HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಅಚರಣೆ

JANANUDI.COM NETWORK

ಭಾರತ ದೇಶದ ಸಂವಿಧಾನವನ್ನು ಜಾರಿಗೆ ತಂದ ದಿನ ಗಣರಾಜ್ಯೋತ್ಸವ ದ ಆಚರಣೆಯನ್ನು ಬ್ಲಾಕ್ ಕಾಂಗ್ರೆಸ್‌ ಕಛೇರಿಯಲ್ಲಿ ಬೆಳಿಗ್ಗೆ ಗಂಟೆ 9.00ಕ್ಕೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣರವರು , ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್, ಶಂಕರ ಪೂಜಾರಿ, ಆಶಾ ಕಾರ್ವೆಲ್ಲೋ, ಜ್ಯೋತಿ ಡಿ. ನಾಯ್ಕ, ಶೋಭಾ ಸಚ್ಚಿದಾನಂದ, ಅಬ್ದುಲ್‌ ಕೋಡಿ, ಅಶೊಕ್ ಸುವರ್ಣ, ಕೆ ಶಿವಕುಮಾರ್, ಸದಾನಂದ ಖಾರ್ವಿ, ಮುನಾಫ ಕೋಡಿ, ಶ್ರೀನಿವಾಸ ಶೆಟ್ಟಿ, ಕೆ.ಸುರೇಶ್, ನಿತಿನ್ ಡಿಸೋಜಾ ಕೋಣಿ, ಕೆ ಸಚಿನ್ ಕುಮಾರ್, ಪಲ್ಲವಿ ಇನ್ನಿತರ ರು ಉಪಸ್ಶಿತರಿದ್ದರು.

ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಜಾತ್ಯಾತೀತ ರಾಷ್ಟ್ರ, ಯುವಕರು ಮತದಾರದಿಂದ ಹೊರಗುಳಿಯಬಾರದು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಭಾರತ ದೇಶ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ , ಎಲ್ಲಾ ಜಾತಿ , ಧರ್ಮ ಭಾಷೆಗಳನ್ನೊಳಗೊಂಡ ಜಾತ್ಯಾತೀತ ರಾಷ್ಟ್ರ , ಯುವಕರು ಮತದಾರದಿಂದ ಹೊರಗುಳಿಯಬಾರದು . ಜನರಿಗೆ ಒಳಿತನ್ನು ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು . ಅಭಿವೃದ್ಧಿಗೆ ಪ್ರತಿ ಮತವು ಮುಖ್ಯ ಆದರಿಂದ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ ಚನ್ನಬಸಪ್ಪ ಹಡಪದ್ ಅವರು ತಿಳಿಸಿದರು . ಇಂದು ಕೋಲಾರ ನಗರದ ಶ್ರೀ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ , 11 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು . ಮತದಾನ ಮೂಲಭೂತ ಹಕ್ಕು , ಮತದಾನದ ಮಹತ್ವ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ ಕುರಿತು ಜಾಗೃತಿ ಅವರು ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುವುದು . ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗುತ್ತಿದೆ . ಮತದಾರರು ಮತದಾನದ ಮಹತ್ವವನ್ನು ತಿಳಿಯಬೇಕು . ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯುವಕರು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ 1989 ರಲ್ಲಿ ಇಳಿಸಲಾಯಿತು . ಚುನಾವಣೆ ಆಯೋಗವು ನ್ಯಾಯ ನಿರ್ಭಿತವಾಗಿ ಚುನಾವಣೆಯನ್ನು ನಡೆಸುತ್ತಿದೆ . ಚುನಾವಣಾ ಅಭ್ಯರ್ಥಿಗಳು ಯಾವುದೇ ಜಾತಿ ಮತ ಧರ್ಮದ ಮೇಲೆ ಮತ ಕೇಳುವಂತಿಲ್ಲ . 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , 2011 ರಿಂದ ಜನವರಿ 25 ರನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ . “ ಮತದಾರರನ್ನು ಅಧಿಕಾರಯುಕ್ತ , ಜಾಗರೂಕ , ಸುರಕ್ಷಿತ ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವುದು . ಈ ವರ್ಷದ ಮತದಾರರ ದಿನಾಚರಣೆಯ ಘೋಷವಾಕ್ಯವಾಗಿದೆ . ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು , ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುತ್ತಿದೆ . 12 ನೇ ಶತಮಾನದಲ್ಲಿಯೇ ಉತ್ತಮ ಪ್ರಜಾಪ್ರಭುತ್ವದ ವ್ಯವಸ್ಥೆ ಇತ್ತು . ಬಸವಣ್ಣನವರ ಅನುಭವ ಮಂಟಪ ಉತ್ತಮ ಸಂಸತ್ ಆಗಿತ್ತು . ಹಿಂದೆ ಅನಕ್ಷರಸ್ಥರು , ದಲಿತರು , ಮಹಿಳೆಯರು , ಹಿಂದುಳಿದವರು , ಭೂರಹಿತರು , ಇವರಿಗೆ ಮತದಾನ ಮಾಡಲು ಅವಕಾಶ ಇರಲಿಲ್ಲ . ಆದರೆ ನಮ್ಮ ಸಂವಿಧಾನ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು . ಶ್ರೀಮಂತರೇ ಇರಲಿ , ಬಡವರೇ ಇರಲಿ ಎಲ್ಲರಿಗೂ ಒಂದೇ ಮತದ ಹಕ್ಕನ್ನು ನೀಡಲಾಗಿದೆ . ಪ್ರತಿ ವರ್ಷ ಜನವರಿ 1 ಕ್ಕೆ 18 ವರ್ಷ ತುಂಬಿದ ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು . ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ನೀಡಲಾಗುವುದು . ಜಿಲ್ಲೆಯಲ್ಲಿ 12,37,309 ಮತದಾರರಿದ್ದಾರೆ . ಇದರಲ್ಲಿ ಪುರುಷರು 6,18,139 ಹಾಗೂ ಮಹಿಳೆಯರು 6,19,170 ಮತದಾರರಿದ್ದಾರೆ . ಇದರಲ್ಲಿ 13,145 ಯುವ ಮತದಾರರನ್ನು ನೋಂದಣಿ ಮಾಡಲಾಗಿದೆ ಎಂದು ಮತದಾನದ ಶ್ರೇಷ್ಟತೆ ಬಗ್ಗೆ ಅರಿವು ಮೂಡಿಸಿದರು . ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಎನ್.ಎಂ.ನಾಗರಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು . ನಂತರ ಮಾತನಾಡಿ , ಭಾರತೀಯ ಚುನಾವಣಾ ಆಯೋಗ ಪ್ರಪಂಚದಲ್ಲೇ ಹೆಚ್ಚು ವಿಶ್ವಾಸನೀಯವಾಗಿದೆ . ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುತ್ತದೆ . ಬಿ.ಎಲ್.ಓ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು , ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು . ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಉತ್ತಮವಾಗಿ ಮಾಡುತ್ತಿದ್ದಾರೆ . ಮತದಾರರ ಪಟ್ಟಿಯ ಲೋಪದೋಷಗಳನ್ನು ಬಿ.ಎಲ್.ಓಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು . ಮತದಾರರು ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಷ್ಟ ಇಲ್ಲದವರು ನೋಟಾ ಆಯ್ಕೆಗೆ ಮತ ಚಲಾಯಿಸಬಹುದಾಗಿದೆ . ರಹಸ್ಯ ಮತದಾನವನ್ನು ಎಲ್ಲರೂ ಪಾಲಿಸಬೇಕು . ಇದರಗಳು ಉಲ್ಲಂಘನೆಯಾದರೇ ಕಾನೂನು ಅಪರಾಧವಾಗುತ್ತದೆ . ಪೂರ್ವಗ್ರಹ ಪೀಡಿತರಾಗದೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು . ಕೋಲಾರ ಉಪ ವಿಭಾಗಾಧಿಕಾರಿಗಳಾದ ವಿ.ಸೋಮಶೇಖರ್ ಅವರು ಮಾತನಾಡಿ , ಮತದಾರರ ಪಟ್ಟಿ ಪಾರದರ್ಶಕವಾಗಿದ್ದರೆ ಮಾತ್ರ ಪ್ರಜಾಪ್ರಭತ್ವ ಯಶಸ್ವಿಯಾಗುತ್ತದೆ . 18 ವರ್ಷ ತುಂಬಿದ ಎಲ್ಲಾ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು . ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು . ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಗಳಿಗೆ ಪ್ರಶಂಸನೀಯ ಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಯಿತು . ಪ್ರೌಢಶಾಲೆ , ಕಾಲೇಜು ಹಂತಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಿ ಸ್ಪರ್ಧೆಗಳನ್ನು ನಡೆಸಿದ್ದು , ಉತ್ತಮ ಮತದಾರರ ಸಾಕ್ಷರತಾ ಕ್ಲಬ್ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ತಹಶೀಲ್ದಾರರಾದ ಶೋಭಿತಾ , ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ , ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ತಿಮ್ಮಪ್ಪ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ , ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಗಂಗಾಧರ್ ರಾವ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ರಾ. ಸೇ. ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ. ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ

JANANUDI.COM NETWORK

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನ-2021 ಆಚರಣೆಯ ಅಂಗವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಕಾ ಬನ್ನಾಡಿ ಮಾತನಾಡಿ ಮತದಾನ ನಮ್ಮ ಹಕ್ಕು. ಕೆಲವು ಕಡೆ ನಗರ ಪ್ರದೇಶಗಳಲ್ಲಿ ಮತದಾನದಿಂದ ವಿದ್ಯಾವಂತರೆನಿಸಿಕೊಂಡವರು ಮತದಾನದಿಂದ ಹಿಂದೆ ಉಳಿಯುತ್ತಾರೆ. ಹಾಗೆ ಕೆಲವು ಕಡೆ ಅವಿದ್ಯಾವಂತರಿಗೆ ಮತದಾನದ ಮಹತ್ವದ ಬಗ್ಗೆ ಸಾಕಷು ತಿಳುವಳಿಕೆ ಇರುವುದಿಲ್ಲ. ನಾವು ನೀವು ಮತದಾನದ ಮಹತ್ವವನ್ನು ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಅರುಣ್ ಎ.ಎಸ್. ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಬೋಧಿಸಿದರು.

ಕುಂದಾಪುರ:ಬಿ.ರಮಾನಂದ ಭಟ್ ನಿಧನ.

JANANUDI.COM NETWORK


ಕುಂದಾಪುರದ ಹಿರಿಯ ವ್ಯಾಪಾರಿ,ಮುರಲೀಧರಕೃಷ್ಣ ಸ್ಟೊರ್ಸ್ ಮಾಲಕ,ಬಿ.ರಮಾನಂದ ಭಟ್,(86)ಶನಿವಾರ ರಾತ್ರಿ ನಿಧನರಾದರು.
ಕುಂದಾಪುರ ರಾಮಮಂದಿರ ರಸ್ತೆ ನಿವಾಸಿಯಾಗಿರುವ ಇವರು ಮೂವರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.ಇವರು ಕುಂದಾಪುರದ ಯುವಕ ಸಮಾಜದ ಕ್ರಿಯಾಶೀಲ ಪದಾಧಿಕಾರಿಯಾಗಿದ್ದರು.

ಜನಾರ್ಧನ ಖಾರ್ವಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಆಯ್ಕೆ

ವರದಿ : ಮಝರ್, ಕುಂದಾಪುರ


ಹಸಿಮೀನು ವ್ಯಾಪಾರಸ್ಥರ ಗಂಗೊಳ್ಳಿ ಇದರ 2021-22 ರ ಮೇ ಸಾಲಿನ ನೂತನ ಅಧ್ಯಕ್ಷರಾಗಿ, ಶ್ರೀ ರಕ್ತೇಶ್ವರಿ ಫಿಶರೀಸ್‍ನ ಗಾಳಿ ಜನಾರ್ಧನ (ಧನು) ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಘವೇಂದ್ರ ಖಾರ್ವಿ ಕಾರ್ಯದರ್ಶಿಯಾಗಿ ರವಿಶಂಕರ್ ಖಾರ್ವಿ , ಉಪಕಾರ್ಯದರ್ಶಿಯಾಗಿ ಮಂತಿ ರಾಘವೇಂದ್ರ ಖಾರ್ವಿ, ಕೋಶಾಧಿಕಾರಿಯಾಗಿ ದಿನೇಶ್ ಮುನ್ನಾ, ಲೆಕ್ಕಪರಿಶೋಧಕರಾಗಿ ಗಂಗಾಧರ ಖಾರ್ವಿ ಹಾಗೂ ಕಾರ್ಯಕಾರಿ ಸಮಿತಿಗೆ ಹತ್ತುಜನ ಸದಸ್ಯರು ಆಯ್ಕೆಗೊಂಡಿದ್ದಾರೆ.

