HOLY ROSARY CHURCH, KUNDAPUR – 450 th JUBILEE SOUVENIR 2021

ಕೋಲಾರ ಎ.ಪಿಎಂಸಿ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಿ, ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೆಂಟಿಲೇಟರ್ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡಲೇ ಖಾಯಂ ಆಗಿ ಭರ್ತಿ ಮಾಡಿ: ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ, ಸೆ.29 : ಎ.ಪಿಎಂಸಿ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಿ ಮತ್ತು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೆಂಟಿಲೇಟರ್ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡಲೇ ಖಾಯಂಆಗಿ ಭರ್ತಿ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಈ ಹಿಂದೆ ಮಡಿವಾಳ ಗ್ರಾಮದ ಬಳಿ ಮಾರುಕಟ್ಟೆಗೆ ಸ್ಥಳ ಪರೀಶೀಲನೆ ಮಾಡಿ, ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದೀರಾ ಆದಷ್ಟು ಶೀಘ್ರವಾಗಿ ಮಾರುಕಟ್ಟೆಗೆ ಜಾಗದ ಸಮಸ್ಯೆ ಬಗೆಹರಿಸಬೇಕು ಮತ್ತು ಕೋಲಾರ ಜಿಲ್ಲೆಯಲ್ಲಿ ಹೆಸರಾಗಿರುವ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಪ್ರತ್ಯೇಕವಾಗಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಕೋಟ್ಯಾಂತರರೂಪಾಯಿ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲವೂ ಆಗಿದೆ. ಗುತ್ತಿಗೆ ಆಧಾರದ ಮೇರೆಗೆ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅದರ ಜೊತೆಗೆ ಕೊರೊನಾ ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ 20 ವೆಂಟಿಲೇಟರ್‍ಗಳು ಸಿದ್ಧಪಡಿಸಲಾಗಿದ್ದರೂ ನುರಿತ ತಜ್ಞರಿಲ್ಲದೆ ಬಳಕೆಯಾಗುತ್ತಿಲ್ಲವೆಂದು ಅಸಮಾದಾನ ವ್ಯಕ್ತಪಡಿಸಿದರು.

ಪ್ರಸ್ತುತ ಖಾಸಗಿ ಆಸ್ಪತ್ರೆಗಳನ್ನು ಮೆಟ್ಟಿ ನಿಂತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ತಜ್ಞರು, ಸಿಬ್ಬಂದಿ ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಗಳತ್ತ ತೆರಳುವಂತಾಗಿದೆ. ಇನ್ನು ಮೆಡಿಕಲ್ ಕಾಲೇಜಿಗೆ ಹೋಗಬೇಕಾದರೆ 1 ಲಕ್ಷರೂ ಇರಲೇಬೇಕಾಗಿದ್ದು, ಅಲ್ಲಿಗೆ ಹೋದರೆ ಹೆಣ ವಾಪಸ್ಸು ಬರುತ್ತದೆಯೇ ಹೊರತು ರೋಗಿ ಗುಣಮುಖರಾಗಿ ಬರುವುದಿಲ್ಲ. ಹಾಗಾಗಿ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಗೆ ಈಗಾಗಲೇ ಕೋಟ್ಯಂತರರೂ ಅನುದಾನ ಖರ್ಚು ಮಾಡಿ ಸೌಲಭ್ಯಗಳನ್ನು ನೀಡಿರುವಂತೆಯೇ ವೆಂಟಿಲೇಟರ್ ತಜ್ಞರು, ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ರವರು ಮುಮದಿನ ವಾರದಲ್ಲಿ ಎ.ಪಿ.ಎಂ.ಸಿ ಜಾಗದ ಸಮಸ್ಯೆಗಾಗಿ ಎಂಪೈರ್ ಹೋಟೆಲ್ ಬಳಿ ಜಮೀನನ್ನು ಪರೀಶೀಲನೆ ಮಾಡೋಣ ಮತ್ತು ಈ ಆಸ್ಪತ್ರೆಯ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ತೆರ್ನಹಳ್ಲಿ ಆಂಜಿನಪ್ಪ, ಲೋಕೇಶ್, ಕೆ.ಇ.ಬಿ ಚಂದ್ರು ಮತ್ತು ಮುಂತಾದ ಕಾರ್ಯಕರ್ತರಿದ್ದರು.

ನಿಧನ ಸುದ್ದಿ : ನಿವೃತ್ತ ಡಿಎಫ್‍ಒ ಕುಂಭಾಶಿ ಭಾಸ್ಕರ ಗಾಣಿಗ

JANANUDI.COM NETWORK

ಬೀಜಾಡಿ: ನಿವೃತ್ತ ಡಿಎಫ್‍ಒ ಕುಂಭಾಶಿ ಭಾಸ್ಕರ ಗಾಣಿಗ(60) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು. ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಇವರು ಹೆಬ್ರಿ, ಮಡಿಕೇರಿ, ಕುಶಾಲನಗರ, ಕೊಪ್ಪ ಮೊದಲಾದ ಕಡೆ ಸೇವೆ ಸಲ್ಲಿಸಿದ ಇವರು ದಕ್ಷ ಅಧಿಕಾರಿಗಳಾಗಿ ಹೆಸರು ಗಳಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಸಹಿತ ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಪ್ರಸ್ತುತ ಮಾಹಿತಿ ಸಂವಹನ ತಂತ್ರಜ್ಞಾನ ಅನಿವಾರ್ಯ, ಶೈಕ್ಷಣಿಕ ನೆಲೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ : ಡಾ. ಹೆಚ್.ಎಸ್.ಬಲ್ಲಾಳ್

