ಬಾಬು, ಅಪ್ರೋಜ್ ಪಾಷ, ಶೇಕ್ ಚಾಂದ್ ಪಾಷ, ಎಸ್.ಆರ್.ಮುರಳಿಗೌಡ, ಸೋಮಶೇಖರ್, ಶಫಿವುಲ್ಲಾ, ಅಬ್ದುಲ್ ಸಾದಿಕ್ ಪಾಷ, ಕಾಶಿ ವಿಶ್ವನಾಥ್, ರವೀಂದ್ರ, ಮಂಜುನಾಥ ರವರುಗಳು ನಗರಸಭಾ ಅಧಿಕಾರಿಗಳಿಗೆ ಹಾಗೂ ಆಡಳಿತಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ:ವಾಲ್ಟರ್ ಮೊಂತೇರೊ
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಜೇತ ಶಾಲೆಗೆ ದೇಣಿಗೆ ಹಸ್ತಾಂತರ

ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರ ಹುಟ್ಟುಹಬ್ಬ ಮತ್ತು ಸಂಘದ ಪೂರ್ವಾಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ ಮತ್ತು ಹಿತಾ ದಿನೇಶ್ ದಂಪತಿಗಳ ವೈವಾಹಿಕ ಜೀವನದ ವಿವಾಹ ವಾರ್ಷಿಕೋತ್ಸವವನ್ನು ಕಾರ್ಕಳದ ಪರಪ್ಪು ವಿಜೇತ ವಿಶೇಷ ಶಾಲೆಯ ಭಿನ್ನ ಸಾಮಥ್ರ್ಯವುಳ್ಳ ದೇವರ ಮಕ್ಕಳೊಂದಿಗೆ ತಮ್ಮ ಸಂಭ್ರಮವನ್ನು ಆಚರಿಸುವ ಮೂಲಕ ಅಡಂಬರದ ಆಚರಣೆಗೆ ವಿಮುಕ್ತಿ ನೀಡಿ ಮಾನವೀಯ ಮೌಲ್ಯಕ್ಕೆ ಮನ್ನಣೆ ನೀಡುವ ಮೂಲಕ ಶಾಲೆಗೆ ರೂ. 5000/- ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವಿಜೇತ ಶಾಲೆಯ ಪ್ರಾಂಶುಪಾಲರಾದ ಕಾಂತಿ ಹರೀಶ್, ಹರೀಶ್ ಕುಮಾರ್, ಬೆಂಗಳೂರು ನೈಸ್ ಕಂಪನಿಯ ಉದ್ಯೋಗಿ ಆಶಾ ಕುಮಾರಿ, ಶಾಲಾ ಸಿಬ್ಬಂದಿ ವರ್ಗದವರು, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸದಸ್ಯರು ಮತ್ತಿತರು ಉಪಸ್ಥಿತಿತರಿದ್ದರು.
ವರದಿ: ಶಬ್ಬೀರ್ ಅಹ್ಮದ್
ಅಗ್ನಿಶಾಮಕ ಸೇವಾ ಸಪ್ತಾಹ 2019: ಸಮಾರೋಪ ಸಮಾರಂಭ

ಕೋಲಾರ ಏ.21 : ಮಾನವ ಜನ್ಮವನ್ನು ಪಡೆದು ಹಿಂದಿನ ಕರ್ಮವನ್ನು ತೀರಿಸಿಕೊಳ್ಳಬಹುದು, ಮಾನವ ಜನ್ಮ ಶ್ರೇಷ್ಠವಾದುದು. ರಸ್ತೆ ಅಡೆತಡೆಯಿಲ್ಲದೆ ರಸ್ತೆ ಸರಾಗವಾಗಿ ಮತ್ತು ನೀರಿನ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಸಿಗುವ ವ್ಯವಸ್ಥೆ ಇದ್ದರೆ ಅಗ್ನಿ ದುರಂತವನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಡೆಯಬಹುದು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕಾರವಿದ್ದಾಗ ಏನನ್ನಾದರೂ ಸಾಧಿಸಬಹುದು