HOLY ROSARY CHURCH, KUNDAPUR – 450 th JUBILEE SOUVENIR 2021

SAD DEMISE GREG MICHAEL CARDIN (23) Gangolli

OBITUARY  (SAD DEMISE) 

GREG MICHAEL CARDIN (23) Gangolli.

S/O Gregory Cardin and Gretta Cardin

B/O Supritha G Cardin,

Church Road, Gangolli.

 

Born-: 26.10.1996.

Died-: 09.11.2019

(Cause of death is tragic Scooty – Var Accident at Bangalore)

Funeral Cortege Leaves Residence on 11.11.2019 at 4:00 p.m. To Immaculate Conception Church, Gangolli, Followed  By Mass At 4.00 P.M

 

Address-: Cardin House,

Church Road, Gangolli..

 

Contact : 9632120471, 9902106027.

 (ಗಂಗೊಳ್ಳ್ಳಿಯ ಗ್ರೆಗೊರಿ ಕಾರ್ಡಿನ್ ಮತ್ತು ಗ್ರೆಟ್ಟಾ ಕಾರ್ಡಿನ್ ಪುತ್ರನಾದ  ಗ್ರೆಗ್ ಮೈಕಲ್ ಕಾರ್ಡಿನ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಇವರು ತಾರೀಕು 9 ರಂದು ಬೆಂಗಳೂರು ಎರ್ ಪೊರ್ಟ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ತೀರಿ ಹೋಗಿದ್ದರು. ಅವರ ತಂದೆ ತಾಯಿ ಮೂಲತ ಗಂಗೊಳ್ಳಿಯವರಾಗಿಗ್ದ್ದು, ಅವರು ಕಲ್ಯಾಣಪುರದಲ್ಲಿ ವಾಸಿಸುತಿದ್ದಾರೆ. ಅವರ ಅಂತೀಮ ಕ್ರಿಯೆ ಇವ್ಗತ್ತು 11-11-19 ರಂದು ಗಂಗೊ ಳ್ಳಿಯಲ್ಲಿ ನಡೆಯುತ್ತದೆ) 

ಕರ್ನಾಟಕ ಸರ್ಕಾರದ ಮಾನ್ಯತೆಯ ಸಂಯೋಜಿತ  ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ 

ಕರ್ನಾಟಕ ಸರ್ಕಾರದ ಮಾನ್ಯತೆಯ ಸಂಯೋಜಿತ  ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ 

ಕುಂದಾಪುರ,ನ.೯.  ಕರ್ನಾಟಕ ಸರ್ಕಾರದ ಮಾನ್ಯತೆ ಕರ್ನಾಟಕ  ರಾಜ್ಯ ರಾಜ್ಯ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾ  ಪತ್ರಕರ್ತರ ಸಂಘದ ಸಂಯೋಜಿತ  ಸಂಸ್ಥೆಯಾದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ನವೆಂಬರ್ 12 ಮಂಗಳವಾರ ಸಂಜೆ 5 ಗಂಟೆಗೆ ಕುಂದಾಪುರದ ಜ್ಯೂನಿಯರ್ ಕಾಲೇಜಿನ (ಬೋರ್ಡ್ ಹೈಸ್ಕೂಲ್) ಕಲಾಮಂದಿರದಲ್ಲಿ ನಡೆಯಲಿದೆ.

   ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಮತ್ತು ಚಿಂತಕ ದಿನೇಶ್ ಅಮೀನ್ ಮಟ್ಟು “ಕವಲು ದಾರಿಯಲ್ಲಿ ಪತ್ರಕರ್ತ” ಎಂಬ ಶೀರ್ಷಿಕೆಯಡಿಯಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗಣೇಶ್ ಪ್ರಸಾದ್ ಪಾಂಡೇಲ, ಉಡುಪಿ ಜಿಲ್ಲಾ  ಪತ್ರಕರ್ತರ ಸಂಘದ ಅಧ್ಯಕ್ಷ ಪ್ರತಿಜ್ನಾ ವಿಧಿ ಭೋಧಿಸುವರು.

