HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ತೆರಾಲಿಯ ಮಂಗಳವಾರದಂದು ಭಕ್ತರಿಂದ ಸ್ವಯಂ ಪ್ರೇರಣೆಯಿಂದ ಜಪಮಾಲೆ ಭಕ್ತಿ

JANANUDI.COM NETWORK


ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.
ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ ಬತ್ತಿಗಳನ್ನು ಉರಿಸಿ, ತಮ್ಮ ಹರಕೆಯನ್ನು ತೀರಿಸಿದರು,ಹಾಗೂ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಪ್ರಾರ್ಥಿಸಿದರು. ಪ್ರಾರ್ಥನೆಯಲ್ಲಿ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ ಹಾಜರಿದ್ದರು. ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಭಕ್ತಾಧಿಗಳನ್ನು ಆಶಿರ್ವಧಿಸಿದರು.

ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಮೋಗ ಕೊಡುಗೆ ನೀಡಿದ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಗೆ 150 ರ ಸಂಭ್ರಮ

JANANUDI.COM NETWORK


ಕುಂದಾಪುರ,ನ.24: ಭಾರತದಲ್ಲಿ ಜನಸಾಮನ್ಯರಿಗೆ ಶಿಕ್ಷಣ ದೊರಕುವ ಕಷ್ಟ ಕಾಲದಲ್ಲಿ ಅದರಲ್ಲೂ ಹೆಣ್ಣು ಹುಡುಗಿಯರಿಗೆ ಶಿಕ್ಷಣವೇ ಮರಿಚೀಕೆಯಾದ ಕಾಲದಲ್ಲಿ ಸುಮಾರು 150 ವರ್ಷಗಳ ಹಿಂದೆ ಫ್ರಾನ್ಸನಲ್ಲಿ ಆರಂಭಿಸಲ್ಪಟ್ಟ ಕಾರ್ಮೆಲ್ ಭಗಿನಿಯರ ಸಂಸ್ಥೆ, ಅದರ ಸ್ಥಾಪಕಿ ಮದರ್ ವೆರೊನಿಕಾ, ಮಂಗಳೂರು ಬಿಶಪ್ ಮಾರಿ ಎಫ್ರೆಮ್ ಇವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಮೆಲ್ ವಿಧ್ಯಾ ಸಂಸ್ಥೆ ಆರಂಭಿಸಿತು.


“ಈ ಕಾರ್ಮೆಲ್ ಸಂಸ್ಠೆಯು ಅನೇಕ ಶಾಖೆಗಳು ಆರಂಭಿಸಿ ಇಂದು ಭಾರತದತ್ಯಾಂತ ಶಿಕ್ಷಣ ನೀಡುತ್ತಾ ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಸೇವೆ ನೀಡುತಿವೆ. ಹಾಗೆಯೇ ಕುಂದಾಪುರದಲ್ಲಿಯೂ ಕಾರ್ಮೆಲ್ ಸಂಸ್ಥೆಯು, ಕುಂದಾಪುರ ಚರ್ಚಿನ ಅಂದಿನ ಪ್ರಧಾನ ಧರ್ಮಗುರು ವಂ|ಡೇನಿಸ್ ಜೆ.ಡಿಸೋಜಾ ಇವರ ಆಶಯದೊಂದಿಗೆ 1930 ರಲ್ಲಿ ಕಾರ್ಮೆಲ್ ಸಂಸ್ಥೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರಾಥಮಿಕ ಶಾಲೆ ಆರಂಭಿಸಿತು. 1931 ರಲ್ಲಿ ಅನಾಥಶ್ರಮ ಆರಂಭಿಸಿ, 1947 ಪ್ರೌಡ ಶಾಲೆ ಆರಂಭಿಸಿತು. ಇಂದಿಗೂ ಈ ಶಿಕ್ಷಣ ಸಂಸ್ಥೆಗಳು ಗುಣ ಮಟ್ಟದ ಶಿಕ್ಷಣ ನೀಡಿದ ಖ್ಯಾತಿಯನ್ನು ಹೊಂದಿವೆ.“


