HOLY ROSARY CHURCH, KUNDAPUR – 450 th JUBILEE SOUVENIR 2021

ಸರ್ಕಾರ ಘೋಷಿಸಿದ ವಾಣಿಜ್ಯ ಬೆಳೆಗಳ ಪರಿಹಾರ ಹಣವನ್ನು ನೀಡುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಬುಡ್ಡಿ ದೀಪಗಳೊಂದಿಗೆ ಅಹೋರಾತ್ರಿ ಹೋರಾಟ ರೈತಸಂಘದ ತೀರ್ಮಾನ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಘೋಷಣೆ ಮಾಡಿದ್ದ ಹೂ ಹಾಗೂ ಮತ್ತಿತರರ ವಾಣಿಜ್ಯ ಬೆಳೆಗಳ ಪರಿಹಾರ ಹಣವನ್ನು ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ತೋಟಗಾರಿಕೆ ಇಲಾಖೆ ಮುಂದೆ ಬುಡ್ಡಿದೀಪಗಳೊಂದಿಗೆ ಅ.16ರ ಶುಕ್ರವಾರದಂದು ಅಹೋರಾತ್ರಿ ಹೋರಾಟ ನಡೆಸಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷಕೋಟಿ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿ ತಿಂಗಳಾನುಗಟ್ಟಲೇ ಕಳೆದರೂ ಇದುವರೆಗೂ ರಾಜ್ಯದ ಪಾಲು ನಯಾಪೈಸೆಯೂ ಬಂದಿಲ್ಲ. ರೈತಪರ ಸರ್ಕಾರ ಎಂದು ಕೊರೊನಾ ಸಂಕಷ್ಟದಲ್ಲಿ ಬೆಳೆ ಮಾಡಿದ್ದ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದಿದ್ದ ಹೂ, ಟೊಮೆಟೊ, ಕ್ಯಾಪ್ಸಿಕಂ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ತೋಟಗಳಲ್ಲೇ ನಾಶಪಡಿಸಲಾಗಿತ್ತು.
ಬೆಳೆಗಳು ಉತ್ತಮವಾಗಿದ್ದರೂ ರೈತರು ಕೋಟ್ಯಂತರರೂಪಾಯಿ ನಷ್ಟವನ್ನು ಅನುಭವಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಹೂ ಬೆಳೆ ಪ್ರತಿ ಹೆಕ್ಟೇರ್‍ಗೆ 25 ಸಾವಿರ, ಟೊಮೆಟೊ, ಕ್ಯಾಪ್ಸಿಕಂಗೆ 18 ಸಾವಿರ ಪರಿಹಾರ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ರೈತರಿಗೆ ಪರಿಹಾರದ ಹಣ ಮರೀಚಿಕೆಯಾಗಿ ಪತ್ರಿಕಾ ಮಾದ್ಯಮಕ್ಕೆ ಸರ್ಕಾರ ಘೋಷಣೆ ಸೀಮಿತವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ತೋಟಗಾರಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಷ್ಟಪಟ್ಟು ಬೆಳೆದಂತಹ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ಸರ್ಕಾರಕ್ಕೆ ನೀಡದ ಹಿನ್ನೆಲೆಯಲ್ಲಿ ರಾಜಕೀಯ ಬಲ ಇರುವ ರೈತರಿಗೆ ಕಾಂಗ್ರೆಸ್ ಗಿಡ, ನೀಲಗಿರಿ ಮತ್ತಿತರ ಬೆಳೆಯಿಲ್ಲದ ರೈತರಿಗೆ ಪರಿಹಾರ ಸಿಕ್ಕಿದೆ.
ಆದರೆ ಯಾವುದೇ ರಾಜಕೀಯ ಬಲವಿಲ್ಲದ ಅಮಾಯಕ ರೈತರು ಕಷ್ಟಪಟ್ಟು ಬೆಳೆದಿರುವ ಹೂ ಮತ್ತು ಕ್ಯಾಪ್ಸಿಕಂ, ಟೊಮೆಟೊ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ನಡೆಸದ ಅಧಿಕಾರಿಗಳ ವೈಫಲ್ಯದಿಂದ ಸರ್ಕಾರದಿಂದ ಬರುವ ಪರಿಹಾರ ಹಣ ತೆಗೆದುಕೊಳ್ಳಲು ಇಲಾಖೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ.
ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ರೈತರಿಗೆ ತಲುಪಿಸಬೇಕೆಂದು ಸರ್ಕಾರವನ್ನು ಒತ್ತಾಯಿ ಮೇಲ್ಕಂಡ ದಿನಾಂಕದಂದು ತೋಟಗಾರಿಕೆ ಇಲಾಖೆ ಮುಂದೆ ಬುಡ್ಡಿದೀಪಗಳೊಂದಿಗೆ ಅಹೋರಾತ್ರಿ ಧರಣಿ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್,ನಳಿನಿ.ವಿ ವರಮಹಾಲಕ್ಷಿ, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೆಜಿಎಫ್ ಅಧ್ಯಕ್ಷ ಶಿವು, ಮುಳಬಾಗಿಲು ಅಧ್ಯಕ್ಷ ಫಾರೂಖ್‍ಪಾಷ, ಮಾಲೂರು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ ಮತ್ತಿತರರು ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಕಾಲೇಜ್ ಐಕ್ಯಾಎಸಿ ಆಶ್ರಯದಲ್ಲಿ “ಪರಿಣಾಮಕಾರಿ ಸಂಶೋಧನಾ ಗ್ರಂಥಸೂಚಿ – ಸಾಂಸ್ಥಿಕವಾಗಿ ಮೌಲ್ಯಮಾಪನ : ರಾಷ್ಟ್ರೀಯ ವೆಬಿನಾರ್

