HOLY ROSARY CHURCH, KUNDAPUR – 450 th JUBILEE SOUVENIR 2021

ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಿ: ಡಾ.ಸಿ.ಜಿ.ರಮೇಶ್ 

ವರದಿ:ಶಬ್ಬೀರ್ ಅಹ್ಮದ್

ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಿ: ಡಾ.ಸಿ.ಜಿ.ರಮೇಶ್ 

ಕೋಲಾರ: ಜೂನ್ 01 ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮಡಿಯಲ್ಲಿ ಶಿಶು ಮರಣ ಪ್ರಮಾಣವನ್ನು ತಡೆಗಟ್ಟುವ ಸಲುವಾಗಿ 0 ಯಿಂದ 5 ವರ್ಷದೊಳಗಿನ ಮಕ್ಕಳ ಕುಟುಂಬಗಳಲ್ಲಿ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕವನ್ನು ಅಂಗನವಾಡಿಗಳಲ್ಲಿ ಜೂನ್. 3 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಯಾದ ಡಾ.ಸಿ.ಜಿ.ರಮೇಶ್ ಅವರು ತಿಳಿಸಿದರು. 

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಆರ್.ಬಿ.ಎಸ್.ಕೆ, ಆರ್.ಕೆ.ಎಸ್.ಕೆ, ಶುಚಿ, ವಿಪ್ಸ್ ಕುರಿತು ಚರ್ಚಿಸಲು ಹಾಗೂ ತಾಲ್ಲೂಕು ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಕ್ಕಳಲ್ಲಿ ಅತಿಸಾರ ಬೇದಿಯಿಂಧಾಗಿ ಸಾವು ಸಂಭವಿಸಬಹುದು.  ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದೇ ಅಲ್ಲದೆ ಇಂತಹ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರ ಬಳಿ ತೋರಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಈ ರೀತಿಯ ದುಷ್ಪರಿಣಾಮಗಳು ಬೀರಿದಾಗ ಶೇ.66 ರಷ್ಟು ಮಂದಿಯನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತಿದೆ. ಇದನ್ನು ಶೇ.100 ರಷ್ಟಕ್ಕೆ ತರಬೇಕಾದ ಅವಶ್ಯಕತೆ ಇದೆ. ಈ ಅತಿಸಾರ ಭೇದಿಯಿಂದ ಪ್ರತಿವರ್ಷ ಸುಮಾರು 1.2 ಲಕ್ಷ ಶಿಶುಗಳು ಮರಣ ಹೊಂದುತ್ತಿವೆ. ಈ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. 

ಶಿಶುಗಳಿಗೆ ಇಂತಹ ಸಮಸ್ಯೆಗಳು ಕಂಡು ಬಂದಾಗ ಓ.ಆರ್.ಎಸ್. ದ್ರಾವಣವನ್ನು ನೀಡಬೇಕು. ಅದು ಎಷ್ಟು ನೀಡಬೇಕು? ಹೇಗೆ ನೀಡಬೇಕು? ಎಂಬ ಕುರಿತು ಇಲಾಖೆಗಳು ಹಾಗೂ ಆಶಾಕಾರ್ಯಕರ್ತೆಯರು ಮನೆಮನೆಗೆ ತೆರಳಿ ಇಂತಹ ಸಮಸ್ಯೆ ಇರುವವರನ್ನು ಗುರುತಿಸಿ ತಿಳಿಸುವುದೇ ಅಲ್ಲದೆ ಓ.ಆರ್.ಎಸ್.ದ್ರಾವಣ ಬಳಕೆಯ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾತ್ರ ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಇದರ ಜೊತೆಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸಹ ಕೈ ಜೋಡಿಸಬೇಕಲ್ಲದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದ ಅವರು, ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ತಿಳಿಸಿದರು. 

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಕೆ.ಎಸ್.ನಾಗರಾಜಗೌಡ ಅವರು ಮಾತನಾಡಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳದೆ ಇರುವುದು ಸರಿಯಾಗಿ ಕೈ ತೊಳೆಯದೆ ಇರುವುದರಿಂದಲೇ ಶೇ.60 ಕ್ಕೂ ಹೆಚ್ಚು ಕಾಯಿಲೆಗಳು ಬರುತ್ತವೆ. ಹಾಗಾಗಿ ಕೈ ತೊಳೆಯುವ ಕೆಲಸ ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ಅದು ನಮ್ಮ ಕುಟುಂಬದ ಮೇಲೆ ನಂತರ ಸಮಾಜದಲ್ಲಿ ಎಲ್ಲರೂ ಅದನ್ನು ಅಳವಡಿಸಿಕೊಳ್ಳುವಂತಾಗುತ್ತದೆ ಎಂದರು. 

ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಮಾಡಿಸಬೇಕು, ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಅಷ್ಟೇ ಅಲ್ಲದೆ ಅಡುಗೆ ಸಿಬ್ಬಂದಿಯವರು ಮುಖ್ಯವಾಗಿ ಕೈ ತೊಳೆದುಕೊಂಡು ಅಡುಗೆ ಕಾರ್ಯಗಳನ್ನು ಮಾಡಬೇಕು. ಈ ವಿಚಾರಗಳನ್ನು ತಪ್ಪದೆ ಅಳವಡಿಸಿಕೊಳ್ಳುವಂತೆ ಎಲ್ಲಾ ಶಿಕ್ಷಕರಿಗೂ ಮಾಹಿತಿ ನೀಡಲು ಸೂಚಿಸಿದರು. 

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾದ ಬಾಲಾಜಿ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿದ್ದಾಗ ಮಾತ್ರ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ಶಿಕ್ಷಕರು ಭೋದಿಸಿದ ಪಾಠವನ್ನು ಅರಗಿಸಿಕೊಳ್ಳುತ್ತಾರೆ. ಈ ಔಚಿತ್ಯವನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಹಾಗಾಗಿ ಶಿಕ್ಷಕರು ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದ ಮೇಲೂ ಸಹ ಹೆಚ್ಚು ಕಾಳಜಿಯನ್ನು ವಹಿಸಬೇಕು ಎಂದರು. 

