ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ




ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ




ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ 24ಕ್ಕೂ ಹೆಚ್ಚು ಮಂದಿ ಗಾಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶ್ರೀನಿವಾಸಪುರ: ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸಮೀಪ ಬುಧವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ ಯಲ್ದೂರಿನಿಂದ ಶ್ರೀನಿವಾಸಪುರಕ್ಕೆ ಬರುತ್ತಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್ ಶ್ರೀನಿವಾಸಪುರದಿಂದ ಯಲ್ದೂರಿಗೆ ಹೋಗುತ್ತಿತ್ತು. ಶೆಟ್ಟಿಹಳ್ಳಿ ಗ್ರಾಮದ ಗೆೇಟ್ ಸಮೀಪ ವೇಗವಾಗಿ ಸಾಗಿದ್ದ ಎರಡೂ ಬಸ್‌ಗಳು ಮುಖಾ ಮುಖಿ ಡಿಕ್ಕಿಯಾದವು. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯಿಂದಾಗಿ ಎರಡೂ ಬಸ್‌ಗಳ ಮುಂಭಾಗ ಜಖಂಗೊಂಡಿದೆ.
ಎರಡೂ ಬಸ್ ಚಾಲಕರು ಅತಿ ವೇಗವಾಗಿ ಬಸ್‌ಗಳನ್ನು ಓಡಿಸುತ್ತಿದ್ದುದು ದುರ್ಘಟನೆಗೆ ಕಾರಣವೆಂದು ಹೇಳಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 4ಪ್ರಯಾಣಿಕರನ್ನು ಕೋಲಾರದ ಆರ್‌ಎಲ್ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಗಾಯಾಳುಗಳನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ.
ಡಿವೈಎಸ್ ಉಮೇಶ್, ಪೊಲೀಸ್ ಸರ್ಕಲ್‌್ ಇನ್ಸ್‌ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಕಾಶ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

JANANUDI.COM NETWORK
ಬಿಲ್ಲವರ ಅವಹೇಳನ ಉಗ್ರ ಹೋರಾಟದ ಎಚ್ಚರಿಕೆ

ಕುಂದಾಪುರ : ಹತ್ತನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಕುರಿತು 17.12.2019ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಟೇಲೋದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವರ ಕುರಿತು ಅವಹೇಳನ ಗೈದ ರೀತಿಯಲ್ಲಿ ಆಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಎಂದು ಬಿಲ್ಲವ ಯುವ ಬಳಗದವರು ನಿನ್ನೆ ಕುಂದಾಪುರದಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಅಗ್ರಹಿಸಿದ್ದಾರೆ.
ಅಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಘವೆಂದ್ರ ರಾವ್ ಮೈಕಿನಲ್ಲಿ ಮಾತನಾಡುವ ಭರದಲ್ಲಿ “ ನಮ್ಮ ಭಾಗದಲ್ಲಿ ಹೊಟೇಲ್ ಉದ್ಯಮ ಮೇಜರ್ ಉದ್ಯಮ ಇಡೀ ಬೆಂಗಳೂರಿನಲ್ಲಿ ಕುಂದಾಪುರದವರೇ ಡಾಮಿನೇಟ್ ಗಾಣಿಗರು, ಪೂಜಾರ್, ಹಳೆ ಪೈದ ಇರಬಹುದು. ನಾವು ಬ್ರಾಹ್ಮಣ ಇರಬಹುದು ಆದರೆ ಇವತ್ತು ಬ್ರಾಹ್ಮಣರನ್ನೆಲ್ಲಾ ರುಬ್ಬುಗಲ್ಲಿಗೆ ಹಾಕಿ ರುಬ್ಬುತ್ತಾ ಇದ್ದಾರೆ. ಹೊಟೇಲ್ ನಲ್ಲಿ ಬ್ರಾಹ್ಮಣರು ಹಿಂದು ಹೋಗಿ ಆಯ್ತು, ಮುಂದಕ್ಕೆ ಬೇರೆ ಜಾತಿಯವರು ಹೋಗಿ ಆಯ್ತು ” ಎಂದು ಸಾರ್ವಜನಿಕವಾಗಿ ಬಿಲ್ಲವರ ಕುರಿತು ಕೀಳು ಮಟ್ಟ ದಲ್ಲಿ ಮಾತನಾಡಿದ್ದಾರೆ. ಈಗಾಗಲೇ ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಕುಂದಾಪುರದ ಬಿಲ್ಲವ ಸಮಾಜದ ವ್ಯಕ್ತಿಯೋರ್ವರು ಠಾಣೆಗೆ ರಾಘವೇಂದ್ರ ಅವರ ವಿರುದ್ಧ ದೂರು ಸಲ್ಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲಾ. ಮೇಲಾಗಿ ತಮ್ಮನ್ನು ಅವಮಾನಿಸಿದ ಕುರಿತು ಯಾವ ಬಿಲ್ಲವ ಸಂಘಟನೆಗಳೂ ಖಂಡಿಸದೇ ಇರುವುದು ಹಲವು ಅನುಮಾನಗಳಿಗೆಡೆ ಮಾಡಿಕೊಡುತ್ತಿದೆ. ಬಿಲ್ಲವ ಸಮುದಾಯದವರಾಗಿಯೂ, ಸಚಿವರಾಗಿಯೂ ಇರುವ ಕೋಟ ಶ್ರೀನಿವಾಸ ಪೂಜಾರಿಯವರು ಅಂದು ಮಂದರ್ತಿ ಮೇಳದಲ್ಲಿ ಬಿಲ್ಲವರಿಗೆ ಗೆಜ್ಜೆ ಕಟ್ಟದ ಸಮಯದಲ್ಲಿ ಮಂಚೂಣಿಯಲ್ಲಿದ್ದು, ಬಿಲ್ಲವರಿಗೆ ಮಾಡಿದ ಅಸ್ಪಶ್ರತೆಯ ವಿರುದ್ಧ ಸ್ವರ ಎತ್ತಿ ಬಿಲ್ಲವರಿಗೆ ಮೇಳದಲ್ಲಿ ಗೆಜ್ಜೆ ಕಟ್ಟಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಇಲ್ಲೂ ಸಹಾ ಬಿಲ್ಲವರ ಬಗ್ಗೆ ಕೀಳು ಮಟ್ಟದಲ್ಲಿ ಅವಮಾನಿಸಿದವರ ಬಗ್ಗೆ ಕೋಟ ಪೂಜಾರಿಯವರು ಧ್ವನಿಯೆತ್ತ ಬೇಕಿದೆ.
ಒಂದು ವಾರದೊಳಗೆ ನಮ್ಮನ್ನು ಅವಮಾನಿಸಿದ ರಾಘವೇಂದ್ರ ರಾವ್ ಕ್ಷಮೆ ಯಾಚಿಸದಿದ್ದರೆ ಬಿಲ್ಲವ ಸಮುದಾಯದ ನಾವುಗಳು ರಾಜ್ಯದ ಮೂಲೆಮೂಲೆಯ ಠಾಣೆಗಳಲ್ಲಿ ದೂರು ಸಹಿತ ನ್ಯಾಯಾಲಂiÀiಗಳಲ್ಲಿ ಮಾನ ನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಎಚ್ಚರಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಬಿಲ್ಲವ ಯುವ ಮುಖಂಡರಾದ ಪ್ರಶಾಂತ್ ಪೂಜಾರಿ, ನಿತೀಶ್ ಪೂಜಾರಿ, ಸಂಗಮ್ ಪ್ರದೀಪ್ ಉಪಸ್ಥಿತರಿದ್ದರು.
.
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ

ಕೋಲಾರ: ಪ್ರತಿ ಕ್ಷೇತ್ರವೂ ಸ್ಪರ್ಧಾತ್ಮಕತೆಯಿಂದ ಕೂಡಿದ್ದು ವ್ಯಾಪರಿಕರಣದಲ್ಲಿ ತಮ್ಮ ಛಾಪು ಮೂಡಿಸಲು ಶ್ರಮಪಡುವುದು ಅತ್ಯವಶ್ಯಕ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶಪ್ಪ ತಿಳಿಸಿದರು.
ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಕೆಜಿಎನ್ ಪ್ಯಾಲೇಸ್ ನಲ್ಲಿ ಮಂಗಳವಾರ ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಆಧುನಿಕ ಜೀವನ ಬಿರುಸಿನಿಂದ ಕೂಡಿದ್ದು, ಪ್ರತಿಯೊಬ್ಬರು ವಾಹನಕ್ಕೆ ಮೊರೆ ಹೋಗಿದ್ದಾರೆ. ಆ ವಾಹನಕ್ಕೆ ಬೇಕಾದ ಬಿಡಿಭಾಗಗಳ ವ್ಯಾಪರವು ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರವಾಗಿದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಲು ಶಿಸ್ತು, ಶ್ರಮ ಮುಖ್ಯವಾಗಿದೆ ಎಂದು ಹೇಳಿದರು. ಆಟೋಮೊಬೈಲ್ಸ್ ವ್ಯಾಪಾರ ಬಲು ಕಷ್ಟಕರವಾಗಿದ್ದು, ಇಲ್ಲಿ ದಿನಕ್ಕೆ ಹೊಸ ಹೊಸ ಅವಿμÁ್ಕರಗಳು ಉದ್ಭವಿಸುತ್ತದೆ. ಇದಕ್ಕೆ ಬಂಡವಾಳ ಹೂಡಿಕೆ ಮಾಡಲು ಸಾಲ ಮಾಡಿ ವ್ಯಾಪಾರ ಮಾಡುವುದಲ್ಲದೆ. ಸರ್ಕಾರಕ್ಕೆ ಲೆಕ್ಕ ತೋರಿಸುವುದು ಜಿಎಸ್ ಟಿ ಕಟ್ಟಿ ಲಾಭ ದೊರಕುವುದು ಅಸಾಧ್ಯವಾಗಿದೆ ಎಂದರು. ಯಾವುದೇ ಬಿಸಿನೆಸ್ ಮಾಡಿದರು ಗ್ರಾಹಕರ ನಂಬಿಕೆ, ಒಡಂಬಡಿಕೆ ಉಳಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಈ ಸಂಘವು ಪ್ರತಿ ತಿಂಗಳು ಸಭೆ ನಡೆಸುವುದು, ವಾರ್ಷಿಕೋತ್ಸವ ಆಚರಿಸಿ ಒಗ್ಗಟ್ಟಿನಿಂದ ಸಂಘವನ್ನು ಅಭಿವೃದ್ಧಿ ಪಡಿಸಿ ಎಂದು ಕರೆನೀಡಿದರು.
ಮಾನವ ಹಕ್ಕುಗಳ ಅಧ್ಯಕ್ಷ ಲಕ್ಷ್ಮಣ್ ಸಿಂಗ್ ಮಾತನಾಡಿ, ಸಂಘ, ಸಂಘಟನೆ ಮಾಡುವುದರ ಜತೆಗೆ, ವಾಹನದ ಬಿಡಿಭಾಗಗಳನ್ನು ಎಲ್ಲೆಂದರಲ್ಲಿ ಬಂದು ಮಾರುವ ಸ್ಥಿತಿ ನಿರ್ಮಾಣವಾಗಿದೆ. ಆ ಕಳಪೆ, ಗುಣಮಟ್ಟವಿಲ್ಲದ ವಸ್ತುವನ್ನು ಕೊಂಡರೆ ಏನಾಗುತ್ತದೆ ಎಂದು ಗ್ರಾಹಕರಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ದಲ್ಲಾಳಿಗಳು ನೇರವಾಗಿ ಗ್ಯಾರೇಜ್ ಗಳಿಗೆ ತೆರಳಿ ಬಿಡಿಭಾಗಗಳು, ಇಂಜಿನ್ ಆಯಿಲ್ ಮುಂತಾದ ಹಲವಾರು ವಸ್ತುಗಳನ್ನು ಮಾರುತ್ತಾರೆ. ಅದನ್ನು ತಡೆಯುವ ಕಾರ್ಯ ಈ ಸಂಘದಿಂದ ಆಗಬೇಕಾಗಿದೆ. ನಿಮ್ಮ ಕುಟುಂಬಕ್ಕೆ ಹಾಗೂ ಮಕ್ಕಳ ಪ್ರಗತಿಗೆ ಬೇಕಾದ ಎಲ್ಲಾ ಚಟುವಟಿಕೆಗಳು ಸಂಘದಡಿ ನಡೆಯಲಿ ಎಂದು ನುಡಿದರು.
ಆಟೊಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ.ಖಾನ್ ಮಾತನಾಡಿ, ನೂತನವಾಗಿ ಸಂಘವು ಜನಿಸಿದ್ದು, ಇದು ಬೆಳೆದು ದೊಡ್ಡದಾಗಲು ಹೆಚ್ಚಿನ ಸಮಯ ಬೇಕಾಗಿದೆ. ಒಗ್ಗಟ್ಟಿನಿಂದ ಈ ಶಿಶುವನ್ನು ಜೋಪಾನವಾಗಿ ಹೆಮ್ಮರವಾಗಿ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರದು. ಆಗ ನಮಗೆ ಈ ಸಂಘವು ನೆರಳು ನೀಡುತ್ತದೆ ಎಂದು ನುಡಿದರು.
