HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ: ಕನ್ನಡ ಪರ ಸಂಘಟನೆಗಳು ಉದಯೋನು್ಮಖ ಕವಿಗಳನ್ನು ಸಮಾಜ ಮುಖಿಯಾಗಿ ಬೆಳೆಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಕನ್ನಡ ಪರ ಸಂಘಟನೆಗಳು ಉದಯೋನು್ಮಖ ಕವಿಗಳನ್ನು ಸಮಾಜ ಮುಖಿಯಾಗಿ ಬೆಳೆಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಕಡೆ ಒಲವು ಮೂಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌ ಹೇಳಿದರು.
  ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಾಹಿತಿ ಆರ್‌.ಚೌಡರೆಡ್ಡಿ ಅವರ ಮನೆಯಂಗಳದಲ್ಲಿ, ತಾಲ್ಲೂಕು ಕನ್ನಡ ಸಿರಿ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕವಿಯ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಿವಿಜಿ, ಮಾಸ್ತಿ, ಕುವೆಂಪು ಅವರಂಥ ಮೇರು ಸಾಹಿತಿಗಳ ಸಾಹಿತ್ಯ ಕಿರಿಯ ತಲೆಮಾರಿನ ಸಾಹಿತಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.   ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಉದ್ದೇಶದಿಂದ, ಪ್ರತಿ ತಿಂಗಳು 2ನೇ ಶನಿವಾರ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಅವರ ಮನೆಯಂಗಳದಲ್ಲಿ ಮೊದಲ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಮುಂದುವರಿಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.  ಕವಿ ರಾಧಾಕೃಷ್ಣ ಆರ್‌.ಚೌಡರೆಡ್ಡಿ ಅವರ ಕಾವ್ಯ ಕುರಿತು ಮಾತನಾಡಿ, ರೆಡ್ಡಿ ಅವರ ಕಾವ್ಯದಲ್ಲಿ ಮಣ್ಣಿನ ಸೊಗಡು ದಟ್ಟವಾಗಿದೆ. ಸರಳತೆ ಹಾಗೂ ಗೇಯತೆ ಅವರ ಕಾವ್ಯದ ವೈಶಿಷ್ಟ್ಯವಾಗಿದೆ. ಅವರು ಕಾವ್ಯ ಕಟ್ಟುವ ರೀತಿ ಉದಯೋನ್ಮುಖ ಕವಿಗಳಿಗೆ ಮಾದರಿಯಾಗಿದೆ. ಕಾವ್ಯದಲ್ಲಿ ಗ್ರಾಮೀಣ ಬದುಕಿನ ವಾಸ್ತವ ಸ್ಥಿತಿಗತಿ ಅನಾವರನಗೊಂಡಿದೆ ಎಂದು ಹೇಳಿದರು.  ಕವಿ ಶಂಕರೇಗೌಡ ಮಾತನಾಡಿ, ಗ್ರಾಮೀಣ ನೆಲೆಯಲ್ಲಿ ರೂಪಗೊಂಡ ಆರ್‌.ಚೌಡರೆಡ್ಡಿ ಅವರ ಕತೆಗಳು ಗಮನ ಸೆಳೆಯುತ್ತವೆ. ಅವರು ಬರೆದಿರುವ ಮಕ್ಕಳ ಕತೆಗಳು ಬೋಧಪ್ರದವಾಗಿದ್ದು, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಪರಿಸರ ಪ್ರೇಮ, ಪ್ರಾಣಿ ದಯೆ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.   ಈ ಸಂದರ್ಭದಲ್ಲಿ ಗಾಯಕರಾದ ಕಲಾ ಶಂಕರ್‌, ಕೋತ್ಸಂದ್ರ ರೆಡ್ಡಪ್ಪ, ಕೆ.ನರಸಿಂಹಮೂರ್ತಿ, ಎನ್‌.ಲೇಖಾ, ಎಸ್.ಎನ್.ಪದ್ಮ ಅವರಿಂದ  ಆರ್‌.ಚೌಡರೆಡ್ಡಿ ಅವರ ಭಾವಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆರ್‌.ಚೌಡರೆಡ್ಡಿ ಅವರಿಗೆ ಕವಿ ನಮನ ಸಲ್ಲಿಸಿದ ಬಳಿಕ  ಸನ್ಮಾನಿಸಲಾಯಿತು.   ಶಿಕ್ಷಕರಾದ ಆರ್‌.ರವಿಕುಮಾರ್‌, ನಾಗರಾಜ್‌, ರವಣಪ್ಪ, ಸತೀಶ್‌, ನಾಗೇಂದ್ರ ಪ್ರಕಾಶ್‌, ಎಸ್‌.ಲಕ್ಷ್ಮಣಬಾಬು, ರಮೇಶ್‌ ಇದ್ದರು.