JANANUDI.COM NETWORK

ಕುಂದಾಪುರ: ದಿನಾಂಕ 12ರಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯಾಎಸಿ ಆಶ್ರಯದಲ್ಲಿ “ಪರಿಣಾಮಕಾರಿ ಸಂಶೋಧನಾ ಗ್ರಂಥಸೂಚಿ – ಸಾಂಸ್ಥಿಕವಾಗಿ ಮೌಲ್ಯಮಾಪನ ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆಯ ಗ್ರಂಥ ಸೂಚಿಕಾರರಾದ ಶೀಬಾ ಪಕ್ಕನ್ ಮಾತನಾಡಿ ಸಂಶೋಧನಾ ಕ್ಷೇತ್ರವೆನ್ನುವುದು ಅತ್ಯಂತ ಪ್ರಮುಖವಾದ ಕ್ಷೇತ್ರವಾಗಿದೆ. ಇಲ್ಲಿ ಗ್ರಂಥಸೂಚಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಪರಿಹರಿಸಿಕೊಳ್ಳುವ ವಿಧಾನಗಳ ಕುರಿತು ಸೂಕ್ಷ್ಮವಾಗಿ ಮಾಹಿತಿ ನೀಡಿದರು.
ಅಲ್ಲದೇ ಸಂಶೋಧನಾ ಕ್ಷೇತ್ರದಲ್ಲಿ ಒ¨್ಬ ವ್ಯಕ್ತಿ ಸಂಶೋಧನೆ ಮಾಡಿದ ನಂತರ ಸಂಶೋಧಕನ ಸಂಶೋಧನಾ ಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ಅಲ್ಲಿ ಬರುವಂತಹ ಬರವಣಿಗೆ, ನಂತರದ ವಿವಿಧ ಜರ್ನಲ್‍ಗಳಲ್ಲಿ ಪ್ರಕಟಣೆಯ ವಿಧಾನ ಭಾóóಷಾ ಶೈಲಿ. ಮಾಹಿತಿ ಕಲೆ ಹಾಕುವಂತಹ ವಿಧಾನಗಳಕುರಿತು ಸವಿಸ್ತಾರವಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ ನಾರಾಯಣ ಶೆಟ್ಟಿ ಮಾತನಾಡಿದರು.
ಸುಮಾರು 81 ಅಂತರಾಷ್ಟ್ರೀಯ ಜನರು ಭಾಗವಹಿಸುವಿಕೆ ಸೇರಿದಂತೆ ಭಾರತದ 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 1600 ಜನರು ನೊಂದಾವಣೆ ಮಾಡಿ 1000 ಜನರು ಈ ವೆಬಿನಾರ್‍ನಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕರಾದ ವಿಕ್ರಮ್ ಅವರು ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು. ್ಲ ಐಕ್ಯಾಎಸಿಯ ಸಂಯೋಜಕರಾದ ಕಾಲೇಜಿನ ಐಟಿ ತಂಡದ ಸಂಯೋಜಕರಾದ ಡಾ.ನಟರಾಜ್.ಎಂ.ಬಿ ಸದಸ್ಯರಾದ ಮತ್ತು ಉಪನ್ಯಸಕರಾದ ಅಮರ್ ಸಿಕ್ವೆರಾ, ಶಂಕರನಾರಾಯಣ, ಗಣೇಶ್‍ಕುಮಾರ್ ಮತ್ತು ಪ್ರವೀಣ್ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಭಂಡಾರ್ಕಾರ್ಸ್ ಐಕ್ಯಾಎಸಿ ಆಶ್ರಯದಲ್ಲಿ “ ವೃತ್ತಿಯಾಗಿ ಉದ್ಯಮಶೀಲತೆ” ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್

