HOLY ROSARY CHURCH, KUNDAPUR – 450 th JUBILEE SOUVENIR 2021

ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ವನಮಹೋತ್ವವ – ಹುಟ್ಟುಹಬ್ಬದ ಸವಿನೆನಪಿಗಾಗಿ ಗೀಡಗಳನ್ನು ನೆಡೆಯಿರಿ- ರೇಂಜರ್ ಪ್ರಭಾಕರ್ ಕುಲಾಲ್

JANANUDI NETWORK

ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ವನಮಹೋತ್ವವ – ಹುಟ್ಟುಹಬ್ಬದ ಸವಿನೆನಪಿಗಾಗಿ ಗೀಡಗಳನ್ನು ನೆಡೆಯಿರಿ- ರೇಂಜರ್ ಪ್ರಭಾಕರ್ ಕುಲಾಲ್

ಕುಂದಾಪುರ. ಜು. 30 :  ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ದಿನಾಂಕ 30 ರಂದು ಕುಂದಾಪುರ ಅರಣ್ಯ ಇಲಾಖೆಯ ಆಶ್ರಯದಲ್ಲಿ ವನಮಹೋತ್ಸವ  ಕಾರ್ಯಕ್ರಮ ನಡೆಯಿತು. ಕುಂದಾಪುರ ಅರಣ್ಯ ಇಲಾಖೆಯ ರೆಂಜರ್ ಆಫಿಸರ್ ಆಗಿರುವ ಪ್ರಭಾಕರ್ ಕುಲಾಲ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ 150ಕ್ಕೂ ಅಧಿಕ ಸಸ್ಯಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಸಸ್ಯಗಳನ್ನು ನೆಡುವ ಹಾಗೂ ಹೇಗೆ ಆರೈಕೆ ಮಾಡುವುದು ಎಂಬುವುದರ ಅರಿವನ್ನು ಮೂಡಿಸುತ್ತಾ ’ಹುಟ್ಟುಹಬ್ಬಕ್ಕೆ ಅನಗತ್ಯ ಖರ್ಚು ಮಾಡುವುದಕ್ಕಿಂತ ಹುಟ್ಟುಹಬ್ಬದ ಸವಿನೆನಪಿಗಾಗಿ ಒಂದೋಂದು ಗಿಡಗಳನ್ನು ನೆಟ್ಟು ಆರೈಕೆ ಮಾಡಿದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೆಂದು ತಿಳಿಸಿ’ ಸ್ಥಳಲ್ಲೆ ವಿದ್ಯಾರ್ಥಿಗಳಿಗೆ 15 ಮರಗಳ ಹೆಸರುಗಳನ್ನು ಕೇಳಿ ಹೆಚ್ಚು ಮರಗಳ ಹೆಸರುಗಳನ್ನು ಹೇಳಿದ ವಿದ್ಯಾಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೇರೆಜ್ ಶಾಂತಿರವರು ವಹಿಸಿದ್ದರು.

      ವಿಧ್ಯಾರ್ಥಿಗಳು ವನಮಹೋತ್ಸವದ ಮಹತ್ವವನ್ನು ಕಿರುನಾಟಕ ಹಾಗೂ ಹಾಡಿನ  ಮೂಲಕ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ವೆನೀಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹರ್ಷಲ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಲ್ವಿಟಾ ವಂದಿಸಿದರು.

 

 

ಕೊಂಕಣ್ ಕರಾವಳೆಂತ್ ಕೊಂಕ್ಣಿ ಸಿನೆಮಾಚಿ ಪಯ್ಲಿ ಸ್ತ್ರೀ ನಿರ್ಮಾಪಕಿ ಜಾನೆಟ್‌ ನೊರೊನ್ಹಾ ಥಾವ್ನ್ ದುಸ್ರೆಂ ಪಿಂತುರ್  ಕಂತಾರ್    ಆಗೋಸ್ತ್ 9 ತಾರಿಕೆರ್ ಪ್ರದರ್ಶನ್ ಆರಂಭ್

