HOLY ROSARY CHURCH, KUNDAPUR – 450 th JUBILEE SOUVENIR 2021

ರೋಟರಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಇ ಲರ್ನಿಂಗ್ ಕೊಡುಗೆ ಹಸ್ತಾಂತರ

JANANUDI NETWORK

 

ರೋಟರಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಇ ಲರ್ನಿಂಗ್ ಕೊಡುಗೆ ಹಸ್ತಾಂತರ


ಕುಂದಾಪುರ್, ಜು.3: ರೋಟರಿ ಸಂಸ್ಥೆಯಿಂದ ಸಂತ ಜೋಸೆಫ್ ಪ್ರೌಢ ಶಾಲೆಗೆ ಸುಮಾರು ಒಂದು ಕಾಲು ಲಕ್ಷ ರೂಪಾಯಿ ಮೌಲ್ಯದ ಇ ಲರ್ನಿಂಗ್ ಕೊಡುಗೆ ಎರಡು ಪ್ರೊಜೆಕ್ಟರಗಳು ಮತ್ತು ಎರಡು ಪರದೆಗಳನ್ನು ಸಂತ ಜೋಸೆಫ್ ಪ್ರೌಢ ಶಾಲೆಯ ಸಭಾಭವನದಲ್ಲಿ ಅಗೋಸ್ತ್ 2 ರಂದು ಹಸ್ತಾಂತರಿಸಲಾಯಿತು.
ಇದರ ಉದ್ಘಾಟನೆಯನ್ನು ಜಿಲ್ಲಾ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್. ರವಿರಾಜ್ ಶೆಟ್ಟಿ ಉದ್ಘಾಟಿಸಿ ರೋಟರಿ ಸಂಸ್ಥೆ ಸಮಾಜದ ಕಳಕಳಿಯಿಂದ ಸೇವೆ ಮಾಡುತ್ತದೆ. ಎಲ್ಲಿ ಕುಂದು ಕೊರೆತೆ ಇದನ್ನು ಮನಗಂಡು ಅವರಿಗೆ ಕೊಡುಗೆಗಳನ್ನು ನೀಡುತ್ತದೆ. ಈ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ನಾವು ಮಹತ್ವವನ್ನು ಕೊಟ್ಟಿದ್ದೆವೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕುಂದು ಕೊರತೆ ನೀಗಿಸಲು ನಾವು ಸಾಧ್ಯವಿದಷ್ಟು ಶ್ರಮಿಸುತ್ತೇವೆ’ ಎಂದು ನುಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕಳೆದ ಸಾಲಿನ ರೋಟರಿ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ. ಪಿ.ಎಚ್.ಎಫ್. ರೋ ಜಾನ್ಸನ್ ಡಿಆಲ್ಮೇಡಾ  ’ಸಂಸ್ಥೆಯಲ್ಲಿ ಎಲ್ಲವು ಪಾರದರ್ಶಕ ಆಡಳಿತ ಇರುತ್ತದೆ, ಕಳೆದ ಸಾಲಿನ ಕೊನೆಯ ದಿನ ಈ ಕೊಡುಗೆಯ ಮಂಜುರು ಆಗಿದ್ದು, ನನ್ನ ಶ್ರಮಕ್ಕೆ ರೋ. ಗಣೇಶ್ ಕಾಮತ್ ರೋ. ಶ್ರೀಧರ್ ಶೆಟ್ಟಿಯವರು ಶ್ರಮ ವಹಿಸಿ ಈ ಯೋಜನೆಯನ್ನು ಸಾಕಾರ ಗೊಳಿಸಿದ್ದಾರೆ ಎಂದರು. ರೋ. ಕುಂದಾಪುರ ದಕ್ಷಿಣ ಇದರ ನೂತನ ಅಧ್ಯಕ್ಷ ದೇವರಾಜ್ ಕೆ. ‘ಮಾತಾಡಿ ರೋಟರಿ ಸಂಸ್ಥೆ ತುಂಬ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ, ಕುಗ್ರಾಮದಲ್ಲಿರುವ ಶಾಲೆಗೆ ಸೋಲಾರ್ ಕೊಟ್ಟಿದ್ದೆವೆ, ಬೆಂಚು ಕುರ್ಚಿ ಮತ್ತು ಕಲಿಕಾ ಸಾಮಾಗ್ರಿಗಳನ್ನು ಕೊಡುವ ಯೋಜನೆಯನ್ನು ಮಾಡಿದ್ದೇವೆ’ ಎಂದು ತಿಳಿಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಶಿವಾನಂದ್ ರೋಟರಿಯ ಸೇವೆ ತಿಳಿಸುತ್ತಾ ಕಾನ್ವೆಂಟ್ ಶಾಲೆಗಳ ಶಿಸ್ತು, ಸ್ವಚತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲ ಸಂಚಾಲಕರಾದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ ಶುಭ ನುಡಿದರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ‘ರೋಟರಿಯ ನಿಸ್ವಾರ್ಥ ಸೇವೆಗೆ ಕ್ರತಜ್ಞತೆ ಸಲ್ಲಿಸುತ್ತಾ, ಅನುದಾನಿತ ಶಾಲೆಗಳಿಗೆ ಇಂತಹ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳಿಂದ ವಂಚಿತರಾಗಿದ್ದೆವೆ, ನಮ್ಮಲ್ಲಿ ಬರುವ ಬಡ ಮಕ್ಕಳಿಗೂ ಇಂತಹ ವ್ಯವಸ್ಥೆ ಬೇಕು’ ಎಂದು ತಿಳಿಸಿದರು. ರೋಟರಿಯನ್‍ಗಳಾದ ವಿವಿಯನ್ ಕ್ರಾಸ್ಟೊ, ಮನೋಹರ್ ಭಟ್, ಶ್ರೀನಾಥ್ ರಾವ್, ಲೋಯ್ ಕರ್ವಾಲ್ಲೊ, ಮುಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಮೆಲ್ವಿನ್ ಡಿಸೋಜಾ ಮುಂತಾದವರು ಉಪಸ್ತಿತರಿದ್ದರು. ಶಿಕ್ಷಕ ಮೈಕಲ್ ಪುರ್ಟಾರ್ಡೊ ಸ್ವಾಗತಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