ಈ ವೇಳೆ ಸಂಘದ ವತಿಯಿಂದ 6 ತಾಲೂಕಿನ ಆಟೋ ಮೊಬೈಲ್ಸ್ ಮಾಲೀಕರಿಗೆ ಗುರುತಿನ ಚೀಟಿ ಹಾಗೂ ಸಂಘದ ಸದಸ್ಯತ್ವ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಪಾಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಆಟೋ ಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎನ್.ಜೆ.ಅಜಯ್, ಕಾರ್ಯದರ್ಶಿ ಸಿ.ಸುರೇಶ್ ಕುಮಾರ್ ಬಫಾನ, ಖಾಜಾಂಚಿ ವಿ.ರಾಜೇಶ್ ಕುಮಾರ್, ಪದಾಧಿಕಾರಿಗಳಾದ ಧನಶೇಖರ್, ಅಬ್ದುಲ್ ವಾಜಿದ್ ಪಾಷ, ಸೈಯದ್ ಅಮೀರ್, ಬಿ.ಪಿ.ಸಂತೋμï, ಮೊಹಮದ್ ಜಮೀರ್, ಸೈಫುಲ ಷರೀಫ್, ಆರ್.ನಂದೀಶ್, ಶೇಕ್ ರಫೀಉಲ್ಲಾ, ಸೈಯದ್ ಅಫ್ಸರ್ ಮುಂತಾದವರು ಭಾಗವಹಿಸಿದ್ದರು.

JANANUDI.COM NETWORK
“ ಹಮ್ ಲೇ ಕೆ ರಹೇಂಗೆ ಆಝಾದಿ”
ಕುಂದಾಪುರದಲ್ಲಿ ಪೌರತ್ವ ಕಾಯಿದೆ ವಿರುದ್ಧ ಮೊಳಗಿದ ಪ್ರತಿತಿಭಟನೆ

ಕುಂದಾಪುರ : “ ಇದು ಕೇವಲ ಮುಸಲ್ಮಾನರನ್ನು ಮಾತ್ರ ಅಲ್ಲಾ ಹಿಂದುಳಿದವರು, ದಲಿತರು, ಆದಿವಾಸಿಗಳು ,ಶೂದ್ರರು ಸೇರಿದಂತೆ ಇನ್ನಿತರ ದುರ್ಬಲ ಭಾರತೀಯರನ್ನು ಹಣಿಯಲು ಕೇಂದ್ರ ಸರ್ಕಾರ ಜ್ಯಾರಿ ಮಾಡಲು ಯತ್ನಿಸುತ್ತಿರುವ ಮಾರಕ ಕಾಯಿದೆ, ರೂಪಾಯಿ ಅಪಮೌಲ್ಯದಿಂದ ಜೀವನ ಮಟ್ಟ ಕುಸಿದು ಹೋಗಿ ಜಿಡಿಪಿ ಅನ್ನುವುದು ಪಾತಾಳಕ್ಕೆ ತಲುಪಿರುವಾಗ ಮೋಶಾ ಬಣ ಅನ್ನುವುದು ದೇಶದಲ್ಲಿ ಪೌರತ್ವ ಕಾಯಿದೆಯನ್ನು ಜಾರಿ ಮಾಡಿ ಭಾರತೀಯರನ್ನು ಒಡೆದು ಆಳುವ ಬ್ರಿಟಿಷರ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ನಾವೆಲ್ಲರು ಒಂದಾಗಿ ಪ್ರತಿಭಟಿಸಬೇಕಿದೆ. ಇದು ಮತ್ತೊಂದು ರೀತಿಯ ಸ್ವಾತಂತ್ರ್ಯ ಸಂಗ್ರಾಮ ಇಲ್ಲಿ ನಮ್ಮನ್ನು ಆಳುವ ನಮ್ಮವರ ಕುಟಿಲತೆಯ ವಿರುದ್ದವೇ ಹೋರಾಡುವ ಸಮಯ ಬಂದಾಗಿದೆ, ಜಾತಿ ಮತ ಮರೆತು ಎಲ್ಲರೂ ಒಂದಾಗಿ ಹೋರಾಡಲು ಕಟಿಬದ್ಧರಾಗೋಣ ” ಎಂದು ಖ್ಯಾತ ವಾಗ್ಮಿ, ಲೇಖಕ ಚಳವಳಿಗಾರ ಶಿವ ಸುಂದರ್ ಅವರು ಹೇಳಿದರು. ಅವರು ನಿನ್ನೆ ಮದ್ಯಾಹ್ನ ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ವಿರುದ್ಧ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಕರೆ ನೀಡಿದರು.
ನಮ್ಮನ್ನು ಮೊದಲು ಬಲಿ ಪಡೆಯಲಿ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖ ಭಾಷಣಕಾರ, ಭಜರಂಗದಳ ದ ಮಾಜಿ ಪ್ರಮುಖ ಹೇಂದ್ರ ಕುಮಾರ್, ಆರೆಸ್ಸೆಸ್‍ನ ವಿಷನೀತಿಯನ್ನು ನನ್ನಷ್ಟು ಚೆನ್ನಾಗಿ ಅಥರ್À ಮಾಡಿಕೊಂಡವರು ಇತರರು ಇರಲಿಕ್ಕಿಲ್ಲಾ ಅಂತಹ ಬೀಷಣ ರಣ ಕೋಟೆಯಿಂದ ಹೊರಬಂದವನು ನಾನು, ದೇಶವನ್ನು ಛಿದ್ರ ಮಾಡಲು ಹೊರಟಿರುವ ಮೋದಿ ಶಾ ರ ಪೌರತ್ವ ಕಾಯಿದೆಗೆ ಯಾರೇ ಮುಸಲ್ಮಾನರಾಗಲಿ, ದಲಿತರಾಗಲಿ, ಹಿಂದುಳಿದ ವರ್ಗಗಳ ಹಿಂದುಗಳಾಗಲಿ, ಹೆದರುವ ಅವಶ್ಯಕತೆ ಇಲ್ಲಾ ಹಾಗೊಂದು ವೇಳೆ ಈ ನಿಮ್ಮನ್ನು ಈ ಕಾಯಿದೆ ಬಲಿ ತೆಗೆದು ಕೊಳ್ಳುವ ಮೊದಲು ನಮ್ಮನ್ನು ಅದು ಬಲಿ ಪಡೆಯಲಿ ಸ್ವತಂತ್ರ ಭಾರತದ ಪ್ರಜೆಗಳಾಗಿ ನಾವೆಲ್ಲಾ ಭಾರತ ಮಾತೆಯ ಮಕ್ಕಳು ನಮ್ಮನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲಾ ಎಂಬ ಸಂದೇಶವನ್ನು ಸಾರಿ ಕೇಂದ್ರ ಸರ್ಕಾರದ ಮಾರಕ ಕಾಯಿದೆಗೆ ಸಡ್ಡು ಹೊಡೆಯೋಣ, ನಿಮ್ಮ ಜತೆ ನಾವೀದ್ದೆವೆ. ಎಂದು ಪ್ರಖರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮದ್ಯಾಹ್ನ ಶುರುವಿಟ್ಟುಕೊಂಡ ಪ್ರತಿಭಟನ ಸಭೆಯು ಸಂಜೆ ತನಕ ನಡೆದರೂ ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಸಭಿಕರು ಸಭೆಯ ನಡು ನಡುವೆ ಹಂ ಲೇಖೆ ರಹೇಂಗೆ ಅಝಾದಿ ಎಂಬ ಘೋಷಣೆಗಳನ್ನು ಆಗ್ಗಾಗ್ಗೆ ಮೊಳಗಿಸುತ್ತಾ ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು. ಇಂತಹ ಪ್ರತಿಭಟನಾ ಸಭೆಗಳಲ್ಲಿ ತಮ್ಮನ್ನು ಯಾವತ್ತೂ ತೊಡಗಿಸಿಕೊಳ್ಳದ ಮುಸ್ಲಿಮ್ ಮಹಿಳೆಯರು ಈ ಸಭೆಯಲ್ಲಿ ತಂಡೋಪ ತಂಡವಾಗಿ ಕಂಡು ಬಂದು ಕಾರ್ಯಕ್ರಮ ಅಂತ್ಯದ ತನಕವೂ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.
ವೇದಿಕೆಯಲ್ಲಿ ದಲಿತ ಮುಖಂಡ ಸುಂದರ್ ಮಾಸ್ತರ್, ಪೌರತ್ವ ವಿರೋಧಿ ಸಮಿತಿ ಪ್ರಮುಖ ಬಾಲಕೃಷ್ಣ ಶೆಟ್ಟಿ, ಢಾ. ಅಬ್ದುಲ್ ರಶೀದ್ ಸಕಾಫಿ, ಎ.ಕೆ. ಅಶ್ರಫ್ ಸೇರಿದಂತೆ ಕಾರ್ಯಕ್ರಮದ ರೂವಾರಿ ಶಶಿಧರ ಹೆಮ್ಮಾಡಿ ಉಪಸ್ಥಿತರಿದ್ದರು.