JANANUDI NETWORK

ಕೊಂಕಣ್ ಕರಾವಳೆಂತ್ ಕೊಂಕ್ಣಿ ಸಿನೆಮಾಚಿ ಪಯ್ಲಿ ಸ್ತ್ರೀ ನಿರ್ಮಾಪಕಿ ಜಾನೆಟ್‌ ನೊರೊನ್ಹಾ ಥಾವ್ನ್ ದುಸ್ರೆಂ ಪಿಂತುರ್  ಕಂತಾರ್    ಆಗೋಸ್ತ್ 9 ತಾರಿಕೆರ್ ಪ್ರದರ್ಶನ್ ಆರಂಭ್

ಕೊಂಕಣ್ ಕರಾವಳೆಂತ್ ಕೊಂಕ್ಣಿ ಸಿನೆಮಾಚಿ ಪಯ್ಲಿ ಸ್ತ್ರೀ ನಿರ್ಮಾಪಕಿ ಮ್ಹಳ್ಳಿ ಕೀರ್ತ್ ಆಪ್ಣಾಯಿಲ್ಲ್ಯಾ ಜಾನೆಟ್‌ ನೊರೊನ್ಹಾನ್, ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಬ್ಯಾನರಾಖಾಲ್, ಪಯ್ಲೆಂ ಕೊಂಕ್ಣಿ ಪಿಂತುರ್ ಸೊಫಿಯಾ ಉಪ್ರಾಂತ್ ಕಂತಾರ್ ಮ್ಹಳ್ಳೆಂ ದುಸ್ರೆಂ ಸಿನೆಮಾ ನಿರ್ಮಾಣ್ ಕೆಲಾಂ ಆಸುನ್, ಹೆಂ ಸಿನೆಮಾ ಕರಾವಳ್ ಕರ್ನಾಟಕಾಂತ್ ಆಗೋಸ್ತ್ 9 ತಾರಿಕೆರ್ ಪ್ರದರ್ಶನಾಕ್ ಆಯ್ತೆಂ ಜಾಲಾಂ. ಮಂಗ್ಳುರಾಂತ್ ಭಾರತ್ ಮೊಲಾಚ್ಯಾ ಬಿಗ್ ಸಿನೆಮಾಂತ್ ತಶೆಂ ಸಿಟಿ ಸೆಂಟರಾಚ್ಯಾ ಸಿನೆಪೊಲಿಸಾಂತ್, ಉಡುಪಿ – ಮಣಿಪಾಲಾಂತ್ ಐ ನೊಕ್ಸಾಂತ್ ಕಂತಾರ್ ಪಿಂತುರಾಚಿಂ ಪ್ರದರ್ಶನಾಂ ಚಲ್ತೆಲಿಂ ಮ್ಹಣ್ ನಿರ್ಮಾಪಕಿನ್ ಕಳಯ್ಲಾಂ.

“ಕಂತಾರ್ ಪಿಂತುರಾಚಿ ಕಾಣಿ ಏಕ್ ಸಂಗೀತಾಚೊ ಪ್ರವಾಸ್ ವಾ ಎಕಾ ತರ್ನಾಟ್ಯಾ ಚಲಿಯೆನ್ ಜಿವಿತಾಂತ್ ನೆಣ್ತ್ಯಾಪಣಾಥಾವ್ನ್ ಜಾಣ್ತಿಕಾಯೆಕ್ ಕರ್ಚಿ ಉತ್ರೊಣ್ ಮ್ಹಣ್ಯೆತ್. ತರ್ನಿ ಚಲಿ ಆಂಜೆಲಿಕಾನ್, ಆದ್ಲ್ಯಾ ರಿತಿ ರಿವಾಜಿಂನಿ ವಾಡೊನ್ ಉತರ್ ಪ್ರಾಯೆಕ್ ಪಾವ್‌ಲ್ಲ್ಯಾ ಜಾಣ್ತ್ಯಾ ಜೊರ್ಡಾನ್ ಥಾವ್ನ್ ಜಿವಿತಾಚಿಂ ಸತಾಂ ಜಾಣಾ ಜಾಂವ್ಚಿಚ್ ಕಂತಾರ್ ಪಿಂತುರಾಚಿ ಕಾಣಿ ” ಮ್ಹಣ್ತಾ ನಿರ್ಮಾಪಕಿ ಶ್ರೀಮತಿ ಜಾನೆಟ್ ನೊರೊನ್ಹಾ.

