HOLY ROSARY CHURCH, KUNDAPUR – 450 th JUBILEE SOUVENIR 2021

ಕಥೋಲಿಕ್ ಸಭಾ ಥಾವ್ನ್ ಸ್ವಾತಂತ್ರ್ಯತ್ಸೋವ್ ದಿವಸ್ ಆನಿ ಪ್ರತಿಭಾ ಪುರಸ್ಕಾರ್

JANANUDI NETWORK

ಕಥೋಲಿಕ್ ಸಭಾ ಥಾವ್ನ್ ಸ್ವಾತಂತ್ರ್ಯತ್ಸೋವ್ ದಿವಸ್ ಆನಿ ಪ್ರತಿಭಾ ಪುರಸ್ಕಾರ್


ಕುಂದಾಪುರ್, ಆ.15: ಸ್ವಾತಂತ್ರ್ಯ್ ಆಚರಣ್ ಆನಿ ಪ್ರತಿಭಾ ಪುರಸ್ಕಾರ್: ಕಥೋಲಿಕ್ ಸಭಾ ಕುಂದಾಪುರ್ ಘಟಕಾ ಥಾವ್ನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೈದಾನಾರ್ 73 ವ್ಯೊ ಸ್ವಾತಂತ್ರ್ಯತ್ಸೋವ್ ದಿವಸ್ ಆಚರಣ್ ಕೆಲೊ. ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾನ್ ಎನ್.ಸಿ.ಸಿ. ಕೇಡೆಟಾ ಥಾವ್ನ್ ಗೌರವ್ ಸ್ವೀಕಾರ್ ಕರ್ನ್ ಭಾರತಾಚೊ ಭಾವ್ಟೊ ರೋಹಣ್ ಕರ್ನ್. ‘ಆಮ್ಕಾಂ ಹೊ ಸ್ವಾತಂತ್ರ್ ಆಮ್ಚ್ಯಾ ಹಜಾರೊ ಮಲ್ಘಡಾಂಚ್ಯಾ ಪ್ರಾಣ್ ಬಲಿದಾನ್ ವರ್ವಿಂ ಮೆಳ್ಳ್ಯಾ, ಆಮ್ಚೊ ದೇಶ್ ಆಜ್ ಕಾಲ್ ಐ.ಸಿ.ಯು. ಂತ್ ಆಸ್ಲ್ಯಾ ಬರಿ ಜಾಲಾಂ. ರಾಜಕೀಯ ಸಮಸ್ಯೆ ಚಡ್ಲ್ಯಾತ್. ದೇಶ್ ಭರ್ ವಾದಾಳ್ ವಾರೆ ಪಾವ್ಸಾ ವರ್ವಿಂ ಅನೇಕ್ ಲೋಕ್ ನಿರ್ಗತಿಕ್ ಜಾಲ್ಯಾ. ಆಮಿ ತಾಂಕಾಂ ಬೊರ್ಯಾ ಮನಾನ್ ಕುಮೊಕ್ ದಿಂವ್ನ್ ಆಮ್ಚೊ ನೀಜ್ ದೇಶ್ ಪ್ರೇಮ್ ದಾಖಂವ್ನ್ ದಿಂವ್ಯಾ ಮ್ಹಣನ್ ತಾಣಿ ಸಂದೇಶ್ ದಿಂವ್ನ್ ಶುಭಾಷಯ್ ಪಾಠಯ್ಲೆ.
ವಿಗಾರ್ ಭೋವ್ ಮಾನಾಧಿಕ್ ಬಾ|ಸ್ಟ್ಯಾನಿ ತಾವ್ರೊನ್ ಮರಿಯೆಚೆ ಸ್ವರ್ಗಾರೋಹಣಾಚೆಂ ಫೆಸ್ತಾಚೆಂ ಬಲಿದಾನ್ ಭೆಟಂವ್ನ್ ‘ಮರಿ ಆಮ್ಚಿ ಮಾತಾ, ಪವಿತ್ರ್ ಸಭೆಂತ್ ಮರಿಯೆ ಮಾಯೆಕ್ ಅತ್ಯಂತ್ ಗೌರವ್ ಆಸಾ. ಜೆಜುಚಿ ಮಾತಾ ತಿ, ತಿಚ್ಯಾ ಉತ್ತಿಮ್ ಕನ್ರ್ಯಾನಿಂ ತಿಕಾ ಜೆಜುನ್ ಉಂಚ್ ಉಭಾರ್ಲೊ ಆನಿ ಆಪ್ಲ್ಯಾ ಬರಿ ಸ್ವರ್ಗಾಕ್ ಉಭಾರ್ನ್ ಘೆತ್ಲೊ’ ಮ್ಹಣನ್ ತಾಣಿ ಸಂದೇಶ್ ದಿಲೊ. ಸ್ವಾತಂತ್ರ್ಯ ವಿಶಿಂ ತಾಣಿ ‘ಆಮ್ಕಾಂ ಪಯ್ಲೆಂ ಪರ್ಗಾಂವ್ಚ್ಯಾನಿ ಗುಲಾಮ್ ಕರ್ನ್ ಘೆತ್ಲೆಂ. ದೇಶ್ ಭಕ್ತಾನಿಂ ತಾಂಚೊ ಜೀವ್ ಬಲಿದಾನ್ ಕರ್ನ್ ಆಮ್ಕಾ ಸ್ವಾತಂತ್ರ್ ಘೆಂವ್ನ್ ದಿಲೆಂ. ಪುಣ್ ಆಜ್ ಆಮ್ಕಾ ಖರೆ ಸ್ವಾತಂತ್ರ್ ಆಸಾಗಿ ಮ್ಹಣನ್ ಚಿಂತುಕ್ ಯೆತಾಂ ಏಕಾ ಥರಾಚೆಂ ಆಮಿ ಗುಲಾಮ್ ಜಾಂವ್ನಾಸಾಂವ್ ಮ್ಹಳ್ಯಾ ಬರಿ ಭೊಗ್ತಾ’ ಮ್ಹಣನ್ ತಾಣಿ ಕಳಯ್ಲೆ.
ಧ್ವಜ್ ವಂದನ್ ಕಾರ್ಯಕ್ರಮಾ ಉಪ್ರಾಂತ್ ವಿಗಾರ್ ಭೋವ್ ಮಾನಾಧಿಕ್ ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ವಿಗಾರ್ ವಿಜಯ್ ಡಿಸೋಜಾನ್ ಧಾವಿ, ಪಿ.ಯು.ಸಿ. ಪದ್ವಿ, ಆನಿ ಸ್ನಾಕೋತ್ತರ್ ಪದ್ವೆಂತ್ ಉತ್ತಮ್ ಅಂಕ್ ಘೆಂವ್ನ್ ಸಾಧನ್ ಕೆಲ್ಯಾ ವಿಧ್ಯಾರ್ಥಿಂಕ್ ಕಥೊಲಿಕ್ ಸಭಾ ತರ್ಪೆನ್ ಇನಾಮ್, ಪದಕ್ ಆನಿ ಮಾನ್‍ಪತ್ರ್ ದಿಂವ್ನ್ ಮಾನ್ ಕೆಲೊ. ಪ್ರಾಂಶುಪಾಲ್ ಬಾ|ಪ್ರವೀಣ್ ಎ ಮಾರ್ಟಿಸ್, ಕಥೊಲಿಕ್ ಸಭಾ ನಿಯೋಜಿತ್ ಅಧ್ಯಕ್ಷ್ ಬರ್ನಾಡ್ ಡಿಕೋಸ್ತಾ, ನಿರ್ಗಮನ್ ಅಧ್ಯಕ್ಷಿಣ್ ಶೈಲಾ ಡಿಆಲ್ಮೇಡಾ, ಖಜಾಂಚಿ ಪ್ರೇಮಾ ಡಿಕುನ್ಹಾ, ಉಪಾಧ್ಯಕ್ಷಿಣ್ ಜೂಲಿಯೆಟ್ ಪಾಯ್ಸ್ ಆನಿ ಘಟಕಾಚೆಂ ಹೇರ್ ಪದಾಧಿಕಾರಿ ಹಾಜಾರ್ ಆಸ್ಲೆಂ. ಘಟಕಾಚೊ ಅಧ್ಯಕ್ಷ್ ವಾಲ್ಟರ್ ಡಿಸೋಜಾನ್ ಸ್ವಾಗತ್ ಮಾಗ್ಲೊ. ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾನ್ ಉಪ್ಕಾರ್ ಆಟಾಯ್ಲೊ. ವಿಲ್ಸನ್ ಒಲಿವೆರಾನ್ ಕಾರ್ಯೆ ಚಲವ್ನ್ ವೆಲೆಂ.

