HOLY ROSARY CHURCH, KUNDAPUR – 450 th JUBILEE SOUVENIR 2021

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕಾರ್ಯಕರ್ತರ ಸಭೆಗೆ  ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಆಗಮನ

JANANUDI.COM NETWORK

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕಾರ್ಯಕರ್ತರ ಸಭೆಗೆ  ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಆಗಮನ

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕಾರ್ಯಕರ್ತರ ಸಭೆ
ವಿರೋದ ಪಕ್ಷದ ನಾಯಕ , ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು  ಆಗಮಿಸಲಿದ್ದಾರೆ, ಮತ್ತು ಸಭೆ ಆರಂಭ ಗೊಂಡಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮಾಧ್ಯಮಕ್ಕೆ ತಿಳಿಸಿದ್ದಾರೆ 

ಶ್ರೀನಿವಾಸಪುರ: ಮಳೆ ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು – ತೆಲುಗು ಚಲನ ಚಿತ್ರ ನಟ ಪವನ್‌ ಕಲ್ಯಾಣ್‌ 

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಮಳೆ ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು – ತೆಲುಗು ಚಲನ ಚಿತ್ರ ನಟ ಪವನ್‌ ಕಲ್ಯಾಣ್‌ 
ಶ್ರೀನಿವಾಸಪುರ  ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ, ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕುಂಭಾಭಿಷೇಕ ಸಮಾರಂಭದಲ್ಲಿ ಮಾತನಾಡಿ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ರೈತರು ಬಹುತೇಕ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತರ್ಜಲ ಕೊರತೆ ಕಾಡುತ್ತಿದೆ. ಚೆಕ್ ಡ್ಯಾಂ, ಕೆರೆ, ಕುಂಟೆಗಳಲ್ಲಿ ಮಳೆ ನೀರು ತುಂಬಿ ಅಂತರ್ಜಲ ವೃದ್ಧಿಸಬೇಕಾಗಿದೆ ಎಂದು ಹೇಳಿದರು.
  ಎಲ್ಲ ಧರ್ಮಗಳನ್ನೂ ಗೌರವಿಸುವುದು ಹಿಂದೂ ಧರ್ಮದ ಹೆಗ್ಗಳಿಕೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಆಚರಿಸುತ್ತ, ಇತರ ಧರ್ಮಗಳನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಮಾನವ ಧರ್ಮಕ್ಕೆ ಮನ್ನಣೆ ದೊರೆಯಬೇಕಾಗಿದೆ ಎಂದು ಹೇಳಿದರು.
   ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ಮಹಾತ್ಮರನ್ನು ಕೊಂದವರನ್ನು ಆರಾಧಿಸುವ ದಿನಗಳು ಹತ್ತಿರವಾಗುತ್ತಿವೆ. ಇದನ್ನು ನೋಡಿದರೆ ನಾವು ಎತ್ತ ಸಾಗಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಬೆವರಿಗೆ ಬೆಲೆ ಕಟ್ಟುವಂತೆ ಕೋರಿದರೆ, ಪ್ರಸಾದನ ಸಾಮಗ್ರಿ ಬೆಲೆ ಹೆಚ್ಚಿಸುತ್ತಿದ್ದೇವೆ ಎನ್ನುವವರು ಸರ್ಕಾರದಲ್ಲಿದ್ದಾರೆ ಎಂದು ಹೇಳಿದರು.
  ‘ಆಂಧ್ರಪ್ರದೇಶದಲ್ಲಿ ವಿಚಾರ ದಾರಿದ್ರ್ಯದಿಂದ ನಾಯಕತ್ವ ಇಲ್ಲದೆ ಶೂನ್ಯ ಏರ್ಪಟ್ಟಿದೆ. ಪ್ರಜೆಗಳಿಗಾಗಿ ನಾವು ಇರುತ್ತೇವೆ. ನಮಗಾಗಿ ಪ್ರಜೆಗಳು ಇರುವುದಿಲ್ಲ. ಈ ಸತ್ಯವನ್ನು ರಾಜಕಾರಣಿಗಳು ಅರಿಯಬೆಕು. ಸಾರ್ವಜನಿಕರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು. ಇಲ್ಲಿನ ಜನರು ಸಾಮಾನ್ಯ ಕುಟುಂಬದಿಂದ ಬಂದ ನನ್ನನ್ನು ರಾಜಕೀಯ ಕ್ಷೇತ್ರದಲ್ಲಿ ಉಳಿಸಿ ಬೆಳೆಸಿದ್ದಾರೆ. ಸೋಲು ಗೆಲವಿನಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಅವರ ಹಿತ ಕಾಯುವುದು ನನ್ನ ಆದ್ಯ ಕರ್ತವ್ಯವಾಗಿದೆ, ಎಂದು ಹೇಳಿದರು.
    ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಕೃಷಿಕರು ತಮ್ಮ ಉತ್ಪನ್ನಗಳಿಗೆ ಬೆಲೆ ಕುಸಿತದಿಂದ ಕುಸಿದು ಹೋಗಿದ್ದಾರೆ. ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕಾರ್ಮಿಕರ ಹಿತ ಕಾಯಬೇಕು ಎಂದು ಹೇಳಿದರು.
    ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡಿದರು.
   ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಡಿವೈಎಸ್‌ಪಿ ಉಮೇಶ್‌, ತಹಶೀಲ್ದಾರ್‌ ಕೆ.ಎನ್‌.ಸುಜಾತ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ,ದೇವಾಲಯದ ಧರ್ಮಾಧಿಕಾರಿಗಳಾದ ರೇಖಾ, ಜಿ.ಎಸ್‌.ವೇಣುಗೋಪಾಲ್‌, ಮಖಂಡರಾದ ಕೆ.ಕೆ.ಮಂಜು, ಅಮರೇಂದ್ರಬಾಬು ಇದ್ದರು.