    ವಿಶೇಷ ಅತಿಥಿಗಳಾಗಿ ಹರಿರಾಮ್ ಶಂಕರ್, ಸ. ಪೊಲೀಸ್ ಆಧೀಕ್ಷಕರು. ಎ.ಎಸ್.ಎನ್.ಹೆಬ್ಬಾರ್, ಸ್ಥಾಪಕಧ್ಯಾಕ್ಷರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ. ಸಂತೋಷ್ ಸರಳಬೆಟ್ಟು, ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲಾ  ಪತ್ರಕರ್ತರ ಸಂಘ. ಕೆ.ಸಿ.ರಾಜೇಶ್, ಉಪಾಧ್ಯಕ್ಷರು ಉಡುಪಿ ಜಿಲ್ಲಾ  ಪತ್ರಕರ್ತರ ಸಂಘ.  ಎಸ್.ಜನಾರ್ಧನ ಮರವಂತೆ ಅಧ್ಯಕ್ಷರು ಬೈಂದೂರು  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಧ್ಯಕ್ಷರು ಚಿತ್ತೂರು ಪ್ರಭಾಕರ ಆಚಾರ್ಯ, ಬ್ರಹ್ಮಾವರ. ಕುಂದಾಪುರ  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶಶಿಧರ ಹೆಮ್ಮಾಡಿ,   ನಾಗರಾಜ ರಾಯಪ್ಪನಮಠ, ಪ್ರಧಾನ ಕಾರ್ಯದರ್ಶಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸತೀಶ್ ಆಚಾರ್ ಸಿದ್ದಾಪುರ,  ಕೋಶಾಧಿಕಾರಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ  ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿರುವರು.

   ಈ ಕಾರ್ಯಕ್ರಮಕ್ಕೆ ಕುಂದಾಪುರ  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶಶಿಧರ ಹೆಮ್ಮಾಡಿ ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತ ಕೋರಿದ್ದಾರೆ..

 

ಮಣ್ಣಿನ ಸೊಗಡಿನ ಸಾಹಿತಿ ಆರ್.ಚೌಡರೆಡ್ಡಿ ಅವರಿಗೆ  ರಾಜ್ಯೋತ್ಸವ ಪ್ರಶಸ್ತಿಯ ಗರಿ

JANANUDI.COM NETWORK

ಮಣ್ಣಿನ ಸೊಗಡಿನ ಸಾಹಿತಿ ಆರ್.ಚೌಡರೆಡ್ಡಿ ಅವರಿಗೆ  ರಾಜ್ಯೋತ್ಸವ ಪ್ರಶಸ್ತಿಯ ಗರಿ

ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಾಹಿತಿ ಹಾಗೂ ಪತ್ರಕರ್ತ ಆರ್.ಚೌಡರೆಡ್ಡಿ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೃಷಿಕ ಕಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಚಿಲಿಪಿಲಿ, ಗಂಧಗಾಳಿ, ಕುಕಿಲು, ಮಾತು ಮೌನದ ನಡುವೆ (ಕವನ ಸಂಕಲನಗಳು), ಪ್ರತಿಬಿಂಬ, ತೋರಣ (ಕಥಾ ಸಂಕಲನಗಳು) ಕಣಿವೆಯ ಕುಸುಮ, ಬೆಂಕಿಯ ಸಂಗ, ಮೂರು ಮುಖಗಳು ( ಕಾದಂಬರಿಗಳು), ಮಾವಿನ ಮಡಿಲು, ಬೇರು ಬೆವರು, ಸುಗ್ಗಿ ಮತ್ತಿತರ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕತೆ ಮತ್ತು ಕವಿತೆಗಳನ್ನು ಬರೆದಿದ್ದಾರೆ.
ಇವರ ಭಾವಗೀತೆಗಳಿಗೆ ಖ್ಯಾತ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್, ಡಿ.ಆರ್.ರಾಜಪ್ಪ, ಜಿ.ಪ್ರಭಾಕರರೆಡ್ಡಿ, ಜನ್ನಘಟ್ಟ ಕೃಷ್ಣಮೂರ್ತಿ ಅವರು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಕತೆ, ಕವನ, ಲೇಖನಗಳು ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಕೆಲವು ಮಕ್ಕಳ ಪದ್ಯಗಳು ಆನೆ ಬಂದಿತ್ತು ಎಂಬ ಹೆಸರಿನ ಧ್ವನಿ ಸುರುಳಿಯಲ್ಲಿ ಸೇರಿವೆ. ಕೆಲವು ಕವನಗಳು ತೆಲುಗು ಭಾಷೆಗೆ ಭಾಷಾಂತರಗೊಂಡಿವೆ
ಇವರು ಕನ್ನಡ ಜಾಗೃತಿ ಸಮಿತಿಯ ಸದಸ್ಯನಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪುಸ್ತಕಗಳ ಮೌಲ್ಯಮಾಪಕನಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ದಸರಾ ಪ್ರಧಾನ ಕವಿಗೋಷ್ಠಿ ಸೇರಿದಂತೆ ರಾಜ್ಯ ಹಾಗೂ ಅಖಿಲ ಭಾರತ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಹಲವು ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ.
ಇವರು ಸಾಹಿತ್ಯ ಸೇವೆಗಾಗಿ ದೊಡ್ಡಬಳ್ಳಾಪುರದ ಮಾತೃ ಚೌಡೇಶ್ವರಿ ಕಲಾ ಸಂಘದ ವತಿಯಿಂದ ‘ಕನಕದಾಸ ಪ್ರಶಸ್ತಿ’, ಪತ್ರಿಕಾ ಲೇಖನಗಳಿಗಾಗಿ ಬಿ.ವಿ.ನರಸಿಂಹಮೂರ್ತಿ ಪ್ರಶಸ್ತಿ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ಪ್ರಜಾವಾಣಿ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಸರ ಪ್ರೇಮಿಯಾದ ಆರ್.ಚೌಡರೆಡ್ಡಿ, ಮಾವಿನ ಮಡಿಲು ಎಂದು ಖ್ಯಾತವಾಗಿರುವ ಶ್ರೀನಿವಾಸಪುರ ತಾಲ್ಲೂಕಿನ ಸಸ್ಯ ಹಾಗೂ ಜೀವ ಜಗತ್ತಿನ ವೈವಿಧ್ಯತೆಯನ್ನು ತಮ್ಮ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಮಣ್ಣಿನ ವಾಸನೆಯಿಂದ ಕೂಡಿರುವ ಅವರ ಲೇಖನಗಳಲ್ಲಿ ಪರಿಸರ ಕಾಳಜಿ, ಸಾಂಸ್ಕøತಿಕ ಪರಂಪರೆಯ ಸೊಗಡು ಹಾಗೂ ಕೃಷಿ ಕ್ಷೇತ್ರದ ಏಳುಬೀಳು ಪ್ರಧಾನವಾಗಿ ಕಂಡುಬರುತ್ತದೆ.
ಪತ್ರಿಕಾ ಕ್ಷೇತ್ರ ಹಾಗೂ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಶೈಲಿಯ ಬರವಣಿಗೆಯಿಂದ ಗುರುತಿಸಿಕೊಂಡಿರುವ ರೆಡ್ಡಿಯವರು ಸ್ನೇಹ ಜೀವಿ. ಮಣ್ಣಿನ ನಂಟು ಬಿಡದೆ ಸಾಹಿತ್ಯದ ಜತೆಗೆ ಕೃಷಿಯನ್ನೂ ಅಪ್ಪಿಕೊಂಡಿದ್ದಾರೆ. ಮಣ್ಣಿನ ಸೊಗಡಿನ ಸಾಹಿತಿಗೆÀ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಿಕ್ಕಿರುವುದು ಸಾಹಿತ್ಯಾಸಕ್ತರಿಗೆ ಸಂತೋಷ ತಂದಿದೆ.