 

 

ಉತ್ತಮ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಇವರಿಗೆ  ಕೇಂದ್ರ ಗೃಹ ಮಂತ್ರಿಗಳ ಪದಕ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಉತ್ತಮ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಇವರಿಗೆ  ಕೇಂದ್ರ ಗೃಹ ಮಂತ್ರಿಗಳ ಪದಕ

ಕೋಲಾರ: ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಅವರು ಶ್ರೇಷ್ಠ ಮಟ್ಟದ ತನಿಖೆಯನ್ನು ಕೈಗೊಂಡಿರುವುದಕ್ಕಾಗಿ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿಗಳ ಪದಕಕ್ಕೆ ಭಾಜನರಾಗಿರುತ್ತಾರೆ. 

ಪ್ರಸ್ತುತ ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್. ಜಾಹ್ನವಿ ಅವರು ಸಿಐಡಿ ವಿಭಾಗದಲ್ಲಿ ನಿರ್ವಹಿಸಿದ ತನಿಖೆಯನ್ನು ಆಧರಿಸಿ ಪದಕ ಪ್ರಧಾನ ಮಾಡಲಾಗಿರುತ್ತದೆ. 

ಬಿ.ಎಸ್. ಸತೀಶ್ ಅವರು 2018 ನೇ ಸಾಲಿನಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ 6 ಪೋಕ್ಸೋ ಆಕ್ಟ್ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಯನ್ನು 2 ದಿನಗಳಲ್ಲಿ ಬಂಧಿಸಿ, 16 ದಿನಗಳಲ್ಲಿ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ನಂತರ ಕೇವಲ 18 ದಿನಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುಗಿಸಿ 19ನೇ ದಿನದಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ತನಿಖೆಗಾಗಿ ಬಿ.ಎಸ್.ಸತೀಶ್ ಅವರಿಗೆ ಕೇಂದ್ರದ ಗೃಹ ಮಂತ್ರಿಗಳ ಪದಕ ದೊರಕಿರುತ್ತದೆ. 