ಶ್ರೀನಿವಾಸಪುರ  ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆಯುವಂತಾಗಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್‌.ಜಯರಾಮರೆಡ್ಡಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರ  ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆಯುವಂತಾಗಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್‌.ಜಯರಾಮರೆಡ್ಡಿ

ಶ್ರೀನಿವಾಸಪುರ: ಶಿಕ್ಷಕರು ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲ್ಲೂಕು ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆಯಲು ಪೂರಕವಾಗಿ ಬೋಧನೆ ಮಾಡಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್‌.ಜಯರಾಮರೆಡ್ಡಿ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿ ಮಾತನಾಡಿ, ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಈಗ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಅಲ್ಲದೆ ಶೈಕ್ಷಣಿಕ ಪ್ರಗತಿಗೆ ಹೆಸರಾಗಿದೆ. ಆದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಒಟ್ಟಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು. ನುರಿತ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಇಲಾಖೆಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಒಟ್ಟಾರೆ ಶೈಕ್ಷಣಿಕ ಅಭಿವೃದ್ಧಿ ಹಾಗೂ ಗುಣಾತ್ಮಕ ಫಲಿತಾಂಶ ಪಡೆಯುವುದು ಎಲ್ಲರ ಧ್ಯೇಯವಾಗಬೇಕು. ಅದಕ್ಕೆ ಪೂರಕವಾದ ಎಲ್ಲ ಶೈಕ್ಷಣಿಕ ನೆರವನ್ನೂ ನೀಡಲಾಗುವುದು ಎಂದು ಹೇಳಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ, ಇಸಿಒ ಆರ್‌.ಜಿ.ಸುಬ್ರಮಣಿ, ಅಡ್ಡಗಲ್‌ ಸಿಆರ್‌ಪಿ ಕಲಾ ಶಂಕರ್‌, ಬಿಆರ್‌ಪಿ ಮಂಜು, ಶ್ರೀನಿವಾಸಪುರ ತಾಲ್ಲೂಕು ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ಸಾದಿಕ್, ಉರ್ದು ಸಿ ಆರ್ ಪಿ ರುಹಿ ನಾಜ್, ಸಮೀನಾ ಬಾನು ಇದ್ದರು.

ಕೋಲಾರ – ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ ರೈತಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ – ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ ರೈತಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ.

