HOLY ROSARY CHURCH, KUNDAPUR – 450 th JUBILEE SOUVENIR 2021

ಮೊಟ್ಟಮೊದಲ ಬಾರಿಗೆ ಹಳ್ಳಿಗಾಡು ಪ್ರದೇಶಗಳಲ್ಲಿ ಹೆಲಿಕ್ಯಾಪ್ಟರ್ ಜಾಲಿರೈಡ್ ಈಡಿಎಸ್ ಅವಿಯೇಶನ್ ವತಿಯಿಂದ ಆಯೋಜನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

 ಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಜಾಲಿರೈಡ್ ಈಡಿಎಸ್ ಅವಿಯೇಶನ್ ವತಿಯಿಂದ ಆಯೋಜಿಸಲಾಗಿದೆ
 ಗ್ರಾಮೀಣ ಪ್ರದೇಶ ದಲ್ಲಿ ಬಹಳಷ್ಟು ಜನರಿಗೆ ನಾವು ಆಕಾಶದಲ್ಲಿ ಸುತ್ತಾಡಬೇಕು ಅನ್ನೋ ಆಸೆ ಇರುತ್ತದೆ ಆದರೆ ಅವರ ಅನುಕೂಲಗಳಿಗೆ ತಕ್ಕಂತೆ ಅವರು ವಿಮಾನಯಾನವನ್ನು ಪ್ರಯಾಣಿಸುವದಾಗಲಿ ಹೆಲಿಕ್ಯಾಪ್ಟರ್ ಪ್ರಯಾಣ ಮಾಡಲು ಆಗಿರುವುದಿಲ್ಲ
 ಹಳ್ಳಿಗಾಡಿನ ಪ್ರದೇಶಗಳಲ್ಲಿನ ಆಕಾಶದಲ್ಲಿ ಹಾರಾಡುವ ಆಸೆಯನ್ನು ನೆರವೇರಿಸಲು  ಸಂಕೀರ್ತ್ ರವರು  ಮೂಲತಹ ಶ್ರೀನಿವಾಸಪುರ ತಾಲ್ಲೂಕಿನವರಾಗಿದ್ದು ಈಡಿಎಸ್ ಆವಿಯೇಶನ್  ಸಮಸ್ಯೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ನಮ್ಮ ತಾಲೂಕಿನ ಜನರ ಆಸೆಯನ್ನು ನೆರವೇರಿಸಬೇಕೆಂಬ ಉದ್ದೇಶದಿಂದ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು
  ದಿನಾಂಕ 31 ಅಕ್ಟೋಬರ್ 2020 ಹಾಗೂ ಹಾಗೂ 1 ನವಂಬರ್ 2020 ಶ್ರೀನಿವಾಸಪುರ ತಾಲ್ಲೂಕಿನ ಮ್ಯಾಂಗೋ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಹೆಲಿಕ್ಯಾಪ್ಟರ್ ಜಾಲಿ ರೈಡ್ ಆಯೋಜನೆ ಮಾಡಲಾಗಿದೆ
 ಈಗಾಗಲೇ ಜಾಲಿರೈಡ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದ್ದು ಆಸಕ್ತರು ಈ ಕೂಡಲೇ ಬುಕಿಂಗ್ ಮಾಡಿಕೊಳ್ಳಿ ಎಂದು ತಿಳಿಸಿದರುವರದಿ .

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಶೇ.81.47 ರಷ್ಟು ಮತದಾನ

ವರದಿ ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.81.47 ರಷ್ಟು ಮತದಾನವಾಗಿದೆ. ಬೆಳಿಗ್ಗೆ ನೀರಸವಾಗಿ ಪ್ರಾರಂಭವಾದ ಮತದಾನ, ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು. ಮತದಾರರು ಉದ್ದನೆಯ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.   ತಾಲ್ಲೂಕಿನಲ್ಲಿ ಒಟ್ಟು 4739 ಮತದಾರರಿದ್ದು, ಆ ಪೈಕಿ 3861 ಮತದಾರರು ಮತ ಚಲಾಯಿಸಿದ್ದಾರೆ. 3095 ಪುರುಷ ಮತದಾರರ ಪೈಕಿ 2547 ಹಾಗೂ 1644 ಮಹಿಳಾ ಮತದಾರರ ಪೈಕಿ 1314 ಮತದಾರರು ಮತದಾನ ಮಾಡಿದ್ದಾರೆ.      ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌, ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ಉಪ ತಹಶೀಲ್ದಾರ್ ಮಲ್ಲೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರೊನಾ ವೈರಾಣು ಹರಡದಂತೆ ಅಗತ್ಯ ಕ್ರಮ ಕೈಗೊಂಡಿದ್ದರು.