JANANUDI.COM NETWORK

ಕುಂದಾಪುರ: ಪ್ರಸ್ತುತದ ದಿನಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವೆನ್ನುವುದು ನಮ್ಮ ಅನಿವಾರ್ಯ ಅಗತ್ಯಗಳಲ್ಲಿ ಒಂದಾಗಿದೆ. ಅಲ್ಲದೇ ಶೈಕ್ಷಣಿಕ ನೆಲೆಯಿಂದಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಮಣಿಪಾಲದ ಅಕಾಡೆಮಿಆಫ್ ಜನರಲ್ ಎಜುಕೇಶನ್, ಇದg ಅಧ್ಯಕ್ಷರಾದ ಡಾ. ಹೆಚ್.ಎಸ್.ಬಲ್ಲಾಳ್ ಅವರು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಐಕ್ಯೂಎಸಿ ಮತ್ತು ಮಣಿಪಾಲದ ಅಕಾಡೆಮಿ ಆಫ್‍ಜನರಲ್ ಎಜುಕೇಶನ್ ನ ಸಹಯೋಗದಲ್ಲಿ ನಡೆದ ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಂಕಾರಿ ಉಪಯೋಗ” ಎಂಬ ವಿಷಯದ ಕುರಿತ ರಾಷ್ಟ್ರೀಯ ವೆಬಿನಾರ್ ನಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈಗಿನ ಸಂಧಿಗ್ದ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಉಪಯೋಗ ಬಹಳವಿದೆ. ವಿವಿಧ ತೆರನಾದ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತರಗತಿಗಳನ್ನು ತೆಗೆದುಕೊಳ್ಳುವುದು ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ವೆಬಿನಾರ್‍ನ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಮಾಹೆಯ ಎಮ್.ಎಸ್.ಒ.ಐ.ಎಸ್ ನ ಸಹಾಯಕ ಪ್ರಾಧ್ಯಾಪಕರಾದ ನಂದೀಶ್. ಎಸ್. ಅವರು “ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಂಕಾರಿ ಉಪಯೋಗ ಕುರಿತು ಮಾತನಾಡಿದರು.
ಅವರು ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಉಪಯೋಗ ಮತ್ತುಅದರ ಸಾಧ್ಯತೆಗಳನ್ನು ಮತ್ತು ಉಪಯೋಗಿಸಿ ಕೊಳ್ಳುವಲ್ಲಿನ ತಾಂತ್ರಿಕ ಸವಾಲುಗಳನ್ನುು ತಿಳಿಸದರು. ಅಲ್ಲದೇ ಮೈಕ್ರೊಸಾಫ್ಟ್ ಟೀಮ್ಸ್ ಮತ್ತು ಸ್ಟ್ರೀಮ್ಸ್ ಆನ್‍ಲೈನ್ ತಂತ್ರಜ್ಞಾನವನ್ನು ಸರಳವಾಗಿ ಬಳಸುವ ರೀತಿ ಮತು ್ತಉಪಯೋಗವನ್ನು ತಿಳಿಸಿದರು. “ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಪ್ರಾಯೋಗಿಕವಾಗಿ ಅತ್ಯಂತ ಸೂಕ್ತ ಮತ್ತು ಸುಲಭದ ಒಂದು ಮಾದರಿ ಇದಾಗಿದೆ ಎಂದು ಹೇಳಿದರು. ಆನ್‍ಲೈನ್ ವೆಬಿನಾರ್‍ನಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
13 ದೇಶಗಳು ಮತ್ತು 34 ರಾಜ್ಯಗಳ 2200 ಕ್ಕಿಂತ ಹೆಚ್ಚು ಸಂಖ್ಯೆಯ ಜನರು ನೊಂದಾವಣೆಗೊಂಡು ಅದರಲ್ಲಿ ಸುಮಾರು 1200 ಜನರು ವೆಬಿನಾರ್‍ನಲ್ಲಿ ಭಾಗವಹಿಸಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಶಶಿಕಾಂತ್ ಹತ್ವಾರ್ ಕಾಲೇಜಿನ ಐಟಿ ತಂಡದ ಸಂಯೋಜಕರಾದ ಡಾ. ನಟರಾಜ್ ಎಮ್. ಬಿ ಮತ್ತು ಅವರ ತಂಡದ ಸದಸ್ಯರಾದ್ ಅಮರ್ ಸಿಕ್ವೆರಾ, ಪ್ರವೀಣ್, ಗಣೇಶ್, ಗುರುದಾಸ್ ಪ್ರಭು, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್ ಇವರುಗಳು ತಾಂತ್ರಿಕವಾಗಿ ಸಹಕರಿಸಿದರು. ಇಂಗ್ಲೀಷ್ ವಿಬಾಗದ ಉಪನ್ಯಾಸಕಿ ಜೆವಿಲ್ಲಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕೋಲಾರ ಜಿಲ್ಲಾ ಕಾ.ನಿ.ಪ.ಸಂಘದ ಕಟ್ಟಡ ನವೀಕರಣ ಕಾಮಗಾರಿಯ 26 ಲಕ್ಷ ವೆಚ್ಚವನ್ನು ಶಾಸಕ ಕೊತ್ತೂರು ಮಂಜುನಾಥ್ ನೀಡುತ್ತಾರೆ: ಕಂತಿನಲ್ಲಿ 20 ಲಕ್ಷ ವಿತರಿಸಿದರು