ಬೀಜಾಡಿಯಲ್ಲಿ ಸಂಭ್ರಮದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

 

ವರದಿ: ಚಂದ್ರಶೇಖರ, ಬೀಜಾಡಿ 

ಬೀಜಾಡಿಯಲ್ಲಿ ಸಂಭ್ರಮದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ


ಕುಂದಾಪುರ: ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದರ ಉಳಿವಿಗೆ ಎಲ್ಲರೂ ಶ್ರಮಿಸಬೇಕಾದೆ. ನಮ್ಮ ಹಿರಿಯರು ನೀಡಿದ ಭಾಷೆ, ಬದುಕಿನ ಬಗ್ಗೆ ಇಂದಿನ ಯುವ ಸಮೂಹಕ್ಕೆ ತಿಳಿದು ಕೊಂಡು ಸಾಗಬೇಕಿದೆ ಎಂದು ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎನ್.ನಿತ್ಯಾನಂದ ಹೇಳಿದರು.
ಅವರು ಗುರುವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ ಗೋಪಾಡಿ
ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಮಾತನಾಡಿ, ಕುಂದಾಪ್ರ ಭಾಷೆ ಬದುಕಿನ ಭಾಷೆಯಾಗಿದೆ.
ಕನ್ನಡದ ಭಾಷೆಯ ಉಳಿವಿಗೆ ಕುಂದಾಪ್ರ ಭಾಷೆಯ ಕೊಡುಗೆ ಅಪಾರ.ಕುಂದಾಪ್ರ ಭಾಷೆಯ ಮೇಲಿನ ಗೌರವದಿಂದ ಇಷ್ಟೊಂದು ಜನ ಸೇರಿರುವುದು ಈ ಭಾಷೆಯ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಕರ್ತ ವಸಂತ ಗಿಳಿಯಾರು,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಗಮಿಸಿ ಆಶ್ರಯದ ಶುಭ ನುಡಿಯನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಬಿ.ಮಂಜುನಾಥ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.