ಎಂದರು. ವಾಸವಿ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಕೋಲಾರ ಆಯೋಜಿಸಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಸಮಾರೋಪವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆಡ್ಕ್ರಾಸ್ ಸಂಸ್ಥೆಯ ಛೇರ್ಮನ್ ಗೋಪಾಲಕೃಷ್ಣ ಗೌಡ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಸದೃಢ ಮತ್ತು ಶಕ್ತಿಯುತವಾಗಿ ಬಾಳಲು ಸರ್ಕಾರದಲ್ಲಿ ಸೌಲಭ್ಯಗಳಿದ್ದು, ಯಾವುದೇ ಸಂದರ್ಭದಲ್ಲಿ ಎದೆಗುಂದದೆ ತಮ್ಮ ಜೀವನದ ಜೊತೆಗೆ ಇನ್ನೊಬ್ಬರಿಗೆ ಸೇವೆ ಸಲ್ಲಿಸಲು ಸಿದ್ಧರಾಗಬೇಕೆಂದು ಪ್ರತಿಯೊಬ್ಬ ವ್ಯಕ್ತಿಯು ಪ್ರಥಮ ಶಿಕಿತ್ಸಾ ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ ಸಮಾಜದಮುಖಿಯಾಗಿ ಎಲ್ಲರೂ ಶ್ರಮಪಡಬೇಕು. ಯಾವುದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಶಿಕ್ಷಣಕ್ಕೆ ವಂಚಿತರಾಗಬಾರದು. ರೋಟರಿ ಸಂಸ್ಥೆಯ ಸಂಸ್ಥೆಯ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದರು.
ಥಿಯಾಸಫಿಕಲ್ ಸೊಸೈಟಿ ಸೇವಾ ವಿಭಾಗದ ಅಧ್ಯಕ್ಷ ವಿ.ಪಿ.ಸೋಮಶೇಕರ್ ಮಾತನಾಡಿ ಬೆಂಕಿ ಆಕಸ್ಮಿಕದ ಬಗ್ಗೆ ಎಲ್ಲರೂ ಮುನ್ನೇಚ್ಚರಿಕೆ ತರಬೇತಿ ಪಡೆದು ಅಗ್ನಿಶಾಮಕ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಸಾರ್ವಜನಿಕ ಆಸ್ತಿ ಅಲ್ಲದೆ ಸ್ವಂತ ಆಸ್ತಿಯನ್ನು ಕಾಪಾಡಲು ತರಬೇತಿ ಅಗತ್ಯ ಕೌಶಲ್ಯವನ್ನು ಪಡೆಬಯಬೇಕೆಂದು ಸಲಹೆ ನೀಡಿದರು
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯ ಅಗ್ನಿ ಶಾಮಕ ಸಿಬ್ಬಂದಿ ಮುಳಬಾಗಿಲು ಠಾಣೆ ಶ್ರೀ ಭೀಮ್ಸಿಂಗ್, ಮತ್ತು ಕೆ.ವಿ. ಚೇತನ್ ಕುಮಾರ್, ಕೆಜಿಎಫ್ ಠಾಣೆಯ ವಿ.ಸುಬ್ರಮಣಿ, ಬಂಗಾರಪೇಟೆ ಠಾಣೆಯ ವಿ.ಮಂಜುನಾಥ್, ಶ್ರೀನಿವಾಸಪುರ ಠಾಣೆ ಹೆಚ್.ಶಶಿಧರ್, ಮಾಲೂರು ಠಾಣೆ ಎ.ವಿ. ಬಲರಾಮ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಎಲ್. ಮಾದೇಶ್ ವಹಿಸಿದ್ದು, ವಾಸವಿ ಕ್ಲಬ್ನ ಅಧ್ಯಕ್ಷ ಅಮರನಾಥ್, ವಿ.ಎಸ್.ಬಿಂಧು ಉಪಸ್ಥಿತರಿದ್ದು, ವಾಸವಿ ಕ್ಲಬ್ನ ಕಾರ್ಯದರ್ಶಿ ಓಂಪ್ರಕಾಶ್ ವಂದನಾರ್ಪಣೆ ನಡೆಸಿಕೊಟ್ಟರು.