ಪತ್ರಕರ್ತ ಸಮಾಜಕ್ಕೆ ಉಪಕಾರ ಆಗುವ ಕೆಲಸ ಮಾಡಬೇಕು : ಎ.ಎಸ್.ಎನ್.ಹೆಬ್ಬಾರ್

JANANUDI.COM NETWORK

ಪತ್ರಕರ್ತ ಸಮಾಜಕ್ಕೆ ಉಪಕಾರ ಆಗುವ ಕೆಲಸ ಮಾಡಬೇಕು : ಎ.ಎಸ್.ಎನ್.ಹೆಬ್ಬಾರ್

ಪತ್ರಕರ್ತರಾಗಿ ಸೇವೆಸಲ್ಲಿಸುವವರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರ ವರದಿಗಳು ಧನಾತ್ಮಕವಾಗಿರಬೇಕು. ಆ ವರದಿಯಿಂದ ಜನರಿಗೆ ಉಪಯೋಗವಾದರೆ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ. ಎಷ್ಟೋ ಉತ್ತಮ ಪತ್ರಕರ್ತರಿಂದ ಸಮಾಜದಲ್ಲಿ ಕ್ರಾಂತಿಕಾರಿಕ ಬದಲಾವಣೆಗಳಾಗಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯಸಿಕ್ಕಿದೆ. ಅಸಹಾಯಕರಿಗೆ ಸಹಾಯ ದೊರಕಿದೆ. ಇದರಿಂದ ಪತ್ರಕರ್ತರಿಗೆ ಸಿಗುವ ತೃಪ್ತಿ ಖುಷಿಯೇ ಬೇರೆ. ” ಎಂದು ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಿದ “ಪತ್ರಿಕೋದ್ಯಮದ ಶಕ್ತಿ” ವಿಚಾರವಾಗಿ ಮಾತನಾಡುತ್ತಾ ಅವರು ತಮ್ಮ ಅನುಭವ ವಿವರಿಸಿದರು.

