HOLY ROSARY CHURCH, KUNDAPUR – 450 th JUBILEE SOUVENIR 2021

ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಆರೋಪ ಸತ್ಯಕ್ಕೆ ದೂರ:ಶ್ರೀನಿವಾಸಪುರ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಕೊಟ್ಯಂತರ ರೂಪಾಯಿ ತಂದರೂ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಆರೋಪ ಸತ್ಯಕ್ಕೆ ದೂರವಾದದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಶಾಸಕರು, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ. ಈ ಹಿಂದೆ ಎಂಟು ವರ್ಷಗಳ ಕಾಲ ಪುರಸಭೆ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಶಾಸಕರು ತಂದ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗಿದೆ. ಕಳಪೆ ಕಾಮಾರಿ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ ಎಂದು ಆಪಾದಿಸಿದರು.
ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ಚರಂಡಿ ನಿರ್ಮಾಣ ಕಾಮಗಾರಿ, ವಾಣಿಜ್ಯ ಸಂಕೀರ್ಣ ಕಟ್ಟಡಗಳು ಕಳಪೆ ಕಾಮಗಾರಿಗೆ ಉತ್ತಮ ಉದಾಹರಣೆಯಾಗಿವೆ. ಅವುಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ರೂ.34 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಗಳ ನಿರ್ಮಾಣದ ಕತೆಯೂ ಇದೇ ಆಗಿದೆ. ತಮ್ಮ ಹಿಂಬಾಲಕರಿಗೆ ಉಪ ಗುತ್ತಿಗೆ ಕೊಡಿಸಿ, ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕೈಗೊಳ್ಳಲಾಗಿರುವ ಕಳಪೆ ಕಾಮಗಾರಿ ಬಗ್ಗೆ ಪುರಸಭೆಗೆ ದೂರುಗಳು ಬರುತ್ತಿದ್ದು, ಶಾಸಕರು ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕರಿಗಳಿಗೆ ದೂರು ನೀಡಬೇಕು. ಅನುದಾನ ತಂದಿದ್ದರೆ ಬೀದಿ ದೀಪ ಅಳವಡಿಸಲು ಹಾಗೂ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲ ಎಂದು ಪ್ರಶ್ನಿಸಿದರು.
ಶಾಸಕರು ಅಭಿವೃದ್ಧಿ ವಿಷಯದಲ್ಲಿ ಪಕ್ಷಪಾತ ಮಾಡದೆ, ಪಟ್ಟಣದ ಅಭಿವೃದ್ಧಿಗೆ ಪುರಸಭೆಯೊಂದಿಗೆ ಕೈಜೋಡಿಸಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಎಸ್.ರಾಜು, ಆನಂದ್, ಶಬ್ಬೀರ್ ಖಾನ್, ಜಯಲಕ್ಷ್ಮಿ, ಜಬೀನ್ ತಾಜ್ ಸುನಿತಾ, ಬಾಬಾಜಾನ್ ಇದ್ದರು
.