ವರದಿ:ವಾಲ್ಟರ್ ಮೊಂತೇರೊ
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ನನ್ನ ಮತ – ನನ್ನ ಸೆಲ್ಪಿ

ಒಂದಲ್ಲ ಒಂದು ರೀತಿ ವಿಶೇಷ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಮತದಾನ ಜಾಗೃತಿ ಕುರಿತು ಕರಪತ್ರ ಬಿಡುಗಡೆ, ಪ್ರತಿಜ್ಞಾ ವಿಧಿ ಬೋಧನೆ ನಡೆಸುವುದರ ಜೊತೆಗೆ ಲೋಕಸಭಾ ಚುನಾವಣೆಯ ದಿನದಂದು ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಸದಸ್ಯರು ಮತ್ತು ಅವರ ಮನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯ ಮತದಾನ ಮಾಡಬೇಕೆನ್ನುವ ನಿಟ್ಟಿನಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ “ನನ್ನ ಮತ – ನನ್ನ ಸೆಲ್ಪಿ” ಸ್ಪರ್ಧೆಯನ್ನು ಆಯೋಜಿಸಿತು. ಈ ಸ್ಪರ್ಧೆಗೆ ಸಂಘದ ಸದಸ್ಯರು ಮತದಾನ ಮಾಡಿ ಸೆಲ್ಪಿ ತೆಗೆದು ಸಂಭ್ರಮಿಸಿದರು.
ಮತದಾನ ನಮ್ಮ ಹಕ್ಕು ಸರಿಯಾದ ನಾಯಕನ ಆಯ್ಕೆ ನಮ್ಮ ಕರ್ತವ್ಯ ಎನ್ನುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಸ್ಪರ್ಧೆಗೆ ಶಾಯಿಯ ಕುರುಹು ಇರುವ ಬೆರಳಿನೊಂದಿಗೆ ಚೆಂದದ ಸೆಲ್ಪಿ ತೆಗೆದು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ವಾಟ್ಸಪ್ ಗ್ರೂಪ್ಗೆ ಕಳುಹಿಸಿಕೊಟ್ಟರು.
ಹಲವಾರು ಅತ್ಯುತ್ತಮ ಸೆಲ್ಪಿ ಪೋಟೋಗಳು ಆಯ್ಕೆಯಾಗಿದ್ದು ಅಂತಿಮ ಸುತ್ತಿನ ಅತ್ಯುತ್ತಮ ಸೆಲ್ಪಿಗೆ ಸಂಘದ ಮುಂದಿನ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಪಾಸ್ಖ ಹಬ್ಬದ ಸಂಭ್ರಮ – ಕ್ರಿಸ್ತರ ಪುನರುತ್ಥಾನ ಮರಣವನ್ನು ಸೋಲಿಸಿ ಜಯಿಸಿದ ಹಬ್ಬ ಫಾ|ರೋಯ್ ಲೋಬೊ

ಕುಂದಾಪುರ,ಎ.21: ಸುಮಾರು 449 ವರ್ಷಗಳ ಇತಿಹಾಸ ಇರುವ ಉಡುಪಿ ಧರ್ಮ ಪ್ರಾಂತ್ಯದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಜೆಯ ಕತ್ತಲಿನಲ್ಲಿ ಚರ್ಚ್ ಮೈದಾನದಲ್ಲಿ ಪಾಸ್ಖದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ಯೇಸು ಮರಣ ಹೊಂದಿ ಕತ್ತಲೆಯಲ್ಲಿದ್ದ ನಮಗೆ, ಯೇಸು ಪುನರುತ್ಥಾನ ಹೊಂದಿ ಬೆಳಕು ನೀಡಿದ್ದಾನೆ ಎಂಬ ಅರ್ಥದಲ್ಲಿ ಈ ಮಹಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ನಡೆಸಿಕೊಟ್ಟರು..
ಪಾಸ್ಖದ ಮೊಂಬತ್ತಿಯ ಬೆಳಕಿನಿಂದ ವಿಶ್ವಾಸಿಗರು ತಮ್ಮ ಮೊಂಬತ್ತಿಗಳನ್ನು ಬೆಳಗಿಸಿಗೊಂಡು ದೇವಾಲಯದ ಒಳಗೆ ಪ್ರವೇಶಿಸಿದ ತರುವಾಯ, ಎರಡನೆ ಭಾಗವಾಗಿ ದೇವರ ವಾಕ್ಯಗಳ ವಿಧಿ ನಡೆಯಿತು.
