HOLY ROSARY CHURCH, KUNDAPUR – 450 th JUBILEE SOUVENIR 2021

ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟ ತಕ್ಷಣ ನಿಲ್ಲಿಸಬೇಕೆಂದು ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲದ ಸದಸ್ಯರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆಂದೋಲನದ ಸದಸ್ಯರು, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕೆಂದು ಮಹಿಳೆಯರು ಕಳೆದ 6 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ರಾಜ್ಯದ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಈಗಾಗಲೇ ಮಹಿಳೆಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದಾರೆ.
ಇದನ್ನು ಗಮನಿಸಿದ ಉಚ್ಛ ನ್ಯಾಯಾಲಯವು ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದ್ದರೂ ಅಕ್ರಮ ಮದ್ಯ ಮಾರಾಟ ಮಾತ್ರ ಇದುವರೆಗೂ ನಿಂತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹಾಗಾಗಿ ನ್ಯಾಯಾಲಯದ ಆದೇಶದಂತೆ ತಕ್ಷಣವೇ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಸರ್ಕಾರ ಈ ಆದೇಶವನ್ನು 15 ದಿನಗಳ ಒಳಗಾಗಿ ಕಾರ್ಯರೂಪಕ್ಕೆ ತಂದು ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿದ್ದು, ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತೀವ್ರತರಹದ ಉಗ್ರ ಹೋರಾಟವನ್ನು ಆರಂಭಿಸುತ್ತೇವೆಂದು ಎಚ್ಚರಿಕೆ ನೀಡಿದರು.
ಈ ಸಂದಭದಲ್ಲಿ ಆಂದೋಲದ ಸದಸ್ಯರಾದ ಶಾಂತಾ, ಎ.ನಳಿನಿಗೌಡ, ಸಂಧ್ಯಾ, ಸುನಿತಾ, ಖುಷ್ಬು, ಪವಿತ್ರ, ವಿನುತಾ, ಪವಿತ್ರ, ಮಹಾಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ರೈತರು ತಮ್ಮ ಕ್ಷೇತ್ರದಲ್ಲಿ ಜೇನು ಸಾಕಾಣಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು :ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಪುರ: ರೈತರು ತಮ್ಮ ಕ್ಷೇತ್ರದಲ್ಲಿ ಜೇನು ಸಾಕಾಣಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಾಲ್ಲೂಕು ತೊಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತೋಟಗಾರಿಕಾ ಕಚೇರಿ ಸಭಾಂಗಣದಲ್ಲಿ ಬುಧವಾರ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ರೈತರಿಗೆ ಜೇನು ಸಾಕಾಣಿಕೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಜೇನ್ನೊಣಗಳು ಹೂಗಳ ಪರಾಗಸ್ಪರ್ಶಕ್ಕೆ ಸಹಕರಿಸುತ್ತವೆ. ಇದರಿಂದ ಹಣ್ಣಿನ ಬೆಳೆಗಳಲ್ಲಿ ಅಧಿಕ ಫಸಲು ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತೋಟಗಾರಿಕಾ ಸಹಾಯಕ ನಿರ್ಧೇಶಕ ಎ.ಬೈರಾರೆಡ್ಡಿ ಮಾತನಾಡಿ, ಜೇನು ಕಾಕಾಣಿಕೆ ಮಾಡುವ ರೈತರಿಗೆ ತೋಟಗಾರಿಕಾ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಜೇನು ಸಾಕಾಣಿಕೆ ಪೆಟ್ಟಿಗೆ ಖರೀದಿಸಲು ಆರ್ಥಿಕ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ಅರ್ಹ ಫಲಾನುಭವಿಗಳು ಈ ಸೌಲಭ್ಯ ಪಡೆದುಕೊಂಡು ಜೇನು ಸಾಕಾಣಿಕೆ ಮಾಡಬೇಕು ಎಂದು ಹೇಳಿದರು.
ತೋಟಗಾರಿಕೆ ಅಧಿಕಾರಿಗಳಾದ ಮಂಜುನಾಥ್, ಹರೀಶ್ ಕುಮಾರ್, ರಮ್ಯರಾಣಿ, ನರಸಿಂಹಯ್ಯ, ಮುರಳಿ, ಈಶ್ವರ್, ವೇಣು ಇದ್ದರು.