JANANUDI.COM NETWORK

ಕುಂದಾಪುರ: ದಿನಾಂಕ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯಾಎಸಿ ಆಶ್ರಯದಲ್ಲಿ“ ವೃತ್ತಿಯಾಗಿ ಉದ್ಯಮಶೀಲತೆ”ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಗಳೂರಿನ ಎಂ.ಎಸ್.ಎಮ್.ಇ ಸಂಸ್ಥೆಯ ಶ್ರೀ ಸುಂದರ ಶೇರಿಗಾರ್ ಮಾತನಾಡಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ವಿಧಾನಗಳು, ಪ್ರಸ್ತುತದ ಪ್ರವೃತ್ತಿಗಳು ಅದಕ್ಕೆ ಪೂರಕವಾಗಿ ಇರುವಂತಹ ಸರಕಾರದ ಯೋಜನೆಗಳು ಮತ್ತು ಸವಲತ್ತುಗಳ ಕುರಿತು ತಿಳಿಸಿದರು.
ಅಲ್ಲದೇ ಉದ್ಯಮಶೀಲತೆಯನ್ನು ಕೈಗೊಳ್ಳುವಲ್ಲಿ ಉತ್ತೇಜನಕಾರಿ ಯೋಜನೆಗಳು ಮತ್ತು ಆಲೋಚನೆಗಳು ಮತ್ತು ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆ ಮತ್ತು ಅವನು ಸವಾಲುಗಳನ್ನು ಸುಲಭಾಗಿ ಎದುರಿಸುವಲ್ಲಿ ಹಲವು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಎನ್.ಪಿ ನಾರಾಯಣ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕರಾಧ ಉಪನ್ಯಾಸಕ ಪ್ರಶಾಂತ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಉಪನ್ಯಾಸಕ ಅಂಜನ್‍ಕುಮಾರ್ ವಂದಿಸಿದರು. ಈ ಸಂದರ್ಬದಲ್ಲಿ ವಿಭಾಗ ಮುಖ್ಯಸ್ಥೆ ಅರ್ಚನಾಅರವಿಂದ್ ಉಪಸ್ಥಿತರಿದ್ದರು.
ಕಾಲೇಜಿನ ಐಟಿ ತಂಡದ ಸದಸ್ಯರಾದ ಅಮರ್ ಸಿಕ್ವೆರಾ, ಶಂಕರನಾರಾಯಣ, ವಿಕ್ರಮ್ ಮತ್ತು ಗುರುದಾಸ ಪ್ರಭು ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಅರ್ಥಪೂರ್ಣವಾದ ಹುಟ್ಟುಹಬ್ಬದ ಆಚರಣೆಯೊಂದು ಬೀರಂಡಹಳ್ಳಿ ಕೋಲಾರ ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮದಲ್ಲಿ ಸರಳವಾಗಿ ನೆರವೇರಿತು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಅರ್ಥಪೂರ್ಣವಾದ ಹುಟ್ಟುಹಬ್ಬದ ಆಚರಣೆಯೊಂದು ಬೀರಂಡಹಳ್ಳಿ ಕೋಲಾರ ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮದಲ್ಲಿ ಸರಳವಾಗಿ ನೆರವೇರಿತು.
ಪ್ರಾಂಶುಪಾಲರು ಹಾಗೂ ರೋಟರಿಕೋಲಾರಜಿಲ್ಲಾಉಪಾಧ್ಯಕ್ಷರೂಆಗಿರುವ ಹೆಚ್.ರಾಮಚಂದ್ರಪ್ಪಅವರ ಹುಟ್ಟುಹಬ್ಬವನ್ನು, ವೃದ್ಧಾಶ್ರಮದ ಅಶಕ್ತ ಹಿರಿಯ ಜೀವಿಗಳಿಗೆ ಅಕ್ಕಿ, ದಿನಸಿ, ಹಣ್ಣುಹಂಪಲು ಮತ್ತು ಹಾಲು ವಿತರಣೆಜೊತೆಗೆ,ಕೆ.ಜಿ.ಎಫ್‍ನಲ್ಲಿಕೊರೋನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸುವುದರೊಂದಿಗೆ ಈ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿಆಚರಿಸಲಾಯಿತು.
ಈ ಸಂದರ್ಭದಲ್ಲಿರೋಟರಿಕೋಲಾರ ಸಂಸ್ಥೆಯ ವಲಯರಾಜ್ಯಪಾಲ ಟಿ.ಎಸ್.ರಾಮಚಂದ್ರೇಗೌಡ, ಸತ್ಯಜ್ಯೋತಿಆಶ್ರಮದ ಕಾರ್ಯದರ್ಶಿ ಸುಲೋಚನಾ, ಎಲ್‍ಐಸಿ ಅಧಿಕಾರಿ ಶೈಲಜರಾಮಚಂದ್ರಪ್ಪ, ಅನಿಕೇತನ ಸಾಂಸ್ಕøತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುನಿಕೃಷ್ಣಪ್ಪ, ಕೆ.ಜಿ.ಎಫ್ ನಗರಸಭೆಯ ವ್ಯವಸ್ಥಾಪಕಜಯರಾಮ್, ಪ್ರಾಂಶುಪಾಲ ರಾಜ್‍ಕುಮಾರ್, ರೋಟೋರಿಯನ್‍ರಾಮಚಂದ್ರೇಗೌಡ, ಡಾ.ರಾಜಮೋಹನ್‍ಗೌಡ, ಡಾ.ಯುಗಶ್ರೀ, ಕೊರೋನಾ ವಾರಿಯರ್‍ಗಳಾದ ಭಾರತಿ, ಸುನೀತ ಹಾಗೂ ದೀಪಿಕಾ, ಶೈಲಜ ಮತ್ತಿತರರು ಉಪಸ್ಥಿತರಿದ್ದರು.