ತಾಲ್ಲೂಕು ಪಂಚಾಯಿತಿ ಪ್ರಭಾರ ವ್ಯವಸ್ಥಾಪಕರಾದ ಲಕ್ಷ್ಮೀಶಕಾಮತ್ ಅವರು ಮಾತನಾಡಿ, ಪ್ರತಿಯೊಬ್ಬರೂ ಶುದ್ದ ಕುಡಿಯುವ ನೀರನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಕಾಯಿಲೆಗಳು ಉಂಟಾಗುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೂ ಸಹ ಶುದ್ಧ ಕುಡಿಯುವ ನೀರನ್ನು ತಪ್ಪದೆ ಒದಗಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಒಂದು ಯಾವುದೇ ಪಂಚಾಯಿತಿಗಳು ಕುಡಿಯಲು ಶಾಲೆಗಳಿಗೆ ನೀರನ್ನು ನೀಡದೆ ಇದ್ದಲ್ಲಿ ಮಾಹಿತಿಯನ್ನು ನೀಡಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ನಿರೀಕ್ಷಕರಾದ ಆರ್.ಸತ್ಯನಾರಾಯಣಗೌಡ, ಡಾ. ಕವಿತಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಕುಂದಾಪುರದಲ್ಲಿ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಪಾಲನ ಅಧಿಕ್ರತ ಭೇಟಿ ಹಸಿದವರಿಗೆ ಊಟ ಅನಾಥರಿಗೆ ಆಸರೆ ರೋಗಿಗಳ ಜತನ ಇಂತಹದೆಲ್ಲಾ ಮುಕ್ತಿ ಹೊಂದುವ ಮಾರ್ಗಗಳು : ಕುಂದಾಪುರದಲ್ಲಿ ಧ್ರಡಿಕರಣ ಸಂಸ್ಕಾರ

jananudi network 

 

ಕುಂದಾಪುರದಲ್ಲಿ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಪಾಲನ ಅಧಿಕ್ರತ ಭೇಟಿ

ಹಸಿದವರಿಗೆ ಊಟ ಅನಾಥರಿಗೆ ಆಸರೆ ರೋಗಿಗಳ ಜತನ ಇಂತಹದೆಲ್ಲಾ ಮುಕ್ತಿ ಹೊಂದುವ ಮಾರ್ಗಗಳು 

ಕುಂದಾಪುರದಲ್ಲಿ ಧ್ರಡಿಕರಣ ಸಂಸ್ಕಾರ

 

ಕುಂದಾಪುರ, ಜೂ.2: ‘ಶುದ್ದ ಮನಸ್ಸಿನವರು, ಪರರ ಕಷ್ಟಗಳಲ್ಲಿ ಭಾಗಿಯಾಗುವವರು, ಅನೀತಿ ಅನ್ಯಾಯ , ಶೊಷಣೆ, ಸತ್ಯಕ್ಕಾಗಿ ಹೋರಾಡಿದಲ್ಲಿ, ಅವಮಾನ ನಿಂದೆ, ನಾವು ಸಹಿಸಿಕೊಂಡಲ್ಲಿ, ದಯೆ, ಕರುಣೆ ನಾವು ರೂಡಿ ಮಾಡಿಕೊಂಡಲ್ಲಿ, ಹಸಿದವರಿಗೆ ಊಟ ನೀಡುವುದು ಅನಾಥರಿಗೆ ಆಸರೆ ನೀಡುವುದು, ರೋಗಿಗಳ ಜತನ ಮಾಡುವುದು ಬಾಯಾರಿದವರಿಗೆ ನೀರು ಕೊಡುವುದು, ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ವಿಧ್ಯೆ ಇಲ್ಲದವರಿಗೆ ವಿಧ್ಯೆ ದಾನ ಮಾಡುವುದು, ಇಂತಹದೆಲ್ಲಾ ಕೆಲಸಗಳು ಕೇವಲ ದಯೆ ಕರುಣೆಯ ಕೆಲಸ ಮಾತ್ರವಲ್ಲಾ, ಅವುಗಳು ನಾವು ಸ್ವರ್ಗ ರಾಜ್ಯ ಪಡೆಯುವಂತಹ ಮಾರ್ಗಗಳು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.
ಅವರು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಪಾಲನ ಅಧಿಕ್ರತ ಭೇಟಿಯ ವೇಳೆ ಹಿರಿಯ 33 ಮಕ್ಕಳಿಗೆ ಧ್ರಡಿಕರಣದ ಸಂಸ್ಕಾರವನ್ನು ನೀಡಿ ಮಾತಾನಾಡಿದರು ‘ನಾವು ಮಾಡುವ ದಿನನಿತ್ಯದ ಸಣ್ಣ ಸಣ್ಣ ದಯೆಯ ಉಪಕಾರದ ಕೆಲಸಗಳು ಮಾಡಿದರೆ ನಾವು ಭಾಗ್ಯವಂತರಾಗುತ್ತೇವೆ’ ಎಂದು ಹೆಳುತ್ತಾ, ಧ್ರಡಿಕರಣ ಪಡೆದ ಮಕ್ಕಳಿಗೆ ಶುಭಾಷಯ ಕೋರುತ್ತಾ ‘ನೀವು ಯೇಸು ಕ್ರಿಸ್ತರ ತತ್ವಗಳನ್ನು ಪಾಲಿಸಿ ದೇವರ ಕ್ರಪೆಯನ್ನು ಪಡೆಯಿರಿ’ ಎಂದು ಶುಭ ನುಡಿದರು.
ಈ ಸಂದರ್ಭದಲ್ಲಿ ಅವರು ದಿವ್ಯ ಬಲಿದಾನವನ್ನು ಅರ್ಪಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ನೂತನವಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಬಲಿದಾನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಪ್ರಕಟಿಸಿದ ಇಗರ್ಜಿಯ “ರೊಜಾರಿಯುಮ್” ಪತ್ರಿಕಾ ಸಂಪುಟವನ್ನು ಸಂಪಾದಕ ಬರ್ನಾಡ್ ಡಿಕೋಸ್ತಾ ಧರ್ಮಾಧ್ಯಕ್ಷರಿಗೆ ಕಾಣಿಕೆಯಾಗಿ ನೀಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು.