450 ವರ್ಷಾಚರಣೆಯಲ್ಲಿರುವ ರೋಜರಿ ಮಾತಾ ಚರ್ಚಿಗೆ,ರೋಜರಿ ಸೊಸೈಟಿಯಿಂದ 1 ಲಕ್ಷ ರೂಪಾಯಿ ದೇಣಿಗೆ

JANANUDI.COM NETWORK

ಕುಂದಾಪುರ,ಒ.10: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಯು 450 ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇಗರ್ಜಿಯು ಹಲವಾರು ಯೋಜನೆಗಳ ಮೂಲಕ ನವೀಕ್ರತಗೊಳ್ಳುತ್ತಾ ಇದೆ. ಈ ಯೋಜನೆಗಳ ನೆರವಿಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆಯು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಗೆ ದೇಣಿಗೆಯ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ಕೆನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ಹಸ್ತಾಂತರಿಸಿದರು.


“ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿದ ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ‘ವಲಯ ಪ್ರಧಾನ ಇಗರ್ಜಿಯಾದ ಇದೇ ರೋಜರಿ ಮಾತೆಯ ಆಶಿರ್ವಾದದಲ್ಲಿ, 28 ವರ್ಷಗಳ ಹಿಂದೆ ಅಂದಿನ ಅಧ್ಯಾತ್ಮಿಕ ನಿರ್ದೇಶಕ ಮತ್ತು ಕಥೊಲಿಕ್ ಸಭಾದ ಹಿರಿಯರಿಂದ ಆರಂಭಿಸಲ್ಪಟ್ಟ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಮೇಲೆ ರೋಜರಿ ಮಾತೆಯ ಆಶಿರ್ವಾದಿಸುತ್ತಲೆ ಬಂದಿದ್ದಾಳೆ. ಇಂದು ಈ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆದಿದೆ. ಅದಕ್ಕೆ ಪ್ರತ್ಯೋಪಕಾರವಾಗಿ ನಾವು ಈ ದೇಣಿಗೆಯನ್ನು ನೀಡುತಿದ್ದೆವೆ’ ಎಂದು ಹೇಳಿದರು.
ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತೆ ಸಲ್ಲಿಸುತ್ತಾ ‘ಈ ಸಂಸ್ಥೆ ಕೂಡ ಚಿರಾಯುವಾಗಿರಲಿ, ಸಂಸ್ಥೆ ಕೂಡ 450 ವರ್ಷ ಸಂಭ್ರಾಮಚರಣೆ ಆಚರಿಸುವ ಭಾಗ್ಯ ಲಭಿಸಲಿ ಮತ್ತು ಸಂಸ್ಥೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿರ್ವದಿಸಿದರು.
“


ಈ ಸಂದರ್ಭದಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ನ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ಶಾಂತಿ ಕರ್ವಾಲ್ಲೊ, ಡಯಾನಾ ಡಿಆಲ್ಮೇಡಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಮತ್ತು ಕುಂದಾಪುರ ಶಾಖೆಯ ನಿರ್ವಹಣಾಧಿಕಾರಿ ಮೇಬಲ್ ಪುಟಾರ್ಡೊ ಉಪಸ್ಥಿತರಿದ್ದರು.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕುಂದಾಪುರ, ಕೊಟೇಶ್ವರ 9 ಮಂದಿಯ ಬಂದನ : ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು – ಡೆಲ್ಲಿ ಕ್ಯಾಪಿಟಲ್ಸ್