ಪದಕ ಪುರಸ್ಕøತ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ ಅವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ

JANANUDI.COM NETWORK

 

ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ


ಕುಂದಾಪುರ: ಕನ್ನಡ ಸಾಹಿತ್ಯದ ವಾಸ್ತವಿಕ ನೆಲೆಗಳ ಹೊಸ ಬಗೆಯ ಚಿಂತನೆಗಳ ಭಾಗವಾಗಿ ಹೆಚ್.ಎಸ್. ಅನುಪಮಾ ನಿಂತಿದ್ದಾರೆ ಅವರ ಕೃತಿಗಳಲ್ಲಿ ನಮ್ಮನ್ನು ನಾವೇ ಅರ್ಥ ಮಾಡಿಕೊಲ್ಳುವ ಚಿಂತನೆಗಳನ್ನು ಅವರ ಬರಹಗಳಾಗಲಿ ಅಥವಾ ಕವಿತೆಗಳಾಗಲಿ ಹಾಗೆ ಕಥೆಯಾಗಲಿ ಹುಟ್ಟುಹಾಕುತ್ತದೆ ಎಂದು ಲೇಖಕರಾದಶಿವಮೊಗ್ಗದ ಡಾ.ಎಸ್. ಸಿರಾಜ್ ಅಹಮದ್ ಹೇಳಿದರು. ಅಭಿಪ್ರಾಯಪಟ್ಟರು.
ಅವರುಆಗಸ್ಟ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪುರಸ್ಕøತಕೃತಿ“ಚಿವುಟಿದಷ್ಟೂಚಿಗುರು”ಕುರಿತು ಮಾತನಾಡುತ್ತಿದ್ದರು.
ಅನುಪಮಾ ವೃತ್ತಿಯಲ್ಲಿ ವೈದ್ಯೆಯಾದರೂ ಪ್ರವೃತ್ತಿಯಲ್ಲಿ ಹಲವಾರು ಕ್ಷೇತ್ರಗಳ ಬಾಗವಾಗಿ ನಿಂತಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡರೂ ಅವರು ಬಹಳ ವಾಸ್ತವಿಕ ನೆಲೆಯಲ್ಲಿ ಸಮಾಜವನ್ನು ನೋಡುವ ದೃಷ್ಟಿಕೋನ ಅವರ ಬರಹಗಳಲ್ಲಿ ಕಾಣುತ್ತದೆ. ನಾವು ಓದುಗರು ಅವನ್ನು ಬಹಳ ಬೇರೇನೆ ರೀತಿಯಲ್ಲಿಅರ್ಥ ಮಾಡಿಕೊಳ್ಳಬೇಕು. ಹೊಸತನದ ಹುಡುಕಾಟದಲ್ಲಿರುವ ಈ ವ್ಯವಸ್ಥಯಲ್ಲಿಅನುಪಮಾ ಅವರ ರಚನೆಗಳು ನಮ್ಮನ್ನು ರಾಜಕೀಯವಾಗಿ ಸಾಂಸ್ಕøತಿವಾಗಿ ಸಾಮಾಜಿಕವಾಗಿರುವಂತಹ ಅಂಶಗಳನ್ನು ಪರಿಪೂರ್ಣಗೊಳಿಸುತ್ತವೆಎಂದು ಹೇಳಿದರು. .
ಅವರ ಕೃತಿಗಳು ಹೊಸ ಆಯಾಮಗಳ ಬಾಗವಾಗಿರುತ್ತವೆ. ಪ್ರಶಸ್ತಿ ಪುರಸ್ಕøತಕೃತಿ“ಚಿವುಟಿದಷ್ಟೂಚಿಗುರು”ಇದರಲ್ಲಿನ ಕಥೆಗಳು ಸಮಾಜದ ಆತಂಕ, ತುಮುಲ, ನಂಬಿಕೆಗಳನ್ನು ಸಂಬಂಧ, ಈಗಿನ ಜೀವನಕ್ರಮದ ಯೋಚನಾಲಹರಿಗಳನ್ನು ಬೇರೆಬೇರೆ ವ್ಯಕ್ತಿತ್ವಗಳ ಮೂಲಕ ಓದುಗನಿಗೆ ತೆರೆದಿಡುತ್ತಾ ಹೋಗುತ್ತವೆ. ಇದಲ್ಲದೇಅವರ ಬಿಡುಗಣ್ಣಿನ ನೋಟಗಳು ಸೂಕ್ಷ್ಮ ಗ್ರಹಿಕೆಗಳು ಅನುಪಮಾ ಅವರ ಪ್ರತಿಯೊಂದು ರಚನೆಗಳು ನಾವು ನೀವು ಬದುಕುವ ಈ ವರ್ತಮಾನದ ಸಂಘರ್ಷಗಳನ್ನು ದೈನಂದಿನ ದಿನಚರಿಗಳನ್ನು ಹೇಳುತ್ತಾ ಹೋಗುತ್ತವೆ. ನಮ್ಮದೇ ಜೀವನದ ಸಂಗತಿಗಳೇನೋ ಇದು ಎನ್ನುವಂತೆ ಭಾಸವಾಗಿವಷ್ಟು ನಮ್ಮ ಅನುಭವಗಳ ಹೂರಣವಾಗಿ ನಮ್ಮಕಣ್ಮಂದೆ ಬಂದು ನಿಲ್ಲುತ್ತವೆ.ಎಂದು ಅಭಿಪ್ರಾಯಪಟ್ಟರು.