 

ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೆಟೆಕ್ ಭಿಸ್ಪಾಚೆ ಆಗಮನ್

JANANUDI NETWORK

ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೆಟೆಕ್ ಭಿಸ್ಪಾಚೆ ಆಗಮನ್


ಕುಂದಾಪುರ್, ಜೂ. 1: ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೇಟೆ ಖಾತಿರ್, ಸನ್ವಾರಾ ಸಾಂಜೆರ್ ಭಿಸ್ಪಾಚೆ ಆಗಮನ್ ಜಾಲೆಂ. ಗೊವ್ಳಿ ಬಾಪಾಕ್ ಇಗರ್ಜೆಚ್ಯಾ ದಾರ್ವಾಟ್ಯಾರ್ ವಿಗಾರ್ ಅ|ಮಾ| ಬಾ| ಸ್ಟ್ಯಾನಿ ತಾವ್ರೊ ಝೆಲೊ ಗಾಲುನ್ ಸ್ವಾಗತ್ ಕೆಲೊ. ಭುಗ್ರ್ಯಾಂನಿ ಆರತಿ ಕರ್ನ್ ಸ್ವಾಗತ್ ಮಾಗ್ಲೊ. ತಾಂಚೆಂ ಸಂಗಾತಾ ಸಹಾಯಕ್ ವಿಗಾರ್ ಮಾ|ಬಾ| ರೋಯ್ ಲೋಬೊ, ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್, ನವೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾ ಆನಿ ಫಿರ್ಗಜ್ ಮಂಡಳಿ ಉಪಾಧ್ಯಕ್ಷ್ ಜೇಕಬ್ ಡಿಸೋಜಾ ಮಾನಾನ್ ಸರ್ವ್ ಫಿರ್ಗಜ್ ಲೊಕಾಂ ಸಾಂಗಾತಾ ತಾಂಕಾಂ ಮೊಗಾಚೊ ಸ್ವಾಗತ್ ದಿಲೊ.
ಉಪ್ರಾಂತ್ ಗೊವ್ಳಿ ಬಾಪಾಕ್ ದೇವ್ ಪ್ರಜೆನ್ ಪುರ್ಷಾಂವಾರ್ ದೇವ್ ಮಂದಿರಾಂತ್ ಆಪವ್ನ್ ವೆಲೆಂ. ದೇವ್ ಮಂದಿರಾಂತ್ ಗೊವ್ಳಿ ಬಾಪಾಕ್ ದುಂಪವ್ನ್, ಖುರಿಸ್, ಪೆಟಲ್ಲಿ ವಾತ್ ದಿಂವ್ನ್ ವಿಗಾರ್ ಬಾಪ್ ಸ್ಟ್ಯಾನಿ ತಾವ್ರೊನ್ ಧಾರ್ಮಿಕ್ ರೀತಿ ರಿವಾಜಿ ಪರ್ಮಾಣೆ ಸ್ವಾಗತಾಚಿ ರೀತ್ ಚಲಯ್ಲಿ.
ಉಪ್ರಾಂತ್ ದೇವ್ ಪ್ರಜೆಕ್ ಪವಿತ್ರ್ ಉದಾಕ್ ಶೆಣಾಂವ್ನ್ ಆಶಿರ್ವಾದಿತ್ ಕೆಲೆಂ, ಗೊವ್ಳಿಕ್ ಮಂಡಳಿ ಸಾಂದ್ಯಾಕ್ ಪೆಟಲ್ಲಿ ವಾತ್ ಗೊವ್ಳಿ ಬಾಪಾನ್ ದಿಂವ್ನ್ ’ತಾಂಚೆಂ ಥಾವ್ನ್ ಉತ್ತಿಮ್ ಸೆವಾ ಮೆಳ್ಚ್ಯಾ ಪಾಸೊತ್ ಮಾಗ್ಣೆ ಕೆಲೆಂ.  ಉಪ್ರಾಂತ್ ಗೊವ್ಳಿಕ್ ಬಾಪಾನಿಂ ‘ಆಮ್ಕಾಂ ಜೆಜು ವರ್ವಿಂ ಪುನರ್ ಜಿವಂತ್ಪಣ್ ಆಸಾ, ಮರಣ್ ತತ್ಕಾಲಿಕ್, ಮರಣ್ ಆಮ್ಕಾಂ ಏಕ್ ಉತ್ರೊಣ್’ ಮ್ಹಣನ್ ತಾಣಿ ಸಂದೇಶ್ ದಿಲೊ. ಅಶೆಂ ವಿವಿಧ್ ಮಾಗ್ಣ್ಯಾ ವಿಧಿಂ ಚಲ್ಲಿ ಉಪ್ರಾಂತ್. ಸರಲ್ಯಾ ಆಮ್ಚ್ಯಾ ಮಲ್ಘಡ್ಯಾ ಪಾಸೊತ್ ಸಿಮೆಸ್ತ್ರಿಂತ್ ಮಾಗ್ಣ್ಯಾ ವಿಧಿ ಚಲವ್ನ್ ಗೊವ್ಳಿ ಬಾಪಾಂನಿ ಸಿಮಿಸ್ತ್ರ್ ಬೆಂಜಾರ್ ಕೆಲಿ. ಹ್ಯಾ ಮಾಗ್ಣ್ಯಾ ವಿಧಿಂತ್, ಗೊವ್ಳಿ ಬಾಪಾ ಸವೆಂ, ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ, ಸಹಾಯಕ್ ವಿಗಾರ್ ಮಾ|ಬಾ| ರೋಯ್ ಲೋಬೊ, ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್, ನವೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾ ಹಾಣಿ ವಾಂಟೊ ಘೆತ್ಲೊ. ತಶೆಂಚ್ ಸಭಾರ್ ಧರ್ಮ್ ಭಯ್ಣ್ಯೊ, ಆನಿ ಸಭಾರ್ ದೇವ್ ಪ್ರಜೆನ್ ವಾಂಟೊ ಘೆತ್ಲೊ.

 

ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್‌ ಗೆ 11 ಸ್ಥಾನ

ವರದಿ:ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್‌ 11 ಸ್ಥಾನ ಗಳಿಸಿದೆ. ಉಳಿದಂತೆ ಕಾಂಗ್ರೆಸ್ 8 ಹಾಗೂ ಪಕ್ಷೇತರರು 4 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಪುರಸಭೆ ಆಡಳಿತ ಯಾರ ತೆಕ್ಕೆಗೆ ಬರುತ್ತದೆ ಎಂಬುದು ಪಕ್ಷೇತರರು ನೀಡುವ ಬೆಂಬಲದ ಮೇಲೆ ಆಧಾರಪಟ್ಟಿದೆ.

  ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರ: ಅಭ್ಯರ್ಥಿಗಳು: ವಾರ್ಡ್‌ ನಂ 1: ನಾಗೇಶ್‌ ಕುಮಾರ್‌, ಪಡೆದ ಮತಗಳು 498(ಕಾಂಗ್ರೆಸ್‌), ಪ್ರತಿಸ್ಪರ್ಧಿ ಜಿ.ವಿ.ಪ್ರಸನ್ನಕುಮಾರ್‌, ಪಡೆದ ಮತಗಳು 228 (ಜೆಡಿಎಸ್‌).
  ವಾರ್ಡ್‌ ನಂ 2: ಬಿ.ವೆಂಕಟರೆಡ್ಡಿ 233 (ಪಕ್ಷೇತರ), ಪ್ರತಿಸ್ಪರ್ಧಿ ಎಸ್‌,ಶ್ರೀನಿವಾಸಪ್ಪ, 103 (ಜೆಡಿಎಸ್‌).
  ವಾರ್ಡ್‌ ನಂ.3: ಕೆ.ಜಯಲಕ್ಷ್ಮಿ  351(ಜೆಡಿಎಸ್‌), ಪ್ರತಿಸ್ಪರ್ಧಿ ಸರಸ್ವತಮ್ಮ 285(ಕಾಂಗ್ರೆಸ್‌).
  ವಾರ್ಡ್‌ ನಂ.4: ಸಹೀದಾ ನಿಷಾದ್ ಫಾತಿಮಾ, 390 (ಜೆಡಿಎಸ್‌), ಪ್ರತಿಸ್ಪರ್ಧಿ ನಾಜಿಯಾ ಬೇಗಂ, 77 (ಕಾಂಗ್ರೆಸ್‌). 
  ವಾರ್ಡ್ ನಂ 5: ಬಿ.ಆರ್‌.ಬಾಸ್ಕರ್‌ 342 (ಪಕ್ಷೇತರ), ಪ್ರತಿಸ್ಪರ್ಧಿ ಬಿ.ಎಂ.ಪ್ರಕಾಶ್‌ 329  (ಕಾಂಗ್ರೆಸ್‌).
  ವಾರ್ಡ್‌ ನಂ 6: ವಿ.ಮುನಿರಾಜು 499 (ಕಾಂಗ್ರೆಸ್‌), ಪ್ರತಿಸ್ಪರ್ಧಿ ಎಸ್.ಆರ್.ಮುನಿಕೃಷ್ಣ 74 (ಜೆಡಿಎಸ್‌)
  ವಾರ್ಡ್‌ ನಂ 7:  ಎಸ್‌.ರಾಜು 279 (ಜೆಡಿಎಸ್‌), ಪ್ರತಿಸ್ಪರ್ಧಿ ಎಂ.ನಾರಾಯಣಸ್ವಾಮಿ 135(ಕಾಂಗ್ರೆಸ್‌).
  ವಾರ್ಡ್‌ ನಂ 8: ಎನ್.ನಾಗರಾಜ್ 413 (ಕಾಂಗ್ರೆಸ್‌), ಪ್ರತಿಸ್ಪರ್ಧಿ ಸಿ.ರವಿ 385(ಜೆಡಿಎಸ್‌).
  ವಾರ್ಡ್ ನಂ 9:  ಸಿ.ಆನಂದ ಬಾಬು 365(ಜೆಡಿಎಸ್‌), ಪ್ರತಿಸ್ಪರ್ಧಿ ಎಸ್‌.ಮಂಜುನಾಥ್‌ 283(ಕಾಂಗ್ರೆಸ್‌).
  ವಾರ್ಡ್ ನಂ 10: ಆಯಿಷಾ ಸಿರ್ದಿಕ್‌ 556(ಜೆಡಿಎಸ್‌), ಪ್ರತಿಸ್ಪರ್ಧಿ ಜಬೀನ್‌ ತಾಜ್‌ 171 (ಕಾಂಗ್ರೆಸ್‌).
  ವಾರ್ಡ್‌ ನಂ 11: ಎಂ.ಎಸ್‌.ಲಲಿತಾ 481(ಜೆಡಿಎಸ್‌), ಪ್ರತಿಸ್ಪರ್ಧಿ ಕೆ.ಅನಿತಾ 259 (ಕಾಂಗ್ರೆಸ್‌). 
  ವಾರ್ಡ್ ನಂ 12: ಕೆ.ಅನೀಸ್‌ ಅಹ್ಮದ್‌ 287 (ಕಾಂಗ್ರೆಸ್‌), ಪ್ರತಿಸ್ಪರ್ಧಿ ಮೆಹಬೂಬ್‌ ಷರೀಫ್‌ 245 (ಜೆಡಿಎಸ್‌). 
  ವಾರ್ಡ್‌ ನಂ 13: ಎಂ.ಬಿ.ಸರ್ದಾರ್‌ 365 (ಕಾಂಗ್ರೆಸ್‌), ಪ್ರತಿಸ್ಪರ್ಧಿ ನಸೀರ್‌ ಅಹ್ಮದ್‌ ಖಾನ್‌್ 297 (ಜೆಡಿಎಸ್‌).  
  ವಾರ್ಡ್ ನಂ 14: ರಸೂಲ್‌ ಖಾನ್‌ 439(ಜೆಡಿಎಸ್‌್),  ಪ್ರತಿಸ್ಪರ್ಧಿ ಮುಕ್ತಿಯಾರ್‌ ಅಹ್ಮದ್‌ 262 (ಕಾಂಗ್ರೆಸ್‌).  
  ವಾರ್ಡ್‌ ನಂ15: ಜಬೀನ್‌ ತಾಜ್‌ 451 ( ಜೆಡಿಎಸ್‌), ಪ್ರತಿಸ್ಪರ್ಧಿ ಸಹೇರಾ ಬಾನು 230 (ಕಾಂಗ್ರೆಸ್‌). 
  ವಾರ್ಡ್‌ ನಂ 16: ಶಬ್ಬೀರ್‌ ಖಾನ್‌ 455 (ಜೆಡಿಎಸ್‌),  ಪ್ರತಿಸ್ಪರ್ಧಿ ಸೈಯದ್‌ ಉಮ್ಮರ್‌ 269 (ಕಾಂಗ್ರೆಸ್‌).
  ವಾರ್ಡ್‌ ನಂ 17: ಇಪ್ತಕಾರ್‌ ಅಹ್ಮದ್‌  421(ಪಕ್ಷೇತರ), ಪ್ರತಿಸ್ಪರ್ಧಿ ಕೆ.ವಿ.ಮಂಜುನಾಥ್‌ 161 (ಕಾಂಗ್ರೆಸ್‌).
  ವಾರ್ಡ್ ನಂ 18: ಆರ್‌.ಸಂಜಯ್‌ ಸಿಂಗ್‌ 354 (ಪಕ್ಷೇತರ), ಪ್ರತಿಸ್ಪರ್ಧಿ ಎನ್‌.ಜಗದೀಶ್‌ ಬಾಬು 296.
  ವಾರ್ಡ್ ನಂ  19: ಎನ್‌.ಶಾಂತಮ್ಮ 310 (ಕಾಂಗ್ರೆಸ್), ಪ್ರತಿಸ್ಪರ್ಧಿ ಚೈತನ್ಯ.ಎಂ  ಕಾರ್ ಬಾಬು 291 (ಜೆಡಿಎಸ್‌).
  ವಾರ್ಡ್‌ ನಂ 20: ನೀಲಾವತಿ 584 (ಕಾಂಗ್ರೆಸ್‌), ಪ್ರತಿಸ್ಪರ್ಧಿ ರೆಡ್ಡಮ್ಮ 191 (ಜೆಡಿಎಸ್‌).
  ವಾರ್ಡ್‌ ನಂ 21:  ವಹೀದಾ ಬೇಗಂ 488 (ಜೆಡಿಎಸ್‌), ಪ್ರತಿಸ್ಪರ್ಧಿ ಸಬೀಹಾ ಅಂಜುಂ  327(ಕಾಂಗ್ರೆಸ್‌).
 ವಾರ್ಡ್‌ ನಂ 22: ಫಿರ್‌ದೋಸ್‌ ಉನ್ನೀಸಾ 448 (ಕಾಂಗ್ರೆಸ್‌ ), ಪ್ರತಿಸ್ಪರ್ಧಿ ರಿಹಾನಾ ಖಾನಂ 407 (ಜೆಡಿಎಸ್‌).
  ವಾರ್ಡ್‌ ನಂ 23:  ಕೆ.ಎಸ್‌.ಸುನಿತಾ 642 (ಜೆಡಿಎಸ್‌), ಪ್ರತಿಸ್ಪರ್ಧಿ ಆರ್‌.ಪುಷ್ಪಾವತಿ 119 (ಕಾಂಗ್ರೆಸ್‌). 
  