 

ಬೀಜಾಡಿ ಮಿತ್ರ ಸಂಗಮದ ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್ ನೇತೃತ್ವದ ತಂಡ ಕುಂದಾಪ್ರ ಕನ್ನಡ ಜಾನಪದ ಹಾಡು 
ಧಿಮ್ಸಾನ್ ಎನ್ನಿರೋ ಧೀಂ ಗುಟ್ಕಂಡ್ ಕುಣಿರೋ ಎನ್ನುವ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬೀಜಾಡಿ ಶಾರದಾ ಗಾಣಿಗ ತಂಡ ಶೋಭಾನೆ ಹಾಡು ಹಾಡಿ ಎಲ್ಲರ ಮೆಚ್ಚುಗೆ ಪಡೆದರೆ,ಸಂಸ್ಥೆಯ ಮಾಜಿ ಅಧ್ಯಕ್ಷ ನಾಗರಾಜ ಬೀಜಾಡಿ ತಂಡ ಭತ್ತಕುಟ್ಟುವ ಹಾಡುನ್ನು ಭತ್ತ ಕುಟ್ಟುವ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ನೀಡಿ ಕುಂದಗನ್ನಡ ಸಂಸ್ಕøತಿ ಅನಾವರಣಗೊಳಿಸಿದರು.

 

ಅತಿಥಿಗಳ ಮಾತಿನಲ್ಲಿಮೀನುಗಾರಿಕೆಯ ಅಂಬು ಹಾಕುವುದು, ಕೃಷಿಕನ ಹೂಂಟಿ ಒಳಾಳ್ ಬಗ್ಗೆ ಮಾತನಾಡಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಆಸಾಡಿ ತಿಂಗಳಾದ ಕಾರಣ ಆಗಮಿಸಿದ ಕುಂದಾಪುರ ಕನ್ನಡದ ಅಭಿಮಾನಿಗಳಿಗೆ ಹಾಲ್ ಬಾಯಿ,ಪತ್ರೋಡೆ,ಕಜ್ಜಾಯ,ಸುಕ್ಕಿನುಂಡೆ,ಉಪ್ಕರಿ,ಕಡುಬು ಸಹಿತ 20ಕ್ಕೂ ಹೆಚ್ಚು ಬಗೆಯ ಲಘ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ವಿಶ್ವ ಕುಂದಾಪ್ರಾ ಕನ್ನಡ  ದಿನಾಚರ್ಣಿ – ಕೆರಿ ತುಂಬ ಕುರಿ ಹೆಜ್ಜೆ – ‘ಕುಂದ ಕನ್ನಡದಲ್ಲಿಷ್ಟ್ ಶಬ್ದಗಳ್ ಶ್ರೀಮಂತಿಕೆ ಬೇರೆ ಭಾಷಿಲಿಲ್ಲಾ

JANANUDI NETWORK

 ವಿಶ್ವ ಕುಂದಾಪ್ರಾ ಕನ್ನಡ  ದಿನಾಚರ್ಣಿ – ಕೆರಿ ತುಂಬ ಕುರಿ ಹೆಜ್ಜೆ – ‘ಕುಂದ ಕನ್ನಡದಲ್ಲಿಷ್ಟ್ ಶಬ್ದಗಳ್ ಶ್ರೀಮಂತಿಕೆ ಬೇರೆ ಭಾಷಿಲಿಲ್ಲಾ