ಕುಂದಾಪುರ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆ

JANANUDI.COMNETWORK


ಕುಂದಾಪುರ,ಜ. ಇಲ್ಲಿನ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಹೆಣ್ಣು ಮಕ್ಕಳ ಕುರಿತು ಅರಿವು ಮೂಡಿಸಿದರು. ಸಂತ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಚರಿಸಿದ್ದರು.
ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಪ್ರೌಢಶಾಲೆ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಶಾರದ ವಂದಿಸಿದರು.

ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು : ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಉತ್ತಮ ಆಶಯಗಳ ಫಲವಾಗಿ ದೇಶ ಪ್ರಗತಿ ಪಥದಲ್ಲಿ ನಡೆಯಲು ಸಾಧ್ಯವಾಗಿದೆ. ಸಮಾಜದಲ್ಲಿ ಸಾಮರಸ್ಯ ಉಳಿದಿದೆ. ಕಾನೂನನ್ನು ಗೌರವಿಸುವವರನ್ನು ಕಾನೂನು ಗೌರವಿಸುತ್ತದೆ ಎಂದು ಹೇಳಿದರು.
ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಹಿರಿದು. ಅವರ ದೂರದೃಷ್ಟಿಯ ಫಲವಾಗಿ ಇಂದಿನ ಸಂವಿಧಾನ ರಚನೆಯಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ವಕೀಲರ ಸಂಘದ ಕಚೇರಿಯನ್ನು ಉದ್ಘಾಟಿಸಲಾಯಿತು.
ಅಪರ ಸಿವಿಲ್ ನ್ಯಾಯಾಧೀಶ ನಾಗೇಶ್ ನಾಯಕ್, ವಕೀಲರ ಸಂಘದ ಅಧ್ಯಕ್ಷ ಕೆ.ಶಿವಪ್ಪ, ಉಪಾಧ್ಯಕ್ಷ ಗಂಗಿರೆಡ್ಡಿ, ಖಜಾಂಜಿ ಟಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ಕಾರ್ಯದರ್ಶಿ ರೂಪ, ವಕೀಲರಾದ ಶ್ರೀನಿವಾಸಗೌಡ, ಅರ್ಚನಾ, ಮುಳೀಧರ್, ಕೆ.ವಿನಯ್ ಕುಮಾರ್, ಎಂ.ಸಿ.ಶಿವಶಂಕರ್, ಮುರಳಿ, ರಾಧಾಕೃಷ್ಣ ಇದ್ದರು.

ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗೆ ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಸ್ವಾಂತಂತ್ರ್ಯ ಬಂದಾಗ ಮಾತ್ರ ಬದುಕು ಹಸನಾಗಲು ಸಾಧ್ಯ. ಆದರೆ ಸ್ವಾತಂತ್ರ್ಯಾನಂತರವೂ ಎಲ್ಲರಿಗು ಆರ್ಥಿಕ ಸ್ವಾತಂತ್ರ್ಯ ಎಂಬುದು ಮರೀಚಿಕೆಯಾಗಿ ಉಳಿದಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ಸಾರಥ್ಯದಲ್ಲಿ ನಾವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ಪಡೆದುಕೊಂಡಿದ್ದೇವೆ. ಆದರೆ ಬದ್ಧತೆಯ ಕೊರತೆಯಿಂದಾಗಿ ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಆದ್ದರಿಂದಲೇ ಸಮಾಜದಲ್ಲಿ ಮೇಲು ಕೀಳು ಭಾವನೆ ಜೀವಂತವಾಗಿದೆ. ಇಂಥ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ಬದ್ಧ ಹಕ್ಕು ಹಾಗೂ ಕರ್ತವ್ಯಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಅತ್ಯುತ್ತಮ ಸಂವಿಧಾನ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಧನ್ಯತಾ ಭಾವದಿಂದ ಸ್ಮರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇರ್ ಆಫ್ ಅಡ್ರಸ್ ಫಿಲಂಸ್À ಕವಿ ಆರ್.ಚೌಡರೆಡ್ಡಿ ಪನಸಮಾಕನಹಳ್ಳಿ ಅವರ ‘ಯುಗದ ಜ್ಯೋತಿ ಅಂಬೇಡ್ಕರ್’ ಗೀತೆಯ ವಿಡಿಯೋವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಬಿಡುಗಡೆ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಲಾಶಂಕರ್, ಸುಬ್ರಮಣಿ ಇದ್ದರು,