ಅ. 13ಕ್ಕೆ ಪತ್ರಕರ್ತರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ,ಅ.12: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ 2019-20ನೇ ಸಾಲಿನ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನು ದಿನಾಂಕ: 13-10-2020 ರಂದು ಮಂಗಳವಾರ ಬೆಳಗ್ಗೆ 10-30 ಗಂಟೆಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಸಂಘದÀ ಅಧ್ಯಕ್ಷರಾದ ಕೆ.ಎಸ್.ಗಣೇಶ್ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.
ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್ ಆಗಮಿಸಲಿದ್ದಾರೆ.
ಈ ವಾರ್ಷಿಕ ಮಹಾಸಭೆಗೆ ಆಡಳಿತ ಮಂಡಳಿಯ ನಿರ್ದೇಶಕರು, ಸಂಘದ ಎಲ್ಲಾ ಷೇರುದಾರರು ಆಗಮಿಸಿ ಯಶಸ್ವಿಗೊಳಿಸಲು ಸಂಘದ ಕಾರ್ಯದರ್ಶಿ ಬಿ.ಎಸ್.ಗಂಗಾಧರ್ ಕೋರಿದ್ದಾರೆ.
ಸಂಘದ ಎಲ್ಲಾ ಷೇರುದಾರರಿಗೆ ಈಗಾಗಲೇ ಅಂಚೆ ಮೂಲಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದ್ದು, ಯಾರಿಗಾದರೂ ತಲುಪದೇ ಇದ್ದಲ್ಲಿ ಇದನ್ನೇ ವೈಯಕ್ತಿಕ ಆಹ್ವಾನವೆಂದು ಭಾವಿಸಿ ಸಭೆಗೆ ಆಗಮಿಸಲು ಕೋರಿದೆ.

ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣ ದಂಟನೆ ವಿಧಿಸಬೇಕು :ಶ್ರೀನಿವಾಸಪುರಲ್ಲಿ ವಾಲ್ಮೀಕಿ ಸಮುದಾಯದ ಬ್ರಹ್ಮಾನಂದ ಸ್ವಾಮೀಜಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣ ದಂಟನೆ ವಿಧಿಸಬೇಕು ಎಂದು ವಾಲ್ಮೀಕಿ ಸಮುದಾಯದ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
  ಪಟ್ಟಣದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳುವಳಿ ಹಾಗೂ ವಾಲ್ಮೀಕಿ ನವ ಸಮಾಜ ಟ್ರಸ್ಟ್‌ ಸದಸ್ಯರು ಹತ್ರಾಸ್‌ ಘಟನೆ ಖಂಡಿಸಿ ಪ್ರತಿಭಟನಾ ಪ್ರದರ್ಶನ ನಡೆಸಿದ ಬಳಿಕ ತಾಲ್ಲೂಕು ಕಚೇರಿ ಎದುರು ಮಾತನಾಡಿದರು.   ಸಂಘಟನೆ ಜಿಲ್ಲಾಧ್ಯಕ್ಷ ವಿ.ಹರೀಶ್‌ ನಾಯಕ್‌ ಮಾತನಾಡಿ, ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೊಡಿಕೊಳ್ಳಬೇಕು. ಮಹಿಳೆಯರಿಗೆ ಅಗತ್ಯವಾದ ರಕ್ಷಣೆ ಒದಗಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.  ಸಂಘಟನೆಯ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಮಾತನಾಡಿ, ಹತ್ರಾಸ್‌ನಲ್ಲಿ ಮನೀಷಾ ವಾಲ್ಮೀಕಿ ಎಂಬ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಆದರೆ ಸರ್ಕಾರ ಈ ಘಟನೆಯನ್ನು ತಿರುಚಿ, ನಿರ್ಲಕ್ಷಿಸುತ್ತಿರುವುದು ಖಂಡನೀಯ.  ಎಂದು ಹೇಳಿದರು.  ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಎಸ್‌.ಎಂ.ಶ್ರೀನಿವಾಸ್ ಅವರಿಗೆ ಅರ್ಪಿಸಲಾಯಿತು.  ಸಂಘಟನೆಯ ತಾಲ್ಲೂಕು ಅಧ್ಯಕ್ಷ ವೆಂಕಟರವಣ, ಮುಖಂಡರಾದ ವೇಣುಗೋಪಾಲ್‌, ಶಿವಾ ನಾಯಕ್‌, ನವೀನ್‌, ನಾರಾಯಣಸ್ವಾಮಿ ಇದ್ದರು. 

ಭಂಡಾರ್ಕಾರ್ಸ್‍ ಕಾಲೇಜ್: ಐಕ್ಯೂಎಸಿ ಮತ್ತು ವಾಣಿಜ್ಯ ವಿಬಾಗಗಳ ಸಂಯುಕ್ತಾಶ್ರಯದಲ್ಲಿ “ಕ್ಯಾಪ್ಟಿವೇಟಿಂಗ್‍ಆಫ್ ಶೇರ್ ಮಾರ್ಕೆಟ್” ವೆಬಿನಾರ್

