ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


JANANUDI.COM NETWORK
ಕುಕ್ಕೆ ಸುಬ್ರಹ್ಮಣ್ಯ ದಾರಿಯಲ್ಲಿ ಅಡ್ಡಗಟ್ಟಿ ಅರ್ಚಕರ ಮೇಲೆ ಪೋಲೀಸ್ ಹಲ್ಲೆ

ಸುಬ್ರಹ್ಮಣ್ಯ,ಮಾ. 29: ಕುಕ್ಕೆ ಸುಬ್ರಹ್ಮಣ್ಯದ. ಆದಿ ಸುಬ್ರಹ್ಮಣ್ಯದ ಅರ್ಚಕರು ಶ್ರೀನಿವಾಸ್ ಇವರು ಶನಿವಾರ ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಎನ್ನುವ ಕಾನ್ಸ್ ಟೇಬಲ್ ಅವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಅರ್ಚಕರನ್ನು ಬೈಯ್ದದಲ್ಲದೆ , ಅರ್ಚಕರು ತಾನು ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತ ಇರುವುದಾಗಿ ದೇವಳದ ಕೀಯನ್ನ ತೋರಿಸಿ ಹೇಳಿದರೂ ಬಿಡದ ಈ ಪೋಲೀಸ್ ಸಿಬ್ಬಂದಿ ಅರ್ಚಕರ ಮೇಲೆ ತನ್ನ ಕೈಯಲ್ಲಿದ್ದ ಕೋಲಿನಿಂದ ಬಾಸುಂಡೆ ಏಳುವಂತೆ ಹಲ್ಲೆ ನಡೆಸಿರುತ್ತಾರೆ.
ಜಿಲ್ಲೆಯ ಖ್ಯಾತ ದೇವಳದ ಮುಖ್ಯ ಅರ್ಚಕರು ತನ್ನ ದೈನಂದಿನ ಕಾರ್ಯ ನಡೆಸಲು ತೆರಳುವಾಗಲೂ ಈ ರೀತಿ ಅಮಾನುಷವಾಗಿ ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿ ಸ್ಥಳೀಯರೇ ಆಗಿದ್ದು ಗುರುತು ಇದ್ದರೂ ಈ ರೀತಿ ವರ್ತಿಸಿರುವ ಘಟನೆಯನ್ನ ವಿಪ್ರ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಮತ್ತು ಅನ್ಯಾಯವಾಗಿ ಹಲ್ಲೆ ನಡೆಸಿದ ಪೋಲೀಸ್ ಸಿಬ್ಬಂದಿಯನ್ನ ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರನ್ನ ಮತ್ತು ಜಿಲ್ಲಾಧಿಕಾರಿಯವರಲ್ಲಿ ವಿಪ್ರ ಪರಿವಾರ ಆಗ್ರಹಿಸ.

JANANUDI.COM NETWORK
ನಾಳೆಯಿಂದ ಕುಂದಾಪುರ ಇನ್ನಷ್ಟು ಬಿಗಿ ಬಂದ್ : ಬೆಳಗ್ಗೆ 7ರಿಂದ 11 am ವರೆಗೆ ಮಾತ್ರ ಅಂಗಡಿ ಗಳು ಓಪನ್ : ಪೊಲೀಸ್ ಇಲಾಖೆ

ಕುಂದಾಪುರ, ಮಾ.೨೮: ಕುಂದಾಪುರದಲ್ಲಿ ನಾಳೆಯಿಂದ ಇನ್ನೂ ಬಿಗಿ ಬಂದ್ ಮಾಡಲಾಗುವುದೆಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರಕಿದೆ. ಅಂದರೆ ನಾಳೆಯಿಂದ ಓಪನ್ ನಂತರ ಕಂಪ್ಲೀಟ್ ಬಂದ್. ಆದರೆ ಬೆಳಗ್ಗೆ 7ರಿಂದ 11am ವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತವೆ. ಕೇವಲ ಮೆಡಿಕಲ್ ಶಾಪ್ & ಹಾಸ್ಪಿಟಲ್ ಹೊರತುಪಡಿಸಿ ಬೇರೆ ಯಾವ ಅಂಗಡಿಗಳು ತೆರೆದಿರುವುದುಲ್ಲಾ.

