HOLY ROSARY CHURCH, KUNDAPUR – 450 th JUBILEE SOUVENIR 2021

ಜಿಲ್ಲೆಯಲ್ಲಿ 2 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮೇಳ ಆಯೋಜನೆ –ಗಾಯಿತ್ರಿ ಎಂ

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಜಿಲ್ಲೆಯಲ್ಲಿ 2 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮೇಳ ಆಯೋಜನೆ –ಗಾಯಿತ್ರಿ ಎಂ
ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ ಫಲಪುಷ್ಪ ಪ್ರದರ್ಶನವನ್ನು 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಗಾಯಿತ್ರಿ ಎಂ. ಅವರು ತಿಳಿಸಿದರು. 
 ಇಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. 
 ಜ. 26 ಮತ್ತು 27 ರಂದು ಜಿಲ್ಲಾ ತೋಟಗಾರಿಕೆ ನರ್ಸರಿಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಶಿವಲಿಂಗ. ಈ ಶಿವಲಿಂಗವನ್ನು ಸಂಪೂರ್ಣವಾಗಿ ಗುಲಾಬಿ ಹೂಗಳಿಂದ ಮಾಡಲಾಗಿದ್ದು, ಈ ಗುಲಾಬಿಗಳನ್ನು ಜಿಲ್ಲೆಯ ಮುಳಬಾಗಿಲು ಮತ್ತು ಮಾಲೂರು ತಾಲ್ಲೂಕಿನ ರೈತರೆ ಬೆಳೆದಿರುವ ಗುಲಾಬಿ ಹೂಗಳಿಂದ ನಿರ್ಮಿಸಲಾಗಿದೆ. 
 ವಿಶೇಷವಾಗಿ ರಾಜ್ಯ ತೋಟಗಾರಿಕೆ ಪಿತಾಮಹರಾದ ಡಾ|| ಎಂ.ಹೆಚ್. ಮರಿಗೌಡರ ಮರಳಿನ ಕೆತ್ತನೆ ಹಾಗೂ ಮಕ್ಕಳ ಆಕರ್ಷಣೆಗಾಗಿ ಚಿಟ್ಟೆ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಮನೆಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು. 
 ಈ ಪ್ರದರ್ಶನದಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಲಾಗುವುದು. ಇಲಾಖೆಯ ನರ್ಸರಿಯ ಪಾಲಿಹೌಸ್‍ನಲ್ಲಿ ವಿವಿಧ ತರಕಾರಿಗಳನ್ನು ಬೆಳೆಯಲಾಗಿದ್ದು, ಬೆಳೆಗಳ ಪ್ರಾತ್ಯಕ್ಷತೆಯನ್ನು ಸಾರ್ವಜನಿಕರು ವೀಕ್ಷಿಸಬಹುದು ಎಂದು ತಿಳಿಸಿದರು. 
 ಫಲಪುಷ್ಪ ಪ್ರದರ್ಶನಕ್ಕೆ 4 ತಿಂಗಳಿನಿಂದ ಸಿದ್ಧತೆಗಳನ್ನು ನಡೆಸಲಾಗಿದ್ದು, ಸುಮಾರು 6 ಸಾವಿರ ವಿವಿಧ ರೀತಿಯ ಹೂಗಳ ಪಾಟುಗಳನ್ನು ಬಳಸಲಾಗಿದೆ. ಅಗ್ಲೋನೇಮಾ, ಅಕೇಲಿಪಾ, ಟ್ರೈಕೋಲರ್, ಅಕೇಲಿಪಾ ವಿಲ್ಕೆಸಿಯಾನಾ, ಪ್ಲುಮೇರಿಯಾ ಪುಡಿಕ ವೈಟ್, ಜಟ್ರೊಫಾ ಇಂಟಿಜಿರಿಮಾ, ಪೈಕಾಸ್ ಬೆಂಜಮಿನ್ ಗ್ರೀನ್, ಪೈಕಾಸ್‍ಬೆಂಜಮಿನ್ ವೈಟ್, ಎರಾಥೆಮಾಮ್ ಕೆಂಪು, ಎರಾಥೆಮಾಮ್ ನಿಗ್ರಿಮ್, ಎರಾಥೆಮಾಮ್ ಅಟ್ರೊಪುರ್ಪುರಿಯಮ್, ಯಲ್ಲೋ ವೈನ್ ಎರಾಥೆಮಾಮ್, ಎರಾಥೆಮಾಮ್ ಲೀಪ್ಟಿಕ್ ಗ್ರೀನ್, ಸಾಂಗ್ ಆಫ್ ಇಂಡಿಯಾ ಅಲಂಕಾರಿಕ ಗಿಡಗಳ ಪ್ರದರ್ಶನವಿದೆ ಎಂದು ಮಾಹಿತಿ ನೀಡಿದರು. 