JANANUDI.COM NETWORK

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್‍ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯ ವಿಬಾಗಗಳ ಸಂಯುಕ್ತಾಶ್ರಯದಲ್ಲಿ “ಕ್ಯಾಪ್ಟಿವೇಟಿಂಗ್‍ಆಫ್ ಶೇರ್ ಮಾರ್ಕೆಟ್” ( ಶೇರು ಮಾರು ಕಟ್ಟೆಯಕಡೆಗೆ ಸೆಳೆಯುವುದು) ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕುಶಾಲಪ್ಪ ಮಾತನಾಡಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯನ್ನು ಮಾಡುವಾಗ ಶೇರು ಮಾರುಕಟ್ಟೆಯ ಪೂರ್ಣ ಮಾಹಿತಿ ತಿಳಿದಿರಬೇಕು. ಬಂಡವಾಳದಾರನಿಗೆ ತಾನು ಯಾವಾಗ ಯಾವಕಾರಣಕ್ಕೆ ಮತ್ತು ಎಲ್ಲಿತನ್ನ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದೇನೆ ಎನ್ನುವ ಸಂಪೂರ್ಣ ಜ್ಞಾನವಿರಬೇಕು ಎಂದು ಹೇಳಿದರು.
ಬಂಡವಾಳ ಹೂಡಿಕೆಯ ಕುರಿತಂತೆ ಸಾಕಷ್ಟು ಬೇರೆ ಬೇರೆ ವಿಧಾನ ಮತ್ತು ಮಾರ್ಗಗಳ ಕುರಿತಂತೆ ಸಂಪೂರ್ಣ ಮಾಹಿತಿ ತಿಳಿದಿರಬೇಕು. ಅಲ್ಲದೇ ಶೇರು ಮಾರುಕಟ್ಟೆಯ ಲಾಭಾಂಶ, ಬಡ್ಡಿ ಕುರಿತು ಗೊತ್ತಿರಬೇಕು. ಮುಖ್ಯವಾಗಿ ಬಂಡವಾಳ ಹೂಡಿಕೆ ಮಾಡುವುದಾದರೆ ಅದಕ್ಕೆ ಸಂಬಂಧ ಪಟ್ಟ ಬೇರೆ ಬೇರೆ ತೆರನಾದ ತೆರಿಗೆ ವಿನಾಯಿತಿಯ ಕುರಿತು ತಿಳಿದಿರಬೇಕು. ಶೇರು ಮಾರುಕಟ್ಟೆಯು ತಂತ್ರಜ್ಞಾನವನ್ನು ಅಳವಡಿ ಸಿಕೊಂಡಿದೆ. ಈ ಕುರಿತು ಅಂದರೆ ಶೇರು ಮಾರುಕಟ್ಟೆಯ ಕುರಿತು ಇರುವ ಮತ್ತು ತಿಳಿಸುವ ವಿವಿಧ ಆ್ಯಪ್ ಮತ್ತು ವೆಬ್‍ಸೈಟ್‍ಗಳ ಕುರಿತು ತಿಳಿದುಕೊಂಡರೆ ಇಂತಹ ಸಂದರ್ಭದಲ್ಲಿ ನಿಮಗೆ ಇವು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮದ ಕುರಿತು ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಅರುಣ ಎ.ಎಸ್ ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕಿ ಓಂಶ್ರೀ ಶೆಟ್ಟಿಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮಮತಾ ವಂದಿಸಿದರು. ಕಾಲೇಜಿನ ಐಟಿ ತಂಡದ ಅಮರ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ, ಮತು ವಾಣಿಜ್ಯ ವಿಭಾಗದಗಣೇಶ್ ಕುಮಾರ್ ತಾಂತ್ರಿಕವಾಗಿ ಸಹಕರಿಸಿದರು.

ಐಪಿಎಲ್ ಬೆಟ್ಟಿಂಗ್ : ಕುಂದಾಪುರ ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿ 7 ಮಂದಿಯ ಬಂದನ, ಪಂದ್ಯ ರಾಜಸ್ಥಾನ ರಾಯಲ್ಸ್ – ಡೆಲ್ಲಿ ಕ್ಯಾಪಿಟಲ್ಸ್