ಕೇವಲ ವರ್ತಮಾನದ ಬದುಕಿಗಷ್ಟೇ ಅವರರಚನೆ ಸೀಮಿತವಾಗಿಲ್ಲ. ಸಾಮಾಜಿಕ, ರಾಜಕೀಯ, ಸಂವಿಧಾನ, ಗೋಹತ್ಯೆ, ಗೋರಕ್ಷಣೆ, ಮಾತೃತ್ವದ ಹೃದಯದ ತುಮುಲಗಳು ಅತ್ಯಾಚಾರ, ಅನ್ಯಾಯ, ಹೋರಾಟ,ಚಿಂತಕರು ಪ್ರಾಜ್ಞರು ಪ್ರವಾಸ ಹೀಗೆ ಹತ್ತು ಹಲವು ವಿಷಯಗಳು ಅವರ ರಚನೆಗಳಲ್ಲಿ ಪಾರುಪತ್ಯೆ ಪಡೆದಿವೆ ಎಂದರೆ ಅತಿಶಯೋಕ್ತಿಅಲ್ಲ. ಇಷ್ಟೊಂದು ದೀರ್ಘ ಮತ್ತು ಸಂಕೀರ್ಣ ಸವಾಲುಗಳನ್ನು ಎದುರಿಸುವದರ ಮಧ್ಯೆನಾವು ನಮ್ಮನ್ನೇ ಅರ್ಥ ಮಾಡಿಕೊಂಡಷ್ಟು ಅನುಭವ ಅವರ ಪ್ರಶಸ್ತಿ ಕೃತಿಯಲ್ಲಿದೆ. ನಮ್ಮ ಬದುಕಿನರೀತಿ ನೀತಿಗಳು, ನಮ್ಮಗರಿಷ್ಠ ವಾಸ್ತವಿಕತೆಯ ತುಮುಲಗಳು ಸವಾಲುಗಳು ನಮ್ಮನ್ನು ಆವರಿಸಿಕೊಂಡಿದೆ ಎಂದರೆ ಅದರಿಂದ ಬಿಡಿಸಿಕೊಳ್ಳೋದು ಕಷ್ಟ.ಅದಕ್ಕೆಗರಿಷ್ಠ ಹಂತಹ ಮಾಹಿತಿಯೂಗರಿಷ್ಠ ಅರ್ಥಮಾಡಿಕೊಳ್ಳುವಿಕೆಯೂ ನಮ್ಮಲ್ಲಿ ಇರಬೇಕು. ಅಲ್ಲಿ ನಮ್ಮ ಅಭಿಪ್ರಾಯಗಳು ಸೋಲಬಹುದು ಹಾಗಿದ್ದಾಗ ಒಬ್ಬ ಸಾಹಿತಿ ಇಡಿ ಭೂಮಿಯನ್ನು ಕಿವಿಯಿಂದ ಕೇಳಿದಾಗ ಮಾತ್ರ ಅದು ಸಾಧ್ಯ. ಅನುಪಮಾ ಅಂತಹಒಬ್ಬ ಬರಹಗಾರರಲ್ಲಿ ಕಥೆಗಾರರಲ್ಲಿಒಬ್ಬರಾಗಿದ್ದಾರೆ. ವರೊಂದು ಕ್ಯಾನ್‍ವಾಸ್ ಇದ್ದ ಹಾಗೆ ಮನಸಿಗೆ ಅನಿಸಿದ್ದನ್ನು ಅನುಭವಿಸಿದ್ದನ್ನು ತನ್ನ ಕಥೆಗಳಲ್ಲಿ ಚಿತ್ರಿಕರಿಸುತ್ತಾ ಹೋಗುತ್ತಾರೆ. ಸಣ್ಣ ವಿಷಯ ವಿದ್ದರೂ ಅದರಲ್ಲಿ ಜೋವಂತಿಕೆ, ಭಾವನೆ ಮತ್ತು ಸಂವೇದನೆಯನ್ನುv Àುಂಬುವ ಕೆಲಸ ಕಥೆಗಾರನದ್ದಾಗಿರುತ್ತದೆ. ಅಂತಹ ಒಂದು ಪ್ರಯತ್ನ ಈ ಕೃತಿಯಲ್ಲಿ ಆಗಿದೆ. ಭೀನ್ನ ಆಲೋಚನಾ ಕ್ರಮ, ನೆಲೆಗಳು, ಚಿಂತನೆಗಳ ಮಧ್ಯೆ ಮಾನವೀಯ ಸಂಬಂಧಗಳ ಹುಡುಕಾಟದಲ್ಲಿ ಅನುಪಮಾ ಹೊಸದೊಂದನ್ನುP Àಟ್ಟಿಕೊಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಎಂದು ಅವರು ಹೇಳಿದರು.
ಡಾ.ಎಚ್.ಎಸ್.ಅನುಪಮಾ ಅವರು ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ತುಂಬಾ ಸಂತೋಷವೆನಿಸುತ್ತದೆ. ನನ್ನ ತಾಯಿಯ ಮನೆ ಮತ್ತುಗಂಡನ ಮನೆಯ ಸಂಬಂಧವನ್ನು ಈ ಪ್ರಶಸ್ತಿ ಗಟ್ಟಿಗೊಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್‍ಅವರು ಪ್ರಶಸ್ತಿ ಪ್ರದಾನ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಸಮಿತಿ ಸದಸ್ಯರುಗಳಾದ ಕೋಟ ಶಿವಾನಂದ ಕಾರಂತ, ವಸಂತ ಬನ್ನಾಡಿ ಮತ್ತುಜನಕಿ ಬ್ರಹ್ಮಾವರ, ಡಾ.ಹೆಚ್.ಶಾಂತಾರಾಮ್ ಅವರಧರ್ಮ ಪತ್ನಿ ವಿಜಯಲಕ್ಷ್ಮಿ ಶಾಂತಾರಾಮ್ ಬಸ್ರೂರು ಶಾರದಾ ಕಾಲೇಜಿನ ಪ್ರಾಮಶುಪಾಲರಾದ ಪ್ರೊ.ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿಸದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಯೋಜಕರಾದ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ.ಜಿ.ಎಮ್.ಗೊಂಡ ವಂದಿಸಿದರು. ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿಸದರು. ಉಪನ್ಯಾಸಕಿ ಸವಿತಾ ಕೆ. ಪರಿಚಯಿಸಿದರು.
ಇಂದು ಬೆಳಿಗ್ಗೆ ಡಾ.ಹೆಚ್.ಶಾಂತಾರಾಮ್‍ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯಿಂದ ಕೈ – ತಾರಸಿ ತೋಟ ರಚನೆ ತಿಳುವಳಿಕೆ

