HOLY ROSARY CHURCH, KUNDAPUR – 450 th JUBILEE SOUVENIR 2021

ನಿರ್ದೇಶಕರಿಂದ ಜಿಲ್ಲೆಯ ಜನತೆಗೆ ರಂಜಾನ್ ಈದುಲ್ ಫಿತ್ರ್ ಹಬ್ಬದ ಶುಭಾಶಯ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ  

ನಿರ್ದೇಶಕರಿಂದ ಜಿಲ್ಲೆಯ ಜನತೆಗೆ ರಂಜಾನ್ ಈದುಲ್ ಫಿತ್ರ್ ಹಬ್ಬದ ಶುಭಾಶಯ.

ಶ್ರೀನಿವಾಸಪುರ: ದಿನಾಂಕ: 05-06-2019 ರಂದು ಬುಧವಾರ ಕೋಲಾರ ಜಿಲ್ಲೆಯಾದ್ಯಂತ ಆಚರಿಸುತ್ತಿರುವ ಈದುಲ್ ಫಿತ್ರ್ ಹಬ್ಬವು ಮುಸ್ಲಿಂ ಬಾಂಧವರಿಗೆ ಸುಖ, ಶಾಂತಿ, ನೆಮ್ಮದಿಯನ್ನು ನೀಡಲೆಂದು ನಿರ್ದೇಶಕರು ಶ್ರೀನಿವಾಸಪುರ

ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ಶ್ರೀನಿವಾಸಪುರ ತಾಲ್ಲೂಕು ಶಬ್ಬೀರ್ ಅಹಮ್ಮದ್ ಅವರು ಹೃದಯಪೂರ್ವಕವಾಗಿ ಶುಭಾಶಯಗಳನ್ನು ಹಾರೈಸಿದ್ದಾರೆ.

ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ

ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ಮಾಹಿತಿಯು ಜನರಿಗೆ ತಿಳಿಯಬೇಕು. ಇದರಿಂದ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. 

 ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಗ್ರೀನ್ ಯೋಜನೆಯಡಿ ಟೊಮ್ಯೋಟೋ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ದೇಶದ ಬೆನ್ನೆಲುಬು. ಶ್ರೀಲಂಕಾದಲ್ಲಿ ಬಾಂಬ್ ದಾಳಿ ಆದ ನಂತರ ಪಾಕಿಸ್ತಾನಕ್ಕೆ ಕೋಲಾರದಿಂದ ಆಗುತ್ತಿದ್ದ ಟೊಮೊಟೋ ರಪ್ತನ್ನು ನಿಲ್ಲಿಸಿದ್ದು ಶ್ಲಾಘನೀಯ. ಪ್ರತಿಯೊಬ್ಬರು ದೇಶಾಭಿಮಾನವನ್ನು ಹೊಂದಿರಬೇಕು ಎಂದರು. 

 ಕೋಲಾರವು ಮಾವು ಮತ್ತು ಟೊಮಾಟೊ ಬೆಳೆಗೆ ಹೆಸರುವಾಗಿಯಾಗಿದೆ. ಆದ್ದರಿಂದ ಇಲ್ಲಿ ಮಾವು ಮತ್ತು ಟೊಮ್ಯಾಟೊ ಬೆಳೆಗಳ ಸಂಸ್ಕರಣ ಘಟಕ ಅತ್ಯಗತ್ಯವಾಗಿದೆ. ಸಂಸ್ಕರಣ ಘಟಕ ಸ್ಥಾಪಿಸಲು ಹೋಳೂರು ಸಂಘದವರು ಮಾತ್ರ ಮುಂದೆ ಬಂದಿದ್ದು, ಇನ್ನು ಹೆಚ್ಚಿನ ಸಹಕಾರ ಸಂಘಗಳು ಅವಕಾಶವನ್ನು ಸುದಪಯೋಗಪಡಿಸಿಕೊಳ್ಳಲು 50 ಕೋಟಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದ್ದು, 1300 ರಿಂದ 1500 ಅಡಿ ಆಳಕ್ಕೆ ಅಂತರ್ಜಲ ಇಳಿದಿದೆ. ಜಿಲ್ಲೆಯ ರೈತರು ಶ್ರಮಜೀವಿಗಳಾಗಿದ್ದು, ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. 

 ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ,  ಭಾರತ ಸರ್ಕಾರದ ಆಪರೇಷನ್ ಗ್ರೀನ್ ಯೋಜನೆ ಉತ್ತಮವಾದ ಯೋಜನೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಸಾಗಾಣೆ ಮಾಡಿ ಉತ್ತಮವಾದ ಬೆಲೆಗೆ ಮಾರಾಟ ಮಾಡಿ ಆದಾಯ ಗಳಿಸಲು ಸಾಧ್ಯವಾಗುತ್ತದೆ. ರೈತರು ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಮಾಡಿಸುವುದರಿಂದ ಆಗುವ ಬೆಳೆಯ ನಷ್ಟಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಮೇ 18 ರಿಂದ 24 ರವರೆಗೆ ಆದ ಮಳೆಯಿಂದ ಆದ ಬೆಳೆ ಹಾನಿಗೆ 3.27 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ನಂತರ ಆದ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 

 ದಕ್ಷಿಣ ಏಷ್ಯಾದಲ್ಲಿಯೇ ಕೋಲಾರ ಜಿಲ್ಲೆ ಟೊಮೊಟೊ ಬೆಳೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯ 8,707 ಹೆಕ್ಟೇರ್ ಪ್ರದೇಶದಲ್ಲಿ ಟೊಮಾಟೊವನ್ನು ಬೆಳೆಯಲಾಗುತ್ತದೆ. 4,97,107 ಮೆಟ್ರಿಕ್ ಟೌನ್ ಉತ್ಪಾದನೆ ಮಾಡಿ ಸುಮಾರು 300 ಕೋಟಿ ವಹಿವಾಟು ನಡೆಯುತ್ತದೆ ಎಂದ ಅವರು ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಜಾಗ ನೀಡಲು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

 ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕದ್ರಿಗೌಡ ಅವರು ಮಾತನಾಡಿ, ಕರ್ನಾಟಕವು ಸೇರಿದಂತೆ ಭಾರತ ಸರ್ಕಾರವು 8 ರಾಜ್ಯಗಳಲ್ಲಿ ಆಪರೇಷನ್ ಗ್ರೀನ್ ಯೋಜನೆಯನ್ನು 2018 ರಲ್ಲಿ ಜಾರಿಗೆ ತಂದಿದೆ. ಕರ್ನಾಟಕದ ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಗೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಟೊಮೊಟೋ ಬೆಳೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಟೊಮೊಟೋ ಬೆಲೆ ಕುಸಿತ ಉಂಟಾದಾಗ ಸಂಗ್ರಹಣೆ ಮಾಡಲು ಹಾಗೂ ಸಾಗಾಣೆ ಮಾಡಲು ಶೇ 50% ಸಬ್ಸಿಡಿ  ನೀಡಲಾಗುವುದು ಎಂದರು. 

 ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಕೆ.ಆರ್ ರಮೇಶ್ ಕುಮಾರ್ ಅವರು 

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. 

ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಡಿ.ಎಲ್. ನಾಗರಾಜ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್‍ನ ಕೃಷಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್ ರಾಮಚಮದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಅರವಿಂದ್, ಮಹೇಶ್, ಜಯಪ್ರಕಾಶ್, ಆಪರೇಷನ್ ಗ್ರೀನ್ ಯೋಜನೆಯ ಉಪನಿರ್ದೇಶಕರಾದ ಶ್ಯಾಮಸುಂದರ್ ಅಗರ್‍ವಾಲ್, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಬಿ.ಜಿ ಪ್ರಕಾಶ್, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಮಂಜುನಾಥ್‍ಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಬಾಪ್ ರೋಯ್ ಲೋಬೊಚೆ ಕುಂದಾಪುರ್ ಥಾವ್ನ್ ನಿರ್ಗಮನ್ ಆನಿ ಕಾರ್ಕೊಳ್ ಆತ್ತೂರ್ ಬಾಸಿಲಿಕಾಂತ್ ತಾಂಕಾಂ ಸ್ವಾಗತ್

JANANUDI NETWORK

ಬಾಪ್ ರೋಯ್ ಲೋಬೊಚೆ ಕುಂದಾಪುರ್ ಥಾವ್ನ್ ನಿರ್ಗಮನ್ ಆನಿ ಕಾರ್ಕೊಳ್ ಆತ್ತೂರ್ ಬಾಸಿಲಿಕಾಂತ್ ತಾಂಕಾಂ ಸ್ವಾಗತ್

ಕುಂದಾಪುರ್, ಕಾರ್ಕೊಳ್. ಜೂನ್ 5: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಎಕ್ ವರಸ್ ಆಪ್ಲಿ ಅಮೂಲ್ಯ ಸೇವಾ ದಿಲ್ಲೊ ಬಾಪ್ ರೋಯ್ ಲೋಬೊಕ್ ವರ್ಗಾವಣ್ ಜಾಲ್ಯಾನ್ ಜೂನಾಚ್ಯಾ 4 ತಾರೀಕೆರ್ ಕುಂದಾಪುರ್ ಥಾವ್ನ್ ತಾಂಚ್ಯಾ ನಿರ್ಗಗಮನ್ ಕಾರ್ಯಾಕ್ ಲಾಗೊನ್ ಪಾವ್ನ್ ದಿಂವ್ಕ್ ವೆಚೆಂ ಕಾರ್ಯೆಂ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಲ್ಲೆಂ. ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸಾನ್ ಮಾಗ್ಣ್ಯಾ ವಿಧಿ ಚಲಂವ್ನ್ ವೆಲಿ. ವಿಗಾರ್ ಬಾಪಾನ್ ಬಾಪ್ ರೋಯ್ ಲೋಬೊಕ್ ಬರೆಂ ಮಾಗ್ಲೆಂ. ಬಾಯ್ ರೋಯ್ ಲೋಬೊನ್ ಪಾಂವ್ಕ್ ಆಯ್ಲ್ಯಾ ಭಕ್ತಿಕಾಂಕ್ ದೆವಾಚೊ ಆಶಿರ್ವಾದ್ ದಿಲೆಂ. ಹ್ಯಾ ವೇಳಾ ಬಾಪ್ ರೋಯ್ ಲೋಬೊ ಭಾವುಕ್ ಜಾಲ್ಲೆಂ ದಿಸೊನ್ ಆಯ್ಲೆಂ, ಆನಿ ಕುಂದಾಪುರ್ ಥಂಯ್ ತಾಂಕಾಂ ಆಸ್ಲೊ ಮೋಗ್ ಜಳ್ಕಾಲೊ.
ಬಾಪ್ ರೋಯ್ ಲೋಬೊಕ್ ಕಾರ್ಕೊಳ್ ಅತ್ತೂರ್ ಮೈನರ್ ಬಾಸಿಲಿಕಾಚೆ ರೆಕ್ಟರ್ ಮಾ|ಬಾ|ಜಾರ್ಜ್ ದಿಸೋಜಾನ್ ಫುಲಾಂ ಝೆಲೊ ಅರ್ಪುನ್ ಸ್ವಾಗತ್ ಕೆಲೊ. ಉಪ್ರಾಂತ್ ಮಾಗ್ಣ್ಯಾ ವಿಧಿ ಚಲಯ್ಲಿ. ಬಾಪ್ ರೋಯ್ ಲೋಬೊನ್ ಕಾರ್ಕೊಳ್ ಆನಿ ಕುಂದಾಪುಚ್ರ್ಯಾ ಭಕ್ತಿಕಾಂಕ್ ದೆವಾಚೆ ಅಶಿರ್ವಾದ್ ದಿಲೆಂ.
ಉಪ್ರಾಂತ್ ಚಲಲ್ಯಾ ಸಭಾ ಕಾರ್ಯಕ್ರಮಾಂತ್ ‘ಕುಂದಾಪುರ್ಚೊ ವಿಗಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊನ್ ಭರಲ್ಯಾ ಕಾಳ್ಜಾನ್ ಬಾಪ್ ರೋಯಾಕ್ ಶಾಭಾಸ್ಕಿ ಪಾಠವ್ನ್ ತಾಂಚಿಂ ಸೇವಾ ವಾಕಣುನ್ ಭಾವುಕ್ ಉತ್ರಾಂ ದ್ವಾರಿ ವಪ್ಸುನ್ ದಿಲೆಂ. ಬಾಪ್ ರೋಯ್ ಲೋಬೊನ್ ಕುಂದಾಪುರ್ ಗಾರಾಂಚೊ ಮೋಗ್ ವ್ಯಕ್ತ್ ಕರುನ್ ಉಪ್ಕಾರ್ ಭಾವುಡ್ಲೊ, ತಶೆಂಚ್ ಆಪುಣ್ ಪ್ರಮಾಣಿಕ್ ಸೇವಾ ಅತ್ತೂರ್‍ಯಿ ದಿತಾಂ ಮ್ಹಣನ್ ತಾಣಿ ಸಾಂಗ್ಲೆ. ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ್ಚೊ ನವೊ ಸಹಾಯಕ್ ಯಾಜಕ್ ಬಾಪ್ ವಿಜಯ್ ಡಿಸೋಜಾ, ಅತ್ತೂರ್ ಥಾವ್ನ್ ನಿರ್ಗಮನ್ ಜಾಂವ್ನ್ ಉಂಚ್ಲ್ಯಾ ಶಿಕ್ಪಾಕ್ ಇಟೆಲಿ ವೆಚೊ ಬಾಪ್ ಜೆನ್ಸಿಲ್ ಆಳ್ವಾ, ಕುಂದಾಪುರ್ಚೊ ಉಪಾಧ್ಯಕ್ಷ್ ಜೇಕಬ್ ಡಿಸೋಜಾ ವೇದಿರ್ ಹಾಜರ್ ಆಸ್ಲೆಂ.
18 ಆಯೋಗಾಚೊ ಸಂಯೋಜಕ್ ರಿಚಾರ್ಡ್ ಪಿಂಟೊನ್ ಸ್ವಾಗತ್ ಮಾಗ್ಲೊ. ಅತ್ತೂರ್ ಫಿರ್ಗಜೆಚೊ ಗೊವ್ಳಿಕ್ ಮಂಡಳಿ ಉಪಾಧ್ಯಕ್ಷ್ ಜೋನ್ ಡಿಸಿಲ್ವಾನ್ ಧನ್ಯವಾದ್ ಪಾಠಯ್ಲೆ. ಕಾರ್ಯದರ್ಶಿ ಲೀನಾ ಡಿಸಿಲ್ವಾನ್ ಕಾರ್ಯೆ ಚಲವ್ನ್ ವೆಲೆಂ.

ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ
ಬಡ್ಡಿರಹಿತ ಸಾಲದ ಮೊತ್ತ 10ಲಕ್ಷಕ್ಕೇರಿಸಲು ಕ್ರಮ -ಸ್ವೀಕರ್ ರಮೇಶ್‍ಕುಮಾರ್

ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಲು ಒಂದು ವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು.
ಭಾನುವಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ
ಸುಗಟೂರು ಹೋಬಳಿಯ 186 ಸ್ವಸಹಾಯ ಸಂಘಗಳಿಗೆ 10.2 ಕೋಟಿರೂ ಸಾಲ
ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಚುನಾವಣೆಗೆ ಮುನ್ನ ಹೇಳಿರುವಂತೆಯೇ ಪ್ರತಿಯೊಂದು ಸ್ವಸಹಾಯ
ಸಂಘಕ್ಕೂ ತಲಾ 10 ಲಕ್ಷರೂ ಸಾಲವನ್ನು ನೀಡುತ್ತೇವೆ. ಇದರಲ್ಲಿ ಅನುಮಾನ ಬೇಡ, ತಡವಾಗುವುದನ್ನು ತಪ್ಪಿಸಲು ಈಗ 5 ಲಕ್ಷ ರೂ ನೀಡುತ್ತಿದ್ದು, ಮುಂದಿನ 10 ದಿನಗಳೊಳಗೆ ಉಳಿದ 5 ಲಕ್ಷರೂ ಸಂಘಗಳಿಗೆ ನೀಡುವುದಾಗಿ ತಿಳಿಸಿದರು.
ಪ್ರಾಣಹೋದರೂ ತಲೆ ಬಗ್ಗಿಸುವುದಿಲ್ಲ, ನಿಮ್ಮ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಇತ್ತೀಚೆಗಿನ ಚುನವಣೆಯಿಂದಾಗಿ ಸಾಲ ಮರುಪಾವತಿಸಿದ್ದರೂ ಮರು ಸಾಲ ವಿತರಣೆಗೆ 3 ತಿಂಗಳು ತಡವಾಯಿತು ಎಂದು ತಿಳಿಸಿದರು.
ನಮ್ಮ ಹಾಗೂ ಬ್ಯಾಂಕ್ ಬಗ್ಗೆ ಅನೇಕರು ಮಾತನಾಡುತ್ತಾರೆ. ಅವರಿಗೆ ಜವಾಬ್ದಾರಿ
ಎನ್ನುವುದೇ ಇರುವುದಿಲ್ಲ. ಇನ್ನೂ ಕೆಲವು ಪಾಳೇಗಾರರು ಇಲ್ಲಸಲ್ಲದ
ವಿಚಾರಗಳನ್ನು ಹೇಳಿ, ಜನರು ಹಣ ವಾಪಸ್ಸು ಕಟ್ಟುವುದಿಲ್ಲ ಎಂದು
ಕಿವಿಚುಚ್ಚುತ್ತಿದ್ದಾರೆ. ಇವೆಲ್ಲವೂ ಹೊಟ್ಟೆಗೆ ಅನ್ನ ತಿನ್ನುವ ಮಾತುಗಳೇ ಎಂದು
ಕಿಡಿಕಾರಿದರು.
ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಕಾರಣ ನಾನು ಹೆತ್ತ ತಾಯಿಯಂತೆ
ನಿಮ್ಮನ್ನು ನಂಬಿದ್ದೇನೆ. ತಾಯಿ ಹಾಲು ಎಂದಾದರೂ ವಿಷ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನಿಮಗೆ ಸಾಲ ನೀಡಲು ಅಡ್ಡಿಪಡಿಸುವವರ ಕುಟುಂಬವನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದು ಆಶಿಸಿ, ನೀವು ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಎಂದು ಮನವಿ ಮಾಡಿದರು,
ಸಂಘದ ಪ್ರತಿಯೊಬ್ಬ ಸದಸ್ಯರಿಗೆ 50 ಸಾವಿರ ಬದಲಿಗೆ ನಿಮಗೆ 1 ಲಕ್ಷರೂಗಳನ್ನು
ನೀಡುತ್ತಿರುವುದು ಪ್ರವಾಸ ಹೋಗುವುದಕ್ಕೆ ಅಲ್ಲ. ಹೈನುಗಾರಿಕೆ ಸೇರಿದಂತೆ
ಇನ್ನಿತರೆ ಕೆಲಸಗಳಿಗೆ ಬಳಸಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವಷ್ಟು ಮಟ್ಟಕ್ಕೆ ಸ್ವಾವಲಂಭಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ನನ್ನ ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದು, ಅವರು ಆರಾಮಾಗಿ ಇದ್ದಾರೆ.
ಹೀಗಾಗಿ ನನಗೆ ಬೇರೆ ಯಾವುದೇ ಆಲೋಚನೆಗಳಿಲ್ಲ. ಮಲಗಿದರೂ, ಎದ್ದರೂ
ನನಗೆ ನೀರಿನದ್ದೇ ಚಿಂತೆಯಾಗಿದೆ.
ಕೆಸಿವ್ಯಾಲಿ ಜತೆಗೆ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಯಾವಾಗ
ಬರುತ್ತದೆ ಎನ್ನುವ ಕಾತುರ ನನ್ನಲ್ಲಿದೆ. ಸರಕಾರಿ ಭೂಮಿಗಳಲ್ಲಿ ಹುಲ್ಲು ಬೆಳೆದು ನಿಮ್ಮ ಹಸುಗಳಿಗೆ ಹುಲ್ಲು ನೀಡಬೇಕು ಎನ್ನುವ ಆಸೆ ನನಗಿದೆ. ನನ್ನ ಆಲೋಚನೆಯು ಜನರು, ಬಡವರ ಪರ ಇರುವುದರಿಂದ ನನ್ನ ಪರವಾಗಿ ನೀವಿದ್ದೀರಿ ಎನ್ನುವ ಆಶಾಭಾವನೆ ನನ್ನಲ್ಲಿದೆ ಎಂದರು.
ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದ ರೈತರಿಗೂ ಕೊಳವೆಬಾವಿಗಳನ್ನು ಕೊರೆಯಿಸಲು 1 ತಿಂಗಳಲ್ಲೇ ಚಾಲನೆ ನೀಡಲಾಗುವುದು, ನಾನು ಪಾರ್ಟಿ, ಜಾತಿಗಳನ್ನು ದಾಟಿ ಬಂದಿರುವುದರಿಂದ ಎಲ್ಲರೂ ನನಗೆ ಸಮಾನರು ಎಂದು ತಿಳಿಸಿದರು.
ಸರ್ಕಾರದ ವಿವಿಧ ಸಹಾಯಧನ ಸೇರಿದಂತೆ ಇತರೆಲ್ಲಾ ಯೋಜನೆಗಳನ್ನು ಡಿಸಿಸಿ ಬ್ಯಾಂಕ್ ಮೂಲಕವೇ ಅನುದಾನ ನೀಡಿ ಅನುದಾನ ನೀಡಿಕೆಗೆ ನಾನು ಬದ್ದನಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮದ ಭರವಸೆ ನೀಡಿದರು.
ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ, ತಪ್ಪಿದರೆ ಈ ಭೂಮಿಯ ಮೇಲೆಯೇ
ಉಳಿಯಲ್ಲ ಎಂದು ತಿಳಿಸಿದ ಅವರು, ದೇವರ ಕೆಲಸ ಮಾಡಿದರೆ ಪುಣ್ಯ ಬರಲ್ಲ,
ಜನರ ಕೆಲಸ ಮಾಡಿದರೆ ಪುಣ್ಯ ಬರುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಅಧ್ಯಕ್ಷತೆವಹಿಸಿದ್ದು, ವೇಮಗಲ್ ವ್ಯಾಪ್ತಿಯ ಉರಿಗಿಲಿ ಗ್ರಾಪಂಅನ್ನು ಸಾಲವಿತರಣೆ ಮಾಡುವ ಸಲುವಾಗಿ
ಸುಗಟೂರು ವ್ಯಾಪ್ತಿಗೆ ಸೇರಿಸಲಾಗಿದ್ದು, ಅಲ್ಲಿನ ಮಹಿಳಾ ಸಂಘಗಳಿಗೂ ಸಾಲ ನೀಡುವ ವ್ಯವಸ್ಥೆ ಮಾಡಬೇಕು ಎಂದರು.
ಸಾಲ ಮರುಪಾವತಿ ವಿಚಾರದಲ್ಲಿ ಸುಗಟೂರು ಹಾಗೂ ಹೋಳೂರು ಹೋಬಳಿಯಲ್ಲಿ
ಯಾರೊಬ್ಬರೂ ನಂಬಿಕೆ ಕಳೆದುಕೊಂಡಿಲ್ಲ. ನಮ್ಮ ಮೇಲೆ ಈ ಹಿಂದೆ ದೂರು
ಕೊಟ್ಟವರೇ ಈಗ ನಿಮ್ಮನ್ನು ನೋಡಿ ಕಲಿಯಬೇಕಾಗಿದೆ ಎಂದು ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿಯಿಟ್ಟು ವ್ಯವಹರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸ್ವೀಕರ್ ಅವರಿಗೆ ಮನವಿ ಮಾಡಿದ ಅವರು, ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದರು.
ಜೂ.9ಕ್ಕೆ ಶ್ರೀನಿವಾಸಪುರದಲ್ಲಿ
7ನೇ ವರ್ಷದ ಕಲ್ಯಾಣೋತ್ಸವ
ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷದಂತೆಯೇ ಶ್ರೀನಿವಾಸಪುರದಲ್ಲಿ ಜನ್ಮಭೂಮಿ
ಸೇವಾ ಟ್ರಸ್ಟ್‍ನಿಂದ 7ನೇ ವರ್ಷದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ತಿಳಿಸಿದರು.
ಆಂಧ್ರಪ್ರದೇಶದ ಸಿಂಹಾಚಲಂ ಶ್ರೀ ವರಾಹಾಲ ಲಕ್ಷ್ಮಿನರಸಿಂಹಸ್ವಾಮಿಯ
ಭವ್ಯಮೆರವಣಿಗೆ ಹಾಗೂ ಕಲ್ಯಾಣೋತ್ಸವ ಪ್ರಯುಕ್ತ ಜೂ.4 ರಿಂದ 9ರವರೆಗೆ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಭಾಗವಹಿಸಿ
ಯಶಸ್ವಿಗೊಳಿಸಿ ಎಂದು ಮಹಿಳಾ ಸಂಘಗಳ ಸದಸ್ಯರನ್ನು ಆಹ್ವಾನಿಸಿದರು.
ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಸ್ವಾಗತಿಸಿ, ಇದೀಗ 186 ಸಂಘಗಳಿಗೆ ಸಾಲ ವಿತರಿಸುತ್ತಿದ್ದು, ಇದರಲ್ಲಿ 165 ಸಂಘಗಳು ಹಳೆಯ ಸಂಘಗಳಾಗಿವೆ, 21 ಹೊಸ ಸಂಘಗಲಿಗೂ ಸಾಲ ನೀಡುತ್ತಿರುವುದಾಗಿ ತಿಳಿಸಿದರು.

