HOLY ROSARY CHURCH, KUNDAPUR – 450 th JUBILEE SOUVENIR 2021

ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಕೇಂದ್ರಗಳ ಸಾಮಾಜಿಕ ಸಂಪರ್ಕ ಸಾಧನ ಆಯೋಗಗಳ ಸಂಚಾಲಕರ ಸಭೆ

JANANUDI.COM NETWORK

ಉಡುಪಿ,ಅ.24: ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಕೇಂದ್ರಗಳ ಸಾಮಾಜಿಕ ಸಂಪರ್ಕ ಆಯೋಗಗಳ ಸಂಚಾಲಕರ  ಸಭೆ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ, ಉಡುಪಿಯ ಬಿಶಪರ ಸಭಾಭವನದಲ್ಲಿ ನಡೆಯಿತು. ೧೮ ಆಯೋಗಗಳ ಮಾರ್ಗದರ್ಶಕರಾಗಿರುವ ಬಿಶಪ್ ಸ್ವಾಮಿಯವರು ’ನಾವು ಕಳೆದ ಹಲವಾರು ವರ್ಷಗಳಿಂದ ಆಯೋಗಗಳನ್ನು ರಚಿಸಿದ್ದೆವೆ. ಆಯ್ಯಾಯ ಆಯೋಗಳ ಯೋಜನೆಯಂತ್ತೆ, ಹಲವಾರು ಯೋಜನೆಗಳು ತ್ರಪ್ತಿದಾಯಕವಾಗಿ ಯಶಸ್ಸನ್ನು ಪಡೆದಿವೆ, ಯಾವುದು ಪೂರ್ಣಗೊಂಡಿವೆ ಹಾಗೇ ಇವತ್ತಿನ ಪರಿಸ್ಥಿಯಲ್ಲಿ ಸೂಕ್ತವಲ್ಲದ ಯೋಜನೆಗಳನ್ನು ಬಿಟ್ಟು ಇವತ್ತಿನ ಅಗತ್ಯೆಗಳಿಗೆ ಪ್ರಾಶಸ್ಥ್ಯನೀಡಿ ಮುಂದಿನ ಐದು ವರ್ಷಗಳಿಗೆ ಯೋಜನೆಗಳನ್ನು ಹಮ್ಮಿಕೊಳ್ಳೋಣ, ಶಾಲ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾಧ್ಯಮದ ಬಗ್ಗೆ ಸೆಮಿನಾರಗಳನ್ನು ನೀವು ಆಯೋಜಿಸಬೇಕು  ಸಾಮಾಜಿಕ ಸಂಪರ್ಕ ಸಾಧನ ಸಂಚಾಲಕರ ಜವಾಬ್ದಾರಿಯನ್ನು ವಿವರಿಸಿದರು’

     ‘ಹಾಗೇ ರೇಡಿಯೊ ಟಿ.ವಿ.ಗಳಲ್ಲಿ ಬೈಬಲ್ ಗೆ ಸಂಬಂಧ್ದ ಪಟ್ಟ ಹಾಡು, ಗೀತೆ, ಪ್ರಹಸನಗಳನ್ನು ಪ್ರದರ್ಶಿಸುವ ಅವಕಾಶಗಳಿವೆ, ಇದನ್ನು ಚರ್ಚ್ ಘಟಕಗಳಿಂದ ಸಾಧರ ಪಡಿಸಬಹುದು, ಇದಕ್ಕಾಗಿ ನೀವು ಶ್ರಮಿಸಬೇಕು, ಇದಕ್ಕಾಗಿ ಬೇಕಾಗುವಂತ  ಸಹಕಾರ ಮಾರ್ಗದರ್ಶನ, ಸಾಮಾಜಿಕ ಸಂಪರ್ಕ ಸಾಧನ ಆಯೋಗ ನೀಡುತ್ತದೆ’ ಎಂದು ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.

      ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನ ಆಯೋಗದ ನಿರ್ದೇಶಕರಾದ ವಂ| ಧರ್ಮಗುರು ಚೇತನ್ ಲೋಬೊ, ಸ್ವಾಗತಿಸಿ ಕಳೆದ ವರ್ಷಗಳಲ್ಲಿ ಆದ ಕಾರ್ಯ ಯೋಜನೆಗಳ ವಿವರವನ್ನು ವಿವರಿಸಿ, ಮುಂದಿನ ವರ್ಷಗಳ ಯೋಜನೆಗಳನ್ನು ವಿವರಿಸಿ, ಮಾಧ್ಯಮಗಳಿಂದ ಆಗುವ ಅನಾಹುತಗಳ ಬಗ್ಗೆ ಚಿಂತೆ ಮಾಡಬೇಕಿದೆ.  ಇವತ್ತು ಜನರು ಹೆಚ್ಚಿನ ಸಮಯ ಮೊಬಾಯ್ಲನಲ್ಲಿ ವ್ಯಸ್ತರಾಗುತ್ತಾರೆ, ಈ ಪರಿಯಾಗಿ ನಾವು ಮೊಬಾಯ್ಲ್ ಗೀಳು ಹಚ್ಚಿಕೊಂಡ ನಾವು ಈ ವಿಷಯದಲ್ಲಿ ಹಿಂದಕ್ಕೆ ಸರಿಯದಿದ್ದರೆ, ನಮ್ಮ ಮಕ್ಕಳ ಮತ್ತು ದೇಶದ ಭವಿಸ್ಯ ಕರಾಳವಾಗುವುದು ಸತ್ಯ. ಫೇಕ್ ನ್ಯೂಸ್  ಹಂಚಿಕೊಳ್ಳುವುದು ಹಿರಿಯರೇ ಹೆಚ್ಚೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ,ಹಾಗಾಗಿ ಹಿರಿಯರಿಗೆ ಫೇಕ್ ನ್ಯೂಸ್ ಕುರಿತು ಅರಿತುಕೊಳ್ಳುವ  ಬಗ್ಗೆ ಸೆಮಿನಾರ್ ಮಾಡುವ ಅಗತ್ಯವಿದೆ’ ಎಂದು ತಿಳಿಸಿದರು.

 ಹಿರಿಯ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ’ಚರ್ಚಿನ ಸಾಮಾಜಿಕ ಸಂಪರ್ಕ ಸಾಧನ ಆಯೋಗದ ಸಂಚಾಲಕರಿಗೆ,  ಚರ್ಚ ಸುದ್ದಿಗಳನ್ನು ತಯಾರಿಸಿ ಬೇರೆ ಬೇರೆ ವೇಬ್ ಸಾಯ್ಟ್, ಪತ್ರಿಕೆಗಳಿಗೆ ಕಳುಹಿಸಿದರೆ ಪತ್ರಕರ್ತರಾಗುವ ಅವಕಾಶಗಳಿವೆ, ಈ ಅವಕಾಶವನ್ನು ಸಂಚಾಲಕರು ಸದುಪಯೋಗಗೊಳಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

   ಉಡುಪಿ ಧರ್ಮಪ್ರಾಂತ್ಯದ ಎಲ್ಲಾ 18 ಆಯೋಗಗಳ ಸಂಚಾಲಕರಾದ ವಂ|ಧರ್ಮಗುರು ಹೇರಾಲ್ಡ್ ಪೀರೆರಾ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಂ| ಧರ್ಮಗುರು ಚೇತನ್ ವಂದಿಸಿದರು.

ಶ್ರೀನಿವಾಸಪುರ: ಇಲ್ಲಿಗೆ ಸಮೀಪದ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಚಾವಣಿ ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆಸಿದೆ.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಇಲ್ಲಿಗೆ ಸಮೀಪದ ಪಾತಮುತ್ತಕಪಲ್ಲಿ ಗ್ರಾಮದಲ್ಲಿ  ಮಳೆಯಿಂದಾಗಿ ಮನೆಯ ಚಾವಣಿ ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆಸಿದೆ.
  ಹರೀಶ್‌ (9) ಮೃತ ಬಾಲಕ. ಮೃತನ ಅಣ್ಣ ಮಣಿಕಂಠ (13) ಹಾಗೂ ತಾಯಿ ಅನಂದಮ್ಮ (40) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.     ಭೇಟಿ: ಸಂಸದ ಎಸ್‌.ಮುನಿಶಾಮಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ರೂ.1ಲಕ್ಷದ ಚೆಕ್‌ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಳೆಯ ಮನೆಗಳು ದೊಡ್ಡ ಸಂಖ್ಯೆಯಲ್ಲಿವೆ. ಅಂಥ ಮನೆಗಳನ್ನು ಗುರುತಿಸಿ ಹೊಸ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿದೆ. ಈಗ ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.  ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌, ಮುಖಂಡರಾದ ಎಂ.ಲಕ್ಷ್ಮಣಗೌಡ, ಇ.ಶಿವಣ್ಣ, ಅಶೋಕ್‌ ರೆಡ್ಡಿ, ನಾಗರಾಜ್‌ ಇದ್ದರು  ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ರೂ.4 ಲಕ್ಷ ದ ಚೆಕ್‌ ನೀಡಿದರು. ಕುಟುಂಬಕ್ಕೆ ಶೀಘ್ರವಾಗಿ ಮನೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.  ಮೃತ ಬಾಲಕನ ಅಂತ್ಯ ಸಂಸ್ಕಾರ ನಡೆಸಲು ತಾಲ್ಲೂಕು ಕಚೇರಿ ವತಿಯಿಂದ ರೂ.5 ಸಾವರ ನೀಡಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರವಿಕುಮಾರ್‌, ಉಪ ವಿಭಾಗಾಧಿಕಾರಿ ವಿ.ಸೋಮಶೇಕರ್‌, ಉಪ ತಹಶೀಲ್ದಾರ್‌ ಚಂದ್ರಪ್ಪ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು
.