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಸೆ.28: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡದ ನವೀಕರಣ ಕಾಮಗಾರಿಯನ್ನು ಸುಮಾರು 26 ಲಕ್ಷ ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.
ಈ ಕಾಮಗಾರಿಯ ಸಂಪೂರ್ಣ ವೆಚ್ಚವನ್ನ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಭರಿಸುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಕಳೆದ ಆಗಸ್ಟ್ 14 ರಂದು ಮೊದಲನೇ ಕಂತಾಗಿ 10 ಲಕ್ಷ ರೂ ಹಾಗೂ ಸೆಪ್ಟೆಂಬರ್ 28 ರಂದು ಎರಡನೇ ಕಂತಾಗಿ 10 ಲಕ್ಷ ರೂ.ಗಳನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಕೊತ್ತೂರು ಮಂಜುನಾಥ್ ಅಭಿಮಾನಿಗಳು ವಿತರಣೆ ಮಾಡಿದರು.
ಈ ಹಣವನ್ನು ಗುತ್ತಿಗೆದಾರರಾದ ಚಂಚಿಮಲೆ ರಮೇಶ್ ರವರಿಗೆ ಒಟ್ಟು 20 ಲಕ್ಷ ರೂ.ಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು ರವರ ಮುಖಾಂತರ ಮಳಬಾಗಿಲು ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಮಾಜ ಸೇವಕರಾದ ಡಾ.ಕೊತ್ತೂರು ಜಿ ಮಂಜುನಾಥ್ ಅವರ ಪರವಾಗಿ ಎಂ.ಎಸ್.ಐ.ಎಲ್ ಮಾಜಿ ಅಧ್ಯಕ್ಷ ಎಂ.ಎಲ್ ಅನಿಲ್ ಕುಮಾರ್, ಬಂಗಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಯುವ ಮುಖಂಡ ಕಾಮನೂರು ಬಾಬು ರವರು ನೀಡಿದರು. ಸದರಿ ಕಾಮಗಾರಿಯನ್ನು ಸುಸಜ್ಜಿತವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿ ಅತೀ ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್, ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್‍ಗಣೇಶ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್ ಕುಮಾರ್, ಕಾರ್ಯದರ್ಶಿ ಆರ್. ವೆಂಕಟೇಶ್, ಪತ್ರಕರ್ತರಾದ ಮಹಮದ್ ಚಾಂದ್‍ಪಾಷ, ಡಾ. ಕೊತ್ತೂರು ಜಿ.ಮಂಜುನಾಥ್ ಅಭಿಮಾನಿ ಬಳಗದ ಮುಖಂಡರಾದ, ಸೀಸಂದ್ರ ಗೋಪಾಲಗೌಡ, ವೈ.ಶಿವಕುಮಾರ್, ಬಿ.ಟಿ ಚಂದ್ರಶೇಖರ್, ಮೈಲಂಡಹಳ್ಳಿ ಮುರಳಿ, ನುಕ್ಕನಹಳ್ಳಿ ಶ್ರೀನಿವಾಸ್, ನವೀನ್, ಗುತ್ತಿಗೆದಾರ ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀನಿವಾಸಪುರ: ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪಟ್ಟಣದಲ್ಲಿ ಶಾಂತಿಯುತ ಬಂದ್‌ ಆಚರಿಸಲಾಯಿತು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲ್ಪಟ್ಟಿತ್ತು. ಆಟೋ ಸೇರಿದಂತೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಬಂದಿದ್ದ ಜನರು ಸಮೀಪದ ಗ್ರಾಮಗಳಿಗೆ ನಡೆದು ಹೋಗುವ ದೃಶ್ಯ ಸಮಾನ್ಯವಾಗಿತ್ತು.    ತಾಲ್ಲೂಕಿನ ರಾಯಲ್ಪಾಡ್‌, ಗೌನಿಪಲ್ಲಿ, ಸೋಮಯಾಜಲಹಳ್ಳಿ, ಲಕ್ಷ್ಮೀಸಾಗರ, ರೋಜೇನಹಳ್ಳಿ ಕ್ರಾಸ್‌, ರೋಣೂರು, ಯಲ್ದೂರು ಗ್ರಾಮಗಳಲ್ಲಿ ಬಂದ್‌   ವಿವಿಧ ಸಂಘಟನೆಗಳ ಮುಖಂಡರಾದ ಪಿ.ಆರ್‌.ಸೂರ್ಯನಾರಾಯಣ, ಪಾತಕೋಟ ನವೀನ್ ಕುಮಾರ್‌, ಶ್ರೀರಾಮರೆಡ್ಡಿ, ಚಂದ್ರು, ಮೂರ್ತಿ, ಬೈರಾರೆಡ್ಡಿ, ಜನಾರ್ಧನಪ್ಪ, ಸುಬ್ರಮಣಿ, ಸಸ್ಲಾಂ, ಉಮಾದೇವಿ, ಜಿ.ಈಶ್ವರಮ್ಮ, ಮಂಜುಳ, ಮಮತ, ಈಶ್ವರಪ್ಪ, ಅಮರನಾರಾಯಣಪ್ಪ, ಸೈಯದ್‌ ಫಾರುಕ್‌, ನಂಜಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕುಂದಾಪುರ್ ಸಹಾಯಕ್ ವಿಗಾರ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾಚೊ ಜಲ್ಮಾ ದೀಸ್ ಆಚರಣ್

JANANUDI.COM NETWORK

ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್  33 ವೊ  ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ತಸೆಂಚ್ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್‍ಗಾರಾಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಖಾರ್ ಕೇಕ್ ಕಾತರ್ನ್ ಜಲ್ಮಾ ದೀಸ್ ಆಚರಣ್ ಕೆಲೊ.

       ವಿಗಾರ್ ಭೋ|ಮಾ| ಬಾಪ್ ಸ್ಟ್ಯಾನಿ ತಾವ್ರೊನ್ ವಿಜಯ್ ಜೊಯ್ಸನ್ ಡಿಸೋಜಾಕ್ ಲಾಂಭ್ ಆವ್ಕ್ ಬಳ ಭಲಾಯ್ಕಿ ಮಾಗೊನ್, ಯಾಜಕಿ ಜಿಣಿ ಸುಫಳ್ ಭರಿತ್ ಜಾಂವ್ದಿ, ಆನಿ ತಾಂಚ್ಯಾ ಯಾಜಕಿ ಜಿಣಿಯೆ ಪಾಸೊತ್ಮಾಗೊಂಕ್ ಉಲೊ ದಿಲೊ. ಬಾಪ್ ವಿಜಯ್ನ್, ಮೊಜ್ಯಾ ಯಾಜಕಿ ಜಿಣಿಯೆ ಪಾಸೊತ್ ಮಾಗಾ ಆನಿ ಹಾಂವ್ ತುಮ್ಚೆ ಪಾಸೊತ್ ಮಾಗ್ತಾಲೊ ಮ್ಹಣುನ್  ಉಲೊ ದಿವ್ನ್ ಸರ್ವಾಂಚೊ ಉಪ್ಕಾರ್ ಆಟಯ್ಲೊ.

 ಪ್ರಾಂಶುಪಾಲ್ ಬಾಪ್ ಮಾ| ಪ್ರವೀಣ್ ಅಮ್ರತ್ ಮಾರ್ಟಿಸ್, ಕೊವೆಂತಾಚಿಂ ಧರ್ಮ್ ಭಯ್ಣ್ಯೊ, ಗೊವ್ಳಿಕ್ ಮಂಡಳಿ ಸಾಂದೆ, ಫಿರ್ಗಜ್ ಲೋಕ್ ಹಾಜರ್ ಆಸ್ಲೊ.  ಗೊ.ಮಂ. ಉಪಾಧ್ಯಕ್ಷ್ ಲುವಿಸ್ ಜೆ. ಫೆರ್ನಾಂಡಿಸ್ ಹಾಣಿ ಕಾರ್ಯೆ ಚಲಯ್ಲೆಂ. ಕಾರ್ಯದರ್ಶಿ ಆಶಾ ಕರ್ವಾಲ್ಲೊನ್ ಧನ್ಯವಾದ್ ಪಾಟಯ್ಲೆಂ.

ಪಯ್ಲಿ ಜಾಗತಿಕ್ ಡಿಜಿಟಲ್ ಕೊಂಕಣಿ ಸಭಾ

JANANUDI.COM NETWORK

(27 ಸಪ್ತೆಂಬ್ರ್): ಅಖಿಲ್ ಭಾರತೀಯ್, ಖಾಡಿ ಗಾಂವಾಂಚೆ ದೇಸ್, ಯುರೋಪ್ ಕೆನಡಾ ಆನಿ ಅಮೆರಿಕಾ ಅಶೆಂ ಸಂಸಾರಾಚ್ಯಾ ವೆಗ್-ವೆಗಳ್ಯಾ ದೇಸಾಂತ್ಲ್ಯಾ ಕೊಂಕಣಿ ಸಂಘಟನಾಚೆ ಮುಖೆಲಿ, ಕೊಂಕಣಿ ಪರಿಶದೆಚೆ ಮುಖೆಲಿ, ಕೊಂಕಣಿ ಅಕಾಡೆಮಿಚೆ ಮುಖೆಲಿ ತಶೆಂಚ್ ನಾಮ್ನೆಚ್ಯಾ ನೇಮಾಳ್ಯಾಂಚೆ ಸಂಪಾದಕ್, ನಾಮ್ನೆಚೆ ಕೊಂಕಣಿ ಬರವ್ಪಿ ಪಯ್ಲೆ ಪಾವ್ಟಿಂ ಡಿಜಿಟಲ್ ಮಾಧ್ಯಯಾಮುಖಾಂತ್ರ್ ಆಶಾವಾದಿ ಪ್ರಕಾಶನ್ ಮುಂಬಯ್ ಹಾಣಿಂ ಆಯೋಜಿತ್ ಕೆಲ್ಲ್ಯಾ ’ಜಾಗತಿಕ್ ಡಿಜಿಟಲ್ ಕೊಂಕಣಿ ಮೇಳ್’ ಮಾಂಡುನ್ ಹಾಡ್ಲೊ.