ಕೋಲಾರ: ಜಡಿ ಮಳೆಯಿಂದ ಟೋಮೊಟೋ ಮತ್ತು ಆಲೂಗಡ್ಡೆ ಬೆಳೆಯನ್ನು ಕಾಡುತ್ತಿರುವ ಅಂಗಮಾರಿ ರೋಗಕ್ಕೆ ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ, ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗದ ಬೆಳೆ ಸಮೇತ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ ಮಾಡಿ ಒತ್ತಾಯಿಸಿಲಾಯಿತು. ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಅಂಗಮಾರಿ ರೋಗ ಬರುತ್ತಿದ್ದರೂ ಆ ರೋಗಕ್ಕೆ ಗುಣಮಟ್ಟದ ಔಷದಿ ನೀಡುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆ ಒಂದು ಕಡೆ ಊಜಿ ನೊಣದಿಂದ ತತ್ತರಿಸಿದ್ದ ರೈತರಿಗೆ ಜಿಲ್ಲಾದ್ಯಾಂತ ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದ ಟೊಮೋಟೋ ಮತ್ತು ಆಲೂಗಡ್ಡೆ ಬೆಳೆಗಳಿಗೆ ಪ್ರತಿ ವರ್ಷ ಕಾಡುವ ಅಂಗಮಾರಿ ರೋಗಕ್ಕೆ ಗುಣಮಟ್ಟದ ಔಷದಿಯನ್ನು ನೀಡಲು ಸಂಬಂಧಪಟ್ಟ ಇಲಾಖೆಗಳು ವಿಪಲವಾಗುತ್ತಿವೆ.

ಸಮೃದ್ದವಾಗಿ ಬಂದಿದ್ದ ಟೊಮೋಟೊ ಬೆಳೆಗೆ ಇತ್ತಿಚೆಗೆ ರೈತರನ್ನು ನಿದ್ದೆಗೆಡಿಸಿದ್ದ ಊಜಿ ನೊಣದಿಂದ ತತ್ತರಿಸಿ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಖಾಸಗಿ ಸಾಲಕ್ಕೆ ಸಿಲುಕಿ ಒದ್ದಾಡಿ ಮತ್ತೆ ಚಲ ಬಿಡದೆ ಬೆಳೆದ ಆಲೂಗಡ್ಡೆ ಮತ್ತು ಟೊಮೋಟೊಗೆ ಅಂಗಮಾರಿ ರೋಗ ನೋಡಿ ಔಷದಿಗಾಗಿ ಮನೆಯಲ್ಲಿನ ಹೆಂಡತಿ ಮಕ್ಕಳ ಒಡವೆಗಳನ್ನು ಗಿರವಿ ಅಂಗಡಿಗಳಲ್ಲಿ ಅಡವಿಟ್ಟು, ಔಷದಿ ಅಂಗಡಿಗಳಿಗೆ ಸುರಿಯುತ್ತಿದ್ದರೂ ಗುಣಮಟ್ಟದ ಔಷಧಿ ಇಲ್ಲದೆ, ರೋಗ ನಿಯಂತ್ರಣಕ್ಕೆ ಬಾರದೆ ರೈತರು ತತ್ತರಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ನೆಪ ಮಾತ್ರಕ್ಕೆ ಅಂಗಮಾರಿ ರೋಗಕ್ಕೆ ಔಷದಿಗಳು ಸಬ್ಸಿಡಿ ದರದಲ್ಲಿ ದೊರೆಯುತ್ತವೆಂದು ಪತ್ರಿಕಾ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಪತ್ರಿಕಾ ಹೇಳಿಕೆ ನೋಡಿ ಸಂಬಂಧಪಟ್ಟ ಇಲಾಖೆಯ ಬಳಿ ಹೋದರೆ ಅಧಿಕಾರಿಗಳೇ ನಾಪತ್ತೆಯ ಜೊತೆಗೆ ಯಾವುದೇ ಔಷದಿಯಿಲ್ಲ ನಿಮಗೆ ಬೇಕಾದರೆ ಸರ್ಕಾರದಿಂದ ತರಿಸಿಕೊಡುತ್ತೇವೆ. ಬುಕ್ ಮಾಡಿ ಎಂದು ಬೇಜವಬ್ದಾರಿಯಿಂದ ಹೇಳುವ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಪ್ರತಿ ವರ್ಷ ಈ ರೋಗ ಬರುತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಔಷದಿಗಳು ನೀಡಲು ನಮಗೆ ಅನುಧಾನದ ಕೊರತೆ ಇದೆ. ಅನುಧಾನ ಬಂದರೆ ತರಿಸಿ ಕೊಡುತ್ತೇವೆಂದು ಬೇಜವಬ್ದಾರಿಯಿಂದ ಹೇಳುವ ಜೊತೆಗೆ ಇನ್ನೂ ಈ ರೋಗವನ್ನೇ ಬಂಡವಾಳವಾಗಿಸಿಕೊಳ್ಳುವ ಔಷಧಿ ಅಂಗಡಿ ಮಾಲೀಕರು ರೈತರ ಅಮಾಯಕತನವನ್ನು ಉಪಯೋಗಿಸಿಕೊಂಡು ಅವರಿಗೆ ಇಷ್ಟ ಬಂದ ಹತ್ತಾರು ಔಷದಿಗಳನ್ನು ನೀಡಿ ಆ ಔಷದಿಗಳನ್ನು ಹತ್ತಾರು ಬಾರಿ ಸಿಂಪರಣೆ ಮಾಡಿದರು ರೋಗ ನಿಯಂತ್ರಣಕ್ಕೆ ಬಾರದೆ ಅಂಗಡಿ ಮಾಲೀಕರು ರೈತರ ಮರಣ ಶಾಸನ ಬರೆಯುತ್ತಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳದ ರೋಗಕ್ಕೆ ಉತ್ತಮ ಔಷದಿ ನೀಡಿ ರೈತರಿಗೆ ಜಾಗೃತಿ ಮೂಡಿಸದ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿಯಿದ್ದರೆ ಅಂಗಮಾರಿ ರೋಗಕ್ಕೆ ಬೇಕಾಗುವ ಔಷದಿಗಳನ್ನು ಸರ್ಕಾರದಿಂದ ಉಚಿತವಾಗಿ ತರಿಸಿಕೊಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಜೊತೆಗೆ ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಈ ರೋಗದ ಬಗ್ಗೆ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಬೇಕು ಹಾಗೂ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ನೊಂದ ರೈತರ ಪರವಾಗಿ ಅಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಶಿವಾರೆಡ್ಡಿರವರು ಟೋಮೊಟೋ ಮತ್ತು ಅಲೂಗಡ್ಡೆ ಬೆಳೆಗೆ ಬಂದಿರುವ ಅಂಗಮಾರಿ ರೋಗಕ್ಕೆ ಇಲಾಖೆಯಿಂದ ಔಷದಿಗಳನ್ನು ನೀಡಲು ಅನುಧಾನದ ಕೊರತೆಯಿದೆ ಅನುಧಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ರೋಗದ ಬಗ್ಗೆ ಕರ ಪತ್ರದ ಮುಖಾಂತರ ರೈತರಿಗೆ ಜಾಗೃತಿ ಮೂಡಿಸಿ, ಪರಿಹಾರದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಿಳಿಸುವ ಭರವಸೆ ನೀಡಿದರು.