JANANUDI.COM NETWORK

ಕುಂದಾಪುರ, ದಿನಾಂಕ 05/10/2020 ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ  ಕುಂಬ್ರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಐಪಿಎಲ್    ಕ್ರಿಕೆಟ್  ಪಂದ್ಯಾಟದ  ಸೋಲು ಗೆಲುವಿನ  ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ  ಎಂದು  ಖಚಿತ ಮಾಹಿತಿ ಬಂದ ಮೇರೆಗೆ, ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ.ಸದಾಶಿವ ಆರ್ ಗವರೋಜಿ ಠಾಣಾ ಸಿಬ್ಬಂದಿಯವರೊಂದಿಗೆ    ಕುಂಬ್ರಿ  ಬಸ್ ನಿಲ್ದಾಣದ  ಸಮೀಪ  20:00 ಗಂಟೆಗೆ  ತಲುಪಿದಾಗ  ಕುಂಬ್ರಿ  ಜಂಕ್ಷನ್‌ನ  ಬಳಿಯ ಸಾರ್ವಜನಿಕ  ಸ್ಥಳದಲ್ಲಿ   8 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು  ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಜೋರಾಗಿ ಹೇಳುತ್ತಾ ನೋಟ್ ಪುಸ್ತಕದಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿದ್ದು ಇತರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಹೇಳುತ್ತಿರುವುದನ್ನು  ಗಮನಿಸಿ   ಇವರುಗಳು    ತಮ್ಮ  ಸ್ವಂತ  ಲಾಭಕ್ಕಾಗಿ ಕ್ರಿಕೆಟ್  ಪಂದ್ಯದ  ಮೇಲೆ  ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಾ ಸಾರ್ವಜನಿಕರಿಂದ ಹಣ  ಸಂಗ್ರಹಿಸುತ್ತಿರುವುದು  ಕಂಡುಬಂದಿರುವುದರಿಂದ  ಧಾಳಿ ನಡೆಸಿ  ಆರೋಪಿತರನ್ನು ವಶಕ್ಕೆ ಪಡೆದು ಬೆಟ್ಟಿಂಗ್ ನಡೆಸಲು ಉಪಯೋಗಿಸಿದ ನಗದು ರೂ 17,000/-,  ರೆಡ್ ಮಿ ಮೊಬೈಲ್ ಫೋನ್-1  ಹಾಗೂ ಒಂದು ನೋಟ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

     ಆರೋಪಿಗಳ ವಿವರಹೀಗಿದೆ ಪ್ರಸಾದ್ ಆಚಾರಿ 1) ಪ್ರಾಯ:29 ವರ್ಷ ತಂದೆ:ಗೋಪಾಲ ಆಚಾರಿ ವಾಸ:ಮಠದಬೆಟ್ಟು ರಸ್ತೆ,2 ನೇ ಕ್ರಾಸ್, ಕೊಟೇಶ್ವರ ಗ್ರಾಮ, 2)ಶರತ್ ಪ್ರಾಯ:28 ವರ್ಷ ತಂದೆ: ಶೀನ ವಾಸ: ಬ್ಯಾಲಿಹಿತ್ಲು ಬೀಜಾಡಿ,ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 3) ಪ್ರಶಾಂತ್ ಪ್ರಾಯ: 29 ವರ್ಷ ತಂದೆ: ಸೀತಾರಾಮ ಆಚಾರಿ ವಾಸ:ಹದ್ರೋಳಿ ಕಮ್ತಿಯಾರ್ ಬೆಟ್ಟು ಕೊಟೆಶ್ವರ ಗ್ರಾಮ,ಕುಂದಾಪುರ ತಾಲೂಕು 4) ಪುರಂದರ ಪ್ರಾಯ: 40 ವರ್ಷ ತಂದೆ: ಸೀತಾರಾಮ ಆಚಾರಿ ವಾಸ: ಪಟಗಾರ್ ಮನೆ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು 5) ಸಚಿನ್ ಆಚಾರಿ ಪ್ರಾಯ: 30 ವರ್ಷ ತಂದೆ: ಉಪೇಂದ್ರ ವಾಸ: ಮಠದಬೆಟ್ಟು ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 6) ಸಂತೋಷ ಪ್ರಾಯ: 36 ವರ್ಷ ತಂದೆ: ಶಿವರಾಮ ಆಚಾರಿ ವಾಸ: ಶಿವಕೃಪಾ ದೊಡ್ಡೋಣಿ ರಸ್ತೆ, ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು7) ಹರೀಶ ಪ್ರಾಯ: 29 ವರ್ಷ ತಂದೆ: ಆನಂದ ವಾಸ: ಚಾತ್ರಬೆಟ್ಟು, ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 8) ಸುಧಾಕರ ಪ್ರಾಯ: 35 ವರ್ಷ ತಂದೆ:ಲಕ್ಷ್ಮಣ ಮೊಗವೀರ ವಾಸ:ಬ್ಯಾಲಿಹಿತ್ಲು.ಬೀಜಾಡಿ ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 9) ಪ್ರಸಾದ್ ಪೂಜಾರಿ ಪ್ರಾಯ: 25 ವರ್ಷ ತಂದೆ: ಆನಂದ ಪೂಜಾರಿ ವಾಸ: ಕೊರವಡಿ ಶಾಲೆ ಹತ್ತಿರ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು.