JANANUDI.COM NETWORK

ದಿನಾಂಕ 09/10/2020 ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಐಪಿಎಲ್    ಕ್ರಿಕೆಟ್  ಪಂದ್ಯಾಟದ  ಸೋಲು ಗೆಲುವಿನ  ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ  ಎಂದು  ಖಚಿತ ಮಾಹಿತಿ  ಮೇರೆಗೆ  ಕುಂದಾಪುರ ಪೊಲೀಸ್‌ ಠಾಣೆಯ ಪಿ.ಎಸ್.ಐ. ಸದಾಶಿವ ಆರ್ ಗವರೋಜಿಯವರು ಠಾಣಾ ಸಿಬ್ಬಂದಿಯವರೊಂದಿಗೆ  ಕೊಟೇಶ್ವರ ಜ್ಯೂನಿಯರ್ ಕಾಲೇಜು ಸಮೀಪ  19:45 ಗಂಟೆಗೆ  ತಲುಪಿದಾಗ  ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ  ಸ್ಥಳದಲ್ಲಿ   7 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು  ಓರ್ವನು  ರಾಜಸ್ಥಾನ ರಾಯಲ್ಸ್ ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಎಂದು ಜೋರಾಗಿ ಹೇಳುತ್ತಾ ನೋಟ್ ಪುಸ್ತಕದಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿದ್ದು ಇತರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ರಾಜಸ್ಥಾನ ರಾಯಲ್ಸ್ ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300  ಎಂದು ಹೇಳುತ್ತಿರುವುದನ್ನು  ಗಮನಿಸಿ   ಇವರುಗಳು    ತಮ್ಮ  ಸ್ವಂತ  ಲಾಭಕ್ಕಾಗಿ ಕ್ರಿಕೆಟ್  ಪಂದ್ಯದ  ಮೇಲೆ  ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಾ ಸಾರ್ವಜನಿಕರಿಂದ ಹಣ  ಸಂಗ್ರಹಿಸುತ್ತಿರುವುದು  ಕಂಡುಬಂದಿರುವುದರಿಂದ  ಆರೋಪಿತರನ್ನು ವಶಕ್ಕೆ ಪಡೆದು ಬೆಟ್ಟಿಂಗ್ ನಡೆಸಲು ಉಪಯೋಗಿಸಿದ ನಗದು ರೂ 29,000/-,  ರೆಡ್ ಮಿ ಮೊಬೈಲ್ ಫೋನ್-1  ಹಾಗೂ ಒಂದು ನೋಟ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳುತಿಳಿಸಿವೆ.

 ಆರೋಪಿಗಳ ವಿವರ  ಹೀಗಿದೆ

1) ರಾಘವೇಂದ್ರ ಪ್ರಾಯ: 38 ವರ್ಷ, ತಂದೆ:  ಶ್ರೀನಿವಾಸ ಜೋಗಿ,  ವಾಸ: ಕೋಟೇಶ್ವರ ಜ್ಯೂನಿಯರ್ ಕಾಲೇಜು ಬಳಿ, ಕೋಟೇಶ್ವರ ಅಂಚೆ,  ಬೀಜಾಡಿ ಗ್ರಾಮ, 2). ಶ್ರುತಿರಾಜ್  ಪ್ರಾಯ 28 ವರ್ಷ, ತಂದೆ: ದಿ: ರಾಜು ಮೊಗವೀರ, ವಾಸ: ಕ್ಯಾಜಿ ಕೆರೆ ಹತ್ತಿರ, ಅರಸರಬೆಟ್ಟು ರಸ್ತೆ,  ಕೋಟೇಶ್ವರ  ಗ್ರಾಮ, ಕುಂದಾಪುರ ತಾಲೂಕು  3). ಸುಬಾಸ್ ಪ್ರಾಯ: 29 ವರ್ಷ, ತಂದೆ: ಗೋವಿಂದ ಮರಕಾಲ, ವಾಸ: ಕ್ಯಾಜಿ ಕೆರೆ ಹತ್ತಿರ, ಅರಸರಬೆಟ್ಟು ರಸ್ತೆ,  ಕೋಟೇಶ್ವರ  ಗ್ರಾಮ, ಕುಂದಾಪುರ ತಾಲೂಕು. 4). ಸರ್ಫರಾಜ್ (35), ತಂದೆ: ಅನ್ವರ್, ವಾಸ: ವಿಶ್ವಕರ್ಮಹಾಲ್ ಎದುರು, ಕೋಟೇಶ್ವರ  ಗ್ರಾಮ, ಕುಂದಾಪುರ ತಾಲೂಕು. 5). ಮುರಳಿ, ಪ್ರಾಯ: 30 ವರ್ಷ, ತಂದೆ:ರಾಮು ಎನ್  ವಾಸ: ಗಣೇಶ ಕೃಪ, ಹಳವಳ್ಳಿ ಮಸೀದಿಯ ಬಳಿ,  ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು. 6) ರತೀಶ್, ಪ್ರಾಯ: 35 ವರ್ಷ,  ತಂದೆ: ದಿ: ವಾಸುದೇವ ಆಚಾರ್, ವಾಸ: ವಾಸುಧೇವ ಸಧನ, ಕಾಮತ್ ಪೆಟ್ರೋಲ್ ಪಂಪ್ ಬಳಿ, ಬೀಚ್ ರಸ್ತೆ, ಕೋಟೇಶ್ವರ  ಗ್ರಾಮ, ಕುಂದಾಪುರ ತಾಲೂಕು. 7). ರಾಘವೇಂದ್ರ ಪ್ರಾಯ: 37 ವರ್ಷ, ತಂದೆ: ರಾಮಚಂದ್ರ ಮೊಗವೀರ,  ವಾಸ: ರಾಘವೇಂದ್ರ ನಿಲಯ, ಬ್ಯಾಲಿ ಬೊಬ್ಬರ್ಯ ದೇವಸ್ಥಾನದ ಬಳಿ, ಬೀಜಾಡಿ, ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನೂತನ ಅಧ್ಯಕ್ಷರಾಗಿ ರೋಬರ್ಟ್ ಮಿನೇಜಸ್ – ಕಾರ್ಯದರ್ಶಿಯಾಗಿ ಸಂತೋಷ್ ಕರ್ನೆಲಿಯೊ