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ


ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು.
ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಂಡು ದೀಪ ಬೆಳಗಿಸಿ ಮಾತಾನಾಡಿದರು ‘ಜೀವನದಲ್ಲಿ ಪ್ರಯತ್ನ ಪಡುತ್ತಲೇ ಇರಬೇಕು, ಥೊಮಸ್ ಆಲ್ವಾ ಎಡಿಸನ್ ಹಲವಾರು ಭಾರಿ ಪ್ರಯೋಗಗಳಲ್ಲಿ ಸಫಲನಾಗದಿದ್ದರು, ಛಲದಿಂದ ಪ್ರಯತ್ನ ಪಡುತ್ತಾ ಕೊನೆಗೆ ಯಶಸ್ಸನ್ನು ಪಡೆದು ಜಗತ್ತಿಗೆ ಬೆಳಕು ನೀಡಿದ, ಅವರಂತೆ ನಿಮ್ಮ ಪ್ರಯತ್ನ ಸಾಗಲಿ’ ಎನ್ನುತ್ತಾ ಶುಭ ಅವರು ಕೋರಿದರು

ಮುಖ್ಯ ಅತಿಥಿಗಳಾದ ವೈದ್ಯೆ ರೆನ್ನಿ ವಿಲ್ಸನ್ ‘ಪ್ರಪಂಚದಲ್ಲಿ ಯಶಸ್ಸು ಪಡೆದವರ ಬಗ್ಗೆ ತಿಳಿದುಕೊಂಡರೆ, ಅವರುಗಳು ಕಷ್ಟ ಪಟ್ಟು ಪರಿಶ್ರಮ ಪಟ್ಟು ಯಶಸ್ಸು ಗಳಿಸಿದ್ದಾರೆ, ನೀವು ಎನಾಗಬೇಕೆಂದು ಮೊದಲು ಕನಸು ಕಟ್ಟಿರಿ, ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮ ಪಡಿ. ಆವಾಗ ನಿಮಗೆ ಯಶಸ್ಸು ದೊರಕುತದೆ’ ಎಂದು ನುಡಿದರು. ಕಾಲೇಜಿನ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ‘ಹೊಸದಾಗಿ ಸೆರ್ಪಡೆಗೊಂಡ ವಿದ್ಯಾರ್ಥಿಗಳು, ಕಾಲೇಜಿನ ಶಿಸ್ತನ್ನು ರೂಡಿಸಿಕೊಳ್ಳಬೇಕು, ಹಾಗೆ ಶಿಕ್ಷಡ ಜೊತೆ ಉತ್ತಮ ಸಂಸ್ಕ್ರತಿಯನ್ನು ಗಳಿಸಿಕೊಳ್ಳಬೇಕು’ ಎಂದು ಶುಭ ಹಾರೈಸಿದರು. ಧರ್ಮಾಧ್ಯಕ್ಷರು ಕಾಲೇಜಿನ ಮ್ಯಾಗಝಿನ್ ‘ಬ್ಲೊಸಮ್’ ನ್ನು ಉದ್ಘಾಟನೆ ಮಾಡಿದರು. ದ್ವೀತಿಯ ಪಿ.ಯು.ಸಿ. ಪ್ರಥಮ ಪಿ.ಯು.ಸಿ. ಮತ್ತು ಎಸ್.ಎಸ್..ಎಲ್.ಸಿ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದವರಿಗೆ ಗೌರವಿಸಲಾಯಿತು. ವರ್ಗಾವಣೆಕೊಂಡ ರೋಜರಿ ಚರ್ಚಿನ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
.
ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜಾ, ವಿದ್ಯಾರ್ಥಿಗಳ ಪೆÇೀಷಕರ ಪ್ರತಿನಿಧಿಯಾಗಿ ವೇಲಾ ಬ್ರಗಾಂಜಾ, ದೇವದಾಸ್ ವಿ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಅಸ್ಮಿತಾ ಕೊರೆಯಾ, ಸ್ವಾತಿ, ನಿಶಾ ಸುವಾರಿಸ್ ಮತ್ತು ವಿದ್ಯಾರ್ಥಿನಿ ಮೇಲಿಟಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಮೇಲ್ರಿಯಾ ಕ್ರಾಸ್ತಾ ಧನ್ಯವಾದಗಳನ್ನು ಅರ್ಪಿಸಿದರು.

 

ಕೋಲಾರ: ಅವಧಿ ಮುಗಿದ ನಗರಸಭಾ ಸದಸ್ಯರಿಂದ ಆಡಳಿತಾಧಿಕಾರಿಗಳ ವಿರುದ್ಧ ಧರಣಿ

ಕೋಲಾರ: ಅವಧಿ ಮುಗಿದ ನಗರಸಭಾ ಸದಸ್ಯರಿಂದ ಆಡಳಿತಾಧಿಕಾರಿಗಳ ವಿರುದ್ಧ ಧರಣಿ

ಕೋಲಾರ : ವಾರ್ಡ್ ನಂ.14ರ ಹಾಗೂ ಜಯನಗರ ಪಂಪ್ ಹೌಸ್ ವ್ಯಾಪ್ತಿಗೆ ಬರುವ ಕೊಳವೆ ಬಾವಿಗಳ ಪಂಪು ಮೋಟರ್ ರಿಪೇರಿಯಾಗಿ ಸುಮಾರು ತಿಂಗಳು ಕಳೆದರೂ ಪ್ರತಿನಿತ್ಯ ದೂರು ನೀಡಿ ಹಲವಾರು ಬಾರಿ ವಾರ್ಡಿನ ನಾಗರೀಕರೊಂದಿಗೆ ಪ್ರತಿಭನೆ ಮಾಡಿದರೂ ಇಲ್ಲಿಯವರೆಗೂ ನಿರ್ಧಿಷ್ಠವಾದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವಧಿ ಮುಗಿದ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಆರೋಪಿಸಿದ್ದಾರೆ.
ಕೋಲಾರ ನಗರಸಭೆಯ ಕಛೇರಿಯಲ್ಲಿ ಅವಧಿ ಮುಗಿದ ನಗರಸಭಾ ಸದಸ್ಯರು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಗರಸಭೆಯ ಕೆಲವು ಅಧಿಕಾರಿಗಳು ಹೋರಾಟ ಮಾಡುವ ಸದಸ್ಯರುಗಳ ವಾರ್ಡುಗಳಲ್ಲಿ ಬೇಕೆಂತಲೇ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಗೆಹರಿಸದೆ ಪರೋಕ್ಷವಾಗಿ ನಗರಸಭಾ ಸದಸ್ಯರ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದ್ದಾರೆ. ನಗರಸಭೆಯ ಆಡಳಿತಾಧಿಕಾರಿಗಳ ಅವಧಿಯಲ್ಲಿ ಅಭಿವೃದ್ದಿಗೆ ಒತ್ತು ನೀಡದೆ ಅಕ್ರಮಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವಧಿ ಮುಗಿದ ನಗರಸಭಾ ಸದಸ್ಯ ರವೀಂದ್ರ ರವರು ಮಾತನಾಡಿ ನಮ್ಮ ಅವಧಿ ಮುಗಿದ ನಂತರ ನಮ್ಮ ವಾರ್ಡಿನ ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ನಮ್ಮ ಕರೆ ಸ್ವೀಕರಿಸುತ್ತಿಲ್ಲ ಮತ್ತು ಕಛೇರಿಯಲ್ಲಿಯೂ ನಮಗೆ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ನಮ್ಮನ್ನು ನಿಂಧಿಸುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿಕೊಂಡರು.
ಈ ಸಂದರ್ಭದಲ್ಲಿ ಅವಧಿ ಮುಗಿದ ಸದಸ್ಯರಾದ ಅಪ್ರೋಜ್ ಪಾಷ, ಮಂಜುನಾಥ್ ಹಾಜರಿದ್ದರು.