ಸ್ಥಳದಲ್ಲಿ ಐಪಿಎಲ್ ಬೆಟ್ಟಿಂಗ್ ಕುಂದಾಪುರದ ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ : 7 ಜನರ ಬಂದನ- ಹೈದ್ರಾಬಾದ್ ಸನ್ ರೈಸರ ಹಾಗೂ ಕಿಂಗ್ಸ ಇಲೇವನ್ ಪಂಜಾಬ್ ಮ್ಯಾಚ್

JANANUDI.COM NETWORK

ಕುಂದಾಪುರ, ದಿನಾಂಕ  08.09.2020 ರಂದು   19:10 ಗಂಟೆಗೆ ಅರೋಪಿಗಳು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಮಾಕೇಟ್  ಬಳಿ  ಸಾರ್ವಜನಿಕ   ಸ್ಥಳದಲ್ಲಿ  ಅಕ್ರಮವಾಗಿ ಗುಂಪು ಗೂಡಿಕೊಂಡು ಅಂದು  ನಡೆಯುತಿದ್ದ ಐಪಿಎಲ್ ಮ್ಯಾಚನ್ ಟೀಮ್‌ಗಳಾದ     ಹೈದ್ರಾಬಾದ್ ಸನ್ ರೈಸರ ಹಾಗೂ  ಕಿಂಗ್ಸ ಇಲೇವನ್ ಪಂಜಾಬ್ ಕ್ರಿಕೆಟ್  ಸ್ಕೋರ್‌‌ನ  ಮೇಲೆ  0 ಯಿಂದ  9  ಸಂಖ್ಯೆ ಒಳಗೆ ಯಾವುದಾದರು  ಸಂಖ್ಯೆಗೆ  200/- ರೂ   ಕಟ್ಟಿದರೆ,  ಅದಕ್ಕೆ ವಿನ್ನಿಂಗ್    ನಂಬ್ರಕ್ಕೆ  1500/ ರೂ  ಕೊಡುವುದಾಗಿ ಹೇಳುತ್ತಾ  ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ  ಆಟ  ಆಡುತ್ತಿದ್ದರು ,

ಈ ಸಮಯದಲ್ಲಿ  ಖಚಿತ  ಮಾಹಿತಿಯಂತೆ ದಾಳಿ ನಡೆಯಿಸಿದ  ಶಂಕರನಾರಾಯಣ ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀಧರ ನಾಯ್ಕ ಮತ್ತು ತಂಡ ಕ್ರಿಕೆಟ್ ಬೆಟ್ಟಿಂಗ್  ಜುಗಾರಿ  ಆಟಕ್ಕೆ  ಬಳಸಿದ  ಮೊಬೈಲ್ ಪೋನ್-1  ನಗದು ಹಣ  3300/- ಕ್ರಿಕೆಟ್  ಸ್ಕೋರನ  ಸಂಖ್ಯೆ ಬರೆದ   ಚೀಟಿಯನ್ನು  ವಶಪಡಿಸಿಕೊಂಡು ಆರೋಪಿಗಳಾದ 7 ಜನರರನ್ನು ಬಂದಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಬಂದಿತರ ವಿವರ ಈ ರೀತಿ ಇದೆ ಸುಬ್ರಹ್ಮಣ್ಯ ಕೊಠಾರಿ (36), ತಂದೆ: ಮಂಜುನಾಥ ಕೊಠಾರಿ,ಸಂತೋಷ ಶೆಟ್ಟಿ (26) ತಂದೆ: ರಾಜೀವ ಶೆಟ್ಟಿ, ಕಿರಣ್ ಪೂಜಾರಿ( 19), ತಂದೆ: ಚಂದ್ರಪೂಜಾರಿ, ವಿವೇಕ ಶೆಟ್ಟಿ (29)ತಂದೆ: ಶೇಖರ ಶೆಟ್ಟಿ, ಅಕ್ಷಯ ಪೂಜಾರಿ(23) ತಂದೆ: ಅಶೋಕ ಪೂಜಾರಿ, ಜಯ ಶೆಟ್ಟಿ(36) ತಂದೆ:ನಾರಾಯಣ ಶೆಟ್ಟಿ, ಅಪ್ಸರ್ ಪ್ರಾಯ 25 ವರ್ಷತಂದೆ ಅನ್ವರ ಭಾಷ