JANANUDI.COM NETWORK

ಉಡುಪಿ ಧರ್ಮಪ್ರಾಂತ್ಯದ ಕೇಂದ್ರ ಕೆಥೊಲಿಕ್ ಸಭಾ  ಸಂಘಟನೇಯ  2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಕಳ ವಲಯದ ಕಣಜಾರು ಧರ್ಮಕೇಂದ್ರದ ರೊಬರ್ಟ್ ಮಿನೇಜಸ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   

 ಉಡುಪಿಯ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ರೋಬರ್ಟ್ ಮಿನೇಜಸ್ ಆಯ್ಕೆಯಾಗಿದ್ದಾರೆ.ಹಾಗೇ ಕಾರ್ಯದರ್ಶಿಯಾಗಿ ಹಿಂದಿನ ಸಾಲಿನ  ಮೌಂಟ್ ರೋಸರಿ ಕಲ್ಯಾಣಪುರ  ಧರ್ಮಕೇಂದ್ರದ ಸಂತೋಶ್ ಕರ್ನೆಲಿಯೋ ಪುನರಾಯ್ಕೆಯಾಗಿದ್ದಾರೆ

ನಿಕಟಪೂರ್ವ ಅಧ್ಯಕ್ಷ, ಆಲ್ವಿನ್ ಕ್ವಾಡ್ರಸ್ ಕೋಟ, ನಿಯೋಜಿತ ಅಧ್ಯಕ್ಷರಾಗಿ ಮೇರಿ ಡಿಸೋಜಾ, ಉದ್ಯಾವರ, ಉಪಾಧ್ಯಕ್ಷರಾಗಿ ರೊನಾಲ್ಡ್ ಆಲ್ಮೇಡಾ ಉದ್ಯಾವರ, ಸಹ ಕಾರ್ಯದರ್ಶಿಯಾಗಿ ಗ್ರೆಗರಿ ಪಿಕೆ ಡಿಸೋಜಾ ಶಂಕರಪುರ, ಕೋಶಾಧಿಕಾರಿಯಾಗಿ ಜೆರಾಲ್ಡ್ ರೊಡ್ರಿಗಸ್ ಶಿರ್ವಾ, ಸಹಾಯಕ ಕೋಶಾಧಿಕಾರಿಯಾಗಿ ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಆಂತರಿಕ ಲೆಕ್ಕಪರಿಶೋಧಕರಾಗಿ ಎಡ್ವರ್ಡ್ ಲಾರ್ಸನ್ ಡಿಸೋಜಾ ಪೇತ್ರಿ  ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

   ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಮತ್ತು ವಾಲ್ಟರ್ ಸಿರಿಲ್ ಪಿಂಟೊ ನಡೆಸಿಕೊಟ್ಟರು. ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ಡಾ ಜೆರಾಲ್ಡ್ ಪಿಂಟೊ, ಆಲ್ಫೋನ್ಸ್ ಡಿಕೊಸ್ತಾ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.