ಪಲ್ಸ್ ಪೋಲಿಯೊ ವಿರುದ್ಧ ಜಾಗೃತಿ ಅಭಿಯಾನ ಮಕ್ಕಳಿಗೆ ಪೋಲಿಯೊ ವಿರುದ್ಧ ರಕ್ಷಣೆ ಸಿಗಲಿ-ವಿಜಯಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಜನಿಸಿದ ಪ್ರತಿ ನವಜಾತ ಶಿಶುವನ್ನು ಪೆÇೀಲಿಯೋ ವಿರುದ್ಧ ರಕ್ಷಣೆಗೊಳಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದರು.
ನಗರದ ಗಾಂಧಿವನದಲ್ಲಿ ಪಲ್ಸ್ ಪೋಲಿಯೊ ಅರಿವು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಡ್ಡಾಯವಾಗಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅವರ ಆರೋಗ್ಯದ ಹಿತದೃಷ್ಟಿಯಿಂದ ಪೋಷಕರು ಮೊದಲ ಆದ್ಯತೆಯನ್ನು ನೀಡಬೇಕು ಎಂದರು.ಪೋಲಿಯೊ ರಹಿತವಾಗಿ ನಮ್ಮ ದೇಶವನ್ನು ಉಳಿಸಲು ವಿದೇಶಾಂಗ ಸಚಿವಾಲಯ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ. ಈ ನಿಟ್ಟಿನಲ್ಲಿ ಪೋಲಿಯೊ ಪೀಡಿತ ವ್ಯಾ„ಗ್ರಸ್ತೇ ರಾಷ್ಟ್ರಗಳಿಂದ ನಮ್ಮ ನೆಲದಲ್ಲಿ ಕಾಲಿಡುವ ಕನಿಷ್ಠ ಆರು ವಾರಗಳ ಮುಂಚಿತವಾಗಿ ಆದರೂ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದರು.
ದೇಶದಲ್ಲಿ ಪ್ರತಿ ವರ್ಷ ಜನಿಸುವ 2.7 ಕೋಟಿ ಶಿಶುಗಳಿಗೆ ಪೋಲಿಯೊ ಯೋದಿಂದ ರಕ್ಷಣೆ ನೀಡುವುದು ಅತ್ಯಂತ ದೊಡ್ಡ ಸವಾಲು ದೇಶದಲ್ಲಿ ಯಾವ ಪೋಲಿಯೊ ಪತ್ತೆಯಾಗಿಲ್ಲ ಎಂದರು.
ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ಜನರು ಬೇಜವಾಬ್ದಾರಿ ತನವನ್ನು ತೋರದೆ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೋವಿಡ್ 19 ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮುಂದಿನ ಮೂರು ತಿಂಗಳ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಎಚ್ಚರವಹಿಸುವುದಾಗಿ ಪ್ರಮಾಣ ಸ್ಪೀಕರಿಸಲಾಯಿತು.
ಈ ಸಂದರ್ಭದಲ್ಲಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಂದು ಭಾರತ ಪೋಲಿಯೋ ಮುಕ್ತವಾಗಿದೆ ಎಂಬುದು ಸಂತಸದ ವಿಷಯವಾದರೂ, ಅಕ್ಕಪಕ್ಕದ ದೇಶಗಳಲ್ಲಿ ಇನ್ನೂ ಜೀವಂತವಾಗಿರುವುದರಿಂದ ಲಸಿಕೆ ಅಭಿಯಾನ ಮತ್ತಷ್ಟು ವರ್ಷ ಮುಂದುವರೆಸುವ ಅಗತ್ಯತೆ ಇದೆ ಎಂದರು.
ಪೋಲಿಯೋ ನಿಯಂತ್ರಣದಲ್ಲಿ ಸರ್ಕಾರದ ಜತೆಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ, ರೋಟರಿ, ಸೇವಾದಳ, ರೆಡ್‍ಕ್ರಾಸ್ ಮತ್ತಿತರ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ರೋಟೇರಿಯನ್ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ರೋಟೇರಿಯನ್‍ಗಳಾದ ವಿ.ಪಿ.ಸೋಮಶೇಖರ್, ಗೋಪಾಲ್ ಗೌಡ, ಆರ್ ಶ್ರೀನಿವಾಸ್, ಮಹೇಶ್ ಬಾಬು, ಸಂಪತ್, ಶ್ರೀ ರಾಮ್, ಭುವನೇಶ್ವರಿ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್, ಕಾಂಗ್ರೆಸ್ ಮುಖಂಡ ಕೆ. ಜಯದೇವ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಆರ್.ಗೋಪಾಲ್, ಯಲ್ಲಪ್ಪ ಇತರರು ಇದ್ದರು.
ಕಾರ್ಯಕ್ರಮದ ನಂತರ ಜಾಗೃತಿ ಅಭಿಯಾನ ರೇಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರೇಲಿಯಲ್ಲಿ ಮಾಲೂರು ಭಾರತ ಸೇವಾದಳ ಬ್ಯಾಂಡ್‍ಸೆಟ್ ತಂಡದ ಮಕ್ಕಳು, ಬಸವಶ್ರೀ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸೇವಾದಳ ಮತ್ತು ರೋಟರಿ ಸಂಸ್ಥೆಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಾಗೂ ಸಾರ್ವಜನಿಕರಿಗೆ ಮುಖಗವಸು ಶೀಲ್ಡ್, ಮಾಸ್ಕ್, ಸ್ಯಾನಿಟೈಜರ್‍ಗಳನ್ನು ಎಸ್ಸಿಲಾರ್ ಆಪ್ಟಿಕಲ್ಸ್‍ವತಿಯಿಂದ ಹಂಚಲಾಯಿತು.