ಈ ಆದೇಶವು ಉಡುಪಿ ಜಿಲ್ಲಾಧಿಕಾರಿಯಿಂದ ಬಂದದ್ದು ಇದು ಮಾ. 29ರಿಂದಲೇ ಆದೇಶ ಜಾರಿಗೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದೆ.
JANANUDI.COM NETWORK
ಕೊರೊನ ಮಹಾಮಾರಿಯಿಂದ ಪಿಗ್ಮಿ ಬಾಳು ಕಷ್ಟಕರವಾಗಿದೆ: ಇತರ ಕಾರ್ಮಿಕರಂತೆ ನಮಗೂ ಪರಿಹಾರ ಸೌಲಭ್ಯಗಳು ದೊರಕಬೇಕು

ಕುಂದಾಪುರ, ಮಾ.28: ನಾವು ಪಿಗ್ಮಿ ಸಂಗ್ರಾಹಕಾರರು ಪ್ರತಿನಿತ್ಯ ಸಾರ್ವಜನಿಕರಿಂದ ಅಲ್ಪ ಸ್ವಲ್ಪ ಠೇವಣಿ ಸಂಗ್ರಹಿಸಿ,ಸಮಾಜದ ಅಬಿವ್ರದ್ದಿಯ ಜೊತೆಗೆ ನಮ್ಮ ಜೀವನ ನಡೆಸುತ್ತಿದ್ದೇವೆ.ನಾವು ಹೊಟ್ಟೆ-ಬಟ್ಟೆಕಟ್ಟಿ ನಮ್ಮ ಅಲ್ಪ ದುಡಿಮೆಯಲ್ಲಿಯೂ ಕೂಡ, ನಮ್ಮಿಂದ ಸರಕಾರಕ್ಕೆ ಸಮಯಕ್ಕೆ ಸರಿಯಾಗಿ TDS ಹಾಗೂ ಇತರೆ ತೆರಿಗೆಗಳು ಪಾವತಿಯಾಗುತ್ತದೆ.ಆದರೆ ಇಂದು ಕೊರೊನ ಮಹಾಮಾರಿಯಿಂದ ಪಿಗ್ಮಿ ಸಂಗ್ರಾಹಣಿ ನೆಲಕಚ್ಚಿದೆ.ಇಂದು ಪಿಗ್ಮಿ ಸಂಗ್ರಾಹಕಾರರ ಬದುಕು ನರಕಸದ್ರಶವಾಗಿದೆ. ಕೂಲಿ ಕೆಲಸಗಾರರಿಗೆ,ಸರಕಾರಿ ಕೆಲಸಗಾರರಿಗೆ,ಸರಕಾರಗಳು ಮುಂಗಡ ಸಂಬಳ,ಸಂಬಳ ಸಹಿತ ರಜೆ,ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡುತ್ತಿದೆ.
ಆದರೆ ಪಿಗ್ಮಿ ಸಂಗ್ರಾಹಕಾರರಿಗೆ ಯಾವ ಸರಕಾರಗಳೂ ಇಂದಿನವರೆಗೂ ಯಾವ ಸವಲತ್ತುಗಳನ್ನು ಘೋಷಿಸಿಲ್ಲ,ಯಾಕೆ ನಾವೂ ಮನುಷ್ಯರಲ್ಲವೇ,ನಮ್ಮ ಸಂಕಷ್ಟಗಳು ಶಾಸಕರಿಗೆ,ಸಂಸದರಿಗೆ & ಸರಕಾರಗಳಿಗೆ ಕಾಣಿಸುತ್ತಿಲ್ಲವೆ ಅಥವಾ ಕಣ್ಣಿದ್ದು ಕುರುಡರಂತೆ ವರ್ತಿಸಬಾದರು.
ಒಬ್ಬ ಕಾರ್ಖಾನೆ ಕೆಲಸಗಾರನಿಗೂ ಕೂಡ ESI,PF ಸಿಗುತ್ತದೆ. ಆದರೆ ಪಿಗ್ಮಿ ಸಂಗ್ರಾಹಕಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ಸವಲತ್ತುಗಳು ಇಂದಿನವರೆಗೂ ಇಲ್ಲ ,ಇನ್ನಾದರೂ ಕೇಂದ್ರ & ರಾಜ್ಯ ಸರಕಾರಗಳು ಇತ್ತ ಗಮನ ಹರಿಸಿ ಪಿಗ್ಮಿ ಸಂಗ್ರಾಹಕಾರರ ಸಂಕಷ್ಟಗಳನ್ನು ಪರಿಹರಿಸಬೇಕಾಗಿ ನಮ್ಮ ಶಾಸಕರು , ಸಂಸದರು, ಮಂತ್ರಿವರ್ಯರು ಮತ್ತು ಸರಕಾರಗಳಲ್ಲಿ ಕುಂದಾಪುರ ತಾಲೂಕು ಪಿಗ್ಮಿ ಸಂಗ್ರಹಕಾರರ ಸಂಘ ವಿನಂತಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಆನಂದ ಮಡಿವಾಳ, ಕಾರ್ಯದರ್ಶಿ ಚಂದ್ರ ಕೆ. , ಸಹಕಾರ್ಯದರ್ಶಿ ಅರುಣ್ ಶೇಟ್ ಮತ್ತು ಸ್ಥಾಪಕ ಅಧ್ಯಕ್ಷ ಅಂತೋನಿ ಡಿಆಲ್ಮೇಡಾ ಇವರುಗಳು ವಾರ್ತಾ ಸಂಸ್ಥೆಗೆ ತಿಳಿಸಿರುತ್ತಾರೆ
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