 ತೋಟಗಾರಿಕೆ ಬೆಳೆಗಳಾದ ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ವಾಟರ್ ಆ್ಯಪಲ್, ನುಗ್ಗೆ, ಕರಿಬೇವು, ಸೀತಾಫಲ, ಬೆಣ್ಣೆ ಹಣ್ಣು, ಬೆಟ್ಟದ ಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಆರೆಂಜ್, ಹುಣಸೆ, ಚಕೋತ, ಹಲಸು ಸೇರಿದಂತೆ ವಿವಿಧ ಗಿಡಗಳು ಹಾಗೂ ಕೈ ತೋಟಕ್ಕೆ ಅಗತ್ಯವಾದ ತರಕಾರಿ ಬೀಜದ ಕಿಟ್‍ಗಳು ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 
 ಪ್ರದರ್ಶನದಲ್ಲಿ ಭಾಗವಹಿಸುವ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಉತ್ತಮ ಚಿತ್ರಗಳಿಗೆ ಮತ್ತು ರಂಗೋಲಿಗಳಿಗೆ ವಿಶೇಷ ಬಹುಮಾನವನ್ನು ವಿತರಿಸಲಾಗುತ್ತದೆ ಎಂದರು. 
 ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್ ಮಾತನಾಡಿ, ಈ ಪ್ರದರ್ಶನದಲ್ಲಿ ಇಲಾಖೆಯ ಯೋಜನೆಗಳನ್ನು ಬಿಂಬಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸಿರಿಧಾನ್ಯ ಮಳಿಗೆಗಳಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ರೈತರಿಗೆ ಸಮಗ್ರ ಬೇಸಾಯ ಪದ್ದತಿಯನ್ನು ಪರಿಚಯ ಮಾಡಲಾಗುವುದು ಎಂದು ತಿಳಿಸಿದರು. 
 ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ 10 ಜನರಿಗೆ,  ಪ್ರತಿ ತಾಲ್ಲೂಕಿನಿಂದ ತಾಲ್ಲೂಕು ಮಟ್ಟದಲ್ಲಿ 5 ಜನರಿಗೆ “ ಶ್ರೇಷ್ಠ ಕೃಷಿಕ” ಪ್ರಶಸ್ತಿಯನ್ನು ನೀಡಲಾಗುತ್ತದೆ. ರೈತರ ಸಾವಯವ ಕೃಷಿ, ಯಂತ್ರೋಪಕರಣಗಳ ಬಳಕೆ, ರೈತರು ಬೆಳೆದ ಬೆಳೆಗಳ ರಪ್ತು ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು ಎಂದರು. 
ಇದೇ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢ ವಿಶ್ವಾಸ ಹೊಂದಿರುವ ನಾವು,  ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು : ತಹಶೀಲ್ದಾರ್ ಕೆ.ಎನ್‌.ಸುಜಾತ 

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢ ವಿಶ್ವಾಸ ಹೊಂದಿರುವ ನಾವು,  ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು : ತಹಶೀಲ್ದಾರ್ ಕೆ.ಎನ್‌.ಸುಜಾತ 

ಶ್ರೀನಿವಾಸಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢ ವಿಶ್ವಾಸ ಹೊಂದಿರುವ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು ಎಂದು ತಹಶೀಲ್ದಾರ್ ಕೆ.ಎನ್‌.ಸುಜಾತ ಹೇಳಿದರು.
  ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮತದಾರರು ಹಾಗೂ ಕಚೇರಿ ಸಿಬ್ಬಂದಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮತದಾರರು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕು. ಮತದಾರರು ತಮ್ಮ ಘನತೆ ಹಾಗೂ ಗೌರವ ಎತ್ತಿಹಿಡಿಯುವ ಮತದಾರರ ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ಹೇಳಿದರು.
  ಉಪ ತಹಶೀಲ್ದಾರ್‌ ಎಂ.ಮಲ್ಲೇಶ್‌, ಚುನಾವಣಾ ಶಾಖೆ ಶಿರಸ್ತೇದಾರ್‌ ರುದ್ರಮ್ಮ, ವಿಷಯ ನಿರ್ವಾಹಕ ವಿಶ್ವನಾಥ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.

ಶ್ರೀನಿವಾಸಪುರದಲ್ಲಿ  ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಉಚಿತ ಆರೊಗ್ಯ ತಪಾಣಾ ಶಿಬಿರ ಉದ್ಘಾಟಿಸಿ ಪುರಸಭೆ ಮುಖ್ಯಾಧಿಕಾರಿ ವಿ. ಮೋಹನ್‌ ಕುಮಾರ್‌ ಮಾತನಾಡಿದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ  ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಉಚಿತ ಆರೊಗ್ಯ ತಪಾಣಾ ಶಿಬಿರ ಉದ್ಘಾಟಿಸಿ ಪುರಸಭೆ ಮುಖ್ಯಾಧಿಕಾರಿ ವಿ. ಮೋಹನ್‌ ಕುಮಾರ್‌ ಮಾತನಾಡಿದರು.
ಶ್ರೀನಿವಾಸಪುರ: ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಅಗತ್ಯ ಗಮನ ನೀಡಬೇಕು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು.
  ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಹಾಗೂ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬರ ಏರ್ಪಡಿಸಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಪ್ರತಿಯೊಬ್ಬರೂ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
  ಬದಲಾದ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರ ಸೇವೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಹಾಗೆಯೇ ಅವರ ಆರೋಗ್ಯ ಕೆಡದಂತೆ ನೊಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ ಪೌರ ಕಾರ್ಮಿಕರಿಗೆ ಪುರಸಭೆ ವತಿಯಿಂದ ಸುರಕ್ಷಾ ಕವಚ ಒದಗಿಸಲಾಗಿದೆ. ಕೈಗವಸು, ಶಿರಸ್ತ್ರಾಣದಂತ ಸಲಕರಣೆಗಳನ್ನು ಪೂರೈಸುವುದರ ಮೂಲಕ ಅವರ ಆರೋಗ್ಯ ರಕ್ಷಣೆಗೆ ಪೂರಕವಾದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
  ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಆರೊಗ್ಯ ತಪಾಸಣೆ ನಡೆಸಿ, ಅಗತ್ಯವಾದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
  ಪುರಸಭೆ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಭಿಯಂತರ ಶೇಖರ್‌ ರೆಡ್ಡಿ, ಪಿಎಒ ರಾಜೇಶ್ವರಿ, ಎಂಜಿಯಿಯರ್‌ ಶ್ರೀನಿವಾಸ್‌, ನಾಗೇಶ್‌ ಇದ್ದರು.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:: ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ

ವರದಿ: ವಾಲ್ಟರ್ ಮೊಂತೇರೊ

 

 

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:: ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ

 

 

ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಜೇಸಿಐ ಬೆಳ್ಮಣ್ಣು, ಯುವಜೇಸಿ ವಿಭಾಗದ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 150ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಆಡಳಿತ ಕಛೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.
ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್ ನಂದಳಿಕೆ ವರಕವಿ ಮುದ್ದಣನ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪುಷ್ಪರ್ಚನೆ ಸಲ್ಲಿಸುವ ಮೂಲಕ ನಂದಳಿಕೆ ವರಕವಿ ಮುದ್ದಣನ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ಸಾಹಿತ್ಯ ಲೋಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಿಸುವಂತೆ ಮಾಡಿದ ಮಹಾನ್ ಸಾಧಕ. ಅವರು 32 ವರ್ಷ ಮಾತ್ರ ಬದುಕಿದರೂ, ಜೀವನವಿಡಿ ಕಹಿಯುಂಡವರೂ, ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ನೀಡಿದ ಹಿರಿಮೆಗೆ ಪಾತ್ರರಾಗಿರುವ ಅವರು ಶ್ರೀ ರಾಮಾಶ್ವಮೇಧ ಕೃತಿ, ಶ್ರೀ ರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ಮಹಾಕಾವ್ಯಗಳು, ರತ್ನಾವತಿ ಕಲ್ಯಾಣ, ಕುಮಾರ ವಿಜಯ ಯಕ್ಷಗಾನ ಕೃತಿಗಳು ಮುದ್ದಣನ ಹೆಸರನ್ನು ಚಿರಸ್ಥಾಯಿಯಾಗಿಸಿವೆ ಎಂದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪದಾಧಿಕಾರಿಗಳಾದ ನಂದಳಿಕೆ ರಾಜೇಶ್ ಕೊಟ್ಯಾನ್, ನಂದಳಿಕೆ ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಗೋಳಿಕಟ್ಟೆ, ಬೆಳ್ಮಣ್ಣು ಯುವಜೇಸಿ ವಿಭಾಗದ ಅಧ್ಯಕ್ಷ ಸಂದೀಪ್ ಕುಲಾಲ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಜೊತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀನಿವಾಸಪುರ ತಾಲ್ಲೂಕಿನ ವೇಂಪಲ್ಲಿ ಗ್ರಾಮದಲ್ಲಿ  ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಏರ್ಪಡಿಸಿದ್ದ ಜನ ಜಾಗೃತಿ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌ ವೇಣುಗೋಪಾಲ್‌ ಮಾತನಾಡಿದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಶ್ರೀನಿವಾಸಪುರ ತಾಲ್ಲೂಕಿನ ವೇಂಪಲ್ಲಿ ಗ್ರಾಮದಲ್ಲಿ  ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಏರ್ಪಡಿಸಿದ್ದ ಜನ ಜಾಗೃತಿ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌ ವೇಣುಗೋಪಾಲ್‌ ಮಾತನಾಡಿದರು.

ಶ್ರೀನಿವಾಸಪುರ: ಪ್ರತಿ ಪಕ್ಷಗಳು  ಪೌರತ್ವ ತಿದ್ದುಪಡಿ ಕಾಯ್ಕೆ ಬಗ್ಗೆ ತಪ್ಪು ಸಂದೇಶ ಬಿತ್ತುತ್ತಿವೆ. ಇದರಿಂದ ಅಶಾಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು.

  ತಾಲ್ಲೂಕಿನ ವೇಂಪಲ್ಲಿ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ಕೆ ಬೆಂಬಲಿಸಿ ಗುರುವಾರ ಏರ್ಪಡಿಸಿದ್ದ ಜನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಇಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸದುದ್ದೇಶದಿಂದ ಮಾತ್ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