ರಾಜ್ಯ ಗೊಲ್ಲ ಅಭಿವೃದ್ಧಿ ನಿಗಮದಿಂದ ಯಾದವ ಗೊಲ್ಲರಿಗೆ ಪ್ರಯೋಜನವಿಲ್ಲ – ಕೃಷ್ಣ ಗೊಲ್ಲ ಕೋಟೇಶ್ವರದಲ್ಲಿ ತಾಲೂಕು ಗೊಲ್ಲ ಸಮುದಾಯ ವಾರ್ಷಿಕ ಅಧಿವೇಶನ

ವರದಿ : ಕೆ.ಜಿ.ವೈದ್ಯ,ಕುಂದಾಪುರ


ಕುಂದಾಪುರ :  ಕರ್ನಾಟಕ ರಾಜ್ಯದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯದ ಸಂಘಟನೆ ತೀರಾ ದುರ್ಬಲವಾಗಿದೆ. ಇಲ್ಲಿ 35 ಲಕ್ಷ ಮಂದಿ ಗೊಲ್ಲ ಸಮುದಾಯದವರಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸರ್ಕಾರಿ ಸೌಲಭ್ಯಗಳಿಲ್ಲ. ಗೊಲ್ಲ ಅಭಿವೃದ್ಧಿ ನಿಗಮವನ್ನು  ಸರ್ಕಾರ ರಚಿಸಿದ್ದರೂ ಅಲ್ಲಿ ಕಾಡುಗೊಲ್ಲ ಎಂದು ನಮೂದಿಸಿದ್ದರಿಂದ ಯಾದವ ಜನಾಂಗದವರಾದ ಈ ರಾಜ್ಯದ ಗೊಲ್ಲರು ಸೌಲಭ್ಯವಂಚಿತರಾಗಿದ್ದಾರೆ. ಗೊಲ್ಲ ಎಂದರೆ ಕಾಡುಗೊಲ್ಲ ಮತ್ತು ಯಾದವ ಎಂದರೆ ಉತ್ತರ ಪ್ರದೇಶ ಮೂಲದವರೆಂದು ಸರ್ಕಾರ ಗುರುತಿಸುವುದರಿಂದ ದುರ್ಬಲ ವರ್ಗದವರಾದ ಕರ್ನಾಟಕದ ಗೊಲ್ಲರು ಸಂಕಷ್ಟದಲ್ಲೇ ಇರುವಂತಾಗಿದೆ. ಆದ್ದರಿಂದ ನಾವು ಸಂಘಟನೆಯನ್ನು ಬಲಗೊಳಿಸಿ ಸರ್ಕಾರಕ್ಕೆ ಅಹವಾಲು ಸಲ್ಲಿಸಬೇಕಾಗಿದೆ   ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಗೊಲ್ಲ ಹೇಳಿದರು.
ಕುಂದಾಪುರ ತಾಲೂಕು ಗೊಲ್ಲರ (ಯಾದವ) ಸಮಾಜ ಸಂಘದ ವಾರ್ಷಿಕ ಅಧಿವೇಶನದ ಸಂದರ್ಭದಲ್ಲಿ, ಎರಡನೇ ಬಾರಿ ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಗ್ಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 
ಕೋಟೇಶ್ವರ ಮಾರ್ಕೊಡು ಸ್ವಾಗತ್ ಸಭಾಂಗಣದಲ್ಲಿ ನಡೆದ ಈ ಅಧಿವೇಶನದ ಸಭಾಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ರಾಮು ಗೊಲ್ಲ ವಹಿಸಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿ ಮುಂದಿನ ಅವಧಿಗೂ ಹಾಲಿ ಅಧ್ಯಕ್ಷ ರಾಮು ಗೊಲ್ಲರೇ ಅಧ್ಯಕ್ಷರಾಗಿ ಸರ್ವಾನುಮತದಿಂದ ಮರು ಆಯ್ಕೆಗೊಂಡರು. ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಎಸ್. ಪುಟ್ಟಣ್ಣ ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕು ಸಂಘಗಳ ವತಿಯಿಂದ ಜಾಗ ಗುರುತಿಸಿದರೆ ಗೊಲ್ಲ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ 10 ಲಕ್ಷ ರೂ. ಸಿಗುತ್ತದೆ. ಜಿಲ್ಲಾ ಸಂಘದ ಸಮುದಾಯ ಭವನ ನಿರ್ಮಾಣಕ್ಕಾಗಿ ಬ್ರಹ್ಮಾವರದಲ್ಲಿ 25 ಸೆಂಟ್ಸ್ ಸ್ಥಳ ಗುರುತಿಸಲಾಗಿದ್ದು ಮುಂದಿನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ವಿವರ ನೀಡಿದರು. 