ಈ ಹೋರಾಟದಲ್ಲಿ ತೆರ್ನಹಳ್ಳಿ ಆಂಜಿನಪ್ಪ, ಸಹದೇವಪ್ಪ, ನಿರಂಜನ್, ಕಿಶೋರ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮೀಸೆ ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ಕೇಶವ, ಮಂಜುನಾಥ್, ರಮೇಶ್, ಸುಪ್ರೀಂಚಲ, ಸುಧಾಕರ್, ನವೀನ್, .ಶಿವು, ಅನಿಲ್‍ಕುಮಾರ್, ಅಕ್ಷಯ್, ಪುನಿತ್, ರೆಡ್ಡಿ ಮುಂತಾದವರಿದ್ದರು.

ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು – ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿಧನ

JANANUDI.COM NETWORK

ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು – ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿಧನ

ಕುಂದಾಪುರ, ನ.2. ಕುಂದಾಪುರದ ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು, ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿನ್ನೆ (ನವೆಂಬರ್ 1) ರಾತ್ರಿ 11ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿರುತ್ತಾರೆ.

ಮೃತ ದೇಹವು ಇಂದು ಮಧ್ಯಾಹ್ನ 2ಗಂಟೆಗೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವರ ಸ್ವಗ್ರಹಕ್ಕೆ ಆಗಮಿಸಲಿದೆ ಮತ್ತು ಅಂತ್ಯಕ್ರಿಯೆಯು ಸಂಜೆ 4ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಾಸು ಸೇರುಗಾರ್ ಕುಂದಾಪುರದ ಹಿರಿಯ ರಾಜಕಾರಣಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ಸಮಕಾಲೀನರಾಗಿದ್ದು ಪುರಸಭೆಯ ಸದಸ್ಯರಾಗಿದ್ದರು. ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದರು. 25ಕ್ಕೂ ಹೆಚ್ಚು ವರ್ಷಗಳಿಂದ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಅವರ ಗಣೇಶ್ ಸ್ಟೋರ್ಸ್ ಎಂಬ ಅಂಗಡಿ ಕುಂದಾಪುರದಲ್ಲಿ ಪ್ರಸಿದ್ಧ ಕಿರಾಣಿ ಅಂಗಡಿಗಳಲ್ಲಿ ಒಂದಾಗಿದೆ. ಮೃತರು 4 ಪುತ್ರರು, 3 ಪುತ್ರಿಯರು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಅಕಸ್ಮಿಕವಾಗಿ ನದಿಯಲ್ಲಿ ಬಿದ್ದ ಡೇವಿಡ್ ಕರ್ವಾಲ್ಲೊ ಸಾವನ್ನಪ್ಪಿದ್ದಾರೆ