  ಈ ಹಿಂದಿನ ಸರ್ಕಾರಗಳು ಮಾಡಲು ಉದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ಕೆಯನ್ನು ಪ್ರಧಾನಿ ಮೋದಿ ಅವರು ಜಾರಿಗೆ ತಂದಿದ್ದಾರೆ. ಇದರಿಂದ ಅನ್ಯ ದೇಶಗಳಲ್ಲಿ ಕಿರುಕಳಕ್ಕೆ ಒಳಗಾಗಿ ಭಾರತಕ್ಕೆ ಬಂದಿದ್ದ ಅಲ್ಪ ಸಂಖ್ಯಾತರಿಗೆ ನೆಮ್ಮದಿ ದೊರೆಯಲಿದೆ. ಉಳಿದುಕೊಳ್ಳಲು ತಮ್ಮದೇ ಸೂರು ಸಿಗಲಿದೆ. ಇದನ್ನು ವಿರೋಧಿಸುವುದು ದೇಶ ದ್ರೋಹವಾಗುತ್ತದೆ. ಭಾರತದ ಅಲ್ಪ ಸಂಖ್ಯಾತರಲ್ಲಿ ಅನಗತ್ಯ ಭಯ ಬಿತ್ತುವ ಕಾರ್ಯ ನಿಲ್ಲಬೇಕು ಎಂದು ಹೇಳಿದರು.

   ಬಿಜೆಪಿ ರಾಜ್ಯ ಪರಿಷತ್‌ ಸದಸ್ಯ ಜಯರಾಮರೆಡ್ಡಿ ಮಾತನಾಡಿ, ಕಾಂಗ್ರೆಸ್‌ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ಕೆ ಬಗ್ಗೆ ಮುಸ್ಲಿಮರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಹೇಳಿದರು.

  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ಲಕ್ಷ್ಮಣಗೌಡ ಮಾತನಾಡಿ, ಪೌರತ್ವ ತಿದ್ದುಪಡಿ ಮಸೂದೆ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಒಂದು ಪ್ರಮುಖ ಅಂಶವಾಗಿತ್ತು. ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ನಿಲುವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಹೇಳಿದರು.

  ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಮಾಜಿ ಅಧ್ಯಕ್ಷ ವೆಂಕಟೇಗೌಡ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಇ,ಶಿವಣ್ಣ, ಮುಖಂಡರಾದ ರಾಮಕೃಷ್ಣಾರೆಡ್ಡಿ, ಟಿ.ಎನ್‌.ಬೈರಾರೆಡ್ಡಿ, ಶ್ರೀರಾಮರೆಡ್ಡಿ, ರಾಮಾಂಜಿ, ನಾಗರಾಜ್‌, ರೆಡ್ಡಪ್ಪ, ಶ್ರೀನಾಥಬಾಬು, ರಘುನಾಥರೆಡ್ಡಿ ಇದ್ದರು.

ಜ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಜ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

ಕೋಲಾರ : ಭಾರತ ಚುನಾವಣಾ ಆಯೋಗವು ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಲಾಗುತ್ತಿದ್ದು,  ದೇಶಾದ್ಯಂತ ಮತಗಟ್ಟೆಗಳನ್ನು ಏರ್ಪಡಿಸಿರುವ ಕಟ್ಟಡಗಳಲ್ಲಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಅರ್ಹ ಹಾಗೂ ನೋಂದಾಯಿತ ಯುವ ಮತದಾರರನ್ನು ಪೋಷಕರೊಂದಿಗೆ, ಮತಗಟ್ಟೆ ಪ್ರದೇಶದ ಶಾಲಾ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರುಗಳನ್ನು, ಸಮಾಜ ಚಿಂತಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ನಿರ್ವಹಿಸಲಾಗುವುದು. 

 ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ “ಮತದಾರನಾಗಲು ಹೆಮ್ಮೆ-ಮತದಾನ ಮಾಡಲು ಸಿದ್ದ” ಎಂಬ ಬ್ಯಾಡ್ಜ್‍ಗಳನ್ನು ಮತ್ತು ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು (ಎಪಿಕ್) ವಿತರಿಸಲಾಗುವುದು.  ರಾಷ್ಟ್ರೀಯ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ಹಾಜರಿರುವ ಯುವ ಮತದಾರರು ಮತ್ತು ನಾಗರೀಕರಿಂದ “ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸ, ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುವ ಬಗ್ಗೆ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಹಾಗೂ ಯಾವುದೇ ಪ್ರೇರೇಪಣೆಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸುವ” ಬಗ್ಗೆ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿ ಸ್ವೀಕರಿಸಲಾಗುವುದು.  