ನರಬಲಿಯನ್ನು ಪಡೆಯುವಂತೆ ಯಡ್ಡಿಗೆ ಮಾಂತ್ರಿಕನ ಆದೇಶ-ಸುಧೀರ್ ಕುಮಾರ್ ಮರೋಳಿ
ತನ್ನ ಮಾತುಗಳಿಂದ ಇಡೀ ಸಭೆಯಲ್ಲಿ ಹೋರಾಟದ ಅದ್ಭುತ ಸಂಚಲನೆಯನ್ನು ತಂದ ಸುಧೀರ್ ಕುಮಾರ್ ಮರೋಳಿ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಮಂಗಳೂರು ಪೊಲೀಸ್ ಗುಂಡಿಗೆ ಬಲಿಯಾದ ಅಮಾಯಕ ಯುವಕರ ಪ್ರಸ್ತಾವಿಸುತ್ತ ಇದಕ್ಕೆ ಯಡಿಯೂರಪ್ಪನವರ ಕುಟುಂಬ ಮಾಂತ್ರಿಕನ ಸಲಹೆಯೇ ಕಾರಣ ಇರಬೇಕು ಯಾಕೇಂದರೆ ಅವರು ಮುಖ್ಯ ಮಂತ್ರಿ ಯಾಗುತ್ತಲೇ ನರಬಲಿ ಪಡೆಯುತ್ತಾರೆ, ಅಂದು ಮುಖ್ಯ ಮಂತ್ರಿಯಾಗುತ್ತಲೇ ಹಾವೇರಿಯಲ್ಲಿ ಇಬ್ಬರು ರೈತರ ಬಲಿ ಪಡೆದಿದ್ದರೆ, ಈ ಬಾರಿ ಮಂಗಳೂರು ಯುವಕರ ಬಲಿ ಪಡೆದಿದ್ದಾರೆ. ಎಂದು ಸುಧೀರ್ ಕುಮಾರ್ ಮರೋಳಿ ಕಟುಕಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

JANANUDI.COM NETWORK
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಉಪನ್ಯಾಸ

ಕುಂದಾಪುರ, ಡಿ.4: ಮಂಗಳೂರಿನ ಹೆಸರಾಂತ ಗಣಿತ ಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಬೊಸ್ಕೋ ಸಮೂಹ ಸಂಸ್ಥೆಗಳ ಸ್ಥಾಪಕರೂ ಆದ ಪ್ರೊ. ಎಸ್. ಎಸ್. ಬೊಸ್ಕೋ ರವರು ದಿನಾಂಕ-02-01-2020 ರಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ನೈಪುಣ್ಯತೆಯನ್ನು ಕಾಯ್ದುಕೊಳ್ಳಲು ಬೇಕಾದ ಜೆ.ಇ.ಇ ಮತ್ತು ಸಿ.ಇ.ಟಿ ಯಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ಕ್ರಷ್ಟ ದರ್ಜೆಯನ್ನು ಪಡೆಯಲು ಸುಲಭ ವಿಧಾನಗಳನ್ನು ತಿಳಿಸಿ ಉದ್ಯೋಗಾಧಾರಿತ ಉನ್ನತ ವ್ಯಾಸಂಗದ ಬಗ್ಗೆ ಮಾರ್ಗದರ್ಶನ ನೀಡಿದರು.
ಬೆಂಗಳೂರಿನ ಗುಂಬಿ ಸಾಫ್ಟ್ ವೇರ್ ಇದರ ಅಕಾಡೆಮಿಕ್ ಆಪರೇಶನ್ಸ್ ಮ್ಯಾನೇಜರ್ ಡಾ. ಎಸ್ ತಿಪ್ಪೇಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಜಗದೀಶ್ ಶೆಟ್ಟಿ, ಮಂಗಳೂರಿನ ಗುಂಬಿ ಸಾಫ್ಟ್ ವೇರ್ ನ ಸ್ಟುಡಿಯೋ ಇಂಜಿನೀಯರ್ ಶ್ರೀ ಸಂದೇಶ್ ಶಾನುಭೋಗ್- ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿಯ ಅಭಿಲಾಷ್ ಹತ್ವಾರ್ ಧನ್ಯವಾದ ಸಲ್ಲಿಸಿದರು.