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ


ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು.
ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಂಡು ದೀಪ ಬೆಳಗಿಸಿ ಮಾತಾನಾಡಿದರು ‘ಜೀವನದಲ್ಲಿ ಪ್ರಯತ್ನ ಪಡುತ್ತಲೇ ಇರಬೇಕು, ಥೊಮಸ್ ಆಲ್ವಾ ಎಡಿಸನ್ ಹಲವಾರು ಭಾರಿ ಪ್ರಯೋಗಗಳಲ್ಲಿ ಸಫಲನಾಗದಿದ್ದರು, ಛಲದಿಂದ ಪ್ರಯತ್ನ ಪಡುತ್ತಾ ಕೊನೆಗೆ ಯಶಸ್ಸನ್ನು ಪಡೆದು ಜಗತ್ತಿಗೆ ಬೆಳಕು ನೀಡಿದ, ಅವರಂತೆ ನಿಮ್ಮ ಪ್ರಯತ್ನ ಸಾಗಲಿ’ ಎನ್ನುತ್ತಾ ಶುಭ ಅವರು ಕೋರಿದರು

ಮುಖ್ಯ ಅತಿಥಿಗಳಾದ ವೈದ್ಯೆ ರೆನ್ನಿ ವಿಲ್ಸನ್ ‘ಪ್ರಪಂಚದಲ್ಲಿ ಯಶಸ್ಸು ಪಡೆದವರ ಬಗ್ಗೆ ತಿಳಿದುಕೊಂಡರೆ, ಅವರುಗಳು ಕಷ್ಟ ಪಟ್ಟು ಪರಿಶ್ರಮ ಪಟ್ಟು ಯಶಸ್ಸು ಗಳಿಸಿದ್ದಾರೆ, ನೀವು ಎನಾಗಬೇಕೆಂದು ಮೊದಲು ಕನಸು ಕಟ್ಟಿರಿ, ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮ ಪಡಿ. ಆವಾಗ ನಿಮಗೆ ಯಶಸ್ಸು ದೊರಕುತದೆ’ ಎಂದು ನುಡಿದರು. ಕಾಲೇಜಿನ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ‘ಹೊಸದಾಗಿ ಸೆರ್ಪಡೆಗೊಂಡ ವಿದ್ಯಾರ್ಥಿಗಳು, ಕಾಲೇಜಿನ ಶಿಸ್ತನ್ನು ರೂಡಿಸಿಕೊಳ್ಳಬೇಕು, ಹಾಗೆ ಶಿಕ್ಷಡ ಜೊತೆ ಉತ್ತಮ ಸಂಸ್ಕ್ರತಿಯನ್ನು ಗಳಿಸಿಕೊಳ್ಳಬೇಕು’ ಎಂದು ಶುಭ ಹಾರೈಸಿದರು. ಧರ್ಮಾಧ್ಯಕ್ಷರು ಕಾಲೇಜಿನ ಮ್ಯಾಗಝಿನ್ ‘ಬ್ಲೊಸಮ್’ ನ್ನು ಉದ್ಘಾಟನೆ ಮಾಡಿದರು. ದ್ವೀತಿಯ ಪಿ.ಯು.ಸಿ. ಪ್ರಥಮ ಪಿ.ಯು.ಸಿ. ಮತ್ತು ಎಸ್.ಎಸ್..ಎಲ್.ಸಿ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದವರಿಗೆ ಗೌರವಿಸಲಾಯಿತು. ವರ್ಗಾವಣೆಕೊಂಡ ರೋಜರಿ ಚರ್ಚಿನ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
.
ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜಾ, ವಿದ್ಯಾರ್ಥಿಗಳ ಪೋಷಕರ ಪ್ರತಿನಿಧಿಯಾಗಿ ವೇಲಾ ಬ್ರಗಾಂಜಾ, ದೇವದಾಸ್ ವಿ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಅಸ್ಮಿತಾ ಕೊರೆಯಾ, ಸ್ವಾತಿ, ನಿಶಾ ಸುವಾರಿಸ್ ಮತ್ತು ವಿದ್ಯಾರ್ಥಿನಿ ಮೇಲಿಟಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಮೇಲ್ರಿಯಾ ಕ್ರಾಸ್ತಾ ಧನ್ಯವಾದಗಳನ್ನು ಅರ್ಪಿಸಿದರು.

 

ಅರ್ಕ ಶಾಲೆಯಲ್ಲಿ ಮಾನಸಿಕ ಆರೋಗ್ಯ, ಸಂವಹನ ಕಾರ್ಯಾಗಾರ : ಕಲಿಕೆಗೆ ಮನೋವಿಜ್ಞಾನವು ಪೂರಕ-ಡಾ.ಸುಬ್ರಹ್ಮಣ್ಯಂ ಅಭಿಮತ

ವರದಿ:ಶಬ್ಬೀರ್ ಅಹ್ಮದ್ 

ಅರ್ಕ ಶಾಲೆಯಲ್ಲಿ ಮಾನಸಿಕ ಆರೋಗ್ಯ, ಸಂವಹನ ಕಾರ್ಯಾಗಾರ : ಕಲಿಕೆಗೆ ಮನೋವಿಜ್ಞಾನವು ಪೂರಕ-ಡಾ.ಸುಬ್ರಹ್ಮಣ್ಯಂ ಅಭಿಮತ

ಕೋಲಾರ:- ಮಕ್ಕಳ ಮನಸ್ಸಿನ ಭಾವನೆಗೆ ಘಾಸಿಗೊಳಿಸದೆ ಪೋಷಣೆ ಮಾಡಿದಲ್ಲಿ ಸಕಾರಾತ್ಮಕ ವ್ಯಕ್ತಿತ್ವ ರೂಪಗೊಂಡು ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಮನೋವೈದ್ಯ ಡಾ|| ಎಸ್. ಸುಬ್ರಹ್ಮಣ್ಯ ತಿಳಿಸಿದರು.
ಶನಿವಾರ ತಾಲ್ಲೂಕಿನ ಮಡೇರಹಳ್ಳಿಯ ಅರ್ಕ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸಂವಹನೆ ಕುರಿತಾಗಿ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಪೋಷಕರು ಬಾಲ್ಯದಿಂದಲೇ ಮಗುವಿನ ಗುಣಗಳನ್ನು ಗಮನಿಸುತ್ತಾ ಅವಶ್ಯವಿದ್ದಲ್ಲಿ ಸೂಕ್ತ ರೀತಿಯ ತಿದ್ದುಪಡಿ ನೀಡಿ ಭಾವನಾತ್ಮಕವಾದ ಸಂಬಂಧಗಳನ್ನು ಕಲ್ಪಿಸಿಕೊಟ್ಟರೆ ಮುಂದೆ ತನ್ನ ಮತ್ತು ಇತರರ ಬಗ್ಗೆ ಕಾಳಜಿಯ ಅರಿವು ಮಗುವಿಗಾಗುತ್ತದೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಮತ್ತು ಅಂತಹ ಮಕ್ಕಳನ್ನು ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದಲ್ಲಿ ಮಕ್ಕಳು ಕಲಿಕೆಗೆ ಆಸಕ್ತಿತೋರುತ್ತಾರೆಂದರು.
ಯಾವುದೇ ಮಗು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅವರನ್ನು ಕೀಳಾಗಿ,ಅಸಹನೆಯಿಂದ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು, ಇತರೆ ಮಕ್ಕಳಿಗೆ ಅವರನ್ನು ಹೋಲಿಸಿ ಹೀಗಳೆಯುವುದು ಸಹಾ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಮಕ್ಕಳು ನಲಿಯುತ ಕಲಿಯುವ ವಾತಾವರಣ ಸೃಷ್ಟಿಸುವ ಮೂಲಕ ಶಿಕ್ಷಕರೆಂದರೆ ಅವರಿಗೆ ಭಯ ಇರಬಾರದು, ಪ್ರೀತಿ,ಗೌರವವಿದ್ದರೆ ಬೇಗ ಕಲಿಕೆಯಲ್ಲಿ ಪ್ರಗತಿ ಕಾಣಬಹುದು ಎಂದರು.
ವಿವಿಧ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಮನೋವಿಜ್ಞಾನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟ ಅವರು, ಪ್ರತಿ ಹಂತದಲ್ಲೂ ಮಕ್ಕಳ ಮೇಲೆ ಶಿಕ್ಷಕರು ಸಕಾರಾತ್ಮಕ ಪರಿಣಾಮ ಬೀರುವಂತೆ ಕೆಲಸ ಮಾಡಬೇಕೆಂದರು.
ಕಾರ್ಯಾಗಾರದಲ್ಲಿ ಶಾಲೆಯ ಅಧ್ಯಕ್ಷ ಡಾ|| ಆರ್. ವೇಣುಗೋಪಾಲ್, ತಂತ್ರಜ್ಞ ಸಂತೋಷ್, ಪ್ರಾಂಶುಪಾಲ ಪ್ರೀತಿರೋಜ್ಲನ್, ಆಡಳಿತಾಧಿಕಾರಿ ಜೆ. ಎನ್. ರಾಮಕೃಷ್ಣ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.