ಕುಂದಾಪ್ರಾ. ಆ.2: ‘ಈ ಆಧುನಿಕ್ತಿಕತಿ ಹುಚ್ಚಾಯ್, ನಮ್ಮ್ ಕೆಲ ಜನ್ರಿಗೆ ಕುಂದಾಪ್ರಾ ಪದವೇ ಗೊತ್ತಿಲ್ಲಾ ಮ್ಹಾರಾಯ್ರೆ, ಅಡ್ಗಿ ಮನಿಗ್ ಕಿಚ್ಚನ್, ಕಿಟ್ಕಿಗೆ ವೀಂಡೊ, ಬಾಗ್ಲಿಗೆ ಡೋರ್, ಹಿಂಗ್ ನಮ್ಮ ಕುಂದಾಪ್ರಾ ಭಾಷಿ ಸೊಡ್ಗಿ ಹೋಗಿತ್, ಕುಂದಾಪ್ರಾ ಭಾಷಿಲ್ಲ್ ಇದ್ದಷ್ಟ್ ಪದ ಸಂಪತ್ತ್ ಯಾವ್ ಭಾಷಿಲೂ ಇಲ್ಲಾ, ಕುಂದಾಪ್ರಾ ಒಂದ್ ಭಾಷಿ ಮಾತ್ರ ಅಲ್ಲಾ ಅದೊಂದ್ ಬದ್ಕ್ ನಮ್ಮ ಕುಂದಾಪ್ರಾ ಭಾಷಿ ಪದ ಎಲ್ಲಾ ಸಂಗ್ರಹ ಮಾಡಿ ಒಂದ್ ಪದ ಕೋಶ ಮಾಡ್ರೆ ಕುಂದಾಪ್ರಾ ಕನ್ನಡ  ದಿನಾಚರ್ಣಿ  ಸಾರ್ಥಕ್ ಆತ್ತ್’ ಎಂದ್ ನ್ಯಾಯವಾದಿ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳ್ರ್.
ಅವ್ರ್ ಆಷಾಡಿ ತಿಂಗಳ್ (ಆಗೋಸ್ತ್) ಒಂದ್ರಂದ್ ಇಲ್ಲಿನ್ ರೋಟರಿ ಲಕ್ಷ್ಮಿ ನರಸಿಂಹ ಸಭಾಂಗಣದಲ್ಲ್ ಕುಂದಾಪುರ ಸರ್ಕಾರಿ ಪದ್ವಿ ಪೂರ್ವ ಕಾಲೇಜ್ ಮತ್ತ್ ಕುಂದಪ್ರಭ ವತಿಯಿಲ್ಲ್ ನಡ್ದದ್ದ್ ಕುಂದಾಪ್ರಾ ಕನ್ನಡ ದಿನಾಚರ್ಣಿ “ಕೆರಿ ತುಂಬ ಕುರಿ ಹೆಜ್ಜೆ” ಕಾರ್ಯಕ್ರಮೊ ಉದ್ಘಟನಿ ಮಾಡಿ ಮಾತಾಡ್ರ.
ಕುಂದಾಪ್ರಾ ಕನ್ನಡ್ದ್ ಭಾಷಿಗ್ ಇದ್ದಸ್ಟ್ ವೇಗೊ, ಚುರ್ಕ್, ಚುಟ್ಕ್, ಶಕ್ತಿ ಬೇರೆ ಭಾಷಿಗ್ ಇಲ್ಲಾ, ಈ ಭಾಷಿನ್ನ್ ಪಾಠ ಪುಸ್ತಕದಲ್ಲ್ ಬಳ್ಸಿ ಉಳ್ಸು ಕೆಲ್ಸ ಆಯ್ಕ್. ಮುಂದಿನ್ ಪೀಳ್ಗಿ ನಮ್ಮ್ ಮಕ್ಳ್ ಕುಂದಾಪ್ರಾ ಭಾಷಿನ್ ಉಳ್ಸ್ಕ್ ಬೆಳ್ಸ್ಕ್ . ನಮ್ಮ್ ಕುಂದಾಪುರ ಎಂತಕ್ಕೂ ಕಮ್ಮಿ ಇಲ್ಲಾ, ಈ ಮಣ್ಣಲ್ಲ್ ಹುಟ್ದವ್ರ್ ಬೇಕಾದಷ್ಟ್ ಪ್ರಥಮಗಳನ್ನ್ ಕೊಟ್ಟಿರ್ ಗುಲ್ವಾಡಿ ವೆಂಕಟ್‍ರಾಯ್ರ್ ಕನ್ನಡ ಮೊದ್ಲ್ ಕಾದಂಬರಿ ಬರ್ದವ್ರ. ಅಕ್ಷರ್ ಬಾರ್ದೆ ಇದ್ರೂ, ಮೂಕಜ್ಜಿ ರಾಶಿ ರಾಶಿ ಜನಪದ ಗೀತೆ ರಚ್ನಿ ಮಾಡಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಆಗಿರ್’ ಎಂದ್ ಅವ್ರ್ ಕಾಯ್ಕ್ರ್ರಮದ್ ಮುಖ್ಯ ಅಥಿತಿಗಳಾಯ್ ‘ನಮ್ಮೂರೆ ಚೆಂದ, ನಮ್ಮೂರೆ ಅಂದ, ಕುಂದಾಪ್ರಾ ಭಾಷಿಯೆ ಕರ್ಣಾನಂದ’ ಎಂಬುದ್ ಫಲಕ ಅನಾವರಣ್ ಗೊಳ್ಸ್ರ್.