ಭಾರತ ಸೇವಾದಳದಿಂದ ಸುಭಾಷ್ ಚಂದ್ರಬೋಸ್‍ರ ಜನ್ಮದಿನಾಚರಣೆ: ಭಾರತದ ಬಲಿಷ್ಠ ಸೇನೆಗೆ ಸುಭಾಷ್‍ಚಂದ್ರಬೋಸ್‍ರಿಂದ ಬುನಾದಿ- ಜಗನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಭಾರತ ದೇಶವು ವಿಶ್ವದಲ್ಲಿಯೇ ಬಲಿಷ್ಠ ಸೇನಾ ಬಲವನ್ನು ಹೊಂದಲು ಸುಭಾಷ್ ಚಂದ್ರಬೋಸ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬುನಾದಿ ಹಾಕಿದ್ದರೆಂದು ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿದರು.
ನಗರದ ಭಾರತ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ಸುಭಾಷ್ ಚಂದ್ರಬೋಸರ 125 ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಭಾವಚಿತ್ರಕ್ಕೆ ಪುಷಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ದೇಶವು ಬಲಿಷ್ಠವಾದ ಸೇನೆಯನ್ನು ಹೊಂದಬೇಕೆಂಬ ಕನಸನ್ನು ಬೋಸರು ಮೊದಲಿಗೆ ಕಂಡಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಲಕ್ಷಾಂತರ ಯೋಧರು ಸಜ್ಜಾಗಿದ್ದಾರೆ, ಯೋಧರ ಸೇವೆಯನ್ನು ಸಮಾಜವು ಇತ್ತೀಚಿನ ದಿನಗಳಲ್ಲಿ ಗೌರವಿಸುತ್ತಿರುವುದು ಸ್ವಾಗತಾರ್ಹವೆಂದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರಬೋಸ್ ಹಾಗೂ ಹರ್ಡೀಕರ್ ನಡುವೆ ಸ್ವಾಮ್ಯತೆ ಇದೆ, ಸುಭಾಷ್ ಚಂದ್ರಬೋಸರ ಜನ್ಮಜಯಂತಿಯನ್ನು ಪರಾಕ್ರಮ ದಿವಸ್ ಎಂದು ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಭಾಷ್ ಚಂದ್ರಬೋಸರು ಇಂಡಿಯನ್ ನ್ಯಾಷನಲ್ ಆರ್ಮಿ ಪಡೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದರೆ, ನಾ.ಸು.ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ದೇಶಾದ್ಯಂತ ಸಂಘಟಿಸಿ ಈ ಮೂಲಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಳಿಸಿದರೆಂದು ವಿವರಿಸಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ, ಸುಭಾಷ್ ಚಂದ್ರಬೋಸ್‍ರ ಐಎನ್‍ಎಸ್ ಪಡೆಯ ಸದಸ್ಯ ರಾಮರಾವ್ ಕೋಲಾರಕ್ಕೆ ಬಂದ ದಿನಗಳನ್ನು ಸ್ಮರಿಸಿಕೊಂಡು, ದೇಶಕ್ಕಾಗಿ ಪ್ರಾಣತೆತ್ತವರ ಕುಟುಂಬಗಳನ್ನು ಸಮಾಜ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸುಭಾಷ್ ಚಂದ್ರಬೋಸರ ಆದರ್ಶಗಳನ್ನು ಸೇವಾದಳದ ಮೂಲಕ ಪ್ರತಿ ಶಾಲಾ ಮಕ್ಕಳಿಗೂ ತಲುಪಿಸಬೇಕೆಂದು ಸಲಹೆ ನೀಡಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಬೈರೇಗೌಡ ಮಾತನಾಡಿ, ಬ್ರಿಟೀಷ್ ಸೇನೆಯಲ್ಲಿ ಉತ್ತಮ ಅ„ಕಾರಿಯಾಗಿದ್ದರೂ ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರತ್ಯೇಕ ಪಡೆಯನ್ನು ಕಟ್ಟಿದ ಸುಭಾಷ್ ಚಂದ್ರಬೋಸ್ ಎಲ್ಲರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ತಾಲೂಕು ಅಧ್ಯಕ್ಷ ವೈ.ಶಿವಕುಮಾರ್, ಕಾರ್ಯದರ್ಶಿ ಶ್ರೀರಾಮ್, ಸಂಪತ್‍ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಸಮಾಜ ಸೇವಕ ಜ್ಯೂಸ್‍ನಾರಾಯಣಸ್ವಾಮಿ, ಮುನಿವೆಂಕಟ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ರಾಜೇಶ್‍ಸಿಂಗ್, -Àಲ್ಗುಣ, ಶಿವಕುಮಾರ್‍ಗೌಡ, ಅಂತರಾಷ್ಟ್ರೀಯ ಕ್ರೀಡಾಪಟು ಕಾಶೀರಾಜ್, ಚಂದ್ರೇಗೌಡ, ಜಗನ್ನಾಥ್, ಚಾನ್‍ಪಾಷಾ ಇತರರು ಉಪಸ್ಥಿತರಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ಸೇವಾದಳದ ಪದ್ಧತಿಯಂತೆ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಶ್ರೀನಿವಾಸಪುರ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪ್ರಕಟಿಸಿದರು.
ಕೂರಿಗೇಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಅಡ್ಡಗಲ್: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಟಿ ಮಹಿಳೆ. ಗೌನಿಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಟಿ ಮಹಿಳೆ. ಕೋಡಿಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ, ಲಕ್ಷ್ಮೀಪುರ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ರೋಣೂರು: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ಂiÀiಲ್ದೂರು: ಅಧ್ಯಕ್ಷ:ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ಬೈರಗಾನಹಳ್ಳಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ರಾಯಲ್ಪಾಡ್: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ನೆಲವಂಕಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ.
ಪುಲಗೂರುಕೋಟೆ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ಸೋಮಯಾಜಲಪಲ್ಲಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಟಿ. ಹೊದಲಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ಮುದಿಮಡಗು: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ; ಸಾಮಾನ್ಯ ಮಹಿಳೆ. ತಾಡಿಗೋಳ್: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ನಂಬಿಹಳ್ಳಿ: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಮಾಸ್ತೇನಹಳ್ಳಿ: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಮಾನ್ಯ ಮಹಿಳೆ. ಯರ್ರಂವಾರಿಪಲ್ಲಿ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಆರಿಕುಂಟೆ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಮಾನ್ಯ. ಜೆ.ತಿಮ್ಮಸಂದ್ರ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಚಲ್ದಿಗಾನಹಳ್ಳಿ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಲಕ್ಷ್ಮೀಸಾಗರ: ಅಧ್ಯಕ್ಷ:ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಕೊಳತೂರು: ಅಧ್ಯಕ್ಷ: ಎಸ್‍ಟಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಮುತ್ತಕಪಲ್ಲಿ: ಅಧ್ಯಕ್ಷ: ಎಸ್‍ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ದಳಸನೂರು: ಅಧ್ಯಕ್ಷ: ಎಸ್‍ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.