“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀನಿವಾಸಪುರ ತಾಲೂಕಿನಲ್ಲಿ3001ನೇಪ್ರಗತಿಬಂಧು ಸ್ವ-ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮ”

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಶ್ರೀನಿವಾಸಪುರ ತಾಲೂಕಿನಲ್ಲಿ ಸ್ವ-ಸಹಾಯ ಸಂಘವನ್ನುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕೋಲಾರ ಜಿಲ್ಲೆಯ ಮಾನ್ಯ ಹಿರಿಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಚಂದ್ರಶೇಖರ್ ಜೆ ರವರು 3001 ನೇ ಪ್ರಗತಿಬಂಧು ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದಂತ ವಿಸ್ತರಣೆಗೊಂಡಿದ್ದು ಯೋಜನೆಯ ಬೇರೆ ಬೇರೆ ಕಾರ್ಯಕ್ರಮವನ್ನು ಕುಟುಂಬದ ಅಭಿವೃದ್ದಿಗೆ ಪೂರಕವಾಗಿ ಅನುಷ್ಠಾನ.ಸಂಘದ ನಿಯಮಗಳ ಬಗ್ಗೆ & ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಸಂಘದ ವಾರ ಸಭೆಯಿಂದ ತಮ್ಮ ಕುಟುಂಬದಲ್ಲಿ ಮಾಡ ಬೇಕಾದ ಪ್ರಗತಿ & ಯೋಜನೆಗಳನ್ನು ಹಿಡುವಳಿ ಯೋಜನೆಯ ಮೂಲಕ ಅನುಷ್ಠಾನ ಮಾಡಲಾಗುವುದು.ಸ್ವ-ಸಹಾಯ ಸಂಘದಿಂದ ಸದಸ್ಯರ ಆರ್ಥಿಕ & ಸಾಮಾಜಿಕ ಅಭಿವೃದ್ದಿಗೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ,ಕ್ಷೇ,ಧ,ಗ್ರಾ,ಯೋ,ಬಿ.ಸಿ ಟ್ರಸ್ಟ್(ರಿ)ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಎಸ್ ರವರು ಹಾಗೂಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷಕರುಕಾಸಿಂ ಹುಸೇನ್, ಗೌನಿಪಲ್ಲಿ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯರು ರಮೇಶ್ ಬಾಬು, ಗೌನಿಪಲ್ಲಿ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷಕರಾದ ಬಕ್ಷುಸಾಬ್, ಗೌನಿಪಲ್ಲಿ ವಲಯದ ಮೇಲ್ವಿಚಾಕರಾದ ವೆಂಕಟೇಶ್‍ಹಾಗೂ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಹಾಗೂ ಸ್ವ-ಸಹಾಯ ಸಂಘದವರು ಉಪಸ್ಥಿತರಿದ್ದರು.