ಕೆ.ಸಿ. ವ್ಯಾಲಿ ನೀರು ಅಂತರ್ಜಲ ವೃದ್ಧಿಗಾಗಿ ಮಾತ್ರ: ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ -ಶ್ರೀ ಕೃಷ್ಣ ಬೈರೇಗೌಡ

ವರದಿ:ಶಬ್ಬೀರ್ ಅಹ್ಮದ್
ಕೆ.ಸಿ. ವ್ಯಾಲಿ ನೀರು ಅಂತರ್ಜಲ ವೃದ್ಧಿಗಾಗಿ ಮಾತ್ರ: ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ -ಶ್ರೀ ಕೃಷ್ಣ ಬೈರೇಗೌಡ
ಕೋಲಾರ: ಜೂನ್ 01 ಕೆ.ಸಿವ್ಯಾಲಿಯ ಸಂಸ್ಕರಿಸಿದ ನೀರು ಜಿಲ್ಲೆಯ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮಾತ್ರ ಉದ್ದೇಶಿಸಿದ್ದು,  ಸಾರ್ವಜನಿಕರು ಇದನ್ನು ನೇರವಾಗಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು  ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ಎಚ್ಚರಿಸಿದರು. 
 ಇಂದು ಜಿಲ್ಲೆಯ ವಿಶ್ವನಗರ, ಪರ್ಜೇನಹಳ್ಳಿ ಹಾಗೂ ಹೊಲೇರಹಳ್ಳಿಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಹಾಗೂ ಕೆ.ಸಿ ವ್ಯಾಲಿ ನೀರಿನ ಹರಿವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು. 
 ಕೆ.ಸಿ ವ್ಯಾಲಿ ನೀರಿನ ಅನ್ಯ ಬಳಕೆ ತಡೆಯಲು ಜಾಗೃತ ದಳ ರಚನೆ: ಕೆ.ಸಿ ವ್ಯಾಲಿ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಮುಂಜಾಗ್ರತೆ ವಹಿಸಲು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಅಧಿಕಾರಿಗಳ ಜಾಗೃತ ದಳವನ್ನು ರಚಿಸಲಾಗುವುದು. ಕೆ ಸಿ ವ್ಯಾಲಿ ನೀರನ್ನು ಕೃಷಿ ಹಾಗೂ ಇತರೆ ಉದ್ದೇಶಗಳಿಗೆ ಸಾರ್ವಜನಿಕರು ನೇರವಾಗಿ ಬಳಕೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದ ಅವರು, ಸಾರ್ವಜನಿಕರು ಅಂತಹ ಸಂದರ್ಭಗಳಿಗೆ ಎಡೆಮಾಡಿಕೊಡಬಾರದು ಎಂದು ಮನವಿ ಮಾಡಿದರು. 
 ನರಸಾಪುರ ಗ್ರಾಮದಿಂದ ಕೊಳಚೆ ನೀರು ಕೆರೆಗೆ ಬಂದು ಸೇರುತ್ತಿದ್ದು, ಇದರಿಂದ ನೀರು ಕಲುಷಿತವಾಗುತ್ತಿದೆ ಇದರ ಪ್ರಭಾವ ಕೆ.ಸಿ ವ್ಯಾಲಿಯ ನೀರಿನ ಗುಣಮಟ್ಟ ಸರಿಯಿಲ್ಲ ಎಂದು ತಪ್ಪು ಮಾಹಿತಿ ಹಬ್ಬಿಸುವ ಸಂದರ್ಭ ಉದ್ಭವವಾಗುತ್ತಿದೆ. ಆದ್ದರಿಂದ ಕೂಡಲೇ ನರಸಾಪುರ ಗ್ರಾಮ ಪಂಚಾಯಿತಿಯ ಕೆರೆಯ ಹೊರವಲಯದಲ್ಲಿ ಕಾಲುವೆ ನಿರ್ಮಿಸಿ ಕೊಳಚೆ ನೀರನ್ನು ಬೇರೆ ಕಡೆ ಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
 ಹಂತ ಹಂತವಾಗಿ ನೀರಿನ ಪ್ರಮಾಣ ಹೆಚ್ಚಳ: ಕೆ.ಸಿ ವ್ಯಾಲಿ ನೀರು ಪ್ರಾರಂಭದಲ್ಲಿ ಜಿಲ್ಲೆಗೆ ಹರಿಯುವಾಗ ಪ್ರತಿದಿನ 100 ಎಂ.ಎಲ್.ಡಿ ಹರಿಸಲಾಗುತ್ತಿತ್ತು. ಪ್ರಸ್ತುತ 250 ಎಂ.ಎಲ್.ಡಿ ನೀರನ್ನು ಹರಿಸುತ್ತಿದ್ದು, ಇದನ್ನು ಜೂನ್ 10 ರ ವೇಳೆಗೆ 290 ಎಂ.ಎಲ್.ಡಿ ಹಾಗೂ ಜೂನ್ ಅಂತ್ಯಕ್ಕೆ 330 ಎಂಎಲ್‍ಡಿ ಅಷ್ಟು ಹೆಚ್ಚು ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. 
 2ನೇ ಹಂತದ ಕಾಮಗಾರಿ: ಕೆ.ಸಿ ವ್ಯಾಲಿಯ ಮೊದಲನೆ ಹಂತದ ಕಾಮಗಾರಿಯಲ್ಲಿ 136 ಕೆರೆಗಳನ್ನು ಡಿಸೆಂಬರ್ ಅಂತ್ಯದ ವೇಳೆಗೆ ತುಂಬಿಸಲಾಗುವುದು. ಇದಲ್ಲದೆ 2 ನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, 450 ಕೋಟಿ ವೆಚ್ಚದಲ್ಲಿ 230 ಕೆರೆಗಳಿಗೆ ನೀರನ್ನು ಪಂಪ್ ಮಾಡುವ ಮೂಲಕ ತುಂಬಿಸಲಾಗುವುದು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಟೆಂಡರ್ ಕರೆಯಲಾಗಿದೆ ಎಂದರು. 
ಮೀನುಗಾರಿಕೆಗೆ ಉತ್ತೇಜನ: ಕೆ.ಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬಲಿದ್ದು, ಸಣ್ಣ ನೀರಾವರಿ ಇಲಾಖೆಯ  ಕೆರೆಗಳಿಗೆ ಮೀನುಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೀನು ಮರಿಗಳನ್ನು ಬಿಟ್ಟು ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಪ್ರತಿ ಕೆರೆಯಿಂದ ಕನಿಷ್ಠ 10 ಕುಟುಂಬಗಳು ಜೀವನ ನಿರ್ವಹಣೆ ಮಾಡಬಹುದಲ್ಲದೆ ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಕೆರೆಯಲ್ಲಿ ಮೀನುಗಳು ಇರುವುದರಿಂದ ನೀರು ಸಹ ಶುದ್ಧವಾಗಿಯೂ ಇರುತ್ತದೆ ಎಂದು ತಿಳಿಸಿದರು. 