 

JANANUDI.COM NETWORK

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯಿಂದ ಕೈ – ತಾರಸಿ ತೋಟ ರಚನೆ ತಿಳುವಳಿಕೆ

 

ಕುಂದಾಪುರ, ಆ.13: ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ತೋಟಗಾರಿಕೆ ಪಿತಾಮಹ ಡಾ|ಎಮ್.ಎಚ್.ಮರಿಗೌಡರ ಜನ್ಮ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ದಿನ ಹಾಗೂ ತೋಟಗಾರಿಕೆ ಸಪ್ತಾಹ ಕಾರ್ಯಕ್ರಮದಡಿ ಕೈ ತೋಟ – ತಾರಸಿ ತೋಟ ರಚನೆ ತಿಳುವಳಿಕೆಯ ವಿಚಾರ ಸಂಕೀರಣ ಕಾರ್ಯಕ್ರಮ ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಗೋಸ್ತ್ 12 ರಂದು ನಡೆಯಿತು.
‘ಕೈ ತೋಟ ಹೇಗೆ ರಚಿಸುವುದು, ತಾರಸಿ ತೋಟ ಹೇಗೆ ರಚಿಸುವುದರ ಬಗ್ಗೆ, ಆ ಗೀಡಗಳನ್ನು ಹೇಗೆ ಪೆÇೀಷಿಸುವುದು, ನಾವು ಕೆಮಿಕಲ್ ಹಾಕಿದ ತರಕಾರಿ ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ, ಅದರಿಂದ ನಮ್ಮ ಆರೋಗ್ಯ ಕೆಡುತ್ತದೆ, ಜೀವ ನಿರೋದಕ ಶಕ್ತಿ ಕುಂದುವುದು, ಆದರಿಂದ ನಾವು ನಮ್ಮ ತಾರಸಿ ಮೇಲೆ, ಕೈ ತೋಟದಲ್ಲಿ ಗುಣ ಮಟ್ಟದ ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಸಿ ಆರೋಗ್ಯವಂತರಾಗೋಣ’ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂಜೀವ ನಾಯ್ಕ್ ಇವರು ಸಂಪೂರ್ಣವಾದ ತಿಳುವಳಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ನಮ್ಮ ಹಿಂದಿನವರು ಕೈ ತೋಟವನ್ನು ಮಾಡಿಕೊಂಡು ಮನೆಯ ತರಕಾರಿಗಳನ್ನೆ ತಿನ್ನುತಿದ್ದರು. ಮನೆ ತೋಟಗಳಲ್ಲಿ ಫಲ ನೀಡಿದ ತರಕಾರಿ ಹಣ್ಣು ಹಂಪಲುಗಳಿಂದ ಉತ್ತಮ ಆರೋಗ್ಯ ಲಬಿಸುತ್ತದೆ, ಆದರಿಂದ ನಾವೆಲ್ಲಾ ಕೈ ತೋಟ ಅಥವ ತಾರಸಿ ತೋಟ ರಚಿಸೋಣ’ ಎಂದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಸುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಸ್ತ್ರೀ ಸಂಘಟನೆಯ ಸಚೇತಕಿ ಭಗಿನಿ ಆಶಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವೈಲೆಟ್ ತಾವ್ರೊ, ಕಾರ್ಯದರ್ಶಿ ಸಂಗೀತ ಪಾಯ್ಸ್, ಉಪಾಧ್ಯಕ್ಷೆ ವಿನಯಾ ಡಿಕೋಸ್ತಾ, ಖಚಾಂಚಿ ವೀಣಾ ಡಿಆಲ್ಮೇಡಾ, ಸಹಕಾರ್ಯದರ್ಶಿ ಜೂಲಿಯಾನ ಮಿನೇಜೆಸ್ ಮುಂತಾದ ಪದಾಧಿಕರಿಗಳು ಉಪಸ್ಥಿತರಿದ್ದರು. ಸ್ತ್ರೀ ಸಂಘಟನೇಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಲಯ ಪ್ರತಿನಿಧಿ ವಿಕ್ಟೋರಿಯಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮನ ಅಧ್ಯಕ್ಷೆ ವಂದಿಸಿದರು.

ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ

ಕೋಲಾರ: ಪಡೆದ ಸಾಲ ಮರುಪಾವತಿಸುವ ಬದ್ದತೆ ತೋರಿ, ನಿವೇಶನ ಮತ್ತು ಮನೆ ಅಡಮಾನ ಸಾಲವನ್ನು ನೀವು ಸಕಾಲದಲ್ಲಿ ಪಾವತಿಸದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಬೇಕಾಗುತ್ತದೆ ಎಂದು ಸಾಲ ಪಡೆದ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಎಂ.ಗೋವಿಂಡಗೌಡ ಎಚ್ಚರಿಕೆ ನೀಡಿದರು.ಭಾನುವಾರ ಡಿಸಿಸಿ ಬ್ಯಾಂಕಿಗೆ ಅಡಮಾನ ಸಾಲ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳ ಮನೆಗೆ ಖುದ್ದು ಭೇಟಿ ನೀಡಿದ ಅವರು, ಸಾಲ ಮರುಪಾವತಿವಂತೆ ಗ್ರಾಹಕರಿಗೆ ತಾಕೀತು ಮಾಡಿದರಲ್ಲದೇ, ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕಾದ ಜವಾಬ್ದಾರಿ ನಿಮ್ಮಮೇಲಿದೆ ಎಂದು ಕಿವಿಮಾತು ಹೇಳಿದರು.
ಸಾಲ ಪಡೆದುಕೊಳ್ಳಲು ಸಾಕಷ್ಟು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಂಜೂರು ಮಾಡಿಸಿಕೊಳ್ಳುತ್ತೀರಾ, ಅಷ್ಟೇ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು ಎಂಬ ಜವಾಬ್ದಾರಿಯಿಲ್ಲವೇ, ಬಡ ಮಹಿಳೆಯರಿಗೆ, ರೈತರಿಗೆ ಇರುವ ಪ್ರಾಮಾಣಿಕತೆ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.ಬ್ಯಾಂಕಿನಿಂದ ಸಾಲ ಪಡೆದ 35ಕ್ಕೂ ಹೆಚ್ಚು ಮಂದಿ ಅಡ ಮಾನ ಸಾಲದ ಕಂತುಗಳನ್ನು ಪಾವತಿ ಮಾಡುತ್ತಿಲ್ಲ. ಅಧಿಕಾರಿಗಳು ಸಾಲ ಕೇಳಲು ಮನೆ ಬಳಿಗೆ ಬರಲು ನಿಮ್ಮ ವರ್ತನೆಗೆ ಬೇಸತ್ತಿದ್ದಾರೆ. ನಿಮಗೆ ಇರುವ ಆರ್ಥಿಕ ಅದಾಯದ ಆಧಾರದ ಮೇಲೆ ಅಡಮಾನ ಸಾಲ ನೀಡಲಾಗಿದೆ. ಪ್ರತಿ ತಿಂಗಳು ಕಂತು ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದ್ದರೂ ಮರುಪಾವತಿಗೆ ಏನು ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದರೆ ಸುಮ್ಮನೆ ಬಿಡುತ್ತಿರಲಿಲ್ಲ, ಮನೆ ಮುಂದೆ ಡಂಗೋರ ಸಾರಿ ಅವಮಾನ ಮಾಡುತ್ತಿದ್ದರು, ಅವರ ರೀತಿ ನಾವು ಮಾಡೋದಕ್ಕೆ ಹೋಗಲ್ಲ. ಕಂತು ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಬೇರೆಯವರಿಗೆ ಸಾಲ ವಿತರಿಸಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಸಾಲ ಮರು ಪಾವತಿ ಮಾಡದಿದ್ದರೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಯಾರ ಮುಲಾಜಿಗೂ ಒಳಗಾಗದೆ ಕ್ರಮಕೈಗೊಳ್ಳಲಾಗುವುದು. ಇದರಿಂದ ಅಡಮಾನ ಇಟ್ಟಿರುವ ನಿವೇಶನ ಅಥವಾ ಮನೆ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಅರಿತು ಮರುಪಾವತಿ ಮಾಡಿ ಎಂದು ಸೂಚಿಸಿದರು.
ನಗರದ ಕಾಠರಿಪಾಳ್ಯದ ಪುಷ್ಪಮ್ಮ ಮಗ ಪಡೆದಿದ್ದ ಸಾಲವನ್ನು ಸ್ಥಳದಲ್ಲೇ 50 ಸಾವಿರ ಸಾಲ ಮರುಪಾವತಿ ಮಾಡಿ ಮಾತನಾಡಿ, ಕಷ್ಟಕ್ಕೆ ಪಡೆದುಕೊಂಡಿರುವ ಸಾಲ ಮರುಪಾವತಿ ಮಾಡಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತಿರುತ್ತವೆ. ಎಲ್ಲಿ ಸಾಲ ಮಾಡಿದರೂ ಪಾವತಿ ಮಾಡಬೇಕಾದ ಜವಾಬ್ದಾರಿ ಇದೆ. ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದುಕೊಂಡು ತಡವಾಗಿ ಕೊಟ್ಟರು ಪುನಃ ಅವರಿಂದ ಸಾಲ ದೊರೆಯುವುದಿಲ್ಲ, ಬ್ಯಾಂಕ್ ಪದ್ದತಿಯೂ ಅಷ್ಟೇ ಎಂದರು.ಪಡೆದುಕೊಂಡ ಸಾಲ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದರೆ ಮರು ಪಾವತಿ ಮಾಡಲು ಸುಲಭವಾಗುತ್ತದೆ. ಉಳಿದ ಬಾಕಿ ಮೊತ್ತವನ್ನು ಮಂಗಳವಾರದೊಳಗೆ ಪಾವತಿ ಮಾಡಿಸುವುದಾಗಿ ಎಂದು ಭರವಸೆ ನೀಡಿದರು.
ನಗರದ ಸಿ.ಬೈರೇಗೌಡ ನಗರ, ಕೀಲುಕೋಟೆ, ಮುನೇಶ್ವರ ನಗರ, ಕಾಠರೀಪಾಳ್ಯ, ಕಾರಂಜಿಕಟ್ಟೆ, ಕುರುಬರಪೇಟೆ ಬಡಾವಣೆಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಭೇಟಿ ನೀಡಿ ಸಾಲ ವಸೂಲಿ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಬ್ಯಾಂಕಿನ ಸಿಬ್ಬಂದಿ ಅಮಿನಾ, ಪ್ರಶಾಂತ್ ಮತ್ತಿತರರಿದ್ದರು..