ಆಶಾವಾದಿ ಪ್ರಕಾಶನಾಚ್ಯಾ ವಲ್ಲಿ ಕ್ವಾಡ್ರಸಾನ್ ಸ್ವಾಗತ್ ಉಲವ್ಪಾಂತ್ ಡಿಜಿಟಲ್ ಮಾಧ್ಯಮಾಂತ್ ಆಂಟಿ ವಾಯ್ರಸ್ ಆಸಾ ಜೆಂ ನೋನ್-ಡಿಜಿಟಲ್ ಮಾಧ್ಯಮಾಂತ್ ನಾ ದೆಕುನ್ ಕೊಂಕಣಿ ಲೋಕ್ ಭಾಶೆಕ್ ಲಾಗುನ್ ಸಂಘಟಿತ್ ವಾವ್ರ್ ಕರ್ಚ್ಯಾಕೀ ಚಡಿತ್ ಮಾಪಾನ್ ಎಕಾಮೆಕಾಲಾಗಿಂ ಝುಜೊನ್ ಕೊಂಕಣಿಚ್ಯಾ ಫುಡಾರಾಕ್ ಮಾರುನ್ ಆಸಾ. ಹ್ಯಾ ಡಿಜಿಟಲ್ ಮಾಧ್ಯಮಾಂತ್ ಕೊಂಕಣಿಕ್ ಮುಕಾರ್ ವರುಂಕ್ ವಾಟೊ ಸೊಧುಂಕ್ ತಶೆಂಚ್ ಕೊಂಕಣಿಕ್ ಮುಕಾರ್ ವರುಂಕ್ ಉಲೊ ದಿಲೊ.

ಮಾನೆಸ್ತ್ ಪ್ರೇಮ್ ಮೊರಸಾನ್ ಸಯ್ರ್ಯಾಂಚಿ ವಳೊಕ್ ಕರುನ್ ದಿತಚ್ ದಾಯ್ಜಿವರ್ಲ್ಡ್ ಮೀಡಿಯಾಚೊ ಮುಖೆಲ್ ಸಂಪಾದಕ್ ಮಾನೆಸ್ತ್ ವಾಲ್ಟರ್ ನಂದಳಿಕೆನ್ ಹ್ಯಾ ಡಿಜಿಟಲ್ ಕಾರ್ಯಾಚೆಂ ಉಗ್ತಾವಣ್ ಕರುನ್ ಆಯ್ಚ್ಯಾ ಸಂಘರ್ಶಾಚ್ಯಾ ಕಾಳಾರ್ ಸಯ್ತ್ ಕೊಂಕಣಿ ಫುಲಂವ್ಚೆಂ ಶರ್ತಾಚೆಂ ಕಾಮ್ ಸುರು ಕೆಲ್ಲ್ಯಾ ಆಸಾವಾದಿ ಪ್ರಕಾಶನಾಕ್ ಉಲ್ಲಾಸ್ ಪಾಟಯ್ಲೆ.

ಕೊಂಕಣಿಂತ್ಲೊ ಪಯ್ಲೊ ತೀನ್ ಲಿಪಿಯಾಂನಿ ಪ್ರಕಾಶಿತ್ ಜಾಲ್ಲೊ ಸಂಶೋಧನಾಚೊ ಬೂಕ್ ’ಕೆನರಾ ಕಾಜರಾಂನಿ ವೊವಿಯೊ’ (ಮಾ|ಮಾಯ್ಕಲ್ ಸಾಂತುಮಾಯೆರ್) ಮೊಕ್ಳೀಕ್ ಕೆಲ್ಲ್ಯಾ ಅಧಿಕ್ ಮಾನಾಧಿಕ್ (ನಿವೃತ್) ಭಿಸ್ಪ್ ಲುವಿಸ್ ಪಾವ್ಲ್ ಸೋಜಾನ್ ಕೊಂಕಣಿಚಿ ಗ್ರೇಸ್ತ್ ಸಂಸ್ಕೃತಿ ಜೊಗಾಸಣೆನ್ ದವರ್ಚೆ ದಿಶೆನ್ ಹ್ಯಾ ಬುಕಾಚಿ ಥೊಕ್ಣಾಯ್ ಕೆಲಿ. ಮಾ|ಬಾ|ಮಾಯ್ಕಲ್ ಸಾಂತುಮಾಯೆರಾನ್ ಕೆನರಾ ಕಾತೊಲಿಕ್ ಕಾಜರಾಂನಿ ವೊವಿಯೊ ಪುಸ್ತಕ್ ಫಕತ್ ಮಂಗ್ಳುರ್ ಲೊಕಾಂಕ್ ಮಾತ್ರ್ ನ್ಹಯ್, ಬಗರ್ ಸಮೇಸ್ತ್ ಕೊಂಕಣಿ ವಾಚ್ಪ್ಯಾಂಕ್ ಪಾವಂವ್ಚ್ಯಾ ಇರಾದ್ಯಾನ್ ನಾಗರಿ ತಶೆಂಚ್ ರೋಮಿ ಲಿಪಿಯೆಂನಿ ಸಯ್ತ್ ಪರ್ಗಟ್ ಕೆಲ್ಲ್ಯಾ ’ಕೊಂಕಣ್‍ಗಾರ್ ಪ್ರಕಾಶನ್’ ಚ್ಯಾ ಸಂಪಾದಕ್ ವಲ್ಲಿ ಕ್ವಾಡ್ರಸಾಕ್ ಧಿನ್ವಾಸ್ಲೆಂ.