JANANUDI.COM NETWORK

ಅಕಸ್ಮಿಕವಾಗಿ ನದಿಯಲ್ಲಿ ಬಿದ್ದ ಡೇವಿಡ್ ಕರ್ವಾಲ್ಲೊ ಸಾವನ್ನಪ್ಪಿದ್ದಾರೆ

 

ಗುಜ್ಜಾಡಿ ಗ್ರಾಮದ ನಾಯಕ್ವಾಡಿ ನಿವಾಸಿ ಡೇವಿಡ್ ಕರ್ವಾಲ್ಲೊ (43ವರ್ಷ) ರವರು ದಿನಾಂಕ 1/11/2019 ರಂದು ಬೆಳಿಗ್ಗೆ 9.00 ಗಂಟೆಯ ಸುಮಾರಿಗೆ ಕನ್ನಡಕುದ್ರು – ಗುಜ್ಜಾಡಿ ಮಧ್ಯೆ ಸೌಪರ್ಣಿಕಾ ನದಿಯಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದಿದ್ದರು.

ಇಂದು ಅವರ ದೇಹ ದೊರಕಿದ್ದು ಅವರು ಮ್ರತ ಪಟ್ಟಿದ್ದಾರೆಂದು ತಿಳಿದು ಬಂದಿದೆ. ಅವರು ಪತ್ನಿ ಶೋಭಾ ಕರ್ವಾಲ್ಲೊ, ಮತ್ತು ೩ ಮಕ್ಕಳನ್ನು ಅಗಲಿದ್ದಾರೆ.

 

ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ವೊ ಜಲ್ಮಾ ದೀಸ್ ಆಚರಣ್

JANANUDI.COM NETWORK

ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ವೊ ಜಲ್ಮಾ ದೀಸ್ ಆಚರಣ್

 

ಕುಂದಾಪುರ್, ನ.2: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಶಿಕ್ಪಾ ಸಂಸ್ಥೊ ಸೈಂಟ್ ಮೇರಿಸ್ ಪಿ.ಯು.ಕಾಲೇಜಿಚೊ ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ಜಲ್ಮಾ ದೀಸ್ ಆಚರಣ್ ಫಿರ್ಗಜ್ ಗಾರಾನಿಂ ಆಚರಣ್ ಕೆಲೊ.
ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ವಿಗಾರ್ ಮಾ|ಬಾ| ವಿಜಯ್ ಡಿಸೋಜ್ ಹಾಂಚ್ಯಾ ಸವೆಂ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸಾನ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಕಾರ್ ಕೇಕ್ ಕಾತರ್ನ್ ಸಂಭ್ರಮ್ ಆಚರ್ಸಿಲೊ. ಫಿರ್ಗಜ್ ಉಪಾಧ್ಯಕ್ಷ್ ಜೇಕಬ್ ಡಿಸೋಜಾನ್ ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸಾಕ್ ಸರ್ವಾಂಚ್ಯಾ ನಾಂವಿ ಬರೆ ಮಾಗ್ಲೆಂ.
ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸಾನ್ ಜಲ್ಮಾ ದೀಸ್ ಆಚರಣ್ ಕೆಲ್ಯಾ ಪಾಸೊತ್ ಧನ್ಯವಾದ್ ಪಾಠಯ್ಲೆಂ. ಫಿರ್ಗಜ್ ಪ್ರಜಾನ್ ತಾಂಕಾ ಶುಭಾಶಯ್ ಪಾಠಯ್ಲೆಂ. ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ಉಪಸ್ಥಿತ್ ಆಸಲ್ಲೆಂ. ಬಾಪ್ ವಿಜಯ್ ಡಿಸೋಜಾನ್ ಕಾರ್ಯೆ ಚಲವ್ನ್ ವೆಲೆಂ. ಗೊ.ಮ. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಾಚಿ ಸಂಚಾಲಕಿ, ಗುರ್ಕಾರ್, ಪ್ರತಿನಿಧಿ. ಆರ್ಥಿಕ್ ಸಮಿತಿ ಸಾಂದೆ ಧರ್ಮ್ ಭಯ್ಣಿ, ಆನಿ ಸಭಾರ್ ಫಿರ್ಗಜ್‍ಗಾರ್ ಹ್ಯಾ ಕಾರ್ಯಾಕ್ ಹಾಜರ್ ಆಸಲ್ಲೆಂ.

