HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ  

JANANUDI.COM NETWORK

ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

 

ಕುಂದಾಪುರ,ಅ.15″ ಕೆಲವರು ಪ್ರತಿಭೆಯಿದ್ದು ನಿರಾಸಕ್ತಿ ಯಿಂದ‌ ಅದನ್ನು ತೋರ್ಪಡಿಸದಿರುವುದು.ಇನ್ನು ಕೆಲವರಲ್ಲಿ ಸಣ್ಣ ಮಟ್ಟದ ಪ್ರತಿಭೆಯಿದ್ದರೂ ಸಕಲ ಕಲೆಯಲ್ಲಿ ನುರಿತವರಂತೆ ವರ್ತಿಸುವುದು- ಎರಡೂ  ಅಂಶಗಳಿಂದ ಸಮಾಜದಲ್ಲಿ 

ಕಲೆಯ ಉನ್ನತಿಗೆ‌ ಹಿನ್ನೆಡೆಯಾಗುವುದು. ಇಂದು ಮಾಧ್ಯಮಗಳಲ್ಲಿ ಕಾಣುವ ಕಲಾಪ್ರಪಂಚದಲ್ಲಿ ಜನಪ್ರಿಯತೆ ಪಡೆದ 

ಸಾಧಕರ ಬದುಕನ್ನು ಅವಲೋಕಿಸಿ ನಮ್ಮ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯಬೇಕು” ಎಂದು ಉಡುಪಿಯ ಡಾ. ಜಿ. 

ಶಂಕರ್ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಎನ್ ನಿತ್ಯಾನಂದರವರು ಆರ್. ಎನ್  ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಎನ್ . ಸೀತಾರಾಮ್ ನಕ್ಕತ್ತಾಯರವರು ಸಮಾರಂಭದ ಅಧ್ಯಕ್ಷತೆ 

ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ  ಶ್ರೀ. ನವೀನ್ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜತೆ ಕಾರ್ಯದರ್ಶಿ ಶ್ರೀ ಕೆ. ಸುಧಾಕರ  ಶೆಟ್ಟಿ ಭಾಂಡ್ಯ ಮತ್ತು ಡಾ. ಬಿ. ಬಿ. ಹೆಗ್ಡೆ ಪ್ರಥಮ‌ ದರ್ಜೆ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿವಿಧ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ ದ್ವಿತೀಯ ಪಿ. ಯು.ಸಿಯ ಅಭಿಲಾಷ್ ಹತ್ವಾರ್, ಭರತ್ ಹಾಗೂ ಅನಘ  ಅವರನ್ನು ಅಭಿನಂದಿಸಲಾಯಿತು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ‌ ಅರುಣ ಹೊಳ್ಳ ರವರು ಅತಿಥಿಗಳನ್ನು 

ಪರಿಚಯಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ಸಂದೀಪ್ ಶೆಣೈ ಮತ್ತು ರಸಾಯನ ಶಾಸ್ತ್ರ ಪ್ರಾಧ್ಯಾಪಕಿ ಶ್ರೀಮತಿ ಜಾನಿಸ್ ನತಾಶಾ ಡಿಸೋಜಾರವರು ಕಾಲೇಜಿನಲ್ಲಿ ನಡೆಸಿದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ 

ವಿಜೇತರಾದವರಿಗೆ  ಬಹುಮಾನ ವಿತರಣಾ ಕಾರ್ಯಕ್ರಮ‌ವನ್ನು ನಿರ್ವಹಿಸಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯರವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿ

JANANUDI.COM NETWORK

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿ


ಕುಂದಾಪುರ, ಒ.14: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯ ಕುರಿತು “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿಯನ್ನು ಮೂಡಿಸುವ ಪ್ರಯುಕ್ತ ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಪ್ರೊ.ಸೀಮಾ ಸಕ್ಸೆನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾದ ಕುಂದಾಪುರದ ಸಂಚಾರಿ ಪೋಲಿಸ್ ಅಧಿಕಾರಿಗಳಾದ ಶ್ರೀ.ಜನಾರ್ಧನ (ಂSI)ಹಾಗೂ ಶ್ರೀ.ಶ್ರೀಧರ (ಂSI) ರಸ್ತೆ ಅಪಘಾತ ತಡೆಗಟ್ಟುವ ಕುರಿತು ಮನವರಿಕೆ ಮಾಡಿದರು. ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಉಮೇಶ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂ.ಬಿ.ಎ ವಿಭಾಗದ ಪ್ರೊ.ಆಕಾಶ್.ಎಸ್, ಅಮೃತಮಾಲ, ಸೌಮ್ಯ.ಕೆ ಮತ್ತು ಫ್ಲಾಶ್ನೆ ಗ್ರೆಟ್ಟಾ ಡಯಸ್ ಉಪಸ್ಥಿತರಿದ್ದರು. ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾದ ಪ್ರೀತಿಯವರು ಸ್ವಾಗತಿಸಿದರು.ಹಾಗೂ ಉಪ ಪ್ರಾಂಶುಪಾಲರಾದ ಪ್ರೊ.ಚೇತನ್ ಶೆಟ್ಟಿಯವರು ಉಪಸ್ಥಿತರಿದ್ದರು.ಬಿ.ಬಿ.ಹೆಗ್ಡೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಮಹೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿಗಳಾದ ಸುಮಯ್ಯ, ವಿಜಯಲಕ್ಷ್ಮೀ, ಸುಚೇತ, ಅನೀಶ್, ಪ್ರಯಾಗ್, ಗಣೇಶ್ ರವರು ಪ್ರಾತ್ಯಕ್ಷತೆಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಿತ್ಯಾದರ್ ವಾಡ್ಯಾಂತ್ ವಾಡ್ಯಾಚೆ ಫೆಸ್ತ್ : ಮಾಜಿ ಗುರ್ಕಾರಾಂಕ್ ಸನ್ಮಾನ್

