HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ

JANANUDI NETWORK

ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ


ಕುಂದಾಪುರ,ಆ.10: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಖ್ಯಾತ ಪ್ರಸ್ತೂತಿ ವೈದ್ಯೆ ಡಾ|ಪ್ರಮೀಳಾ ನಾಯಕ್ ಇವತ್ತಿನ ತಲೆಮಾರು ದೇಶ ಭಕ್ತಿಗಳು ಹಾಡುವಲ್ಲಿ ಮಾತ್ರ ದೇಶ ಭಕ್ತಿಯನ್ನು ಮಿಸಲಿಡದೆ ಭಾರತದ ನೆಲ ಜಲ ರಕ್ಷಣೆ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳ ಬೇಕು. ಸ್ಚಚ್ಚತೆಗೆ ಪ್ರಾಮುಖ್ಯತೆ ನೀಡಿ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ ಪರಿಸರದ ರಕ್ಷಣೆ ಮಾಡಿ ದೇಶ ಭಕ್ತರಾಗಿ’ ಎಂದು ಅವರು ಸಂದೇಶ ನೀಡಿ ಗಾಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿದರು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಶುಭಾಷಯ ಕೋರಿದರು. ತೀರ್ಪುಗಾರರಾಗಿ ರಾಮಚಂದ್ರ ಆಚಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು, ಪ್ರೆಸಿಲ್ಲಾ ಎಸ್. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇನ್ನೊರ್ವ ಶಾಂತಾ ಕಾಂಚನ್ ತಿರ್ಪುಗಾರಾಗಿದ್ದರು ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಾಲ್ಟರ್ ಜೆ. ಡಿಸೋಜಾ ಸ್ವಾಗತ ಕೋರಿದರು.  ನಿಯೋಜಿತ ಅಧ್ಯಕ್ಷ ಬರ್ನಾಡ್ ಜೆ.ಡಿಕೋಸ್ತಾ, ಕುಂದಾಪುರ ವಲಯದ ಉಪಾಧ್ಯಕ್ಷ ಎಲ್ಟನ್ ರೆಬೇರೊ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿರಿದ್ದರು. ಕಥೊಲಿಕ್ ಸಭಾದ ನಿರ್ಗಮನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಸಹಕಾರ್ಯದರ್ಶಿ ಲೋನಾ ಲುವಿಸ್, ಖಜಾಂಚಿ ಪ್ರೇಮಾ ಡಿಕುನ್ಹಾ ಸ್ಪರ್ಧೆಗಳನ್ನು ನೆಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿಆಲ್ಮೇಡಾ ನಿರೂಪಿಸಿ ವಂದಿಸಿದರು.
ಸ್ಪರ್ಧೆಯಲ್ಲಿ ಗೆದ್ದವರ ವಿವರ ಇಂತಿದೆ
ವಯಕ್ತಿಕ ಗಾಯನ ವಿಭಾಗ 1 ರಿಂದ ನಾಲ್ಕನೆ ತರಗತಿಯಲ್ಲಿ ಪ್ರಥಮ ಸ್ಥಾನ ಶ್ರಾವಣಿ, ಸಂತ ಜೋಸೆಫ್ ಪ್ರಾಥಮಿಕ ಶಾಲೆ, ದ್ವೀತಿಯ ರಾಫಿಡಾ ಸಿ ಸೈಡ್ ಪಬ್ಲಿಕ್ ಶಾಲೆ. 5 ರಿಂದ 7 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಜಯಶ್ರಿ ಎಚ್.ಎಮ್,ಎಮ್. ಆಂಗ್ಲಾ ಮಾ. ಶಾಲೆ, ದ್ವೀತಿಯ ಹಫಿದಾ, ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ರಿಶಿಕಾ ಜಾನ್, ಹೋಲಿ ರೋಜರಿ ಆಂಗ್ಲಾ ಮಾ. ಶಾಲೆ. 8 ರಿಂದ 10 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಕೆ.ಎಸ್. ಧಾರಿಣಿ ಹೋಲಿ ರೋಜರಿ ಆಂಗ್ಲಾ ಪ್ರೌಢ ಶಾಲೆ, ಮತ್ತು ಪ್ರಾಪ್ತಿ ವಿ.ಕೆ.ಆರ್. ಆಂಗ್ಲಾ ಮಾ. ಪ್ರೌಢ ಶಾಲೆ. ದ್ವಿತೀಯ ಅಫಸಾನಾ ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ನಾಗರತ್ನ ಸಂತ ಜೋಸೆಫ್ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ರಶ್ಮಿ ಅರ್.ಎನ್.ಶೆಟ್ಟಿ ಕಾಲೇಜು. ಮತ್ತು ಸಮುಹ ಗಾಯನದಲ್ಲಿ ಪ್ರಥಮ ವಿ.ಕೆ.ಆರ್. ಆಂಗ್ಲಾ ಮಾ. ಪ್ರೌಢ ಶಾಲೆ. ದ್ವಿತೀಯ. ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ಸ್ಥಾನವನ್ನು ಎಚ್.ಎಮ್,ಎಮ್. ಆಂಗ್ಲಾ ಮಾ. ಶಾಲೆ ಪಡೆಯಿತು.