ನಿವ್ರತ್ತಿ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ‘ನಮ್ಮ್ ಕುಂದಾಪ್ರಾ ಭಾಷಿಲ್ಲ್ ತುಂಬಾ ಚೆಂದದ್ ಜನಪದ್ ಪದ್ಯಗಳ್ ಉಂಟ್, ಮಾತ್ ಮಾತಿಗೂ, ಅಣ್ಣ ತಂಗಿ, ಅಮ್ಮ ಮಗ, ಗಂಡ ಹೆಂಡ್ತಿಗ್ ಪದ್ಯಗಳಲ್ಲೆ ಅರ್ಥ ಮಾಡ್ಕಕೊಳ್ಳು ಒಗ್ಟ್ ಪದ್ಯಗಳೂ ಉಂಟ್, ಹಳ್ಳಿ ಬದಿಲ್ಲ್ ಬೇಸಾಯ ಮಾಡು ಜನ್ರತ್ತರ್ರ್ ಬೇಕಾದಷ್ಟ್ ಕುಂದಾಪ್ರಾ ಭಾಷಿ ಪದ್ಯ, ಒಗ್ಟ್, ಶಬ್ದಗಳ್’ ಸಿಗತ್ತ್ ಅಂದ್ ತಿಳ್ಸ್ರ್. ಸಂಶೋಧಕ ಸಾಹಿತ್ ನಿವ್ತತ್ತ ಪ್ರಾಚಾರ್ಯ ಕನರಾಡಿ ವಾದಿರಾಜ ಭಟ್ ‘ಕುಂದಾಪ್ರಾ ಭಾಷಿಯೆ ವಿಶಿಷ್ಟ, ಮೀನಿಗ್, ಹಣ್ಣಿಗ್, ತರ್ಕಾರಿಗಳಿಗ್ ಕುಂದಾಪ್ರ ಭಾಷಿದೆ ವಿಶಿಷ್ಟ ಹೆಸರ್ಗಳ್ ಇತ್ತ್’ ಅಂದ್ರ್. ಸರ್ಕಾರಿ ಪ್ರೌಢ ಶಾಲಿ ಮುಖ್ಯೋಪಾಧ್ಯಯರಾದವ್ರ್ ಮಾದವ ಅಡಿಗ್ರ್ ‘ಕುಂದಾಪ್ರಾ ಭಾಷಿ ಮಾತಾಡ್ರೆ, ಪ್ರಪಂಚದಲ್ಲ್ ಎಲ್ಲಿದ್ರೂ ನಾವು ಕುಂದಾಪ್ರಾ ಕನ್ನಡ್ದವ್ರ್ ಅಂದ್ ಗೊತ್ತಾತ್ ಅಷ್ಟ್ ದೊಡ್ದ್ ನಮ್ಮ್ ಭಾಷಿ’ ಅಂದ್ ಹೇಳ್ರ್.
ಕಾಯ್ಕ್ರ್ರದಲ್ಲ್ ಮಕ್ಳಿದ್ ಜನಪದೊ ಗೀತಿ, ಒಗ್ಟ್ ಬಿಡ್ಸುದ್ ಕಾಯ್ಕ್ರ್ರಮ ನಡಿತ್ ಕಾಯ್ಕ್ರ್ರಮದ್ ಅಧ್ಯಕ್ಷರ್ ಉದ್ಯಮಿ ದತ್ತಾನಂದ್ ಗಂಗೊಳ್ಳಿ ವಿಜೇತ ಮಕ್ಳಿಗೆ ಬಹುಮನ ಹಂಚಿ ‘ನಾನು ಮುಂಬಯಿ ಗುಜರಾತ್ ಅಲ್ಲೆಲ್ಲಾ ಹೋಗ್ತಿದ್ದೆ, ಆದ್ರೆ ನಾನ್ ಕುಂದಾಪ್ರಾ ಕನ್ನಡ ಕೇಂಡ್ರೆ ಬಾಳಾ ಖುಷಿ ಪಡ್ತಿದ್ದೆ’ ಅಂದ್ರ್.
ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಪ್ರಸ್ತಾವಿಕ ಮಾತಾಡಿ ಸ್ವಾಗತ್ ಮಾಡ್ರ್. ಉಪನ್ಯಾಸಕ ಉದಯ್ ಕುಮಾರ್ ಶೆಟ್ರ್ ನೆಂಟ್ರನ್ನ್ ಸ್ವಾಗತ್ ಮಾಡ್ರ್. ಜಯವಂತ್ ಪೈ ವಂದ್ನೆ ಮಾಡ್ರ್.