ಮನ್ವಂತರ ಜನಸೇವಾ ಟ್ರಸ್ಟ್‍ನ ಸಮಾಜಮುಖಿ `ಸೇವಾ ಸಂಭ್ರಮ’ ಯೋಜನೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು- ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಮನ್ವಂತರ ಜನಸೇವಾ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ, ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವು ಸೇರಿದಂತೆ ಸೇವಾ ಸಂಭ್ರಮ ಯೋಜನೆಯಡಿ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವೈದ್ಯಕೀಯ ಸೌಲಭ್ಯ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಿ ಮಾತನಾಡಿ,ಕಳೆದ 10 ವರ್ಷಗಳಿಂದ ಮನ್ವಂತರ ಪ್ರಕಾಶನದಡಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಟ್ರಸ್ಟ್‍ನಿಂದ ಬಡವರಿಗೆ ಒದಗಿಸುವ ಆರ್ಥಿಕ ನೆರವಿನ ಪ್ರಯೋಜನಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಅವರಿಗೆ ವಹಿಸಲಾಗಿದೆ. ಇವರು ಶಿಫಾರಸ್ಸು ಮಾಡುವ ಬಡವರಿಗೆ ಆರ್ಥಿಕ ನೆರವು ನೀಡಲಾಗುವುದು,ಫಲಾನುಭವಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಬಡ ರೋಗಿಗಳಿಗೆ ನೆರವಾಗುವ ದೃಷ್ಠಿಯಿಂದ ಮನ್ವಂತರ ಆರೋಗ್ಯ ಮಿತ್ರ ಹೆಸರಿನಲ್ಲಿ ಸುಸಜ್ಜಿತ ಅಂಬ್ಯುಲೆನ್ಸ್ ವ್ಯವಸ್ಥೆಗೆ ಕಲ್ಪಿಸಲು ಉದ್ದೇಶಿಸಿದ್ದು,ಆರ್ಥಿಕವಾಗಿ ಹಿಂದುಳಿದವರಿಗೆ ಸಂಪೂರ್ಣ ಉಚಿತ, ಉಳ್ಳವರು ತುರ್ತು ಸಂದರ್ಭದಲ್ಲಿ ಕೈಗೆಟಕುವ ಶುಲ್ಕ ಪಾವತಿಸಿ ಪ್ರಯೋಜನ ಪಡೆದುಕೊಳ್ಳಬಹುದು. ರೋಗಿಗಳು ಅಪೇಕ್ಷಿಸುವ ಯಾವುದೇ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಈ ಯೋಜನೆಯನ್ನು 2021ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಕೋಲಾರದಿಂದ ಜಿಲ್ಲಾಧಿಕಾರಿಗಳ ಕಚೇರಿ,ಜಿಲ್ಲಾ ಪೊಲೀಸ್ ಕಚೇರಿಗೆ ಹೋಗಲು ಹಣದ ಸಮಸ್ಯೆ ಇರುವ ಬಡ ಗ್ರಾಮೀಣ ಜನರನ್ನು ಕೋಲಾರ ಬಸ್ ನಿಲ್ದಾಣದಿಂದ ಕರೆದೊಯ್ಯಲು ಆಟೋ ರಿಕ್ಷಾ ವ್ಯವಸ್ಥೆ ಮಾಡಲು ಚಿಂತಿಸಿದ್ದು, ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುವುದು. ಸೇವಾ ಮನೋಭಾವ ಹೊಂದಿರುವ ವೈದ್ಯರ ಸಹಕಾರದಿಂದ ಬಡ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು
ಜಿಲ್ಲೆಯ ಪ್ರತಿಭಾವಂತರು ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಗುಣಾತ್ಮಕ ತರಬೇತಿ ಅವಶ್ಯವಿದೆ. ಈ ದೃಷ್ಠಿಯಿಂದ 2021ರಲ್ಲಿ ಕೋಚಿಂಗ್ ಸೆಂಟರ್ ಸ್ಥಾಪಿಸಲಾಗುವುದು ಎಂದ ಅವರು, ಕರೊನಾ ನಿಂತ ಮೇಲೆ ಹಿರಿಯ ನಾಗರಿಕರಿಗಾಗಿ ಹಗಲು ವಿಶ್ರಾಂತಿ ಕುಟೀರ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಟ್ರಸ್ಟ್‍ನ ಕಾರ್ಯದರ್ಶಿ ಪಾ,ಶ್ರೀ ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಚಿತ್ರಶೀರ್ಷಿಕೆ;(ಫೋಟೊ-9ಕೋಲಾರ1):ಮನ್ವಂತರ ಜನಸೇವಾ ಟ್ರಸ್ಟ್‍ನ ಸೇವಾ ಸಂಭ್ರಮ ಯೋಜನೆಯಡಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವೈದ್ಯಕೀಯ ಸೌಲಭ್ಯ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ಅನ್ನು ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿತರಿಸಿದರು.

ಶ್ರೀನಿವಾಸಪುರ: ಸಮುದಾಯ ಭವನಗಳು ಸಾಮಾಜಿಕ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕು:ಎಂ.ಶ್ರೀನಿವಾಸನ್‌