“ಜೊರ್ಡಾನ್, ಜಿವಿತ್ ಮ್ಹಳ್ಯಾರ್ ಕಿತೆಂ ತೆಂ ಬರ‍್ಯಾನ್ ಜಾಣಾ. ಜಿವಿತ್ ಕಶೆಂ ಸೊಭವ್ಯೆತ್ ಮ್ಹಳ್ಳೆಂಯ್ ತೊ ಜಾಣಾ. ಭರ್ವಸೊ, ಆಪೇಕ್ಷಾ ಯಾ ಆಶಾ ಮನ್ಶಾಕ್ ಬೋವ್ ಗರ್ಜ್. ಭರ್ವಸೊ ಕೆದಾಳಾಯ್ ಸಾಂಡಿನಾಯೆ. ಜಿಣ್ಯೆಂತ್ ಆಪೇಕ್ಷಾ ಆಸೊಂಕ್‌ಚ್ ಜಾಯ್ ಆನಿ ಆಶಾ ಕರುಂಕ್‌ಚ್ ಫಾವೊ ಮ್ಹಳ್ಳೊ ತಾಚೊ ಅನ್ಭೊಗ್ ಆನಿ ಹ್ಯಾ ಸಂಸಾರಾಂತ್ ಖಂಚೆಂಯ್ ಖಾಯಾಮ್ ನಯ್. ಹಾಂಗಾ ಕೊಣೀ ಶಾಸ್ವಿತ್ ನಯ್, ಮನಿಸ್‌ಯೀ ಶಾಸ್ವಿತ್ ನಯ್ ಮ್ಹಳ್ಳೆಂ ‘ಸತ್’ ಸರ್ವ್ ಜಾಣಾ ಆಸ್ಲ್ಯಾರೀ, ಆಜ್ ಮನಿಸ್ ಜಿಯೆತಾ ತೆಂ ಜೀವನ್ ಕಟೀಣ್ ಒತ್ತಡಾನ್ ಭರ್ಲೆಲೆಂ, ಸದಾಂಚ್ ವ್ಯಸ್ತ್ ಆನಿ ವಿರಾರಾಯೆನ್ ಭರ್‌ಲ್ಲೆಂ ಆಸಾ ತಿ ವಾಸ್ತವಿಕತಾ ಪಿಂತುರಾಂತ್ ದಾಕಂವ್ಚೆಂ ಪ್ರೇತನ್ ಕೆಲಾಂ. ಅಸಲ್ಯಾ ಸಂಕೀರ್ಣ್ ಸಂದರ್ಭಾಂನಿ ಭೊಂವ್ತಣಿ ಆನಿ ಕುಟ್ಮಾ ಭಿತರ್ ಘಡ್ಚಿಂ ಸೂಕ್ಶ್ಮ್ ಘಡಿತಾಂ ಮನ್ಶಾಕ್ ಏಕ್ ವೊಜೆಂ ಕಶೆಂ ಜಾತಾತ್ ಆನಿ ಹ್ಯಾ ವೊಜ್ಯಾನಿಮ್ತಿಂ ಲ್ಹಾನ್ ಲ್ಹಾನ್ ಸಮಸ್ಯೆಯ್ ಕಶೆಂ ಬೋವ್ ವ್ಹಡ್ ದಿಸ್ತಾತ್ ಮ್ಹಳ್ಳೆಂ ಸಾಂಗ್ಚೆಂ ಪ್ರೇತನ್ ಕೆಲಾಂ. ಕಾಮ್, ಒತ್ತಡ್, ಸಮಸ್ಯೆ ಆನಿ ಭರ್ವಸೊ ಹ್ಯಾ ಸನ್ನಿವೇಶಾಂನಿ ಕಂತಾರ್ ಪಿಂತುರ್ ಬಾಂದುನ್ ಹಾಡ್ಲಾಂ. ಸಾಂಗಾತಾ ಹ್ಯಾ ಸಿನೆಮಾಂತ್ ಮನ್ಶಾ ಜೀವನಾಕ್ ಉಪ್ಕಾರಾಕ್ ಪಡ್ಚಿಂ ಸತಾಂ ಉಕಲ್ನ್ ದಾಖಯ್ಲ್ಯಾಂತ್ ” ಮ್ಹಣ್ತಾ ನಿರ್ಮಾಪಕಿ, ಶ್ರೀಮತಿ ಜಾನೆಟ್ ನೊರೊನ್ಹಾ, ಕಂತಾರ್ ಪಿಂತುರಾ ವಿಶಿಂ ಉಲವ್ನ್.