                             

 ತಾಲ್ಲೂಕು ಮಟ್ಟದಲ್ಲಿಯೂ ತಹಶೀಲ್ದಾರರು ಕಾರ್ಯಕ್ರಮವನ್ನು ನಿರ್ವಹಿಸಲು ಸಿದ್ದತೆಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ 1593 ಮತಗಟ್ಟೆ ಸ್ಥಳಗಳಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಿಂದಲೂ ಹಾಗೂ ಆರು ವಿಧಾನಸಭಾ ಕ್ಷೇತ್ರಗಳ ಕೇಂದ್ರಸ್ಥಾನಗಳಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳವರುಗಳಿಂದಲೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.

 ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾ ಆಡಳಿತದ ವತಿಯಿಂದ ಜ. 25 ರಂದು  ಬೆಳಿಗ್ಗೆ 10-00 ಗಂಟೆಗೆ               ಶ್ರೀ. ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಹಂತದ ಅಧಿಕಾರಿಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು.  ಪ್ರಥಮ ಬಾರಿಗೆ ಮತದಾರರ ಪಟ್ಟಿಯಲ್ಲಿ ಅರ್ಹ ಮತ್ತು ನೋಂದಾಯಿತ ಯುವ ಮತದಾರರು ಮತ್ತು ನಾಗರೀಕರು ಹಾಗೂ ರಾಜಕೀಯ ಪಕ್ಷಗಳವರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದ್ದಾರೆ.

ಲೋಕಾಯುಕ್ತದಿಂದ ಸಾರ್ವಜನಿಕ ದೂರುಗಳ ಸ್ವೀಕಾರ

JANANUDI.COM NETW

 

 

ಲೋಕಾಯುಕ್ತದಿಂದ ಸಾರ್ವಜನಿಕ ದೂರುಗಳ ಸ್ವೀಕಾರ

 

 

ಕುಂದಾಪುರ : ಉಡುಪಿ ಜಿಲ್ಲಾ ಲೋಕಾಯುಕ್ತ ದಳದಿಂದ ಕುಂದಾಪುರ ಹಾಗೂ ಬೈಂದೂರು ವಲಯಗಳ ಸಾರ್ವಜನಿಕರಿಂದ ಪ್ರವಾಸಿ ಬಂಗಲೆಯಲ್ಲಿ ದೂರುಗಳನ್ನು ಸ್ವೀಕರಿಸಲಾಯಿತು. ಉಡುಪಿ ಲೋಕಾಯುಕ್ತ ನಿರೀಕ್ಷಕರಾದ ರಾಜ್ ಶೇಖರ್ ಹಾಗೂ ಸಿಬಂದಿಗಳು ಸಾರ್ವಜನಿಕರ ಅಹವಾಲುಗಳಿಗೆ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದು, ತಮ್ಮ ಇಲಾಖೆಯ ಅóಧಿಕೃತ ಅರ್ಜಿ ನಮೂನೆಗಳಲ್ಲಿ ದೂರುಗಳನ್ನು ಪ್ರಮಾಣಿಕರಿಸಿ ಉಡುಪಿ ಇಲಾಖೆಯ ಮೂಲಕ ಅಥವಾ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಛೇರಿಗೆ ನೇರವಾಗಿ ಕಳುಹಿಸುವ ಮೂಲಕ ಸಾರ್ವಜನಿಕರು ತಮ್ಮ ದೂರುಗ¼ನ್ನು ತ್ವರಿತವಾಗಿ ಬಗೆ ಹರಿಸಿಕೊಂಡು ಪರಿಹಾರ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಹಲವಾರು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಂಡಿದ್ದು, ಹೆಚ್ಚಿನ ಸಾರ್ವಜನಿಕ ದೂರುಗಳೆಲ್ಲಾ ಸರ್ಕಾರಿ ಕಛೇರಿ ಮತ್ತು ಸರ್ಕಾರಿ ಅಧಿಕಾರಿಗಳ ಅಸಡ್ಡೆ ಮತ್ತು ಭೃಷ್ಟತೆಯ ವಿರುದ್ಧವೇ ಕೇಳಿ ಬಂದಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅತ್ಯಂತ ಸಮಾಧಾನ ಚಿತ್ತದಿಂದ ಸಾರ್ವಜನಿಕ ದೂರುಗಳನ್ನು ಆಲಿಸಿದ ಲೋಕಾಯುಕ್ತ ನಿರೀಕ್ಷಕರು ಅವರಿಗೆ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದು ಲೋಕಾಯುಕ್ತ ದಳದ ಬಗ್ಗೆ ಸಂತೃಸ್ಥ ಸಾರ್ವಜನಿಕರಲ್ಲಿ ಹೊಸ ಹುರುಪು ಮೂಡಿದಂತಾಗಿದೆ ಎಂದು ಹೇಳಲಾಗಿದೆ.

ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ-ಗಂಗಾಧರ್ ಸಿ.ಹೆಚ್

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ-ಗಂಗಾಧರ್ ಸಿ.ಹೆಚ್
ಕೋಲಾರ: ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಉಚಿತ ಕಾನೂನು ಸೇವೆಗಳನ್ನು ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ್ ಸಿ. ಹೆಚ್ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೋಲಾರ, ಬಚಪನ್ ಬಚಾವೋ ಅಂದೋಲನ, ಬುದ್ದ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಿಸಂದ್ರ. ಕ್ರೇಜಿ ಕ್ರಿಯೇಟರ್ಸ್ ಸಾಂಸ್ಕøತಿಕ ಕ್ರೀಡಾ ಸಂಘ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಅಂಗನವಾಡಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ  ದೇಶದಲ್ಲಿ ಅನೇಕರು ಅನಕ್ಷರಸ್ಥರು ಹಾಗೂ  ಬಡವರಿದ್ದಾರೆ. ಎಲ್ಲರೂ ಸಹ ನ್ಯಾಯಾಲಯಕ್ಕೆ ಹೋಗಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ. ಇದರಿಂದ ಮನಗೊಂಡ ಸರ್ಕಾರ 1977 ರಲ್ಲಿ ಕಾನೂನು ಸೇವಾ ಅಧಿನಿಯಮ ಪ್ರಾಧಿಕಾರ ಜಾರಿಗೆ ತಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ವಾರ್ಷಿಕ 3 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯ ಇರುವವರಿಗೆ ಉಚಿತವಾದ ಕಾನೂನಿನ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಈ ಪ್ರಾಧಿಕಾರವನ್ನು ಜಾರಿಗೆ ತಂದರು. 1995 ರಿಂದ ಈ ಪ್ರಾಧಿಕಾರವು ರಾಷ್ಟ್ರಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವೆಗಳ ಸಮಿತಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಈಗಾಗಲೇ ನ್ಯಾಯಾಲಯಗಳಲ್ಲಿ ಇರುವಂತಹ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್ ಮಾಡಿ ಬಗೆಹರಿಸಲಾಗುವುದು. ಅದೇ ರೀತಿ ಗ್ರಾಮಮಟ್ಟದ ಶಾಲೆಗಳಲ್ಲಿ ಇಂತಹ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ ಎಂದರು.
ಬಚ್‍ಪನ್ ಬಚಾವೋ ಆಂದೋಲನ ರಾಜ್ಯ ಸಂಯೋಜಕರಾದ ಬಿನು ವರ್ಗಿಸ್ ಮಾತನಾಡಿ, ಕಾರ್ಯಾಗಾರವು ಮಕ್ಕಳ ಹಿತದೃಷ್ಟಿಯನ್ನಿಟ್ಟುಕೊಂಡು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೊಡನೆ ಹೇಗೆ ವರ್ತಿಸಬೇಕು, ಅವರ ಪಾಲನೆ ಪೋಷಣೆ ಹೇಗೆ ಮಾಡಬೇಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಬಾಲ ನ್ಯಾಯ ಕಾಯ್ದೆಯನ್ವಯ ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗದಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಜನ ಸಮುದಾಯಕ್ಕೆ ಕಾನೂನಿನ ಮಾಹಿತಿ ಸಿಗಬೇಕು ಎಂದು ತಿಳಿಸಿದರು. 
ವಕೀಲರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ರವರು ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಮಾಜಿಕವಾಗಿ ಮತ್ತು  ಆರ್ಥಿಕವಾಗಿ ಎಲ್ಲಾ ರಂಗಗಳಲ್ಲಿಯೂ ಮುಂದುವರೆದಿದ್ದು,  ಬಾಲಕಾರ್ಮಿಕ, ಬಾಲ್ಯವಿವಾಹ ಪದ್ದತಿಯ ಪಿಡುಗು ಮುಂದುವರೆದಿದೆ. ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡನೀಯ ಘನ ಘೋರವಾಗುವಂತದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತರ ಸಂಬಳದ ಬಗ್ಗೆ ಕಾನೂನು ಸೇವಾ ಪ್ರಾಧಿಕಾರ ಅವಕಾಶ ಕೊಟ್ಟರೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಚೌಡಪ್ಪ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣಾಧಿಕಾರಿಗಳಾದ ಜಗದೀಶ್, ಜಿಲ್ಲಾ ಪರಿವೀಕ್ಷಣಾಧಿಕಾರಿಗಳಾದ ಮಹೇಶ್, ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆರ್ಯ ವೈಶ್ಯ ಜನಾಂಗದವರಿಗೆ ವಿವಿಧ ಉದ್ದೇಶಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಆರ್ಯ ವೈಶ್ಯ ಜನಾಂಗದವರಿಗೆ ವಿವಿಧ ಉದ್ದೇಶಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆ.
ಕೋಲಾರ : ಆರ್ಯ ವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು ವಿದ್ಯಾಭ್ಯಾಸದ ಸಲುವಾಗಿ 18 ವರ್ಷ ಒಳಪಟ್ಟವರಿಗೆ ಮಾತ್ರ ನೀಡಲಾಗುತ್ತಿತ್ತು. ಕರ್ನಾಟಕ ರಾಜ್ಯ ಸರ್ಕಾರವು ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು“ನಮೂನೆ-ಜಿ”ಯಲ್ಲಿ ಪಡೆಯಲು ಆದೇಶಿಸಿರುತ್ತದೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಸಾಲ-ಸೌಲಭ್ಯಗಳನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು“ನಮೂನೆ-ಜಿ”ಯಲ್ಲಿ ಪಡೆಯಲು ನಾಡಕಛೇರಿ ಕೇಂದ್ರ, ಬೆಂಗಳೂರು-ಒನ್, ಕರ್ನಾಟಕ-ಒನ್ ಹಾಗೂ ನಾಡಕಛೇರಿಯ ವೆಬ್‍ಸೈಟ್ www.nadakacheri.karnataka.gov.in ನಲ್ಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 9448451111/ ನಾಡಕಛೇರಿಯ ಸಹಾಯವಾಣಿ (ಟೋಲ್ ಪ್ರೀ) ಸಂಖ್ಯೆ: 18005990044 ಅಥವಾ ಇಮೇಲ್: support.kacdc@karnataka.gov.in  ನ್ನು ನೋಡಬಹುದಾಗಿದೆ ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.