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಸಮುದಾಯ ಭವನಗಳು ಸಾಮಾಜಿಕ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕು. ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಹೇಳಿದರು.  ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರೂ.8 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸಲಾಗುವುದು. ತಾಲ್ಲೂಕಿನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಪ್ರಯತ್ನದ ಫಲವಾಗಿ ಪ್ರತಿ ಗ್ರಾಮದಲ್ಲೂ ಒಂದು ಅಂಬೇಡ್ಕರ್‌ ಭವನ ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.    ಕೆಸಿ ವ್ಯಾಲಿ ನೀರು ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ಹಂತ ಹಂತವಾಗಿ ತಾಲ್ಲೂಕಿನ ಆಯ್ದ ಕೆರೆಗಳನ್ನು ತುಂಬಿಸಲಾಗುವುದು. ಆ ನೀರನ್ನು ಜಿಲ್ಲೆಗೆ ಹರಿಸಲು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಭಗೀರಥ ಪ್ರಯತ್ನ ಮಾಡಿದ್ದಾರೆ. ಈಗಾಗಲೆ ನೀರು ತುಂಬಿರುವ ಕೆರೆಗಳ ಸುತ್ತ ಅಂತರ್ಜಲ ಅಭಿವೃದ್ಧಿಯಾಗಿದೆ. ಬತ್ತಿಹೋಗಿದ್ದ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿವೆ ಎಂದು ಹೇಳಿದರು.  ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಸಿ.ವೆಂಕಟೇಶಗೌಡ, ಪಿಡಿಒ ಶಂಕರಪ್ಪ, ಮುಖಂಡರಾದ ವೆಂಕಟರವಣ, ಆನಂದ್‌, ನಾಗರಾಜ್‌, ಗೋಪಾಲ್‌, ಎಂ.ಎಲ್‌.ಮುನಿವೆಂಕಟಪ್ಪ, ವೆಂಕಟಶಾಮಿ, ನಾಗರಾಜು, ನಾರಾಯಣಸ್ವಾಮಿ, ಸೊಣ್ಣಪ್ಪರೆಡ್ಡಿ, ರಹಮತ್‌ ಉಲ್ಲಾ, ನಿಸಾರ್‌, ಸನಾವುಲ್ಲಾ, ಎಂ.ವಿ.ವೆಂಕಟರಮಣ ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಕೈಜೋಡಿಸುವಂತೆ ಕೆ.ಹೆಚ್ ಮುನಿಯಪ್ಪ ರವರನ್ನು ಕೋರಿದ ಡಿ.ಕೆ.ಶಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಸೆ.9: ರಾಜ್ಯದಲ್ಲಿ ಶತಾಯಗತಾಯ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಗುರುವಾರ ಸಂಜೆ ಬೆಂಗಳೂರಿನ ಸಂಜಯ್‍ನಗರದ ಮಾಜಿ ಕೇಂದ್ರ ಸಚಿವ ಹಾಗೂ ಸಿ.ಡ್ಲ್ಯೂ.ಸಿ ಸದಸ್ಯರಾದ ಕೆ.ಹೆಚ್ ಮುನಿಯಪ್ಪ ರವರ ನಿವಾಸಕ್ಕೆ ತೆರಳಿ ಪಕ್ಷ ಸಂಘಟನೆ ಮತ್ತು ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಇದೀಗ ನಡೆಯಲಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರದ ವಿಧಾನಸಭಾ ಉಪಚುನಾವಣೆ ಹಾಗೂ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಕುರಿತು ವಿಸ್ಕøತ ಚರ್ಚೆ ನಡೆಯಿತು.
ಏಳು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು 2 ಬಾರಿ ಕೇಂದ್ರ ಸಚಿವರಾಗಿದ್ದ ಜೊತೆಗೆ ಇದೀಗ ಸಿ.ಡ್ಲ್ಯೂ.ಸಿ ಸದಸ್ಯರಾಗಿರುವ ನೀವು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಹಕಾರ ಬೇಕಿದೆ ಎಂದು ಶಿವಕುಮಾರ್ ಈ ವೇಳೆ ಕೆ.ಹೆಚ್ ಮುನಿಯಪ್ಪರವರನ್ನು ಕೋರಿದರು.
ಇದೇ ವೇಳೆ ರಾಜ್ಯ ರಾಜಕೀಯ ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿ ನೀವು ಕೇವಲ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತರಾಗದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಮಾಡಿ ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಂಪೂರ್ಣ ಸಹಕಾರ ನೀಡಿ ಎಂದು ಡಿ.ಕೆ.ಶಿ ಕೋರಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎಂಟು ಕೇತ್ರಗಳ ಪೈಕಿ ಆರು ಕಡೆ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ ಏಕೈಕ ಲೋಕಸಭಾ ಸದಸ್ಯರೆಂಬ ಹೆಗ್ಗಳಿಕೆ ನಿಮ್ಮದು. ಈ ಸಾಧನೆಯನ್ನು ರಾಜ್ಯದಲ್ಲಿ ಎಲ್ಲಿ ಆಗಿರುವುದಿಲ್ಲ. ಭವಿಷ್ಯದ ವಿಧಾನಸಭಾ ಚುನಾವಣೆಯಲ್ಲೂ ನಿಮ್ಮ ಜಿಲ್ಲೆಯಲ್ಲಿ ಮುಂದುವರೆಸಬೇಕು ಎಲ್ಲಾ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಬೇಕು. ಅದೇ ರೀತಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಪಡೆಯುವಲ್ಲಿ ಶ್ರಮಿಸಿ ಸಹಕರಿಸಬೇಕೆಂದು ಮತ್ತು ಈ ದಿಸೆಯಲ್ಲಿ ನಿಮ್ಮ ಸಹಕಾರ ಅತ್ಯಂತ ಪ್ರಮುಖವಾದದ್ದು ಎಂದು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ವೆಬ್ ಸೈಟ್ ವಿಳಾಸ kacdc.karnataka.gov.in ನ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 15 ರೊಳಾಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ . ಅರ್ಜಿಗಳನ್ನು ಅನ್ ಲೈನ್ ಮುಖಾಂತರ ಮಾತ್ರ ಸ್ವೀಕರಿಸ ಲಾಗುವುದು . ಮಹಿಳೆಯರಿಗೆ – ಶೇ .33 ರಷ್ಟು ಮತ್ತು ವಿಶೇಷಚೇತನರಿಗೆ – ಶೇ .5 ರಷ್ಟು ಮೀಸಲಾತಿ ಇರುತ್ತದೆ . ಅರ್ಜಿದಾರರ ಮೊಬೈಲ್ ಸಂಖ್ಯೆಯು ಆಧಾರ್‌ಗೆ ಜೋಡಣೆಯಾಗಿರಬೇಕು . ನಿಗಮದ ಯೋಜನೆಗಳಿಗೆ ಅವಶ್ಯವಿರುವ ಸಾಮಾನ್ಯ ಅರ್ಹತೆಗಳು : ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು . ನಮೂನೆ – ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು . ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು . ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು . ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಯೋಜನೆಯಲ್ಲಿ ಸಣ್ಣ ವ್ಯಾಪಾರ , ಸ್ವಯಂ ಉದ್ಯೋಗ ಇತ್ಯಾದಿ ವ್ಯಾಪಾರ ಚಟುವಟಿಕೆಗಳಿಗೆ ಸಾಲ ನೀಡಲಾಗುವುದು . ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆರೂ . 3,00,000 / -ಗಳ ಮಿತಿಯ ಒಳಗಿರಬೇಕು . ಅರ್ಜಿ ದಾರರು 18 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು . ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು : ಈ ಯೋಜನೆಗೆಯಲ್ಲಿ ಇಂಜಿನಿಯರಿಂಗ್ , ವೈದ್ಯಕೀಯ , ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಅ.ಇ.ಖಿ ಅಥವಾ ಓಇಇಖಿ ಮೂಲಕ ಆಯ್ಕೆಯಾಗಿ ಮತ್ತು ವೃತ್ತಿಪರ ಪಿ.ಎಚ್.ಡಿ. , ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವವರಿಗೆ ಅರಿವು ಶೈಕ್ಷಣಿಕ ಸಾಲ ನೀಡಲಾಗುವುದು . ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ .6,00,000 / -ಗಳ ಮಿತಿಯೊಳಗಿರಬೇಕು . 2 ) ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು . ಪ್ರಾಂಶುಪಾಲರಿಂದ ದೃಢೀಕರಿಸಿದ ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ ಮತ್ತು ನಿಗದಿತ ಶುಲ್ಕ ನಮೂನೆ ಪತ್ರ ಹೊಂದಿರಬೇಕು . ಹೆಚ್ಚಿನ ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ +91 9448451111, ಇ-ಮೇಲ್ support.kacdc @karnataka. gov.in ಹಾಗೂ ಯೋಜನೆಗಳ ಮಾರ್ಗಸೂಚಿಗಳು ಹಾಗೂ ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು kacdc.karnataka.gov.in ಇಲ್ಲಿ ತಿಳಿಯಬಹುದಾಗಿದೆ.