ಶ್ರೀನಿವಾಸಪುರ: ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಪೂಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಎಲ್ಲ ಸದಸ್ಯರೂ ಸಹಕಾರ ನೀಡಬೇಕುಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಪುರಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು, ತಮ್ಮ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪುರಸಭೆ ಕಾಯ್ದೆಗಳ ಜ್ಞಾನ ಪಡೆದುಕೊಳ್ಳಬೇಕು. ತಮ್ಮ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪ್ರಜಾ ಪ್ರತಿನಿಧಿ ಕಾಯ್ದೆಯಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ ಮಾತನಾಡಿ, ರಾಜಕೀಯ ಚುನಾವಣೆಗೆ ಸೀಮತವಾಗಬೇಕು. ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕುಡಿಯುವ ನೀರು ಸೇರಿದಂತೆ, ಮೂಲ ಸೌಲಭ್ಯ ಒದಗಿಸುವಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ಪಟ್ಟಣದಲ್ಲಿ ನೀರಿನ ಸೋರಿಕೆ ಹೆಚ್ಚಿದೆ. ಅಮೂಲ್ಯವಾದ ನೀರು ಪೋಲಾಗುತ್ತಿದ್ದೆ. ಸೋರಿಕೆ ತಡೆಯಲು ನೇಮಿಸಲಾಗಿರುವ ಇಬ್ಬರಿಂದ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ದೂರಿದರು. ಪೈಪ್‍ಗಳಲ್ಲಿ ನೀರು ಸೋರಿಕೆ ಮೂಲಕ ವ್ಯಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಕನಿಷ್ಠ 6 ಮಂದಿಯನ್ನು ನೇಮಿಸಿಕೊಳ್ಳುವಂತೆ ಸಲಹೆ ಮಾಡಲಾಯಿತು.
ಸದಸ್ಯ ಭಾಸ್ಕರ್ ಮಾತನಾಡಿ, ಪಟ್ಟಣದಲ್ಲಿ ವಿದ್ಯುತ್ ಕಂಬಗಳ ಕೊರತೆಯಿಂದಾಗಿ ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಗರಿಕರಿಗೆ ಹೆಚ್ಚಿನ ತೊಂದರೆಯಾಗಿದೆ ಎಂದು ಹೇಳಿದರು. ಸಮಸ್ಯೆ ಬಗೆಹರಿಸಲಾಗುವುದು ಎಂದು ಎಂಜಿನಿಯರ್ ಸುದರ್ಶನ್ ಭರವಸೆ ನೀಡಿದರು.
ಜಲಗಾರರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನೀರಿನ ವಿತರಣೆ ಸರಿಯಾಗಿ ಆಗವುದಿಲ್ಲ ಎಂದು ಭಾಸ್ಕರ್ ಅಭಿಪ್ರಾಯಪಟ್ಟರು. ಸದಸ್ಯ ಸಂಜಯ್‍ಸಿಂಗ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ, ಕಂದಾಯ ನಿರೀಕ್ಷ ಶಂಖರ್, ಸಿಇಒ ರಾಜೇಶ್ವರಿ, ನಾಗೇಶ್ ಇದ್ದರು.

 

 

 

 

 

 

   

ರೋಟರಿ ವಲಯ ೫ರ ಕ್ರೀಡಾಕೂಟ ” ಗೊಬ್ಬು ಗಮ್ಮತ್ತ್” ಬೆಳ್ಮಣ್ – ಕ್ರೀಡೆಯಿಂದ ಬಾಂಧವ್ಯ ವೃದ್ಧಿಗೆ ಸಹಕಾರಿ: ಡಾ| ಭರತೇಶ್ ಆದಿರಾಜ್

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಕ್ರೀಡೆಯಲ್ಲಿ ಭಾಗವಹಿಸುದರಿಂದ ರೋಟರಿ ಸದಸ್ಯರ ಬಾಂಧವ್ಯ ವೃದ್ಧಿಗೆ ಸಹಕಾರಿ: ಡಾ| ಭರತೇಶ್ ಆದಿರಾಜ್ ’ ಎಂದು ಅವರು ಹೇಳಿದರು.
ಅವರು ರೋಟರಿ ವಲಯ ೫ರ ಕ್ರೀಡಾಕೂಟ ” ಗೊಬ್ಬು ಗಮ್ಮತ್ತ್” ಬೆಳ್ಮಣ್ ರೋಟರಿಯ ಆತಿಥ್ಯದಲ್ಲಿ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ್ದು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅವಿಭಜಿತ ರೋಟರಿ ಜಿಲ್ಲೆ ೩೧೮೨ರ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ| ಭರತೇಶ್ ಆದಿರಾಜ್ ಕ್ರೀಡಾಕೂಟ ಉದ್ಘಾಟಿಸಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ರಿಂದ ರೋಟರಿ ಸದಸ್ಯರ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನುಡಿಯುತ್ತ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಮಾಡ ರೋಟರಿ ಬೆಳ್ಮಣ್ಣಿನ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ೫ರ ಸಾಹಯಕ ಗವರ್ನರ್ ರೋ| ನವೀನ್ ಅಮಿನ್ ಕ್ರೀಡಾಕೂಟದ ನಿಯಮಗಳ ಬಗ್ಗೆ ವಿವರಿಸಿದರು. ವಲಯ ಸೇನಾನಿ ರೋ| ಸುರೇಶ್ ರಾವ್ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾರ್ಮಿಕವಾಗಿ ನುಡಿದರು. ವಲಯ ೫ರ ಕ್ರೀಡಾ ಸಂಯೋಜಕ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕ್ರೀಡಾಕೂಟದ ಊಟೋಪಚಾರದ  ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಬೆಳ್ಮಣ್ಣಿನ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೋ| ವಿಘ್ನೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.