ಕುಂದಾಪುರ್: ಪವಿತ್ರ್ ಪುಸ್ತಕ್ ಆಯ್ತಾರ್ ಆಚರಣ್

JANANUDI.COM NETWORK


ಕುಂದಾಪುರ್,ಜ.24: ಕುಂದಾಪುರ್ ರೋಜಾರ್ ಮಾಯೆಚ್ಯಾ ಫಿರ್ಗಜೆಂತ್ ಪವಿತ್ರ್ ಪುಸ್ತಕ್ ಆಯೋಗಾನ್ ಪವಿತ್ರ್ ಪುಸ್ತಕ್ ಆಯ್ತಾರ್ ಆಚರಣ್ ಕೆಲೊ.
ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾನ್ ಪವಿತ್ರ್ ಬಲಿದಾನ್ ಭೆಟವ್ನ್ ಪವಿತ್ರ್ ಪುಸ್ತಕಾಚ್ಯಾ ಮಹತ್ವಾ ವಿಶಿಂ ಸಮ್ಜೊಣಿ ದಿವ್ನ್ ‘ಭುಗ್ರ್ಯಾನಿಂ ಪವಿತ್ರ್ ಪುಸ್ತಕ್ ವಾಚ್ಚ್ಯಾ ವಿಶ್ಯಾಂತ್ ಆಸಕ್ತ್ ದಾಖಯ್ಜೆ. ವ್ಹಡಿಲಾನಿಂ ತಾಂಚ್ಯಾ ಸಾಂಗಾತಾ ಬಸೊನ್ ಪವಿತ್ರ್ ಪುಸ್ತಕ್ ವಾಚುಂಕ್ ಕರ್ನ್ ಪವಿತ್ರ್ ಪುಸ್ತಕಾಚಿ ರುಚ್ ದಾಖಯ್ಜೆ. ಪವಿತ್ರ್ ಪುಸ್ತಕ್ ನಾ ಕೇವಲ್ ಏಕ್ ಪುಸ್ತಕ್, ತೊ ಪವಿತ್ರ್ ಗ್ರಂಥ್ ಜಾವ್ನಾಸಾ’ ಮ್ಹಣನ್ ಸಂದೇಶ್ ದಿಲೊ. ಸೈಂಟ್ ಮೇರಿಸ್ ಪಿ.ಯು.ಕಾಲೇಜಿಚೆ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಸಹ ಭೆಟವ್ಣಿ ಕೆಲಿ.
ವಿೂಸಾ ಉಪ್ರಾಂತ್ ಮಾ|ಬಾ|ವಿಜಯ್ ಡಿಸೋಜಾನ್ ಬೈಬಲ್ ಸವಾಲಾಂಚೊ ಸ್ಫರ್ಧೊ ಚಲವ್ನ್ ವೆಲೊ. ವಿಗಾರ್ ಮಾಬಾ|ಸ್ಟ್ಯಾನಿ ತಾವ್ರೊನ್ ಇನಾಮ್ ಜಾವ್ನ್ 10 ಜಣ್ ವಿಜೇತಾಂಕ್ ಬೈಬಲ್ ಡೈರಿ ದಿಲ್ಯೊ. ಪವಿತ್ರ್ ಪುಸ್ತಕ್ ಆಯೋಗಾಚಿ ಸಂಚಾಲಕಿ ಮರಿಯಾ ಬಾರೆಟ್ಟೊ ಆನಿ ಆಯೋಗಾಚೆಂ ಸಾಂದೆ ಹಾಜರ್ ಆಸ್ಲೆಂ
.

ಕೊಟೇಶ್ವರ ಕಟ್ಕರೆಯಲ್ಲಿ ಬಾಲ ಯೇಸುವಿನ ವಾರ್ಷಿಕ ಮಹೊತ್ಸೋವ :ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳಿದರೆ ದೇವರ ಮಕ್ಕಳಾಗುತ್ತೇವೆ