ಜಿಲ್ಲಾ ಕೋಶಾಧಿಕಾರಿ ವೆಂಕಟರಮಣ, ಪ್ರಕಾಶ್ ಗೊಲ್ಲ, ಅಣ್ಣಯ್ಯ ಗೊಲ್ಲ, ತಾಲೂಕು ಸಂಘದ ಗೌರವಾಧ್ಯಕ್ಷ ರಾಜೀವ ಗೊಲ್ಲ ಮಾತನಾಡಿ ಸಂಘಟನೆಯನ್ನು ಬಲಗೊಳಿಸುವಂತೆ ಮನವಿ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಮಾತನಾಡಿ, ಜಿಲ್ಲೆಯ ಸಮಗ್ರ ಗೊಲ್ಲ ಸಮುದಾಯದವರ ಮಾಹಿತಿ ಮತ್ತು ಇತಿಹಾಸವನ್ನೊಳಗೊಂಡ ‘ಗೋಕುಲ’  ಸಮಗ್ರ ಸಂಚಿಕೆಯೊಂದನ್ನು ಹೊರತರಲು ನಿರ್ಣಯಿಸಿರುವುದಾಗಿ ವಿವರಿಸಿದರು. ಗೊಲ್ಲ ಸಮುದಾಯದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿದ್ಯಾನಿಧಿಯನ್ನು ಸ್ಥಾಪಿಸುವುದಾಗಿಯೂ, ಜಿಲ್ಲೆಯಲ್ಲಿ ನೂತನವಾಗಿ ಗ್ರಾಮ ಪಂಚಾಯತ್ ಗಳಿಗೆ ಆಯ್ಕೆಗೊಂಡ ಗೊಲ್ಲ ಸಮುದಾಯದ ಸದಸ್ಯರನ್ನು ಮುಂದಿನ ಫೆ.28 ರಂದು ಬ್ರಹ್ಮಾವರದಲ್ಲಿ ಆಯೋಜಿಸಿರುವ ಬೃಹತ್ ಸಮಾರಂಭದಲ್ಲಿ ಸನ್ಮಾನಿಸುವುದಾಗಿಯೂ ತಿಳಿಸಿದರು. 
ರಾಘವೇಂದ್ರ ಗೊಲ್ಲ ಸ್ವಾಗತಿಸಿ ವಂದಿಸಿದರು. ಸುರೇಶ್ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು
.