ಕಂತಾರ್ ಸಿನೆಮಾಂತ್ ಮುಕೆಲ್ ಕಲಾಕಾರ್ ಜಾವ್ನ್ ಎಸ್ತೆರ್ ನೊರೊನ್ಹಾ, ಜ್ಯಾಕಿ ಶ್ರೋಫ್ ಆನಿ ನೊಯೆಲ್ ಶೋನ್ ತಶೆಂ ಗೊಂಯ್ಚಿ ಫಾಮಾದ್ ಗಾವ್ಪಿಣ್ ಲೊರ್ನಾ ಆನಿ ಹೆರಾಂನಿ ನಟನ್ ಕೆಲಾಂ. ಶ್ರೀ ನಿಲೇಶ್ ಮಲ್ಕಾರ್ ಹಾಣೆ ಬರವ್ನ್, ನಿರ್ದೇಶನ್ ದಿಲ್ಲ್ಯಾ ಕಂತಾರ್ ಸಿನೆಮಾಚಿಂ ಪ್ರಸ್ತುತ್ ಗೊಯಾಂತ್ ಯಶಸ್ವಿ ಪ್ರದರ್ಶನಾಂ ಚಲ್ತೇ ಆಸಾತ್. ತೊಮಾಝಿನೊ ಕಾರ್ಡೋಜಾನ್ ಬರಯಿಲ್ಲ್ಯಾ ಗಿತಾಂಕ್ ಆದಿತ್ಯ ಭರ್ವೆನ್ ಕಂತಾರ್ ಪಿಂತುರಾಂತ್ ಸಂಗೀತ್ ದಿಲಾಂ.

ಕಂತಾರ್ ಸಿನೆಮಾಚಿಂ ಪ್ರದರ್ಶನಾಂ ಎದೊಳ್‌ಚ್ ಕೆನಾಡಾ, ವಾಂಕೋವರ್, ಮಾಂಟ್ರಿಯಲ್, ಅಮೆರಿಕಾ, ಇಂಗ್ಲೆಂಡ್ ಆನಿ ಆಸ್ಟ್ರ‍ೇಲಿಯಾ ತಸಲ್ಯಾ ದೆಶಾಂನಿ ಅಮಾನತ್ ಜಾಲ್ಯಾಂತ್ ಆಸುನ್, ಮಂಗ್ಳುರ್, ಉಡುಪಿ ಪ್ರದರ್ಶನಾಂ ಉಪ್ರಾಂತ್ ಕಂತಾರ್, ಮುಂಬಯ್, ಪೂನಾ ಆನಿ ಬೆಂಗ್ಳುರ್ಚ್ಯಾ ಸಿನೆಮಾಘರಾಂನಿ  ಪ್ರದರ್ಶನಾಕ್ ಪಡ್ತಲೆಂ.