ಶ್ರೀನಿವಾಸಪುರದಲ್ಲಿ  ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಉದ್ಘಾಟಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರದಲ್ಲಿ  ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಉದ್ಘಾಟಿಸಿದರು.

 

ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಉದ್ಘಾಟಿಸಿದರು.

  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮೋಹನ್‌ ಕುಮಾರ್‌, ಆರೋಗ್ಯ ನಿರೀಕ್ಷಕ ರಮೇಶ್‌, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಸಾದ್‌, ಪುರಸಭಾ ಸದಸ್ಯರಾದ ಬಿ.ವೆಂಕಟರೆಡ್ಡಿ, ಕೆ.ಜಯಲಕ್ಷ್ಮಿ ಸತ್ಯನಾರಾಯಣ, ಅನೀಸ್‌, ಸರ್ದಾರ್‌, ನಾಗೇಶ್‌, ಸಂಜಯ್‌ ಸಿಂಗ್‌, ಎಸ್‌.ರಾಜು ಅಪ್ಪೂರ್‌, ಉನಿಕಿಲಿ ನಾಗರಾಜ್‌, ಗುತ್ತಿಗೆದಾರ ಚೌಡರೆಡ್ಡಿ ಇದ್ದರು.

  ಭೇಟಿ: ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಬಳಿಕ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಆಹಾರ ತಯಾರಿಕೆ ಹಾಗೂ ವಿತರಣೆ ಬಗ್ಗೆ ಪರಿಶೀಲಿಸಿದರು. ಅಡುಗೆ ಮನೆಯಲ್ಲಿ ಶುಚಿತ್ವ ಹಾಗೂ ಆಹಾರದ ರುಚಿ ಕಾಪಾಡಿಕೊಂಡು ಹೋಗುವಂತೆ ಸಿಬ್ಬಂದಿಗೆ ಸಲಹೆ ನೀಡಿದರು.

ನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. 