JANANUDI.COM NETWORK
ಕುಂದಾಪುರ ತರಕಾರಿ ವ್ಯಾಪರಿಸ್ತರ ಜೊತೆ ಪೊಲೀಸ್ ಇಲಾಖೆ ಸಭೆ : ಬೆಲೆ ಜಾಸ್ತಿ ಮಾಡಿ ಮಾರುವಂತ್ತಿಲ್ಲ: ತರಕಾರಿ ತರಿಸುವ ವ್ಯವಸ್ಥೆ ಮಾಡಲಾಗುತ್ತೆ

ಕುಂದಾಪುರ, ಮಾ.27: ಜನ ಮಾರಕವಾ ಕರೊನ ಸೊಂಕಿನ ತಡೆಗಾಗಿ 21 ದಿವಸದ ಲಾಖ್ ಡೌನ್ ಮಾಡಿದ್ದರಿಂದ, ಮುಂದಿನ 21 ದಿವಸಗಳಿಗಾಗಿ ತರಕಾರಿ ಇತರ ವಸ್ತುಗಳನ್ನು ದಾಸ್ತಾನು ಮಾಡುಲು ಜನ ಮುಗಿ ಬೀಳುತಿದ್ದರಿಂದ ಅಂಗಡಿಗಳಲ್ಲಿ ತರಕಾರಿಗಳನ್ನು ಜಾಸ್ತಿ ಬೆಲೆಗೆ ಮಾರುತಿದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕುಂದಾಪುರದ ತರಕಾರಿ ವ್ಯಾಪರಿಗಳನ್ನು, ಚಿಕ್ಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮುಖ್ಯ ವಿತರಣಾ ವ್ಯಾಪರಸ್ಥರನ್ನು ಒಟ್ಟು ಸೇರಿಸಿ ಕುಂದಾಪುರ ರಕ್ತೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಸಭೆಯನ್ನು ನಡೆಸಲಾಯಿತು.
ಸಂಗ್ರಹಿಸಲಾದ ತರಕಾರಿಗಳನ್ನು ನ್ಯಾಯುತವಾದ ಬೆಲೆಯಲ್ಲಿ ಮಾರಾಟ ಮಾಡ ಬೇಕು. ವಿತರಣಾಕಾರರೂ ಕೂಡ ನ್ಯಾಯಯುತವಾದ ದರದಲ್ಲಿ ವಿತರಣೆ ಮಾಡಬೇಕು. ಎಂದು ಸೂಚಿಸಲಾಯಿತು.
ಎಲ್ಲಾ ತರಕಾರಿ ವ್ಯಾಪರಸ್ತರನ್ನು ವಾಟ್ಸಪ್ ಮೂಲಕ ಒಟ್ಟುಕೂಡಿಸಿ ಅವರಿಗೆ ಸಂದೇಶಗಳನ್ನು ನೀಡಲಾಗುವುದು. ದಿನ ನಿತ್ಯದ ತರಕಾರಿ ಬೆಲೆಗಳನ್ನು ಬೆಳಿಗ್ಗೆ 7 ಗಂಟೆಯ ಒಳಗೆ ನಿರ್ಧರಿಸಿ ಬೆಲೆಗಳನ್ನು ನಮೂದಿಸಿದ ಬೋರ್ಡನ್ನು ಅಂಗಡಿಯ ಹೊರಗಡೆ ತೂಗು ಹಾಕಬೇಕೆಂದು ಕೂಡ ಸೂಚಿಸಲಾಗಿದೆ. ಬೆಲೆಗಳು ಉಡುಪಿ ಮತ್ತು ಚಿಕ್ಕಮಂಗಳೂರಿನಲ್ಲಿ ಇದ್ದ ಬೆಲೆಯೆ ಕುಂದಾಪುರದಲ್ಲಿ ಇರಬೇಕೆಂದು ವ್ಯಾಪರಸ್ಥರಿಗೆ ತಿಳಿಸಲಾಗಿದೆ. ಒಂದೆರೇಡು ದಿವಸದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದೆಂದು ಪೊಲೀಸ್ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ.


ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


JANANUDI.COM NETWORK
ಕೊರೊನಾ ತನ್ನ ಬಾಹುಗಳನ್ನು ವಿಸ್ತರಿಸುತ್ತಾ ಇದೆ. ಉಡುಪಿಯಲ್ಲಿ ಮೊದಲ ಸೊಂಕು ಪೀಡಿತ ಧ್ರಡ: ಕುಂದಾಪುರದಲ್ಲಿ ಇವತ್ತಿನ ಲಾಖ್ ಡೌನ್ ಚಿತ್ರಣ

ಕುಂದಾಪುರ, ಮಾ.25: ಕೊರೊನಾ ವೈರಸ್ ಪ್ರಪಂಚಾದ್ಯಂತ ತನ್ನ ಕರಾಳು ಭಾಹುಗಳಿಂದ ಚಾಚುತಿರುವಾಗ ಉಡುಪಿಯಲ್ಲಿ ಒಬ್ಬರಿಗೆ ಕೊರೊನಾ ಸೊಂಕು ಧ್ರಡ ಪಟ್ಟಿದ್ದು, ಜಿಲ್ಲೆಯ ಬಾಗಿಲೊಳಗೆ ಕೊರೊನಾ ಬಂದು ಮುಟ್ಟಿದೆ.
ತಜ್ಞರು ಕೊರೊನಾ ವೈರಸ್ ಅಷ್ಟೊಂದು ಮಾರಕವಲ್ಲಾ, ಅದನ್ನು ಗುಣ ಪಡಿಸಲಿಕ್ಕೆ ಸಾಧ್ಯವಿದೆಯೆಂದು ಹೇಳುತಿದ್ದಾರೆ. ಆದರೆ ಇದು ಹರಡಿದರೆ ನಮ್ಮಲ್ಲಿ ಆಸ್ಪತ್ರೆಗಳಲ್ಲಿ, ಬೆಡ್ಡುಗಳು, ವೆಂಟಿಲೇಟರ್ ಇನ್ನಿತರ ಉಪಕರಣ ಕೊರತೆ, ಇದ್ದುದರಿಂದ ತಡೆ ಕಟ್ಟುವುದೆ ಪ್ರಮುಖವಾಗಿ ಕಂಡು ಇಡೀ ದೇಶವನ್ನೆ ಲಾಖ್ ಡೌನ್ ಮಾಡಾಲಾಗಿದೆ.