ನಾಡಿನ ಸಮಸ್ತ ಜನತೆಗೆ ಕೇಂದ್ರ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ.ಕೆ.ಹೆಚ್ ಮುನಿಯಪ್ಪ ರವರಿಂದ ಆಯುಧಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ.ಅ.24: ನಾಡಿನ ಸಮಸ್ತ ಜನತೆಗೆ ಕೇಂದ್ರ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ.ಕೆ.ಹೆಚ್ ಮುನಿಯಪ್ಪ ರವರಿಂದ ಆಯುಧಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು.
ನಾಡ ದೇವತೆ ಚಾಮುಂಡೇಶ್ವರಿ ದೇವಿಯು ಕೊರೋನಾ ಮಹಾಮಾರಿ ಮತ್ತು ಅತಿವೃಷ್ಟಿಯಿಂದ ರಾಜ್ಯಕ್ಕೆ ಮುಕ್ತಿ ನೀಡಿ ಜನತೆಗೆ ಸುಖ, ಶಾಂತಿ, ನೆಮ್ಮದಿ ಮತ್ತು ಸಂಮೃದ್ಧಿ ಜೀವನ ಕರುಣಿಸಲಿ ಎಂದು ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು : ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.
ಪಟ್ಟಣದ ವಿಐಪಿ ಸಂಸ್ಥೆಯ ಆವರಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಶುಕ್ರವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಅಭ್ಯರ್ತಿ ಚಿನಾದನಂದ ಎಂ ಗೌಡ, ಪದವೀಧರರ ಸೇವೆ ಮಾಡುವ ಉದ್ದೇಶದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಬಿಜೆಪಿ ಸರ್ಕಾರದ ಸಾಧನೆ ಅವರಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಮಾತನಾಡಿ, ಈ ಹಿಂದೆ ಈ ಕ್ಷೇತ್ರದಿಂದ ಅನುಕಂಪದ ಅಲೆಯಲ್ಲಿ ಗೆದ್ದಿದ್ದ ವ್ಯಕ್ತಿ ಹಬ್ಬ ಹರಿದಿನಗಳಿಗೆ ಮೆಸೇಜ್‌ ಮಾಡುವುದನ್ನು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಆಗ್ನೇಯ ಪದವೀಧರ ಕ್ಷೇತ್ರ ಹಿಂದಿನಿಂದಲೂ ಬಿಜೆಪಿ ಪ್ರಾಬಲ್ಯವಿದ್ದು, ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಆದರೆ ಹೆಚ್ಚಿನ ಮತಗಳಿಂದ ಗೆಲ್ಲಬೇಕು. ಅದಕ್ಕೆ ಮತದಾರರ ಸಹಕಾರ ಅಗತ್ಯ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ದಿಗೆ ಪೂರಕವಾಗಿವೆ. ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಮುಖಂಡರಾದ ಕೇಶವ ಪ್ರಸಾದ್‌, ಎಸ್‌.ವಿ.ಮುನಿವೆಂಕಟಪ್ಪ, ಕಾಂತರಾಜ್‌, ನಾಗರಾಜ್‌, ಅಶೋಕರೆಡ್ಡಿ, ವಿಐಪಿ ನಾಗರಾಜ್‌, ಇ.ಶಿವಣ್ಣ, ಎಂ.ಲಕ್ಷ್ಮಣಗೌಡ, ಜಯರಾಮರೆಡ್ಡಿ, ಶಿವಶಂಕರ್‌ ಕೇಶವ ಪ್ರಸಾದ್‌, ಕಾಂತರಾಜ್‌, ಸುರೇಶ್‌ ನಾರಾಯಣ್‌, ಕೃಷ್ಣಮೂರ್ತಿ, ಅಂಬರೀಶ್‌, ಶಿವು, ನಾರಾಯಣಸ್ವಾಮಿ ಇದ್ದರು.