ನಾಳೆ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ.ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಚ್ಚರಿಕೆ:ಡಿಸಿ ಹೆಪ್ಸಿಬಾ ರಾಣಿ

jananudi.com network

ನಾಳೆ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ.ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಚ್ಚರಿಕೆ:ಡಿಸಿ ಹೆಪ್ಸಿಬಾ ರಾಣಿ

ಕುಂದಾಪುರ, ಆ. 12: ಉಡುಪಿ :ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆಮಂಗಳವಾರ  (ಆಗಸ್ಟ್13) ಯಾವುದೇ ರಜೆ ಘೋಷಣೆ ಆಗಿಲ್ಲ.ಜಿಲ್ಲಾಧಿಕಾರಿ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಳ  ಹೆಸರಿನಲ್ಲಿ ರಜೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಅನಧಿಕೃತವಾಗಿ ಸುದ್ದಿ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.

ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು

JANANUDI.COM NETWORK  PHOTOS: ALTON REBEIRO

ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು

ಕುಂದಾಪುರ, ಆ.12: ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಸದಸ್ಯರು ಕುಂದಾಪುರ ಹಂಗಳೂರು ಮೊಯಿದ್ದೀನ್ ಜುಮ್ಮಾ ಮಸೀದಿ ಭೇಟಿ ನೀಡಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ತಾ ಅವರು ಕೆಥೊಲಿಕ್ ಸಭಾ ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಮುಸ್ಲಿಂ ಬಾಂಧವರಿಗೆ ವಿವರಿಸಿದರಲ್ಲದೆ ಹಬ್ಬದ ಸಲುವಾಗಿ ಶುಭಾಶಯಗಳನ್ನು ಕೋರಿದರು.

ಕುಂದಾಪುರ ವಲಯ ಕೆಥೊಲಿಕ್ ಸಭಾ ಅಧ್ಯಕ್ಷರಾದ ಹೆರಿಕ್ ಗೊನ್ಸಾಲ್ವಿಸ್ ಮಸೀದಿಯ ಮುಖ್ಯಸ್ಥರಿಗೆ ಹೂಗುಚ್ಛ ನೀಡುವುದರೊಂದಿಗೆ ಶುಭಾಶಯ ಕೋರಿದರು