ಲಾಖ್ ಡೌನ್ ಪರಿಣಾಮ ಕುಂದಾಪುರದಲ್ಲಿ ಇಂದು ಎಲ್ಲಾ ಅಂಗಡಿ ಮಾಲ್ ಗಳು, ಮೀನು ಪೇಟೆ, ಮಟನ್, ಚಿಕ್ಕನ್ ಶಾಪ್ ಗಳು ಮುಚ್ಚಿದ್ದವು. ತರಕಾರಿ ಅಂಗಡಿಗಳು, ಗ್ರೋಸರಿ ಅಂಗಡಿಗಳು, ಮೆಡಿಕಲ್ ಸ್ಟೋರ್ಗಳು ಮಾತ್ರ ತೆರಿದಿದ್ದವು. ಅವು ತೆರ್ದಿದ್ದರೂ ಎಲ್ಲಾ ಅಂಗಡಿಗಳ ಮೇಲೆ ಸುಣ್ಣದಿಂದ ಮಾಡಿದ ಗೇರೆಗಳಲ್ಲಿ ನಿಂತು ಸಾಮಾನು ಸರಾಂಜಾಮು ಖರೀದಿಸ ಬೇಕಿತ್ತು. ಸುಣ್ಣದ ಗೇರೆಗಳ ಬಾಕ್ಸ್ ಇಲ್ಲದ ಅಂಗಡಿಗಳನ್ನು ಪೊಲೀಸರು ಮುಚ್ಚುವಂತೆ ಗದರಿಸಿವುದು ಕಂಡು ಬಂತು.
ಈ ಲಾಖ್ ಡೌನ್ ಮಾಡಿದರೂ ಕೆಲವರು ಅರ್ಥ ಮಾಡಿಕೊಳ್ಳದೆ ರಸ್ತೆಯಲ್ಲಿ ವಾಹನ ಸಂಚಾರ ಮಾಡಿ ಪೊಲೀಸರಿಗೆ ಸಿಟ್ಟು ನೆತ್ತಿಗೆರುವಂತೆ ಮಾಡುತಿದ್ದಾರೆ, ರಸ್ತೆಯಲ್ಲಿ ಸಂಚರಿಸುವ ಕಾರು, ಬಾಯ್ಕ್ ಸ್ಕೂಟರಗಳನ್ನು ತಡೆದು ಯಾವ ಕಾರಣಕ್ಕೆ ತಿರುಗುತಿದ್ದಿರಿ ಎಂದು ಸಂಚಾರಿ ಪೊಲೀಸರು ವಿಚಾರಿಸಿ ತಮ್ಮ ಕರ್ತವ್ಯವನ್ನು ಮಾಡುವುದು ನೋಡಲಾಯಿತು. ಲೀಸ್ ಹೊಯ್ಸಳ ವಾಹನ ನಗರದಲ್ಲಿ ಗಸ್ತು ತಿರುಗಾಡುತಿದ್ದು. ಅಲ್ಲಲ್ಲಿ ಪೊಲೀ ಸರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿದ್ದರು. ಇದೀಗ ಬಂದ ಸುದ್ದಿಯಂತೆ ಕುಂದಾಪುರದಲ್ಲಿಯೂ ಅನಾವಶ್ಯಕವಾಗಿ ತಿರುಗಾಡುತಿದ್ದವರಿಗೆ ಶಾಸ್ತ್ರಿ ಪಾರ್ಕ್ ಸರ್ಕಲನಲ್ಲಿ ಬೆತ್ತದ ರುಚಿಯನ್ನು ತೋರಿಸಲು ಆರಂಭಿಸಿದ್ದಾರೆ. ಇಂತಹ ಒಂದು ವೀಡಿಯೊ ವೈರಲ್ ಆಗಿದೆ. ಹಾಗಾಗಿ ಜನರು ಅವಶ್ಯಕತೆ ಇಲ್ಲದೆ ಸಂಚರಿಸುವುದು, ವಾಹನ ಚಲಾವಣೆ ಮಾಡುವುದನ್ನು ನಿಲ್ಲಿಸ ಬೇಕು
ಲಾಖ್ ಡೌನ್ ಸಂದರ್ಭದಲ್ಲಿ ಅನಿಯಂತ್ರಿತ ಸಂಚಾರ ವಾಹನ ಸಂಚಾರ ಆಗುವಾಗ ಪೊಲೀಸರಿಗೂ ತೊಂದರೆ, ಜನರಿಗೂ ತೊಂದರೆ, ಅದಕ್ಕಾಗಿ ಕುಟುಂಬದ ಒಬ್ಬರಿಗೆ ಅಗತ್ಯ ಸಾಮಾನು, ಒಷಧಿ ತರಲಿಕ್ಕಾಗಿ ಪುರಸಭೆಯಿಂದ ಪಾಸು ನೀಡಬೇಕು, ಆ ಪಾಸು ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಪಾಸು ಕೊಡುವುದು, ಪಡೆಯುವುದು ಕಷ್ಟವೆ ಆಗಿದೆ.ಇಲ್ಲಾ ಖರೀಧಿಗೆ ಒಂದು ಸಮಯ ನಿಗಧಿ ಮಾಡಬೇಕು. ಈ ಬಗ್ಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಪುರಸಭೆ ಸೇರಿ ಎನಾದರೂ ಮಾಡುವುದು ಒಳಿತು, ಮತ್ತು ಅವಶ್ಯವಾಗಿದೆ.