ಪತ್ರಕರ್ತರಾಗಿ ಎ.ಎಸ್.ಎನ್.ಹೆಬ್ಬಾರ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರಿ ಪ.ಪೂ.ಕಾಲೇಜು – ಕುಂದಪ್ರಭ ಸಹಭಾಗಿತ್ವದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪತ್ರಕರ್ತನಾಗಿ ಸಮಾಜಕ್ಕೆ ಉಪಕಾರ ಆಗುವ ವರದಿ ಪ್ರಕಟಿಸಿದ್ದರಿಂದ ಜನರಿಗೆ ದೊರಕಿದ ಸಹಾಯದ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿದ ಅವರು “ಕಲ್ಮರ್ಗಿ ಕುಡುಬಿಯರ ಕೇರಿಗೆ ಬೆಂಕಿ ಬಿದ್ದು ಎಲ್ಲರೂ  ಅನಾಥರಾದಾಗ, ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಯಿಂದ ಒಂದು ತಿಂಗಳೊಳಗೆ ಇಡೀ ಕೇರಿ ಪುನರ್‍ನಿರ್ಮಾಣಕ್ಕೆ ಸಹಾಯ ದೊರಕಿದುದನ್ನು ಹೇಳಿದರು. ದಾರಿ ತಪ್ಪಿ ಬೈಂದೂರು ಪೋಲೀಸ್ ಠಾಣೆಯಲ್ಲೇ ಉಳಿದ ಆಂಧ್ರದ ಬಾಲಕನಿಗೆ ಹೆತ್ತವರನ್ನು ಪತ್ತೆ ಹಚ್ಚಲು ಸುದ್ದಿ ಮೂಲಕ ನೆರವಾದ ವಿಷಯ ವಿವರಿಸಿದರು. ತನ್ನ ತಪ್ಪು ವರದಿಯಿಂದ ಸಮಾಜಕ್ಕೋ, ವ್ಯಕ್ತಿಗೋ ಅನ್ಯಾಯವಾದುದನ್ನು ಕಂಡು ನೊಂದು ಖಿನ್ನರಾದ ಪತ್ರಕರ್ತರೂ ಇದ್ದಾರೆ. ಸುದ್ದಿ ಮಾಡುವ ಧಾವಂತದಲ್ಲಿ ವಿಷಯದ ತಿಳುವಳಿಕೆ ಸರಿಯಾಗಿ ಇಲ್ಲದೇ ಹೋದರೆ ಕೆಟ್ಟ ಪರಿಣಾಮ ಉಂಟಾಗಬಹುದು ಸಮಾಜದಲ್ಲಿ ಗೌರವ ಪಡೆಯುವ ರೀತಿಯಲ್ಲಿ ಪತ್ರಕರ್ತ ಕೆಲಸಮಾಡಬೇಕು” ಎಂದು ಹೇಳಿದರು.

“ಐವತ್ತು ವರ್ಷಗಳ ಹಿಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ವ್ಯತ್ಯಾಸವಿದೆ. ಹೊಸ ಹೊಸ ಆವಿಷ್ಕಾರಗಳು ಪತ್ರಕರ್ತರಿಗೆ ಕೆಲಸ ಸುಲಭವಾಗಿಸಿದೆ. ಉದ್ಯೋಗ ಮಾಡಲು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ರಾಜಕೀಯ ಸುದ್ದಿಗಳನ್ನೇ ವೈಭವೀಕರಿಸುವ ಬದಲು ಇತರ ಪ್ರಾಮುಖ್ಯ ವಿಷಯಗಳತ್ತ ಪತ್ರಕರ್ತ ಗಮನ ಹರಿಸಿ ಓದುಗರನ್ನು ಸೆಳೆಯಬೇಕು” ಎಂದರು.

ಪತ್ರಿಕಾ ಕ್ಷೇತ್ರದಲ್ಲಿ ಸುವರ್ಣ ಸಂವತ್ಸರ ಆಚರಿಸಿದ ಎ.ಎಸ್.ಎನ್.ಹೆಬ್ಬಾರರನ್ನು ಸನ್ಮಾನಿಸಿ,ಗೌರವಿಸಲಾಯಿತು. ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಕುಂದಾಪುರದಲ್ಲಿ ಪತ್ರಿಕೋದ್ಯಮ ನಡೆದು ಬಂದ ದಾರಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಭುಜಂಗ ಶೆಟ್ಟಿ ಮಾತನಾಡಿ ” ಈ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಎ.ಎಸ್.ಎನ್.ಹೆಬ್ಬಾರ್ ನಮ್ಮ ಕಾಲೇಜಿಗೂ, ಕುಂದಾಪುರಕ್ಕೂ ಒಂದು ಹೆಮ್ಮೆ. 80ರ ಹರೆಯದಲ್ಲೂ ಯುವಕರಂತೆ ಚಟುವಟಿಕೆಯಲ್ಲಿರುವ ಇವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರ ಪತ್ರಿಕೋದ್ಯಮದ ಅನುಭವ ಕಥನ ದಾಖಲೆ ಮಾಡಬೇಕು” ಎಂದರು.

ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.

 

ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ಕ್ರಿಡೋತ್ಸವ

JANANUDI.COM NETWORK 

ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ಕ್ರಿಡೋತ್ಸವ

 

ಕುಂದಾಪುರ, ನ.8: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲಾಯ ಕ್ರಿಡೋತ್ಸವವು ನ. 8 ರಂದು ರೋಟರಿ ಕ್ಲಬ್ ರೀವರ್ ಸೈಡ್ ಇವರ ಸಹಯೋಗದಲ್ಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೀರ್ತನಾ ದ್ವಜಾರೋಹಣ ಮಾಡುವ ಮೂಲಕ ಕ್ರಿಡೋತ್ಸವನ್ನು ಉದ್ಘಾಟಿಸಿ ಶುಭ ಕೋರಿದರು.
ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ರೀವರ್ ಸೈಡ್ ಇದರ ಅಧ್ಯಕ್ಷ ರೊ| ರಾಜು ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ‘ಈ ಶಾಲೆಯು ಶಿಸ್ತಿಗೆ ಹೆಸರಾಗಿದ್ದು ಇಲ್ಲಿನ ಚಟುವಟಿಟಿಕೆಗಳು ಈ ಶಾಲೆಗೆ ನೆರವನ್ನು ನೀಡಲು ನಮಗೆ ಸ್ಪೂರ್ತಿರಾಯಕವಾಗಿವೆ. ಕ್ರೀಡೆಯಲ್ಲಿ ಎಲ್ಲರಿಗೂ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿಲ್ಲಾ, ಆದರೆ ಕ್ರೀಡೆ ನಮ್ಮನ್ನು ಆರೋಗ್ಯವಂತರಂತೆ ಇರಲು ಸಹಕರಿಸುತ್ತೆ, ಅದಕ್ಕಾಗಿ ನಾವು ನಮ್ಮಲ್ಲಿ ಕ್ರೀಡಾ ಪ್ರವ್ರತ್ತಿಯನ್ನು ಬೆಳೆಸಿಕೊಳ್ಳ ಬೇಕು’ ಎಂದು ನುಡಿದರು. ಇನ್ನೊರ್ವ ಅತಿಥಿ ಕುಂದಾಪುರ ಚರ್ಚ್ ರಸ್ತೆಯ ಪುರಸಭೆಯ ಸದಸ್ಯೆ ಸ್ವೇತಾ ಸಂತೋಷ್ ಪಥ ಸಂಚಲನೇಯ ಗೌರವವನ್ನು ಪಡೆದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ಸ್ವಾಗತಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕ ಮೈಕಲ್ ಪುರ್ಟಾರ್ಡೊ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಶಿಕ್ಷಕೇತರರು ಕ್ರೀಡಾ ಕೂಟಕ್ಕೆ ಸಹಕರಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು.

 

ವಂದಿಸಿದರು.

 

ಶ್ರೀನಿವಾಸಪುರ ಮಾಹಿತಿ ನೀಡದಿದ್ದಕ್ಕೆ 10,000 ಜುಲ್ಮಾನೆ – ಸಂಬಂಧ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ಮಾಹಿತಿ ನೀಡದಿದ್ದಕ್ಕೆ 10,000 ಜುಲ್ಮಾನೆ – ಸಂಬಂಧ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶ

 