‘ಇವತ್ತು ನಮಗೆ ನವ ಜೀವನದ ಸಂಭ್ರಮ, ಕ್ರಿಸ್ತರು ಮರಣದ ಮೇಲೆ ವಿಜಯ ಸಾಧಿಸಿದ ಸಂಭ್ರಮ. ಶುಭ ಶುಕ್ರವಾರದಂದು ಯೇಸುವಿನ ಮೇಲೆ ಜನರ ಅಧಿಕಾರ ನಡೆಯಿತು, ಆದರೆ ಆಲ್ಲೆಲೂಯ ಶನಿವಾರ ದೇವರ ಅಧಿಕಾರ ನಡೆದು ಯೇಸು ಕ್ರಿಸ್ತರು ಪುನರುತ್ಥಾನಗೊಂಡು ದೇವರ ತನ್ನ ಮಹಿಮೆಯನ್ನು ತೋರಿಸುತ್ತಾರೆ. ಯೇಸು ಕ್ರಿಸ್ತರು ಪುನರುತ್ಥಾನಗೊಂಡು ನಿಮಗೆಲ್ಲರಿಗೂ ಶಾಂತಿ ಎಂದು ಶಾಂತಿಯನ್ನು ನೀಡುತ್ತಾನೆ, ಆ ಶಾಂತಿಯನ್ನು ನಾವೆಲ್ಲರೂ ಹಂಚಿಕೊಳ್ಳೋಣ. ಪುನರುತ್ಥಾನ ಅಂದರೆ ಯೇಸು ಕ್ರಿಸ್ತರು ಸಾವನ್ನು ಸೋಲಿಸಿ, ಸಾವನ್ನು ಗೆದ್ದ ಹಬ್ಬ. ನಮಗೂ ಕೂಡ ಮರಣ ಹೊಂದಿದ ಮೇಲೆ ಪುನರ್ಜೀವ ಪಡೆದು ದೇವರ ಸಮ್ಮುಖದಲ್ಲಿ ಹಾಜರಾಗುವ ಭಾಗ್ಯವಿದೆ, ಆದರಿಂದ ನಾವು ಯೇಸು ಕ್ರಿಸ್ತರು ಹೇಳಿಕೊಟ್ಟ ಸನ್ಮಾರ್ಗದಲ್ಲಿ ನಡೆಯೋಣ’ ಎಂದು . ಧರ್ಮಗುರು ವಂ|ರೋಯ್ ಲೋಬೊ ಸಂದೇಶಾ ನೀಡಿದರು.
ಮೂರನೇ ಭಾಗದಲ್ಲಿ ಜಲವನ್ನು ಪವಿತ್ರೀಕರಿಸಿ, ಸ್ನಾನ ದಿಕ್ಷೆಯ ವೇಳೆ ಮಾಡಿದ ಪ್ರತಿಜ್ನೆಗಳನ್ನು
ಸಾರ್ವತ್ರಿಕವಾಗಿ ಮತ್ತೊಮ್ಮೆ ಮಾಡಲಾಯಿತು. ನಾಲ್ಕನೆ ಭಾಗವಾಗಿ ಕ್ರಿಸ್ತ ಪ್ರಸಾದದ ಪವಿತ್ರ ಬಲಿ ಪೂಜೆಯನ್ನು ಸಮರ್ಪಿಸಲಾಯಿತು, ಈ ಬಣ್ ಅಮ್ರತ್ ಮಾರ್ಟಿಸ್ ಬಲಿದಾದಲ್ಲಿ ಭಾಗವಹಿಸಿದ್ದರು. ಈ ಪಾಸ್ಖ ಹಬ್ಬದ ಮಹಾ ಹಬ್ಬದ ಭಕ್ತಿ ಸಂಭ್ರಮದಲ್ಲಿ ಅನೇಕ ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು ಹಾಗೂ ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡರು.

Ptotos: daina Dsouza
ಬ್ರಹ್ಮಾವರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆ

ಬ್ರಹ್ಮಾವರ , ಎ.29: ಬ್ರಹ್ಮಾವರದ ಹೋಲಿ ಫೆಮಿಲಿ ಬ್ರಹ್ಮಾವ ರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿದ ದಿನ ಶುಭ ಶುಕ್ರವಾರದಂದು, ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಶ್ಟ ಮರಣದ ರೀತಿಯನ್ನು ನೆಡಸಲಾಯಿತು.
ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.