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. 
 ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.
  ಪಟ್ಟಣದ ಸರ್ಕಾರಿ ಆಸ್ಪತ್ರೆಗೆ  ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ತಜ್ಞ ವೈದ್ಯರ ಹಾಗೂ ದಾದಿಯರ ಕೊರತೆ ಇದೆ. ಕೆಲವು ವೈದ್ಯಕೀಯ ಉಪಕರಣಗಳ ಅಗತ್ಯವಿದೆ. ಈ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪುರಸಭೆ ವತಿಯಿಂದ ಆಸ್ಪತ್ರೆ ಮುಂದಿನ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.
  ಕೊರತೆಗಳ ನಡುವೆಯೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಡಲಾಗಿದೆ. ಆವರಣದಲ್ಲಿ ಗಿಡ, ಮರ ಬೆಳೆಸುವುದರ ಮೂಲಕ ಉತ್ತಮ ಪರಿಸರ ನಿರ್ಮಿಸಲಾಗಿದೆ. ಇಲ್ಲಿ ವಿಶೇಷವಾಗಿ ಆಯರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುವ ಅಪರೂಪದ ಔಷಧೀಯ ಸಸ್ಯಗಳನ್ನು ಬೆಳೆಯಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
   ಇದಕ್ಕೂ ಮೊದಲು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ತೆರಳಿ ಕುಂದು ಕೊರತೆ ವಿಚಾರಿಸಿದರು. ತೀವ್ರ ನಿಗಾ ಘಟಕ, ಡಯಲಿಸೀಸ್‌ ಘಟಕ ಹಾಗೂ ಅದೇ ಆಸ್ಪತ್ರೆ ಆವರಣದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು.
  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್‌, ಪುರಸಭೆ ಮುಖ್ಯಾಧಿಕಾರಿ ಮೋಹನ್‌ ಕುಮಾರ್‌, ಆರೋಗ್ಯ ನಿರೀಕ್ಷಕ ರಮೇಶ್‌, ಎಂಜಿನಿಯರ್‌ ಶ್ರೀನಿವಾಸ್‌ ಇದ್ದರು.

ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ

ವರದಿ: ಚಂದ್ರಶೇಖರ ಬೀಜಾಡಿ

ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ


ಕುಂದಾಪುರ:ವರಮಹಾಲಕ್ಷ್ಮೀ ಪೂಜೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಕೇವಲ ಮನೆಯಲ್ಲಿ ಮಾಡಿ ನಮ್ಮ ಕುಟುಂಬದ ಬಗ್ಗೆ ಬೇಡಿಕೊಳ್ಳುವುದಕ್ಕಿಂತ ಎಲ್ಲರೂ ಒಟ್ಟು ಸೇರಿ ಮಾಡಿದಾಗ ದೇವರು ಬೇಗನೆ ಒಲಿಯುತ್ತಾನೆ ಎಂದು ಕುಂದಾಪುರ ವ್ಯಾಸರಾಜ ಮಠದ ಅರ್ಚಕ ವೇದಮೂರ್ತಿ ವಿಜಯ ಪೆಜತ್ತಾಯ ಹೇಳಿದರು.
ಅವರು ಶುಕ್ರವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರ ಸೌಧದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಸಂದೇಶ ನೀಡಿದರು.
ವರಮಹಾಲಕ್ಷ್ಮೀ ಎಲ್ಲರಿಗೂ ಸುಖ,ಶಾಂತಿ,ನೆಮ್ಮದಿಯನ್ನು ಕೊಟ್ಟು,ಸಮಾಜವನ್ನು ಒಗ್ಗಟ್ಟಿನಿಂದ ಅಭಿವೃದ್ಥಿ ಪಥದಂತ ತೆಗೆದುಕೊಂಡು ಹೋಗುವ ಶಕ್ತಿ ಕರುಣಿಸಲಿ ಎಂದರು.
ವೇದಿಕೆಯಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಗೌರವಾಧ್ಯಕ್ಷ
ಮಂಜುನಾಥ ಹೊದ್ರೋಳಿ,ಕಾರ್ಯದರ್ಶಿ ಸಂತೋಷ ಗಾಣಿಗ,ಕೋಶಾಧಿಕಾರಿ ಉದಯ ಗಾಣಿಗ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಗೌರವಾಧ್ಯಕ್ಷೆ ಕಲಾವತಿ ಅಚ್ಯುತ್,ಕಾರ್ಯದರ್ಶಿ ವಿಜಯ ಕೃಷ್ಣಮೂರ್ತಿ, ಕೋಶಾಧಿಕಾರಿ ಕಲ್ಯಾಣಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ನಾಗರಾಜ ಬಿ.ಜಿ ಅತಿಥಿಗಳನ್ನು ಗೌರವಿಸಿದ್ದರು.
ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಅಭಿಲಾಷ್ ಬಿ.ಎ ಸ್ವಾಗತಿಸಿದರು.ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷೆ ಪ್ರಭಾವತಿ ಗಾಣಿಗ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಹಾನಿ

JANANUDI NETWORK Photos : Eeugine Dsouza

ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಹಾನಿ

ಉಡುಪಿ ತಾಲೂಕಿನ ಪಾಂಗಳ  ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಭಾರಿ ಹಾನಿಯಾಗಿದ್ದು ದೇವಾಲಯದ ಮೆಲ್ಛಾವಣಿ ಮತ್ತು ಕೆಳ ಛಾವಣಿಗಳ ಹಂಚುಗಳು ಗಾಳಿ ಮಳೆಯಲ್ಲಿ ಹಾರಿ ಹೋಗಿದ್ದು ತುಂಬ ನಶ್ಟ ಉಂಟಾಗಿದೆ.
ಹಂಚುಗಳೆಲ್ಲಾ ದೇವಾಲಯದ ಒಳಗಡೆ ಮತ್ತು ಹೊರಗಡೆ ಚೆಲ್ಲಾ ಪಿಲ್ಲಿಯಾಗಿದ್ದು, ಆಸನಗಳ ಮೇಲೂ ಹಂಚುಗಳು ಬಿದ್ದಿವೆ.
ಕೆಲವರು ಆತಂಕಗೊಂಡು ಪಾಂಗ್ಳ ಚರ್ಚ್ ಧರ್ಮಗುರು ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರಿಗೆ ದೂರವಾಣಿ ಮೂಲಕ ಕೇಳತೊಡಗಿದ್ದಾರೆಂದು ಧರ್ಮಗುರುಗಳು ತಿಳಿಸಿದ್ದಾರೆ. ನಮ್ಮದು ಪಾಂಗ್ಳಾ ಚರ್ಚ್ ಅಥವ ಶಂಕರಪುರ ಚರ್ಚ್, ಹಾನಿಯಾದ ಚರ್ಚ್ ಸಿ.ಎಸ್.ಐ. ಪಾಂಗಳ ಎಂದು ಅವರು ತಿಳಿಸಿದ್ದಾರೆ.

ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು
ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್‌.ರಾಜೀವ್‌ ಹೇಳಿದರು.
  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಹಬ್ಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
  ರಸ್ತೆ ಬದಿ ವ್ಯಾಪಾರಿಗಳು ವಾಹನ ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡದೆ, ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ತಮ್ಮ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬೇಕು. ರಸ್ತೆ ಬದಿಯಲ್ಲಿ ತಳ್ಳುಗಾಡಿಗಳು ಹಾಗೂ ಮಾರಾಟದ ವಸ್ತುಗಳನ್ನು ಇಡುವುದರಿಂದ ಪಾದಚಾರಿಗಳಿಗೆ ಹಾಗೂ ಆಂಬ್ಯುಲೆನ್ಸ್‌ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
  ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಮಾತನಾಡಿ, ವರ ಮಹಾಲಕ್ಷ್ಮಿ ಹಬ್ಬ ಮುಗಿಯುವ ವರೆಗೆ ಫುಟ್ ಪಾತ್‌ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
  ಸನ್ಮಾನ: ಈ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪಡೆದ ಡಿವೈಎಸ್‌ಪಿ ಬಿ.ಕೆ.ಉಮೇಶ್‌ ಅವರನ್ನು ಸನ್ಮಾನಿಸಲಾಯಿತು. 
  ಬಿ.ಕೆ..ಉಮೇಶ್‌ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸರು ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಕಾನೂನನ್ನು ಗೌರವಿಸಿ ಕಾರ್ಯನಿರ್ವಹಿಸಬೇಕು. ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡಬಾರದು. ಕಾನೂನನ್ನು ರಕ್ಷಿಸಿದರೆ, ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
  ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಆರ್‌.ವೆಂಕಟೇಶ್‌, ನರಸಿಂಹಮೂರ್ತಿ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಮುಖಂಡರಾದ ಕೆ.ಕೆ.ಮಂಜು, ರಾಮಾಂಜಮ್ಮ, ಏಜಾಜ್‌ ಪಾಷ, ಈರಪ್ಪ, ಮಹಮದ್‌ ರಫಿ, ಶೇಕ್‌ ಶಫಿವುಲ್ಲಾ ಇದ್ದರು.

ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು

ವರದಿ: ವಾಲ್ಟರ್ ಮೊಂತೇರೊ

ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು


ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೆಳ್ತಂಗಡಿ ಸಂತ ಥಾಮಸ್ ಕಾಲೇಜಿನ ಪ್ರಾಂಶುಪಾಲ ಪಿ.ಪಿ ಜೋಸೆಫ್ ಹೇಳಿದರು. ಸುಮಾರು 32 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಈ ಸ್ತುತ್ಯ ಕಾರ್ಯ ಅಭಿನಂದನೀಯ ಎಂದರು. ಫಲಾನುಭವಿಗಳೇ ಮುಂದೆ ದಾನಿಗಳಾದಾಗ ಸಾಧನೆ ಸಾರ್ಥಕವಾಗುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಎನ್. ತುಕರಾಮ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿನ 44 ನಿಧಿಗಳಿಂದ ಪರಿಸರದ 190 ಮಕ್ಕಳಿಗೆ ಸುಮಾರು ರೂ. 1,35,000 ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಭಾರತೀಯ ಜೇಸಿಸ್‍ನ ವಲಯ 15ರ ಕಾರ್ಯದರ್ಶಿ ರಾಘವೇಂದ್ರ ಕರ್‍ವಾಲ್ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ರಸ್ಟ್ ನಿಧಿ ಇನ್ನಷ್ಟು ಬೆಳೆದು ಹೆಚ್ಚಿನ ಫಲಾನುಭವಿಗಳು ಪ್ರಯೋಜನ ಪಡೆಯುವಂತಾಗಲಿ ಎಂದರು.
ವಲಯ ಪೂರ್ವ ಅಧ್ಯಕ್ಷ ರಾಜೇಂದ್ರ ಭಟ್ ಅವರು ಭಾರತೀಯ ಜೇಸಿಸ್‍ನ ಇತಿಹಾಸದಲ್ಲೇ ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಪ್ರಪ್ರಥಮವಾದುದು ಎನ್ನುತ್ತಾ ಕಾರ್ಕಳ ತಾಲೂಕಿನಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶರಣ್ಯಾ ಶೆಟ್ಟಿಯವರನ್ನು ಅಭಿನಂದಿಸಿದರು. ಟ್ರಸ್ಟ್ ವತಿಯಿಂದ ಶರಣ್ಯಾಳನ್ನು ಸನ್ಮಾನಿಸಲಾಯಿತು.
ಬೆಳ್ಮಣ್ ದೊಡ್ಡಮನೆ ಶ್ರೀನಿವಾಸ ತಂತ್ರಿಯವರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ದತ್ತಿ ನಿಧಿಯೊಂದನ್ನು ಸ್ಥಾಪಿಸಿದರು. ಡಾ| ಪ್ರಕಾಶತ್ಮ ಮತ್ತು ಬೆಳ್ಮಣ್ ಕರಮಡ್ಕ ರಾಮಚಂದ್ರ ರಾವ್ ಇವರು ತಮ್ಮ ಹೆಸರಿನ ನಿಧಿಗಳ ಮೊತ್ತವನ್ನು ಹೆಚ್ಚಿಸಿದರು.
ವೇದಿಕೆಯಲ್ಲಿ ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಸ್, ಟ್ರಸ್ಟ್ ಗೌರವಾಧ್ಯಕ್ಷ ಜಯಂತ್ ರಾವ್ ಪಿ., ಕಾರ್ಯದರ್ಶಿ ಅನಿಲ್ ಕುಮಾರ್, ಖಚಾಂಚಿ ಗಣಪತಿ ಕಾಮತ್, ಯುವ ಜೇಸಿಐ ಅಧ್ಯಕ್ಷ ದೀಕ್ಷಿತ್, ಜೇಸೀರೆಟ್ ಅಧ್ಯಕ್ಷೆ ಪ್ರತಿಭಾ ಎನ್ ರಾವ್ ಉಪಸ್ಥಿತರಿದ್ದರು.
ಟ್ರಸ್ಟ್ ದಾನಿಗಳು ಜೇಸಿ ಪೂರ್ವಾಧ್ಯಕ್ಷರುಗಳು, ಜೇಸಿ ವಲಯಾಧಿಕಾರಿಗಳು, ಶಿಕ್ಷಕರು ಸಹಕರಿಸಿದರು. ಕುಮಾರಿ ಶರಣ್ಯಾ ಮತ್ತು ಗಣೇಶ್ ಫಲಾನುಭವಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತಾ ಶುಭ ಹಾರೈಸಿದರು. ಜೇಸಿಐ ಕಾರ್ಯದರ್ಶಿ ಸರಿತಾ ದಿನೇಶ್ ಧನ್ಯವಾದ ಸಮರ್ಪಿಸಿದರು. ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಇಕೋ ಕ್ಲಬ್‍ನಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ

JANANUDI.COM NETWORK

ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಇಕೋ ಕ್ಲಬ್‍ನಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ

“ಪೋಲಿಸರಿಗೊಸ್ಕರ ಹೆಲ್ಮೇಟ್ ಧರಿಸ ಬೇಡಿ, ನಿಮ್ಮ ಜೀವಕ್ಕಾಗಿ ಹೆಲ್ಮೇಟ್ ಧರಿಸಿ’ ಎಂದು ತಿಳಿಸಿದರು – ಸಭ್ ಇನ್ಸ್‍ಪೆಕ್ಟರ್ ಸುಧಾಕರ”

ಕುಂದಾಪುರ, ಆ.7: ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ನಡೆಯಿತು.
ಪವಿತ್ರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಕಾರ್ಯಕ್ರಮವನ್ನು ಗೀಡಕ್ಕೆ ನೀರು ಬಿಡುವ ಮೂಲಕ ಉದ್ಘಾಟಿಸಿ ‘ಭೂಮಿ ಮತ್ತು ಸ್ವರ್ಗವನ್ನು ರಚಿಸಿದ ಒ ದೇವರೆ ನನಗೆ ನಿನ್ನ ಚಿತ್ತದಿಂದ ರಚಿಸಿದ್ದಿಯಾ, ಈ ಜೀವನ ನನಗೆ ಕಾಣಿಕೆಯಾಗಿ ಕೊಟ್ಟಿದಕ್ಕೆ ನಾವು ಕ್ರತಜ್ಞತೆಯನ್ನು ಸಲ್ಲಿಸುತ್ತೇವೆ. ನಿನ್ನ ಚಿತ್ತಕ್ಕೆ ಅಡ್ಡಿ ಪಡಿಸಲಾರೆವು, ಪ್ರತಿ ಜೀವಕ್ಕೆ ಗೌರವವನ್ನು ಕೊಡುವೇವು, ದೇವರೆ ಇವತ್ತು ನಾವು ನಿನಗೆ ಪ್ರಮಾಣ ವಚನ ನೀಡುತ್ತೇವೆ, ಇವತ್ತಿನಿಂದ ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಲಾರೆವು, ವಿಶೇಷವಾಗಿ ಮಾದಕ ದ್ರವ್ಯಕ್ಕೆ ಬಲಿಯಾಗಲಾರೆವು. ಎಂದು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕುಂದಾಪುರ ಅಸಿಸ್ಟಂಟ್ ಸಭ್ ಇನ್ಸ್‍ಪೆಕ್ಟರ್ ಸುಧಾಕರ ಇವರು ‘ಸಣ್ಣ ವಯಸಿನಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ಒಳಗಾದರೆ, ನಿಮ್ಮ ಜೀವನವೇ ನಾಶವಾಗುತ್ತದೆ, ಮಾದಕ ದ್ರವ್ಯ ಸೇವನೆಯಿಂದ ನಿಮ್ಮ ದೇಹದ ಪ್ರತಿ ಅಂಗ ವೈಫಲ್ಯವಾಗಿ ಸಾವಿನ ದವಡೆಗೆ ಸಿಲುಕುವಿರಿ ನಿಮ್ಮ ಜೀವನ ಅಲ್ಲದೆ ನಿಮ್ಮ ಇಡೀ ಕುಟುಂಬದ ನಾಶಕ್ಕೆ ಕಾರಣಾವಾಗುತ್ತದೆ, ಹಾಗಾಗಿ ಮಾದಕ ದ್ರವ್ಯಕ್ಕೆ ಬಲಿಯಾಗ ಬೇಡಿ ಹಾಗೇ ರಸ್ತೆ ನಿಯಮಗಳನ್ನು ಪಾಲಿಸಿ, ಪರವಾನಿಗೆ ಇಲ್ಲದೆ ವಾಹನ ಚಲಾಯಿಸ ಬೇಡಿ, ಪೋಲಿಸರಿಗೊಸ್ಕರ ಹೆಲ್ಮೇಟ್ ಧರಿಸ ಬೇಡಿ, ನಿಮ್ಮ ಜೀವಕ್ಕಾಗಿ ಹೆಲ್ಮೇಟ್ ಧರಿಸಿ’ ಎಂದು ತಿಳಿಸಿದರು.
ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಸತೀಶ್ ವಡ್ದರ್ಸೆ ಮಳೆಕೊಯ್ಲು ಹೇಗೆ ಮಾಡಬಹುದು, ನೀರಿನ ಪ್ರಾಮುಖ್ಯತೆ, ಹಾಗೆ ಪ್ಲಾಸ್ಟಿಕೆ ದುರ್ಬಳಕೆಯಿಂದ ಆಗುವ ಅನಾಹುತಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವೇದಿಕೆಯ ಮೇಲೆ ಹೇಡ್ ಕಾನ್ಸ್‍ಟೇಬಲ್ ಮಂಜುನಾಥ್, ಕಾನ್ಸ್‍ಟೇಬಲ್ ಮಂಜುನಾಥ್, ಸಹ ಪ್ರಾಂಶುಪಾಲೆ ಮಂಜುಳಾ ನಾಯರ್, ಕಾರ್ಯಕ್ರಮದ ಸಂಚಾಲಕಿ ಪ್ರಾದ್ಯಾಪಕಿ ದಿಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾದ್ಯಾಪಕಿ ನಿಶಾ ಸುವಾರಿಸ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜೆನಿಶಾ ನಜ್ರೆತ್ ನಿರೂಪಿಸಿದರು. ಸಿಯಾರ ಡಿಸಿಲ್ವಾ ವಂದಿಸಿದರು.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ.  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ -ವಾಹನ ಸಂಚಾರ ಸ್ಥಗಿತ

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ.  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ –  ವಾಹನ ಸಂಚಾರ ಸ್ಥಗಿತ

ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತ.ನಾಳೆ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತವಾಗಿರುತ್ತದೆ ಎಂದು ತಿಳಿದು ಬಂದಿದೆ. 
ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕು.
ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದು
ಇಂದು ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ  ಬೆಳಗಾವಿ ಪೊಲೀಸರು  ಸಂಚಾರ ಸ್ಥಗಿತ ಗೊಳಿಸಿದ್ದಾರೆ