ಕೊಂಕ್ಣಿ ಫಿಲ್ಮಿ ಶೆತಾಂತ್ ಕಂತಾರ್ ಸಬಾರ್ ಕಾಳ್ ಉಗ್ಡಾಸಾಂತ್ ಉರ್ಚೆಂ ತಸಲೆಂ ಸಿನೆಮಾ ಜಾಂವ್ ಮ್ಹಣ್ ಆಮ್ಚೀಯ್ ಆಶಾ.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಬೀದಿ ಫಲಕ

JANANUDI NETWORK

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಬೀದಿ ಫಲಕ


ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಬೀದಿ ಫಲಕಗಳ ಅನಾವರಣ ಮಾಡಲಾಯಿತು. ಫಲಕಗಳಲ್ಲಿ ಸ್ವಚ್ಛ ಪರಿಸರದಿಂದ ಆರೋಗ್ಯ ನಿರ್ಮಾಣ, ಗ್ರಾಮದ ಸ್ವಚ್ಛತೆಯಿಂದ ದೇಶದ ಸ್ವಚ್ಛತೆ, ಗಿಡವನ್ನು ನೆಡೋಣ-ಮರವಾಗಿ ಬೆಳೆಸೋಣ ಪರಸರ ಮಾಲಿನ್ಯವನ್ನು ತಡೆಯೋಣ, ನೆಲ-ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಂತರ್ಜಲ ಅಭಿವೃದ್ಧಿ ಪಡಿಸೋಣ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಅರೋಗ್ಯ, ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಮುಂತಾದ ಸ್ವಚ್ಛತಾ ಸಂದೇಶ ಸಾರುವ ಬೀದಿ ಫಲಕವನ್ನು ಅಬ್ಬನಡ್ಕ-ಕುಂಟಲಗುಂಡಿ ರಸ್ತೆ ಬಳಿ ಆಳವಡಿಸಲಾಯಿತು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್,
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಬಾಲಕೃಷ್ಣ ಮಡಿವಾಳ, ವಿಧಿನ್ ಶೆಟ್ಟಿ ಮೊದಲಾದವರಿದ್ದರು.

ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿ ಅಭಿಯಾನ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಳೆಕೊಯ್ಲು ಪದ್ಧತಿ ಅನುಷ್ಠಾನ

ವರದಿ: ವಾಲ್ಟರ್ ಮೊಂತೇರೊ

ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿ ಅಭಿಯಾನ
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಳೆಕೊಯ್ಲು ಪದ್ಧತಿ ಅನುಷ್ಠಾನ

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಮಳೆಕೊಯ್ಲು ಪದ್ಧತಿಯನ್ನು ಅನುಷ್ಠಾನಗೊಳಿಸಲಾಯಿತು.
ಮನೆಯ ತಾರಸಿನಿಂದ ಬಿದ್ದ ಹಾಗೂ ಮನೆಯ ಕಂಪೌಂಡ್ ಸುತ್ತ ಹರಿವ ನೀರನ್ನು ಒಂದಡೆ ಸೇರಿಸಿ ಸುಮಾರು ಏಳು ಅಡಿ ಹೊಂಡಕ್ಕೆ ಸುತ್ತ ಪಾದೆ ಕಲ್ಲು ಕಟ್ಟಿ ಅದಕ್ಕೆ ಇದ್ದಿಲು, ಮೂರು ವಿಧದ ಜಲ್ಲಿ ಕಲ್ಲು ಹಾಗೂ ಮರಳು ಹಾಕಲಾಗಿದ್ದು ಈ ಮೂಲಕ ನೆಲದೊಳಗೆ ನೀರನ್ನು ಸೇರಿಸುವ ಮೂಲಕ ಅಂತರ್ಜಲ ಅಭಿವೃದ್ದಿ ಅಭಿಯಾನ ನಡೆಸಲಾಯಿತು. ಈ ಪದ್ಧತಿಯ ವಿಧಾನದಲ್ಲಿ ಅಂತರ್ಜಲ ಹಾಗೂ ನೀರಿನ ಕೊರತೆಯನ್ನು ನೀಗಿಸಬಹುದು ಎಂಬುವುದನ್ನು ನೆರೆದವರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಸರಿತಾ ವಾಸು ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ವ ವಿಠಲ ಮೂಲ್ಯ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ, ಸುನೀತಾ ಪಿಂಟೋ ಮೊದಲಾದವರಿದ್ದರು.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ


ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದ ಮೂಲಕ 20ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರ ಸ್ಮರಣಾರ್ಥ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬಳಿ ಶುಕ್ರವಾರ ಗಿಡ ನೆಟ್ಟು ಸೈನಿಕರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಗಿಡ ನೆಟ್ಟು ಮಾತನಾಡಿದವರು ಪ್ರತಿಯೊಂದು ಕೆಲಸ ಕಾರ್ಯ, ಸಾಧನೆ, ಗೆಲುವಿನ ಹಿಂದೆ ಬಹಳಷ್ಟು ಜನರ ಬಲಿದಾನವಿದೆ. 1999ರಲ್ಲಿ ಪಾಕ್ ಭಾರತೀಯ ಗಡಿ ಆಕ್ರಮಿಸಿದ್ದರ ವಿರುದ್ಧ ನಡೆದ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನಪ್ಪಿದರು. 1350ಕ್ಕೂ ಅಧಿಕ ವೀರ ಯೋಧರು ಗಾಯಾಳುಗಳಾಗಿದ್ದರು. ಇಂದು ಕಾರ್ಗಿಲ್ ವಿಜಯೋತ್ಸವವಾಗಿ ಇಪ್ಪತ್ತು ವರ್ಷಗಳೇ ಸಂದಿದೆ. ಕಾರ್ಗಿಲ್ ವಿಜಯ ಹಾಗೂ ಸೈನಿಕರ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಗಿಡ ನೆಟ್ಟು ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಪೂರ್ವಾಧ್ಯಕ್ಷ ಆನಂದ ಪೂಜಾರಿ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಅಬ್ಬನಡ್ಕ ಸುರೇಶ್ ಪೂಜಾರಿ, ಸುನೀತಾ ಪಿಂಟೋ, ಮೊದಲಾದವರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿ ಹುತಾತ್ಮರಾದ ವೀರ ಯೋಧರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.

ಕುಂದಾಪುರ ವ್ರತ್ತ ಮಟ್ಟದ ಹುಡುಗಿಯರ ತ್ರೋ ಬಾಲ್ ಪಂದ್ಯಾಟದಲ್ಲಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

JANANUDI NETWORK

ಕುಂದಾಪುರ ವ್ರತ್ತ ಮಟ್ಟದ ಹುಡುಗಿಯರ ತ್ರೋ ಬಾಲ್ ಪಂದ್ಯಾಟದಲ್ಲಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ


ಕುಂದಾಪುರ, ಜು.30: ಕುಂದಾಪುರ ವ್ರತ್ತ ಮಟ್ಟದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳಿಗಾಗಿ ನಡೆದ ತ್ರೋ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು.
ಗಂಗೊಳ್ಳಿ ಚರ್ಚ್ ಆಡಳಿತದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ, ಗಂಗೊಳ್ಳಿ ತೌಹಿದ್ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟವನ್ನು ಗಂಗೊಳ್ಳಿ ಇಗರ್ಜಿಯ ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ಉದ್ಘಾಟಿಸಿ ಶುಭ ನುಡಿದರು. ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಝೀಟಾ ಕರ್ವಾಲ್ಲೊ, ಶಾಲಾ ಆಡಳಿತ ಮಂಡಳಿಯ ಸದಸ್ಯ ಜೋನ್ ಲೋಬೊ ಮತ್ತಿತರು ಉಪಸ್ಥಿತರಿದ್ದರು.


        ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ,  ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ತಂಡಕ್ಕೆ ಅಭಿನಂದಿಸಿದ್ದಾರೆ. ದೈಹಿಕ ಶಿಕ್ಷಕಿ ಶಾಂತಿ ರಾಣಿ ಬಾರೆಟ್ಟೊ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.