ಶ್ರೀನಿವಾಸಪುರ ಯಯ್ಯಪ್ಪಲ್ಲಿ ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಗಂಗಮ್ಮ, ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಯಯ್ಯಪ್ಪಲ್ಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳಾದ ಗಂಗಮ್ಮ ಹಾಗೂ ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಿಲಾಗಿತ್ತು.
  ರಾಯಲ್ಪಾಡಿನ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.  ಸೇವಾಕರ್ತರಾದ ಬಿ.ಎನ್‌.ನಾರಾಯಣಸ್ವಾಮಿ, ಡಿಷ್‌ ಚಂದ್ರಶೇಖರ ರೆಡ್ಡಿ, ಕೃಷ್ಣಾರೆಡ್ಡಿ, ಮುನಿರೆಡ್ಡಿ, ಜಯರಾಮರೆಡ್ಡಿ, ಪ್ರಕಾಶ್‌, ಬಿ.ಸಿ.ನಾಗೇಶ್‌, ವರದರೆಡ್ಡಿ, ಕಿರಣ್‌, ಮುರಳಿ, ಸೋಮಶೇಖರರೆಡ್ಡಿ, ಮಂಜುನಾಥರೆಡ್ಡಿ ಇದ್ದರು.

ಶ್ರೀನಿವಾಸಪುರ: ಸಾರ್ವಜನಿಕರು ಅದಾಲತ್‌ ಪ್ರಯೋಜನ ಪಡೆದುಕೊಳ್ಳಬೇಕು : ಜಿಲ್ಲಾಧಿಕಾರಿ ಸತ್ಯಭಾಮ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಸಾರ್ವಜನಿಕರು  ಅದಾಲತ್‌ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.
  ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪಿಂಚಣಿ ಮತ್ತು ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ  ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಹೋಬಳಿ ಮಟ್ಟದಲ್ಲಿ ಅದಾಲತ್‌ ನಡೆಸಿ ಮಂಜೂರಾತಿ ಪತ್ರ ವಿತರಿಸುತ್ತಿರುವುದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.ಕೊರೊನಾ ಬಗ್ಗೆ ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಮಸ್ಯೆ ಗಂಭೀರವಾಗಿದೆ ಎಂಬುದನ್ನು ಅರಿಯಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಸಂಚರಿಸಬಾರದು. ಅಂತರ ಪಾಲನೆ ಕಡ್ಡಾಯ. ನಿಯಮಿತವಾಗಿ ಕೈ ತೊಳೆಯುವುದನ್ನು ಮರೆಯಬಾರದು ಎಂದು ಹೇಳಿದರು.  ವಿವಿಧ ಯೋಜನೆಗಳ 66 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಗಿದೆ. 266ಕ್ಕೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.   ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ಉಪ ತಹಶೀಲ್ದಾರ್‌ ಮಲ್ಲೇಶ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜ ರಾವ್‌, ಮುನಿವೆಂಕಟಪ್ಪ, ಹರಿ ಇದ್ದರು.