ಇಂಧನ ಘನತ್ಯಾಜ್ಯ ನಿರ್ವಹಣೆ, ಮಳೆನೀರು ಕೊಯ್ಲು ಇತರೆ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ.ಅ.28: ಮಹಾತ್ಮ ಗಾಂಧೀಜಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್‍ಜಿ ಕೋಟೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಳ್ಳಿ ಪುರ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಸ್ವಸಹಾಯ ಸಂಘದ ಸ್ತ್ರೀಶಕ್ತಿ ಪ್ರತಿನಿಧಿಗಳಿಗೆ, ಸದಸ್ಯರಿಗೆ ನವೀಕರಿಸಬಹುದಾದ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆನೀರು ಕೊಯ್ಲು ಇತರೆ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ಘನತ್ಯಾಜ್ಯ ವಿಲೇವಾರಿ ಚಟುವಟಿಕೆಗಳಿಗೆ ಸಹಕರಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಹೆಣ್ಣುಮಕ್ಕಳ ಒಕ್ಕೂಟಕ್ಕೆ ಸಮುದಾಯ ಭವನ, ಮಹಿಳೆಯರು ತಯಾರಿಸುವ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬ್ಯಾಗ್, ಟೈಲರಿಂಗ್, ಕೌಶಲ್ಯಗಳಲ್ಲಿ ತೊಡಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಎಲ್ಲಾ ಮನೆಗಳಿಗೂ ಕೂಡ ಮಳೆ ನೀರು ಕೊಯ್ಲು ಘಟಕವನ್ನು ನಿರ್ಮಿಸಿಕೊಂಡು ಸೋಲಾರ್ ವಿದ್ಯುತ್ ದೀಪ ಎಲ್ಲರೂ ಬಳಕೆ ಮಾಡಿಕೊಳ್ಳಬೇಕು. ನಮ್ಮ ಮನೆಗಳ ಹತ್ತಿರ ಇರುವ ಕಸವನ್ನು ಪ್ರತಿದಿನ 1 ಕಡೆ ಬಕೆಟ್‍ನಲ್ಲಿ ಹಾಕಿ ಮನೆಯ ಸುತ್ತ ಸ್ವಚ್ಛತೆಯಾಗಿ ಇಟ್ಟುಕೊಳ್ಳಬೇಕು. ಮನೆಯ ಮುಂದೆ ಬಚ್ಚಲುಗುಂಡಿ ಸೋಕ್ ಪಿಟ್ ಮಾಡಿಸಿಕೊಂಡು ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹರಳಕುಂಟೆ ಶಿಲ್ಪಾ ಪಿ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ಬಗ್ಗೆ ಮಾತನಾಡುತ್ತಾ, ಹಸಿಕಸ ಮತ್ತು ಒಣಕಸ ಇದನ್ನು ಮನೆಯಲ್ಲಿಯೇ ವಿಂಗಡಿಸಿ ಗ್ರಾಮ ಪಂಚಾಯಿತಿ ವತಿಯಿಂದ ಅದನ್ನು ವಿಲೇವಾರಿ ಮಾಡಿದ್ದಲ್ಲಿ ನಮ್ಮ ಹಳ್ಳಿಗಳು ಮನೆಗಳು ಸ್ವಚ್ಛವಾಗಿರುತ್ತವೆ. ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಅದು ಭೂಮಿಯಲ್ಲಿ ನೂರು ವರ್ಷಗಳಾದರೂ ಕರಗುವುದಿಲ್ಲ. ಆದ್ದರಿಂದ ನಮ್ಮ ನೀರು ಹಿಂಗುವುದಿಲ್ಲ ಪ್ಲಾಸ್ಟಿಕ್ ಸುಡುವುದರಿಂದ ಒಲೆ ಮತ್ತು ಬೆಂಕಿಯಲ್ಲಿ ಹಾಕುವುದರಿಂದ ಅದು ವಾಯುಮಾಲಿನ್ಯವಾಗುತ್ತದೆ. ಮನೆಯಿಂದ ನಾವುಗಳು ಅಂಗಡಿಗೆ ಹೋಗುವಾಗ ಬ್ಯಾಗ್ ತೆಗೆದುಕೊಂಡು ಹೋಗುವುದರಿಂದ ಈ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬಹುದು ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಮಿಣಿಜೇನಹಳ್ಳಿ ಆಶಾ ಮಾತನಾಡಿ, ಮಹಿಳೆಯರು ಬದಲಾವಣೆಯಾದರೆ ಸಮಾಜ ಬದಲಾವಣೆಯಾಗುತ್ತದೆ, ಸೋಲಾರ್ ವಿದ್ಯುತ್ ದೀಪ ಪ್ರತಿಯೊಂದು ಮನೆಗೂ ಬೇಕಾಗಿದ್ದು ನಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಈಗಿರುವ ವಿದ್ಯುತ್ತನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ 20%ಕರೆಂಟ್ ಬಿಲ್ಲನ್ನು ಕಡಿಮೆ ಮಾಡಬಹುದು, ಸೋಲಾರ್‍ನಿಂದ ವಾಹನ ಚಾಲನೆ ಮಾಡಬಹುದಾಗಿದೆ. ಪ್ರತಿ ಮನೆಯಲ್ಲೂ ಚಿಕ್ಕ ಚಿಕ್ಕ ಮಕ್ಕಳಿಗೂ ಓದುವ ಸಮಯದಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಸಿಕೊಂಡು ಓದಬಹುದು. ಪ್ರತಿ ಪಂಚಾಯಿತಿ ವತಿಯಿಂದ ಬೀದಿಗಳಲ್ಲಿ ಸೋಲಾರ್ ದೀಪವನ್ನು ಅಳವಡಿಸಿ ವಿದ್ಯುತ್ ಅನ್ನು ಉಳಿಸಬಹುದಾಗಿದೆ. ಸೋಲಾರ್ ಆಗಿ ಮಾರ್ಪಡಿಸಬಹುದು. ಪ್ರಕೃತಿದತ್ತವಾಗಿ ಸೂರ್ಯನ ಕಿರಣದಿಂದ ಸಿಗುವಂತಹ ಸೋಲರ್ ಇಂದು ಎಂದೆಂದಿಗೂ ನಿರಂತರವಾಗಿದೆ ಎಂದರು. ಗಾಳಿಯಿಂದಲೂ ವಿದ್ಯುತನ್ನು ತಯಾರಿಸಬಹುದು. ಅದಕ್ಕೆ ಪಿ.ಪಿ.ಟಿ ಮೂಲಕ ವಿಡಿಯೋ ತೋರಿಸಿ ಎಲ್ಲಾ ಮಹಿಳೆಯರಿಗೂ ಅರ್ಥ ಮಾಡಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಎಂ ನಾಗೇಂದ್ರಕುಮಾರ್ ಶೆಟ್ಟಿಕೊತ್ತನೂರು ಇವರು ಮಾತನಾಡಿ, ಮಳೆ ನೀರು ಕೊಯ್ಲು ಬಿದ್ದಂತಹ ಮಳೆ ನೀರನ್ನು ಶೇಖರಣೆ ಮಾಡಿ ಪುನರ್ ಬಳಕೆ ಮಾಡಿಕೊಂಡು ಅಂತರ್‍ಜಲವನ್ನು ವೃದ್ಧಿಸುವಂತೆ ಇಂಗುಗುಂಡಿಗಳನ್ನು ಮಾಡಿಕೊಳ್ಳುವಂತೆ ವ್ಯವಸಾಯ ಹನಿ ನೀರಾವರಿ ತುಂತುರು ನೀರಾವರಿ ಬಳಕೆ ಮಾಡಿಕೊಂಡು ನೀರಿನ ಮಿತವ್ಯಯ ಕಾಪಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಬೇಕೆಂದರು.
ಸಾಂಸ್ಕøತಿಕ ಕಾರ್ಯಕ್ರಮವನ್ನು ನೀರು ನೈರ್ಮಲ್ಯ ಪ್ಲಾಸ್ಟಿಕ್ ಬಳಕೆ ಸ್ವಚ್ಛತೆ ಆರೋಗ್ಯದ ವಿಷಯಗಳ ಬಗ್ಗೆ ಖ್ಯಾತ ಜಾನಪದ ಕಲಾವಿದರಾದ ಜನ್ನಘಟ್ಟ ಕೃಷ್ಣಮೂರ್ತಿ ಅವರು ಹಾಡುಗಳ ಮೂಲಕ ಎಲ್ಲರನ್ನು ರಂಜಿಸಿದರು.
ವೇದಿಕೆಯಲ್ಲಿ ಕುಂಬಾರಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸುಶೀಲಮ್ಮ, ಹೊನ್ನೇನಹಳ್ಳಿ, ಬೆತ್ತನಿ, ಕಳ್ಳಿಪುರ, ನಡುಪಳ್ಳಿ ಗ್ರಾಮದ ಸ್ವಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು. ತೇಜಸ್ವಿನಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ ರೇಣುಕಾ ಸ್ವಾಗತಿಸಿ, ಸಂಜೀವಿನಿ ಕೋಲಾರಮ್ಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕಷೆ ಹರಳುಕುಂಟೆ ಸುಜಾತ ನಿರೂಪಿಸಿ, ಕಳ್ಳಿಪುರ ಗ್ರಾಮದ ಅಂಬಿಕಾ ಮತ್ತು ಪಂಕಜಾ ಪ್ರಾರ್ಥಿಸಿ, ವೇದ ಮತ್ತು ಮೀನಾಕ್ಷಿ ವಂದಿಸಿದರು.