JANANUDI.COM NETWORK


ಕುಂದಾಪುರ,ಜ.23 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 23 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ನಡೆಯಿತು. ಕಾರ್ಮೆಲ್ ಯಾಜಕ ಸಂಸ್ಥೆ ಕರ್ನಾಟಕ – ಗೋವಾದ ಪ್ರೋವಿನ್ಸೀಯಲ್ ಅತೀ ವಂ ಫಾ| ಪಿಯುಸ್ ಜೆಮ್ಸ್ ಡಿಸೋಜಾ ಇವರು ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳಿದರೆ ದೇವರ ಮಕ್ಕಳಾಗುತ್ತೇವೆ’ ಎಂದು ಸಂದೇಶ ಸಾರಿ ‘ಯೇಸು ಸ್ವಾಮಿ, ತಮ್ಮ ರಕ್ತ ಸಂಬಂಧದ ಅಣ್ಣ ತಮಂದಿರು ತಮ್ಮನ್ನು ಭೇಟಿ ಮಾಡಲು ಬಂದಾಗ, ತಮ್ಮ ಶಿಷ್ಯರನ್ನು ಮತು ಹಿಂಬಾಲಕರನ್ನು ತೋರಿಸಿ ನನ್ನನ್ನು ನನ್ನ ತತ್ವಗಳನ್ನು ಪಾಲಿಸಿ ಅದರಂತೆ ನಡೆಯುವರೇ ನನ್ನ ನಿಜವಾದ ಅಣ್ಣ ತಮ್ಮಂದಿರು, ಸಂಬಂಧಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ. ಆದರೆ ಯೇಸುವಿನ ತತ್ವಗಳನ್ನು ಅಳವಡಿಸಿಕೊಂಡು, ಬಡ ಬಗ್ಗರಿಗೆ ದೀನ ದಲಿತರಿಗೆ, ಕಷ್ಟದಲ್ಲಿರು ಜನರನ್ನು ತಮ್ಮ ಅಣ್ಣ ತಮ್ಮಂದಿರು ಅಂದುಕೊಂಡು ಅಂತವರ ಮೇಲೆ ದಯಾಮಯರಾಗಿ ಅವರ ಸೇವೆ ಮಾಡುತ್ತಾರೊ, ಅವರು ದೇವರ ಮಕ್ಕಳಾಗುತ್ತಾರೆ, ಹಾಗಾಗಿ ನಾವು ಅದೆ ರೀತಿ ಬದುಕಿ ದೇವರ ಮಕ್ಕಳಾಗೋಣ’ ಎಂದು ತಿಳಿಸಿದರು
ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ 3 ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಂಡಿತ್ತು. ಈ ಧ್ಯಾನ ಕೂಟವನ್ನು ಕಲ್ಮಾಡಿ ಚರ್ಚಿನ ವಂ|ಫಾ|ಆಲ್ಬನ್ ಡಿಸೋಜಾ ಇವರು ನೆಡೆಸಿಕೊಟ್ಟರು. ಮಹಾ ವಾರ್ಷಿಕದ ಈ ಉತ್ಸವದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಉತ್ಸವದ ಕಾರ್ಮೆಲ್ ಸಂಸ್ಥೆಯ ಯಾಜಕರಿಗೆ ಶುಭಾಶಯಗಳನ್ನು ಕೋರಿದರು.
ಕಾರ್ಮೆಲ್ ಸಂಸ್ಥೆಯ ಪ್ರಥಮ ಸಲಯೆಗಾರ ಫಾ|ಜಾರ್ಜ್ ಸಾಂತುಮಾಯೆರ್, ರಿಶಿವನ- ರಾಣಿಪುರ ಇದರ ನಿರ್ದೇಶಕರಾದ ವಂ ಫಾ| ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಅ| ವಂ ಫಾ| ವಿನ್ಸೆಂಟ್ ಸೆರಾವೊ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ವಂ ಫಾ|ದೀಪ್ ಫೆರ್ನಾಂಡಿಸ್, ಕೋಟೆಶ್ವರದ ವಂ|ಫಾ|ಸಿರಿಲ್ ಮಿನೇಜಸ್ ವಂ |ಫಾ|ವಿಜಯ್ ಡಿಸೋಜಾ, ವಂ ಫಾ|ರಾಯನ್ ಪಾಯ್ಸ್, ಇಟಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮೆಲ್ ಸಂಸ್ಥೆಯ ವಂ ಫಾ|ದೊನಾತ್ ರೇಬೆರೊ ಇವರಲ್ಲದೆ ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು ಹಾಗೇ ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಈ ಉತ್ಸವದ ಬಲಿದಾನದಲ್ಲಿ ಭಾಗಿಯಾದರು. ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ರೆಕ್ಟರ್ ಧರ್ಮಗುರು ವಂ|ಒಲ್ವಿನ್ ಸಿಕ್ವೇರ ವಂದಿಸಿದರು.