ಭಾರತ ಸೇವಾದಳದಿಂದ 72 ನೇ ಗಣರಾಜ್ಯೋತ್ಸವ ಪ್ರತಿ ಮಗುವನ್ನು ದೇಶಪ್ರೇಮಿಗಳಾಗಿಸಿ- ಬಿಇಒ ನಾಗರಾಜಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಶಿಕ್ಷಕರು ಮತ್ತು ಪ್ರತಿಯೊಬ್ಬ ಭಾರತೀಯರು ತಮ್ಮ ಮಕ್ಕಳನ್ನು ದೇಶ ಪ್ರೇಮಿಗಳಾಗಿ ಬೆಳೆಸಲು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಆದರ್ಶವಾಗಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿ ಆವರಣದಲ್ಲಿ ಭಾರತ ಸೇವಾದಳ, ಬಿಇಒ ಕಚೇರಿ ಹಾಗೂ ಮೂರು ಸರಕಾರಿ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ 72 ನೇ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆವಿಗೂ ವೈವಿಧ್ಯ ಸಂಸ್ಕøತಿ ಭಾಷೆ ರಾಜ್ಯಗಳ ನಡುವೆಯೂ ಅಖಂಡವಾಗಿರುವ ಭಾರತ ದೇಶವನ್ನು ಯಾವುದೇ ಶಕ್ತಿ ವಿಭಜಿಸಲು ಸಾಧ್ಯವಾಗದಂತ ಬಲಿಷ್ಠಗೊಳಿಸಬೇಕಾದರೆ ಸಂವಿಧಾನದ ಪಾಲನೆ ಅತ್ಯಗತ್ಯ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಮೂಹಿಕ ಸಾಂಕ್ರಾಮಿಕ ರೋಗಗಳು ಮಾನವ ಕುಲಕ್ಕೆ ಸವಾಲು ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಸಮಾನತೆ, ಸಹೋದರತೆ, ಸಹಿಷ್ಣುತೆ ತತ್ವಗಳ ಜೊತೆಗೆ ಸ್ವಚ್ಛತೆ ಹಾಗೂ ಸ್ವಾಸ್ಥ್ಯವನ್ನು ಪಾಲಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚೌಡಪ್ಪ, ಸೇವಾದಳ ಕಾರ್ಯದರ್ಶಿ ಹಾಗೂ ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್, ಪದಾ„ಕಾರಿಗಳಾದ ವಿ.ಪಿ.ಸೋಮಶೇಖರ್, ವೈ.ಶಿವಕುಮಾರ್, ಶ್ರೀರಾಮ್, ಸಂಪತ್‍ಕುಮಾರ್, ಅಪ್ಪಿ ನಾರಾಯಣಸ್ವಾಮಿ, ಆರ್.ಗೋಪಾಲ್, ಮುನೇಶ್, ರಾಜೇಶ್‍ಸಿಂಗ್, ಫಲ್ಗುಣ, ಪೈಂಟರ್ ಬಷೀರ್, ಮುನಿವೆಂಕಟ್, ಮಣಿ, ಮನೋಹರ್, ಮೂರು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ, ಬಿಇಒ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಭಾರತ ಸೇವಾದಳ ನಿಯಮಗಳಂತೆ ವಂದೇ ಮಾತರಂ, ರಾಷ್ಟ್ರಗೀತೆ, ಝಂಡಾ ಗೀತೆಗಳ ಸಾಮೂಹಿಕ ಗಾಯನ ನೆರವೇರಿತು.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೂರು ತಿಂಗಳ ನಂತರ ನಿವೃತ್ತರಾಗುತ್ತಿರುವ ಕೆ.ಎಸ್.ನಾಗರಾಜಗೌಡರನ್ನು ಮೂರು ಶಾಲೆಗಳ ಶಿಕ್ಷರಿಯರು ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಿಹಿ ವಿತರಣೆ ನಡೆಯಿತು.