 

 

 

ಡಾ. ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

JANANUDI.COM NETWORK

ಡಾ. ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ 

ಕುಂದಾಪುರ : ತಾಲೂಕಿನಲ್ಲಿ ಡಾ. ರಾಜ್ ಸಂಘಟನೆ ಕನ್ನಡಾಭಿಮಾನದ ಆಶ್ರಯದಲ್ಲಿ ಹಲವಾರು ವರ್ಷಗಳಿಂದ ಕನ್ನಡ ಪರ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಂಘಟನೆಯವರು ನಿನ್ನೆ ಶುಕ್ರವಾರ ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ  ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಕನ್ನಡ ರಾಜ್ಯೋತ್ಸವ ವೇದಿಕೆಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ಮಾತನಾಡಿ, ಭಾರತವು ಅತೀ ದೊಡ್ಡ ನಾಗರೀಕತೆ ಹೊಂದಿದ್ದು ಅದರಲ್ಲಿ ಎರಡೂವರೆ ಸಾವಿರ ವರ್ಷ ಇತಿಹಾಸವುಳ್ಳ ಕರ್ನಾಟಕವನ್ನು ಹಲವಾರು ರಾಜವಂಶಗಳು ಆಳ್ವಿಕೆ ನಡೆಸಿದ್ದಾರೆ. ಆ ಅವಧಿಯಲ್ಲಿ ಕಲೆ-ಸಾಹಿತ್ಯ ಮೊದಲಾದ ಕೊಡುಗೆಗಳನ್ನು ನಾಡಿಗೆ ನೀಡಿರುವುದನ್ನು ಸ್ಮರಿಸಬಹುದು. ಪಾಶ್ಚಾತ್ಯ ಸಂಸ್ಕ್ರತಿ, ಇತರೇ ಭಾಷೆಗಳಿಗೆ ಮಾರುಹೋಗುತ್ತಿರುವ ಯುವಕರಲ್ಲಿ ಕನ್ನಡ ಪ್ರೇಮ ಬೆಳೆಸಲು ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ. ಕನ್ನಡ ನಾಡು, ಕರ್ನಾಟಕ ಹೆಸರು ಬರಲು ಅವಿರತವಾಗಿ ಶ್ರಮಿಸಿ ತ್ಯಾಗ ಮಾಡಿದ ಮಹಾನುಭಾವರನ್ನು ಸ್ಮರಿಸಿಕೊಂಡು ಆದರ್ಶ ಮಾರ್ಗದಲ್ಲಿ ಸಾಗಬೇಕಿದೆ. ಕನ್ನಡದ ಬಗೆಗಿನ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ವರ್ಷವಿಡೀ ಕನ್ನಡ ಭಾಷಾಭಿಮಾನ ನೆಲ ಜಲದ ಬಗೆಗಿನ ಪ್ರೀತಿ ಉಳಿಸಿ, ಬಳಸಿ ಬೆಳಸಬೇಕು. ಮೂರು ವರ್ಷಗಳಿಂದ ತಾನು ಕುಂದಾಪುರದ ಡಾ. ರಾಜ್ ಸಂಘಟನೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿ ಸಂಘಟನೆಯ ಕಾರ್ಯಗಳನ್ನು ಶ್ಲಾಘಿಸಿದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಅಖಂಡ ಕರ್ನಾಟಕ ಕಲ್ಪನೆಯ ಹೋರಾಟಗಾರನ್ನು ನೆನಪಿಸಿಕೊಂಡು ಅವರ ಸನ್ನಡತೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಭಾಷೆ ಉಳಿವು ಮತ್ತು ಏಳಿಗೆಗಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ಮಾನವೀಯ ಮೌಲ್ಯ , ಅಭಿವ್ರದ್ಧಿ, ಹಾಗೂ ನಾವೆಲ್ಲಾ ಒಂದು ಎಂಬ ಚಿಂತನೆಗಳ ಮೂಲಕ ರಾಜ್ ಸಂಘಟನೆಯು ಕನ್ನಡ ಪ್ರೇಮವನ್ನು ಸಾರುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭ ಡಾ. ರಾಜ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿಗಳಾದ ಅಜೇಂದ್ರ ಶೆಟ್ಟಿ, ಮುಸ್ತಾಫ, ಸಂಘಟನೆಯ ಪ್ರಮುಖರಾದ ಸುನೀಲ್ ಖಾರ್ವಿ, ಸಚಿನ್,ಪ್ರಭಾಕರ ಖಾರ್ವಿ, ಅಗಸ್ಟೀನ್ ಡಿಸೋಜ, ರಾಯ್ಸನ್ ಡಿಸೋಜಾ, ಗಣೇಶ್, ನವೀನ್, ರಾಮಚಂದ್ರ ಪೂಜಾರಿ, ರಾಘು ಕೋಡಿ ಮುಂತಾದವರು ಉಪಸ್ಥಿತರಿದ್ದರು.
ಡಾ. ರಾಜ್ ಸಂಘಟನೆಯ ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿ, ಗೋಪಾಲ ಮಡಿವಾಳ ಪ್ರಾಸ್ತಾವನೆಗೈದರು. ಪ್ರಣಮ್ಯ ಪೂಜಾರಿ ಪ್ರಾರ್ಥಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ಮಝರ್ ಕುಂದಾಪುರ ವಂದಿಸಿದರು.