ಮಂಗ್ಳುರ್‌ಚ್ಯಾ ಬೆಸೆಂಟ್ ಕೊಲೆಜಿಚ್ಯಾ ಪತ್ರಿಕೋಧ್ಯಮ್ ವಿಭಾಗಾಚಿ ಮುಖೆಸ್ತ್ ಬಾಯ್ ಸ್ಮಿತಾ ಶೆಣಯ್ ಹಿಣೆಂ ಬುಕಾಂಚಿ ವಳೊಕ್ ಕರುನ್ ದಿತಚ್, ಕೊಂಕಣಿಂತ್ಲೆಂ ಪಯ್ಲೆಂ ಡೀಜಿಟಲ್ ಸಾಹಿತಿಕ್ ಪತ್ರಿಕಾ ’ಪಯ್ಣಾರಿ’ಚ್ಯಾ ಕಾನಡಿ ಲಿಪಿಚ್ಯಾ ಅಂಕ್ಯಾಚೆಂ ಮೊಕ್ಳಿಕ್ ಕರುನ್ ಅಮೆರಿಕಾ ಥಾವ್ನ್ ಡಾ|ಆಸ್ಟಿನ್ ಡಿ’ಸೋಜ್ ಪ್ರಭುನ್ ಕೊಂಕಣಿಕ್ ಡಿಜಿಟಲ್ ಮಾಧ್ಯಮಾಂತ್ ಮುಕಾರ್ ವರ್ಚೆಂ ಕಾಮ್ ಕರುನ್ ಆಸ್ಚ್ಯಾ ಆಶಾವಾದಿ ಪ್ರಕಾಶನಾಕ್ ಲೊಕಾಂನಿ ಸಹಕಾರ್ ದೀಂವ್ಕ್ ಜಾಯ್ ಮ್ಹಣಾಲೊ.

ಮಾ|ಬಾ|ಪ್ರತಾಪ್ ನಾಯ್ಕ್ ಹಾಣಿಂ ರೋಮಿ ಲಿಪಿಚ್ಯಾ ಪಯ್ಣಾರಿ ಸಾಹಿತಿಕ್ ಪತ್ರಿಕೆಚೆಂ ಮೊಕ್ಳಿಕ್ ಕರುನ್ ಆಮ್ಚಿ ಕೊಂಕಣಿ ಆಜ್ ಮೂಟ್‌ಭರ್ ಲೊಕಾಂಚಿ ಜಾಲ್ಯಾ ದೆಕುನ್ ಆಮಿ ಸಮೇಸ್ತಾಂನಿ ಸಾಂಗಾತಾ ಮೆಳುನ್ ವಾವ್ರ್ ಕರ್ಚಿ ಗರ್ಜ್ ಆಸಾ ಆನಿ ಡಿಜಿಟಲ್ ಮಾಧ್ಯಮ್ ಹ್ಯಾ ಚಿತ್ಪಾಕ್ ಪಾಟಿಂಬೊ ದಿತಾ ಮ್ಹಣಾಲೊ.

ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚಿ ಅಧ್ಯಕ್ಷ್ ಬಾಯ್ ಉಶಾ ರಾಣೆನ್ ನಾಗರಿ ಲಿಪಿಚ್ಯಾ ಪಯ್ಣಾರಿ ಸಾಹಿತಿಕ್ ಪತ್ರಿಕೆಚೆಂ ಮೊಕ್ಳಿಕ್ ಕರುನ್ ಕೊಂಕಣಿ ಭಾಸ್ ಜಾಗತಿಕ್ ಸ್ಥರಾರ್ ವಿಸ್ತಾರುಂಕ್ ಆಮಿ ಸರ್ವಾಂನಿ ಎಕಾಮೆಕಾ ಹಾತ್ ಮೆಳವ್ನ್ ಕಾಮ್ ಕರುಂಕ್ ಜಾಯ್ ಆನಿ ಭಾಶೆಕ್ ಆಧಾರ್ ಲಾಭಾಶೆಂ ಕರಿಜಾಯ್ ಮ್ಹಣಾಲಿ.

ಕೊಂಕಣಿಂತ್ಲೊ ಪಯ್ಲೊ ಡಿಜಿಟಲ್ ಆಡಿಯೊ ಕವಿತಾ ಪುಸ್ತಕ್ ’ಲೊಕ್‌ಡಾವ್ನ್’ ಡಿಜಿಟಲ್ ರುಪಾರ್ ಮೊಕ್ಳಿಕ್ ಕೆಲ್ಲ್ಯಾ ಬಾಬ್ ರಾಜು ನಾಯ್ಕ್ ಹಾಣಿಂ ಅಪ್ಲ್ಯಾ ಉಲವ್ಪಾಂತ್ ’ಆಮಿಂ ಡಿಜಿಟಲ್ ಸಕ್ತೆಕ್ ಗಳ್ಸುನ್ ಮೌಲ್ಯಾಧಾರಿತ್ ಸಾಹಿತ್ಯ್ ತಶೆಂಚ್ ತ್ಯಾ ಸಾಹಿತ್ಯಾಚಿ ಸಮೀಕ್ಶಾ ಕರುಂಕ್ ಜಾಯ್, ಪುಣ್ ತಾಚ್ಯಾಕೀ ಪಯ್ಲೆಂ ಆಮಿ ನವೆ ವಾಚ್ಪಿ ತಯಾರ್ ಕರ್ಚೆ ದಿಶೆನ್ ವಾವ್ರ್ ಕರುಂಕ್ ಜಾಯ್. ಹ್ಯಾ ದಿಶೆನ್ ಖೂಪ್ ವಾವ್ರ್ ಕರುನ್ ಆಸ್ಚ್ಯಾ ಆಶಾವಾದಿ ಪ್ರಕಾಶನಾಚ್ಯಾ ಪಯ್ಣಾರಿಕ್ ಪರ್ಬಿಂ ಪಾಟಯ್ಲಿ.

ಕೊಂಕಣಿಂತ್ಲೊ ಪಯ್ಲೊ ತೀನ್ ಲಿಪಿಯೆಚೊ ’ಇ-ಬೂಕ್’ ಲೊಕ್‌ಡಾವ್ನ್ ಮೊಕ್ಳಿಕ್ ಕರುನ್ ಬಾಬ್ ಗುರು ಬಾಳಿಗಾನ್ ಆಶಾವಾದಿ ಪ್ರಕಾಶನಾಚ್ಯಾ ವಾವ್ರಾಚಿ ಥೊಕ್ಣಾಯ್ ಕರುನ್ ಡಿಜಿಟಲ್ ಮಾಧ್ಯಮಾಂತ್ ಕಶೆಂ ಆಮಿ ಸಾಂಗಾತಾ ಕಾಮ್ ಕರುಂಕ್ ಸಾಧ್ಯ್ ಆಸಾ ಮ್ಹಳ್ಳ್ಯಾಚೆರ್ ಸಂದೇಶ್ ದಿಲೆ.