24
ಶ್ರೀನಿವಾಸಪುರದಲ್ಲಿ ಪುರಸಭಾ ಚುನಾಣೆ ಮತ ಎಣಿಕೆ ಕೇಂದ್ರದ ಹೊರಗೆ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ನಾಗೇಶ್‌ ಕುಮಾರ್ ಕಾರ್ಯಕರ್ತರೊಡಣೆ ವಿಜಯೋತ್ಸವ ಆಚರಿಸಿದರು.
25
ವಾರ್ಡ್‌ ನಂ 17 ರ ಪಕ್ಷೇತರ ಅಭ್ಯರ್ಥಿ ಎಟಿಎಸ್‌ ಇಪ್ತಿಕಾರ್‌ ಅಹ್ಮದ್‌ ಗೆದ್ದು ಮತದಾನ ಕೇಂದ್ರದಿಂದ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಸಾಂಭ್ರಮಾಚರಣೆ ಮಾಡಿದರು.
26
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿ.ವೆಂಕಟರೆಡ್ಡಿ, ಕೆ.ಜಯಲಕ್ಷ್ಮಿ , ಸಿ.ಆನಂದ್‌ ಬಾಬು ಕಾರ್ಯಕರ್ತರೊಂದಿಗೆ ಎಂಜಿ ರಸ್ತೆಯಲ್ಲಿ ವಿಜಯೋತ್ಸವ ಆಚರಿಸಿದರು.

ಕೆ.ಜಿ.ಎಫ್. : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ; ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ

ವರದಿ: ಶಬ್ಬೀರ್ ಅಹ್ಮದ್

ಕೆ.ಜಿ.ಎಫ್. : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ;
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೋಲಾರ : ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ತ್ರೀಗೆ ಚಿಕಿತ್ಸೆ ನೀಡದೆ ಮಗು ಸಾವಿಗೆ ಕಾರಣರಾದ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ರೈತನ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕವು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಕೋಲಾರ ಜಿಲ್ಲೆ ಕೆ.ಜಿಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಈ ಆಸ್ಪತ್ರೆಯಲ್ಲಿ ಮಗುವು ಕಳ್ಳತನವಾಗಿತ್ತು. ಈಗ ಸಮೀನಾ ಎಂಬ ಗರ್ಭಿಣಿ ಸ್ತ್ರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ, ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಅತ್ತ ಗಮನ ಹರಿಸದೆ ಅಮಾನವೀಯವಾಗಿ ವರ್ತಿಸಿ, ಮಗುವಿನ ಸಾವಿಗೆ ಕಾರಣರಾಗಿದ್ದಾರೆ.
ಮಗುವಿನ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ರೈತ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಪ್ರೆಸ್ ಗಣೇಶ್, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮುರ್ತಿ, ತೇರಹಳ್ಳಿ ಚಂದ್ರಪ್ಪ, ಮಣಿಘಟ್ಟ ಮುನಿವೆಂಕಟರೆಡ್ಡಿ, ಕೊಲದೇವಿ ಗಂಗಾಧರ್, ಹುತ್ತೂರು ಶಿವಣ್ಣ, ಜಬೀವುಲ್ಲಾ ಅಬೀದ್ ಖಾನ್ ಮುಂತಾದವರು ಉಪಸ್ಥಿತರಿದ್ದರು.