ಕುಂದಾಪುರ: ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ತೈಝೆ ಪ್ರಾರ್ಥನೆ

JANANUDI NETWORK

ಕುಂದಾಪುರ: ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ತೈಝೆ ಪ್ರಾರ್ಥನೆ


ಕುಂದಾಪುರ.ಜು.29: ಕುಂದಾಪುರ ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ಅಪರೂಪದ ತೈಝೆ ಪ್ರಾರ್ಥನೆ ಕುಂದಾಪುರ ಪವಿತ್ರ ರೋಜರಿ ಮಾತಾ ಸಭಾ ಭವನದಲ್ಲಿ ಜುಲಾಯ್ 28 ರಂದು ಹಮ್ಮಿ ಕೊಳ್ಳಲಾಗಿತ್ತು.
ಅಸು ನೀಗಿದ ಯೇಸು ಕ್ರಿಸ್ತರ ಶಿಲುಭೆಯನ್ನು ಇಟ್ಟು ಕತ್ತಲಲ್ಲಿ, ದೀಪಗಳನ್ನು ಉರಿಸಿ, ಶಾಂತಾವಾಗಿ ಧ್ಯಾನ ಮಾಡುವುದು ತೈಝೆ ಎಂಬ ಪ್ರಾರ್ಥನೆ ಆಗಿದೆ. ಗಾಯನದ ಜೊತೆ ದೇವರ ವಾಕ್ಯಗಳನ್ನು ಕೇಳುತ್ತಾ ಭಜಿಸುವುದು, ಮೊಣಕಾಲ ಮೇಲೆ, ಅಥವ ಸಾಂಶ್ಟಾಂಗ ಎರಗಿ ವಯಕ್ತಿವಾಗಿ ಬೇಡುವ ಭಕ್ತಿ ಕಾರ್ಯಕ್ರಮ ನಡೆಯಿತು. ಈ ಪ್ರಾರ್ಥನ ವಿಧಿಯನ್ನು ಕಟ್ಕರೆ ಕಾರ್ಮೆಲ್ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ|ಸ್ಟೀವನ್ ಲೋಬೊ ನಡೆಸಿಕೊಟ್ಟರು.
ಈ ಪಾರ್ಥನ ಕೂಟಕ್ಕೆ ಕುಂದಾಪುರ ಚರ್ಚಿನ ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘನೇಯ ಯುವಕ ಯುವತಿಯರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು, ಅವರ ಜೊತೆ ಕುಂದಾಪುರದ ಹಿರಿಯ ಭಕ್ತಿಕರು ಕೂಡ ಈ ಪ್ರಾರ್ಥನೆಯಲ್ಲಿ ಭಾಗಿಯಾದರು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್, ಐ.ಸಿ.ವೈ.ಎಮ್ – ವೈ.ಸಿ.ಎಸ್. ಪದಾಧಿಕಾರಿಗಳು, ಸಂಘಟನೇಯ ಸಂಚಾಲಕರಾದ ರೇಶ್ಮಾ ಫೆರ್ನಾಂಡಿಸ್ ಮತ್ತು ಲೋನಾ ಲುವಿಸ್ ಉಪಸ್ಥಿತರಿದ್ದರು.

ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹತ್ಸೋವ

JANANUDI NETWORK

ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹತ್ಸೋವ

ಕುಂದಾಪುರ, ಜು.29: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ಶುಭ ನುಡಿದರು.
     ಅತಿಥಿಗಳಾದ ರೋಟರಿ ರೀವರ್ ಸೈಡ್ ಕುಂದಾಪುರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಇಂಟರ್ಯಾಕ್ಟ್ ಕ್ಲಬಿನ ವಿದ್ಯಾರ್ಥಿಗಳಿಗೆ ಗೀಡಗಳನ್ನು ವಿತರಿಸಿ ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿ ಮನೆಯಲ್ಲೂ ಗೀಡ ನೆಡುವ ಮೂಲಕ ಪ್ರಾಕÅತಿಕ ಸಮತೋಲನ ಕಂಡುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
ರೊ| ಮಂಜುನಾಥ್ ಶೆಟ್ಟಿ, ರೊ| ಸುಜಯ್ ಸುವರ್ಣ್, ರೊ|ರೊನಾಲ್ಡ್ ಡಿಮೆಲ್ಲೊ, ರೊ|ಉಲ್ಲಾಸ್ ಕ್ರಾಸ್ತಾ ಮತ್ತು ಶಿಕ್ಷಕ, ಶಿಕ್ಷಕೇತರ ವ್ರಂದದವರು ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕ್ಲಬಿನ ಅಧ್ಯಕ್ಷೆ ರಂಜಿತಾ ಶೆಟ್ಟಿ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವನ್ನು ಗಿಡಕ್ಕೆ ೆ ನೀರು ಹಾಕುವುದರ ಮೂಲಕ ಗಣ್ಯರು ಉದ್ಘಾಟಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವನ್ನು ಗಿಡಕ್ಕೆ ೆ ನೀರು ಹಾಕುವುದರ ಮೂಲಕ ಗಣ್ಯರು ಉದ್ಘಾಟಿಸಿದರು.

ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ ವತಿಯಿಂದ ಮಳೆ ನೀರು ಕೊಯಿಲು ಹಾಗೂ ಪುಷ್ಕರಣಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ಸೆಂಟ್ರಲ್‌ನ ನೂತನ ಅಧ್ಯಕ್ಷ ಆರ್‌.ವಿ.ಕುಲಕರ್ಣಿ ಹೇಳಿದರು.
  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ ಆಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಈ ಸಂಸ್ಥೆಯ ವತಿಯಿಂದ ಈಗಾಗಲೇ ಹಲವಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಡವರ ಆರ್ಥಿಕಾಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
  ಪರಿಸರ ಮಾಲೀನ್ಯ ತಡೆಯುವ ಉದ್ದೇಶದಿಂದ ತಾಲ್ಲೂಕಿನಲ್ಲಿ 1 ಕೋಟಿ ಗಿಡ ನೆಡುವ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮಳೆ ನೀರು ಸಂರಕ್ಷಣೆಯಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳಲಾಗುವುದು. ಆಯ್ದ ಕೆರೆಗಳಲ್ಲಿ ಹೂಳು ತೆಗೆಯಲಾಗುವುದು ಎಂದು ಹೇಳಿದರು.
  ಹಸಿರು ಪರಿಸರ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಈ ವಿಷಯದಲ್ಲಿ ರೋಟರಿ ಸಂಸ್ಥೆ ದೃಢ ನಿರ್ಧಾರದೊಂದಿಗೆ ಕಾರ್ಯಕ್ರಮ ರೂಪಿಸಿ ಜಾಗಿಗೆ ತರಬೇಕು. ಸಾಧ್ಯವಿರುವ ಎಲ್ಲ ಕಡೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಬೇಕು. ಈ ವಿಷಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದು ಸಂಸ್ಥೆಯ ಜಿಲ್ಲಾ ಗೌರ್ನರ್‌ ನಾಗೇಂದ್ರ ಪ್ರಸಾದ್‌ ಹೇಳಿದರು.
  ರೊಟರಿ ಸಂಸ್ಥೆಯ ಜೋನ್‌ ಗೌರ್ನರ್‌ ರಾಮಚಂದ್ರೇಗೌಡ, ಸಹಾಯಕ ಗೌರ್ನರ್‌ ಬಿ.ಕೆ.ದೇವರಾಜ್‌, ನೂತನ ಕಾರ್ಯದರ್ಶಿ ಎನ್‌.ಕೃಷ್ಣಮೂರ್ತಿ, ಮುಖಂಡರಾದ ಎಸ್‌.ವಿ.ಸುಧಾಕರ್‌, ಎಸ್‌.ವಿ.ಮಂಜುನಾಥರೆಡ್ಡಿ, ಎಸ್‌.ಶಿವಮೂರ್ತಿ, ಬೈರೇಗೌಡ, ಆ.ಮು.ಲಕ್ಷ್ಮೀನಾರಾಯಣ, ಎಲ್‌.ಗೋಪಾಲಕೃಷ್ಣ, ಎನ್‌.ನಾಜೇಂದ್ರಪ್ರಸಾದ್‌ ಇದ್ದರು.