ಕಾರ್ಮೆಲ್ ಸಂಸ್ಥೆಯ 150 ವರ್ಷಗಳ ಸಂಭ್ರಮದ ಸವಿ ನೆನಪಿಗಾಗಿ ಕುಂದಾಪುರ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಮದರ್ ವೆರೊನಿಕಾರವರಿಗೆ ಕ್ರತ್ಞತೆ ಸಲ್ಲಿಸಲು ನ.24 ರಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರೌಢ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆಶಾ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮದರ್ ವೆರೊನಿಕಾರ ಜೀವನ ಚರಿತ್ರೆಯನ್ನು ವಿವರಿಸಿದರು. ಪ್ರಾಥಮಿಕ ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಅಧ್ಯಕ್ಷೆತೆ ವಹಿಸಿ ಸ್ವಾಗತಿಸಿದರು. ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ, ನಿವ್ರತ್ತ ಶಿಕ್ಷಕಿ ಸಿಸ್ಟರ್ ಕೊರೊನಾ, ಪಾಲಕರ ಪರವಾಗಿ ರಶ್ಮಿ ಪಾಯ್ಸ್ ಮತ್ತಿತರರು ವೇದಿಕೆಯಲ್ಲಿದ್ದರು. ಮಕ್ಕಳಿಂದ ಮದರ್ ವೆರೊನಿಕಾರ ಜೀವನ ಚರಿತ್ರೆಯ ಕಿರು ನಾಟಕ, ಮದರ್ ವೆರೊನಿಕಾರ ಬಗ್ಗೆ ಕ್ವೀಜ್ ಮತ್ತು ನ್ರತ್ಯ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೆಲವೇ ಮಕ್ಕಳು ಮತ್ತು ಹೆತ್ತವರು ಹಾಗೆ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಸ್ಟರ್ ನವಿತಾ ನಡೆಸಿಕೊಟ್ಟರು. ಶಿಕ್ಷಕಿ ವನಿತಾ ಬರೆಟ್ಟೊ ಧನ್ಯವಾದ ಅರ್ಪಿಸಿದರು.