ತೆಂಗಿನ ಸುರುಳಿ ಸುತ್ತುವ ಬಿಳಿನೊಣದ ನಿರ್ವಹಣೆ ತರಬೇತಿ ಕಾರ್ಯಕ್ರಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರವು ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳಿಗೆ ದಿನಾಂಕ 03.02.2021 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ‘ತೆಂಗಿನ ಸುರುಳಿ ಸುತ್ತುವ ಬಿಳಿನೊಣದ ನಿರ್ವಹಣೆ ತರಬೇತಿ ಕಾರ್ಯಕ್ರಮ’ ವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಶ್ರೀ ತುಳಸಿರಾಮರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆಂಗಿನ ಸುರುಳಿ ಸುತ್ತುವ ಬಿಳಿನೊಣದ ನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಈ ಕೀಟವು 2016ನೇ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ತಮಿಳುನಾಡಿನ ಪೊಳ್ಳಾಚಿ ಹಾಗೂ ಕೇರಳದ ಪಾಲಕ್ ಕಾಡಿನಲ್ಲಿ ತೆಂಗಿನ ಗರಿಗಳ ಮೇಲೆ ಕಾಣಿಸಿಕೊಂಡಿತ್ತು. ಕೇರಳದ ಕೃಷಿ ವಿಶ್ವವಿದ್ಯಾಲಯ ಹಾಗೂ ಐ.ಸಿ.ಎ.ಆರ್. ನ ಎನ್.ಬಿ.ಎ.ಐ.ಆರ್- ಬೆಂಗಳೂರು ಇವರು ಈ ಕೀಟವು ಅಲ್ಯಾಲೊಡಿಕಸ್ ರುಗಿಯೋಪರ್ಕುಲೆಟಸ್ ಎಂದು ಖಚಿತಪಡಿಸಲಾಯಿತು. ಕೇವಲ 9 ತಿಂಗಳ ಅವಧಿಯಲ್ಲಿ (ಆಗಸ್ಟ್ 2016 ರಿಂದ ಜನವರಿ 2017) ರಲ್ಲಿ ಈ ಕೀಟ ಕೇರಳದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕ ಉಡುಪಿ ಜಿಲ್ಲೆಯಲ್ಲಿಯೂ ಕೂಡ ಕಾಣಿಸಿಕೊಂಡಿತ್ತು. ಈ ಕೀಟವು ತೀವ್ರವಾಗಿ ಹರಡಲು ಸಹಾಯಕವಾದ ಅಂಶಗಳೆಂದರೆ, ರಾಜ್ಯದ ಉದ್ದಗಲಕ್ಕೂ ತೆಂಗಿನಕಾಯಿ ಸಾಗಾಟ, ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿಯ ಉಪಯೋಗ ಕೂಡ ಕಾರಣವಾಗಿದೆ. ಮರಿ ಮತ್ತು ವಯಸ್ಕ ರೋಗೋಸ್ ಬಿಳಿನೊಣಗಳು ತೆಂಗಿನ ಎಲೆಗಳ ಕೆಳಭಾಗದಲ್ಲಿ ರಸ ಹೀರುವುದರಿಂದ ನೀರು ಮತ್ತು ಪೌಷ್ಠಿಕಾಂಶಗಳನ್ನು ಸರಬರಾಜನ್ನು ತಡೆಯುತ್ತದೆ. ಅಲ್ಲದೇ ಕೀಟಗಳು ಸಿಹಿ ದ್ರವವನ್ನು ಸ್ರವಿಸುತ್ತವೆ. ಈ ದ್ರವದ ಮೇಲೆ ಕ್ಯಾಪ್ನೋಡಿಯಂ ಎಂಬ ಕಪ್ಪು ಶೀಲಿಂದ್ರ ಬೆಳೆಯುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ತಡೆಯುತ್ತದೆ.
ರುಗೋಸ್ ಬಿಳಿನೊಣದ ಬಾಧೆಯ ಲಕ್ಷಣಗಳೆಂದರೆ, ತೆಂಗಿನ ಎಲೆಗಳ ಕೆಳಭಾಗದಲ್ಲಿ ಬಿಳಿ ಮೊಟ್ಟೆಯ ಸುರುಳಿಗಳು ಕಾಣಿಸಿಕೊಳ್ಳುತ್ತವೆ. ಅನಂತರ ಎಲ್ಲ ಸುರುಳಿಗಳು ಒಟ್ಟುಗೂಡಿ ಸಂಪೂರ್ಣವಾಗಿ ಎಲೆಯ ಕೆಳಭಾಗವನ್ನು ಆವರಿಸುತ್ತವೆ. ಬಿಳಿನೊಣವು ಉತ್ಪಾದಿಸುವ ಮೇಣವು ಕೂಡ ಕಂಡುಬರುತ್ತದೆ. ಇದರ ನಿರ್ವಹಣೆಗೆ ಯಾವುದೇ ಕೀಟನಾಶಕಗಳ ಸಿಂಪರಣೆ ಮಾಡಬಾರದು. ಎಲೆಗಳ ಮೇಲೆ ಶೇಕಡ 1ರ ತಿಳಿಗಂಜಿ (ಮೈದಾ) ಸಿಂಪರಣೆ ಮಾಡುವುದರಿಂದ ಕಪ್ಪು ಶೀಲಿಂದ್ರ ಉದುರಿ ಹೋಗುತ್ತದೆ. ಕಾಂಡದ ಮೇಲೆ ಹಳದಿ, ಜಿಗುಟಾದ ಟ್ರ್ಯಾಪ್ ಅಳವಡಿಸುವುದು ತೆಂಗಿನ ನರ್ಸರಿಗಳಲ್ಲಿ ಮಾತ್ರ ಕೀಟನಾಶಕವಾದ ಇಮಿಡಾಕ್ಲೋಪ್ರಿಡ್ (0.005%) ನ್ನು ಸಿಂಪಡಿಸಬೇಕು. ಇದರಿಂದ ಕೀಟವು ಇತರ ಪ್ರದೇಶಗಳಿಗೆ ಹರಡುವುದನ್ನು ತಡೆಯಬಹುದು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಕೋಲಾರದ ಉಪನಿರ್ದೇಶಕರಾದ ಶ್ರೀಮತಿ ಗಾಯತ್ರಿರವರು, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಸುಮಾರು 50 ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ), ಡಾ. ಜ್ಯೋತಿ ಕಟ್ಟೆಗೌಡರ, ವಿಜ್ಞಾನಿ (ತೋಟಗಾರಿಕೆ), ಕು. ಸ್ವಾತಿ ಜಿ.ಆರ್, ವಿಷಯ ತಜ್ಞರು (ಹವಾಮಾನ ಶಾಸ್ತ್ರ) ಇವರು ಪಾಲ್ಗೊಂಡಿದ್ದರು.

ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿ.

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ 30: ಹಂಗಳೂರಿನ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರು ಇತ್ತೀಚೆಗೆ ಅಧಿಕ್ರತ ಭೇಟಿ ನೀಡಿದರು.

ಗರ್ವನರ್ ಭೇಟಿ ಸಂದರ್ಭದಲ್ಲಿ ಕ್ಲಬ್ ನವರು ಆನೇಕ ಸೇವಾ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರು.

ಕ್ಲಬ್ ನ ಅಧ್ಯಕ್ಷ ರಾದ ಲಯನ್ ರಮೇಶ್ ಕೆ ಕುಂದರ್ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯದರ್ಶಿ ಲಯನ್ ವಿಲ್ಫ್ರೆಡ್ ಮಿನೇಜಸ್ ರವರು ವರ್ಷದ ಸೇವಾ ಚಟುವಟಿಕೆಗಳ ವರದಿ ಸಲ್ಲಿಸಿದರು.

ಸೇವಾ ಕಾರ್ಯಕ್ರಮದ ಅಂಗವಾಗಿ ಬಡ ಮಹಿಳೆಗೆ ಸ್ವ ಉದ್ಯೋಗ ನಿಮಿತ ಹೊಲಿಗೆ ಯಂತ್ರವನ್ನು, ಧೃಷ್ಟಿ ಕಳೆದುಕೊಂಡ ಕಲ್ಪನಾ ಹುಡುಗಿಗೆ ಕಣ್ಣಿನ ಚಿಕಿತ್ಸೆಗಾಗಿ ₹25,000/- ಧನ ಸಹಾಯ, ಅಪಘಾತಕ್ಕೆ ಈಡಾದ ರತ್ನಾಕರ ಎಂಬ ರೋಗಿಗೆ ಧನ ಸಹಾಯ ನೀಡಲಾಯಿತು. ಜಿಲ್ಲಾ ಗವರ್ನರ್ ಇಲ್ಲಿನ ಕಲ್ಪನಾ ಇವರ ಕಣ್ಣಿನ ಚಕ್ಸಿಗೆ ಧನ ಸಹಾಯ ಮಾಡಿದರು. ಈ ಸೇವಾ ಚಟುವಟಿಕೆಗಳಿಗೆ ಲಯನ್ ಫಿಲಿಪ್ ಡಿಕೊಸ್ತಾ, ಲಯನ್ ಜಯರಾಜ್ ಶೆಟ್ಟಿ ಮತ್ತು ಪ್ರಪುಲ್ಲ ವಿಠಲ್ ಶೆಟ್ಟಿಯವರು ಧನ ಸಹಾಯ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ 100 ಭಾರಿ ರಕ್ತ ಧಾನ ಮಾಡಿದ ಯೋಜನ ಪ್ರಧಿಕಾರದ ಅಧ್ಯಕ್ಷ ರಾದ ಶ್ರೀ ವಿಜಯ್ ಪೂಜಾರಿ, ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಳಿಸಿದ ಛಯಾಗ್ರಾಹಕರಾದ ಸಂತೋಷ ಕುಂದೇಶ್ವರ್ ಹಾಗೂ HMT ಬಸ್ಸು ತಂಗುದಾಣ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಲಯನ್ ಕೊತ್ವಾಲ್ ಪಧ್ಮನಾಭ ಶೇರುಗಾರ್ ರವರನ್ನು ಸನ್ಮಾನಿಸಲಾಯಿತು.

ಲಯನ್ ವಿಲ್ಫ್ರೆಡ್ ಡಿಸೋಜಾ ವಂದಿಸಿದರು, ಲಯನ್ ರಜನಿ ಮ್ಯಾಥ್ಯೂ ಕಾರ್ಯ ಕ್ರಮ ನಿರೂಪಿಸಿದರು, ಲಯನ್ ಪಧಾಧಿಕಾರಿಗಳು, ಸದಸ್ಯರು ಮತ್ತು ಅಥಿತಿಗಳು ಭಾಗವಹಿಸಿದರು.

ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಕರೋನ ವಾರಿಯರ್ಸ್ ವ್ಯೆದ್ಯರುಗಳಿಗೆ ಸನ್ಮಾನ

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ, ಫೆ.3: ಇತ್ತೀಚೆಗೆ ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ! ನಾಗಭೂಷಣ್ ಉಡುಪ ಮತ್ತು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ! ನಾಗೇಶ್ ಇವರನ್ನು ಸನ್ಮಾನಿಸಲಾಯಿತು.

ಕರೋನ-19 ರ ಅವಧಿಯಲ್ಲಿ ತಮ್ಮ ಜೀವನದ ಹಂಗು ತೊರೆದು ಆಸ್ಪತ್ರೆಯಲ್ಲಿ ರೋಗಿಗಳ ಬಗ್ಗೆ ಬಹಳಷ್ಟು ಮತುವರ್ಜಿವಹಿಸಿ, ಕರೋನವನ್ನು ತಾಲೂಕಿನ ಪ್ರಾಥಮಿಕ ಹಂತದಲ್ಲಿ ಹಿಡಿತದಲ್ಲಿರುವಲ್ಲಿ ಯಶಸ್ವಿಯಾದ ಇರ್ವರು ಆರೋಗ್ಯಾಧಿಕಾರಿಗಳನ್ನು, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಇವರ ನೇತೃತ್ವದಲ್ಲಿ ಜಿಲ್ಲಾ ಗವರ್ನರ್ ಲಯನ್ N M ಹೆಗಡೆ ಮತ್ತು ಲಯನ್ಸ್ ಪದಾಧಿಕಾರಿಗಳು ಸನ್ಮಾನಿಸಿದರು.

ಹಂಗಳೂರು ಲಯನ್ಸ್ ಕ್ಲಬ್ಬಿನಿಂದ, ಕೋಣಿಯಲ್ಲಿ ನೂತನ ಬಸ್ ತಂಗುದಾಣದ ಉದ್ಘಾಟನೆ.