ಶ್ರೀನಿವಾಸಪುರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ಎಸ್‌.ಮುನಿಸ್ವಾಮಿ ಚಾಲನೆ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ಎಸ್‌.ಮುನಿಸ್ವಾಮಿ ಚಾಲನೆ 
ಶ್ರೀನಿವಾಸಪುರ: ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕು. ದೇಶ ಕಟ್ಟುವ ಸಂಕಲ್ಪ ಕೈಗೊಳ್ಳುವಂತೆ ಮಾಡಬೇಕು ಎಂದು ಲೋಕಸಭಾ ಸದಸ್ಯ ಎಸ್‌.ಮುನಿಸ್ವಾಮಿ ಹೇಳಿದರು.
  ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ರಾಷ್ಟ್ರೀಯ ಏಕತಾ ದಿವಸ್‌ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್‌ ರಾಷ್ಟ್ರೀಯ ಏಕತೆಯ ಸಂಕೇತವಾಗಿದ್ದಾರೆ. ಅವರ ಅವಿರತ ಶ್ರಮ ಹಾಗೂ ದೃಢ ಸಂಕಲ್ಪದ ಪರಿಣಾಮವಾಗಿ ಭಾರತ ಒಂದು  ವಿಶಾಲ ದೇಶವಾಗಿ ಉಳಿಯಲು ಸಾಧ್ಯವಾಯಿತು ಎಂದು ಹೇಳಿದರು.
  ಮಕ್ಕಳು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಧೈರ್ಯ ಹಾಗೂ ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
  ಈ ಸಂದರ್ಭದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಅವರು ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಗುರುವಾರ ನಿವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳಿಗೆ ಏಕತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
  ತಹಶೀಲ್ದಾರ್‌ ಕೆ.ಎನ್‌.ಸುಜಾತ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಬಿಜೆಪಿ ಮುಖಂಡರಾದ ಡಾ. ಕೆ.ಎನ್‌.ವೇಣುಗೋಪಾಲ್‌ ಜಯರಾಮರೆಡ್ಡಿ, ಎಂ.ಲಕ್ಷ್ಮಣಗೌಡ, ವೆಂಕಟೇಗೌಡ, ರೆಡ್ಡಪ್ಪ, ಹೊದಲಿ ನಾರಾಯಣಸ್ವಾಮಿ, ಕೊಟ್ರಗುಳಿ ನಾರಾಯಣಸ್ವಾಮಿ, ಯಲ್ದೂರು ಪದ್ಮನಾಭ್‌, ಸುಗಟೂರು ಚಲಪತಿ,  ರಾಮಾಂಜಿ, ಸುನಿಲ್‌ ಇದ್ದರು.