(ಕಲ್ವಮಂಜಲಿ ರಾಮುಶಿವಣ್ಣ)
ಮೊ. : 8904482075

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಕ್ ನವೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾಚೆ ಆಗಮನ್

 


ಕುಂದಾಪುರ್,ಮೆ. 31: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೇ 31 ವೇರ್ ಸಾಂಜೆರ್ ನವೊ ಸಹಾಯಕ್ ವಿಗಾರ್ ಜಾವ್ನ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಹಾಂಚೆಂ ಆಗಮನ್ ಜಾಲೆಂ.
ಇಗರ್ಜೆಚ್ಯಾ ದಾರ್ವಾಟ್ಯಾರ್ ಕುಂದಾಪುರ್ಚೊ ವಿಗಾರ್ ಮಾ|ಬಾ| ಸ್ಟ್ಯಾನಿ ತಾವ್ರೊನ್ ತಾಂಕಾಂ ಫುಲಾಂ ಝೆಲೊ ಅರ್ಪುನ್ ಮೊಗಾಚೊ ಸ್ವಾಗತ್ ಕೆಲೊ. ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಮಾಗ್ಣ್ಯಾ ವಿಧಿ ಚಲವ್ನ್ ವೆಲಿ. ಉಡುಪಿ ದುಖಿ ಸಾಯ್ಬಿಣಿಚೆ ವಿಗಾರ್ ಭೊ|ಮಾ|ಬಾ|ವಾಲೇರಿಯನ್ ಮೆಂಡೊನ್ಸಾ ಹಾಣಿ “ಬಾ|ವಿಜಯ್ ಜೊಯ್ಸನ್ ಡಿಸೋಜಾ, ಏಕ್ ಮೊವಾಳ್, ಶಾತಿವೊಂತ್ ಯಾಜಕ್’ ಮ್ಹಣನ್ ಆಪ್ಲಿ ಭೊಗ್ಣಾ ಉಚಾರ್ಲಿ. ಕುಂದಾಪುರ್ಚೊ ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊ ‘ಬಾ|ವಿಜಯ್ ಜೊಯ್ಸನ್ ಹಾಂಕಾಂ ಆಮಿ ಮೊಗಾನ್ ಸ್ವೀಕಾರ್ ಕರ್ತಾಂವ್, ರೊಜಾರ್ ಮಾಯ್ ತಾಂಚೆಂ ಮಿಸಾಂವ್ ಮುಂದರುನ್ ವ್ಹರುಂಕ್ ಆಧಾರ್ ದಿತೆಲಿ’ ಮ್ಹಣಾಲೆ.
ಬಾ|ವಿಜಯ್ ಜೊಯ್ಸನ್ ಡಿಸೋಜಾನ್ ‘ಯಾಜಕ್ ಆಸ್ಚೆಂಚ್ ಗರ್ಜ್ ಪಡ್ಚ್ಯಾ ಥಂಯ್ ಕ್ರಿಸ್ತಿ ಸೆವಾ ದಿಂವ್ಕ್, ಆಪುಣ್ ನಿಸ್ವಾರ್ಥ್ ಸೆವಾ ದಿತಾಲೊ. ತುಮ್ಚ್ಯಾ ಮಾಗ್ಣ್ಯಾಚೊ ಮ್ಹಾಕಾ ಗರ್ಜ್ ಮ್ಹಣಾಲೊ. ಕಾರ್ಯಕ್ರಮಚ್ಯಾ ವೇದಿರ್ ಮಾ|ಬಾ| ರೋಯ್ ಲೋಬೊ, ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ್ ಕೊವೆತಾಂಚಿ ವ್ಹಡಿಲ್ನ್ ಸಿಸ್ಟರ್ ವಾಯ್ಲೆಟ್ ತಾವ್ರೊ, 18 ಆಯೋಗಾಚಿ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಾಜರ್ ಆಸ್ಲೆ. ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಪಾವೊಂಕ್ ಸಭಾರ್ ಯಾಜಕ್, ಧರ್ಮ ಭಯ್ಣ್ಯೊ, ಆನಿ ಉಡುಪಿಚಿಂ ದೇವ್‍ಪ್ರಜಾ ಆಯ್ಲಿಂ, ಕುಂದಾಪುರ್ ಫಿರ್ಗಜ್ ಗೊವ್ಳಿಕ್ ಮಂಡಳಿ ಸಾಂದೆ, ಧರ್ಮ್ ಭಯ್ಣ್ಯೊ ಆನಿ ದೇವ್ ಪ್ರಜೆನ್ ಹ್ಯಾ ಸ್ವಾಗತಾಚ್ಯಾ ಕಾರ್ಯಾಂತ್ ವಾಂಟೊ ಘೆತ್ಲೊ. ಆಶಾ ಕರ್ವಾಲ್ಲೊನ್ ಕಾರ್ಯೆ ಚಲವ್ನ್ ವೆಲೆಂ.

 

ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನ

ವರದಿ:ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನ

ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನವಾಗಿದೆ  ಎಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್ ತಿಳಿಸಿದ್ದಾರೆ.  ಬೆಳಿಗ್ಗೆ ಚುರುಕಾಗಿ ನಡೆದ ಮತದಾನ, ಮಧ್ಯಾಹ್ನ ಸುಡು ಬಿಸಿಲಿನ ಪರಿಣಾಮವಾಗಿ ಮಂದವಾಯಿತು. ಬಿಸಿಲು ಕಡಿಮೆ ಆಗುತ್ತಿದ್ದಂತೆ ಮತ್ತೆ ಮತದಾನ ಚುರುಕುಗೊಂಡಿತು. ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ 23 ಮತಗಟ್ಟೆಗಳಲ್ಲೂ ಪುರುಷ ಹಾಗೂ ಮಹಿಳಾ ಮತದಾರರು ಪ್ರತ್ಯೇಕ ಸರತಿ ಸಾಲುಗಳಲ್ಲಿ ನಿಂತು ಮತ ಚಲಾಯಿಸಿದರು.

   ಮತದಾನದ ಸಂದರ್ಭದಲ್ಲಿ ಭಾರಿ ಪೊಲೀಸ್‌ ಬಂದೋಗಸ್ತ್‌ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ ನಾಲ್ಕು ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. 6 ಮತಗಟ್ಟೆಗಳಿಗೆ ಒಬ್ಬರಂತೆ ಒಬ್ಬ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ವಿಶೇಷ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಅತಿ ಸೂಕ್ಷ್ಮ ಮತಗಟ್ಟೆಗಳ ಎದುರು ಸಶಸ್ತ್ರ ಪೊಲೀಸ್‌ ಪಡೆಯ ಕಾವಲು ಹಾಕಲಾಗಿತ್ತು.

  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್‌ ಸಪೆಟ್‌, ಹೆಚ್ಚುವರಿ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್‌ಪಿ ಉಮೇಶ್‌, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಮಕೃಷ್ಣಯ್ಯ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಆರ್‌.ವೆಂಕಟೇಶ್‌ ಭದ್ರತೆಯ ಉಸ್ತುವಾರಿ ವಹಿಸಿದ್ದರು.

ಡಿಸಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪೀಕರ್ ಸೂಚನೆ ಸುಸ್ತಿ ಆಗದವರಿಗೆ ಮರು ಸಾಲ ವಿತರಣೆಗೆ ನಿರ್ಧಾರ ಸಾಲ ವಸೂಲಾತಿಗೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು

ವರದಿ:ಶಬ್ಬೀರ್ ಅಹ್ಮದ್

ಡಿಸಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪೀಕರ್ ಸೂಚನೆ ಸುಸ್ತಿ ಆಗದವರಿಗೆ ಮರು ಸಾಲ ವಿತರಣೆಗೆ ನಿರ್ಧಾರ
ಸಾಲ ವಸೂಲಾತಿಗೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು

ಕೋಲಾರ: ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿಗೆ ಅಡ್ಡಿಯಾಗಿರುವ ಮುಖಂಡರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೂಚಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‍ನಿಂದ ವಿತರಿಸಲಾಗಿರುವ ಸಾಲದ ಮರುಪಾವತಿ, ಸಾಲ ವಿತರಣೆ, ಸಾಲ ನವೀಕರಣದ ಕುರಿತು ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆ ಕುಸಿಯದಂತೆ ಎಚ್ಚರಿಕೆ ವಹಿಸಬೇಕೆಂದರು.
ಸೊಸೈಟಿ ಕಾರ್ಯದರ್ಶಿಗಳ ಮೇಲೆ ಈಗಾಗಲೇ ದೂರುಗಳು ಬಂದಿದ್ದು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ರಿಕವರಿ ಇಳಿಮುಖವಾಗಿರುವ ಕಡೆ ಸಾಲ ವಿತರಣೆಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಬೇಕು. ಸಾಲ ವಸೂಲಾತಿಯಲ್ಲಿ ರಾಜಿ ಮತ್ತು ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ಕೆಲವು ಮುಖಂಡರು ತೊಂದರೆ ಕೊಡುತ್ತಿದ್ದಾರೆಂದು ಕೆಲ ಸೊಸೈಟಿ ಕಾರ್ಯದರ್ಶಿಗಳು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಅಂತಹವರ ಪಟ್ಟಿ ಪಡೆದುಕೊಂಡ ಸ್ಪೀಕರ್ ಸಂಬಂಧಪಟ್ಟವರ ಜತೆ ಮಾತನಾಡಿ ವಸೂಲಾತಿಗೆ ಅಡ್ಡಿ ಮಾಡದಂತೆ ಎಚ್ಚರಿಕೆ ನೀಡುವುದಾಗಿ ಹೇಳಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಸ್ತಿ ಆಗಿರುವ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜತೆ ಸಭೆ ನಡೆಸಿ ಸಾಲ ಮರುಪಾವತಿಗೆ ಮನವಿ ಮಾಡುವುದಾಗಿ ಹೇಳಿದ ಸ್ಪೀಕರ್ ಅವರು ಚುನಾವಣೆಯಲ್ಲಿ ಕೆಲ ದೊಡ್ಡ ಮನುಷ್ಯರು ಮನ್ನಾ ಮಾಡಿಸುವುದಾಗಿ ಹೇಳಿಕೊಂಡು ಓಡಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ವಿಷಾಧಿಸಿದರು.
ಸ್ತ್ರೀ ಶಕ್ತಿ ಸಂಘದವರು ಸಾಲ ಮರು ಪಾವತಿ ಮಾಡಿದರೆ ಸೊಸೈಟಿಗಳು ಉಳಿಯುತ್ತವೆ, ಸೊಸೈಟಿಗಳು ಉಳಿದರೆ ಡಿಸಿಸಿ ಬ್ಯಾಂಕ್ ಉಳಿಯುತ್ತದೆ, ಬ್ಯಾಂಕ್ ಇದ್ದರೆ ನಾವು,ನೀವು ಇರುತ್ತೇವೆ. ತಪ್ಪಿದಲ್ಲಿ ಪಿಎಲ್‍ಡಿ ಬ್ಯಾಂಕ್‍ಗೆ ಬಂದಿರುವ ದುಸ್ಥಿತಿ ಡಿಸಿಸಿ ಬ್ಯಾಂಕಿಗೂ ಬರುತ್ತದೆ ಎಂದು ಎಚ್ಚರಿಸಿದರು.
ಜೂ.2 ರಂದು ಬೆಳಗ್ಗೆ 10 ಗಂಟೆಗೆ ಸುಗಟೂರು ಸೊಸೈಟಿಯಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ನಡೆಸಲು ಸೂಚಿಸಿದ ಸ್ಪೀಕರ್ ನಂತರದಲ್ಲಿ ಶ್ರೀನಿವಾಸಪುರ ಕಸಬಾಕ್ಕೆ ಸಂಬಂಧಿಸಿದಂತೆ ಸಾಲ ವಿತರಣೆ ಮಾಡಬೇಕು. ಅಂತಿಮವಾಗಿ ಜುಲೈ ಮೊದಲ ವಾರದಲ್ಲಿ ಆರಂಭವಾಗುವ ಸಾಲ ವಿತರಣೆ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಮುಂದುವರೆಯಬೇಕು ಎಂದು ವೇಳಾಪಟ್ಟಿ ನಿಗದಿ ಮಾಡಿದರು.
ಬ್ರೋಕರ್ ಇಲ್ಲದೆ ಸಾಲ ಸಿಕ್ಕಬೇಕು, ಜಾಮೀನು ಕೇಳದೆ ಎಲ್ಲರಿಗೂ ಸಾಲ ಸೌಲಭ್ಯ ತಲುಪಿಸಬೇಕು ಎಂಬ ಕಾರಣಕ್ಕಾಗಿ ಡಿಸಿಸಿ ಬ್ಯಾಂಕನ್ನು ಸಶಕ್ತಗೊಳಿಸಲಾಗಿದ್ದು ಇದೀಗ ರಾಜಕೀಯ ಹಾಗೂ ಮುಖಂಡರ ಲಾಭಕ್ಕಾಗಿ ಬ್ಯಾಂಕನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಡ. ಪವಿತ್ರವಾದ ಕಾರ್ಯಕ್ರಮದಲ್ಲಿ 10 ಜನರನ್ನು ಖುಷಿಪಡಿಸಲು ಹೋದರೆ ಬ್ಯಾಂಕ್ ಮುಳುಗಿ ಹೋಗುತ್ತದೆ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಅನಿಲ್ ಕುಮಾರ್ ಇದ್ದರು.