JANANUDI.COM NETWORK

ನಿತ್ಯಾದರ್ ವಾಡ್ಯಾಂತ್ ವಾಡ್ಯಾಚೆ ಫೆಸ್ತ್ : ಮಾಜಿ ಗುರ್ಕಾರಾಂಕ್ ಸನ್ಮಾನ್

ಕುಂದಾಪುರ್, ಒ.14: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್ ಅಕ್ತೋಬರಚ್ಯಾ 13 ವೆರ್ ಸಾಂಜೆರ್ ವಾಡ್ಯಾಚ್ಯಾ ತರ್ಫೆನ್ ವಾಡ್ಯಾಗಾರ್ ವಾಲ್ಟರ್ ಡಿಸೋಜಾ ಆನಿ ತಾಚಿ ಪತಿಣ್ ಗುರ್ಕಾರ್ನ್ ಎಲಿಜಾಬೆತ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ.
ಹ್ಯಾ ಸಂದರ್ಭಿ ಪಾಟ್ಲ್ಯಾ ವರ್ಸಾನಿಂ ಹ್ಯಾ ವಾಡ್ಯಾಕ್ ಸೆವಾ ದಿಲ್ಯಾ ಗುರ್ಕಾರ್ ಬೇಸಿಲ್ ಡಿಸೋಜಾ, ಫಿಲಿಪ್ ಡಾಯಾಸ್ ಆನಿ ಗುರ್ಕಾರ್ನ್ ಸಿಲೆಸ್ತೀನ್ ಡಿಸೋಜಾ ಹಾಂಕಾಂ ವಾಡ್ಯಾಗಾರಾಂಚ್ಯಾ ತರ್ಫೆನ್ ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊನ್ ಸನ್ಮಾನ್ ಕೆಲೊ.
ಹ್ಯಾ ಸಂದರ್ಭಿ ವಿಗಾರಾನ್ ‘ಹ್ಯಾ ವಾಡ್ಯಾಂತ್ ತಾಲೆಂತ್‍ವಂತ್ ಆಸಾತ್, ವಾಡೊ ಎಕ್ವಟಿತ್ ಜಾವ್ನ್ ಸಮ್ಜೊಣೆಚೆಂ ಮನಿಸ್ ಆಸ್ಲ್ಯಾರ್ ವಾಡೊ ಜೀವಾಳ್ ಆಸ್ತಾಂ. ವಾಡೊ ಫಿರ್ಗಜೆಚ್ಯಾ ಸಹಕಾರಾಕ್ ಮುಕಾರ್ ಆಸ್ತಾಂ, ಫಿರ್ಗಜೆಚ್ಯಾ ಯೋಜನಾಂತ್ ತುಮಿ ಕ್ರಿಯಾಳ್ ಆಸ್ತಾತ್. ತಶೆಂಚ್ ಹ್ಯಾ ವರ್ಸಾಂ ಆಮಿ ಆಚರಣ್ ಕರುಂಕ್ ಆಸ್ಚ್ಯಾ ಆಮ್ಚಿ ಪಾತ್ರೊನ್ ಪವಿತ್ರ್ ರೊಜಾರ್ ಮಾಯೆಚೊ 450 ವರ್ಸಾಂಚೊ ಜುಬ್ಲೆವ್ ಆಚರ್ಸಿತಾನಾ, ತುಮ್ಚ್ಯಾ ವಾಡ್ಯಾ ಥಾವ್ನ್ ಮೊಟೊ ಸಹಕಾರ್ ಆಶೆತಾಂ, ತುಮ್ಚ್ಯಾ ವಾಡ್ಯಾಚಿ ಪಾತ್ರೊನ್ ನಿತ್ಯಾದರ್ ಮಾಯ್ ತುಮ್ಚೆರ್ ದಾರಾಳ್ ಆಶಿರ್ವಾದಾಂ ವೊತುಂದಿ ಮ್ಹಣನ್ ಮಾಗ್ತಾಂ’ ಮ್ಹಣನ್ ತಾಣಿ ಸಂದೇಶ್ ದಿಲೊ.
ಸನ್ಮಾನಿತ್ ತರ್ಫೆನ್ ಬೇಸಿಲ್ ಡಿಸೋಜಾನ್ ಆಪ್ಲಿ ಭೊಗ್ಣಾ ಉಚಾರ್ಲಿ. ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾನ್ ವಾಡ್ಯಾಚ್ಯಾ ಪ್ರತಿಭಾವಂತ್ ಭುಗ್ರ್ಯಾಂಚ್ಯಾ ವ್ಹಡಿಲಾಂಕ್ ಮಾನ್ ಕೆಲೊ. ಗೊವ್ಳಿಕ್ ಮಂಡಳಿ ಉಪಾಧ್ಯಕ್ಷ್ ಜೇಕಬ್ ದಿಸೋಜಾನ್ ವಾಡ್ಯಾಗಾರಾಂಕ್ ಶುಭಾಷಯ್ ಪಾಟಯ್ಲೆ. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಾಚಿಂ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಾಣಿ ಖೆಳ್ ಪಂದ್ಯಾಟಾಂತ್ ಜಿಕಲ್ಯಾಂಕ್ ಇನಾಮಾ ವಾಂಟ್ಲಿ. ವಾಡ್ಯಾಗಾರಾನಿಂ ಸಾಂಸ್ಕ್ರತಿಕ್ ಕಾರ್ಯೆ ಜಾವ್ನ್ ನಾಟ್ಕುಳೊ, ಡ್ಯಾನ್ಸ್, ಪದಾಂಚೆಂ ಪ್ರದರ್ಶನ್ ಕೆಲೆಂ. ಸನ್ಮಾನಿತಾಚಿ ಪರಿಚಯ್ ಡಾ|ಸೋನಿ ಡಿಕೋಸ್ತಾನ್ ಕರ್ನ್ ದಿಲಿ. ಹ್ಯಾ ಕಾರ್ಯಾಂತ್ ಫಿರ್ಗಜೆಚ್ಯಾ ಸರ್ವ್ ವಾಡ್ಯಾಚೆಂ ಲ್ಹಾನ್ ಸಮುದಾಯ್ ಪ್ರೇರಕ್ ಹಾಜರ್ ಆಸಲ್ಲೆಂ. ವಾಡ್ಯಾಚಿ ಗುರ್ಕಾರ್ನ್ ತಶೆಂ ಲ್ಹಾನ್ ಸಮುದಾಯ್ ಪ್ರೇರಕ್ ಸಂಯೋಜಕಿ ಎಲಿಜ್ ಡಿಸೋಜಾನ್ ಸ್ವಾಗತ್ ಮಾಗ್ಲೊ. ವಾಡ್ಯಾಚೊ ಪ್ರತಿನಿಧಿ ಜೆಸನ್ ಪಾಯ್ಸಾನ್ ಧನ್ಯವಾದ್ ಪಾಟಯ್ಲೆ. ವೆನಿಶಾ ಡಿಸೋಜಾನ್ ಕಾರ್ಯೆ ಚಲವ್ನ್ ವೆಲೆಂ.

ರೋಣೂರು ಗ್ರಾಮದ ಬೀದಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಸ ಗುಡಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ರೋಣೂರು ಗ್ರಾಮದ ಬೀದಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಸ ಗುಡಿಸಿದರು.

 

ಶ್ರೀನಿವಾಸಪುರ: ಸಮಾಜದ ಎಲ್ಲ ವರ್ಗದ ಜನರೂ. ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಮುಂದೆ ಬರಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

  ತಾಲ್ಲೂಕಿನ ರೋಣೂರೂ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ  ಏರ್ಪಡಿಸಿದ್ದ  ಸ್ವಚ್ಛತಾ ಪಾದ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಕ್ಷೇತ್ರದಲ್ಲಿ 150 ಕಿ.ಮೀ ಪಾದ ಯಾತ್ರೆ ನಡೆಸಿ ಜನರಲ್ಲಿ ಸ್ವಚ್ಛತೆ ಮಹತ್ವ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

  ಪರಿಸರ ಮಾಲೀನ್ಯ ತಡೆಗೆ ಗಿಡ, ಮರಗಳನ್ನು ಬೆಳೆಸಬೇಕು. ಪ್ರಾಣಿ, ಪಕ್ಷಿಗಳ ಹಸಿವು ನೀಗಲು ಪೂರಕವಾಗಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಬೇಕು. ಜಲ ಮೂಲಗಳು ಮಾಲೀನ್ಯಗೊಳ್ಳುವುದನ್ನು ತಡೆಯಬೇಕು. ಕೆರೆ. ಕಾಲುವೆ ಒತ್ತುವರಿ ಮಾಡಿಕೊಂಡಿರುವವರು ಸಮಾಜದ ಹಿತದೃಷ್ಟಿಯಿಂದ ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಡಬೇಕು. ಸಾಲು ಮರದ ತಿಮ್ಮಕ್ಕನ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

    ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಹಾಗೂ ಫಸಲ್‌ ಬಿಮಾ ಯೋಜನೆ ಸಾರ್ವಜನಿಕರ ಆರೋಗ್ಯ ಹಾಗೂ ರೈತರ ಹಿತದೃಷ್ಟಿಯಿಂದ ವರದಾನವಾಗಿದೆ. ಇದು ಪ್ರಧಾನಿ ಮೋದಿ ಅವರ ಕೊಡುಗೆಯಾಗಿದೆ. ಕ್ಷೇತ್ರದ ಮಾಜಿ ಸಂಸದರು ಏಳು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದರೂ, ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರೈಲ್ವೆ ಕಾರ್ಯಾಗಾರ ಸ್ಪಾಪಿಸಲಾಗುವುದು ಎಂದು ಹೇಳಿದರು.

  ಕೋಲಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಅಗತ್ಯ ಸಂಖ್ಯೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

  ಬಿಜೆಪಿ ಮುಖಂಡರಾದ ಡಾ.ಕೆ.ಎನ್‌.ವೇಣುಗೋಪಾಲ್‌, ವೆಂಕಟೇಗೌಡ, ಜಯರಾಮರೆಡ್ಡಿ, ಇ.ಶಿವಣ್ಣ, ಎಂ.ಲಕ್ಷ್ಮಣಗೌಡ, ನಾರಾಯಣಸ್ವಾಮಿ, ಚಲಪತಿ,  ಪದ್ಮನಾಭ್‌, ರಾಮಾಂಜಿ, ಸುನಿಲ್‌, ಶೇಕ್ ಷಫಿವುಲ್ಲಾ, ನಾಗರಾಜ್‌, ಸುಧಾಕರ್‌ ಇದ್ದರು.

ಜೆಸಿಐ ಸಪ್ತಾಹ ಯುವ ಕಲೋತ್ಸವ:ಮೂಡ್ಲಕಟ್ಟೆ ಎಮ್ ಐ ಟಿ ಕಾಲೇಜು ಪ್ರಥಮ

JANANUDI.COM NETWORK

ಜೆಸಿಐ ಸಪ್ತಾಹ ಯುವ ಕಲೋತ್ಸವ:ಮೂಡ್ಲಕಟ್ಟೆ ಎಮ್ ಐ ಟಿ ಕಾಲೇಜು ಪ್ರಥಮ

ಕುಂದಾಪುರದಲ್ಲಿ ಜರುಗಿದ ಜೆಸಿಐ ಸಪ್ತಾಹದ ಯುವ ಕಲೋತ್ಸವ ಸಾಂಸ್ಕøತಿಕ ಹಬ್ಬದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.ಕಾಲೇಜಿನ 32 ವಿದ್ಯಾರ್ಥಿಗಳ ತಂಡವು ಸಾಂಸ್ಕøತಿಕ ಹಬ್ಬದಲ್ಲಿ ಭಾಗವಹಿಸಿ,ವಿವಿಧ ರೀತಿಯ ನೃತ್ಯಗಳು,ಮೈಮ್,ಉತ್ತಮ ನಿರೂಪಣೆ ಹಾಗೂ ನಿಮ್ಮ ಆಯ್ಕೆ ವಿಭಾಗದಲ್ಲಿ ಉತ್ತಮ ನಿರ್ವಹಣೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಪ್ರಶಸ್ತಿಯನ್ನು ಬಾಚಿಕೊಂಡಿತು.ವೈಯಕ್ತಿಕ ವಿಭಾಗದಲ್ಲಿ ನಡೆದ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಕೂಡ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ತೃತೀಯ ಮತ್ತು ದ್ವೀತಿಯ ಸ್ಥಾನವನ್ನು ಪಡೆದರು.ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್‍ಮನ್ ಶ್ರೀ.ಸಿದ್ದಾರ್ಥ್ ಜೆ ಶೆಟ್ಟಿ,ಪ್ರಾಂಶುಪಾಲರಾದ ಕಾಟಯ್ಯ ಜಿ.ಎಸ್,ಅಕಾಡೆಮಿಕ್ ಡೈರೆಕ್ಟರ್ ಡಾ.ಚಂದ್ರರಾವ್ ಮದನೆ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.

ಕುಂದಾಪುರಾಂತ್ ಫಾ|ಮಹೇಶ್ ಡಿಸೋಜಾಕ್ ಶ್ರದ್ದಾಂಜಲಿ: ಫಾ|ಸ್ಟ್ಯಾನಿ ಗದ್ಗತಿತ್ ಜಾಲೊ

JANANUDI.COM NETWORK

ಕುಂದಾಪುರಾಂತ್ ಫಾ|ಮಹೇಶ್ ಡಿಸೋಜಾಕ್ ಶ್ರದ್ದಾಂಜಲಿ: ಫಾ|ಸ್ಟ್ಯಾನಿ ಗದ್ಗತಿತ್ ಜಾಲೊ

ಕುಂದಾಪುರ್, ಒ. 13: ಶಿರ್ವಾ ಫಿರ್ಗಜೆಚೊ ಸಹಾಯಕ್ ಯಾಜಕ್ ತಶೆಂ ಡಾನ್ ಬಾಸ್ಕೊ ಸಿ.ಬಿ.ಎಸ್.ಸಿ. ಇಸ್ಕೊಲಾಚೊ ಪ್ರಾಂಶುಪಾಲ್ ದೆವಾಧಿನ್ ಮಾ|ಬಾ|ಮಹೇಶ್ ಡಿಸೋಜಾ ಹಾಂಚ್ಯಾ ಅತ್ಮ್ಯಾಕ್ ಕುಂದಾಪುರ್ ಫಿರ್ಗಜ್ ಪರ್ಜಾನ್ ಶಾಂತಿ ಮಾಗೊನ್ ಶ್ರದ್ದಾಂಜಲಿ ಅರ್ಪಿತ್ ಕೆಲಿ.
ಹಾಚೆಂ ಮುಖೇಲ್ಪಣ್ ಕುಂದಾಪುರ್ಚೊ ವಿಗಾರ್ ತಶೆಂ ಕುಂದಾಪುರ್ ವಾರಾಡೊ ವಿಗಾರ್‍ವಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಘೆಂವ್ನ್ ‘ಶಿರ್ವಾ ಫಿರ್ಗಜೆಂತ್ ಹಾಂವ್ ವಿಗಾರ್ ಜಾವ್ನಾಸ್ತಾಂ, ಬಾಪ್ ಮಹೇಶ್ ಮ್ಹಜೆಂ ಸಂಗಿ ದೋನ್ ವರ್ಸಾಂ ಆಸಲ್ಲೆಂ. ತೆಂ ಭೋವ್ ಮೊಗಾಳ್ ಜಾವ್ನಾಸ್ಲೆಂ. ಶಿರ್ವಾ ಡಾನ್ ಬೊಸ್ಕೊ ಸಿ.ಬಿ.ಎಸ್.ಸಿ. ಇಸ್ಕೊಲ್ ಆರಂಭ್ ಕರ್ತಾನಾ ತಾಣಿ ಮಸ್ತ್ ವಾಂವ್ಟ್ ಘೆತಲ್ಲಿ. ಭಾಂದ್ಪಾಚೆಂ ಕಾಮ್ ಆನಿ ಇಸ್ಕೊಲ್ ಆರಂಭ್ ಕರುಂಕ್ ಜಾಯಾಸ್ಲಿಂ ಸರ್ವ್ ಕಾಮಾಂತ್ ತಾಣಿ ಮುಖೇಲ್ಪಣ್ ಘೆತ್ಲೆಂ. ತಾಚೆಂ ಮರಣ್ ಸ್ವೀಕಾರ್ ಕರುಂಕ್ ಕಷ್ಟ್ ಜಾತಾತ್, ತರೀ ದೆವಾಚೆ ಯೋಜನ್ ವೆಗ್ಳೆಂಚ್ ಆಸ್ತಾಂ. ದೆವಾಚೆ ಯೋಜನ್ ಆಮಿ ಸ್ವೀಕಾರ್ ಕರ್ತಾಂವ್. ಬಾಪ್ ಮಹೇಶಾಚ್ಯಾ ಮೊರ್ನಾ ವರ್ವಿಂ ಉಡುಪಿ ಧರ್ಮ್ ಪ್ರಾಂತಾಚ್ಯಾ ಯಾಜಕ್ ಭಾರೀಚ್ ದುಖ್ ಪಾವ್ಲ್ಯಾತ್. ತಶೆಂಚ್ ದಿಯೆಸಿಜಿಚ್ಯಾ ದೇವ್ ಪ್ರಜಾಂಕ್. ತಶೆಂಚ್ ಬಾಪ್ ಮಹೇಶಾಚ್ಯಾ ಕುಟ್ಮಾದಾರಾಂಕ್ ಚಡಿತ್ ದುಖ್ ಪಾವ್ಲಾ ತೆಂ ದುಖ್ ಸೊಸುನ್ ವ್ಹರುಂಕ್ ದೇವ್ ತಾಂಕಾಂ ಆಧಾರ್ ದಿಂವ್ದಿ ಮ್ಹಣನ್ ಮಾಗ್ಯಾಂ’ ಮ್ಹಣನ್ ತಾಣಿ ದುಖಿತ್ ಜಾವ್ನ್ ಶ್ರದ್ದಾಂಜಲಿ ವೇಳಾರ್ ಮಾಗ್ಲೆ. ಹ್ಯಾ ವೇಳಾರ್ ತೆಂ ದುಖಿನ್ ಗದ್ಗದಿತ್ ಜಾಲೆಂ.
ಬಾಪ್ ಮಹೇಶಾಚ್ಯಾ ಮೊರ್ನಾ ವಿಶ್ಯಾಂತ್ ಪೆÇಲೀಸ್ ತನ್ಕಿ ಚಲ್ತಾಂ ಜಾಲ್ಯಾನ್ ಮಾಧ್ಯಮಾಚ್ಯಾನಿಂ ಸಾರ್ಕೆಂ ಕಿತೆಂಚ್ ಕಳೊನ್ ಯೆತಾಂ ಪರ್ಯಾಂತ್ ಮೊರ್ನಾ ವಿಶಿಂ ಗುಸ್ಪೊಡ್ ಗೊದೊಳೆಚ್ಯಾ ಖಬರ್ ಪ್ರಸಾರ್ ಕರಿನಾಯೆ ಮ್ಹಣನ್ ಉಡುಪಿ ಧರ್ಮ್ ಪ್ರಾಂತಾಚೊ ಧರ್ಮಾಧ್ಯಕ್ಷ್ ಅ|ಮಾ|ದೊ| ಜೆರಾಲ್ಡ್ ಐಸಾಕ್ ಲೋಬೊನ್ ಮಾಧ್ಯಮಾಲಾಗಿಂ ವಿನಂತಿ ಕೆಲ್ಯಾನ್ ಜನನುಡಿ ಟಾಟ್ ಕಾಮ್ ಬಾಪ್ ಮಹೇಶಾ ವಿಶಿಂ ಖಂಯ್ಚಿಯಿ ಖಬರ್ ಪ್ರಸಾರ್ ಕರುಂಕ್ ನಾ.
ಸಾಧೊ ಬೊಳೊ ಜಾವ್ನಾಸ್ಲೊ ತರ್ನೊ, ಉಡುಪಿ ಧರ್ಮ್ ಪ್ರಾಂತಾಚೊ ಪಯ್ಲೆ ಯಾಜಕ್ ಮ್ಹಣನ್ ಕೀರ್ತ್ ಅಪ್ಣಾಯ್ಲ್ಯಾ ಬಾಪ್ ಮಹೇಶಾಚ್ಯಾ ಮೊರ್ನಾ ಥಂಯ್ ಜನನುಡಿ ಡಾಟ್ ಕಾಮ್ ಅತೀವ್ ದುಖ್ ವ್ಯಕ್ತ್ ಕರ್ತಾಂ ಆನಿ ಹಾಚ್ಯಾ ಮರ್ಣಾ ವರ್ವಿಂ ದುಖಿತ್ ಜಾಲ್ಯಾ ಸರ್ವಾಂಕ್ ಭುಜಾವಣ್ ಪಾಟಯ್ತಾ. ಖಾಸ್ ಕರ್ನ್ ತಾಂಚ್ಯಾ ಆವಯ್ ಬಾಪಯ್, ಕುಟ್ಮಾದಾರಾಂಕ್ ಹೆಂ ದುಖ್ ಸೊಸುನ್ ವ್ಹರುಂಕ್ ದೇವ್ ಸಕತ್ ದಿಂವ್ದಿ ಮ್ಹಣನ್ ಮಾಗ್ತಾಂ ಆನಿ ತಾಚ್ಯಾ ಅತ್ಮ್ಯಾಕ್ ಶ್ರದ್ದಾಂಜಲಿ ಪಾಟಯ್ತಾ.

ಶ್ರೀನಿವಾಸಪುರ: ಬೈರಗಾನಪಲ್ಲಿಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು.       

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ಬೈರಗಾನಪಲ್ಲಿಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು.       

   

 ತಾಲ್ಲೂಕಿನ ಆಂದ್ರಗಡಿಭಾಗದ          ಬೈರಗಾನಪಲ್ಲಿಗ್ರಾಮಪಂಚಾಯಿತಿಯಲ್ಲಿಅಧ್ಯಕ್ಷರಾದಅನಿತಾರಾಜೇಂದ್ರರವರಅಧ್ಯಕ್ಷತೆಯಲ್ಲಿಗ್ರಾಮ ಪಂಚಾಯಿತಿ ಮಟ್ಟದಎಲ್ಲಾಅಭಿವೃದ್ದಿ ಇಲಾಖೆಗಳು 2019-20ನೇ ಸಾಲಿನ ಸೆಪ್ಟೆಂಬರ್‍ಅಂತ್ಯದವರೆಗೆ ಸಾಧಿಸಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿಪರಿಶೀಲನಾ ಸಭೆಯನ್ನುಕರೆಯಲಾಗಿದ್ದು ಸಭೆಗೆತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಬಾರದೆ ಕಡೆಗಣಿಸಿದ್ದಾರೆ ಎಂದು ಮಾಜಿಗ್ರಾ.ಪಂ. ಉಪಾಧ್ಯಕ್ಷ ಸದಸ್ಯ ಸಂಜಯ್‍ರೆಡ್ಡಿಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿ ಎಂದು ಪಿ.ಡಿ.ಒ.ಗಳಿಗೆ ತಿಳಿಸಿದರು.
ಸಭೆಯಲ್ಲಿ ಸಂಜಯರೆಡ್ಡಿ ಮಾತನಾಡಿ ಈ ಗ್ರಾಮಪಂಚಾಯಿತಿಯಲ್ಲಿ 11 ಹಳ್ಳಿಗಳು ಸೇರಿದ್ದು, ಸರ್ಕಾರಿ ಕೊಳವೆ ಬಾವಿಗಳುಕುಡಿಯುವ ನೀರಿಗಾಗಿ 28 ಕೊರೆಯಲಾಗಿದ್ದು, ಇವುಗಳಲ್ಲಿ 11 ಕೊಳವೆ ಬಾವಿಗಳು ಕೆಲಸ ಮಾಡುತ್ತಿವೆ, ಆದರೆ ಇವುಗಳ ಮಾಸಿಕ ವಿಧ್ಯುತ್ ಬಿಲ್ಲುಸುಮಾರು 2 ಕೋಟಿ ರೂಗಳು ಬಾಕಿ ಇದೆಎಂದು ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸಿದ್ದಾರೆ,ಕೊಳವೆ ಬಾವಿಗಳಿಗೆ ಮೀಟರುಗಳನ್ನು ಯಾವೊಂದಕ್ಕೂ ಅಳವಡಿಸಿರುವುದಿಲ್ಲ, ಇದರಲ್ಲಿ 1.68ಕೋಟಿ ರೂಗಳನ್ನು ನಾವುಗಳು ಪಾವತಿ ಮಾಡಬೇಕಾಗಿದೆ. 31 ಲಕ್ಷಬಡ್ಡಿವಿಧಿಸಿದ್ದಾರೆ ಎಂದು ಬೆಸ್ಕಾಂ ಇಲಾಖೆ ಮೇಲೆ ಆರೋಪ ಮಾಡಿದ್ದಾರೆ. 17 ಕೊಳವೆ ಬಾವಿಗಳು ಕೆಲಸ ಮಾಡದೆಇದ್ದರೂ ಇವುಗಳಿಗೂ ಸಹ ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸುತ್ತಲೆ ಇದ್ದಾರೆ,ಇದಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಎಂದುಆರೋಪ ಮಾಡಿದರು.
ಪಿ.ಡಿ.ಒ.ರಾಮಚಂದ್ರಪ್ಪ ಮಾತನಾಡಿಗ್ರಾ.ಪಂ. ವಾಪ್ತಿಯಲ್ಲಿ 524 ಮನೆಗಳು ವಿವಿಧ ವಸತಿಯೋಜನೆಯಡಿ ಮಂಜೂರಾಗಿದ್ದು, 412 ಮನೆಗಳು ಪೂರ್ಣವಾಗಿದ್ದು, 26 ಮನೆಗಳು ಬ್ಲಾಕ್‍ಆಗಿದ್ದು, ಇನ್ನು ಉಳಿದ 10 ಮನೆಗಳನ್ನು ಪ್ರಾರಂಭ ಮಾಡಿರುವುದಿಲ್ಲ. ಅಂಬೇಡ್ಕರ್ ಮತ್ತು ಬಸವ ವಸತಿಯೋಜನೆಯಡಿ 1 ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ, ಹೊಸ ಉಡ್ಯ ಮತ್ತುಗಂಟನ್ನಗಾರಿಪಲ್ಲಿಯಲ್ಲಿ 2 ಮನೆಗಳು ಪೂರ್ಣವಾಗಿದ್ದುಇವರಿಗೆ 1 ಬಿಲ್ಲು ಸಹ ಬಂದಿರುವುದಿಲ್ಲ. ನರೇಗಯೋಜನೆಯಡಿಚೆಕ್‍ಡ್ಯಾಂ ಪೂರ್ಣವಾಗಿದ್ದು, ಇನ್ನೊಂದು ಪ್ರಗತಿಯಲ್ಲಿರುತ್ತದೆ, ಸಮುದಾಯ ಭವನಗಳಿಗೆ ಸಮಯಕ್ಕೆ ಸರಿಯಾಗಿಅನುದಾನ ಬಿಡುಗಡೆಯಾಗುತ್ತಿಲ್ಲಎಂದು ತಿಳಿಸಿದರು.
ಅಂಗನವಾಡಿಕಾರ್ಯಕರ್ತರು ಮನವಿ ಮಾಡಿ ಈ ಪಂಚಾಯಿತಿಯಲ್ಲಿ 9 ಕೇಂದ್ರಗಳು ನಡೆಯುತ್ತಿದ್ದು, ಎಲ್ಲಾ ಕೇಂದ್ರಗಳು ಶಿಥಿಲವಾಗಿದ್ದು, ಮಳೆ ಬಂದರೆ ಸೋರುವುದರಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಇದೆ ಸಮಯದಲ್ಲಿ ಪಂಚಾಯಿತಿಯಜಲಗಾರರಿಗೆ ಆಡಳಿತ ಅಧ್ಯಕ್ಷರು, ಉಪಾಧ್ಯಕ್ಷರು ಪಿ.ಡಿ.ಒ. ವತಿಯಿಂದಜಲಗಾರರಿಗೆ ಸಮ ವಸ್ತ್ರವನ್ನು ವಿತರಿಸಿದರು.
ಇದೆ ಸಂದರ್ಭದಲ್ಲಿಅಧ್ಯಕ್ಷಿಣಿಅನಿತ, ಉಪಾಧ್ಯಕ್ಷರಾದಎನ್. ಶ್ರೀನಿವಾಸರೆಡ್ಡಿ, ಸದಸ್ಯರು ಮತ್ತುಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಸ್ಕಾಂ ಕಿರಿಯಇಂಜಿನಿಯರ್‍ಆನಂದ್, ಸ್ರೀ ಶಕ್ತಿ ಸಂಘದ ಸದಸ್ಯರು ಹಾಜರಿದ್ದರು

ಪುಟ್ಟ ಬಾಲಕಿಗೆ ಬ್ಲಡ್ ಕ್ಯಾನ್ಸರ್-ಆತಂಕದಲ್ಲಿ ಪೋಷಕರು: ಮಾನವೀಯ ನೆರವು ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಪುಟ್ಟ ಬಾಲಕಿಗೆ ಬ್ಲಡ್ ಕ್ಯಾನ್ಸರ್-ಆತಂಕದಲ್ಲಿ ಪೋಷಕರು: ಮಾನವೀಯ ನೆರವು ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಆರು ವರ್ಷದ ಪುಟ್ಟ ಬಾಲಕಿಯೊಬ್ಬಳು ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ 50 ಸಾವಿರ ರೂ ಆರ್ಥಿಕ ನೆರವು ಕೊಟ್ಟು ಉಳಿದ ಚಿಕಿತ್ಸೆಗೂ ನೆರವಾಗುವುದಾಗಿ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ರೋಗ ಪ್ರಥಮ ಹಂತದಲ್ಲಿರುವುದರಿಂದ ಕೂಡಲೇ ಚಿಕಿತ್ಸೆ ನೀಡಿದಲ್ಲಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆನ್ನಲಾಗಿದೆ.
ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿರುವ ಸುಮಂತ್ ಕುಮಾರ್, ಈಗಾಗಲೇ ಸಾಲ ಮಾಡಿ 1.5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಉಳಿದಂತೆ ಸೆಂಟ್‍ಜಾನ್ಸ್ ಆಸ್ಪತ್ರೆಯ ವೈದ್ಯರ ಪ್ರಕಾರ ಚಿಕಿತ್ಸೆಗೆ 7.5 ಲಕ್ಷ ರೂಗಳ ಅಗತ್ಯವಿದ್ದು, ಈ ಹಣ ಕೋಢೀಕರಿಸಲಾಗದೇ ಆತಂಕದಲ್ಲೇ ಜೀವನ ದೂಡುತ್ತಿದ್ದಾರೆ.

ಗೋವಿಂದಗೌಡರಿಂದಮಾನವೀಯ ನೆರವು
ಮುದ್ದಾದ ಈ ಬಾಲಕಿಯ ಅನಾರೋಗ್ಯದ ಕುರಿತು ತಿಳಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪೋಷಕರನ್ನು ಕರೆಸಿಕೊಂಡು ವಿವರ ಪಡೆದು ತಕ್ಷಣವೇ 50 ಸಾವಿರ ನೆರವು ನೀಡಿ, ಉಳಿದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒದಗಿಸುವುದಾಗಿ ತಿಳಿಸಿ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೂ ಮೂವರು ಸಹೋದರಿಯರಿದ್ದಾರೆ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ, ಈ ಮುದ್ದಾದ ಮಗುವನ್ನು ಕಂಡಾಗ ದೇವರು ಬಡವರಿಗೆ ಏಕೆ ಇಂತಹ ದೊಡ್ಡ ಕಾಯಿಲೆಗಳನ್ನು ನೀಡಿದ ಎಂದು ವಿಷಾದವಾಗುತ್ತದೆ ಎಂದರು.
ಶಾಲೆಗೆ ಹೋಗಿ ಎಲ್ಲರಂತೆ ಕಲಿಯಬೇಕಾದ ಮಗು ಇಂದು ನೋವಿನಿಂದ ಕಾಲ ನೂಕುತ್ತಿದೆ, ಆ ಮಗುವಿನ ಕಣ್ಣುಗಳಲ್ಲಿ ಭಯ ಕಾಣುತ್ತಿದೆ,ಜತೆಗೆ ಇಂತಹ ಮುದ್ದಾದ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ತಂದೆ,ತಾಯಿಯ ದುಃಖಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕಾದ ಅಗತ್ಯವೂ ಇದೆ ಎಂದರು.
ದುಃಖಿತರಾಗಿದ್ದ ತಂದೆತಾಯಿಗೆ ಧೈರ್ಯ ತುಂಬಿದ ಅವರು, ಚಿಂತೆ ಮಾಡದಿರಿ, ಇಂತಹ ಮುದ್ದಾದ ಮಗುವನ್ನು ದೇವರು ಉಳಿಸಿಕೊಡುತ್ತಾನೆ, ಚಿಕಿತ್ಸೆಗೆ ಹಣದ ಕುರಿತು ಚಿಂತೆ ಮಾಡದಿರಿ, ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ನೀಡಿದ ಆರ್ಥಿಕ ನೆರವು ಸ್ವೀಕರಿಸಿದ ಪೋಷಕರು, ಭಾವುಕರಾಗಿ ಧನ್ಯವಾದ ಸಲ್ಲಿಸಿದರು.

 

ಅ.23 ರಂದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಚಾಲನೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿ-ಡಿಡಿಪಿಐ ರತ್ನಯ್ಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಅ.23 ರಂದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಚಾಲನೆ
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿ-ಡಿಡಿಪಿಐ ರತ್ನಯ್ಯ

ಕೋಲಾರ:- ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶಿಕ್ಷಣ ಇಲಾಖೆ ಅ.23 ರಂದು ನಡೆಸುತ್ತಿರುವ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವದ ಯಶಸ್ಸಿಗೆ ಸಹಕಾರ ನೀಡಿ ಮತ್ತು ವಿವಿಧ ಕಾರ್ಯಗಳಿಗಾಗಿ ನೇಮಕಗೊಂಡಿರುವ ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದರು.
ಡಿಡಿಪಿಐ ಕಚೇರಿಯ ಎಸ್‍ಎಸ್‍ಎ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಈ ಮೊದಲು ಅ.24 ರಂದು ಸ್ವರ್ಧೆಗಳು ಎಂದು ತೀರ್ಮಾನಿಸಲಾಗಿತ್ತಾದರೂ, ಅಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಇರುವುದಿಂದ ಪ್ರತಿಭಾ ಕಾರಂಜಿ ಸ್ವರ್ಧೆಗಳನ್ನು ಅ.23 ರಂದೇ ನಗರ ಅಂಜುಮಾನ್ ಪ್ರೌಢಶಾಲಾ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ವ್ಯಾಪಕ ಪ್ರಚಾರ ನಡೆಸುವ ಮೂಲಕ ಈಗಾಗಲೇ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಲ್ಲಿ ಆಯ್ಕೆಯಾಗಿರುವ ಮಕ್ಕಳನ್ನು ಸಿದ್ದಗೊಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು, ಪ್ರತಿ ಮಗು,ಪ್ರತಿಶಾಲೆಗೂ ಸ್ವರ್ಧೆಗಳ ಮಾಹಿತಿಯನ್ನು ತಲುಪಿಸಬೇಕು ಎಂದರು.
ಸ್ವರ್ಧೆಗಳಿಗೆ ಮಕ್ಕಳನ್ನು ಕರೆತರುವ ಉಸ್ತುವಾರಿ ಶಿಕ್ಷಕರು ಜಿಲ್ಲೆಯ ಆರು ತಾಲ್ಲೂಕುಗಳಿಂದ ಮಕ್ಕಳನ್ನು ಹೆಚ್ಚು ಜಾಗ್ರತೆಯಿಂದ ಸಮಯಕ್ಕೆ ಸರಿಯಾಗಿ ಕರೆದುಕೊಂಡು ಬರಲು ಸೂಚಿಸಲಾಗಿದ್ದು, ಅಂಜುಮಾನ್ ಶಾಲೆ ಆವರಣಕ್ಕೆ ಬಂದೊಡನೇ ಆಯಾ ತಾಲ್ಲೂಕು ನೋಡೆಲ್ ಅಧಿಕಾರಿಗಳ ಬಳಿ ಹೆಸರು ನೊಂದಾಯಿಸಲು ಮಾರ್ಗದರ್ಶನ ನೀಡಿ ಎಂದರು.

ಸ್ವಾಗತ ಸಮಿತಿ ಜವಾಬ್ದಾರಿ ಹೆಚ್ಚು

ಸ್ವಾಗತ ಸಮಿತಿಗೆ ನೇಮಕಗೊಂಡಿರುವವರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿ, ಆಯಾ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆ ನೀಡಿ, ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳು, ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸುವ ಹೊಣೆ ನಿಮ್ಮದೇ ಎಂದರು.

ಜಿಲ್ಲಾಮಟ್ಟದ ಸ್ವರ್ಧೆಗೆ150 ತೀರ್ಪುಗಾರರು
ಜಿಲ್ಲಾಮಟ್ಟದ ಸ್ವರ್ಧೆಗಳಿಗೆ ಪ್ರತಿ ತಾಲ್ಲೂಕಿನಿಂದ ತಲಾ 40 ಮಂದಿಹೆಸರನ್ನು ಬಿಇಒ ಮತ್ತು ತಾಲ್ಲೂಕು ನೋಡಲ್ ಅಧಿಕಾರಿಗಳು ದೃಢೀಕರಿಸಿ ನೀಡುವಂತೆಯೂ ತಿಳಿಸಿದ ಅವರು, ಅದರಲ್ಲಿ ಅಂತಿಮವಾಗಿ ತಾಲ್ಲೂಕಿಗೆ ತಲಾ 25 ಮಂದಿಯನ್ನು ತೀರ್ಪುಗಾರರಾಗಿ ಆಯ್ಕೆ ಮಾಡುವಂತೆ ತಿಳಿಸಿಮ ಕೋಲಾರ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ತೀರ್ಪುಗಾರರ ಆಯ್ಕೆ ಸೂಚಿಸಿದರು.

ಅದರಂತೆ 6 ತಾಲ್ಲೂಕುಗಳಿಂದ ಒಟ್ಟು 150 ಮಂದಿ ತೀರ್ಪುಗಾರರ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿ ಅವರು ಸಮಯಕ್ಕೆ ಸರಿಯಾಗಿ ಹಾಜರಿರಲು ಸೂಚಿಸಲು ತಿಳಿಸಿದರು.

ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರೌಢಶಾಲಾ,ಪ್ರಾಥಮಿಕ ಶಾಲಾ ಮಕ್ಕಳು ಅ.23 ರ ಬೆಳಗ್ಗೆ 9 ಗಂಟೆಗೆ ಅಂಜುಮಾನ್ ಪ್ರೌಢಶಾಲೆ ಆವರಣದಲ್ಲಿ ಹಾಜರಿರಲಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕರೆತರಲು ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅವರು ಮನವಿ ಮಾಡಿದರು.
ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಿಗೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ನೇತೃತ್ವದಲ್ಲಿ ಸ್ವಾಗತ ಸಮಿತಿ, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ ನೇತೃತ್ವದಲ್ಲಿ ಕ್ರಿಯಾಸಮಿತಿ, ಡಿವೈಪಿಸಿ ಶ್ರೀನಿವಾಸಮೂರ್ತಿ ಹಾಗೂ ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್, ಮುಖ್ಯಶಿಕ್ಷಕ ಪ್ರದೀಪ್ ಕುಮಾರ್ ಮತ್ತಿತರರಿರುವ ಆಹಾರ ಸಮಿತಿ, ನೋಂದಣಿ ಸಮಿತಿ, ಮಕ್ಕಳ ಸುರಕ್ಷತಾ ಹಾಗೂಭದ್ರತಾ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ರಂಗವೇದಿಕೆ ಸಮಿತಿ, ತೀರ್ಪುಗಾರರ ಸಮಿತಿ, ಆರ್ಥಿಕ ಸಮಿತಿ,ತಾಂತ್ರಿಕ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಈ ಸಮಿತಿಗಳು ವಹಿಸಿಕೊಂಡಿರುವ ಕಾರ್ಯದಲ್ಲಿ ಲೋಪವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕಾರ್ಯಕ್ರಮಕ್ಕೆ ಮುನ್ನಾ ತೀರ್ಪುಗಾರರ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಬೇಕು, ಮಕ್ಕಳಿಗೆ ನೀಡುವ ಆಹಾರ ಶುಚಿ,ರುಚಿಯಾಗಿರಲಿ, ಅಂಜುಮಾನ್ ಶಾಲಾ ಆವರಣದಲ್ಲಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಡಿವೈಪಿಸಿ ಶ್ರೀನಿವಾಸಮೂರ್ತಿ,ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಸೋಮೇಶ್, ಪ್ರತಿಭಾ ಕಾರಂಜಿ ಸ್ವರ್ಧೆಗಳ ನೋಡಲ್ ಅಧಿಕಾರಿಗಳಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ವಿಷಯಪರಿವೀಕ್ಷಕ ಬಿ.ವೆಂಕಟೇಶಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ,ವೆಂಕಟಾಚಲಪತಿ,ಬೈರರೆಡ್ಡಿ, ರಾಘವೇಂದ್ರ, ಸಿರಾಜುದ್ದೀನ್, ಹನುಮೇಗೌಡ, ರೋಷನ್‍ಜಮೀರ್,ಮದಿಅಳಗನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಎವೈಪಿಸಿ ಸಿದ್ದೇಶ್, ಬಾಬು, ಶಿಕ್ಷಕ ಸಂಘದ ಕಾರ್ಯದರ್ಶಿ ನಾಗರಾಜ್, ಮುಖ್ಯಶಿಕ್ಷಕರಾದ ಹನುಮನಹಳ್ಳಿ ನಾಗರಾಜ್,ತಿಮ್ಮಸಂದ್ರ ನಾಗರಾಜ್,ಆನಂದ ಶ್ರೀನಿವಾಸ್, ಮಾರ್ಕಂಡೇಶ್ವರ್,ಇಲಾಖೆಯ ಸರಸ್ವತಿ ಮತ್ತಿತರರಿದ್ದರು.