ಭಾರತ ಸೇವಾದಳ ಸಂಘಟಿಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.

ಕೋಲಾರ:ಜನರಿಗೆ ಹೊರೆಯಾದ ತೈಲ ಬೆಲೆ ಏರಿಕೆಗೆ ರಾಜ್ಯೋತ್ಸವ ಪರ್ಯಾಯವಾಗಿ ರೈತ ಗಣರಾಜ್ಯೋತ್ಸವವನ್ನು ವಿಬಿನ್ನವಾಗಿ ರೈತಸಂಘದಿಂದ ಆಚರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜನ ಸಾಮಾನ್ಯರಿಗೆ ಹೊರೆಯಾಗುತ್ತಿರುವ ತೈಲ ಬೆಲೆಗಳ ಏರಿಕೆಗೆ ಕಡಿವಾಣ ಹಾಕಿ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕೆಂದು ಗಣರಾಜ್ಯೋತ್ಸವ ಪರ್ಯಾಯವಾಗಿ ರೈತ ಗಣರಾಜ್ಯೋತ್ಸವವನ್ನು ವಿಬಿನ್ನವಾಗಿ ರೈತಸಂಘದಿಂದ ಗಾಂಧಿ ಪ್ರತಿಮೆಯಿಂದ ಎತ್ತಿನ ಬಂಡಿ ಹಾಗು ನೇಗಿಲುಗಳ ಮೂಲಕ ಹೊಸ ಬಸ್ ನಿಲ್ದಾಣದ ವರಗು ರ್ಯಾಲಿ ನಡೆಸಿ ಪಿಎಸ್‍ಐ ಅಣ್ಣಯ್ಯ ಮುಖಾಂತರ ಮಾನ್ಯ ರಾಷ್ಟ್ರಪತಿರವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ರ್ಯಾಲಿಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಸರ್ಕಾರ ಜನಾಭಿಪ್ರಾಯ ವಿಲ್ಲದೆ ಏಕಾಏಕಿ ರೈತ, ದಲಿತ, ಕಾರ್ಮಿಕ, ವಿರೋಧಿ ಕಾಯ್ದೆಗಳನ್ನು ರಾತ್ರೋರಾತ್ರಿ ಜಾರಿಗೆ ತಂದು ಕೋಟ್ಯಾಂತರ ಬಡ ಕುಟುಂಬಗಳನ್ನು ಬೀದಿ ಪಾಲು ಮಾಡುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇಡೀ ದೇಶವನ್ನೇ ಖಾಸಗಿ ಕಂಪನಿ ಮಾಲೀಕರ ಕೈಗೆ ಕೊಟ್ಟು ಮತ್ತೆ ಗುಲಾಮಗಿರಿಗೆ ದೇಶವನ್ನು ಕೊಡುವ ಸಮಯ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಮತ್ತೊಂದೆಡೆ ಮಾನ್ಯ ಪ್ರಧಾನ ಮಂತ್ರಿಗಳು ಈಗಾಗಲೇ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳ ಮಾಲೀಕರಿಗೆ ಅಡಹಿಟ್ಟು, ಆಹಾರ ಭದ್ರತೆಯ ಅಭಾವವನ್ನು ಸೃಷ್ಟಿ ಮಾಡಿ ತುತ್ತು ಊಟಕ್ಕಾಗಿ ಹೊರದೇಶದ ಬಳಿ ಕೈಚಾಚಬೇಕಾದ ಪರಿಸ್ಥಿತಿ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲ್ಲೂಕಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಉದ್ಯೋಗ ನೀಡುತ್ತಿರುವ ಸರ್ಕಾರಿ ಒಡೆತನದ ಕಾರ್ಖಾನೆಗಳನ್ನು ಖಾಸಗಿಕರಣ ಮಾಡಿ ಅದನ್ನೇ ನಂಬಿರುವ ಲಕ್ಷಾಂತರ ಕಾರ್ಮಿಕರನ್ನು ಹಾಗೂ ಅವರ ಕುಟುಂಬಗಳನ್ನು ಬೀದಿಗೆ ತಳ್ಳುವ ನಿರ್ಧಾರವನ್ನು ತಗೆದುಕೊಳ್ಳುವ ಜೊತೆಗೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಾ ಮುಂದಿನ ದಿನಗಳಲ್ಲಿ ಕೆಲಸ ಇಲ್ಲದೆ ಯುವಕರು ಆತ್ಮಹತ್ಯೆಯತ್ತ ಮುಖಾ ಮಾಡುವಂತ ಪರಿಸ್ಥಿತಿ ಬರುವ ಭವಿಷ್ಯವಿದೆ ಎಂದು ಎಚ್ಚರಿಕೆ ನೀಡಿದರು.