ಮೂರನೇ ಭಾಗದಲ್ಲಿ ಶಿಲುಭೆಯಲ್ಲಿ ಯೇಸುವಿನ ಮರಣದ ವಿಧಿಯನ್ನು ನೆಡಸಿ ಶಿಲುಭೆಗೆ ಮುತ್ತು ನೀಡಿ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಯೇಸುವಿನ ಕಶ್ಟ ಮರಣದ ಶುಭ ಶುಕ್ರವಾರದ ಈ ಧಾರ್ಮಿಕ ವಿಧಿಯಲ್ಲಿ ಹಲವಾರು ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಈ ಪ್ರಾಥನ ವಿಧಿಯನ್ನು ಚರ್ಚಿನ ಪ್ರಧಾನ ಧರ್ಮಗುರು ವಂ|ವಿಕ್ಟರ್ ಸಲ್ದಾನ್ಹಾ ಮತ್ತು ಸಹಾಯಕ ಧರಮ್ಗುರು ವಂ|ರೋಶನ್ ಇವರು ನೇರವೇರಿಸಿದರು.

Photos: jyothi olivia cabral
ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣದ ಪ್ರದರ್ಶನ

ಕಾರ್ಕಳ, ಎ.೨೦: ಕಾರ್ಕಳ ಟೌನಿನ ಕ್ರೈಸ್ಟ್ ಕಿಂಗ್ ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣ ಇಗರ್ಜಿಯ ಮೈದಾನದಲ್ಲಿ ತೆರೆದ ಪ್ರದರ್ಶನವನ್ನು ಮಾಡಲಾಯಿತು. ಈ ಪರ್ದರ್ಶನ ಚರ್ಚಿನ ಪ್ರಧಾನ ಧರ್ಮಗುರು ವಂ| ಜೊಸ್ವಿನ್ ಫೆರ್ನಾಂಡಿಸ್ ಇವರ ಮಾರ್ಗದರ್ಶನದಲ್ಲಿ ನೆಡೆಯಿತು.
ಈ ಪ್ರದರ್ಶನವು ಚರ್ಚ್ ಸದಸ್ಯ ರೋನಿ ಸ್ನೇಹ ಇವರ ಸಂಯೋಜಕತ್ವದಲ್ಲಿ ನೆಡೆಯಿತು. ಯೇಸು ಕ್ರಿಸ್ತರ ಪಾತ್ರವನ್ನು ದೀಪಕ್ ಡಿಮೆಲ್ಲೊ, ಮುಖ್ಯ ಸಿಪಾಯಿಗಳ ಪಾತ್ರವನ್ನು ಹ್ಯಾರಿಸ್ಟನ್, ಮೀಲ್, ಎಲರೋಯ್, ಅರೋನ್, ಆಲ್ಬರ್ಟ್ ಇವರು ನಿರ್ವಹಿಸಿದರೆ, ಮೇರಿ ಮಾತೆಯ ಪಾತ್ರದಲ್ಲಿ ಸರಿತಾ ಸಲ್ಡಾನ್ಹಾ ಇವರು ನಿರ್ವಹಿಸಿದರು. ಆಪ್ತ ಶಿಷ್ಯ ಜುವಾಂವನ ಪಾತ್ರದಲ್ಲಿ ಡೆನಿಸ್ ಕಾರ್ಡೋಜಾ, ಸೀರೆನ್ ಸಿಮಾಂವಾನ ಪಾತ್ರದಲ್ಲಿ ಹ್ಯಾನ್ಸಿ ಕಾಸ್ಟೆಲೀನೊ ಮುಂತಾದವರು ಈ ಪ್ರದರ್ಶನದಲ್ಲಿ ನಟಿಸಿದರು. ಎಲ್ಲರೂ ನೈಜ್ಯ ಅಭಿನಯ ಮಾಡಿ ಜನರ ಹ್ರದಯ ಮಿಡಿಯುವಂತೆ ಮಾಡಲು ಯಶಸ್ವಿಯಾದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ರೋಶನ್ ಹಿರ್ಗಾನ್ ಉಪಸ್ಥಿತರಿದ್ದು , ಈ ಕಾರ್ಯಕ್ರಮವನ್ನು ವೀಕ್ಷಕರು ಅಧಿಕ ಸಂಖ್ಯೆಯಲ್ಲಿ ಪಾಲುಗೊಂಡಿದ್ದರು.