ಕೊಂಕಣಿ ಸಾಹಿತ್ಯ ಕಲಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ – ಲುವೀಸ್ ಡಿಆಲ್ಮೇಡಾ

JANANUDI NETWORK

ಕೊಂಕಣಿ ಸಾಹಿತ್ಯ ಕಲಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ – ಲುವೀಸ್ ಡಿಆಲ್ಮೇಡಾ


ಕುಂದಾಪುರ, ಆ: ಉಡುಪಿ ಜಿಲ್ಲೆ ಸಾಹಿತ್ಯ ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೇಯ ವಾರ್ಷಿಕ ಮಹಾಸಭೆಯು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಭಾ ಭವನದಲ್ಲಿ ಇತ್ತೀಚೆಗೆ ಜರಗಿತು. ಅಧ್ಯಕ್ಷರು ಸ್ವಾಗತಿಸಿದರು. ಸಭೆಯಲ್ಲಿ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಈ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷ ಲುವಿಸ್ ಡಿಅಲ್ಮೇಡಾ, ಮಣಿಪಾಲ ಇವರು ಸರ್ವಾನು ಮತದಿಂದ 2019 20 ಸಾಲಿನ ಅಧ್ಯಕ್ಷರಾಗಿ ಪುನಾರಾಯ್ಕೆಯಾದರು.
ಗೊಡ್ಫ್ರಿ ಡಿಸೋಜಾ, ಉದ್ಯಾವರ ಉಪಾಧ್ಯಕ್ಷರಾಗಿ, ರೋಜಿ ಬಾರೆಟ್ಟೊ, ಕಲ್ಯಾಣಪುರ, ಕಾರ್ಯದರ್ಶಿಯಾಗಿ, ರೋಜಿ ಕ್ವಾಡ್ರಸ್, ಕಲ್ಯಾಣಪುರ, ಸಹಕಾರ್ಯದರ್ಶಿಯಾಗಿ. ಆಲ್ಫೋನ್ಸ್ ಡಿಕೋಸ್ತಾ, ಉಡುಪಿ, ಕೋಶಾಧಿಕಾರಿಯಾಗಿ. ಡಾ|ಜೆರಾಲ್ಡ್ ಪಿಂಟೊ, ಕಲ್ಯಾಣಪುರ. ಜೆಸಿಂತಾ ಕ್ವಾಡ್ರಸ್, ರಿಚಾರ್ಡ್ ಡಿಸೋಜಾ, ಆಂಟೋನಿ ಲುವಿಸ್, ಆಲ್ಫೊನ್ಸ್ ಡಿಸೋಜಾ, ಸ್ಟ್ಯಾನಿ ವಿನ್ಸೆಂಟ್ ರೊಡ್ರಿಗಸ್ ಇವರುಗಳು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಿ ಬಂದರು.
ಚುನಾವಣಾ ಪ್ರಕಿÅಯೆಯನ್ನು ನಿಕಟ ಪೂರ್ವ ಅಧ್ಯಕ್ಷ ಡಾ|ಜೆರಾಲ್ಡ್ ಪಿಂಟೊ ನಡೆಸಿಕೊಟ್ಟರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್: ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾದಿಕಾರಿಗಳ ಸಭೆ.