ಬಿ.ಇ.ಎಂಎಲ್. ಕಾರ್ಖಾನೆಯನ್ನು ಖಾಸಗಿಕರಣ ಮಾಡುವ ನಿರ್ದಾರವನ್ನು ಕೈಬಿಡಬೇಕೆಂದು ಮಾನ್ಯರಲ್ಲಿ ಮನವಿಯ ಜೊತೆಗೆ ಕೋವಿಡ್ ವೈರಸ್‍ನಿಂದ ತತ್ತರಿಸಿ ಜೀವನ ನಿರ್ವಹಣೆ ಕಷ್ಟವಾಗಿರುವ ಸಮಯದಲ್ಲಿ ದಿನೇದಿನೇ ಕಚ್ಛಾ ತೈಲದ ಬೆಲೆ ಏರಿಕೆ ನೆಪದಲ್ಲಿ ಪ್ರತಿದಿನ 15 ಪೈಸೆಯಿಂದ 50 ಪೈಸೆಯತನಕ ತೈಲಬೆಲೆಗಳು ಏರಿಕೆಯಾಗಿ ಸೆಂಚುರಿಯತ್ತ ದಾಪುಗಾಲು ಹಾಕಿ ಗಿನ್ನೀಸ್ ದಾಖಲೆ ಮಾಡುವ ಸನಿಹಕ್ಕೆ ಬಂದು ನಿಂತಿದ್ದರೂ ಇದರ ಬಗ್ಗೆ ಮೌನವಾಗಿರುವುದಕ್ಕೆ ಜನಸಾಮಾನ್ಯರು ಅಸಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಾಗೂ ಜನಾಭಿಪ್ರಾಯವಿಲ್ಲದ ಕೃಷಿ ಕಾಯಿದೆಗಳ ಆದೇಶಕ್ಕೆ ಮಾನ್ಯ ಗೌರವಾನ್ವಿತ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರೈತರು ಕಾಯಿದೆಗಳು ಹಿಂಪಡೆಯುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಅಲ್ಲದೆ ಸಾವಿರಾರು ಟ್ರಾಕ್ಟರ್‍ಗಳೊಂದಿಗೆ ಜನವರಿ 26ರ ಗಣರಾಜ್ಯೋತ್ಸವದಂದು ವಿಶೇಷ ಟ್ರಾಕ್ಟರ್ ಫೆರೇಡ್‍ಗೆ ಬೆಂಬಲವಾಗಿ ವಿಶೇಷ ರೈತ ಪೆರೇಡ್ ನಡೆಸುವ ಮುಖಾಂತರ ಮಾನ್ಯ ರಾಷ್ಟ್ರಪತಿರವರಿಗೆ ಮನವಿ ಸಲ್ಲಿಸಿ ಈ ಕಾಯ್ದೆಗಳನ್ನು ಹಿಂಪಡೆದು ರೈತರ ಕೃಷಿ ಕಾಯಿದೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಮಾನ್ಯ ಪ್ರಧಾನಮಂತ್ರಿಗಳಿಗೆ ಸೂಚಿಸಬೇಕೆಂದು ಸಮಸ್ತ ರೈತರ, ಕಾರ್ಮಿಕರ, ದಲಿತ ಪರವಾಗಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಣ್ಣಯ್ಯನವರು ನಿಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ, ತೆರ್ನಹಳ್ಳಿ ಆಂಜನಪ್ಪ, ಮುಳಬಾಗಿಲು ತಾ. ಅಧ್ಯಕ್ಷ ಫಾರೂಕ್ ಪಾಷಾ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಂದ್‍ಪಾಷ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ, ನಳಿನಿ.ವಿ ಸುನಿತ, ಲಕ್ಷ್ಮಿ, ಐಶ್ವರ್ಯ, ವಿನುತಾ, ಶಾಂತಮ್ಮ, ಮಹಮದ್ ಬುರಾನ್, ಜಮೀರ್‍ಪಾಷ, ಬಾಬಾಜಾನ್, ಘೌಸ್‍ಪಾಷ, ಮಾಲೂರು ತಾ.ಅ ಮಾಸ್ತಿವೆಂಕಟೇಶ್, ಜಾವೀದ್ ಮಹಮದ್ ಶೋಯೀಬ್, ಸುಪ್ರೀಂಚಲ, ಮಂಜುನಾಥ್, ನಾಯಕರಹಳ್ಳಿ ಮಂಜು, ರಜನಿ, ಪ್ರೇಮ್ ಕುಮಾರ್, ಸಂತೋಷ್, ಸಾಕೀರ್, ನಸೀಮ್, ಜಮೀರ್, ಪ್ರಶಾಂತ್, ಸುಬ್ರಮಣಿ, ಅನಿಲ್, ಗಂಗರಾಜು, ಅಂಜಿನಪ್ಪ, ನಿಕಿತ್ ಕುಮಾರ್, ವಕ್ಕಲೇರಿ ಹನುಮಯ್ಯ, ಅರುಣ್, ನಾಗೇಶ್ ರಾವ್, ಕಿರಣ್ ರಾವ್, ದನುಷ್, ಮಹೇಂದ್ರ, ನಾರಾಯಣ್, ನಾರಾಯಣಪ್ಪ, ಮತ್ತಿತರರು ಭಾಗವಹಿಸಿದ್ದರು
.