ಪರಿಷತ್ ಚುನಾವಣೆಯಲ್ಲಿ 4 ಕಡೆ ಬಿಜೆಪಿಗೆ ಭರ್ಜರಿ ಗೆಲುವು 2, 3ನೇ ಸ್ಥಾನಕ್ಕಾಗಿ ಕಾಂಗ್ರೆಸ್,ಜೆಡಿಎಸ್ ಪೈಪೋಟಿ- ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ವಿಧಾನಪರಿಷತ್‍ನ ಎಲ್ಲಾ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ, 2 ಮತ್ತು 3ನೇ ಸ್ಥಾನಕ್ಕಾಗಿ ಕಾಂಗ್ರೆಸ್,ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರದ ಜೂನಿಯರ್ ಕಾಲೇಜು ಮತಗಟ್ಟೆಗೆ ಆಗಮಿಸಿದ್ದ ಅವರು, ಮತಗಟ್ಟೆ ಮುಂಭಾಗ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಮತ್ತು ಪದವೀಧರರೊಂದಿಗೆ ಮಾತನಾಡಿದರು.
ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳಿಂದ ಯಾವುದೇ ತೊಂದರೆಯಿಲ್ಲ, ಅವಿಭಜಿತ ಜಿಲ್ಲೆಯ 9 ತಾಲ್ಲೂಕುಗಳಲ್ಲಿ ನಾವೇ ಮುಂದಿದ್ದೇವೆ ಹಾಗೆಯೇ ದಾವಣಗೆರೆ, ತುಮಕೂರು, ಚಿತ್ರದುರ್ಗದಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಮುಂದಿದ್ದು, ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾಲ್ಕು ಪರಿಷತ್ ಸ್ಥಾನಗಳಲ್ಲೂ ನಾವೇ ಗೆಲ್ಲುತ್ತೇವೆ, ಅನುಮಾನವೇ ಇಲ್ಲ, ಇದು ಬಿಜೆಪಿಯ ಚುನಾವಣೆಯಾಗಿದೆ, ಮೋದಿಪರ ಯುವಕರು,ಪದವೀಧರರು ನಿಂತಿದ್ದಾರೆ, ಸರ್ಕಾರಿ ನೌಕರರು, ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ತೋರಿದಷ್ಟು ಕಾಳಜಿ ಬೇರಾವುದೇ ಸರ್ಕಾರ ತೋರಿಲ್ಲ ಈ ಸತ್ಯ ಎಲ್ಲರಿಗೂ ಗೊತ್ತಿದೆ ಎಂದರು.
ಈಗ ಜೆಡಿಎಸ್,ಕಾಂಗ್ರೆಸ್,ಪಕ್ಷೇತರರಿಗೆ ಚುನಾವಣೆ ನಡೆಯುತ್ತಿದೆ ಅವರು 2 ಮತ್ತು 3ನೇ ಸ್ಥಾನಗಳಿಗಾಗಿ ಪೈಪೋಟಿ ನಡೆಸಿದ್ದಾರೆ, ಬಿಜೆಪಿ ಅಭ್ಯರ್ಥಿ ಎಷ್ಟೋ ಮುಂದಿದ್ದಾರೆ ಎಂದರು.
ಜಿ.ಟಿ.ಶ್ರೀನಿವಾಸ್ ಮತ್ತು ಲೇಪಾಕ್ಷರನ್ನು ಪಕ್ಷ ಉಚ್ಚಾಟಿಸಿದೆ, ಈಗ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ, ಹಿಂದಿನ ಎಲ್ಲಾ ಪರಿಷತ್ ಚುನಾವಣೆಗಳಲ್ಲೂ ಬಂಡಾಯವಾಗಿ ನಿಂತವರು ಎಷ್ಟು ಮತ ಪಡೆದರು ಎಂಬ ಇತಿಹಾಸದ ಅರಿವು ಇದೆ, ಬಿಜೆಪಿಗೆ ಯಾವುದೇ ತೊಂದರೆಯಾಗದು ಎಂದರು.
ವಿರೋಧಿ ಬಣದ
ಮತಯಾಚನೆ
ಮತಗಟ್ಟೆ ಮುಂಭಾಗ ಹಾಕಿದ್ದ ಪೆಂಡಾಲ್‍ನಲ್ಲಿ ಕುಳಿತ ವೈ.ಎ.ಎನ್ ಸ್ವತಃ ಮತದಾರರಿಗೆ ಕ್ರಮಸಂಖ್ಯೆ ಬರೆದುಕೊಟ್ಟು, ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮತಗಟ್ಟೆ ಮುಂಭಾಗ ಜೆಡಿಎಸ್, ಕಾಂಗ್ರೆಸ್, ಪಕ್ಷೇತರರು ಹಾಕಿದ್ದ ಪೆಂಡಾಲ್‍ಗೂ ಭೇಟಿ ನೀಡಿದ್ದ ವೈಎ.ನಾರಾಯಣಸ್ವಾಮಿ ಅವರನ್ನೂ ಬಿಜೆಪಿಗೆ ಮತ ನೀಡಿ ಎಂದು ಕೇಳುವ ಮೂಲಕ ಸ್ನೇಹ, ಸಾಮರಸ್ಯಕ್ಕೆ ಒತ್ತು ನೀಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ನಗರಸಭಾ ಸದಸ್ಯ ಮುರಳಿಗೌಡ, ಸತ್ಯನಾರಾಯಣರಾವ್, ಮಮತಾ, ವಿಜಯಕುಮಾರ್, ರಾಜೇಶ್‍ಸಿಂಗ್, ಬೆಗ್ಲಿ ಸಿರಾಜ್, ಜಾಮೀನುಲ್ಲಾಖಾನ್,ಚಲಪತಿ ಮತ್ತಿತರರು ಹಾಜರಿದ್ದರು
.