ಪಾರ್ಕ್‍ಗಳ ನಿರ್ಮಾಣ: ನರಸಾಪುರ ಮತ್ತು ಕೋಲಾರದ ಅಮಾನೀಕೆರೆ ಸುತ್ತ ವಾಕಿಂಗ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇದರಿಂದ ಇವು ಪ್ರೇಕ್ಷಣೀಯ ಸ್ಥಳಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪಾರ್ಕ್‍ಗಳಲ್ಲಿ ಸಿ.ಎಸ್.ಆರ್ ಅನುದಾನ ಅಥವಾ ನರೇಗಾ ಯೋಜನೆಯಲ್ಲಿ ನಿರ್ಮಿಸುವಂತೆ ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 
ಬೆಳೆ ಹಾನಿಗೆ 3.27 ಕೋಟಿ ಬಿಡುಗಡೆ:  ಜಿಲ್ಲೆಯಲ್ಲಿ ಮಳೆಯಿಂದ 1800 ರೈತರ ತೋಟಗಾರಿಕೆ ಬೆಳೆಗಳು ಹಾನಿಯುಂಟಾಗಿದ್ದು, ಈ ಸಂಬಂಧ ಪರಿಹಾರ ವಿತರಿಸಲು ಈಗಾಗಲೇ 3.27 ಕೋಟಿ ಬಿಡುಗಡೆಯಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು, ತಾಶೀಲ್ದಾರರುಗಳಿಗೆ ಬಿಡುಗಡೆ ಮಾಡಿದ್ದು, ಒಂದು ವಾರದೊಳಗೆ ಫಲಾನುಭವಿಗಳಿಗೆ ಹಣವನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. 
ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಗಾಳಿ ಮತ್ತು ಮಿಂಚು ಜಾಸ್ತಿಯಿದೆ. ಏಪ್ರಿಲ್ 18 ರಿಂದ ಏಪ್ರಿಲ್ 24 ರವರೆಗೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು, ಟ್ಯಾಂಕರ್ ಸೇವೆಯ ಬಿಲ್ಲುಗಳನ್ನು ಮೇ 15 ರವರೆಗೆ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಒಣಮೇವನ್ನು ತರಿಸಿ ಹೊಗಳಗೆರೆಯಲ್ಲಿ ಶೇಖರಿಸಿ ಈಗಾಗಲೇ ರೈತರುಗಳಿಗೆ ವಿತರಣೆ ಮಾಡಲಾಗಿದೆ ಎಂದರು. 
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ಆರ್ಥಿಕ ವರ್ಷದ ಅಂತ್ಯಕ್ಕೆ 1400 ಚೆಕ್‍ಡ್ಯಾಂಗಳನ್ನು ನಿರ್ಮಿಸುವ ಗುರಿಹೊಂದಿದ್ದು, ಈಗಾಗಲೇ 300 ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪ್ರತಿ 01 ಕಿ.ಮೀ. ವ್ಯಾಪ್ತಿಗೆ 01 ಚೆಕ್‍ಡ್ಯಾಂ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವುದಲ್ಲದೆ ಬರಗಾಲದಲ್ಲಿ ನೀರು ಬಳಕೆಗೆ ಲಭ್ಯವಾಗುತ್ತದೆ ಎಂದರು. 
ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ರಾಮಕೃಷ್ಣ ಅವರು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ 2500 ಕ್ಕೂ ಹೆಚ್ಚು ಕೆರೆಗಳಿದ್ದು, 40 ಹೆಕ್ಟೇರಿಗಿಂತ ಹೆಚ್ಚಿನ ವಿಸ್ತೀರ್ಣವಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಅದಕ್ಕಿಂತ ಕಡಿಮೆ ವಿಸ್ತೀರ್ಣವಿರುವ ಕೆರೆಗಳನ್ನು ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುತ್ತವೆ.  ಬೇತಮಂಗಲ ಮತ್ತು ಮಾರ್ಕಂಡೇಯ ಡ್ಯಾಂಬಳಿ ಮೀನುಮರಿ ಸಾಕಾಣಿಕೆ ಕೇಂದ್ರಗಳಿದ್ದು, ಈ 2 ಕೇಂದ್ರಗಳಿಂದ ಮೀನುಮರಿ ಉತ್ಪಾದಿಸಿ ಟೆಂಡರ್ ಮೂಲಕ ಮಾರಾಟ ಮಾಡಲಾಗುವುದು. ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ಹರಾಜು ಮೂಲಕ ಟೆಂಡರ್ ನೀಡಲಾಗುವುದು. ಗ್ರಾಮ ಪಂಚಾಯಿತಿ ಕೆರೆಗಳಿಗೆ ಗ್ರಾಮ ಪಂಚಾಯತ್‍ಗಳೆ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರೇ ಅವುಗಳ ಉಸ್ತುವಾರಿ ನೋಡಿಕೊಳ್ಳುವರು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|| ರೋಹಿಣಿ ಕಟೋಚ್ ಸಫೆಟ್, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.