ಕೋಲಾರ,ನ.7: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿಯಲ್ಲಿ 19-03-2016 ರಂದು ಕೇಳಿದ ಮಾಹಿತಿಯನ್ನು ನೀಡದೆ ಇರುವ ಹಿನ್ನಲೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಹೆಚ್.ಪಿ ಸುಧಾಮ್‍ದಾಸ್ ರವರು 10000 ಜುಲ್ಮಾನೆ ಮತ್ತು ಸಂಬಂದ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ನಿವಾಸಿ ಆರ್.ಟಿ.ಐ ಕಾರ್ಯಕರ್ತ ಶಬ್ಬೀರ್ ಅಹಮ್ಮದ್ ರವರು ಮಾಹಿತಿ ಹಕ್ಕು 2005 ರಂತೆ ಪ್ರಾರಂಭಿಕ ಶುಲ್ಕ 10 ರೂಪಾಯಿಗಳನ್ನು ಪಾವತಿಸಿ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ದಿನಾಂಕ 19-3-2016 ರಂದು ಅರ್ಜಿ ಸಲ್ಲಿಸಿ ತಾಲೂಕು ಪಂಚಾಯಿತಿ ಸ್ಟಾಂಪ್ ಡ್ಯೂಟಿ ಅಡಿಯಲ್ಲಿ ಖರ್ಚು ವೆಚ್ಚ ಸೇರಿದಂತೆ ಕೆಲವೊಂದು ದಾಖಲೆಗಳನ್ನು ಕೇಳಲಾಗಿತ್ತು.
ಆದರೆ ಮಾಹಿತಿ ನೀಡದೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಪ್ರಥಮ ಮೇಲ್ಮನವಿಯನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ 20-4-2016 ರಂದು ಅಧಿನಿಯಮದ ಕಲಂ 19(1) ರ ಅನ್ವಯ ಸಲ್ಲಿಸಲಾಗಿ ಇವರು ಸಹಿತ ಕೇಳಿರುವ ಮಾಹಿತಿಯನ್ನು ಕೊಡಿಸುವಲ್ಲಿ ವಿಫಲರಾಗಿರುತ್ತಾರೆ. ಈ ಸಂಬಂಧ ರಾಜ್ಯ ಮಾಹಿತಿ ಆಯೋಗಕ್ಕೆ ಕಲಂ 19(3)ರ ಅನ್ವಯ 2ನೇ ಮೇಲ್ಮನವಿಯನ್ನು ಸಲ್ಲಿಸಲಾಗಿ 31-5-2017 ರಂದು ವಿಚಾರಣೆ ಕೈಗೆತ್ತಿಕೊಂಡ ಆಯೋಗವು ಹಲವು ಬಾರಿ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗದ ಕಾರಣ ತಾಲೂಕು ಪಂಚಾಯತಿ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆನಂದಾಚಾರಿ ಇವರಿಗೆ ಆಯೋಗವು ದಿನಾಂಕ 27-3-2019 ರಂದು 10000 ರೂಗಳ ದಂಡ ವಿಧಿಸಿ ಆದೇಶ ನೀಡಿತ್ತು ಹಾಗೂ ಈ ಸಂಬಂಧಪಟ್ಟ ಅರ್ಜಿದಾರರಿಗೆ ಕೇಳಿರುವ ಮಾಹಿತಿ ಕೊಡಲು ಆದೇಶಿಸಿದ್ದರೂ ಮಾಹಿತಿ ನೀಡಿರುವುದಿಲ್ಲ.
ಈ ಸಂಬಂಧ ದಿನಾಂಕ 16-9-2019 ರಂದು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ಮಾಹಿತಿ ನೀಡಲು ವಿಫಲರಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ದಾಖಲೆಗಳ ಕಾಯ್ದೆ (ಕರ್ನಾಟಕ ಪಬ್ಲಿಕ್ ರೆಕಾರ್ಡ್ ಆಕ್ಟ್ 2010 ಮತ್ತು ಕರ್ನಾಟಕ ಪಬ್ಲಿಕ್ ರೆಕಾರ್ಡ್ ರೂಲ್ಸ್ 2013ರ) ಅನ್ವಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ರವರಿಗೆ ಮಾಹಿತಿ ಆಯುಕ್ತರಾದ ಹೆಚ್.ಪಿ.ಸುಧಾಮ್‍ದಾಸ್ ರವರು ಆದೇಶಿಸಿದ್ದಾರೆ.
ಸದರಿ ಸ್ಟಾಂಪ್ ಡ್ಯೂಟಿ ಹಣ ದುರುಪಯೋಗ ಆಗಿರುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ದಾಖಲೆ ನೀಡುವಲ್ಲಿ ತಾಲೂಕು ಪಂಚಾಯತಿ ಅಧಿಕಾರಿಗಳು ವಿಫಲವಾಗಿದ್ದು, ಪೊಲೀಸ್ ತನಿಖೆಯಿಂದಲೇ ಸತ್ಯಾಂಶ ಹೊರಬಿಳಬೇಕಾಗಿದೆ.

 

ಕೆಜಿಎಫ್ : ಶಾಂತಿಯುತವಾಗಿ ಈದ್-ಮಿಲಾದ್ ಆಚರಣೆ, ಎಸ್.ಪಿ. ಸುಜೀತ ಕರೆ

ಸಂಖ್ಯೆ: ಪ್ರೆಸ್/121/2019 ಜಿಲ್ಲಾ ಪೊಲೀಸ್ ಕಛೇರಿ,   
ಕೋಲಾರ ಚಿನ್ನದಗಣಿ ಪ್ರದೇಶ.
ದಿನಾಂಕ: 06.11.2019.