ಕಥಾಪಾಠ್ -3: ಕೊಂಕಣಿಂತಲ್ಯೊ ಮುಂಬಯ್‌ಚ್ಯೊ ಕಥಾ

JANANUDI.COM NETWORK

ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಣಿಂ ಡಿಜಿಟಲ್ ಮಾಧ್ಯಮಾಚೆರ್ ಮಾಂಡುನ್ ಹಾಡ್‌ಲ್ಲ್ಯಾ ರಾಶ್ಟ್ರೀಯ್ ಮಟ್ಟಾಚ್ಯಾ ಕಥಾ-ಅಧ್ಯಯನ್ ಶಿಂಕಳೆಚಿ ತಿಸ್ರಿ ಶಿಂಕಳ್ (ವೆಬಿನಾರ್) ನವೆಂಬ್ರ್ 22 ತಾರಿಕೆಚ್ಯಾ ಆಯ್ತಾರಾ ಸಾಂಜೆರ್ 4:30 ಥಾವ್ನ್ 6:00 ಪರ‍್ಯಾಂತ್; ಕೊಂಕಣಿಂತ್ಲ್ಯೊ ಮುಂಬಯ್ ಕಥಾ ತಶೆಂಚ್ ’ಸಾಂಕವ್’ ಕಥಾಸಂಗ್ರಹಾಚೆರ್ ಸಮೀಕ್ಷಾ ಚಲ್ಲಿ. ಉಜ್ವಾಡ್ ಪತ್ರಾಚ್ಯಾ ಸಂಪಾದಕ್ ಮಾ|ಬಾ|ರೋಯ್ಸನ್ ಫೆರ್ನಾಂಡಿಸಾನ್ ಯೆವ್ಕಾರ್ ಉಲವ್ಪ್ ಕರುನ್ ಕಾರ್ಯಾಚೆಂ ಸುಂಕಾಣ್ ಘೆತ್‌ಲ್ಲ್ಯಾ ದೊ|ಪೂರ್ಣಾನಂದ್ ಚ್ಯಾರಿ ಹಾಂಚಿ ಮಟ್ವಿ ವಳೊಕ್ ಕರುನ್ ದಿತಚ್ ಮಾ|ಬಾ|ಜೇಸನ್ ಪಿಂಟೊ ಉದ್ಯಾವರ್ ಹಾಣಿಂ ಮುಂಬಯ್ ಜಿವಿತ್ ಆನಿ ಕಶೆಂ ಮುಂಬಯ್ ಜಿವಿತಾನ್ ಕೊಂಕಣಿ ಭಾಸ್, ಲೋಕ್, ಸಂಸ್ಕೃತಿ ತಶೆಂಚ್ ಫುಡಾರಾಚೆರ್ ಘಾಲ್ಲ್ಯಾ ಪ್ರಭಾವಾಚೆರ್ ಉಲವ್ನ್ ಮುಂಬಯ್ ಜಿವಿತಾಚ್ಯಾ ಎಕೆಕಾ ಸಂಗ್ತೆಚೆರ್ ವಾಚುಂಕ್ ಮೆಳ್ಚ್ಯಾ ತಶೆಂಚ್ ವಾಚುಂಕ್ ಮೆಳುಂಕ್ ಜಾಯ್ ಜಾಲ್ಲ್ಯಾ ಸಂಗ್ತೆಂಚೆರ್ ಉಪನ್ಯಾಸ್ ದಿಲೆಂ. 
ಗೊಂಯ್ಚ್ಯಾ ಕೊಲೆಜಿಂತ್ ಪ್ರಾಧ್ಯಾಪಕ್ ಜಾವ್ನ್ ವಾವ್ರ್ ಕರ್ಪಿ ಬಾಯ್ ಯೋಗಿತಾ ವೆರ್ಣೇಕರ್ ಹಿಣೆಂ 2020 ವರ್ಸಾಂತ್ ಕೊಂಕಣ್‌ಗಾರ್ ಪ್ರಕಾಶನಾನ್ ಪ್ರಕಾಶಿತ್ ಕೆಲ್ಲ್ಯಾ ವಲ್ಲಿ ಕ್ವಾಡ್ರಸಾಚ್ಯಾ ಪಾಂಚ್ವ್ಯಾ ಕಥಾಸಂಗ್ರಹ್ ’ಸಾಂಕವ್’ ಪುಸ್ತಕಾಂತಲ್ಯಾ 25 ಕಥೆಂಚೆರ್ ಅಭ್ಯಾಸ್ ಕರುನ್ ಸಮೀಕ್ಷಾ ಕೆಲಿ. ಕಥೆಂತ್ ಆಟಾಪ್ಚೆ ವೆಗ್-ವೆಗಳೆ ವಿಶಯ್, ಮನ್ಶಾಮೊಲಾಂ, ಸಂಬಂಧ್-ನಾತಿಂ, ವಯ್ಚಾರಿಕತಾ, ತತ್ವಾಂ, ಮನ್ಶಾ ಜಿವಿತ್ ಅಶೆಂ ವೆಗ್-ವೆಗಳ್ಯಾ ಕಥೆಂಚೆರ್ ಆಸ್ಚ್ಯಾ ದರೇಕಾ ಸಂಗ್ತೆಂಚೆರ್ ಕೆಲ್ಲೆಂ ವಿಶ್ಲೇಷಣ್ ಭೋವ್ ಅಪುರ್ಭಾಯೆನ್ ಪ್ರಸ್ತುತ್ ಕೆಲೆಂ. ದಲ್ಗಾದೊ ಕೊಂಕಣಿ ಅಕಾಡೆಮಿಚೆ ಅಧ್ಯಕ್ಷ್ ಬಾಬ್ ವಿನ್ಸಿ ಕ್ವಾಡ್ರೊಸ್ ಹಾಣಿಂ ಅಪ್ಲೆ ವಿಚಾರ್ ಮಂಡನ್ ಕರ್ತಚ್ ಕಾರ್ಯೆಂ ಚಲವ್ಪಿ ದೊ|ಪೂರ್ಣಾನಂದ ಚ್ಯಾರಿನ್ ’ಕಥಾಪಾಠ್ – ದುಸ್ರಿ ಶಿಂಕಳ್’ ವಿಶಿಂ ಮಾಹೆತ್ ದಿವುನ್, ಕೊಂಕಣಿಂತ್ಲ್ಯಾ ಕಥೆಂಚೆರ್ ತುಲನಾತ್ಮಕ್ ಅಭ್ಯಾಸ್ (Comparative analysis) ಚಲಂವ್ಚಿಂ ಕಥಾಪಾಠ್ ಜನೆರ್-ಫೆಬ್ರೆರ್ ಮಯ್ನ್ಯಾಂನಿ ಚಲಂವ್ಚೆವಿಶಿಂ ಉಲ್ಲೇಕ್ ಕೆಲೊ.
ಬಾಬ್ ಶೈಲೇಂದ್ರ ಮೆಹ್ತಾನ್ ಧಿನ್ವಾಸ್ ಪಾಠಯ್ಲೆ. 
ಗೊಂಯ್, ಕರ್ನಾಟಕ್, ಮುಂಬಯ್, ಕೇರಳಾ ಆನಿ ವಿದೇಶ್ ಥಾವ್ನ್ ಶೆಂಭೊರ್ ವಿಧ್ಯಾರ್ಥಿಂನಿ ಹ್ಯಾ ಕಥಾಪಾಠಾಂತ್ ಹಾಜರ್ ಆಸ್ಲಿಂ
.