ಡಿಸಿಸಿ ಬ್ಯಾಂಕ್‌ ಬಡ್ಡಿ ರಹಿತಿ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್‌ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌  ಬಡ್ಡಿ ರಹಿತಿ ಸಾಲದ ಮೊತ್ತವನ್ನು ರೂ.50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‌ ಕುಮಾರ್ ಹೇಳಿದರು.  ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಸಾಲದ ಹಣದ ಚೆಕ್‌ ವಿತರಿಸಿ ಮಾತನಾಡಿ, ಜಾತಿ, ಮತ ಹಾಗೂ ಪಕ್ಷ ಭೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈವರಿಗೆ 40 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಸಾಲ ಪಡೆದುಕೊಂಡಿದ್ದಾರೆ. ಇನ್ನೂ 20 ಸಾವಿರ ಮಂದಿಗೆ ಸಾಲ ನೀಡಲಾಗುವುದು. ಸಾಲದ ಹಣ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.  ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಿದ್ದು, ಬಡ ಕುಟುಂಬಳು ಬೀದಿಗೆ ಬೀಳುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದನ್ನು ತಡೆಯಬೇಕು. ಇಲ್ಲವಾದರೆ ಸ್ತ್ರೀ ಶಕ್ತಿ ಸಂಘದ ಸದಸ್ಯರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್‌ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ ಮಾದರಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ ಫಲಾನುಭವಿಗಳು ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಠೇವಣಿ ಇಡಬೇಕು. ಗ್ರಾಹಕರಿಗೆ ಎಟಿಎಂ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ 48 ಸ್ತ್ರೀ ಶಕ್ತಿ ಸಂಘಗಳಿಗೆ ರೂ.2.30 ಕೋಟಿ ಸಾಲ ವಿತರಣೆ ಮಾಡಲಾಯಿತು.  ಮುಖಂಡರಾದ ದಿಂಬಾಲ ಅಶೋಕ್‌, ಅಕ್ಬರ್‌ ಷರೀಫ್‌, ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಬಿ.ಜಿ.ಸೈಯದ್‌ ಖಾದರ್‌, ಸರ್ದಾರ್‌, ನಾರಾಯಣಸ್ವಾಮಿ, ಲಕ್ಷ್ಮಣರೆಡ್ಡಿ, ಶ್ರೀರಾಮರೆಡ್ಡಿ, ಗುರಪ್ಪ, ನಂಜುಂಡಪ್ಪ, ಸರಸ್ವತಮ್ಮ, ಶಿವಾರೆಡ್ಡಿ ಇದ್ದರು.

ತುಳು ಚಿತ್ರ ನಟ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಬರ್ಬರ ಕೊಲೆ

JANANUDI.COM NETWORK

ತುಳು ಚಿತ್ರರಂಗದ ನಟನೊಬ್ಬನ ಕೊಲೆ ನಡೆದಿದೆ.‌ ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ್ದ ತುಳು ನಟ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಬಿ ಸಿ ರೋಡ್ ನ ಸಮೀಪದ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯವಿದ್ದ ಸುರೇಂದ್ರ ಬಂಟ್ವಾಳ ನಿನ್ನೆಯಿಂದಲೇ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಮನೆ ಬಳಿ ಬಂದ ಪೋಲಿಸರಿಗೆ ಸುರೇಂದ್ರ ಅವರ ಶವ ಪತ್ತೆಯಾಗಿದೆ. ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಎರಡು ವರ್ಷಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಸಾರ್ವಜನಿಕವಾಗಿ ತಲಾವಾರ್ ಝಳಪಿಸುವ ಮೂಲಕ ಸುರೇಂದ್ರ ಬಂಟ್ವಾಳ್ ಕುಖ್ಯಾತಿ ಪಡೆದಿದ್ದರು