ತ್ಯೇ ಉಪ್ರಾಂತ್ ಕೊಂಕಣಿಚ್ಯಾ ವೆಗ್-ವೆಗಳ್ಯಾ ಶೆತಾಂನಿ ವೆಗ್-ವೆಗಳ್ಯಾ ಮುಖೆಲಿಂನಿ ಮೊಲಾಧಿಕ್ ಸಂಧೇಶ್ ದಿಲೆ; ಕೇಂದ್ರ್ ಸಾಹಿತ್ಯ್ ಅಕಾಡೆಮಿಚೊ ಸಂಚಾಲಕ್ ಡಾ|ಭೂಶಣ್ ಭಾವೆ, ರಿಟಾಯರ್ಡ್ ರೀಡರ್ ಆನಿ ಡಿನ್ ತಶೆಂಚ್ ಗೊಂಯ್ ವಿಶ್ವ್‍ವಿಧ್ಯಾಲಯಾಚ್ಯಾ ಕೊಂಕಣಿ ವಿಭಾಗಾಚಿ ಆಧ್ಲಿ ಮುಖೆಸ್ತ್ ಡಾ|ಚಂದ್ರಲೇಖ ಡಿ’ಸೋಜ್, ಕರ್ನಾಟಕ್ ಕೊಂಕಣಿ ಸಾಹಿತ್ಯ್ ಅಕಾಡೆಮಿಚೆ ಅಧ್ಯಕ್ಷ್ ಡಾ|ಜಗದೀಶ್ ಪೈ, ಕೇರಳಾ ಕೊಂಕಣಿ ಅಕಾಡೆಮಿಚೆ ಆಧ್ಲೆ ಸಂಚಾಲಕ್ ಮಾನೆಸ್ತ್ ಪಯ್ಯನೂರ್ ರಮೇಶ್ ಪೈ, ದಲ್ಗಾದೊ ಕೊಂಕಣಿ ಅಕಾಡೆಮಿ ಗೊಂಯ್ ಹಾಚೆ ಅಧ್ಯಕ್ಷ್ ಬಾಬ್ ವಿನ್ಸಿ ಕ್ವಾಡ್ರೊಸ್, ಕೊಂಕಣಿ ಭಾಶಾ ಮಂಡಳ್ ಮಂಗ್ಳುರ್‌ಚೆ ಅಧ್ಯಕ್ಷ್ ತಶೆಂಚ್ ಕೊಡಿಯಾಳು ಖಬರು ಪತ್ರಾಚೆ ಸಂಪಾದಕ್ ಮಾನೆಸ್ತ್ ವೆಂಕಟೇಶ್ ಬಾಳಿಗಾ, ಕೊಂಕಣಿ ಭಾಶಾ ಮಂಡಳ್ ಗೊಂಯ್ ಹಾಚಿ ಅಧ್ಯಕ್ಶಿಣ್ ಬಾಯ್ ಅನ್ವೇಶಾ ಸಿಂಗ್ಬಳ್, ದಾಯ್ಜಿವರ್ಲ್ಡ್ ವೀಕ್ಲಿಚೆ ಸಂಪಾದಕ್ ಬಾಬ್ ಹೇಮಾಚಾರ್ಯ, ಇ-ಉಜ್ವಾಡ್ ಮಯ್ನ್ಯಾಳ್ಯಾಚೆ ಸಂಪಾದಕ್ ಮಾನೆಸ್ತ್ ಲುವಿಸ್ ರೊಡ್ರಿಗಸ್ ಬೆಳಗಾಂವ್, ಉಡ್ಪಿ ದಿಯೆಸೆಜಿಚೆ ಪಂದ್ರಾಳೆಂ ’ಉಜ್ವಾಡ್’ ಸಂಪಾದಕ್ ಮಾ|ಬಾ|ರೋಯ್ಸನ್ ಫೆರ್ನಾಂಡಿಸ್, ಮ್ಯಾಂಗಲೋರೆ ಕೊಂಕಣ್ಸ್ ದುಭಯ್‌ಚೆ ಅಧ್ಯಕ್ಷ್ ಮಾನೆಸ್ತ್ ಜೇಮ್ಸ್ ಮೆಂಡೋನ್ಸಾ ದುಭಯ್, ಕೆನಡಾ ಥಾವ್ನ್ ಮಾನೆಸ್ತ್ ಜೆರಿ ಡಿ’ಮೆಲ್ಲೊ ಬೆಂದುರ್, ಗೊಂಯ್ ಥಾವ್ನ್ ನಾಮ್ನೆಚೆ ಕಲಾಕಾರ್ ಮಾನೆಸ್ತ್ ವಿಲ್ಲಿ ಗೋಯೆಸ್, ದಾಯ್ಜಿದುಭಯ್ ಸಂಚಾಲಕ್ ಮಾನೆಸ್ತ್ ನಾನು ಮರೋಳ್, ಕುವೆಯ್ಟ್ ಕೆನರಾ ವೆಲ್‌ಫೇರ್ ಅಸೋಸಿಯೇಶನ್‌ಚಿ ಅಧ್ಯಕ್ಷ್ ಬಾಯ್ ರಿನ್ನಾ ಡಿ’ಸೋಜ್, ದಬ್ಲಿನ್ ಅಯರ್‌ಲೆಂಡ್ ಥಾವ್ನ್ ಬಾಯ್ ಮೊನಿಕಾ ಡೆ’ಸಾ ಮಥಾಯಸ್, ಯು.ಕೆ.ಲಂಡನ್ ಥಾವ್ನ್ ಸುನಿಲ್ ಡಿ’ಕುನ್ಹಾ ತಶೆಂಚ್ ಬಾಹ್ರೇಯ್ನ್ ಥಾವ್ನ್ ಕೊಂಕಣಿ ಕುಟಮ್ ಸಂಚಾಲಕ್ ಮಾನೆಸ್ತ್ ಹೆನ್ರಿ ಡಿ’ಅಲ್ಮೇಡಾ ಹಾಣಿಂ ಆಪ್ಲೆ ಸಂಧೇಶ್ ದಿಲೆ.

ಪಯ್ಣಾರಿ.ಕೊಮ್‌ಚೆ ಸಹ-ಸಂಪಾದಕ್ ಬಾಬ್ ಶೈಲೇಂದ್ರ ಮೆಹ್ತಾ ಹಾಣಿಂ ಧಿನ್ವಾಸ್ ದಿಲೆ.

ಬಾಯ್ ಸ್ಮಿತಾ ಶೆಣಯ್ ಮಂಗ್ಳುರ್, ಬಾಬ್ ಪ್ರೇಮ್ ಮೊರಾಸ್ ಆನಿ ವಲ್ಲಿ ಕ್ವಾಡ್ರಸ್ ಹಾಣಿಂ ಹೆಂ ಕಾರ್ಯೆಂ ಚಲವ್ನ್ ವೆಲೆಂ.