ಕುಂದಾಪುರ : ಫಿಶ್‍ಮಾರ್ಕೇಟ್ ವಿನೂತನ ಜಾಲತಾಣ ಲೋಕಾರ್ಪಣೆ

ವರದಿ : ಮಝರ್, ಕುಂದಾಪುರ

ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕ ರಂಗದಲ್ಲಿ ಕರಾವಳಿ ಜಿಲ್ಲೆಯಲ್ಲಿಯೇ ವಿನೂತನ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಯುವಕರ ಸಾಹಸ ನಿಜಕ್ಕೂ ಶ್ಲಾಘನೀಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಲತಾಣವನ್ನು ಸದ್ಭಳಕೆ ಮಾಡುವ ಮೂಲಕ ಸ್ವಯಂ ಉದ್ಯೋಗವನ್ನು ಸೃಷ್ಠಿ ಮಾಡಬಹುದೆಂಬ ಪ್ರಯೋಗಕ್ಕೆ ಇವರು ಮಾದರಿಯಾಗಿದ್ದಾರೆ. ಅವರ ಸಂಸ್ಥೆ ಯಶಸ್ಸಿನ ನೂತನ ಭಾಷೆಯನ್ನು ಬರೆಯಲಿ ಎಂದು ಕುಂದಾಪುರ ನಗರಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆಯವರು ಹೇಳಿದರು. ಅವರು ಕುಂದಾಪುರ ಬಿ.ಸಿ.ರಸ್ತೆಯ ದಿವ್ಯಶ್ರೀ ಕಾಂಪ್ಲೆಕ್ಸ್‍ನಲ್ಲಿ ಓಶಿಯನ್ ವಲ್ರ್ಡ್ ಎಂಟರ್‍ಪ್ರೈಸಸ್ ಇವರ ಆಶ್ರಯದಲ್ಲಿ ಲೋಕಾರ್ಪಣೆಗೊಳಿಸಲ್ಪಟ್ಟ ನೂತನ ಜಾಲತಾಣ ಫಿಶ್‍ಮಾರ್ಕೇಟ್ ಆ್ಯಪ್‍ನ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯನಂದ ಖಾರ್ವಿ ಮಾತನಾಡುತ್ತಾ ಸಮಯದ ಹೊಂದಾಣಿಕೆ ಇರದ ವೇಗದ ಬದುಕಿನಲ್ಲಿ ಮತ್ಸ್ಯ ಪ್ರೀಯರಿಗೆ ಅವರ ಆಯ್ಕೆಯ ಮತ್ಸ್ಯಗಳನ್ನು ಜಾಲತಾಣದ ಕೇವಲ ಆ್ಯಪ್‍ನ ಕರೆಯ ಮೂಲಕ ನೇರವಾಗಿ ಮನೆಗೆ ತಲುಪಿಸುವ ವಿನೂತನ ಕಾರ್ಯಕ್ಕೆ ಪಂಕ್ತಿ ಬರೆದಿರುವ ಯುವಕರ ಸಾಹಸ ಅವಿಸ್ಮರಣೀಯ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಸಮಾರಂಭಕ್ಕೆ ಭೇಟಿನೀಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಜನತಾ ಫಿಶ್‍ಮಿಲ್‍ನ ರೂವಾರಿ ಆನಂದ ಸಿ.ಕುಂದರ್ ಅವರು ಯುವಕರು ಜಾಲತಾಣದಲ್ಲಿ ಸಕ್ರಿಯಗೊಳಿಸಿದ ನೂತನ ಆ್ಯಪ್‍ನ ಬಗ್ಗೆ ಶ್ಲಾಘಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಶೇಖರ ಪೂಜಾರಿ ದಿವ್ಯಶ್ರೀ ಸಂಕೀರ್ಣದ ಮಾಲಿಕ ಶ್ರೀಧರ್ ಪೂಜಾರಿ , ರೋಜರಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಅಧ್ಯಕ್ಷ ಜಾನ್ಸನ್ ಡಿ ಆಲ್ಮೇಡಾ, ಉದ್ಯಮಿ ಆನಂದ ಎಲ್.ಖಾರ್ವಿ, ಕಂಡ್ಲೂರು ಜಾಮೀಯ ಮಸೀದಿ ಅಧ್ಯಕ್ಷ ದಸ್ತಗೀರ್ ಸಾಹೇಬ್ , ಸುಧಾಮುದ್ರ ಟೆಕ್ನಾಲಜಿಯ ಸುಧಾಕರ ಖಾರ್ವಿ, ಶ್ರೀದೇವಿ ಲೈಮ್‍ಶೆಲ್‍ನ ಮಾಲಿಕ ಹೂವಯ್ಯ ಖಾರ್ವಿ ಉಪಸ್ಥಿತರಿದ್ದು ಓಶಿಯನ್ ವಲ್ರ್ಡ್ ಎಂಟರ್‍ಪ್ರೈಸಸ್ ಸಂಸ್ಥೆಗೆ ಶುಭಹಾರೈಸಿದರು.
ಸಂಸ್ಥೆಯ ಅನಿಲ್ ಖಾರ್ವಿ, ಸಂಜಯ ಖಾರ್ವಿ, ಸುಧೀರ್ ಹೆಗ್ಡೆ ಉಪಸ್ಥಿತರಿದ್ದು ಅತಿಥಿಗಳನ್ನು ಬರಮಾಡಿಕೊಂಡರು. ಗಣೇಶ್ ಎಚ್.ಖಾರ್ವಿ ಸ್ವಾಗತಿಸಿದರು. ಪ್ರವೀಣ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಖಾರ್ವಿ ಕೃತಜ್ಞತೆ ಅರ್ಪಿಸಿದರು.

ಮಾಹಿತಿ ಹಕ್ಕು ಅಧಿ ನಿಯಮದಡಿ ಕೇಳಲಾಗಿದ್ದ ಮಾಹಿತಿ ನೀಡಲು ವಿಫಲ ತಾಲ್ಲೂಕು ಪಂಚಾಯಿತಿ ಪ್ರಥಮ ದರ್ಜೆ ಸಹಾಯಕ ಎಸ್. ಮಂಜುನಾಥ ವಿರುದ್ಧ ಎಫ್‍ಐಆರ್ ದಾಖಲು

ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಕೋಲಾರ.ಅ.27: ಮಾಹಿತಿ ಹಕ್ಕು ಅಧಿ ನಿಯಮದಡಿ ಕೇಳಲಾಗಿದ್ದ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ತಾಲ್ಲೂಕು ಪಂಚಾಯಿತಿ ಪ್ರಥಮ ದರ್ಜೆ ಸಹಾಯಕ ಎಸ್. ಮಂಜುನಾಥ ಅವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಸ್ಟಾಂಪ್ ಡ್ಯೂಟಿ ಅಡಿಯಲ್ಲಿ ಬಿಡುಗಡೆಯಾಗಿರುವ ಹಣ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಅಗತ್ಯ ಮಾಹಿತಿ ನೀಡುವಂತೆ ಕೋರಿ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಶಬ್ಬೀರ್ ಅಹಮ್ಮದ್ ಅವರು 2016ರಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಲೆಕ್ಕ ಶಾಖಾ ವಿಭಾಗದಲ್ಲಿ ಕರ್ತವ್ಯ ನಿವರ್ತಹಿಸುತ್ತಿರುವ ಶ್ರೀ ಎಸ.ಮಂಜುನಾಥರವರು ಸದರಿ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಕಛೇರಿಯಿಂದ ಹಾಗೂ ಕರ್ನಾಟಕ ಮಾಹಿತಿ ಆಯೋಗದಿಂದ ಸುಮಾರು ಬಾರಿ ಸೂಚಿಸಲಾಗಿದ್ದರೊ ಸಹ ಎಸ. ಮಂಜುನಾಥ ಮಾಹಿತಿಯನ್ನು ಒದಗಿಸಿರುವುದಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಮಾಹಿತಿ ಆಯೋಗ ಪ್ರಕರಣದಲ್ಲಿ ಕೋರಿರುವ ಮಾಹಿತಿ/ದಾಖಲೆ ಸಂಬಂಧ ಕರ್ನಾಟಕ ಪಬ್ಲಿಕ್ ರೆಕಾಡ್ ಆಕ್ಟ್ 2010 ಮತ್ತು ಕರ್ನಾಟಕ ಪಬ್ಲಿಕ್ ರೆಕಾರ್ಡ್ ರೂಲ್ಸ್ 2013 ರನ್ವಯ ಸದರಿ ಮಾಹಿತಿಗೆ ಸಂಬಂಧಿಸಿದ ಕಡತ ನಿರ್ವಹಿಸಿದ ಶ್ರೀ.ಎಸ್. ಮಂಜುನಾಥ, ಪ.ದ.ಸ ಲೆಕ್ಕ ಶಾಖೆ ಶ್ರೀನಿವಾಸಪುರ ರವರ ಮೇಲೆ ಆರಕ್ಷಕ ಠಾಣೆಗೆ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಸೂಚಿಸುತ್ತು.
ಮಾಹಿತಿ ಹಕ್ಕು ಆಯೋಗ, ಅಗತ್ಯ ಮಾಹಿತಿ ಒದಗಿಸಲು ವಿಫಲವಾಗಿರುವ ಎಸ್.ಮಂಜುನಾಥ ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಅವರಿಗೆ ಸೂಚಿಸಿತ್ತು. ಅದರಂತೆ ಎಸ್.ಆನಂದ್ ಶ್ರೀನಿವಾಸಪುರ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಎಸ್.ಮಂಜುನಾಥ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಬೈಂದೂರು: ಬಿಜೆಪಿ ಶಾಸಕರ ಸರ್ವಾಧಿಕಾರಿ ದೋರಣೆ ವಿರೋಧಿಸಿ 50ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್‌ಗೆ

JANANUDI.COM NETWORK

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿಯವ ಆದೇಶದಂತೆ ಗ್ರಾಮ ಪಂಚಾಯತ್ ಪಿಡಿಓ ಮುಂತಾದ ಅಧಿಕಾರಿಗಳು ರಾತ್ರೋರಾತ್ರಿ ಮಹಿಳಾ ಸ್ವಾವಲಂಬನಾ ಕೇಂದ್ರದ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಟೈಲರಿಂಗ್ ಮೆಷಿನ್, ಹೊಲಿಯಲು ತಂದಿಟ್ಟ ಹೊಸ ಬಟ್ಟೆಗಳು, ನಗದು ಮುಂತಾದುವುಗಳನ್ನು ಖಾಲಿ ಮಾಡಿಸಿ ಆ 80ಕ್ಕೂ ಹೆಚ್ಚು ಮಹಿಳೆಯರನ್ನು ಬೀದಿಪಾಲು ಮಾಡಿರುವುದನ್ನು ವಿರೋಧಿಸಿ ಶನಿವಾರ ಅಂಪಾರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಸರಣಿ ಧರಣಿ ಸತ್ಯಾಗ್ರಹ’ದಲ್ಲಿ ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿಯವರು ಬಿಜೆಪಿಯ ಹಲವಾರು ಯುವಕರು ಆ ಪಕ್ಷದ ಜನವಿರೋಧಿ ನೀತಿಯನ್ನು ವಿರೋಧಿಸಿ ಜನಪರವಾದ ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿರುವ ಕುರಿತು ಹೇಳಿಕೆ ನೀಡಿದ್ದರು

ಈಗ ಅದರ ಮುಂದುವರಿಕೆಯ ಭಾಗವಾಗಿ ಭಾನುವಾರ ಮಾಜಿ ಶಾಸಕರ ಕಟ್‌ಬೇಲ್ತೂರಿನ ನಿವಾಸದಲ್ಲಿ ಹೆಮ್ಮಾಡಿ ಹಾಗೂ ಕಟ್‌ಬೇಲ್ತೂರಿನ ಸುತ್ತಮುತ್ತಲಿನ ಬಿಜೆಪಿಯ ಸುಮಾರು 52ಕ್ಕೂ ಹೆಚ್ಚು ಸಕ್ರೀಯ ಯುವ ಕಾರ್ಯಕರ್ತರು ಗೋಪಾಲ ಪೂಜಾರಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಶಾಸಕ ಸುಕುಮಾರ ಶೆಟ್ಟರ ಸರ್ವಾಧಿಕಾರಿ ದೋರಣೆ ಮತ್ತು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತಕ್ಕೆ ಬೇಸತ್ತು ಇದೀಗ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ಒಂದೊಳ್ಳೆಯ ಬೆಳವಣಿಗೆಯಾಗಿದ್ದು, ಇದು ಪ್ರಜಾಪ್ರಭುತ್ವದ ನೈಜ ಆಶಯ ಕೂಡ ಹೌದು. ಇದೀಗ ಆರಂಭಗೊಂಡಿರುವ ಈ ಸೇರ್ಪಡೆ ಪ್ರಕ್ರೀಯೆಯೂ ಮುಂದಿನ ದಿನಗಳಲ್ಲಿ ಕರಾವಳಿಯಾದ್ಯಂತ ಪಸರಿಸಿಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಆ ಮೂಲಕ ಈ ದೇಶದಲ್ಲಿ 2014ಕ್ಕೂ ಹಿಂದಿನ ಅಚ್ಚೇದಿನ ಗಳು ಮತ್ತೆ ಪ್ರತಿಷ್ಠಾಪನೆಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದ ಹೆಮ್ಮಾಡಿ ಹಾಗೂ ಕಟ್‌ಬೇಲ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು ಐವತ್ತಕ್ಕೂ ಹೆಚ್ಚಿನ ಯುವಕರ ತಂಡ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಸಾಧನೆ, ಸರಳತನ, ಪ್ರಾಮಾಣಿಕತೆ ಮತ್ತು ಅನ್ಯಾಯಕ್ಕೊಳಗಾದ ಮಹಿಳೆಯರ ಬಗೆಗೆ ಅವರು ತಳೆದ ದಿಟ್ಟ ನಿಲುವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಂದೆರಡು ತಿಂಗಳಲ್ಲೆ ನಡೆಯಲಿರುವ ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾಮಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರುಗಳು ಪಣತೊಟ್ಟಿದ್ದು ಆ ಎರಡು ಪಂಚಾಯತ್ ಗಳಲ್ಲಿ ನಮ್ಮ ಪಕ್ಷದ ಗೆಲುವು ನೂರಕ್ಕೆ ನೂರು ಖಚಿತ’ ಎಂದು ಅವರು ಹೇಳಿದರು.