 

ವರದಿ: ಚಂದ್ರಶೇಖರ ಶೆಟ್ಟಿ

ಕುಂದಾಪುರ ಬ್ಲಾಕ್ ಕಾಂಗ್ರೆಸ್: ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾದಿಕಾರಿಗಳ ಸಭೆ.

ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳನ್ನು ಬೂತ್ ಮಟ್ಟದಲ್ಲಿ ಸಂಘಟಿತವಾಗಿ ಪುನರ್ರಚಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರುರವರ ನೇತೃತ್ವದಲ್ಲಿ ಗುರುವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ  ಸಭೆ ಕರೆದು ಚರ್ಚಿಸಲಾಯಿತು.

ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ,  ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಯತೀಶ್ ಕರ್ಕೇರಾ , ರಾಜೀವ್ ಗಾಂಧಿ ಪಂಚಾಯತ್‌ರಾಜ್ ಯೋಜನೆ ಜಿಲ್ಲಾ ಸಂಯೋಜಕಿ ರೋಷನಿ ಒಲೊವೇರಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ಕಿಸಾನ್ ಘಟಕ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು, ಇಂಟೆಕ್ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ಕಾಂಗ್ರೆಸ್ ಸೇವಾದಳ ಜಿಲ್ಲಾ ಘಟಕದ ಆಸೀಪ್ ಎರ್ಮಾಳ್ ಹಾಗೂ ಮತ್ತಿತರ ಘಟಕಗಳ ಅಧ್ಯಕ್ಷರು, ಪದಾದಿಕಾರಿಗಳು, ಪುರಸಭಾ ಸದಸ್ಯರುಗಳು ಉಪಸ್ಥತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಕ್ರಾಸ್ಟೋ ನಿರೂಪಿಸಿ,  ವಿಕಾಸ್ ಹೆಗ್ಡೆ ವಂದಿಸಿದರು.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತೆ ಮತ್ತು ಆರೋಗ್ಯದ ಕುರಿತಾಗಿ ಮಾಹಿತಿ ಕಾರ್ಯಾಗಾರ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತೆ ಮತ್ತು ಆರೋಗ್ಯದ ಕುರಿತಾಗಿ ಮಾಹಿತಿ ಕಾರ್ಯಾಗಾರ

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಕುರಿತಾಗಿ ಜಯಶ್ರೀ ಪ್ರಕಾಶ್ ಪೂಜಾರಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್,
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಬಾಲಕೃಷ್ಣ ಮಡಿವಾಳ, ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ ಮೊದಲಾದವರಿದ್ದರು.

ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ವರದಿ: ಡಿ.ಬಿ. ಕ್ರಷ್ಣಮೂರ್ತಿ

ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ದಿನಾಂಕ 31-07-2019 ರಂದು ಕುಂದಾಪುರ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಠಾಣಾಧಿಕಾರಿ ಶ್ರೀ ಹರೀಶ್ ನಾಯ್ಕ್ ವಹಿಸಿ ಕುಂದುಕೊರತೆಯ ಬಗ್ಗೆ ದಲಿತ ಮುಖಂಡರ ಜೊತೆ ಚರ್ಚಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕುಂದಾಪುರ ನಗರ ದಸಂಸ ಸಂಚಾಲಕರು ಹಾಗೂ ಉಪನ್ಯಾಸಕರಾದ ಶ್ರೀ ಡಿ.ಬಿ.ಕೃಷ್ಣಮೂರ್ತಿಯವರು ಮಾತನಾಡಿ, ಸಮುದಾಯದ ಯುವಕರನ್ನು ಇತರರು ದುರ್ಬಳಕೆ ಮಾಡುತ್ತಿದ್ದು, ಪೋಷಕರು ಜಾಗ್ರತೆವಹಿಸಬೇಕು ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಸಮಾಜಮುಖಿಯಾಗಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ಶ್ರೀ ಪ್ರಭಾಕರ್, ನಗರ ಮಹಿಳಾ ಘಟಕ ಸಂಚಾಲಕಿ ಶ್ರೀಮತಿ ಸೀತಾ, ಸತೀಶ್ ಜಪ್ತಿ, ಚಂದ್ರಮ ತಲ್ಲೂರು, ಗಣೇಶ್ ನಂದಿಬೆಟ್ಟು, ವಿಜಯ ಕಡ್ಗಿಮನೆ ಮತ್ತು ತಾಲ್ಲೂಕಿನ ಮುಖಂಡರು ಉಪಸ್ಥಿತರಿದ್ದರು.
ಠಾಣಾ ಸಿಬ್ಬಂದಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕುಂದಾಪುರ ವ್ರತ್ತ ಮಟ್ಟದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

JANANUDI NETWORK

ಕುಂದಾಪುರ ವ್ರತ್ತ ಮಟ್ಟದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ


ಕುಂದಾಪುರ, ಜು.31: ಕುಂದಾಪುರ ವ್ರತ್ತ ಮಟ್ಟದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗಳಿಗಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು.
ಗಂಗೊಳ್ಳಿ ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟದ ಕಾರ್ಯಕ್ರಮದಲ್ಲಿ ಶಾಲೆಯ ಸಂಚಲಾಕರಾದ ಅಫ್ತರ್ ಅಹ್ಮದ್ ಖಾನ್, ದೈಹಿಕ ಪರಿವೀಕ್ಷಣ ಅಧಿಕಾರಿ ದತ್ತಾತ್ರಯ ನಾಯ್ಕ್, ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯಿನಿ ಫಿರ್ದೊಸ್, ದೈಹಿಕ ಶಿಕ್ಷಕಿ ರೇಶ್ಮಾ ಮೆಂಡೊನ್ಸಾ, ಮತ್ತಿತರು ಉಪಸ್ಥಿತರಿದ್ದರು.
ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ತಂಡಕ್ಕೆ ಅಭಿನಂದಿಸಿದ್ದಾರೆ. ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.

ಕುಂದಾಪುರ ವ್ರತ್ತ ಮಟ್ಟದ ಹುಡುಗಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

JANANUDI NETWORK

ಕುಂದಾಪುರ ವ್ರತ್ತ ಮಟ್ಟದ ಹುಡುಗಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ


ಕುಂದಾಪುರ, ಜು.31: ಕುಂದಾಪುರ ವ್ರತ್ತ ಮಟ್ಟದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳಿಗಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಹುಡುಗಿಯರ ವಿಭಾಗದಲ್ಲಿ ಕುಂದಾಪುರದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು.
ಗಂಗೊಳ್ಳಿ ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟದ ಕಾರ್ಯಕ್ರಮದಲ್ಲಿ ಶಾಲೆಯ ಸಂಚಲಾಕರಾದ ಅಫ್ತರ್ ಅಹ್ಮದ್ ಖಾನ್, ದೈಹಿಕ ಪರಿವೀಕ್ಷಣ ಅಧಿಕಾರಿ ದತ್ತಾತ್ರಯ ನಾಯ್ಕ್, ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯಿನಿ ಫಿರ್ದೊಸ್, ದೈಹಿಕ ಶಿಕ್ಷಕಿ ರೇಶ್ಮಾ ಮೆಂಡೊನ್ಸಾ, ಮತ್ತಿತರು ಉಪಸ್ಥಿತರಿದ್ದರು.
ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ತಂಡಕ್ಕೆ ಅಭಿನಂದಿಸಿದ್ದಾರೆ. ದೈಹಿಕ ಶಿಕ್ಷಕಿ ಶಾಂತಿ ರಾಣಿ ಬಾರೆಟ್ಟೊ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.