ಕುಂದಾಪುರದಲ್ಲಿ ರೈತ ವಿರೋಧಿ,ಭೂಸುಧಾರಣ, ಎಪಿಎಮ್‍ಸಿ ಕಾಯ್ದೆ,ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿಪಕ್ಷಗಳ ಪ್ರತಿಭಟನೆ

JANANUDI.COM NETWORK

ಕುಂದಾಪುರ,ಸೆ.28: ಕೇಂದ್ರಾಡಳಿತವು ಜ್ಯಾರಿಯಲ್ಲಿ ತಂದಿರುವ ರೈತ ,ಭೂಸುಧಾರಣ ಕಾಯ್ದೆ, ಎಪಿಎಮ್‍ಸಿ ಕಾಯ್ದೆ ತಿದ್ದು ಪಡಿ,ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಬಂದ್ ಕರೆಗೆ ಎಲ್ಲಾ ವಿಪಕ್ಷಗಳೆಲ್ಲಾ ಸೇರಿ ಕುಂದಾಪುರದ ಶಾಸ್ತ್ರಿ ಸರ್ಕಲನಲ್ಲಿ ಪ್ರತಿಭಟನೆ ನಡೆಸಿದರು.
ಸಿ.ಪಿ.ಐ(ಎಂ) ನ ಎಚ್.ನರಸಿಂಹ ಮಾತನಾಡಿ ‘ಕೇಂದ್ರ ಸರಕಾರವು ರೈತ ವಿರೋಧಿಯಾಗಿದ್ದು, ಬಡವರ ಬಗ್ಗೆ ಕಾಳಜಿ ಇಲ್ಲದೆ, ಕಾರ್ಪೋರೇಟರಗಳಿಗೆ ಅನೂಕೂಲ ಆಗುವಂತೆ ರೈತ ವಿರೋಧಿ ಜನ ವಿರೋಧಿ ಕಾಯ್ದೆಯನ್ನು ಜ್ಯಾರಿಗೆ ತಂದಿದೆ, ನಾವು ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಭಾರೀ ಕಷ್ಟಗಳು ಕಾದಿವೆ, ನಾವೆಲ್ಲಾ ಸೇರಿ ಇಂತಹ ಭ್ರಷ್ಠ ಸರಕಾರವನ್ನು ಕಿತ್ತೊಗೆಯಬೇಕು’ ನುಡಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ‘ಕೇಂದ್ರ ಮತ್ತು ರಾಜ್ಯ ಎರಡು ಸರಕಾರಗಳು ಭ್ರಷ್ಠ ಸರಕಾರಗಳಾಗಿವೆ, ಈಗ ರೈತ ವಿರೋಧಿ ಕಾಯ್ದೆ ಜ್ಯಾರಿಯಲ್ಲಿ ತಂದು ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ.ದೇವರಾಜ್ ಅರಸು ಮತ್ತು ಇಂದಿರಾ ಗಾಂಧಿ ಉಳಿಯುವನು ಜಮಿನ್ದಾರನಾಗಬೇಕು ಎಂದು ಭೂ ಕಾಯ್ದೆಯನ್ನು ತಂದು ಉಳುವನಿಗೆ, ರೈತ ಕಾರ್ಮಿಕನಿಗೆ ಜಮಿನ್ದಾರನ್ನಾಗಿ ಮಾಡಿಸಿತು, ಆದರೆ ಇಂದು ಕೇಂದ್ರ ಸರಕಾರ ರೈತರನ್ನು ವಿನಾಶಕ್ಕೆ ತಳ್ಳುವಂತ ಕಾಯ್ದೆ ಮಾಡಿದೆ.ಇಂತಹ ಸರಕಾರ ನಾವು ಕೆಳಗಿಳಿಸುವಂತೆ ಮಾಡ ಬೇಕು”ಎಂದರು.
ಭೀಮ ಘರ್ಜನೆ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ‘ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಪೋರೇಟರ್, ಬಂಡವಾಳ ಶಾಹಿಗಳ ಪರವಾದ ಸರಕಾರವಾಗಿದೆ. ಇಂದು ಅನ್ನದಾತನಿಗೆ ಸಂಕಷ್ಟಕ್ಕೆ ಗುರಿ ಪಡಿಸಿದ್ದಾರೆ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಂದು ರೈತರನ್ನು ಮಟ್ಟ ಹಾಕುವುದಲ್ಲದೇ, ಮುಂದಿನದಿನಗಳಲ್ಲಿ ಬಡವರಿಗೆ ತಿನ್ನಲು ಅನ್ನ ಸಿಗದಂತ್ತ ವಾತವರಣ ಕಲ್ಪಿಸಲು ಹೊರಟಿದೆ. ಅದಲ್ಲದೆ ನಮ್ಮ ಶಾಂತಿಯುತ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು, ಹೆಚ್ಚು ಜನ ಸೇರಲು ಅನುಮತಿ ನೀಡದಂತೆ ಹೋರಾಟ ಹತ್ತಿಕಲು ಪ್ರಯತ್ನಿಸಿದೆ. ಆದರೆ ನಾವೆಲ್ಲಾ ಗ್ರಾಮದಿಂದ ಹಿಡಿದು ನಗರ, ತಾಲೂಕು ಕೇಂದ್ರ, ಜಿಲ್ಲಾಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳುತಿದ್ದೆವೆ, ಹೀಗೆ ಇಡೀ ದೇಶದ ಜನರನ್ನು ಹತ್ತಿಕ್ಕಲು, ಜೈಲಲ್ಲಿ ಅಟ್ಟಲು ಈ ಪೊಲೀಸ್ ಶಕ್ತಿಗೆ ಸಾಧ್ಯವಿದೆಯೆ’ ಎಂದು ಸವಾಲು ಹಾಕಿದರು.
ರೈತ ಸಂಘದ ವಿಕಾಶ್ ಹೆಗ್ಡೆ ‘6 ವರ್ಷಗಳಿಂದ ಕೇಂದ್ರ ಸರಕಾರ ದೇಶವನ್ನು ವಿನಾಶದ ಕಡೆ ಒಯ್ಯುತಿದ್ದಾರೆ, ಒಂದು ಸೂಜಿಯು ಉತ್ಪಾದನೆ ಶಕ್ತಿ ಇಲ್ಲದಂತಹ ಭಾರತಕ್ಕೆ ಕಾಂಗ್ರೆಸ್ ಸರಕಾರವು ಜಗತ್ತಿನಲ್ಲಿ ಹೆಮ್ಮರವನ್ನಾಗಿ ಬೆಳೆಸಿದರು, ಆದರೆ ಇಂದು ಈ ಭಾರತದವನ್ನು ಪ್ರಪಂಚದ ಭೂ ಪಟದಲ್ಲಿ ಇಲ್ಲದಂತ್ತೆ ಮಾಡಲು ಹೊರಟಿದೆ, ಇಂತ ಭ್ರಷ್ಟ ಸರಕಾರಗಳನ್ನು ಎಲ್ಲಾ ವಿಪಕ್ಷದವರು ಸೇರಿ ಕಿತ್ತೊಗೈಯಬೇಕು’ ಎಂದರು. ಮಹಿಳಾ ಕಾಂಗ್ರೆಸ್ ಶ್ಯಾಮಲ ಭಂಡಾರಿ ಮಾತನಾಡಿ ‘ಈ ರೈತ ವಿರೋಧಿ ಕಾಯ್ದೆಯಿಂದ ಬಡವ ರೈತನಿಂದ ದಾನ್ಯ ದವಸ ಕಡಿಮೆ ಕ್ರಯದಲ್ಲಿ ಖರೀದಿಸಿ, ಜನತೆಗೆ ಹೆಚ್ಚೆ ಬೆಲೆಯನ್ನು ನೀಡಿ ಪಡೆದುಕೊಳ್ಳ ಬೇಕಾಗುತ್ತದೆ, ರೈತರಿಗೆ ಇದು ಮರಣ ಶಾಸನವಾಗಿದೆ’ಎಂದರು. ಡಿ.ವೈ.ಎಫ್.ಐ. ನ ರಾಜೇಶ್ ಮಾತನಾಡಿ ‘ಇಂದು ನಿರೂದ್ಯೋಗ ವ್ಯಾಪಕವಾಗಿ ಹರಡಿರುವ ಈ ಕಾಲದಲ್ಲಿ, ರೈತ ಕಾರ್ಮಿಕ ವಿನಾಶದ ಕಾಯ್ದೆ ತಂದಿರುವುದು ನ್ಯಾಯವಲ್ಲಾ, ಕೋಳಿ ಸಾಕಣೆಯೂ ಕ್ರಷಿ ಕ್ಷೇತ್ರದಲ್ಲಿ ಬರುತ್ತದೆ, ಕೋಳಿ ಸಾಕಣೆ ಮಾಡುವರು ಎಪಿಎಮ್‍ಸಿ ಗೆ ಕಡಿಮೆ ದರದಲ್ಲಿ ಮಾರಬೇಕಾಗುತ್ತದೆ,ಆದರೆ ಅವರು ಹೆಚ್ಚು ದರದಲ್ಲಿ ಮಾರಾಟ ಮಾಡುವರು, ಅಂದರೆ ಇದು ರೈತರ ವಿನಾಶದ ಕಾಯ್ದೆಯೇ ಆಗಿದೆ ಎಂದು’ ಪ್ರತಿಭಟಿಸಿದರು.
ಸಿ.ಐ.ಟಿ.ಯ ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಮಾತನಾಡಿ ‘ಇಂತಹ ಜನ ಅಹಿತ ಕಾಯ್ದೆಗಳು, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಬಿದ್ದೋಗಲು ಬರುವ ಚುನಾವಣೆಯ ತನಕ ಕಾಯ ಬೇಕೆಂದಿಲ್ಲಾ, ಈ ಭ್ರಷ್ಠ ಮತ್ತು ಜನ ಅಹಿತ ಕಾಯ್ದೆಗಳನ್ನು ತರುವ ಸರಕಾರಗಳ ವಿರುದ್ದ ನಾವೆಲ್ಲಾ ವಿಪಕ್ಷಗಳು ಒಟ್ಟು ಸೇರಿ ಹೋರಾಡಿದರೆ ಚುನಾವಣೆಯ ಮೊದಲೇ ಈ ಸರಕಾರಗಳು ಬಿದ್ದು ಹೋಗುತ್ತವೆ” ಎಂದು ನುಡಿದರು.