ಕುಂದಾಪುರ ತೆರಾಲಿ ಪೂರ್ವಭಾವಿ ಭಾತ್ರತ್ವ ಬಾಂಧವ್ಯ ದಿನ ಸರಳವಾಗಿ ಆಚರಣೆ- ನಾವು ಇತರಿಗಾಗಿ ಬದುಕೋಣ

JANANUDI.COM NETWORK


ಕುಂದಾಪುರ,ನ.22: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಈ ವರ್ಷ 451 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ವಾರ್ಷಿಕ ಹಬ್ಬ (ತೆರಾಲಿ) ಈ ವರ್ಷ ಕೊವೀಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭಾತ್ರತ್ವ ಬಾಂಧವ್ಯ ದಿನವನ್ನು ಯಾವುದೇ ಮೇರವಣಿಗೆ, ಅದ್ದೂರಿ ಇಲ್ಲದೆ ಸರಳವಾಗಿ ನಡೆಸಲಾಯಿತು


ಇಗರ್ಜಿಯಲ್ಲಿ ನಡೆದ ಭಾತ್ರತ್ವ ಬಾಂಧವ್ಯ ದಿನ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿಯನ್ನು ಬ್ರಹ್ಮಾವರ ಇಗರ್ಜಿಯ ಧರ್ಮಗುರು ವಂ| ಜೋಕಿಮ್ ಡಿಸೋಜಾ ನಡೆಸಿಕೊಟ್ಟು ‘ಕ್ರಿಸ್ತನ ಜೊತೆ ನಡೆಯುವಲ್ಲಿ ಅತ್ಯಂತ ಸಂತೋಷವಿರುತ್ತದೆ, ಚಂದ್ರನ ಮೇಲೆ ಪ್ರಥಮ ಭಾರಿ ಇಳಿದು, ಚಂದ್ರನ ಮೇಲೆ ನೆಡೆದ ನೀಲ್ ಆರ್ಮ್ ಸ್ಟ್ರಾಂಗ್ ಹೇಳಿದ್ದೆನೆಂದರೆ ತಾನು ಚಂದ್ರನ ಮೇಲೆ ಇಳಿದು ನಡೆದ ಸಂತೋಷದ ಕ್ಷಣಕಿಂತ ತಾನು ಪ್ರಥಮ ಭಾರಿ ಪರಮ ಪ್ರಸಾದ ಸ್ವೀಕರಿಸಿ ಯೇಸುವಿ ಜೊತೆ ನೆಡೆದ ದಿನವೇ ಅತ್ಯಂತ ಸಂತೋಷದ ಕ್ಷಣ ಎಂದು ಪತ್ರಕರ್ತರಿಗೆ ತಿಳಿಸಿದರು. ನಾವು ಯೇಸುವಿನ ಜೊತೆ ಸತ್ಯ ಮಾರ್ಗದಲ್ಲಿ ನೆಡೆಯೋಣ. ಯೇಸು ನಮಗಾಗಿ ಜೀವ ತೆತ್ತರು, ನಾವು ನಮಗಾಗಿ ಜೀವಿಸಿದರೆ, ಶಾಸ್ವತ ಬದುಕು ಲಭಿಸದು, ನಾವು ಇತರರಿಗಾಗಿ ಜೀವಿಸಿದರೆ, ಕಷ್ಟ ಪಟ್ಟರೆ, ಜೀವನ ಸವೆಸಿದರೆ ನಮಗೆ ದೇವರು ಶಾಸ್ವತ ಬದುಕು ನೀಡುತ್ತಾನೆ’ ಎಂದು ಪ್ರವಚನ ನೀಡಿದರು. ಜೊತೆಗೆ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.


ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಭಾಗಿಯಾಗಿ ವಂದಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಈ ಪ್ರಾರ್ಥನ ವಿಧಿಯಲ್ಲಿ ಭಾಗವಹಿಸಿದರು. ಪ್ರತಿ ವರ್ಷದಂತೆ ನಡೆಯುತಿದ್ದತೆರಾಲಿಯ ಮಂಗಳವಾರ ನಡೆಯುವ ದೇವರ ವಾಕ್ಯಗಳ ಸಂಭ್ರಮ ರದ್ದು ಪಡಿಸಲಾಗಿದ್ದು ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ
.

ದೊ|ತಾನಾಜಿ ಹಳರ್ಣೆಕರಾಚಿ ಏಕ್ ಯಾದ್

JANANUDI.COM NETWORK


ನವೆಂಬ್ರ್  (21): ಅಕ್ತೋಬರ್ 20 ತಾರಿಕೆರ್ ಸಂಸಾರಾಕ್ ಸಾಸ್ಣಿಕ್ ಅಧೇವ್ಸ್ ಮಾಗುನ್ ಗೆಲ್ಲ್ಯಾ, ವರಿಶ್ಟ್ ಕೊಂಕಣಿ ಶಿಕ್ಷಕ್, ವಾವ್ರಾಡಿ, ಮಾರ್ಗದರ್ಶಿ; ಕೇಂದ್ರ್ ಸಾಹಿತ್ಯ್ ಅಕಾಡೆಮಿಚೊ ಆಧ್ಲೊ ಸಂಚಾಲಕ್ ದೊ|ತಾನಾಜಿ ಹಳರ್ಣೆಕರ್ ಹಾಂಚಿ ಯಾದ್ ಕಾಡುನ್ ಹಾಂಣಿಂ ಕೊಂಕಣಿ ಭಾಸ್, ಸಾಹಿತ್ಯ್, ಶಿಕ್ಷಣ್, ಸಂಘಟನ್ ಅಶೆಂ ವೆಗ್-ವೆಗಳ್ಯಾ ಶೆತಾಂನಿ ದಿಲ್ಲ್ಯಾ ಅಮೊಲಿಕ್ ದೇಣ್ಗೆಚಿ ಯಾದ್ ಕರ್ಚೆಂ ಕಾರ್ಯೆಂ ಡಿಜಿಟಲ್ ಮಾಧ್ಯಮಾಚೆರ್ 21 ನವೆಂಬರ್ 2020 ಸನ್ವಾರಾ ಸಾಂಜೆರ್ 4:30 ಥಾವ್ನ್ 5:30 ಪರ್ಯಾಂತ್ ಆಶಾವಾದಿ ಪ್ರಕಾಶನಾನ್ ಮಾಂಡುನ್ ಹಾಡ್ಲೆಂ.
ಬಾಬ್ ಶೈಲೇಂದ್ರ ಮೆಹ್ತಾನ್ ಕಾರ್ಯಾಚಿ ಸುರ್ವಾತ್ ಕರುನ್ ಸಮೇಸ್ತಾಂಕ್ ಯೆವ್ಕಾರ್ ಮಾಗುನ್ ದೊ|ತಾನಾಜಿ ಬಾಬ್ ಕಸೊ ಏಕ್ ವ್ಯಕ್ತಿ ಮಾತ್ರ್ ನ್ಹಯ್, ಬಗರ್ ಏಕ್ ಸಂಸ್ಥೊ ಕಸೊ ಆಸ್ಲೊ ಮ್ಹಳ್ಳೆವಿಶಿಂ ವಿವರುನ್ ಸಾಂಗ್ತಚ್, ದೊ|ತಾನಾಜಿ ಹಳರ್ಣೇಕರಾಕ್ ಲಾಗ್ಶಿಲ್ಯಾನ್ ವ್ಹಳ್ಕಲ್ಲೆ ತಶೆಂಚ್ ತಾಂಚೆಸವೆಂ ಸಭಾರ್ ರಿತಿನ್ ವಾವ್ರ್ ಕರುನ್ ಆಯಿಲ್ಲ್ಯಾಂನಿ ತಾಂಚೊ ಅಣ್ಭವ್ ವಿವರುನ್ ಸಾಂಗ್ಲೊ; ಬಾಬ್ ಮುಕೇಶ್ ಥಳಿ (ಗೊಂಯ್), ಬಾಬ್ ಬಸ್ತಿ ವಾಮನ್ ಶೆಣಯ್ (ಮಂಗ್ಳುರ್), ಬಾಬ್ ಸಂಜಯ್ ಹರ್ಮಳಕರ್ (ಗೊಂಯ್), ಬಾಯ್ ಉಶಾ ರಾಣೆ (ಕಾರವಾರ್), ಬಾಬ್ ತುಕಾರಾಮ್ ಶೆಟ್ (ಗೊಂಯ್), ಬಾಬ್ ಗೋಕುಳದಾಸ್ ಪ್ರಭು (ಕೇರಳ), ಬಾಬ್ ಪ್ರೇಮಾನಂದ್ ಫಡ್ತೆ (ಗೊಂಯ್) ತಶೆಂಚ್ ಬಾಬ್ ದಾಮೋದರ್ ಮಾವ್ಜೊ (ಗೊಂಯ್) ಹಾಣಿಂ ದೊ|ತಾನಾಜಿವಿಶಿಂ ಸವಿಸ್ತಾರ್ ರಿತಿನ್ ಅಪ್ಲೊ ಅನ್ಭೋವ್ ವಾಂಟ್ಲೊ. ಬಾಬ್ ಪ್ರೇಮಾನಂದ ಫಡ್ತೆನ್ ದೊ|ತಾನಾಜಿ ಹಾಂಚೊ ರೆಕೊರ್ಡ್ ಕೆಲ್ಲೊ ಆವಾಜ್ ಸರ್ವಾಂಕ್ ಆಯ್ಕಾಶೆಂ ಕರ್ತಚ್, ಭಾಯಿ ಮಾವ್ಜೊ ಹಾಣಿಂ ದೊ|ತಾನಾಜಿಚೆರ್ ಏಕ್ ಡೊಕ್ಯುಮೆಂಟರಿ ಕರ್ಪಾಕ್ ಜಾಯ್ ಆನಿ ತಾಂಚ್ಯಾ ಸವಿಸ್ತಾರ್ ವಾವ್ರಾಚೊ ವಿವರ್ ಕೊಂಕಣಿ ಸಮಾಜೆನ್ ಯಾದ್ ದವರ್ಪಾಕ್ ಜಾಯ್ ಮ್ಹಣಾಲೊ.

ದೊ|ಆಸ್ಟಿನ್ ಪ್ರಭು (ಅಮೆರಿಕಾ), ದೊ|ಜಯವಂತ ನಾಯ್ಕ್ (ಮಂಗ್ಳುರ್), ದೊ|ತಾನಾಜಿಚೊ ಸುಪುತ್ರ್ ಬಾಬ್ ತುಶಾರ್ ಹಳರ್ಣೇಕರ್ (ಗೊಂಯ್), ಬಾಯ್ ಅನ್ವೇಶಾ ಸಿಂಗ್ಬಲ್ (ಗೊಂಯ್), ದೊ|ಪೂರ್ಣಾನಂದ್ ಚ್ಯಾರಿ (ಗೊಂಯ್), ಬಾಬ್ ಗ್ಯಾನೇಶ್ವರಿ ತರಿ (ಗೊಂಯ್), ಬಾಯ್ ಯೋಗಿತಾ ಆನಿ ಗೌರೀಶ್ ವೆರ್ಣೇಕರ್ (ಗೊಂಯ್), ಬಾಯ್ ಅಂಜು ಸಾಖರ್‌ದಾಂಡೆ (ಗೊಂಯ್), ಬಾಬ್ ಗೋಪಿನಾತ್ ಕಾಮತ್ (ಮುಂಬಯ್), ಬಾಯ್ ಫಿಲೊಮೆನಾ ಸಾಂಫ್ರಾನ್ಸಿಸ್ಕೊ (ಮುಂಬಯ್), ವಲ್ಲಿ ಕ್ವಾಡ್ರಸ್ (ಮುಂಬಯ್), ಬಾಬ್ ಹಿಲರಿ ಡಿ’ಸಿಲ್ವಾ (ಮುಂಬಯ್), ಬಾಬ್ ಆರ್.ಎಸ್.ಭಾಸ್ಕರ್ (ಕೊಚಿನ್) ತಶೆಂಚ್ ಸಭಾರ್ ಕೊಂಕಣಿ ಬರವ್ಪಿ, ವಾವ್ರಾಡಿ ಹ್ಯಾ ಕಾರ್ಯಾಂತ್ ಉಪಸ್ತಿತ್ ಆಸ್ಲಿಂ.

ಬಿಜೆಪಿ ಕಾರ್ಯಕರ್ತರು ಪ್ರಶಿಕ್ಷಣ ಪಡೆದು ಭವಿಷ್ಯದ ನಾಯಕರಾಗಬೇಕು : ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಬಿಜೆಪಿ ಕಾರ್ಯಕರ್ತರು ಪ್ರಶಿಕ್ಷಣ ಪಡೆದು ಭವಿಷ್ಯದ ನಾಯಕರಾಗಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು.  ಪಟ್ಟಣದ ಹೊರವಲಯದ ವಿಐಪಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿ. ಸಾಂಘಿಕ ಪ್ರಯತ್ನದ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.  ಬಿಜೆಪಿ ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರನ್ನು ಒಳಗೊಂಡಿರುವ ಏಕೈಕ ರಾಜಕೀಯ ಪಕ್ಷವಾಗಿದೆ. ವಿಚಾರ ಮರೆತು ಸ್ವಾರ್ಥಕ್ಕೆ ಇಂಬುಗೊಡು ಯಾವುದೇ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಕಾಂಗ್ರೆಸ್ ಅದಕ್ಕೆ ಉತ್ತಮ ನಿದರ್ಶನವಾಗಿದೆ. ವಿಚಾರದಿಂದ ದೂರವಾಗಿ ವ್ಯಕ್ತಿ ಪೂಜೆಗೆ ಇಳಿದ ಪರಿಣಾಮವಾಗಿ ಲೋಕಸಭೆಯಲ್ಲಿ 40 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಬಿಜೆಪಿ ವಿಚಾರಗಳಿಗೆ ಕಟ್ಟು ಬಿದ್ದುದರ ಫಲವಾಗಿ 303 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.  ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಬಿಜೆಪಿ ನಾಯಕರು, ಹಿಂದೆ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಅವರ ತೋರಿದ ಮಾರ್ಗದಲ್ಲಿ ಕಾರ್ಯಕರ್ತರು ನಡೆಯಬೇಕು. ಬೂತ್‌ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಜನರ ಗಮನಕ್ಕೆ ತರಬೇಕು ಎಂದು ಹೇಳಿದರು.  ಮುಖಂಡರಾದ ಕೃಷ್ಣಮೂರ್ತಿ, ಎಸ್‌.ವಿ.ಮುನಿವೆಂಕಟಪ್ಪ, ರಾಜೀವ್‌, ಎಂ.ಲಕ್ಷ್ಮಣಗೌಡ, ಅಶೋಕರೆಡ್ಡಿ, ವೆಂಕಟೇಗೌಡ, ಇ.ಶಿವಣ್ಣ, ವಿಐಪಿ ನಾಗರಾಜ್‌, ಜಯರಾಮರೆಡ್ಡಿ, ಶಿವಶಂಕರರೆಡ್ಡಿ ಇದ್ದರು.

ಸಾಹಿತ್ಯದಲ್ಲಿ ರಾಷ್ಟ್ರೀಯ ಭಾವನೆ ಬಿಂಬಿಸುವುದು ಇಂದಿನ ಅಗತ್ಯವಾಗಿದೆ:ಟಿ.ಎಸ್‌.ಮಾಯಾ ಬಾಲಚಂದ್ರ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಸಾಹಿತ್ಯದಲ್ಲಿ ರಾಷ್ಟ್ರೀಯ ಭಾವನೆ ಬಿಂಬಿಸುವುದು ಇಂದಿನ ಅಗತ್ಯವಾಗಿದೆ. ಸಾಹಿತಿಗಳು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಸಂಚಾಲಕಿ ಟಿ.ಎಸ್‌.ಮಾಯಾ ಬಾಲಚಂದ್ರ ಹೇಳಿದರು.  ಪಟ್ಟಣದ ರಾಮ ಮಂದಿರದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಕಿರಿಯ ಲೇಖಕರನ್ನು ದೇಶದ ಹಿತಾಸಕ್ತಿಗೆ ಪೂರಕವಾಗಿ ರೂಪಿಸುವುದು ಪರಿಷತ್ತಿನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.  ಪ್ರತಿ ತಿಂಗಳು ಮೂರನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಪರಿಷತ್ತಿನ ಸದಸ್ಯರ ಸಭೆ ನಡೆಸಲಾಗುವುದು. ಸಭೆಯಲ್ಲಿ ಸಾಹಿತ್ಯ ಚಟುವಟಿಕೆ ಕೈಗೊಳ್ಳಲಾಗುವುದು. ಸಮಾನ ಮನಸ್ಕರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಯುವ ಸಮುದಾಯದಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲಾಗುವುದು. ಮಕ್ಕಳಲ್ಲಿ ಉತ್ತಮ ಸಾಂಸ್ಕಾರ ಬೆಳೆಸಲು ಒತ್ತು ನೀಡಲಾಗುವುದು ಎಂದು ಹೇಳಿದರು.  ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಂಯೋಜಕ ಕೇಶವಮೂರ್ತಿ ಮಾತನಾಡಿ, ಸಾಹಿತ್ಯ ವ್ಯಕ್ತಿಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪರಿಷತ್ತಿನ ವತಿಯಿಂದ ಸೃಜನ ಶೀಲ ಸಾಹಿತ್ಯ ನಿರ್ಮಾಣ ಕಾರ್ಯಕ್ಕೆ ಬೆಂಬಲ ನೀಡಲಾಗುವುದು ಹಾಗೂ ಓದುಗರ ತಂಡಗಳನ್ನು ಕಟ್ಟಲಾಗುವುದು. ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು.  ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ರಾಯಲ್ಪಾಡ್‌ ರಾಘವೇಂದ್ರ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎನ್‌.ಬಿ.ಗೋಪಾಲಗೌಡ, ಮುಖಂಡರಾದ  ಅರುಣ್‌ ಕುಮಾರ್‌, ಪ್ರಭುರೆಡ್ಡಿ, ರಾಮಾಂಜಿ, ಉಪನ್ಯಾಸಕಿ ಕಮಲ ಹೆಗ್ಗಡೆ, ಶಿಕ್ಷಕಿಯರಾದ ಶಾರದಾ ಕೃಷ್ಣಮೂರ್ತಿ, ಚಿಕ್ಕರೆಡ್ಡಮ್ಮ,  ಜಯಲಕ್ಷ್ಮಿ, ಆರತಿ, ರಕ್ಷಾ, ರೆಡ್ಡಮ್, ಮಮತಾ ರಾಣಿ ಇದ್ದರು.

Sad Demise – Mr Ronald Correa – (Proprietor of Navrang Dresses Kundapur)

OBITUARY

Mr Ronald Correa (73)

H/o Jacintha Correa

 (passed away 21-11-20) Born:01-05-1949)

(Married 12-05 -1980)

F/o Deepak/Frenita, Divya/Anil Concessao, Dheeraj/Priyanna,

B/o Joseph/Juliana , Melwin/Lovina

 Gd/F Ashni, Anora, Freya, Skylar

Funeral cortege leaves residence “Bhagya jyothi” OmbathuDandige Road, to Holy Rosary Church, Kundapura on Monday November 23 at 10.00 a.m. Mass at 10.30 a.m.

Contact Details :Deepak Correa 9448161468

ನಿವೃತ್ತ ಶಿಕ್ಷಕಿ ಹೆರ್ಮೋಜಿನ್ ಮೆಂಡೋನ್ಸಾ -ಧೈವಾಧಿನರಾದರು-ಅಂತಿಮ ಸಂಸ್ಕಾರ ತಲ್ಲೂರಿನಲ್ಲಿ

JANANUDI.COM NETWORK


ಕೋಟ: ಹೆಮ್ಮಾಡಿಯ ಮಾಜಿ ಸೈನಿಕ ದಿ.ಫ್ರೆಡ್ರಿಕ್ ಪಾಯಸ್ ಅವರ ಪತ್ನಿ,ನಿವೃತ್ತ ಶಿಕ್ಷಕಿ ಹೆರ್ಮೋಜಿನ್ ಮೆಂಡೋನ್ಸಾ(78) ಶುಕ್ರವಾರ ರಾತ್ರಿ ನಿಧನ ಹೊಂದಿದರು. ಅವರು ಗಿಳಿಯಾರು, ಮಂಕಿ-ಗುಜ್ಜಾಡಿ, ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿನಿವೃತ್ತಿ ಹೊಂದಿದ್ದರು.ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಸೋಮವಾರ ಮಧ್ಯಾಹ್ನ 3.30 ಮೃತರ ಅಂತಿಮ ವಿಧಿ ವಿಧಾನ ನಡೆಯಲಿದ್ದು, ಸಂಜೆ 4 ಗಂಟೆಗೆ ತಲ್ಲೂರು ಸಂತ ಆಶಿಸ್ ಚರ್ಚ್ ಅಂತಿಮ ಕ್ರಿಯೆ ನಡೆಯಲಿದೆ.