ಕಥಾಪಾಠ್ – ಕಥೆಚೆರ್ ಅಧ್ಯಯನಾಚೆಂ ಕಾಮಾಸಾಳ್ – कथापाठ – कथेचेर अध्ययनाचें कामासाळ

JANANUDI.COM NETWORK

ಕಥಾಪಾಠ್ – ಕಥೆಚೆರ್ ಅಧ್ಯಯನಾಚೆಂ ಕಾಮಾಸಾಳ್ಅಕ್ತೋಬರ್ ೨೫: ಕೊಂಕಣಿ ಕಥೆಂಚೆರ್ ಅಧ್ಯಯನ್ ಕರ್ಚ್ಯಾ ಇರಾದ್ಯಾನ್ ಆಶಾವಾದಿ ಪ್ರಕಾನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಣಿಂ ಡಿಜಿಟಲ್ ಮಾಧ್ಯಮಾಚೆರ್ ಮಾಂಡುನ್ ಹಾಡ್ಲೆಲ್ಯಾ ಪಾಂಚ್ ವೆಬಿನಾರಾಂಚೆಂ ಪಯ್ಲೆಂ ವೆಬಿನಾರ್ ಅಕ್ತೋಬರ್ ೨೫ ತಾರಿಕೆರ್ (ಆಯ್ತಾರಾ) ಸಾಂಜೆರ್ ೪:೩೦ ಥಾವ್ನ್ ೬:೦೦ ಪರ‍್ಯಾಂತ್ ಚಲ್ಲೆಂ.

ಸಾಹಿತ್ಯ್ ಅಕಾಡೆಮಿ ಪುರಸ್ಕೃತ್ ಗೋಕುಲ್‌ದಾಸ್ ಪ್ರಭು ತಶೆಂಚ್ ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸ್ ಹಾಣಿಂ ಮಟ್ವಿ ಕತೆಚ್ಯಾ ತಾಂತ್ರಿಕತೆಚೆರ್ ಉಪನ್ಯಾಸ್ ದಿಲೆಂ.ಸ್ಮಿತಾ ಶೆಣಯ್ ಹಿಣೆಂ ಉಪನ್ಯಾಸಕಾಂಚಿ ಮಟ್ವಿ ವಳೊಕ್ ಕರುನ್ ದಿತಚ್ ಸ್ವಾಗತ್ ಉಲವ್ಪಾಂತ್ ವಲ್ಲಿ ಕ್ವಾಡ್ರಸಾನ್ ೨೦೦೬ ಇಸ್ವೆಂತ್ ಕುವೆಯ್ಟಾಂತ್ ಸುರು ಕೆಲ್ಲ್ಯಾ ’ಕಥಾಪಾಠ್’ ವಿಶಿಂ ಉಲವ್ನ್, ಕೊಂಕಣಿ ಕಾಣಿಯಾಂಚೆಂ ಗುಣ್‌ಮಟ್ಟ್ ಚಡಂವ್ಚ್ಯಾ ದಿಶೆನ್ ಆಮಿ ಆಮ್ಚೆಂ ವಾಚಪ್ ಚಡಯ್ಜಯ್ ಆನಿ ಹೆರಾಂಚ್ಯೊ ಕಾಣಿಯೊ ವಾಚುಂಕ್ ಜಾಯ್ ಮ್ಹಣಾಲೊ. ಕಥಾಪಾಠಾಂತ್ ಸಹ-ಭಾಗಿತ್ವ್ ಜಾಲ್ಲ್ಯಾ ಸಮೇಸ್ತ್ ಕೊಲೆಜಿಚ್ಯಾ ಮುಖೆಸ್ತಾಂಕ್ ತಶೆಂಚ್ ವಿಧ್ಯಾರ್ಥಿಂಕ್ ಉಲ್ಲಾಸ್ ಪಾಟಯ್ಲೆ.

ಕಥಾಪಾಠಾಚೆಂ ಉಗ್ತಾವಣ್ ಕೆಲ್ಲ್ಯಾ ಮಾ|ಚೇತನ್ ಲೋಬೊನ್ ಸಮಾಜೆಚ್ಯಾ ಮೆಳ್ಯಾ ಚಿಂತ್ಪಾಕ್ ನಿತಳ್ ಕರ್ಚೆಂ ಕಾಮ್ ಸಾಹಿತ್ಯಾನ್ ಕರುಂಕ್ ಜಾಯ್ ಆನಿ ತ್ಯೇ ದಿಶೆನ್ ಮಟ್ವಿ ಕಾಣಿ ಏಕ್ ಬಳ್ವಂತ್ ಮಾಧ್ಯಮ್ ಮ್ಹಣಾಲೆ.

ಗೋಕುಲ್‌ದಾಸ್ ಪ್ರಭುನ್ ಮಟ್ವಿ ಕಥಾ ಕಶಿ ಆಸುಂಕ್ ಜಾಯ್, ಕಥೆಚೆಂ ಉಗಮ್, ಘಟಕಾಂ, ಮಾಂಡಾವಳ್, ಕಥಾಪಾತ್ರ್, ಸಂವಾದ್ ಅಶೆಂ ಸವಿಸ್ತಾರ್ ಮಾಹೆತ್ ದಿಲಿ. ವಲ್ಲಿ ಕ್ವಾಡ್ರಸಾನ್ ಪುರಾತನ್ ಕಾಳಾಥಾವ್ನ್ ಕಶೆಂ ಮವ್ಕಿಕ್ (ತೊಂಡ್ಪಾಶಿಂ), ಚಿತ್ರ್ ಮಾಧ್ಯಮಾಂನಿ (ಸ್ಕೆಚಾಂನಿ) ಮನಿಸ್ ಅಪ್ಲಿ ಅಭಿವ್ಯಕ್ತ್ ಕರೀತ್ ಆಯ್ಲಾ ಆನಿ ಜಾಗತಿಕ್ ಸಾಹಿತ್ಯಾಂತ್ ಕಥಾ; ಪ್ರತ್ಯೇಕ್ ಜಾವ್ನ್ ಮಟ್ವಿ ಕಥಾ ಕೆದ್ನಾಂ ಸುರು ಜಾಲ್ಲಿ, ಕೊಂಕಣಿಂತ್ ಕೆದ್ನಾಂ ಸುರು ಜಾಲ್ಲಿ ಮ್ಹಳ್ಳೆವಿಶಿಂ ಸುರ್ವಾತುನ್ ಮಟ್ವ್ಯಾ ಕತೆಚ್ಯಾ ಲಾಂಬಾಯ್, ಸುರ‍್ವಾತ್, ಸಂಪ್ಣಿ, ತಶೆಂಚ್ ಎಕಾ ಕಾಣಿಯೆಂತ್ ಆಸುಂಕ್ ಜಾಯ್ ಜಾಲ್ಲೆ ಗೂಣ್ ತಶೆಂಚ್ ಘಟಕಾಂ (Elements) ವಿಶಿಂ ಗುಂಡಾಯೆಚಿ ಮಾಹೆತ್ ದಿಲಿ.