 

ಸುಸ್ತಿ ಸಾಲ ವಸೂಲಿಗೆ ಸ್ಪೀಕರ್ ಸಾರಥ್ಯ

ಅವಳಿ ಜಿಲ್ಲೆಯಲ್ಲಿ ಸುಸ್ತಿ ಆಗಿರುವ ಸಾಲ ವಸೂಲಾತಿಗೆ ನಾನೇ ಬರುತ್ತೇನೆ. ಸೊಸೈಟಿ ಕಾರ್ಯದರ್ಶಿಗಳು ಸಾಲ ವಿತರಣೆಯಲ್ಲಿ ಹಣ ಪಡೆದುಕೊಳ್ಳುತ್ತಿರುವ ದೂರುಗಳಿದ್ದು ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದ್ದು ಸಾಲ ವಸೂಲಾತಿಗೆ ಯಾವುದೇ ಮುಲಾಜು ತೋರಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಕಟ್ಟಪ್ಪಣೆ ಮಾಡಿದರು.
ಅಗತ್ಯ ಬಂದ ಕಡೆ ಪೊಲೀಸರ ನೆರವನ್ನು ಪಡೆದುಕೊಳ್ಳಬೇಕು. ನೇರ ಮಾರುಕಟ್ಟೆ ಒಡಂಬಡಿಕೆ ಮಾಡಿಕೊಂಡಿರುವ ಪೌಲ್ಟ್ರಿಫಾರಂಗಳಿಗೆ ಸಾಲ ಒದಗಿಸುವ ಮೂಲಕ ವಹಿವಾಟು ಹೆಚ್ಚಿಸಿಕೊಳ್ಳಬೇಕು. ಶೀಘ್ರದಲ್ಲೇ ವಿಜ್ಞಾನಿಗಳನ್ನು ಜಿಲ್ಲೆಗೆ ಕರೆಸಿ ರೈತರಿಗೆ ಯಾವ ಬೆಳೆ ಮಾಡಿದರೆ ಲಾಭದಾಯಕ ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುವುದು. ದಗಾಕೋರತನ ತಡೆದರೆ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಸರಿ ಆಗುತ್ತದೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು.

ಪಿಯುಸ್ ನಗರ್ ಕೆಥೊಲಿಕ್  ಸ್ತ್ರೀ ಸಂಘಟನೆ  ವಾರ್ಷಿಕ ಸಭೆ -ನೂತನ  ಪದಾದಿಕಾರಿಗಳ ಆಯ್ಕೆ. ಅಧ್ಯಕ್ಷೆಯಾಗಿ ಜೆನ್ನಿ ಡೇಸಾ

ವರದಿ ಮತ್ತು ಪೋಟೊಗಳು : ಜೆನ್ನಿ ಡೇಸಾ

ಪಿಯುಸ್ ನಗರ್ ಕೆಥೊಲಿಕ್  ಸ್ತ್ರೀ ಸಂಘಟನೆ  ವಾರ್ಷಿಕ ಸಭೆ – ನೂತನ  ಪದಾದಿಕಾರಿಗಳ ಆಯ್ಕೆ. ಅಧ್ಯಕ್ಷೆಯಾಗಿ ಜೆನ್ನಿ ಡೇಸಾ

ಪಿಯುಸ್ ನಗರ್ ಮೇ 2: ‌ಸಂತ ಪಿಯುಸ್ ಇಗರ್ಜಿಯ ಕೆಥೊಲಿಕ್ ಸ್ತ್ರೀ ಸಂಘಟನೆಯ ವಾರ್ಷಿಕ ಸಭೆಯು ಸೋಮವಾರ ಮೇ 27 ರಂದು ಇಗರ್ಜಿಯ ಸಭಾ ಭವನದಲ್ಲಿ ನಡೆಯಿತು. ಪ್ರಾರ್ಥನಾ ವಿಧಿಯೊಂದಿಗೆ ಸಭೆ ಆರಂಭವಾಯಿತು. ಕಳೆದ ಸಾಲಿನ ಅಧ್ಯಕ್ಷೆ ಎವ್ಲಿನ್ ಫರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ರೇಶ್ಮಾ ಡಿಸೋಜಾ ವರದಿಯನ್ನು ವಾಚಿಸಿದರು. ಮೆಟಿಲ್ಡಾ ಡಿಸೋಜಾ ಖರ್ಚು ವೆಚ್ಚಗಳ ಪ್ರಸ್ತೂತ  ಪಡಿಸಿದರು.

    ನಂತರ 2019–20 ರ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷೆ ಯಾಗಿ ಜೆನ್ನಿ ಡೇಸಾ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷೆ ಯಾಗಿ ಮೆಟಿಲ್ಡಾ ಡಿಸೋಜಾ, ಕಾರ್ಯದರ್ಶಿಯಾಗಿ ಲವೀನಾ ಡಿಸೋಜಾ, ಸಹ ಕಾರ್ಯದರ್ಶಿಯಾಗಿ ಆಶಾ ಡಿಸೋಜಾ, ಖಜಾಂಚಿಯಾಗಿ ರೇಶ್ಮಾ ಡಿಸೋಜಾ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ನತಾಲಿನ್ ಡಿಸೋಜಾ ಹಾಗೂ ವಾರಾಡೊ ಪ್ರತಿನಿಧಿಯಾಗಿ ಪ್ರಮೀಳಾ ಡೇಸಾ ಆಯ್ಕೆಯಾದರು.             ಕುಂದಾಪುರ ವಲಯದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ಡೇಸಾ ಹಾಜರಿದ್ದು,ಚುನಾವಣೆಯ ನಿಯಮಾವಳಿಗಳನ್ನು ತಿಳಿಸಿದರು. ಕೆಥೊಲಿಕ್ ಸ್ತ್ರೀ ಸಂಘಟನೆಯ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜೆನೆಟ್ ಬಾರ್ಬೊಜಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಕೊಟ್ಟು, ತಮ್ಮ ಸಂದೇಶದೊಂದಿಗೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜೆನ್ನಿ ಡೇಸಾ ಧನ್ಯವಾದವನ್ನಿತ್ತರು. ದೇವರ ಸ್ತುತಿ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು