HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ- ಪಿಯುಸ್ ನಗರ ಚರ್ಚ್ ಆಯೋಗಳ ಸಂಚಾಲಕರಿಗೆ ಉಡುಪಿ ಧರ್ಮಪ್ರಾಂತ್ಯದ ಆಯೋಗ ನಿರ್ದೇಶಕರಿಂದ ತರಬೇತಿ

JANANUDI.COM NETWORK


ಕುಂದಾಪುರ, ಜ.8: ಉಡುಪಿ ಧರ್ಮಪ್ರಾಂತ್ಯದ 20 ಆಯೋಗಗಳ ಮುಖ್ಯ ನಿರ್ದೆಶಕ ಹಾಗೂ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ|ಧರ್ಮಗುರು ಸ್ಟೀಫನ್ ಡಿಸೋಜಾ ಇವರು ಕುಂದಾಪುರ ಮತ್ತು ಪಿಯುಸ್ ನಗರ ಚರ್ಚಿನ, ಉಡುಪಿ ಧರ್ಮಪ್ರಾಂತ್ಯದ ಸರ್ವಾಂಗೀಣ ಅಭಿವ್ರದ್ದಿಗಾಗಿ ಇರುವ 20 ಆಯೋಗಳ ಸಂಚಾಲಕರಿಗೆ, ಚರ್ಚ್ ಉಪಾಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ಎಲ್ಲಾ ಆಯೋಗಗಳ ಸಂಚಾಲಕರ ಉದ್ದೇಶ ಮತ್ತು ಜವಾವ್ದಾರಿಯನ್ನು ವಿವರಿಸಿ ತಮ್ಮ ಕರ್ತವ್ಯವನ್ನು ತಮ್ಮ ಸ್ವಂತಕ್ಕೆ ಯಾವುದೇ ಫಲಾಪೇಕ್ಷತೆ ಅಪೇಕ್ಷಿಸದೆ, ಧರ್ಮಸಭೆಯ ಉದ್ದಾರಕ್ಕಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕೆಂದು ತಿಳಿಸಿದರು.
ಕುಂದಾಪುರ ವಲಯ ಪ್ರಧಾನ, ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಸ್ತಾವಿಕ ನುಡಿಗಳನ್ನಾಡಿದರು, ಪಿಯುಸ್ ನಗರ ಚರ್ಚಿನ ಧರ್ಮಗುರು ವಂ|ಜೋನ್ ಆಲ್ಫ್ರೆಡ್ ಬಾರ್ಬೊಜಾ, ಉಪಾಧ್ಯಕ್ಷ ವಾಲ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ಜೆನ್ನಿ ಡೆಸಾ, ಕುಂದಾಪುರ ಚರ್ಚಿನ 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕುಂದಾಪುರ- ಪಿಯುಸ್ ನಗರ 20 ಆಯೋಗಗಳ ಹೆಚ್ಚಿನ ಸಂಚಾಲಕರು ಉಪಸ್ಥಿತರಿದ್ದರು ಕುಂದಾಪುರ ಚರ್ಚಿನ ಉಪಾಧ್ಯಕ್ಷರಾದ ಲುವಿಸ್ ಜೆ.ಫೆರ್ನಾಂಡಿಸ್ ಸ್ವಾಗತಿಸಿದರು. ಪಿಯುಸ್ ನಗರ ಚರ್ಚಿನ 20 ಆಯೋಗಗಳ ಸಂಯೋಜಕಿ ಲೀನಾ ತಾವ್ರೊ ವಂದಿಸಿದರು.

“ಮುದ್ದು ಏಸು” ಜನನುಡಿ ಸುದ್ದಿ ಸಂಸ್ಥೆಯ ಈ ಸ್ಫರ್ಧೆಯ ಗಡುವನ್ನು ಜನರ ಅಭಿಪ್ರಾಯದ ಮೇರೆಗೆ ವಿಸ್ತರಿಸಲಾಗಿದೆ

JANANUDI.COM NETWORK

ಕುಂದಾಪುರ,ಜ.8: ಜನನುಡಿ ಟಾಟ್ ಕಾಮ್ ಸುದ್ದಿ ಸಂಸ್ಥೆ ಎರ್ಪಡಿಸಿದ “ಮುದ್ದು ಏಸು” ಸ್ಫರ್ಧೆಯನ್ನು ಜನರ ಅಭಿಪ್ರಾಯದ ಮೇರೆಗೆ ಗಡುವನ್ನು ಇನ್ನೂ 3 ದಿನ ಗಳಿಗೆ ವಿಸ್ತರಿಸಲಾಗಿದೆ. ಅಂದರೆ ಜನವರಿ 10 ತನಕ ಬರುವ ಸ್ಫರ್ಧಾಳುಗ ಫೋಟೊಗಳನ್ನು ಸ್ವೀಕರಿಸಲಾಗುವುದು.

ಸ್ಫರ್ಧೆಯ ವಿವರ ಕೆಳಗಿನಂತಿದೆ

2020 ರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಜನನುಡಿ.ಕಾಮ್ ಸುದ್ದಿ ಸಂಸ್ಥೆ ವಿನೂತನವಾದ ಬಾಲ ಏಸುವಿನ ಫೋಟೊ ಸ್ಫರ್ಧೆಯನ್ನು ಏರ್ಪಡಿಸುತ್ತಿದೆ
ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ.
ಸ್ಫರ್ಧೆ ವಿಭಾಗ 1 – ಒಂದರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ
ವಿ.ಸೂ:- ಸ್ಫರ್ಧೆ ವಿಭಾಗ 1 ರ ಕಂದಮ್ಮಗಳಿಗೆ ಕಿರು ವಸ್ತ್ರ ಸುತ್ತಿದ ಬಾಲ ಏಸುವಿನಂತೆ ಅಥವ ಮೈ ತುಂಬ ಆಕರ್ಷಕ ಬಟ್ಟೆ ತೊಟ್ಟು ಮುದ್ದು ಭಂಗಿಯಲ್ಲಿರುವ ಫೋಟೊಗಳಾಗಿರಬೇಕು.
ಸ್ಫರ್ಧೆ ವಿಭಾಗ 2 ರ ಮಕ್ಕಳನ್ನು ಬಾಲ ಏಸುವಿನಂತೆ ವಸ್ತ್ರ, ಭೂಷಣ ದರಿಸಿದ ಆಕರ್ಷಕ ಫೋಟೊಗಳಾಗಿರಬೇಕು.

  • ಸ್ಫರ್ಧೆಯಲ್ಲ್ಲಿ ಭಾಗವಹಿಸಲು ಹುಡುಗ–ಹುಡುಗಿ,ಧರ್ಮಕ್ಕೆ ವ್ಯಾಪ್ತಿಗೆ ಮಿತಿ ಇಲ್ಲ
  • 1 ಮಗುವಿನ 1 ಫೋಟೊ ಮಾತ್ರ ಕಳುಹಿಸಹುದು. ಫೋಟೊ ಕಳುಹಿಸುವಾಗ ಮಗುವಿನ ಹೆಸರು, ತಂದೆ ತಾಯಿ ಹೆಸರು ವಿಳಾಸ, ಫೋನ್ ನಂಬರ್, ಮಗುವಿನ ಪ್ರಾಯ ತಿಳಿಸಬೇಕು.
    *ಫೋಟೊ ಗಳನ್ನು 2021 ಜನವರಿ 10 ರ ಒಳಗೆ ಫೋಸ್ಟ್ ಅಥವ ಇ ಮೈಲ್ ಮೂಲಕ ತಲುಪಬೇಕು.
    *ಪ್ರತಿ ವಿಭಾಗದಲ್ಲಿ ಪ್ರಥಮ,ದ್ವೀತಿಯ,ತ್ರತೀಯ ಬಹುಮಾವಿದೆ!! ಅಲ್ಲದೆ ಮೆಚ್ಚುಗೆ ಪಡೆದ 10 ಮಕ್ಕಳ ಫೋಟೊಗಳನ್ನು ಜನನುಡಿಯಲ್ಲಿ ಪ್ರಕಟಿಸಲಾಗುವುದು.
    *ಸಂಘಟರ ತೀರ್ಮಾನವೆ ಅಂತಿಮವಾದುದು, ಯಾವುದೇ ತರ್ಕಕ್ಕೆ ಆಸ್ಪದ ಇಲ್ಲ .ಸಂಪರ್ಕಕ್ಕೆ:9964620998 – ( ವಾಟ್ಸಪ್ 9008308190)
  • gmail: bjdcosta@gmail.com  

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಪ್ರಕ್ರಿಯೆ ವಿಳಂಬ ಕೂಡಲೇ ಪ್ರಕ್ರಿಯೆ ಮುಗಿಸಲು ಆಯುಕ್ತರಿಗೆ ಡಾ.ವೈಎಎನ್ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡಿಕೆ ವಿಳಂಬವಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ನೀಡಿದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಆಯುಕ್ತ ಅನೂಪ್ ಕುಮಾರ್ ಪ್ರಕ್ರಿಯೆ ಆರಂಭಕ್ಕೆ ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.
ಬುಧವಾರ ಆಯುಕ್ತರನ್ನು ಭೇಟಿಯಾದ ವೈಎಎನ್, ಕೋಲಾರ ಜಿಲ್ಲೆಯಲ್ಲಿ ಬಡ್ತಿ ಪ್ರಕ್ರಿಯೆ ವಿಳಂಬವಾಗಿದೆ, ಆದರೆ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಬಡ್ತಿ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲೂ ಬಡ್ತಿ ಸಂಬಂಧ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿ, ದಾಖಲಾತಿಗಳ ಪರಿಶೀಲನೆ ಮಾಡಲಾಗಿತ್ತು. ಆದರೆ ಅಂತಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ವೇಳೆಗೆ ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದಾಗಿ ಪಟ್ಟಿ ಪ್ರಕಟಗೊಳ್ಳಲಿಲ್ಲ ಎಂದು ತಿಳಿಸಿದರು.
ಸಂಬಂಧಿಸಿದ ಶಿಕ್ಷಕರು ಚುನಾವಣೆ ನೀತಿ ಸಂಹಿತೆಮುಗಿದ ನಂತರ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಮನವಿ ಸಲ್ಲಿಸಿದ್ದು, ಡಿಡಿಪಿಐ ಅವರು 2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಬಡ್ತಿ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಆದರೆ ಈಗಾಗಲೇ ಕಳೆದ ಡಿ.19 ರಂದು ಬಳ್ಳಾರಿ ಜಿಲ್ಲೆ, ಡಿ.28 ರಮದು ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಪ್ರೌಢಶಾಲಾ ಶಿಕ್ಷಕರ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಮುಗಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಬಡ್ತಿ ಪ್ರಕ್ರಿಯೆ ಮುಗಿಸಬೇಕು, ಶಿಕ್ಷಕರಿಗೆ ಸಿಗುವ ಈ ಸೌಲಭ್ಯ ಒದಗಿಸಲು ಇಲಾಖೆಯ ಮೀನಾಮೇಷ ಏಕೆ ಎಂದು ಪ್ರಶ್ನಿಸಿದ ಅವರು, ಕ್ರಮಕ್ಕೆ ಒತ್ತಾಯಿಸಿದರು.
ಆದ್ದರಿಂದ ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಿ ಕೂಡಲೇ ಬಡ್ತಿ ಪ್ರಕ್ರಿಯೆ ಮುಗಿಸಿ ಅರ್ಹ ಶಿಕ್ಷಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ಅನೂಪ್ ಕುಮಾರ್, ಕೂಡಲೇ ಬಡ್ತಿ ಪ್ರಕ್ರಿಯೆ ನಡೆಸಲು ಡಿಡಿಪಿಐ ಅವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರಲ್ಲದೇ ಮನವಿಯ ಮೇಲೆಯೇ ಆದೇಶ ಮಾಡಿದರು.
ಈ ಸಂದರ್ಭದಲ್ಲಿ ವೈಎಎನ್ ಅವರೊಂದಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ಎಸ್.ಚೌಡಪ್ಪ ಹಾಜರಿದ್ದರು
.

ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಬೇಕು- ನೂತನ ಅಧ್ಯಕ್ಷ ವಿ.ರವಿಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಮದಿಸಿ ಕಾರ್ಯನಿರ್ವಹಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ವಿ.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮರಸನಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಶಿಕ್ಷಕ ಮಿತ್ರರೊಬ್ಬರನ್ನು ನೇಮಿಸಲಾಗುವುದು ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಕಜಾಂಚಿ ಆರ್.ಎಸ್.ರೆಡ್ಡಪ್ಪ, ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಬಯ್ಯಾರೆಡ್ಡಿ, ಎಚ್.ವಿ.ಶೋಭಾ, ಪ್ರಧಾನ ಕಾರ್ಯದರ್ಶಿ ಸಿ.ವಿ.ಶಿವಣ್ಣ, ಖಜಾಂಚಿ ಎನ್.ವಿ.ವೇಣುಗೋಪಾಲ್, ಸಹ ಕಾರ್ಯದರ್ಶಿ ಎಲ್.ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಜಿ.ವಿ.ಚನ್ನಪ್ಪ, ಎನ್.ಮಾಧವಿ, ನಿರ್ದೇಶಕರಾದ ಟಿ.ಎಲ್.ದಿವಾಕರ್, ಕೆ.ವಿ.ನರಸಮ್ಮ, ಎಲ್.ಆನಂದ್, ಕೆ.ರಘುನಾಥರೆಡ್ಡಿ, ಡಿ.ವಿ.ವೆಂಕಟರಾಮರೆಡ್ಡಿ, ಎಸ್.ಮಂಜುನಾಥ್, ಟಿ.ಎಸ್.ಅನಿತ ಇದ್ದರು.

ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು:ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಅಂಥ ನೌಕರರು ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬೇರೆಡೆಗೆ ವರ್ಗವಾದ ಉಪ ತಹಶೀಲ್ದಾರ್ ಮಲ್ಲೇಶ್, ಶಿರಸ್ತೇದಾರ್ ಜಿ.ಆರ್.ಭಾಸ್ಕರ್ ಅವರನ್ನು ಸನ್ಮಾನಿಸಿ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ ಎಂದು ಮಾಡಿದಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಉಪ ತಹಶೀಲ್ದಾರ್ ಚಂದ್ರಪ್ಪ, ಶಿರಸ್ತೇದಾರರಾದ ಬಿ.ಆರ್.ಮುನಿವೆಂಕಟಪ್ಪ, ಮನೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ವಿನೋದ್, ಗುರುರಾಜರಾವ್, ಬಲರಾಮಯ್ಯ, ವಿ.ಆರ್.ಭೀಮರಾವ್ ಇದ್ದರು.

ಶ್ರೀನಿವಾಸಪುರ, ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರ ಶ್ರಮಕ್ಕೆ ಗೌರವ ತರಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ತಾಲ್ಲೂಕಿನ ರಾಯಲ್ಪಾಡ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೋಲಾರದ ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಶಾಲೆಗಳಿಗೆ ಟಿವಿ ವಿತರಿಸಿ ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ಮೋಹ ತೊರೆದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಶಾಲೆಗಳಿಗೂ ಮೂಲ ಸೌಕರ್ಯ ಕಲ್ಪಿಸಲಾಗುವುದು. ಕ್ಷೇತ್ರದ ಎಲ್ಲ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಅವರ ಕಲಿಕಾ ಸಾಮಥ್ರ್ಯ ಕುಸಿದಿದೆ. ಈ ಪರಿಸ್ಥಿತಿಯಿಂದ ಮಕ್ಕಳನ್ನು ಪಾರುಮಾಡುವ ಉದ್ದೇಶದಿಂದ ಪಠ್ಯ ವಿಷಯ ಒಳಗೊಂಡ ಟ್ಯಾಬ್ ಹಾಗೂ ಕಲಿಕೆಗೆ ಪೂರಕವಾದ ಟಿವಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಯ ಗುರುನಾಗೇಶ್, ಸುಧಾಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ವಿ.ನರೇಶ್, ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪ್ರಾಂಶುಪಾಲ ರವೀಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ಅಶೋಕ್, ನರಸಿಂಹಪ್ಪ. ಮುಖಂಡರಾದ ಕೃಷ್ಣಮೂರ್ತಿ, ರಾಮಸ್ವಾಮಿ, ಶ್ರೀನಿವಾಸ್, ರಾಮಚಂದ್ರೇಗೌಡ, ಕೆ.ಕೆ.ಮಂಜು ಇದ್ದರು
.

ಮಹಾಲಸಾ ಮೋಟಾರ್ ಫೂಯಲ್ಸ್ ಬೈಂದೂರು ಅಭಿವೃದ್ಧಿಗೆ ಪೂರಕ :ಬಿ.ಎಂ.ಸುಕುಮಾರ್ ಶೆಟ್ಟಿ

JANANUDI.COM NETWORK


ಬೈಂದೂರು ಕ್ಷೇತ್ರ ಪ್ರವಾಸೋದ್ಯಮದ ದೊಡ್ಡ ಕೇಂದ್ರವಾಗಿ ಬೆಳೆಯಲಿದ್ದು, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಉಪಯೋಗಿಸಿಕೊಂಡು ಬೈಂದೂರು, ಮರವಂತೆ, ಕೊಲ್ಲೂರು-ಕೊಡಚಾದ್ರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಆಕರ್ಷಕ ಯೋಜನೆಗಳು ಕಾರ್ಯಗತವಾಗಲಿವೆ. ಭಾರತ ಪೆಟ್ರೋಲಿಯಂನವರ ಇಂಧನ ಪೂರೈಕೆಯ ಮಹಾಲಸಾ ಫೂಯಲ್ಸ್ ಸೆಂಟರ್, ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪನೆಯಾಗಿರುವುದು ಬೈಂದೂರು ಅಭಿವೃದ್ಧಿಗೆ ಪೂರಕವಾಗಿದೆ. ಈ ರಿಟೈಲ್ ಔಟ್‍ಲೆಟ್ ಆರಂಭಿಸಿದ ಕೆ.ಪ್ರಭಾಕರ ಪ್ರಭು ಹಾಗೂ ಕೆ.ಪ್ರಜ್ಞೇಶ್ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇದು ಉತ್ತಮ ವಿಶ್ವಾಸಾರ್ಹ ಸೇವೆ ಗ್ರಾಹಕರಿಗೆ ನೀಡಲಿ” ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದರು.
ಬೈಂದೂರು ತಾಲ್ಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾಂಕ 3 ರಂದು ಪ್ರಾರಂಭಗೊಂಡ ಮಹಾಲಸಾ ಮೋಟಾರ್ ಫೂಯಲ್ಸ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನ ಅತಿಥಿಗಳಾಗಿ ಕೆನರಾ ಬ್ಯಾಂಕ್‍ನ ಜನರಲ್ ಮೆನೇಜರ್ ರಾಮನಾಯ್ಕ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್‍ನ ಸಹ ಪ್ರಾಂತೀಯ ಮೆನೇಜರ್ ಗೋರಖ್‍ನಾಥ ಆಗಮಿಸಿದ್ದರು.
ನಾಗೂರಿನಲ್ಲಿ ಭಾರತ್ ಪೆಟ್ರೋಲಿಯಂ ಔಟ್‍ಲೆಟ್ ಸ್ಥಾಪನೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ರಾಘವ ಶೆಟ್ಟಿ, ಪ್ರಭಾಕರ ಶೆಟ್ಟಿ, ಈಶ್ವರ ದೇವಾಡಿಗ, ಮಂಜುನಾಥ ಖಾರ್ವಿ, ರತ್ನಾಕರ , ಸುರೇಶ್ ಆಚಾರ್ಯ ಅವರನ್ನು ಕೆನರಾಬ್ಯಾಂಕ್ ಜನರಲ್ ಮೆನೇಜರ್ ರಾಮನಾಯ್ಕ್ ಗೌರವಿಸಿದರು.
ಕೆನರಾಬ್ಯಾಂಕ್ ಹಾಗೂ ಕುಂಭಾಸಿ ವೆಂಕಟರಮಣ ಪ್ರಭು ಅವರ ಬಾಂಧವ್ಯ ಸ್ಮರಿಸುತ್ತಾ ಶುಭಹಾರೈಸಿದ ಜನರಲ್ ಮೆನೇಜರ್ ರಾಮನಾಯ್ಕ” ಉತ್ತಮವಾಗಿ ವಿಶ್ವಾಸಾರ್ಹ ವ್ಯವಹಾರೋದ್ಯಮ ಬೆಳೆಸಿಕೊಂಡು ಬಂದಿರುವ ಪ್ರಭು ಕುಟುಂಬದೊಂದಿಗೆ ಸಹಕಾರ ನೀಡಲು ಬ್ಯಾಂಕ್ ಸದಾ ಸಿದ್ಧವಿದೆ. ಕೆ. ಪ್ರಜ್ಞೇಶ ಪ್ರಭು ಅಂತಹ ಯುವ ಉದ್ಯಮಿಗಳಿಗೆ ಸದಾ ಬೆಂಬಲ ನೀಡುತ್ತದೆ” ಎಂದರು.


“ಭಾರತ ಪೆಟ್ರೋಲಿಯಂನ ಈ ವಿತರಣಾ ಕೇಂದ್ರ ಬಹಳ ಅನುಕೂಲವಾದ ಸ್ಥಳದಲ್ಲಿರುವುದು ಮಾತ್ರವಲ್ಲ. ಗ್ರಾಹಕರಿಗಾಗಿ ಉತ್ತಮವಾಗಿ ರೂಪಿಸಲ್ಪಟ್ಟಿದೆ. ಮಹಾಲಸಾ ಮೋಟಾರ್ ಫೂಯಲ್ಸ್ ವಿಶ್ವಾಸಾರ್ಹ ಸೇವೆ ನೀಡಲಿವೆ. ವಾಹನದ ಮೂಲಕವೂ ಗ್ರಾಹಕರಿಗೆ ಇಂಧನ ತಲುಪಿಸುವ ವ್ಯವಸ್ಥೆ ಶೀಘ್ರದಲ್ಲೇ ಆರಂಭವಾಗಲಿದೆ” ಎಂದು ಗೋರಖ್‍ನಾಥ್ ಹೇಳಿದರು.
ಸರ್ವರೀತಿಯಲ್ಲಿ ಮಾರ್ಗದರ್ಶನ ನೀಡಿದ ಕೆ. ಶಾಂತಾರಾಮ ಪ್ರಭು ಅವರನ್ನು ಗೌರವಿಸಲಾಯಿತು. ಭಾರತ ಪೆಟ್ರೋಲಿಯಂನ ಅಧಿಕಾರಿಗಳನ್ನು , ಬ್ಯಾಂಕ್ ಅಧಿಕಾರಿಗಳನ್ನು ಗೌರವಿಸಲಾಯಿತು.
ದೇವದಾಸ ಪೈ ಹೊನ್ನಾವರ, ಕೆ. ಪ್ರಜ್ಞೇಶ್ ಪ್ರಭು, ವಿನಯಾ ಪ್ರಜ್ಞೇಶ್ ಪ್ರಭು, ಅತಿಥಿಗಳನ್ನು ಗೌರವಿಸಿದರು. ಧಾರಿಣಿ ಭಕ್ತಿಗೀತೆ ಹಾಡಿದರು.
ಕೆ. ರಮೇಶ್ ಪ್ರಭು, ಕೆ. ಗಣೇಶ್ ಪ್ರಭು ಸ್ವಾಗತಿಸಿದರು. ಕೆ. ಕೇಶವ ಪ್ರಭು, ಕೆ.ಪ್ರಭಾಕರ ಪ್ರಭು ವೇದಿಕೆಯಲ್ಲಿದ್ದರು. ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು
.

ಮನೆ ಮನೆಗೆ ನೀರು : ಬಿ.ಎಂ.ಸುಕುಮಾರ ಶೆಟ್ಟಿ , ಶಾಸಕರು, ಬೈಂದೂರು
ಬೈಂದೂರು ಕ್ಷೇತ್ರದಲ್ಲಿ ಮನೆ ಮನೆಗೆ ನೀರು, ಒದಗಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ . ಕೊಲ್ಲೂರು ಕೊಡಚಾದ್ರಿಯ 4.5 ಕಿ.ಮಿ ರೋಪ್‍ವೇ ಬೈಂದೂರಿನ ಸೋಮೇಶ್ವರ ಬೀಚ್, ಮರವಂತೆ ಬೀಚ್ ಅಭಿವೃದ್ಧಿ ಮುಂತಾದ ಹಲವು ಯೋಜನೆ ಕಾರ್ಯಗತಗೊಂಡರೆ ಗೋವಾಕ್ಕಿಂತ ಬೈಂದೂರು ಕ್ಷೇತ್ರ ಖ್ಯಾತವಾಗಲಿದೆ. ಬೈಂದೂರಿನಲ್ಲಿ 100 ಬೆಡ್‍ನ ಆಸ್ಪತ್ರೆ ಆಗಲಿದ್ದು ಜನರ ಬಹು ವರ್ಷಗಳ ಕನಸು ನನಸಾಗಿಸಲಿದೆ. ಎಂದು ಬೈಂದೂರು ಶಾಸಕರು ಬಿ.ಎಂ.ಸುಕುಮಾರ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು.

 

ಬೀಜಾಡಿ: ಯಕ್ಷಗಾನ ತರಬೇತಿ ಉಚಿತ ಶಿಬಿರ ಉದ್ಘಾಟನೆ

JANANUDI.COM NETWORK


ಬೀಜಾಡಿ: ಯಕ್ಷಗಾನ ಕರಾವಳಿಯ ಗಂಡು ಕಲೆ. ಈ ಕಲೆಯನ್ನು ಕಲಿಯುವ ನೀವೆಲ್ಲ ನಿಜಕ್ಕೂ ಅಭಿನಂದನೆಗೆ ಅರ್ಹರು.ಯಕ್ಷಗಾನ ತರಬೇತಿಯನ್ನು ಪಡೆಯುವ ಎಲ್ಲರೂ ಒಳ್ಳೆಯ ಕಲಾವಿದರಾಗಲು ಸಾಧ್ಯವಿಲ್ಲ. ಆದರೆ ಖಂಡಿತ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ ಎಂದು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಹೇಳಿದರು.
ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಆಶ್ರಯದಲ್ಲಿ ನಡೆಯುವ ಯಕ್ಷಗಾನ ತರಬೇತಿ ಉಚಿತ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಉದ್ಘಾಟಿಸಿ ಮಾತನಾಡಿ, ಯಕ್ಷಗಾನವನ್ನು ಕಲಿಯುವುದರ ಮೂಲಕ ಯಕ್ಷಗಾನವನ್ನು ಉಳಿಸಿ ಬೆಳಸಲು ಸಾಧ್ಯವಿದೆ. ಜತೆಗೆ ಜ್ಞಾನಶಕ್ತಿಯು ಹೆಚ್ಚಲಿದೆ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗುರು ಶ್ರೀಧರ ಕಾಂಚನ್ ಅವರನ್ನು ಗೌರವಿಸಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ಸತ್ಯನಾರಾಯಣ ಆಚಾರ್,ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್ ಉಪಸ್ಥಿತರಿದ್ದರು.ತರಬೇತಿಗೆ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು.

ಪಂಚಾಯತ್ ಎಲಿಸಾಂವಾಂತ್ ಜಿಕೊನ್ ಆಯ್ಲ್ಯಾ ಶೈನಿ ಕ್ರಾಸ್ತಾಕ್ ಕುಂದಾಪುರ್ ಕಥೊಲಿಕ್ ಸಭಾ ಥಾವ್ನ್ ಮಾನ್

JANANUDI.COM NETWORK

ಕುಂದಾಪುರ್, ಜ.3:  ಹೆಮ್ಮಾಡಿ ಪಂಚಾಯ್ತಾಚ್ಯಾ ಕನ್ನಡಕುದ್ರು ವ್ಯಾಪ್ತಿಂತ್ ಎಲಿಸಾಂವಾಂಕ್ ರಾವೊನ್ ಜಿಕ್ಲ್ಯಾ ಶೈನಿ ಕ್ರಾಸ್ತಾಕ್ ಜನವರಿಚಾ ತೀನ್ ತಾರೀಕೆರ್ ಆಯ್ತಾರಾಚ್ಯಾ ಮಿಸಾ ಉಪ್ರಾಂತ್ ಕುಂದಾಪುರ್ ಕಥೊಲಿಕ್ ಸಭಾ ಘಟಕಾಚೊ ಅತ್ಮಿಕ್ ನಿರ್ದೇಶಕ್, ತಸೆಂ  ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊಚ್ಯಾ ಅಧ್ಯಕ್ಷಪಣಾ ಖಾಲ್ ಫುಲಾಂಚೊ ತುರೊ ದಿವ್ನ್ ಕುಂದಾಪುರ್ ಕಥೊಲಿಕ್ ಸಭಾ ತರ್ಫೆನ್ ಫಿರ್ಗಜ್ ಮಟ್ಟಾರ್ ಮಾನ್ ಕೆಲೊ.

        ಕನ್ನಡ ಕುರ್ದ್ರ್ಯಾರ್ ಮೂಳ್ ಘರ್ ಆಸೊನ್, ಶೈನಿ ಕ್ರಾಸ್ತಾ ಕುಂದಾಪುರ್ ಫಿರ್ಗಜೆಂತ್ ಯಿ ಸಭಾರ್ ವರ್ಷಾಂ ಥಾವ್ನ್ ವಸ್ತಿ ಕರ್ನ್ ಆಸ್ಚ್ಯಾ, ಶೈನಿ ಕ್ರಾಸ್ತಾಕ್ ಮಾನ್ ಕರ್ನ್ ’ಆಜ್ ಕಾಲ್ ಆಮ್ಚಿ ಕ್ರಿಸ್ತಾಂವಾಂ ಎಲಿಸಾಂವಾಂತ್ ಯಿ ಜಿಕೊನ್ ಯೆಂವ್ಚೆ ಅಪ್ರೂಪ್ ಜಾಲ್ಯಾ ವೇಳಾರ್ ಆಮ್ಚ್ಯಾ ಫಿರ್ಗಜೆಚೆಂ ಶೈನಿ ಧೈರಾನ್ ಪಂಚಾಯತ್ ಇಲೆಕ್ಷಾನಾಂತ್ ರಾವೊನ್ ಜಿಕೊನ್ ಆಯ್ಲ್ಯಾ. ಪಂಚಾಯತ್ ಇಲೆಕ್ಷನ್ ಲ್ಹಾನ್ಜ್ ಜಾಂವ್ಕ್ ಪುರೊ, ಪುಣ್ ಪಂಚಾಯತ್ ಚುನಾವಣಾಂತ್ ಯಿ  ಆಮ್ಚಿಂ ಕ್ರಿಸ್ತಾಂವಾಂ ಉಣಿ ಜಾವ್ನ್ ಆಯ್ಲ್ಯಾತ್ ಆಸ್ತಾಂ ಶೈನಿ ಪಂಚಾಯತ್ ಚುನಾವಣೆಂತ್ ಜಿಕೊನ್ ಆಯ್ಲೆಂ ಕ್ರಿಸ್ತಾಂವಾಕ್  ವ್ಹಡ್ ಏಕ್ ಗೌರವಾಚಿ ಗಜಾಲ್. ತಿ ವಿಂಚುನ್ ಆಯ್ಲ್ಯಾ ವ್ಯಾಪ್ತಿಂತ್ ತೆಂ ಬೊರಿ ಕಾಮಾ ಕರುಂದಿ, ತಿಕಾ ಯಶಸ್ವಿ ಭರಿತ್ ರಾಜಕೀಯ ಭವಿಶ್ಯ್ ಮಾಗ್ತಾಂ’ ಮ್ಹಣನ್ ವಿಗಾರ್ ಬಾಪ್ ಸ್ಟ್ಯಾನಿ ತಾವ್ರೊನ್  ಅಭಿನಂದನ್ ಪಾಠಯ್ಲೆಂ.

     ಸ್ವಾಗತ್ ಕರುನ್, ಶೈನಿ ಕ್ರಾಸ್ತಾಚಿ ಪರಿಚಯ್ ಕರ್‍ನ್ ದಿಲ್ಯಾ  ಕಥೊಲಿಕ್ ಸಭೆಚೊ ಅಧ್ಯಕ್ಷ್ ಬರ್ನಾಡ್ ಡಿಕೋಸ್ತಾನ್ ಶೈನಿ ಕ್ರಾಸ್ತಾಕ್ ಅಭಿನಂದನ್ ಪಾಟವ್ನ್,ಹ್ಯಾ ಸಂದರ್ಭಿ ಹಾಜರ್ ಆಸ್ಲ್ಯಾ ತಿಚ್ಯಾ ಪತಿ ಜೆಮ್ಸ್ ಕ್ರಾಸ್ತಾಕ್ ಯಿ,  ಶೈನಿಕ್ ರಾಜಕೀಯಾಂತ್ ಮೆತೆರ್ ಜಾಂವ್ಕ್ ಪ್ರೇರಣ್ ದಿಲ್ಯಾ ಖಾತಿರ್  ಹೊಗ್ಳಿಕ್ ಉಚಾರ್ಲಿ.

    ಹ್ಯಾಸಂದರ್ಭಿ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ,ಪ್ರಾಂಶುಪಾಲ್ ಬಾಪ್ ಮಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಫಿರ್ಗಜ್ ಉಪಾಧ್ಯಕ್ಷ್ ಲುವಿಸ್ ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸಭಾರ್ ಧರ್ಮ್ ಭಯ್ಣ್ಯೊ,  ಕಥೊಲಿಕ್ ಸಭೆಚೆ ಹುದ್ದೆದಾರ್ ಆನಿ ಸಾಂದೆ, ವಿವಿಧ್ ಸಂಘ್ ಸಂಸ್ಥ್ಯಾಚೆಂ ಹುದ್ದೆದಾರ್,ಆನಿ ಫಿರ್ಗಜ್ ಪ್ರಜಾ ಹಾಜರ್ ಆಸ್ಲಿ.  18 ಆಯೋಗಾಚಿಂ ಸಂಯೋಜಕಿ ತಸೆಂ ಕಥೊಲಿಕ್ ಸಭಾ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ಧನ್ಯವಾದ್ ಅರ್ಪಣ್ ಕೆಲೆಂ.