ಉಜ್ವಾಡ್ ಪತ್ರಾಚ್ಯಾ ಸಂಪಾದಕ್ ಮಾ|ರೋಯ್ಸನ್ ಫೆರ್ನಾಂಡಿಸ್ ಹಾಣಿಂ ಧಿನ್ವಾಸ್ ಪಾಟಯ್ಲೆ. ಸ್ಮಿತಾ ಶೆಣಯ್ ಹಿಣೆಂ ಸೊಭಿತ್ ರಿತಿನ್ ಕಾರ‍್ಯೆಂ ಚಲಯ್ಲೆಂ. ಮಂಗ್ಳುರ್, ಮುಂಬಯ್, ಗೊಂಯ್‌ಚ್ಯಾ ಕೊಜೆಲಿಚ್ಯಾ ಸುಮಾರ್ ಶೆಂಭೊರ್ ಯುವಜಣಾಂನಿ ಹ್ಯಾ ಕಥಾಪಾಠಾಂತ್ ವಾಂಟೊ ಘೆತ್ಲೊ.

कथापाठ – कथेचेर अध्ययनाचें कामासाळ

अक्तोबर २५: कोंकणी कथेंचेर अध्ययन कर्च्या इराद्यान आशावादी प्रकान आनी उज्वाड पंद्राळें हाणीं डिजिटल माध्यमाचेर मांडून हाडलेल्या पांच वेबिनारांचें पयलें वेबिनार अक्तोबर २५ तारिकेर (आयतारा) सांजेर ४:३० थावन ६:०० पर‍्यांत चल्लें. साहित्य अकाडेमी पुरसकृत गोकूल‌दास प्रभू तशेंच पयणारी संपादक वल्ली क्वाड्रस हाणीं मटवी कतेच्या तांत्रिकतेचेर उपन्यास दिलें.

स्मिता शेणय हिणें उपन्यासकांची मटवी वळोक करून दितच स्वागत उलवपांत वल्ली क्वाड्रसान २००६ इस्वेंत कुवेयटांत सुरू केल्ल्या ’कथापाठ’ विशीं उलवन, कोंकणी काणियांचें गूण‌मट्ट चडंवच्या दिशेन आमी आमचें वाचप चडयजय आनी हेरांच्यो काणियो वाचुंक जाय म्हणालो. कथापाठांत सह-भागित्व जाल्ल्या समेसत कोलेजिच्या मुखेसतांक तशेंच विध्यार्थिंक उल्लास पाटयले.

कथापाठाचें उग्तावण केल्ल्या मा|चेतन लोबोन समाजेच्या मेळ्या चिंत्पाक नितळ कर्चें काम साहित्यान करुंक जाय आनी त्ये दिशेन मटवी काणी एक बळवंत माध्यम म्हणाले.

गोकूल‌दास प्रभून मटवी कथा कशी आसुंक जाय, कथेचें उगम, घटकां, मांडावळ, कथापात्र, संवाद अशें सविसतार माहेत दिली. वल्ली क्वाड्रसान पुरातन काळाथावन कशें मवकीक (तोंडपाशीं), चित्र माध्यमांनी (स्केचांनी) मनीस अपली अभिव्यक्त करीत आयला आनी जागतीक साहित्यांत कथा; प्रत्येक जावन मटवी कथा केदनां सुरू जाल्ली, कोंकणिंत केदनां सुरू जाल्ली म्हळ्ळेविशीं सुर्वातून मटव्या कतेच्या लांबाय, सूर‍्वात, संपणी, तशेंच एका काणियेंत आसुंक जाय जाल्ले गूण तशेंच घटकां (Elements) विशीं गुंडायेची माहेत दिली.

उज्वाड पत्राच्या संपादक मा|रोयसन फेर्नांडीस हाणीं धिन्वास पाटयले. स्मिता शेणय हिणें सोभीत रितीन कार‍्यें चलयलें.

मंगळूर, मुंबय, गोंय‌च्या कोजेलिच्या सुमार शेंभोर युवजणांनी ह्या कथापाठांत वांटो घेतलो.

–

ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಂಕಣಿ ಭಲಾಯ್ಕೆ ಕಾರ್ಡಾಂ ವಿಶಿಂ ಕುಂದಾಪುರ್ ವಾರಾಡೊ ಮಟ್ಟಾರ್ ಮಾಹೆತ್ ಕಾರ್ಯಗಾರ್

JANANUDI.COM NETWORK

ಕುಂದಾಪುರ್, ಅ.25; ಪಾಟ್ಲ್ಯಾಸುಮಾರ್ ಮ್ಹಹಿನ್ಯಾ ಥಾವ್ನ್ ಮಣಿಪಾಲ್ ಆಸ್ಪತ್ರೆಚಿಂ ಭಲಾಯ್ಕಿ ಕಾರ್ಡಾಂ ವಿಶಿಂ ಸಾರ್ಕೆಂ ಮಾಹೆತ್ ನಾತಲ್ಲಿ.ಕಾರಣ್ ಹ್ಯಾಪಾವ್ಟಿಂ (ಮಾಹೆ) ಮಣಿಪಾಲ್ ಆಸ್ಪತ್ರೆಚ್ಯಾನಿ ಕೊಂಕಣಿ ಭಲಾಯ್ಕೆ ಕಾರ್ಡಾಂಚೆಂ ಯೋಜನ್ ಸ್ಥಗಿತ್ ಕೆಲ್ಲೆಂ. ಕ್ರಿಸ್ತಾಂವಾನಿಂ  ಸಾಮಾನ್ಯ್ ಮಣಿಪಾಲ್ ಭಲಾಯ್ಕಿ ಕಾರ್ಡಾಂ ಕರ್‍ಯೆತ್ ಮ್ಹಣನ್ ತಾಣಿ ನಿರ್ಣಯ್ ಕೆಲ್ಲೊ.