    ಕೆಥೊಲಿಕ್ ಸಭಾ ವಲಯ ಕಾರ್ಯದರ್ಶಿ ಲೀನಾ ತಾವ್ರೊ, ಕೋಶಾಧಿಕಾರಿ ವಿಲ್ಸನ್ ಡಿ ಆಲ್ಮೇಡಾ, ಕೇಂದ್ರಿಯ ಸಮಿತಿಯ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ವಲಯ ರಾಜಕೀಯ ಸಂಚಾಲಕರಾದ ಆರ್ಚಿಬಾಲ್ಡ್ ಕ್ವಾಡ್ರಸ್, ವಲಯ ಉಪಾಧ್ಯಕ್ಷರಾದ ಎಲ್ಟನ್ ರೆಬೆರೋ, ವಲಯ ಸಹಸಂಚಾಲಕಿ ಪ್ರೇಮಾ ಡಿಕುನ್ಹಾ, ಸಹ ಕೋಶಾಧಿಕಾರಿ ವಿಲ್ಫ್ರೇಡ್ ಮಿನೇಜಸ್ , ಮಸೀದಿ ಸಮಿತಿಯ ಅಧ್ಯಕ್ಷರಾದ ಭಾಷಾ ಸಾಹೇಬ್, ಕಾರ್ಯದರ್ಶಿ ಅಬ್ದುಲ್ ರಶೀದ್, ಎಮ್ ಶಫಿ, ಹಾಝಿ ಅಬು ಶೇಖ್, ಪಿ ಮೊಯ್ದಿನ್, ಬಾಬು ಕಲಂದರ್, ಅಶ್ರಫ್ ಯೂಸೂಫ್ ಮುಂತಾದವರು ಉಪಸ್ಥಿತರಿದ್ದರು.

 

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಪುನಾರಾಯ್ಕೆ

jananudi.com network

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಪುನಾರಾಯ್ಕೆ


ಕುಂದಾಪುರ, ಆ. 12: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಬಹುಮತ ಪಡೆದು ಪುನಾರಾಯ್ಕೆ ಆಗಿದ್ದಾರೆ. ಆಗೋಸ್ತ್ 11 ರಂದು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೇದ ಮಹಾ ಸಭೆಯಲ್ಲಿ ಚುನಾವಣಾ ಪ್ರಕಿುಯೆ ನಡೆಯಿತು.


ಪ್ರಧಾನ ಕಾರ್ಯದರ್ಶಿಯಾಗಿ ರಾಯಪ್ಪನ ಮಠ ಕೂಡ ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರುಗಳಾಗಿ ಎಸ್.ಎಮ್. ಮಝರ್, ಸಂತೋಷ ಕುಂದೇಶ್ವರ, ಕೋಶಾಧಿಕಾರಿಯಾಗಿ ಸತೀಶ್ ಆಚಾರ್ ಉಳ್ಳುರು, ಜತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಬಳ್ಕೂರು, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ರಾಘವೇಂದ್ರ ಪೈ, ಉದಯಕುಮಾರ ತಲ್ಲೂರು, ವಿನಯಾ ಪಾಯ್ಸ್, ಜಿ.ಎಂ.ಶೆಣೈ, ಬರ್ನಾಡ್ ಡಿಕೋಸ್ತಾ, ಜಯಶೇಖರ ಮಡ್ಪಾಡಿ, ಚಂದ್ರಮ ತಲ್ಲೂರು ಮತ್ತು ಭಾಸ್ಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಚುನಾವಣ ಪ್ರಕ್ರಿಯೆಯನ್ನು ಪತ್ರಕರ್ತ ರಾಮಕ್ರಷ್ಣ ಹೇರಳೆ ಇವರು ನಡೆಸಿಕೊಟ್ಟರು

ತಾಲೂಕು ಮಟ್ಟಕ್ಕೆ  ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ತಾಲೂಕು ಮಟ್ಟಕ್ಕೆ  ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ

 ಇತ್ತೀಚಿಗೆ ಅಡ್ಡಗಲ್‍ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಕಂಡ್ಲೇವಾರಿಪಲ್ಲಿಯ ಕಾವೇರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಕೆ.ವಿ.ತರುಣ್ ಉದ್ದದಜಿಗಿತ,ಎತ್ತರ ಜಿಗಿತ ದೇಶಿಕ್‍ರೆಡ್ಡಿ, ಗುಂಡು ಎಸೆತ ಮಂಜುಮೌರ್ಯ,200ಮೀ ಓಟ ಪೃಥ್ವಿರಾಜ್ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿಆರ್‍ಪಿ ಕಲಾಶಂಕರ್,ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ,ಶಿಕ್ಷಕರಾದ ಬಾಬು,ಸಂತೋಷ್‍ಶಿರಗಾವಿರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

 ಇತ್ತೀಚಿಗೆ ಅಡ್ಡಗಲ್‍ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗುಂಪು ಆಟಗಳಾದ ಬಾಲಕರ ಹಾಗು ಬಾಲಕೀಯರ ಖೋ-ಖೋ,ಥ್ರೋಬಾಲ್,ಮೇಲಾಟಗಳಲ್ಲಿ 400ಮೀಟರ್ ರಿಲೆ, 200ಮೀ ಗುಂಡು ಎಸೆತ,ಹರ್ಡಲ್ಸ್ ಎತ್ತರ ಜಿಗಿತಗಳಲ್ಲಿ ಪ್ರಥಮ ಸ್ಥಾನವನ್ನು ಪಡದುಕೊಂಡು, ಶಾಲೆಗೆ ಚಾಂಪಿಯನ್ ಪದಕ ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ, ಶಾಲೆಯ ಮುಖ್ಯಶಿಕ್ಷಕಿ ಪ್ರಮೀಳಮ್ಮ,ಶಿಕ್ಷಕರಾದ ನರಸಮ್ಮ,ಕೆ.ಧನಲಕ್ಷ್ಮಿ,ಇ.ಈರಪ್ಪ,ಕೆ.ಜೆ.ವೆಂಕಟಪ್ಪ,ದೇವಿಡ್‍ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.