ಶ್ರೀನಿವಾಸಪುರದಲ್ಲಿ ‘ಯುಗದ ಜ್ಯೋತಿ ಅಂಬೇಡ್ಕರ್’ ಗೀತೆಯನ್ನು ಡಾ. ವೈ.ವಿ.ವೆಂಕಟಾಚಲ ಬಿಡುಗಡೆ ಮಾಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ‘ಯುಗದ ಜ್ಯೋತಿ ಅಂಬೇಡ್ಕರ್’ ಎಂಬ ಗೀತೆಯ ವೀಡಿಯೋವನ್ನು ಟಿ.ವಿ.ಪರದೆಯ ಮೇಲೆ ಬಿಡುಗಡೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಪಾಲಿಸಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜ ಮುಖಿ ಧೋರಣೆ ಹೊಂದಬೇಕು. ಆಗ ಮಾತ್ರ ಬದುಕು ಹಸನಾಗಬಲ್ಲದು. ಆದ್ಧರಿಂಲೇ ಈ ಆದರ್ಶ ಬಿತ್ತುವ ಅಂಬೇಡ್ಕರ್ ಕುರಿತು ರಚಿಸಲಾಗಿರುವ ಹಾಡಿನ ವೀಡಿಯೋ ನಿರ್ಮಿಸಲಾಗಿದೆ ಎಂದು ಹೇಳಿದರು.
ರಾಜ್ಯ ದಲಿತ ಬುದ್ಧ ಸೇನೆ ಅಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಮಹಾ ಮಾನವತಾ ವಾದಿಯಾಗಿದ್ದು, ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಕಷ್ಟದ ಬದುಕು ಹಾಗೂ ಅದರಿಂದ ಹೊರಬಂದ ರೀತಿ, ಬಹಳಷ್ಟು ಜನರಿಗೆ ಮಾದರಿಯಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು. ಅವರ ಜೀವನ ದರ್ಶನ ಪಡೆದು, ದೇಶದ ಹಿತ ಕಾಯಬೇಕು. ಅದಕ್ಕೆ ಪೂರಕವಾಗಿ ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಸಾಧನೆ ಕುರಿತಾದ ಸಾಹಿತ್ಯ ಓದಬೇಕು ಎಂದು ಸಲಹೆ ಮಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ತಿದ್ದುಪಡಿ ಮೂಲಕ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವುದು ಹೆಚ್ಚು ಅಪಾಯಕಾರಿ. ರಾಜಕಾರಣಿಗಳಿಂದ ಅಂಥ ಪ್ರಯತ್ನ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಎಲ್ಲ ಚರ್ಚೆಗಳೂ ಸಂವಿಧಾನವನ್ನು ಗಟ್ಟಿಗೊಳಿಸುವಂತಿರಬೇಕು ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಸಮಾಜದ ಎಲ್ಲ ಜನರ ಹಿತದೃಷ್ಟಿಯಿಂದ ರಚಿಸಿದ ಸಂವಿಧಾನ ಒಂದು ಮಾದರಿ ಸಂವಿಧಾನವಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿದೆ. ಯುಗದ ಜ್ಯೋತಿ ಅಂಬೇಡ್ಕರ್ ಗೀತೆ ರಚನೆ ಹಾಗೂ ಮೃದು ಮಧುರ ಗಾಯನದ ಮೂಲಕ ಜನರ ಗಮನ ಸೆಳೆಯುತ್ತದೆ ಎಂದು ಹೇಳಿದರು.
ಕವಿ ಆರ್.ಚೌಡರೆಡ್ಡಿ ಪನಸಮಾಕನಹಳ್ಳಿ, ಗಾಯಕ ತುಷಾರ್ ನಾಗ್, ಸಂಕಲನಕಾರ ನಿಶಾಂತ್‍ರೆಡ್ಡಿ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ವಿ.ಮುನಿಯಪ್ಪ, ಮುಖಂಡರಾದ ಕೂತ್ಸಂದ್ರ ರೆಡ್ಡಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ನಾಗರಾಜ್, ರಘುನಾಥರೆಡ್ಡಿ, ಎನ್.ಎಸ್.ಮೂರ್ತಿ, ಲಕ್ಷ್ಮಣಬಾಬು ಇದ್ದರು.