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ ಫೆ.3: ಇತ್ತೀಚೆಗೆ ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಲಯನ್ ಕೊತ್ವಾಲ್ ಪದ್ಮನಾಭ ಸೇರುಗಾರ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 50,000/- ವೆಚ್ಚದಲ್ಲಿ ನಿರ್ಮಿಸಿದ ನೂತನ HMT ಬಸ್ಸು ತಾಂಗುದಣವನ್ನು ರಾಜ್ಯಪಾಲರು ಉದ್ಘಾಟಿಸಿದರು.

ಲಯನ್ಸ್ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಮತ್ತು ಪದಾಧಿಕಾರಿಗಳು ಮತ್ತು ಕೊಣಿ ಪಂಚಾಯತು ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಅಶ್ವಿನಿ ಮತ್ತು ನೂತನ ಸದಸ್ಯರುಗಳು ಉಪಸ್ಥಿತರಿದ್ದರು.

ಮಾವು ಟೊಮೆಟೊ ಬೆಳೆ ರಕ್ಷಣೆಗೆ ರೈತರು ಅಗತ್ಯ ಕ್ರಮ ಕೈಗೊಳ್ಳಬೇಕು : ವಿಜ್ಞಾನಿ ಡಾ. ಡಿ.ಎಸ್.ಅಂಬಿಕಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾವು ಮತ್ತು ಟೊಮೆಟೊ ಬೆಳೆ ರಕ್ಷಣೆಗೆ ರೈತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಡಿ.ಎಸ್.ಅಂಬಿಕಾ ಹೇಳಿದರು.
ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದಲ್ಲಿ ತೊಟಗಾರಿಕಾ ಇಲಾಖೆ ಹಾಗೂ ಕೋಲಾರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ರೈತರ ಬೆಳೆಗಳಿಗೆ ಕೀಟ ಹಾಗೂ ರೋಗ ಹತೊಟಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.90 ರಷ್ಟು ರೈತರು ಮಾವು ಬೆಳೆಯ ಮೇಲೆ ಆಧಾರ ಪಟ್ಟಿದ್ದಾರೆ ಎಂದು ಹೇಳಿದರು.
ಮಾವು ಮತ್ತು ತರಕಾರಿ ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ಹತೋಟಿಗೆ ಆದ್ಯತೆ ನೀಡಬೇಕು. ತಜ್ಞರ ಸಲಹೆ ಪಡೆದು ಕೀಟ ಹಾಗೂ ರೋಗ ನಾಸಕ ಸಿಂಪಡಿಸಬೇಕು. ಇಲ್ಲವಾದರೆ ಬೆಳೆ ಹಾಳಾಗಿ ನಷ್ಟ ಉಂಟಾಗುತ್ತದೆ. ಮುಖ್ಯವಾಗಿ ಹೂ ಬಿಡುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ನಿಗದಿತ ಸಮಯದಲ್ಲಿ ಮಾತ್ರ ಔಷಧ ಸಿಂಪಡಣೆ ಮಾಡಬೇಕು ಎಂದು ಹೇಳಿದರು.

ತೋಟಗಾರಿಕಾ ವಿಜ್ಞಾನಿ ಡಾ. ಜ್ಯೋತಿಕಟ್ಟೆ ಗೌಡರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎಚ್.ಶ್ರೀನಿವಾಸ್ ಎ.ಬೈರೆಡ್ಡಿ
ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಮಂಜುನಾಥ್, ಈಶ್ವರರೆಡ್ಡಿ ಇದ್ದರು.

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಫೆ.6 ರಂದು ಬೆಳಿಗ್ಗೆ 10.30 ಗಂಟೆಗೆ ಕಂದಾಯ ಇಲಾಖೆ ವತಿಯಿಂದ ಕಂದಾಯ ಹಾಗೂ ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ, ಅದಾಲತ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

Passed away: Elizabeth D’Mello (69) Koteshwara

OBITUARY

Elizabeth D’Mello (69) Koteshwara

Retired Teacher (St.antony school sasthan)

 (Passed away 02-02-2021) Birth : 26-05-1951

Wife of Jossy D’Mello

Mother of Josna/Rupert Pereira, Sushma/Jackson Lewis.

Grand Mother of Jaden Pereira,

Funeral cortege leaves residence “Jossy Villa” koteshwara for St.Antony Church Aithalabettu koteshwara on Thursday February 4 at 3.30 pm. Followed  By Mass At 4.00 P.M.

BEREAVED FAMILY MEMBERS

Contact: 9449551972 / 9481511952