“ಪತ್ರಿಕಾ ಪ್ರಕಟಣೆ”

ಕೆಜಿಎಫ್ : ಶಾಂತಿಯುತವಾಗಿ ಈದ್-ಮಿಲಾದ್ ಆಚರಣೆ, ಎಸ್.ಪಿ. ಸುಜೀತ ಕರೆ

ಕೆಜಿಎಫ್., ನ. 6 :
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಈದ್-ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕರೆ ನೀಡಿದರು.
ಅವರು ಬುಧವಾರದಂದು ಸಂಜೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ಕೆಜಿಎಫ್‌ನಲ್ಲಿ ಇದುವರೆವಿಗೂ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಲ್ಲಾ ಸಮುದಾಯದವರು ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ, ಅದೇ ರೀತಿ ಈ ಬಾರಿ ಈದ್-ಮಿಲಾದ್ ಹಬ್ಬವನ್ನು ಸಹ ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕೆಂದು ಜಿಲ್ಲಾ ಎಸ್ಪಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕೋರಿದರು.
ಡಿವೈಎಸ್ಪಿ ಬಿ.ಎಲ್. ಶ್ರೀನಿವಾಸಮೂರ್ತಿ ಅವರು ಮಾತನಾಡಿ, ಈದ್-ಮಿಲಾದ್ ಹಬ್ಬದ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ನಿಯಮಾನುಸಾರ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿಯನ್ನು ಪಡೆದು ಕಾರ್ಯಕ್ರಮವನ್ನು ನಡೆಸುವಂತೆ ಕರೆ ನೀಡಿದರು.
ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳ ಮುಸ್ಲಿಂ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದು, ಹಿಂದಿನಿAದಲೂ ನಡೆಸಿಕೊಂಡು ಬಂದಿರುವ ಪದ್ದತಿಗಳನ್ನು ಮುಂದುವರೆಸಿಕೊAಡು ಹೋಗುವುದಾಗಿ, ಯಾವುದೇ ರೀತಿಯಲ್ಲೂ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್‌ಗಳು ಮುಸ್ತಾಕ್‌ಪಾಷ, ಬಿ.ಎನ್.ಶ್ರೀಕಂಠಯ್ಯ, ಎಂ.ಸೂರ್ಯಪ್ರಕಾಶ್, ವೆಂಕಟರಮಣಪ್ಪ, ವೆಂಕಟೇಶಮೂರ್ತಿ, ಜಿ.ಸಿ.ರಾಜು, ಶಿವರಾಜ್‌ಮುಧೋಳ್, ಆರ್‌ಪಿಐ ಟಿ.ಮಂಜುನಾಥ ಮತ್ತು ಜಿಲ್ಲೆಯ ಪಿಎಸ್‌ಐಗಳು ಹಾಜರಿದ್ದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು  ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದಿಂದ  ಪ್ರತಿಭಟನೆ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು  ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ  ಹಾಗೂ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದಿಂದ  ಪ್ರತಿಭಟನೆ 
ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಎದುರು  ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಹಾಗೂ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಹಾಗೂ ಹಾಲು ಉತ್ಪಾದಕರು ಸೀಮೆ ಹಸುಗಳೊಂದಿಗೆ ಪ್ರತಿಭಟನೆ ನಡೆಸಿದರು. 
  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಸುಂಕ ರಹಿತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಆಮದಿಗೆ ಒಪ್ಪಿಗೆ ಸೂಚಿಸುವದರ ಮೂಲಕ, ದೇಶದ ಹಾಲು ಉತ್ಪಾದಕರನ್ನು ಬೀದಿ ಪಾಲು ಮಾಡುತ್ತಿದೆ ಎಂದು ಹೇಳಿದರು.
   ದೇಶದಲ್ಲಿ ಕ್ಷೀರೋತ್ಪಾದನೆ ಈಗಾಗಲೇ ನಷ್ಟದ ಉದ್ಯಮವಾಗಿ ಪರಿಣಮಿಸಿದೆ. ಕ್ಷೀರೋತ್ಪಾದಕರಿಗೆ ಉತ್ಪಾದನಾ ವೆಚ್ಚವೂ ಸಿಗುತ್ತಿಲ್ಲ. ಆದ್ದರಿಂದ ಹಾಲಿನ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿರುವಾಗ, ಶೇ.64 ರಷ್ಟು ಆಮದು ಸುಂಕವನ್ನು ತೆಗೆಯುವುದರ ಮೂಲಕ ಅಗ್ಗದ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತರಿಸಿಕೊಳ್ಳಲು ಮುಂದಾಗಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
  ಹೈನುಗಾರಿಕೆ ಕ್ಷೇತ್ರವನ್ನು ನಾಶಮಾಡುವಂಥ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು. ಹಾಲಿನ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ಕೃಷಿ ತಜ್ಞ ಡಾ.ಸ್ವಾಮಿನಾಥ್‌ನ ಶಿಫಾರಸ್ಸಿನ ಅನ್ವಯ ಹಾಲಿನ ದರವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
  ಮುಖಂಡರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ ಕೆ.ಎನ್‌.ಸುಜಾತ ಅವರಿಗೆ ನೀಡಿದರು.
  ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌, ಕೆಆರ್‌ಆರ್‌ಎಸ್‌ ಅಧ್ಯಕ್ಷ ಎನ್‌.ಜಿ.ಶ್ರೀರಾಮರೆಡ್ಡಿ, ಮುಖಂಡರಾದ ಎನ್‌.ವೀರಪ್ಪರೆಡ್ಡಿ, ರಾಮಣ್ಣ, ವೇಣುಗೋಪಾಲ್, ಎಸ್‌.ಎಂ.ನಾಗರಾಜ್‌, ನಾಗರಾಜರೆಡ್ಡಿ, ಆರ್‌.ವೆಂಕಟೇಶ್‌, ಸೈಯದ್‌ ಫಾರೂಕ್‌, ವೆಂಕಟಲಕ್ಷ್ಮಮ್ಮ, ಸಿ.ಮಂಗಮ್ಮ, ಬೈರಾರೆಡ್ಡಿ, ಶ್ರೀನಿವಾಸ್‌, ನಂಜುಂಡಪ್ಪ, ರಮೇಶ್‌ ನರಸಿಂಹಮೂರ್ತಿ , ಸಿ.ಎಂ.ಗೌಡ, ನಂಜಪ್ಪ ಇದ್ದರು.