    ಪುಣ್ ಕಥೊಲಿಕ್ ಸಭಾ ಕೇಂದ್ರಿಯಾ ಸಂಸ್ಥ್ಯಾನ್  ಕೊಂಕಣಿ ಭಲಾಯ್ಕೆ ಕಾರ್ಡಾಂ ಆಸಾ ಕರ್‍ಚ್ಯಾ ಪ್ರಯತ್ನ್ ಕರುನಂಚ್ ಆಸೊನ್ ಅಂತಿಮ್ ಜಾವ್ನ್ ಇತರ್ ಸಂಘ್ ಸಂಸ್ಥ್ಯಾ ಸಂಗಿಂ ಮೆಳೊನ್ ಮಣಿಪಾಲ್ ಆಸ್ಪತ್ರೆ (ಮಾಹೆ)ವ್ಯವಸ್ಥಾಪಕಲಾಗಿಂ ಒತ್ತಾಯ್ ಕೆಲ್ಯಾನ್   ಆತಾಂ ಮಾಹೆ ಸಂಸ್ಥೊ ಕೊಂಕಣಿ ಭಲಾಯ್ಕೆ ಕಾರ್ಡಾಂ ಕರ್ಚೊ ಅವ್ಕಾಸ್ ಕರ್ನ್ ದಿಲ್ಯಾ.  ಹೊ ವಿಷಯ್ ಅಕ್ಟೋಬರ್ 24 ವೇರ್ ಚಲಲ್ಯಾ ಕುಂದಾಪುರ್ ಸೈಂಟ್ ಮೇರಿಸ್ ಪಿ.ಯು.ಕಾಲೇಜ್ ಸಭಾ ಭವಾನಾಂತ್ ಚಲಲ್ಯಾ ಕುಂದಾಪುರ್ ವಾರಾಡೊ ಹುದ್ದೆದಾರಾಂಚ್ಯಾ ಜಮಾತೆಂತ್, ಕೇಂದ್ರಿಯಾ ಕಥೊಲಿಕ್ ಸಭಾ ಥಾವ್ನ್ ನಿಯುಕ್ತ್ ಕೆಲ್ಲೊ ಕೊಂಕಣಿ ಭಲಾಯ್ಕೆ ಕಾರ್ಡಾಂಚೊಂ ಕೋ ಒರ್ಡಿನೇಟರ್ ವಿವಿಯನ್ ಕರ್ನೇಲಿಯೊನ್ ಕಳಯ್ಲೆ.

     ಅತಾಂಚ್ಯಾ ಕಾರ್ಡಾಂಚ್ಯಾ ಪ್ರಕಾರ್ ಎಕಾ ಕಾರ್ಡಾಚೆ ಮೌಲ್ಯ್ ರೂ. 1500 ಜಾತಾತ್. ಹ್ಯಾ ಕಾರ್ಡಾಂತ್ 5 ಜಣ್ ಸಾಂದ್ಯಾನಿಂ ಆಸ್ಯೆತ್,  ಹೆಂ 5 ಜಣ್ ಎಕಾಚ್ ಕುಟ್ಮಾಚೆಂ ಜಾಯ್ಜೆ ಮ್ಹಣನ್ ನಾ. ಜಾತ್ ಧರ್ಮಾಚೊಯಿ ನಿರ್ಭಂದ್ ನಾ. ಹ್ಯಾ ಕಾರ್ಡಾಂತ್ ಕ್ರಿಸ್ತಾಂವ್ ಕುಟ್ಮಾ ಸಾಂಗಾತ್ ಹೇರ್ ಖಂಯ್ಚ್ಯಾಯಿ ಧರ್ಮಾಚ್ಯಾಂಕ್ ಸಾಂದೊ ಜಾವ್ನ್ ಘೆವ್ಯೆತ್. ಒಟ್ಟಾರೆ ಎಕ್ ಕಾರ್ಡಾಂತ್ 5 ಸಾಂದೆ ಭರ್ತಿಕರುಂಕ್ ಅವ್ಕಾಸ್ ಆಸಾ ಮ್ಹಣನ್ ಕಳಯ್ಲಾ.

    ಪುರ್ತೊ ವಿವರ್ ಹಾಂತುನ್ ಲಗತ್ ಕೆಲ್ಯಾ ಹ್ಯಾಂಡ್ ಬಿಲ್ಲಾರ್ ಆಸಾ. ಹಾಚ್ಯಾವಿಶ್ಯಾಂತ್ ಜಾಣಾ ಜಾಂವ್ಕ್ ಮನ್ ಆಸ್ಲ್ಯಾನಿಂ, ಆನಿ ಕಾರ್ಡಾಂ ಕರುಂಕ್ ಮನ್ ಆಸ್ಲ್ಯಾನಿಂ ಕಥೊಲಿಕ್ ಸಭೆಚೆ ಹುದ್ದೆದಾರಾಂಕ್ ಸಂಪರ್ಕ್ ಕರ್‍ಯೆತ್.

        ಹ್ಯಾ ಮಾಹೆತ್ ಜಮಾತೆಚೆ ಅಧ್ಯಕ್ಷ್ ಪಣ್ ಕುಂದಾಪುರ್ ವಾರಾಡೊ ಅಧ್ಯಕ್ಷಿಣ್ ಮೇಬಲ್ ಡಿಸೋಜಾನ್ ವಹಿಸುನ್ ಘೆತ್ಲೆಂ. ಕುಂದಾಪುರ್ ವಾರಾಡೊ ಕಥೊಲಿಕ್ ಸಭಾಚೆಂ ಅನೇಕ್ ಹುದ್ದೆದಾರ್ ಹ್ಯಾ ಜಮಾತೆಂತ್ ಹಾಜರ್ ಆಸಲ್ಲೆಂ. ಕುಂದಾಪುರ್ ವಾರಾಡೊ ಸಹ್ ಖಜನ್ದಾರ್ ಮೆಲ್ವಿನ್ ಡಿಮೆಲ್ಲೊನ್ ಸ್ವಾಗತ್ ಮಾಗ್ಲೊ. ಕಾರ್ಯದರ್ಶಿ ಮೆಲ್ವಿನ್ ಪುಟಾರ್ಡೊನ್ ಧನ್ವವಾದ್ ಪಾಠಯ್ಲೆಂ.

  ಹರ್ಯೆಕ್ ಕಥೊಲಿಕ್ ಸಭಾಚ್ಯಾ ಘಟಕ್(ಇಗರ್ಜ್) ಖಜನ್ದಾರ್ ಹ್ಯಾ  ಕೊಂಕಣಿ ಭಲಾಯ್ಕೆ ಕಾರ್ಡಾಂಚ್ಯಾ ಯೋಜನಾಚೆ ಸಂಚಾಲಕ್ ಜಾವ್ನಾಸಾತ್.