ಈ ಪ್ರತಿಭಟನೆಯಲ್ಲಿ, ಕಾಂಗ್ರೆಸ್, ಸಿ.ಪಿ.ಐ (ಎಂ), ರೈತ ಸಂಘ, ಭೀಮ ಘರ್ಜನೆ ದಲಿತ ಸಂಘರ್ಷ ಸಮಿತಿ, ಸಿ.ಐ.ಟಿ., ಜೆಡಿಎಸ್., ಡಿ.ವೈ.ಎಫ್.ಐ. ಪಕ್ಷಗಳು ಹಾಗೂ ಸಂಘಟನೇಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಮಲ್ಯಾಡಿ ಶಿವರಾಮ ಶೆಟ್ಟಿ, ವಿನೋದ್ ಕ್ರಾಸ್ಟೊ, ಕೆ.ಜಿ.ನಿತ್ಯಾನಂದ, ಕುಮಾರ ಖಾರ್ವಿ, ಕ್ರಷ್ಣದೇವ ಕಾರಂತ, ಜ್ಯೋತಿ ಡಿ. ನಾಯ್ಕ, ಕೋಡಿ ಸುನೀಲ್ ಪೂಜಾರಿ, ಕೇಶವ ಭಟ್, ಆಶಾ ಕರ್ವಾಲ್ಲೊ, ದೀನೆಶ್ ಬೆಟ್ಟಿನ್, ರೋಶನ್ ಶೆಟ್ಟಿ, ಅಶೋಕ ಸುವರ್ಣ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮುನಾಫ್, ರೋಶನ್ ಬಾರೆಟ್ಟೊ, ಗಣೇಶ ಶೇರಿಗಾರ್, ಧರ್ಮಪ್ರಕಾಶ್, ಶಿವರಾಮ ಪುತ್ರನ್, ಮಿಲ್ಲ್ ರವಿ, ಸುಭಾಷ್ ಪೂಜಾರಿ, ರಘುವರನ್ ನಾಯ್ಕ್, ಗಂಗಾಧರ ಶೆಟ್ಟಿ, ಕೆ.ಶಿವಕುಮಾರ್ ಮುಂತಾದವರು ಹಾಜರಿದ್ದರು.

Sad Demise MRS LILLY LEWIS (Gujjadi – Gangoli)

Wife of Late Bernard Benedict Lewis

(Gujjadi – Gangoli)

(Born : 18-07-1928 – Died : 27-09-2020)

Loving Mother / Mother-in-law of Eugine/Salvador, Raymond/Gladys,
Henry/Gracy, Pauline/Rocky, Gregory/Molly, Clera/John,
Leo/Rachel, Steven/Jenifer
Grandmother of : Metilda, Mark, Michael, Martin, Maxim, Reshma, Sushma, Krishma, Delicia,Donald, Asha, Elroy, Ashwin, Cheryl, Brighton, Joyston, Carol, Shannon, Lionel,Leander and Arron.
Great Grandmother of : Sushma, Sunny, Aral, Michelle, Malcolm ,Aahana, Alycia ,Kaitlyn, Zara,Lorcandro, Lorendon, Lorezton, Ethan, Amira, Alana, Hennah, Rian, Jordan and Neil.

Funeral cortege will leave from Villa Bonsons, Gujjadi at 3.00 pm on Monday,28th September,2020
for Mass at 4.00 pm to Immaculate Conception Church, Gangolli, with the presence of close family
members only due to Covid-19 restrictions.
Relatives & Friends kindly accept this as the only intimation.
YOUR PRAYERS FOR MAI’S SOUL ARE THE CONDOL