ಕುಂದಾಪುರ ಕಾರ್ಟೂನು ಹಬ್ಬದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ

JANANUDI.COM  NETWORK 

ಕುಂದಾಪುರ ಕಾರ್ಟೂನು ಹಬ್ಬದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ

ಕುಂದಾಪುರ ಕಾರ್ಟೂನು ಹಬ್ಬದ ‘ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್’ ಸ್ಪರ್ಧೆಯ ಪ್ರಯುಕ್ತ ನವೆಂಬರ್ 23 ರಂದು ಬೋರ್ಡ್ ಹೈಸ್ಕೂಲ್, ರೋಟರಿ ಕಲಾಮಂದಿರ ಕುಂದಾಪುರ ಇಲ್ಲಿ ಮಧ್ಯಾಹ್ನ 2 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.
5ನೇ ತರಗತಿಯ ತನಕ ಸ್ಪರ್ಧೆಯ ವಿಷಯವಾಗಿ ‘ಗಾಂಧೀಜಿ’ಯವರ ಚಿತ್ರ ರಚನೆ – ಪ್ರಥಮ ಬಹಮಾನ ರೂ.6000/-, ದ್ವಿತೀಯ ರೂ.4000/-. ತೃತೀಯ ರೂ. 2000/- ಮತ್ತು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ‘ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಕಾರ್ಟೂನು ರಚನೆ – ಪ್ರಥಮ ಬಹುಮಾನ 8,000/- ದ್ವಿತೀಯ ರೂ.6000/-, ತೃತೀಯ ರೂ. 3000/- ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ‘ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಚಿತ್ರರಚನೆ ಇದ್ದು – ಪ್ರಥಮ ರೂ. 10,000/-, ದ್ವಿತೀಯ ರೂ. 7000/-, ತೃತೀಯ ರೂ. 4000/- ಆಗಿರುತ್ತದೆ.
ಖ್ಯಾತ ಕಾರ್ಟೂನಿಸ್ಟ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ ಅವರ ಕುಟುಂಬದ ಸಹಯೋಗದೊಂದಿಗೆ ಹೆಣ್ಣು ಮಕ್ಕಳಲ್ಲಿ ಕಾರ್ಟೂನು ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿನಿಯರಿಗಾಗಿಯೇ ಆಯೋಜಿಸಲಾಗಿದೆ. ಮುಖ್ಯ ಸ್ಪರ್ದೆಯಿಂದ ಆಯ್ದ ಮೂರು ಅತ್ಯುತ್ತಮ ಕಾರ್ಟೂನುಗಳಿಗೆ ಪ್ರಥಮ ಬಹುಮಾನವಾಗಿ ರೂ. 7000/-, ದ್ವತೀಯ ರೂ. 5000/-, ತೃತೀಯ ರೂ. 3000/- ನೀಡಲಾಗುವುದು. ಪ್ರತೀ ಬಹುಮಾನದ ಜೊತೆಗೆ ಟ್ರೋಫಿ, ಸರ್ಟಿಫಿಕೇಟ್ ಮತ್ತು ಕಾರ್ಟೂನು ಪುಸ್ತಕ ಒಳಗೊಂಡಿರುತ್ತದೆ. ನವೆಂಬರ್ 24ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ವಿಜೇತ ಶಾಲೆ ಅಥವಾ ಕಾಲೇಜುಗಳಿಗೆ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ 9686109573ನ್ನು ಸಂಪರ್ಕಿಸಬಹುದೆAದು ಕಾರ್ಟೂನ್ ಹಬ್ಬದ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.